ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಝೆಪ್ಟೋದಲ್ಲಿ ಹೂಕೋಸು ಆರ್ಡರ್ ಮಾಡಿ ಎಲೆ ಮಾತ್ರ ಪಡೆದ ಗ್ರಾಹಕ: ಈ ದರೋಡೆಕ್ಕಿಂತ ಭಿಕ್ಷೆ ಬೇಡುವುದು ಲೇಸು ಎಂದು ಕಿಡಿ

Viral News: ​ಕ್ವಿಕ್-ಕಾಮರ್ಸ್ ಸಂಸ್ಥೆಗಳು ಹೆಚ್ಚಾಗಿದ್ದು, ಗ್ರಾಹಕರಿಗೆ ಸಕಾಲದಲ್ಲಿ ವಸ್ತುಗಳನ್ನು ತಲುಪಿಸುತ್ತವೆ. ಆದರೆ ಈ ವೇಳೆ ಕೆಲವೊಂದು ಗ್ರಾಹಕರಿಗೆ ಕಹಿ ಅನುಭವ ಕೂಡ ಆಗುತ್ತಿದೆ. ನೀಡಿದ ಮೊತ್ತಕ್ಕೆ ಸರಿಯಾದ ಗುಣಮಟ್ಟದ ವಸ್ತುಗಳು ಸಿಗುತ್ತಿಲ್ಲ. ಇದಕ್ಕೆ ಸಾಕ್ಷಿ ಎನ್ನುವಂತೆ ಝೆಪ್ಟೋದಲ್ಲಿ ಚೆನ್ನೈ ಗ್ರಾಹಕರೊಬ್ಬರು ಹೂಕೋಸು ಆರ್ಡರ್ ಮಾಡಿದ್ದು, ಅದರಲ್ಲಿ ಎಲೆಯೇ ಹೆಚ್ಚಿದೆ ಎಂದು ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಹೂಕೋಸು ಬದಲು ಬರಿ ಎಲೆ ಡೆಲಿವರಿ ಮಾಡಿದ ಝೆಪ್ಟೋ: ಪೋಸ್ಟ್ ವೈರಲ್

ಹೂಕೋಸು ಬದಲು ಬರಿ ಎಲೆ ಡೆಲಿವರಿ ಮಾಡಿದ ಝೆಪ್ಟೋ -

Profile
Pushpa Kumari Oct 7, 2026 10:54 PM

ಚೆನ್ನೈ, ಅ. 7: ಇತ್ತೀಚೆಗೆ ಏನೇ ಅಗತ್ಯ ವಸ್ತು ಬೇಕೆಂದಾಗ ಆನ್‌ಲೈನ್ ಮೂಲಕವೇ ಖರೀದಿ ಮಾಡುತ್ತೇವೆ. ​ಕ್ವಿಕ್-ಕಾಮರ್ಸ್ ಸಂಸ್ಥೆಗಳು ಹೆಚ್ಚಾಗಿದ್ದು, ಗ್ರಾಹಕರಿಗೆ ಸಕಾಲದಲ್ಲಿ ವಸ್ತುಗಳನ್ನು ತಲುಪಿಸುತ್ತವೆ. ಆದರೆ ಕೆಲವೊಂದು ಗ್ರಾಹಕರಿಗೆ ಕಹಿ ಅನುಭವ ಕೂಡ ಆಗುತ್ತಿದ್ದು, ನೀಡಿದ ಮೊತ್ತಕ್ಕೆ ಗುಣಮಟ್ಟದ ವಸ್ತುಗಳು ಸಿಗುತ್ತಿಲ್ಲ. ಇದಕ್ಕೆ ಸಾಕ್ಷಿ ಎನ್ನುವಂತೆ ಝೆಪ್ಟೋದಲ್ಲಿ ತಮಿಳುನಾಡಿನ ಚೆನ್ನೈ ಗ್ರಾಹಕರೊಬ್ಬರು ಹೂಕೋಸು (Cauliflower) ಆರ್ಡರ್ ಮಾಡಿದ್ದು, ಅದರಲ್ಲಿ ಎಲೆಯೇ ಹೆಚ್ಚಿದೆ ತಲುಪಿದೆ ಎಂದು ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್‌ (Viral News) ಹಂಚಿಕೊಂಡಿದ್ದಾರೆ.

