ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಇಂಡಿಗೋ ಫ್ಲೈಟ್ ರದ್ದು: ವಿಮಾನ ನಿಲ್ದಾಣದಲ್ಲಿ ಕೈಗೆ ಸಿಕ್ಕ ವಸ್ತುಗಳನ್ನು ಪುಡಿ ಪುಡಿ ಮಾಡಿದ ಮಹಿಳೆ

Viral Video: ವಿಮಾನ ರದ್ದಾಗಿದೆ ಎನ್ನುವ ಕಾರಣಕ್ಕೆ ಮಹಿಳಾ ಪ್ರಯಾಣಿಕರೊಬ್ಬರು ಕೋಪಗೊಂಡು ಲಕ್ಷಾಂತರ ಮೌಲ್ಯದ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ್ದಾರೆ. ಭುವನೇಶ್ವರ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು ಮಹಿಳೆಯೂ ಇಂಡಿಗೋ ವಿಮಾನವನ್ನು ಬುಕ್ ಮಾಡಿದ್ದರು‌. ಆದರೆ ತಾಂತ್ರಿಕ ದೋಷದಿಂದ ಕೊನೆ ಕ್ಷಣದಲ್ಲಿ ಟಿಕೆಟ್ ರದ್ದು ಮಾಡಲಾಗಿದೆ. ಇದರಿಂದ ಕೆರಳಿದ ಮಹಿಳೆ ವಿಮಾನ ನಿಲ್ದಾಣದ ಸಿಬ್ಬಂದಿ ಜೊತೆ ಜಗಳವಾಡಿದ್ದು ಸಾರ್ವಜನಿಕ ವಸ್ತುವನ್ನು ಹಾನಿಗೊಳಿಸಿದ್ದಾರೆ

ಫ್ಲೈಟ್ ರದ್ದು! ವಿಮಾನ ನಿಲ್ದಾಣದಲ್ಲೇ ಅವಾಂತರ ಸೃಷ್ಟಿಸಿದ ಮಹಿಳೆ

ವಿಮಾನ ನಿಲ್ದಾಣದಲ್ಲೇ ಅವಾಂತರ ಸೃಷ್ಟಿಸಿದ ಮಹಿಳೆ -

Profile
Pushpa Kumari Aug 14, 2026 7:42 PM

ನವದೆಹಲಿ,ಆ.14: ವಿಮಾನ ರದ್ದಾಗಿದೆ ಎನ್ನುವ ಕಾರಣಕ್ಕೆ ಮಹಿಳಾ ಪ್ರಯಾಣಿಕರೊಬ್ಬರು ಕೋಪಗೊಂಡು ಲಕ್ಷಾಂತರ ಮೌಲ್ಯದ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ್ದಾರೆ. ಭುವನೇಶ್ವರ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು ಮಹಿಳೆಯೂ ಇಂಡಿಗೋ ವಿಮಾನವನ್ನು ಬುಕ್ ಮಾಡಿದ್ದರು‌. ಆದರೆ ತಾಂತ್ರಿಕ ದೋಷದಿಂದ ಕೊನೆ ಕ್ಷಣದಲ್ಲಿ ಟಿಕೆಟ್ ರದ್ದು ಮಾಡಲಾಗಿದೆ. ಇದರಿಂದ ಕೆರಳಿದ ಮಹಿಳೆ ವಿಮಾನ ನಿಲ್ದಾಣದ ಸಿಬ್ಬಂದಿ ಜೊತೆ ಜಗಳವಾಡಿದ್ದು ಸಾರ್ವಜನಿಕ ವಸ್ತುವನ್ನು ಹಾನಿಗೊಳಿಸಿದ್ದಾರೆ. ಈ ಘಟನೆಯ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗುತ್ತಿದೆ.

