Viral Video: ಫ್ಲೈಟ್‌ನಲ್ಲಿ ಸಹಪ್ರಯಾಣಿಕನ ಮೇಲೆ ಹಲ್ಲೆ; ಭಾರತೀಯ ಮೂಲದ ವ್ಯಕ್ತಿ ಬಂಧನ
ಫಿಲಡೆಲ್ಫಿಯಾದಿಂದ ಮಿಯಾಮಿಗೆ ತೆರಳುತ್ತಿದ್ದ ಫ್ರಾಂಟಿಯರ್ ಏರ್‌ಲೈನ್ಸ್ ವಿಮಾನದಲ್ಲಿ ಸಹಪ್ರಯಾಣಿಕನ ಮೇಲೆ ದಾಳಿ ನಡೆಸಿದ ಆರೋಪದ ಮೇಲೆ ಭಾರತೀಯ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ. ಜೂನ್ 30ರಂದು ನಡೆದ ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ನೆವಾರ್ಕ್‌ನ 21 ವರ್ಷದ ಇಶಾನ್ ಶರ್ಮಾ ಕೀನು ಇವಾನ್ಸ್ ಎಂಬ ವ್ಯಕ್ತಿಯ ಜತೆ ಜಗಳವಾಡಿದ್ದಾನೆ.

ಇಶಾನ್ ಶರ್ಮಾ, ಬಂಧಿತ ಆರೋಪಿ

ಮಿಯಾಮಿ: ಫಿಲಡೆಲ್ಫಿಯಾದಿಂದ (Philadelphia) ಮಿಯಾಮಿಗೆ (Miami) ತೆರಳುತ್ತಿದ್ದ ಫ್ರಾಂಟಿಯರ್ ಏರ್‌ಲೈನ್ಸ್ (Frontier Airlines) ವಿಮಾನದಲ್ಲಿ ಸಹಪ್ರಯಾಣಿಕನ ಮೇಲೆ ದಾಳಿ ನಡೆಸಿದ ಆರೋಪದ ಮೇಲೆ ಭಾರತೀಯ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ. ಜೂನ್ 30ರಂದು ನಡೆದ ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ನೆವಾರ್ಕ್‌ನ 21 ವರ್ಷದ ಇಶಾನ್ ಶರ್ಮಾ (Ishaan Sharma), ಕೀನು ಇವಾನ್ಸ್ ಎಂಬ ವ್ಯಕ್ತಿಯ ಜತೆ ಜಗಳವಾಡಿದ್ದಾನೆ.
ವಿಡಿಯೋದಲ್ಲಿ ಶರ್ಮಾ ಮತ್ತು ಇವಾನ್ಸ್ ಒಬ್ಬರಿಗೊಬ್ಬರು ಕುತ್ತಿಗೆ ಹಿಡಿಯಲು ಯತ್ನಿಸುತ್ತಿರುವುದು ಕಂಡುಬಂದಿದ್ದು, ಸಹಪ್ರಯಾಣಿಕರು ಜಗಳ ನಿಲ್ಲಿಸುವಂತೆ ಕೇಳಿಕೊಳ್ಳುತ್ತಿದ್ದಾರೆ. ಶರ್ಮಾ ತನ್ನ ಸೀಟ್ ಹತ್ತಿರ ಹೋಗುವಾಗ ತನ್ನ ಕುತ್ತಿಗೆಯನ್ನು ಹಿಡಿದು ದಾಳಿ ಮಾಡಿ ನಕ್ಕಿದ್ದಾನೆ. ಅಲ್ಲದೆ ನೀನು ಕ್ಷುದ್ರ ಮಾನವ, ನನಗೆ ಸವಾಲು ಹಾಕಿದರೆ, ಅದು ನಿನ್ನ ಸಾವಿಗೆ ಕಾರಣವಾಗುತ್ತೆ ಎಂದು ಹೇಳಿದ್ದ ಎಂದು ಇವಾನ್ಸ್ ತಿಳಿಸಿದ್ದಾರೆ.
