ಸ್ಯಾನಿಟರಿ ಪ್ಯಾಡ್‍ಗಳಿಂದ ಹಿಡಿದು ಪುಸ್ತಕಗಳವರೆಗೆ; ಬೆಂಗಳೂರಿನಲ್ಲಿದೆ ಸೂಪರ್‌ಮ್ಯಾನ್ ಆಟೋ!
Bengaluru’s Unique Auto: ಬೆಂಗಳೂರು ನಗರದ ಬೀದಿಗಳಲ್ಲಿ ಸಂಚರಿಸುವ ಈ ಸೂಪರ್‌ಮ್ಯಾನ್ ಆಟೋ ಇತರ ಆಟೋಗಳಿಂದ ಸಂಪೂರ್ಣ ವಿಭಿನ್ನವಾಗಿದೆ. ಪ್ರಯಾಣಿಕರನ್ನು ಗಮ್ಯಸ್ಥಾನಕ್ಕೆ ಕರೆದೊಯ್ಯುವುದರ ಜೊತೆಗೆ, ಈ ಆಟೋದಲ್ಲಿ ಉಚಿತವಾಗಿ ಸ್ಯಾನಿಟರಿ ಪ್ಯಾಡ್‌ಗಳು, ಪುಸ್ತಕಗಳು ಮತ್ತು ಅಗತ್ಯ ವಸ್ತುಗಳು ಲಭ್ಯವಿವೆ.
ಸ್ಯಾನಿಟರಿ ಪ್ಯಾಡ್ಸ್, ಫ್ಯಾನ್, ವೈ-ಫೈ, ನೀರಿನ ಬಾಟಲಿ ಇರುವ ಆಟೋ (ಎಐ ರಚಿತ ಚಿತ್ರ) -
ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನಲ್ಲಿ ಆಟೋರಿಕ್ಷಾಗಳು (autorickshaw) ಕೇವಲ ಸವಾರಿಗಳನ್ನು ನೀಡುವುದರ ಜೊತೆಗೆ ಅನೇಕ ಸೇವೆಗಳನ್ನು ನೀಡುತ್ತವೆ. ಮಣಿವೇಲ್ ಸಿ ಎಂಬುವವರ ಆಟೋವು ಸ್ಯಾನಿಟರಿ ನ್ಯಾಪ್ಕಿನ್‌ಗಳು, ಫ್ಯಾನ್, ವೈ-ಫೈ, ನೀರಿನ ಬಾಟಲಿಗಳು, ಸಣ್ಣ ಟಿವಿ, ಸಿಸಿಟಿವಿ ಕ್ಯಾಮರಾಗಳು ಮತ್ತು ಪುಸ್ತಕಗಳನ್ನು ಹೊಂದಿವೆ. ಪ್ರಯಾಣಿಕರು (passenger) ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಮೂಲಕ ಒಟ್ಟು ಐದು ಭಾಷೆಗಳಲ್ಲಿ ಕನ್ನಡವನ್ನು ಕಲಿಯಲು ಸಹಾಯ ಮಾಡುತ್ತದೆ.
ಮಣಿವೇಲ್ ಅವರ ವಾಹನದೊಳಗಿನ ಅನೇಕ ಸ್ಟಿಕ್ಕರ್‌ಗಳಲ್ಲಿ, ಒಂದು ಎದ್ದು ಕಾಣುತ್ತದೆ. ಗರ್ಭಿಣಿಯರು ಮತ್ತು ಡಯಾಲಿಸಿಸ್ ರೋಗಿಗಳಿಗೆ 10 ಕಿ.ಮೀ ಒಳಗೆ ಉಚಿತ ಸವಾರಿಗಳನ್ನು ಉಲ್ಲೇಖಿಸುತ್ತದೆ. ಮಣಿವೇಲ್ ಅವರ ಪತ್ನಿ ಗರ್ಭಿಣಿಯಾಗಿದ್ದಾಗ 2017ರಲ್ಲಿ ಈ ವಿಶಿಷ್ಟ ಸೇವೆ ಜಾರಿಗೆ ತರಲು ನಿರ್ಧರಿಸಲಾಯಿತು. ಅವರಿಗೆ ದ್ವಿಚಕ್ರ ವಾಹನವಿಲ್ಲದೆ ಆಸ್ಪತ್ರೆಗೆ ಭೇಟಿ ನೀಡುವುದು ಕಷ್ಟಕರವಾಗಿತ್ತು.