ಮಹಿಳೆಯೊಬ್ಬರು ಇಂಡಿಗೋ ವಿಮಾನ 6E 7352 ರಲ್ಲಿ ಕೋಲ್ಕತ್ತಾಗೆ ಪ್ರಯಾಣಿಸಬೇಕಿತ್ತು. ವಿಮಾನ ರದ್ದಾದ ನಂತರ ಭುವನೇಶ್ವರ ವಿಮಾನ ನಿಲ್ದಾಣದಲ್ಲಿ ಮಹಿಳೆ ಗದ್ದಲ ನಡೆಸಿದ್ದಾರೆ. ಆಕೆಯ ಮಗ ಅಸ್ವಸ್ಥನಾಗಿದ್ದರಿಂದ ಭೇಟಿ ಮಾಡಬೇಕಾಗಿತ್ತು. 3 ಗಂಟೆಗಳ ಕಾಲ ಕಾದ ನಂತರವೂ ಆಕೆಗೆ ರದ್ದತಿಯ ಬಗ್ಗೆ ಸಮಯಕ್ಕೆ ಸರಿಯಾಗಿ ಮಾಹಿತಿ ನೀಡಲಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಡಿಯೋ ನೋಡಿ:



ದೂರಿನ ಪ್ರಕಾರ, ಮಹಿಳೆ ಮಾನಿಟರ್, ಕೀಬೋರ್ಡ್ ಮತ್ತು ಪಾಸ್‌ಪೋರ್ಟ್-ಸ್ವೈಪಿಂಗ್ ಯಂತ್ರ ವನ್ನು ಹಾನಿಗೊಳಿಸಿದ್ದಾರೆ. ಹಾನಿಗೊಳಗಾದ ಉಪಕರಣಗಳ ಬೆಲೆ ಸುಮಾರು 49,000 ರೂ. ಎಂದು ಹೇಳಲಾಗಿದೆ. ಈ ಹಂಗಾಮ ಸೃಷ್ಟಿಸಿದ ಮಹಿಳೆಯನ್ನು ಮಮೋನಿ ಖರತ್ ಎಂದು ಗುರುತಿಸಲಾಗಿದೆ. ಘಟನೆಯ ವೀಡಿಯೊ ಭಾರೀ ವೈರಲ್ ಆಗಿದ್ದು ಮಹಿಳೆ ನಿರ್ಗಮನ ಕೋಣೆಯಲ್ಲಿ ಗಲಾಟೆ ಮಾಡುತ್ತಿರುವುದು, ಸಿಬ್ಬಂದಿಗಳ ಮೇಲೆ ಕೂಗಾಡುತ್ತಿರುವುದು ಮತ್ತು ವಸ್ತುಗಳನ್ನು ಎಸೆಯುತ್ತಿರುವುದು ಕಂಡುಬಂದಿದೆ.

Viral Video: ರೈಲ್ವೆ ಗೇಟ್‌ನಲ್ಲೇ ಟ್ರೈನ್ ನಿಲ್ಲಿಸಿ ಹತ್ತಿದ ಕುಟುಂಬ; ಇದೇನು ನಿಮ್ಮ ಮನೆಯ ಆಸ್ತಿಯೇ? ನೆಟ್ಟಿಗರ ಪ್ರಶ್ನೆ

ವಿಮಾನ ನಿಲ್ದಾಣದ ಅಧಿಕಾರಿಗಳು ಪ್ರಯಾಣಿಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಮತ್ತು ಹಾನಿಗೊಳಗಾದ ಉಪಕರಣಗಳ ವೆಚ್ಚವನ್ನು ಆಕೆಯಿಂದ ವಸೂಲಿ ಮಾಡಲು ಪೊಲೀಸರಿಗೆ ದೂರು ನೀಡಿದ್ದಾರೆ. ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ.‌ ಬಳಕೆದಾರರೊಬ್ಬರು ಮಹಿಳೆಗೆ ಪ್ರಯಾಣ ಅನಿವಾರ್ಯವಾಗಿತ್ತು, ಸಿಬ್ಬಂದಿಗಳು ಮೊದಲೇ ಮಾಹಿತಿ ನೀಡಬೇಕಿತ್ತು ಎಂದು ಮಹಿಳೆ ಪರ ಮಾತನಾಡಿದ್ದಾರೆ.