ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಹೆದ್ದಾರಿಯಲ್ಲಿ ಚಲಿಸುತ್ತಿರುವ ಕಾರಿನಲ್ಲಿ ಅಪಾಯಕಾರಿ ಸಾಹಸ ಪ್ರದರ್ಶಿಸಿದ ಮಹಿಳೆ; ವಿಡಿಯೊ ವೈರಲ್

Woman Performs Dangerous Stunt: ಹೈವೆಯಲ್ಲಿ ಚಲಿಸುತ್ತಿದ್ದ ಕಾರಿನ ಕಿಟಕಿಯಿಂದ ಹೊರಗೆ ತಲೆಹಾಕಿ ಅಪಾಯಕಾರಿ ಸಾಹಸ ಪ್ರದರ್ಶಿಸಿದ ಮಹಿಳೆಯ ವಿಡಿಯೊ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿರುವ ಈ ಕೃತ್ಯವು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಕಾರಿನಲ್ಲಿ ಮಹಿಳೆಯ ದುಸ್ಸಾಹಸ (ಸಂಗ್ರಹ ಚಿತ್ರ)

ಲಖನೌ: ಸರಿಯಾದ ಉಡುಪುಗಳಿಲ್ಲದೆ, ಚಲಿಸುವ ವಾಹನದ ಕಿಟಕಿಯಿಂದ ಹೊರಗೆ ತಲೆ ಹಾಕುತ್ತಾ ಮಹಿಳೆಯೊಬ್ಬಳು ಅಪಾಯಕಾರಿ ಸಾಹಸಗಳನ್ನು ಪ್ರದರ್ಶಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ವಿಡಿಯೊ ವೈರಲ್ (Viral Video) ಆದ ಬೆನ್ನಲ್ಲೇ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಉತ್ತರ ಪ್ರದೇಶದ (Uttar Pradesh) ಶಹೀದ್ ಪಾತ್‌ನಲ್ಲಿ ಈ ಘಟನೆ ನಡೆದಿದೆ. ಇದು ನಗರದ ಪ್ರಮುಖ ಹೆದ್ದಾರಿಯಲ್ಲಿ ಅಜಾಗರೂಕ ವರ್ತನೆಯ ಬಗ್ಗೆ ಹೊಸ ಕಳವಳವನ್ನು ಹುಟ್ಟುಹಾಕಿದೆ.

ವೈರಲ್ ಆಗಿರುವ ಈ ದೃಶ್ಯಾವಳಿಯಲ್ಲಿ, ಉತ್ತರ ಪ್ರದೇಶದ ನೋಂದಣಿ ಸಂಖ್ಯೆಯನ್ನು ಹೊಂದಿರುವ ಕಪ್ಪು ಬಣ್ಣದ ಕಾರಿನ ಕಿಟಕಿಯಿಂದ ಮಹಿಳೆಯೊಬ್ಬಳು ಸರಿಯಾಗಿ ಬಟ್ಟೆ ಧರಿಸದೆ ಕಿಟಕಿಯಿಂದ ಹೊರಗೆ ತನ್ನ ತಲೆ, ಅರ್ಧ ದೇಹವನ್ನು ತಂದಿದ್ದಾಳೆ. ಚಲಿಸುವ ವಾಹನದ ಹೊರಗೆ ಮಹಿಳೆಯ ದೇಹದ ಅರ್ಧದಷ್ಟು ಭಾಗ ನೇತಾಡುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ: ಸ್ಯಾನಿಟರಿ ಪ್ಯಾಡ್‍ಗಳಿಂದ ಹಿಡಿದು ಪುಸ್ತಕಗಳವರೆಗೆ; ಬೆಂಗಳೂರಿನಲ್ಲಿದೆ ಸೂಪರ್‌ಮ್ಯಾನ್ ಆಟೋ!

ಉಪ್ಕಬರ್ ಎಂಬ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನ ಪೋಸ್ಟ್‌ನ ಪ್ರಕಾರ, ಲಖನೌ ಶಹೀದ್ ಪಾತ್‌ನ ಈ ನಾಚಿಕೆಗೇಡಿನ ವಿಡಿಯೊದಲ್ಲಿ ಮಹಿಳೆಯೊಬ್ಬಳು ಸರಿಯಾದ ಬಟ್ಟೆ ಇಲ್ಲದೆ ಕಾರಿನಲ್ಲಿ ಪ್ರಯಾಣಿಸುತ್ತಿರುವುದನ್ನು ತೋರಿಸಲಾಗಿದೆ. ದಾರಿಹೋಕರು ಈ ಘಟನೆಯನ್ನು ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೊ ವೈರಲ್ ಆದ ನಂತರ, ಲಖನೌ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಪೊಲೀಸ್ ಇಲಾಖೆಯಿಂದ ಅಧಿಕೃತ ದೃಢೀಕರಣ ಇನ್ನೂ ಬಂದಿಲ್ಲ. ಘಟನೆಯ ಬಗ್ಗೆ ಅಥವಾ ಭಾಗಿಯಾಗಿರುವವರ ವಿರುದ್ಧ ಯಾವುದೇ ಕ್ರಮದ ಬಗ್ಗೆ ಅಧಿಕಾರಿಗಳು ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ.