ಇದನ್ನೂ ಓದಿ: Viral Video: ಗೃಹ ಪ್ರವೇಶ ಆಚರಣೆಯಲ್ಲಿ ಗೋಮಾತೆ ಬದಲಿಗೆ ಆಟಿಕೆ ಹಸು: ಇದೇ ಮಾಡರ್ನ್ ಇಂಡಿಯಾ ಎಂದ ನೆಟ್ಟಿಗರು
ಎರಡು ವರ್ಷಗಳ ನಂತರ, ಸ್ವಂತ ಆಟೋರಿಕ್ಷಾ ಖರೀದಿಸಿದ ನಂತರ, ಮಣಿವೇಲ್ ಗರ್ಭಿಣಿಯರಿಗೆ ಉಚಿತ ಪ್ರಯಾಣವನ್ನು ನೀಡಲು ನಿರ್ಧರಿಸಿದರು. ನಿಯಮಿತವಾಗಿ ಆಸ್ಪತ್ರೆ ಭೇಟಿ ನೀಡುವವರು, ಹಣ ಹೊಂದಿಸಲು ಹೆಣಗಾಡುತ್ತಿರುವವರಿಗೆ ಉಚಿತ ಸೇವೆ ನೀಡುತ್ತಿದ್ದ ಅವರು, ನಂತರ ಡಯಾಲಿಸಿಸ್ ರೋಗಿಗಳವರೆಗೆ ವಿಸ್ತರಿಸಿದರು. ಮಣಿವೇಲ್ ತನ್ನ ಆಟೋ ನಿರ್ವಹಣೆ ಮತ್ತು ನೀರು, ಬ್ಯಾಟರಿಗಳು, ಸ್ಯಾನಿಟರಿ ಪ್ಯಾಡ್‌ಗಳು ಮತ್ತು ವೈ-ಫೈ ಸೇರಿದಂತೆ ಸರಬರಾಜುಗಳನ್ನು ದಾಸ್ತಾನು ಮಾಡಲು ಪ್ರತಿ ತಿಂಗಳು ಸುಮಾರು ರೂ. 4,000 ರಿಂದ ರೂ. 5,000 ದವರೆಗೆ ಖರ್ಚು ಮಾಡುತ್ತಾರೆ.
ಪ್ರಯಾಣಿಕರ ಕೆಲವು ಅನುಭವಗಳನ್ನು ಅವರು ವಿವರಿಸಿದರು. ಇತ್ತೀಚಿನ ಐಪಿಎಲ್ ಋತುವಿನಲ್ಲಿ, ಒಬ್ಬ ಪ್ರಯಾಣಿಕನು ಸಣ್ಣ ಪರದೆಯ ಮೇಲೆ ಪಂದ್ಯವನ್ನು ವೀಕ್ಷಿಸಿದನು. ಅದು ಮುಗಿಯುವವರೆಗೂ ಇಳಿಯಲು ನಿರಾಕರಿಸಿದನಂತೆ. ಒಮ್ಮೆ, ವಿಜಯನಗರದಿಂದ ಸದಾಶಿವನಗರಕ್ಕೆ ಸಣ್ಣ ಪ್ರಯಾಣವು ಬರೋಬ್ಬರಿ ಮೂರು ಗಂಟೆಗಳ ಕಾಲ ತೆಗೆದಕೊಂಡಿದಂತೆ. ಅದಕ್ಕಾಗಿ ಪ್ರಯಾಣಿಕನು ರೂ. 3,000 ಪಾವತಿ ಮಾಡಿದನಂತೆ.
ತಮಿಳುನಾಡಿನ ಕಲ್ಲಕುರಿಚಿಯಲ್ಲಿ ಬೆಳೆದ ಮಣಿವೇಲ್, ನಾಲ್ಕನೇ ವಯಸ್ಸಿನಲ್ಲಿ ಇಬ್ಬರೂ ಪೋಷಕರನ್ನು ಕಳೆದುಕೊಂಡರು. ಬೆಂಗಳೂರಿಗೆ ಬಂದ ಅವರು ಸ್ಥಳೀಯರೊಂದಿಗೆ ಮಾತನಾಡುವ ಮೂಲಕ ಕನ್ನಡ ಭಾಷೆಯನ್ನು ಕಲಿತರು. ಇದೀಗ ಅವರು ಸೂಪರ್‌ಮ್ಯಾನ್ ಎಂಬ ಅಡ್ಡಹೆಸರನ್ನು ಗಳಿಸಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಇದೇ ರೀತಿಯ ಸೇವೆಯಿಂದ ಪ್ರೇರಿತರಾಗಿ, ಮಣಿವೇಲ್ ಈಗ ಸೂಪರ್ ಆಟೋ ಎಂಬ ಅಪ್ಲಿಕೇಶನ್ ಅನ್ನು ಪ್ರಾರಂಭಿಸುತ್ತಿದ್ದಾರೆ. ಚಾಲಕರು ಅವರಂತೆಯೇ ಸೌಲಭ್ಯಗಳನ್ನು ಒದಗಿಸಿದರೆ ತಮ್ಮ ವಾಹನಗಳನ್ನು ನೋಂದಾಯಿಸಿಕೊಳ್ಳಬಹುದಾಗಿದೆ.
ಆಟೋ ರಾಯಭಾರಿಯಾಗಿ ನಟಿ ರಚಿತರಾಮ್ ಆಯ್ಕೆ
ಮೇರುನಟ ದಿ. ಶಂಕರ್‌ನಾಗ್ ಅವರ ಜನ್ಮದಿನದ ಪ್ರಯುಕ್ತ ಆಟೋ ಚಾಲಕರ ಸಂಘಟನೆಗಳ ನೇತೃತ್ವದಲ್ಲಿ 12ನೇ ವರ್ಷದ "ಚಾಲಕರ ದಿನಾಚರಣೆ"ಯನ್ನು ನವೆಂಬರ್ 9ರಂದು ಜಯನಗರ 5ನೇ ಬ್ಲಾಕ್, ಶಾಲಿನಿ ಆಟದ ಮೈದಾನದಲ್ಲಿ ಆಯೋಜಿಸಲಾಯಿತು. ಈ ಬಾರಿಯ ಚಾಲಕರ ದಿನಾಚರಣೆಗೆ ಆಟೋ ರಾಯಭಾರಿಯಾಗಿ ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್ ಆಯ್ಕೆಯಾಗಿದ್ದಾರೆ.