ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮದುವೆ ದಿನವೂ ಬೀದಿ ನಾಯಿಯ ಕಾಳಜಿ ಮರೆಯದ ಮಹಿಳೆ; ಆನ್‌ಲೈನ್ ಮೂಲಕ ಹಾಲು, ಬ್ರೆಡ್‌ ಆರ್ಡರ್

Viral Video: ಬೀದಿ ಬದಿಯ ಪ್ರಾಣಿಗಳ ಬಗ್ಗೆ ದಯೆ ತೋರುವ ಕಾರ್ಯಗಳು ಹೆಚ್ಚಾಗಿ ಜನರ ಮನ ಗೆಲ್ಲುತ್ತವೆ. ಭಾರತದ ಅನೇಕ ನಗರಗಳಲ್ಲಿ ಹಲವರು ಬೀದಿ ನಾಯಿಮತ್ತು ಬೆಕ್ಕುಗಳಿಗೆ ಆಹಾರ ನೀಡುತ್ತಾರೆ. ಇದೀಗ ಮಹಿಳೆಯೊಬ್ಬರು ಮದುವೆ ಸಂಭ್ರಮದ ಬ್ಯುಸಿಯಲ್ಲಿದ್ದರೂ ಬೀದಿ ನಾಯಿಗಳಿಗೆ ಊಟ ಹಾಕುವುದನ್ನು ಮರೆತಿಲ್ಲ. ತನ್ನಿಂದ ಬೀದಿ ನಾಯಿಗಳು ಉಪವಾಸ ಇರಬಾರದು ಎನ್ನುವ ಕಾರಣಕ್ಕೆ ತಕ್ಷಣ ಜೆಪ್ಟೋ ಆ್ಯಪ್ ಮೂಲಕ ಹಾಲು ಮತ್ತು ಬ್ರೆಡ್ ಆರ್ಡರ್ ಮಾಡಿದ್ದಾರೆ.

ಬೀದಿ ನಾಯಿಗಳಿಗೆ ಆನ್‌ಲೈನ್ ಮೂಲಕ ಆಹಾರ ಆರ್ಡರ್ ಮಾಡಿದ ಮಹಿಳೆ

ಸಾಂದರ್ಭಿಕ ಚಿತ್ರ. -

Profile
Pushpa Kumari Mar 5, 2026 5:30 PM

ಲಖನೌ, ಮಾ. 5: ಪ್ರಾಣಿಪ್ರಿಯರ ಹಲವು ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತವೆ. ಇದೀಗ ಈ ವಿಡಿಯೊ ನೆಟ್ಟಿಗರ ಮನ ಗೆದ್ದಿದೆ. ಬೀದಿ ನಾಯಿಗಳ ಕಾಳಜಿ ವಹಿಸಿ ಅನ್ನ, ಆಹಾರ ನೀಡಿ ಮಾನವೀಯತೆ ಮೆರೆದ ಅನೇಕ ಘಟನೆ ನೀವು ನೋಡಿರಬಹುದು‌. ಇದೀಗ ಉತ್ತರ ಪ್ರದೇಶದ ಲಖನೌನಲ್ಲಿ ಮಹಿಳೆಯೊಬ್ಬರು ಆನ್‌ಲೈನ್‌ನಲ್ಲಿ ಬ್ರೆಡ್ ಮತ್ತು ಹಾಲು ಆರ್ಡರ್ ಮಾಡಿ ಬೀದಿ ನಾಯಿಗಳಿಗೆ ಆಹಾರ ನೀಡಿದ್ದಾರೆ‌.

ಬೀದಿ ಬದಿಯ ಪ್ರಾಣಿಗಳ ಬಗ್ಗೆ ದಯೆ ತೋರುವವರ ಚಟುವಟಿಕೆ ಹೆಚ್ಚಾಗಿ ಗಮನ ಸೆಳೆಯುತ್ತವೆ. ಭಾರತದ ಅನೇಕ ನಗರಗಳಲ್ಲಿ ಹೆಚ್ಚಿನ ಜನರು ಬೀದಿ ನಾಯಿಗಳು ಮತ್ತು ಬೆಕ್ಕುಗಳಿಗೆ ಆಹಾರ ನೀಡುತ್ತಾರೆ. ಇದೀಗ ಮಹಿಳೆಯೊಬ್ಬರು ಮದುವೆ ಸಂಭ್ರಮದ ಬ್ಯುಸಿಯಲ್ಲಿದ್ದರೂ ಬೀದಿ ನಾಯಿಗಳಿಗೆ ಊಟ ಹಾಕುವುದನ್ನು ಮರೆತಿಲ್ಲ. ತನ್ನಿಂದ ಬೀದಿ ನಾಯಿಗಳು ಉಪವಾಸ ಇರಬಾರದು ಎನ್ನುವ ಕಾರಣಕ್ಕೆ ಜೆಪ್ಟೋ ಆ್ಯಪ್ ಮೂಲಕ ಹಾಲು ಮತ್ತು ಬ್ರೆಡ್ ಆರ್ಡರ್ ಮಾಡಿದ್ದಾರೆ.

