ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಾಂಗ್‌ ಸೈಡ್‌ನಲ್ಲಿ ಬಂದು ಮಹಿಳೆಯ ಕಾರ್‌ ಅಡ್ಡಗಟ್ಟಿ ನಿಂದಿಸಿದ ಸ್ಕೂಟರ್ ಸವಾರ: ವಿಡಿಯೊ ವೈರಲ್ ಬೆನ್ನಲ್ಲೇ ಪೊಲೀಸರಿಂದ ಕ್ರಮ!

Viral Video: ಕಾರಿನಲ್ಲಿ ಹೋಗುತ್ತಿದ್ದ ಮಹಿಳೆಗೆ ಸ್ಕೂಟರ್ ಸವಾರನೊಬ್ಬ ರಾಂಗ್ ಸೈಡ್ ನಲ್ಲಿ ಬಂದು ಬೆದರಿಕೆ ಹಾಕಿರುವ ಘಟನೆಯೊಂದು ನಡೆದಿದೆ. ಮುಂಬೈ ನ ಪಟ್ಕರ್ ಮಾರ್ಗ ಮತ್ತು ಗಾಮ್ದೇವಿ ರಸ್ತೆಯ ಜಂಕ್ಷನ್‌ನಲ್ಲಿ ಈ ಘಟನೆಯೂ ನಡೆದಿದೆ. ಈ ಘಟನೆಯು ನಗರದ ರಸ್ತೆಗಳಲ್ಲಿನ ಸಂಚಾರ ನಿಯಮ ಉಲ್ಲಂಘನೆ ಮತ್ತು ಮಹಿಳೆಯರ ಸುರಕ್ಷತೆ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ.

ರಾಂಗ್ ಸೈಡ್‌ನಲ್ಲಿ ಪ್ರಯಾಣಿಸಿ ಮಹಿಳೆಗೆ ಬೆದರಿಕೆಯೊಡ್ಡಿದ ಸ್ಕೂಟರ್ ಸವಾರ

ಮಹಿಳೆಯ ಕಾರ್ ಗೆ ಅಡ್ಡಗಟ್ಟಿ ನಿಂದಿಸಿದ ಸ್ಕೂಟರ್ ಸವಾರ -

Profile
Pushpa Kumari Oct 5, 2026 5:07 PM

ಮುಂಬೈ,ಅ.5: ಇತ್ತೀಚೆಗೆ ಮಹಿಳೆಯರ ಮೇಲೆ ಎಸಗುವ ದೌರ್ಜನ್ಯ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಇದೀಗ ಕಾರಿನಲ್ಲಿ ಹೋಗುತ್ತಿದ್ದ ಮಹಿಳೆಗೆ ಸ್ಕೂಟರ್ ಸವಾರನೊಬ್ಬ ರಾಂಗ್ ಸೈಡ್ ನಲ್ಲಿ ಬಂದು ಬೆದರಿಕೆ ಹಾಕಿರುವ ಘಟನೆಯೊಂದು ನಡೆದಿದೆ. ಮುಂಬೈನ ಪಟ್ಕರ್ ಮಾರ್ಗ ಮತ್ತು ಗಾಮ್ದೇವಿ ರಸ್ತೆಯ ಜಂಕ್ಷನ್‌ನಲ್ಲಿ ಈ ಘಟನೆ ನಡೆದಿದೆ.ಈ ಘಟನೆಯು ನಗರದ ರಸ್ತೆಗಳಲ್ಲಿನ ಸಂಚಾರ ನಿಯಮ ಉಲ್ಲಂಘನೆ ಮತ್ತು ಮಹಿಳೆಯರ ಸುರಕ್ಷತೆ ಬಗ್ಗೆ ಕಳವಳವನ್ನು (Viral News) ಹುಟ್ಟುಹಾಕಿದೆ.

