Kaggere Prakash Column: ಪ್ಲಾಸ್ಟಿಕ್ಸ್ ಕುರಿತು ಜನಜಾಗೃತಿ
ಮನುಷ್ಯನ ಆರೋಗ್ಯಕ್ಕೆ ಹಾಗೂ ಮಣ್ಣಿನಲ್ಲಿ ಕರಗದೆ ಪರಿಸರಕ್ಕೆ ಅಪಾರ ಹಾನಿಯಾದರೂ ಪ್ಲಾಸ್ಟಿಕ್ಸ್ ಬಳಸುವುದನ್ನು ನಾವು ಬಿಟ್ಟಿಲ್ಲ. ಎಲ್ಲ ದೇಶಗಳ ಸರ್ಕಾರಗಳು ಒಂದೆಡೆ ಪ್ಲಾಸ್ಟಿಕ್ಸ್ ಬಳಕೆಗೆ ದಂಡ ವಿಧಿಸಿದರೂ ಇನ್ನೊಂದೆಡೆ ಉತ್ವಾದಿಸುವ ಕಾರ್ಖಾನೆ ಗಳನ್ನು ರದ್ದು ಮಾಡಿಲ್ಲ
Source : Vishwavani Daily News Paper
ಕಗ್ಗೆರೆ ಪ್ರಕಾಶ್
ಜಗತ್ತು ಪ್ಲಾಸ್ಟಿಕ್ಸ್ ಬಳಕೆ ಇಲ್ಲದೆ ಬದುಕಲಾರದ ಸ್ಥಿತಿ ತಲುಪಿದೆ. ಪ್ಲಾಸ್ಟಿಕ್ಸ್ ಸರ್ವಾಂತ ರ್ಯಾಮಿ. ವಿಶ್ವವ್ಯಾಪಿಯಾಗಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡಿದೆ.
ಮನುಷ್ಯನ ಆರೋಗ್ಯಕ್ಕೆ ಹಾಗೂ ಮಣ್ಣಿನಲ್ಲಿ ಕರಗದೆ ಪರಿಸರಕ್ಕೆ ಅಪಾರ ಹಾನಿ ಯಾದರೂ ಪ್ಲಾಸ್ಟಿಕ್ಸ್ ಬಳಸುವುದನ್ನು ನಾವು ಬಿಟ್ಟಿಲ್ಲ. ಎಲ್ಲ ದೇಶಗಳ ಸರ್ಕಾರಗಳು ಒಂದೆಡೆ ಪ್ಲಾಸ್ಟಿಕ್ಸ್ ಬಳಕೆಗೆ ದಂಡ ವಿಧಿಸಿದರೂ ಇನ್ನೊಂದೆಡೆ ಉತ್ವಾದಿಸುವ ಕಾರ್ಖಾನೆ ಗಳನ್ನು ರದ್ದು ಮಾಡಿಲ್ಲ. ಇಂಥ ಪ್ಲಾಸ್ಟಿಕ್ಸ್ ಬಳಕೆಯ ಸಾಧಕ-ಬಾಧಕಗಳನ್ನು ವೈಜ್ಞಾನಿಕ ದೃಷ್ಟಿಕೋನದಿಂದ ‘ಪ್ಲಾಸ್ಟಿಕ್ಸ್ ಪುರಾಣ’ ಎಂಬ ಪುಸ್ತಕವನ್ನು ಬರೆದಿರುವ ಡಾ. ಎಂ.ಎಸ್. ಎಸ್. ಮೂರ್ತಿ ಹಾಗೂ ಬಿ. ತೇಜ್‌ಕುಮಾರ್ ಜನಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.