ವಿಡಿಯೊ ನೋಡಿ:

ಲಖನೌ ಮೂಲದ ಮಹಿಳೆ ಪ್ರತಿದಿನ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದರು. ಆದರೆ ಒಂದು ಸಂಜೆ ಕುಟುಂಬದ ಮದುವೆ ಕಾರ್ಯಕ್ಕೆ ತೆರಳಿದ್ದರಿಂದ ಅವರಿಗೆ ಆಹಾರ ನೀಡಲು ಸಾಧ್ಯವಾಗಲಿಲ್ಲ. ನಾಯಿಗಳು ತಮ್ಮ ಊಟವನ್ನು ತಪ್ಪಿಸಿಕೊಳ್ಳಬಾರದು ಎಂದು ಮಹಿಳೆ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಮೂಲಕ ಬ್ರೆಡ್ ಮತ್ತು ಹಾಲನ್ನು ಆರ್ಡರ್ ಮಾಡಿದ್ದಾರೆ.

ರಣರಂಗವಾದ ಸಾಮೂಹಿಕ ವಿವಾಹ ಸಮಾರಂಭ- ಕೇವಲ ಚಿಪ್ಸ್‌ ಪ್ಯಾಕೇಟ್‌ಗಾಗಿ ಕಿತ್ತಾಟ!

ಡೆಲಿವರಿ ಬಾಯ್‌ಗೆ ಕರೆ ಮಾಡಿದ ಮಹಿಳೆ, "ನಾನು ಮದುವೆಯಲ್ಲಿದ್ದೇನೆ, ಬರಲು ಸಾಧ್ಯ ಇಲ್ಲ. ದಯವಿಟ್ಟು ನಾನು ಹೇಳಿದ ಜಾಗದಲ್ಲಿ ಆ ನಾಯಿಗಳಿಗೆ ಈ ಹಾಲು-ಬ್ರೆಡ್ ನೀಡಿʼʼ ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಆತ ಒಪ್ಪಿಕೊಂಡಿದ್ದು ಆಹಾರ ಹಾಕಿ ಬಂದಿದ್ದಾನೆ. ಆದರೆ ವಿಡಿಯೊದಲ್ಲಿ ಡೆಲಿವರಿ ಬಾಯ್ ಹಾಲನ್ನು ನೇರವಾಗಿ ರಸ್ತೆಯ ಮೇಲೆ ಹಾಕಿರುವುದು ಮತ್ತು ಬ್ರೆಡ್ ಪ್ಯಾಕೆಟ್‌ಗಳನ್ನು ಅಲ್ಲೇ ಎಸೆದು ಬಂದಿರುವುದು ಕಂಡುಬಂದಿದೆ. ಈ ಬಗ್ಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಯಿಗೆ ಆಹಾರ ನೀಡುವ ಮಹಿಳೆಯ ಪ್ರಯತ್ನವನ್ನು ಹಲವರು ಶ್ಲಾಘಿಸಿದರೆ, ಈ ವಿಡಿಯೊ ಸ್ವಚ್ಛತೆ ಮತ್ತು ನಾಗರಿಕ ಪ್ರಜ್ಞೆಯ ಮಹತ್ವದ ಬಗ್ಗೆ ಆನ್‌ಲೈನ್‌ನಲ್ಲಿ ಚರ್ಚೆ ಹುಟ್ಟು ಹಾಕಿದೆ. ನೆಟ್ಟಿಗರೊಬ್ಬರು ʼʼಸಹೋದರ, ನಿಮ್ಮ ಕೆಲಸವನ್ನು ನಾನು ಗೌರವಿಸುತ್ತೇನೆ. ಆದರೆ ನೀವು ಪ್ಲಾಸ್ಟಿಕ್ ಅನ್ನು ಹಾಗೆ ಎಸೆಯಬಾರದಿತ್ತುʼʼ ಎಂದು ಬರೆದಿದ್ದಾರೆ. ಮತ್ತೊಬ್ಬರು "ಎಲ್ಲವೂ ಚೆನ್ನಾಗಿದೆ. ಆದರೆ ನೀವು ಬೀದಿಯಲ್ಲಿ ಹಾಲನ್ನು ಏಕೆ ಸುರಿದಿದ್ದೀರಿ?" ಎಂದು ಪ್ರಶ್ನಿಸಿದ್ದಾರೆ.