ಮೊನಾಲ್ ಝವೇರಿ ಎಂಬ ಮಹಿಳೆ ತಮ್ಮ ಕಾರಿನಲ್ಲಿ ತೆರಳುತ್ತಿದ್ದಾಗ ರಾಂಗ್ ಸೈಡ್‌ನಲ್ಲಿ ಬಂದ ಸ್ಕೂಟರ್ ಸವಾರನೊಬ್ಬ ಕಾರ್ ನ ಮುಂದೆ ಸ್ಕೂಟರ್ ನಿಲ್ಲಿಸಿ ಮಹಿಳೆ ಮುಂದೆ ಹೋಗದಂತೆ ಅಡ್ಡಲಾಗಿ ನಿಂತಿದ್ದಾನೆ. ಮೊದಲು ಆತ ಕಾರಿನ ಕಿಟಕಿ ತೆರೆಯುವಂತೆ ಒತ್ತಾಯಿಸಿ ಬೆದರಿಕೆ ಹಾಕಿದ್ದಾನೆ.

ವಿಡಿಯೋ ನೋಡಿ:



ಹಿಂದಿಯಲ್ಲಿ ಅಸಭ್ಯವಾಗಿ ನಿಂದಿಸಿ ಮಹಿಳೆ ಗ್ಲಾಸ್ ತೆರೆಯಲು ನಿರಾಕರಿಸಿದಾಗ, ತನ್ನ ಗರ್ಲ್‌ ಫ್ರೆಂಡ್‌ಗೆ ಹೆಲ್ತ್ ಪ್ರಾಬ್ಲಮ್ ಇದೆ ಎಂದು ನೆಪ ಹೇಳಿ ಕೊನೆಗೆ ಮತ್ತೆ ರಾಂಗ್ ಸೈಡ್‌ನಲ್ಲೇ ಸ್ಕೂಟರ್ ಚಲಾಯಿಸಿಕೊಂಡು ಹೋಗಿದ್ದಾನೆ. ಮಹಿಳೆಯೂ ಈ ಘಟನೆಯನ್ನು ವಿಡಿಯೊ ಮಾಡಿ ಮುಂಬೈ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ವೈರಲ್ ಕ್ಲಿಪ್‌ನಲ್ಲಿ, ಒಬ್ಬ ವ್ಯಕ್ತಿ ಅವರ ಕಾರಿನ ಮುಂದೆ ನಿಂತು ಹಿಂದಿ ಭಾಷೆಯಲ್ಲಿ ನಿಂದಿಸುತ್ತಿರುವುದು ಕಂಡುಬಂದಿದೆ. ನಂತರ ಆತ ತನ್ನ ಸ್ಕೂಟರ್ ಸ್ಟಾರ್ಟ್ ಮಾಡಿ, ರಸ್ತೆಯ ರಾಂಗ್ ಸೈಡ್ ನಲ್ಲೇ ಚಲಾಯಿಸಿಕೊಂಡು ಹೊರಟುಹೋಗಿದ್ದಾನೆ.

Viral Video: ವಿಮಾನ ಪ್ರಯಾಣದ ವೇಳೆ ಬಟ್ಟೆ ಕಳಚಿ ಕಾಕ್‌ಪಿಟ್‌ಗೆ ನುಗ್ಗಲು ಯತ್ನಿಸಿದ ಮಹಿಳೆ; ಪ್ರಯಾಣಿಕರು ಶಾಕ್

​ವೀಡಿಯೊ ವೈರಲ್ ಆಗುತ್ತಿದ್ದಂತೆ ಗಮನಿಸಿದ ಸ್ಕೂಟರ್ ಸವಾರನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಈ ವೀಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಆತನ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ತಪ್ಪು ದಿಕ್ಕಿನಲ್ಲಿ ಪ್ರಯಾಣಿಸಿರುವುದು ಸಾರ್ವಜನಿಕರ ಜೀವಕ್ಕೂ ಅಪಾಯ ಎಂದು ಕಿಡಿಕಾರಿದ್ದಾರೆ.