ಪ್ಲಾಸ್ಟಿಕ್ಸ್ ಇತಿಹಾಸ, ಪ್ಲಾಸ್ಟಿಕ್ಸ್ ಉತ್ಪಾದನೆ ಮತ್ತು ವರ್ಗೀಕರಣ, ಬಹು ಉಪಯೋಗಿ ಪ್ಲಾಸ್ಟಿಕ್ಸ್, ಪ್ಲಾಸ್ಟಿಕ್ಸ್ ಮತ್ತು ಪರಿಸರ, ಎಲ್ಲೆಲ್ಲೂ ಪ್ಲಾಸ್ಟಿಕ್ಸ್, ಮೈಕ್ರೋ ಪ್ಲಾಸ್ಟಿಕ್ಸ್, ಪ್ಲಾಸ್ಟಿಕ್ಸ್ ಬಳಕೆಯಲ್ಲಿನ ಸಮಸ್ಯೆಗಳು, ಜೈವಿಕ ಪ್ಲಾಸ್ಟಿಕ್ಸ್, ಪ್ಲಾಸ್ಟಿಕ್ಸ್ ತಿನ್ನುವ ಬ್ಯಾಕ್ಟೀರಿಯ, ಒಮ್ಮೆ ಬಳಸಿ ಬಿಸಾಡುವ ಪ್ಲಾಸ್ಟಿಕ್ಸ್ ವಸ್ತುಗಳ ನಿಷೇಧ, ಪೆಟ್ರೋ ಪ್ಲಾಸ್ಟಿಕ್ ಗೆ ಪರ್ಯಾಯಗಳು ಮತ್ತು ಪರಿಸರ ಪ್ರೇಮಿ, ಸಾಮಾಜಿಕ ಜವಾಬ್ದಾರಿ ಅಧ್ಯಾಯಗಳಲ್ಲಿ ಪ್ಲಾಸ್ಟಿಕ್ಸ್ ದುಷ್ಪರಿ ಣಾಮಗಳನ್ನು ಸಂಶೋಧನಾತ್ಮಕ ದೃಷ್ಟಿಯಲ್ಲೂ ಜನಸಾಮಾನ್ಯರಿಗೂ ಅರ್ಥವಾಗು ವಂತೆ ಸರಳವಾಗಿ ಲೇಖಕರು ಬರೆದಿದ್ದಾರೆ.
ವಿಶ್ವವನ್ನೇ ಕಾಡುತ್ತಿರುವ ಪ್ಲಾಸ್ಟಿಕ್ಸ್ ಮುಂಬರುವ ದಿನಗಳಲ್ಲಿ ಮನುಕುಲಕ್ಕೆ ಎಷ್ಟೊಂದು ಭೀಕರವಾಗಲಿದೆ, ಮನುಷ್ಯರಿಗೆ ಎಷ್ಟು ಬಗೆಯ ಕಾಯಿಲೆಗಳು ಮಾರಣಾಂತಿಕವಾಗಲಿವೆ, ಈಗಲಿಂದಲೇ ಪ್ಲಾಸ್ಟಿಕ್ಸ್ ಬಳಕೆಯಲ್ಲಿ ಎಷ್ಟು ಎಚ್ಚರಿಕೆ ವಹಿಸಬೇಕು ಎಂಬಂಥ ವಿಚಾರ ಗಳನ್ನು ಮನದಟ್ಟು ಮಾಡಲಾಗಿದೆ. ಪ್ಲಾಸ್ಟಿಕ್ಸ್ ಬಳಕೆಯನ್ನು ಕಡಿಮೆ ಮಾಡುವ, ತಡೆಗಟ್ಟುವ ಬಗ್ಗೆ ಪರಿಹಾರಗಳನ್ನೂ ಸೂಚಿಸಲಾಗಿದೆ.
ಪ್ಲಾಸ್ಟಿಕ್ ತ್ಯಾಜ್ಯದ ನಿರ್ವಹಣೆ, ಪ್ಲಾಸ್ಟಿಕ್ಸ್‌ಗೆ ಪರ್ಯಾಯಗಳು, ಸಮಸ್ಯೆ-ಸವಾಲಿಗೆ ಆವಿಷ್ಕ ರಿಸಬೇಕಾದ ಹೊಸ ವಿಧಾನಗಳೇನು ಎಂಬ ವಿಚಾರಗಳನ್ನು ಚರ್ಚಿಸಲಾಗಿದೆ.
ಇದನ್ನೂ ಓದಿ: Kaggere Prakash Column: ದೇವೇಗೌಡರ ರಾಜಕೀಯ ಬದುಕಿನ ಕಥನ