New: Ishaan Sharma, 21, was arrested for allegedly committing an unprovoked assault on a fellow passenger aboard a Frontier flight to Miami.
— The Facts Dude (@The_Facts_Dude) July 3, 2025
Sharma faces charges of battery and a $500 bond, per jail records.
The victim reported to police that the attack was unprovoked,… pic.twitter.com/9xwPmKNHaF
ಶರ್ಮಾ ಅವರಿಂದ ತೊಂದರೆಯಾಗುತ್ತಿದೆ ಎಂದು ಇವಾನ್ಸ್, ವಿಮಾನ ಸಿಬ್ಬಂದಿಗೆ ತಿಳಿಸಿದ್ದಾನೆ. ಇದಕ್ಕೆ ಹಾಗೇನಾದರು ಆದರೆ ಹೆಲ್ಪ್ ಬಟನ್ ಒತ್ತುವಂತೆ ಸಿಬ್ಬಂದಿ ಸೂಚಿಸಿದ್ದಾರೆ. ಸುಮ್ಮನಿರದ ಶರ್ಮಾ ಬೆದರಿಕೆ ಹಾಕುವುದನ್ನು ಮುಂದುವರಿಸಿದಾಗ ಇವಾನ್ಸ್ ಬಟನ್ ಒತ್ತಿದ್ದಾರೆ. "ಅವನು ಕೋಪದಿಂದ ನನ್ನನ್ನು ದಿಟ್ಟಿಸಿ ನೋಡುತ್ತಿದ್ದ,. ಶರ್ಮಾ ತನ್ನ ಕೈಯಿಂದ ನನ್ನ ಕುತ್ತಿಗೆಯನ್ನು ಗಟ್ಟಿಯಾಗಿ ಹಿಡಿದು ಒತ್ತಿದ. ಆ ಕ್ಷಣದಲ್ಲಿ, ನಾನು ನನ್ನ ರಕ್ಷಣೆಗಾಗಿ ಹೋರಾಡಿದೆ ಎಂದು ಇವಾನ್ಸ್ ತಿಳಿಸಿದ್ದಾರೆ.
ಈ ಸುದ್ದಿಯನ್ನು ಓದಿ: Viral Video: ರೀಲ್ಸ್‌ಗಾಗಿ ದೇವಾಲಯದೊಳಗೆ ಕಿತ್ತಾಡಿಕೊಂಡ ಭಕ್ತರು; ಈ ವಿಡಿಯೊ ನೋಡಿದ್ರೆ ಶಾಕ್ ಆಗೋದು ಗ್ಯಾರಂಟಿ!
ವಿಮಾನ ಲ್ಯಾಂಡ್ ಆದ ತಕ್ಷಣ ಶರ್ಮಾನನ್ನು ಬಂಧಿಸಲಾಗಿದ್ದು, ಅವರ ಮೇಲೆ ದೈಹಿಕ ದಾಳಿಯ ಆರೋಪ ಹೊರಿಸಲಾಗಿದೆ. ಮಂಗಳವಾರದ ನ್ಯಾಯಾಲಯದ ವಿಚಾರಣೆಯಲ್ಲಿ, "ನನ್ನ ಕಕ್ಷಿದಾರ ಧರ್ಮದ ಆಚರಣೆಯಂತೆ ಧ್ಯಾನ ಮಾಡುತ್ತಿದ್ದ. ಆದರೆ, ಹಿಂದಿನ ಆಸನದ ಪ್ರಯಾಣಿಕನಿಗೆ ಇದು ಇಷ್ಟವಾಗಲಿಲ್ಲ" ಎಂದು ಶರ್ಮಾ ಪರ ವಕೀಲರು ವಾದಿಸಿದ್ದಾರೆ ಎಂದು ವರದಿಯಾಗಿದೆ.