ಗ್ರಾಹಕರೊಬ್ಬರು ತಾವು ಆರ್ಡರ್ ಮಾಡಿದ ತರಕಾರಿಯ ಬದಲಿಗೆ ಹೂಕೋಸಿನ ಎಲೆ ಮಾತ್ರ ಪಡೆದಿದ್ದಾಗಿ ಆರೋಪಿಸಿದ್ದಾರೆ. ಅವರ ಈ ಪೋಸ್ಟ್ ದಿನಸಿ ವಿತರಣೆಯ ಬಗ್ಗೆ ದೂರುಗಳಿಗೆ ಕಾರಣವಾಗಿದೆ.



ಅಶ್ವಿನ್ ಮುರಳಿ ಝೆಪ್ಟೋ ಆ್ಯಪ್‌ನಲ್ಲಿ ಹೂಕೋಸು ಆರ್ಡರ್ ಮಾಡಿದ್ದರು. ಆದರೆ ಡೆಲಿವರಿ ಸಿಕ್ಕಾಗ, ಹೂಕೋಸಿಗಿಂತ ಅದರ ಸುತ್ತಲಿನ ಹಸಿರು ಎಲೆಗಳೇ ಕಂಡುಬಂದಿವೆ. 300 ಗ್ರಾಂ ಹೂಕೋಸಿನ ಎಲೆಗಳು ಮತ್ತು ಕೇವಲ 149 ಗ್ರಾಂ ಹೂಕೋಸು ಇತ್ತು ಎಂದು ದೂರಿದ್ದಾರೆ.

ಟ್ರ್ಯಾಕ್ಟರ್ ಟೈರ್ ಸಿಲುಕಿ ಒದ್ದಾಡಿದ ಕಾಡಾನೆ; ಜೀವದ ಹಂಗು ತೊರೆದು ಕಾಪಾಡಿದ ಅರಣ್ಯಾಧಿಕಾರಿಗಳು

ಹೂಕೋಸಿಗಿಂತ ಎಲೆಗಳೇ ಹೆಚ್ಚಿವೆ. ಇಂತಹ ದರೋಡೆಗಿಂತ ರಸ್ತೆಯಲ್ಲಿ ಭಿಕ್ಷೆ ಬೇಡುವುದು ಲೇಸು ಎಂದಿದ್ದಾರೆ. ಗ್ರಾಹಕ ಸೇವೆಗೆ ದೂರು ನೀಡಿದಾಗ ಹಣ ಮರುಪಾವತಿ ಅಥವಾ ಬದಲಾವಣೆಯನ್ನು ನೀಡಲು ಸಾಧ್ಯವಿಲ್ಲ ಎಂದು ಅವರಿಗೆ ತಿಳಿಸಿದೆ. ಇಂತಹ ವಂಚನೆ ಗ್ರಾಹಕರಿಕೆ ಮಾಡಬೇಕೆ? ಎಂದು ಪ್ರಶ್ನಿಸಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಈ ಬಗ್ಗೆ ಝೆಪ್ಟೋ ಸಂಸ್ಥೆಯು "ನಿಮ್ಮ ದೂರನ್ನು ಪರಿಶೀಲಿಸುತ್ತಿದ್ದೇವೆ" ಎಂದು ಪ್ರತಿಕ್ರಿಯಿಸಿದೆ.

​ಒಬ್ಬರು ತಮಾಷೆಯಾಗಿ, ʼʼಅವರು ಕೋಸು ಮರೆತು ಬರಿ ಎಲೆ ಕಳುಹಿಸಿದ್ದಾರೆʼʼ ಎಂದು ಟೀಕಿಸಿದ್ದಾರೆ.​ ಮತ್ತೊಬ್ಬರು, ʼʼತರಕಾರಿ, ದಿನಸಿ ಪದಾರ್ಥಗಳಿಗೆ ಆನ್‌ಲೈನ್ ವ್ಯವಹಾರ ಬಿಟ್ಟು ಶಾಪ್‌ಗಳಲ್ಲಿ ಖರೀದಿ ಮಾಡಿʼʼ ಸಲಹೆ ನೀಡಿದ್ದಾರೆ.