ಬೆಂಗಳೂರು ಟ್ರಾಫಿಕ್‌ನಲ್ಲಿ ಹೀಗೂ ಸಮಯ ಕಳೆಯಬಹುದೇ? ಫುಟ್‌ಬಾಲ್ ಕ್ರೇಜ್ ಬಗ್ಗೆ ಹರಟೆ ಹೊಡೆದ ಸವಾರರು!
Viral News: ಟ್ರಾಫಿಕ್‌ನಲ್ಲಿ ಕಂಟೆಂಟ್ ಕ್ರಿಯೇಟರ್ ಒಬ್ಬರಿಗೆ ಅಪರಿಚಿತ ಬೈಕ್ ಸವಾರನ ಪರಿಚಯವಾಗಿದ್ದು ಫುಟ್ ಬಾಲ್ ಆಟಗಾರರ ವಿಚಾರವಾಗಿ ಸಂಭಾಷಣೆ ನಡೆಸಿದ್ದಾರೆ. ಅವಿನೀಶ್ ಹೆಗ್ಡೆ ಅವರು ಈ ಸಂಭಾಷಣೆಯ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ತಮ್ಮ ಕಾರಿನೊಳಗೆ ಕುಳಿತು ಬಂಗಾಳದ ಬೈಕ್ ಸವಾರನೊಂದಿಗೆ ಮಾತನಾಡುತ್ತಿರುವುದು ಕಂಡುಬರುತ್ತದೆ.
ಬೆಂಗಳೂರು ಟ್ರಾಫಿಕ್‌ನಲ್ಲಿ ಹರಟೆ ಹೊಡೆಯುತ್ತಾ ಸಮಯ ಕಳೆದ ಸವಾರರು -
ಬೆಂಗಳೂರು,ಅ. 11: ಸಿಲಿಕಾನ್ ಸಿಟಿಯ ಟ್ರಾಫಿಕ್ ಜಾಮ್ ಅಂದ್ರೆ ಸಾಕು,ಸರತಿ ಸಾಲಿನಲ್ಲಿ ನಿಂತು ಬೇಸತ್ತವರು ಅನೇಕರು ಇದ್ದಾರೆ. ಕೆಲವರು ಅಲ್ಲೆ ಲ್ಯಾಪ್‌ಟಾಪ್ ತೆರೆದು ಕೆಲಸ ಮಾಡುವವರು ಇದ್ದಾರೆ. ಆದರೆ ಇದೀಗ ಇದೇ ಟ್ರಾಫಿಕ್‌ನಲ್ಲಿ ಕಂಟೆಂಟ್ ಕ್ರಿಯೇಟರ್ ಒಬ್ಬರಿಗೆ ಅಪರಿಚಿತ ಬೈಕ್ ಸವಾರನ ಪರಿಚಯವಾಗಿದ್ದು ಫುಟ್ ಬಾಲ್ ಆಟಗಾರರ ವಿಚಾರವಾಗಿ ಸಂಭಾಷಣೆ ನಡೆಸಿದ್ದಾರೆ. ಅವಿನೀಶ್ ಹೆಗ್ಡೆ ಅವರು ಈ ಸಂಭಾಷಣೆಯ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿ ಕೊಂಡಿದ್ದಾರೆ (Viral News) ಇದರಲ್ಲಿ ಅವರು ತಮ್ಮ ಕಾರಿನೊಳಗೆ ಕುಳಿತು ಬಂಗಾಳದ ಬೈಕ್ ಸವಾರನೊಂದಿಗೆ ಮಾತನಾಡುತ್ತಿರುವುದು ಕಂಡುಬರುತ್ತದೆ.
ಬೆಂಗಳೂರಿನ ಸಾಮಾನ್ಯ ಟ್ರಾಫಿಕ್ ದಟ್ಟಣೆಯು ಕ್ರೀಡೆಯ ಮೇಲಿನ ಪ್ರೀತಿಯ ಮೂಲಕ ಇಬ್ಬರು ಅಪರಿಚಿತರನ್ನು ಬೆಸೆಯಲು ಕಾರಣವಾಗಿದೆ. ಸಾಲಾಗಿ ನಿಂತ ವಾಹನಗಳು, ನಿರಂತರ ಹಾರ್ನ್ ಶಬ್ದ ಮತ್ತು ಹತಾಶರಾದ ಪ್ರಯಾಣಿಕರ ನಡುವೆ, ಫುಟ್‌ಬಾಲ್ ಮೇಲಿನ ಆಸಕ್ತಿ ಒಬ್ಬರಿಗೊಬ್ಬರಿಗೆ ಹೇಗಿದೆ ಅನ್ನೋದನ್ನು ಪ್ರಯಾಣಿಕರಿಬ್ಬರು ಮಾತನಾಡಿದ್ದಾರೆ.