ವಿಡಿಯೊ ವೀಕ್ಷಿಸಿ:



ಈ ಘಟನೆ ಪ್ರತ್ಯೇಕವಾದುದಲ್ಲ. ಅಪಾಯಕಾರಿ ಚಟುವಟಿಕೆಗಳು ಮತ್ತು ದುಸ್ಸಾಹಸಗಳಿಗೆ ಈ ರಸ್ತೆಯನ್ನು ಆಯ್ಕೆ ಮಾಡುವ ದುಷ್ಕರ್ಮಿಗಳಿಗೆ ಶಹೀದ್ ಪಾತ್ ಹೆಚ್ಚು ನೆಚ್ಚಿನ ತಾಣವಾಗಿದೆ. ಇತ್ತೀಚಿನ ದಿನಗಳಲ್ಲಿ, ಈ ಮಾರ್ಗದಲ್ಲಿ ಜನರು ಅಜಾಗರೂಕ ವರ್ತನೆಯಲ್ಲಿ ತೊಡಗಿರುವುದನ್ನು ತೋರಿಸುವ ಹಲವು ವಿಡಿಯೊಗಳು ಕಾಣಿಸಿಕೊಂಡಿವೆ. ಇದು ಅವರ ಸ್ವಂತ ಜೀವಗಳನ್ನು ಮಾತ್ರವಲ್ಲದೆ ಇತರ ಪ್ರಯಾಣಿಕರ ಜೀವಗಳನ್ನು ಸಹ ಗಂಭೀರ ಅಪಾಯಕ್ಕೆ ಸಿಲುಕಿಸುತ್ತದೆ ಎಂದು ನೆಟ್ಟಿಗರು ಆಕ್ರೋಸ ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶದ ರಾಜಧಾನಿಯ ಈ ಪ್ರಮುಖ ರಸ್ತೆಯ ಸಂಚಾರ ಕಾನೂನುಗಳ ಜಾರಿ ಮತ್ತು ಸಾರ್ವಜನಿಕ ಸುರಕ್ಷತಾ ಕ್ರಮಗಳ ಬಗ್ಗೆ ಇಂತಹ ಘಟನೆಗಳು ಪದೇ ಪದೆ ಸಂಭವಿಸುತ್ತಿರುವುದು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಬೈಕ್‌ ಸಮೇತ ಸವಾರರನ್ನು ರಸ್ತೆಯಲ್ಲಿ ಎಳೆದೊಯ್ದಿದ್ದ ಕಾರು

ಕುಡಿದ ಮತ್ತಿನಲ್ಲಿದ್ದ ಶಿಕ್ಷಕನೊಬ್ಬ ಚಲಾಯಿಸುತ್ತಿದ್ದ ಕಾರು ಬೈಕ್‌ಗೆ ಡಿಕ್ಕಿ ಹೊಡೆದು ಒಂದು ಕಿಲೋ ಮೀಟರ್‌ಗೂ ಹೆಚ್ಚು ದೂರ ಎಳೆದೊಯ್ದ ಘಟನೆ ಇತ್ತೀಚೆಗಷ್ಟೇ ಗುಜರಾತ್‍ನಲ್ಲಿ ನಡೆದಿತ್ತು. ಇದರ ಆಘಾತಕಾರಿ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಪ್ರಕರಣ ಸಂಬಂಧ ಶಿಕ್ಷಕನನ್ನು ಬಂಧಿಸಿ ಕಾರಿನೊಳಗೆ ಪತ್ತೆಯಾದ ಮದ್ಯದ ಬಾಟಲಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಕಾರಿನ ಮುಂದೆ ಸಿಲುಕಿಕೊಂಡಿದ್ದ ಬೈಕ್ ಅನ್ನು ಸುಮಾರು ದೂರದವರೆಗೆ ಎಳೆದುಕೊಂಡು ಹೋಗಲಾಗಿತ್ತು.