ವಿಡಿಯೋ ನೋಡಿ:
ಅವಿನಿಶ್ ಹೆಗ್ಡೆ ಎನ್ನುವ ಕಂಟೆಂಟ್ ಕ್ರಿಯೇಟರ್ ತಮ್ಮ ಕಾರಿನಲ್ಲಿ ಹೋಗುತ್ತಿದ್ದಾಗ ಬೆಂಗಳೂರಿನ ಟ್ರಾಫಿಕ್‌ನಲ್ಲಿ ನಿಂತಿದ್ದರು. ಅದೇ ಸಮಯದಲ್ಲಿ ಪಕ್ಕದಲ್ಲಿದ್ದ ಬೈಕ್ ಸವಾರನೊಂದಿಗೆ ಮಾತನಾಡಲು ಶುರು ಮಾಡಿದ್ದಾರೆ. ಮೊದಲು ಬೈಕ್ ಬಗ್ಗೆ ಮಾತುಕತೆ ಆರಂಭವಾಗಿದ್ದು ಇದು ಇತ್ತೀಚಿನ ಮಾಡೆಲಾ ಎಂದು ಬೈಕ್ ಬಗ್ಗೆ ವಿಚಾರಿಸಿದ್ದಾರೆ
ಅದಕ್ಕೆ ಆ ಸವಾರ ಮೂರು ವರ್ಷ ಹಳೆಯ ಬೈಕ್ ಎಂದಿದ್ದಾರೆ. ಬೈಕ್ ಸವಾರ ಟಾಟಾ ಇನ್‌ಸ್ಟಿಟ್ಯೂಟ್‌ನಲ್ಲಿ ಪಿಎಚ್‌ಡಿ ವಿದ್ಯಾರ್ಥಿಯಾಗಿದ್ದು, ಮೂಲತಃ ಪಶ್ಚಿಮ ಬಂಗಾಳದವರು. ಇವರಿಬ್ಬರ ಮಾತು ಮುಂದುವರಿದು ಫುಟ್ ಬಾಲ್ ವಿಚಾರದವರೆಗೆ ಹೋಗಿದೆ. ಕೋಲ್ಕತ್ತಾದ ಪ್ರಸಿದ್ಧ ಕ್ಲಬ್‌ಗಳಾದ ಮೋಹನ್ ಬಗಾನ್ ಮತ್ತು ಈಸ್ಟ್ ಬಂಗಾಳದ ಬಗ್ಗೆಯೂ ಮಾತನಾಡಿದ್ದಾರೆ. ಸವಾರನ ಕುಟುಂಬ ಈಸ್ಟ್ ಬಂಗಾಳಕ್ಕೆ ಸಪೋರ್ಟ್ ಮಾಡಿದರೆ ತಾನು ಮೋಹನ್ ಬಗಾನ್ ಅಭಿಮಾನಿ ಎಂದು ಸವಾರ ತಿಳಿಸಿದ್ದಾರೆ. ಬಳಿಕ ಭಾರತ - ಉರುಗ್ವೆ ಫುಟ್‌ಬಾಲ್ ಪಂದ್ಯದ ಬಗ್ಗೆಯೂ ಇಬ್ಬರೂ ಚರ್ಚಿಸಿದರು, ಆಟಗಾರರ ಪ್ರದರ್ಶನ ಸಮಬಲ ಸಾಧಿಸಿದ ನಂತರ ಭಾರತೀಯ ತಂಡವು ಉತ್ತಮವಾಗಿ ಏನು ಮಾಡಬಹುದಿತ್ತು ಎಂಬುದನ್ನು ಚರ್ಚೆ ಮಾಡಿದ್ದಾರೆ.
ಕೊನೆಯಲ್ಲಿ ಬಂಗಾಳಿ ಶೈಲಿಯಲ್ಲಿ ಫುಟ್‌ಬಾಲ್ ಚಿಯರ್ ಹೇಳಿಸಿ ವಿಡಿಯೋವನ್ನು ಕೊನೆಗೊಳಿಸಿದ್ದಾರೆ. ಸದ್ಯ ಈ ಘಟನೆ ಬೆಂಗಳೂರು ಟ್ರಾಫಿಕ್ ನಲ್ಲಿ ಹೀಗೆ ಮಾತನಾಡುತ್ತಾ ಆರಾಮವಾಗಿ ಸಮಯ ಕಳೆಯಬಹುದು ಎಂದು ಕೆಲವರು ತಮಾಷೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ.