Surabhi Hudigere Column: ಧಾರ್ಮಿಕ ಪ್ರಜ್ಞೆಗೊಂದು ಆಘಾತ: ಮಹಿಳೆಯರು, ನಂಬಿಕೆ ಮತ್ತು ವದಂತಿಗಳು
ಸೇವೆ ಮತ್ತು ಸಾಮರಸ್ಯಕ್ಕೆ ಹೆಸರುವಾಸಿಯಾದ ದೇವಾಲಯದ ಈ ಪಟ್ಟಣವನ್ನು ಅನ್ಯಾಯವಾಗಿ ಅನುಮಾನದ ದೃಷ್ಟಿಯಿಂದ ನೋಡುವಂತೆ ಮಾಡಲಾಯಿತು. ವಿದೇಶದಲ್ಲಿರುವ ಕನ್ನಡಿಗರು ಅವಮಾನಕರ ಪ್ರಶ್ನೆಗಳನ್ನು ಕೇಳಬೇಕಾಯಿತು: ಅವರ ರಾಜ್ಯವು ಸಾಮೂಹಿಕ ಸಮಾಧಿಗಳನ್ನು ಮರೆಮಾಚಿದೆಯೇ, ಅವರ ಧರ್ಮವು ಈ ಭಯಾನಕ ಅತ್ಯಾಚಾರಗಳಿಗೆ ಸಮ್ಮತಿ ನೀಡಿತ್ತೇ? ಮತ್ತೊಮ್ಮೆ, ರಾಜ್ಯ ಸರ್ಕಾರದ ಬಳಿ ಯಾವುದೇ ಕಾರ್ಯತಂತ್ರವಿರಲಿಲ್ಲ, ಸುಸಂಬದ್ಧ ಸಂವಹನ ವಿರಲಿಲ್ಲ, ಅಕಾಲಿಕ ತೀರ್ಪಿನ ವಿರುದ್ಧ ತನ್ನದೇ ಜನರನ್ನು ರಕ್ಷಿಸಲು ಯಾವುದೇ ಯೋಜನೆಗಳಿರ ಲಿಲ್ಲ.

-

ಸುರಭಿ ಹೂಡಿಗೆರೆ
ವದಂತಿಗಳು ಬಯಲಾದಾಗ, ಅದು ಭರವಸೆ ನೀಡುವ ವಿಶ್ವಾಸಾರ್ಹತೆಯನ್ನು ಹೊಂದಿರ ಲಿಲ್ಲ. ಮಹಿಳೆಯರಿಗೆ, ಈ ಅನುಭವವು ವಿಶೇಷವಾಗಿ ಕ್ರೂರವಾಗಿತ್ತು. ಎರಡು ತಿಂಗಳು ಗಳಿಂದ, ಒಂದು ಪವಿತ್ರ ಸ್ಥಳವು ನೀಚ ಅಪರಾಧಗಳನ್ನು ಮರೆಮಾಡಿರಬಹುದಾದ ಸಾಧ್ಯತೆಯ ಅಡಿಯಲ್ಲಿ ನಾವು ಬದುಕಿದೆವು. ತನಿಖೆಗಳು ಈಗ ಹಾಗೇನೂ ಇಲ್ಲ ಎನ್ನುವು ದನ್ನು ಸೂಚಿಸಿದರೂ, ಆ ಸಾಧ್ಯತೆಯ ನೆನಪೇ ಒಂದು ಗಾಯವಾಗಿ ಉಳಿದು ಬಿಡುತ್ತದೆ. ಸರ್ಕಾರವು ಮಹಿಳೆಯರನ್ನು ಅಂತಹ ಆಘಾತದಿಂದ ರಕ್ಷಿಸುವ ಬದಲು, ಅವರ ಭಯವನ್ನು ಬಳಸಿಕೊಳ್ಳಲು ಅವಕಾಶ ಮಾಡಿಕೊಟ್ಟಿತು. ಇದು ದುಃಖವನ್ನು ರಂಗಭೂಮಿಯಾಗಿ ಪರಿವರ್ತಿಸಿತು. ಇದು ಕೇವಲ ಗೊಂದಲವಾಗಿರಲಿಲ್ಲ; ಇದು ಆಡಳಿತದ ವೈಫಲ್ಯವಾಗಿತ್ತು.
ಸುಮಾರು ಎರಡು ತಿಂಗಳುಗಳಿಂದ ಕರ್ನಾಟಕವು ಗೊಂದಲ, ಭಯ ಮತ್ತು ಪರಸ್ಪರ ಪೈಪೋಟಿ ನಡೆಸುತ್ತಿರುವ ಆರೋಪಗಳ ನೆರಳಿನಲ್ಲಿದೆ. ಇಲ್ಲಿ ನಡೆದಿದ್ದು ಸಾರ್ವಜನಿಕರಿಗೆ ಸ್ಪಷ್ಟತೆಯನ್ನು ನೀಡುವ ಬದಲು ವಿಶೇಷವಾಗಿ ಮಹಿಳೆಯರಿಗೆ ಮತ್ತು ಧಾರ್ಮಿಕ ಸ್ಥಳಗಳಲ್ಲಿ ಶ್ರದ್ಧಾಭಕ್ತಿಯಿರು ವವರಿಗೆ ಕ್ಷೋಭೆಯನ್ನುಂಟುಮಾಡಿತು.
ಕರ್ನಾಟಕದಲ್ಲಿ ನಡೆದು ಹೋದ ಈ ಘಟನೆಯು ಭಯ, ಅನುಮಾನ ಹಾಗೂ ಅಂತ್ಯ ಕಾಣದ ಆರೋಪಗಳ ಜಾಲದಲ್ಲಿ ಸಿಲುಕಿದೆ. ಧರ್ಮಸ್ಥಳವನ್ನು ಹಿಂದಿನಿಂದಲೂ ವಿಶ್ವಾಸ ಮತ್ತು ಸೇವೆಯ ಸಾಕ್ಷಾತ್ಕಾರವೆಂದು ಪರಿಗಣಿಸುತ್ತಿದ್ದವರೇ, ಈಗ ಇದ್ದಕ್ಕಿದ್ದಂತೆ ಅದನ್ನು ಅತ್ಯಾಚಾರದ ಕೂಪ ವೆನ್ನುವಂತೆ ಬಿಂಬಿಸತೊಡಗಿದ್ದರು. ನೂರಾರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ, ಅವರನ್ನು ಕೊಲೆ ಮಾಡಿ ಸಾಮೂಹಿಕ ಸಮಾಧಿ ಮಾಡಲಾಗಿದೆ ಎನ್ನುವ ಆರೋಪಗಳು ಕೇವಲ ಕಾನೂನು ಬದ್ಧ ಹೇಳಿಕೆಗಳಷ್ಟೇ ಆಗಿರಲಿಲ್ಲ.
ಅವು ಸಮಾಜದಲ್ಲಿ ಆಳವಾಗಿ ಬೇರೂರಿದ ಶ್ರದ್ಧಾ ಭಕ್ತಿಗಳಿಗೇ ಕೊಳ್ಳಿಯಿಟ್ಟ ನೈತಿಕತೆಯ ಕಿಡಿಗಳಾಗಿ ದ್ದವು. ದೇವಾಲಯಗಳು ದೈನಂದಿನ ಜೀವನದಲ್ಲಿ ಬೆಸೆದುಹೋಗಿರುವ ನಮ್ಮ ಸಂಸ್ಕೃತಿಯಲ್ಲಿ, ಇಂತಹ ಆರೋಪಗಳು ಧಾರ್ಮಿಕ ಕ್ಷೇತ್ರಗಳನ್ನು ಈಗಲೂ ನಂಬಬಹುದೇ ಎಂದು ಜನರು ಪ್ರಶ್ನೆ ಮಾಡಲು ಪ್ರೇರೇಪಿಸುವ ಶಕ್ತಿಯನ್ನು ಹೊಂದಿದ್ದವು.
ಇದನ್ನೂ ಓದಿ: Dharmasthala: ಧರ್ಮಸ್ಥಳ ದೂರುದಾರ ಚಿನ್ನಯ್ಯನಿಗೆ ಆಶ್ರಯ ನೀಡಿದ ಆರೋಪ; ಎಸ್‌ಐಟಿಯಿಂದ ತಿಮರೋಡಿ ಮನೆಗೆ ದಾಳಿ
ಇತ್ತ ಸರ್ಕಾರವೂ ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನ ಮಾಡಲಿಲ್ಲ. ಅದರ ಮೊದಲ ಕರ್ತವ್ಯವು ಪರಿಶೀಲನೆ ನಡೆಸಿ, ವಿಷಯಗಳನ್ನು ಸ್ಪಷ್ಟಪಡಿಸಿ ವದಂತಿಯು ಭಯದಲ್ಲಿ ಬದಲಾಗ ದಂತೆ ತಡೆಯುವುದಾಗಿತ್ತು. ಬದಲಾಗಿ, ಅದು ಡೋಲಾಯಮಾನವಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಎಸ್‌ಐಟಿ ರಚಿಸುವ ಅಗತ್ಯವನ್ನು ತಳ್ಳಿ ಹಾಕಿ, ಕೆಲವೇ ದಿನಗಳ ನಂತರ ಅದನ್ನು ಒಪ್ಪಿಕೊಂಡರು.
ಎಡಪಂಥೀಯ ಸಂಘಟನೆಗಳು ಎಸ್‌ಐಟಿ ಬೇಕೆಂದು ಒತ್ತಡ ಹೇರಿವೆಯೆಂದು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಒಪ್ಪಿಕೊಂಡರು, ಇದು ಆಡಳಿತ ವರ್ಗವು ಸಾಕ್ಷಿಗಳಿಗಿಂತ ಹೆಚ್ಚಾಗಿ ಒತ್ತಡಕ್ಕೆ ಸ್ಪಂದಿಸುತ್ತಿದೆ ಎನ್ನುವುದನ್ನು ಎತ್ತಿ ತೋರಿಸಿತು. ಉಪ ಮುಖ್ಯಮಂತ್ರಿಗಳು ಪಿತೂರಿಯ ಬಗ್ಗೆ ಮಾತನಾಡಿದ್ದು, ಮತ್ತೊಂದು ವಿರೋಧಾಭಾಸವನ್ನು ಸೃಷ್ಟಿಸಿತು.
ಈ ಪ್ರತಿಯೊಂದು ಹೇಳಿಕೆಗಳು, ಸಾರ್ವಜನಿಕರನ್ನು ಶಾಂತಗೊಳಿಸುವ ಬದಲು, ಅದರ ಅಸಮಾಧಾನವನ್ನು ಆಳವಾಗಿಸಿತು. ಏನಾಗುತ್ತಿದೆ ಎಂಬುದರ ಬಗ್ಗೆ ನಾಯಕರಲ್ಲಿ ಒಮ್ಮತ ವಿಲ್ಲದಿದ್ದಾಗ, ಯಾರಲ್ಲಿ ವಿಶ್ವಾಸವಿಡಬೇಕೆಂದು ಅವರಿಗೆ ತಿಳಿಯುವುದಿಲ್ಲ.
ಕೆಲವು ಚಿತ್ರಗಳು
ಕೆಲವು ಚಿತ್ರಗಳು ನೆನಪಿನಲ್ಲಿ ಅಚ್ಚಳಿಯದೆ ಉಳಿದವು. ತಲೆಬುರುಡೆ ಮತ್ತು ಒಂದು ನೋಟ್‌ಅನ್ನು ಹಿಡಿದಿರುವ ಸಿ.ಎನ್.ಚಿನ್ನಯ್ಯ ಅವರ ಮುಖವಾಡದ ಚಹರೆ ಅಂತಹ ಒಂದು ಕ್ಷಣವಾಗಿತ್ತು. ಇದು ಅಧಿಕೃತ ಸ್ಪಷ್ಟೀಕರಣಗಳಿಗಿಂತ ವೇಗವಾಗಿ ಹರಡಿತು. ಅನೇಕ ದಿನಗಳ ಕಾಲ, ಅದನ್ನು ಪದೇ ಪದೇ ಪ್ರಸಾರ ಮಾಡಲಾಯಿತು, ಅದರ ವಿಮರ್ಶೆ ಮಾಡಲಾಯಿತು ಹಾಗೂ ಅದಕ್ಕೆ ಒತ್ತು ನೀಡಲಾ ಯಿತು.
ಉತ್ಖನನಗಳು ಬಹಳ ಬೇಗ ನಡೆದವು. ಅತ್ಯಾಧುನಿಕ ಉಪಕರಣಗಳನ್ನು ಬಳಸಿ ಸ್ಥಳಗಳನ್ನು ತೆರವುಗೊಳಿಸಿ ಇದನ್ನು ಪದೇಪದೇ ಮಾಡಿದಲ್ಲಿ ಏನೋ ಸಿಗಬಹುದು ಎನ್ನುವ ನಂಬಿಕೆಯಿರು ವಂತೆ ಅವುಗಳನ್ನು ಪದೇಪದೇ ಅಗೆಯಲಾಯಿತು. ಈ ಚಿತ್ರಗಳು ತಮ್ಮದೇ ಛಾಪನ್ನು ಮೂಡಿಸಿ ದವು. ಇನ್ನೂ ಯಾವುದೇ ಸಾಕ್ಷಿಗಳು ಸಿಗದಿದ್ದರೂ, ಭೂಮಿಯ ಕೆಳಗೆ ಏನೋ ಇರಬಹುದು ಎಂದು ಅವರು ಜನರನ್ನು ನಂಬಿಸಿದರು.
ಸತ್ಯದ ಪರವಾಗಿ ನಿಲ್ಲಬೇಕಿದ್ದ ಸರ್ಕಾರ ಪಕ್ಕಕ್ಕೆ ಸರಿದುಬಿಟ್ಟಿತು. ತನ್ನ ಮೌನದಿಂದ, ಅದು ನಾಟಕೀಯತೆಯು ಸತ್ಯಕ್ಕೆ ಬದಲಿಯಾಗಲು ಅವಕಾಶ ಮಾಡಿಕೊಟ್ಟಿತು. ನಂತರ, ವಿರೋಧಾಭಾಸ ಗಳು ಕಾಣಿಸಿಕೊಂಡವು. ವಿಧಿವಿಜ್ಞಾನ (ಫಾರೆನ್ಸಿಕ್) ವರದಿಗಳು ಮೊದಲು ಸಿಕ್ಕಿದ ತಲೆಬುರುಡೆ ಯನ್ನು ಧರ್ಮಸ್ಥಳದಿಂದ ಹೊರತೆಗೆಯಲಾಗಿಲ್ಲ ಎಂದು ಸೂಚಿಸಿವೆ.
ಆದರೂ ಸರ್ಕಾರ ಸ್ಪಷ್ಟತೆ ನೀಡುವ ತೊಂದರೆ ತೆಗೆದುಕೊಳ್ಳಲಿಲ್ಲ. ಕೇಳಬೇಕಾದ ಪ್ರಶ್ನೆಗಳನ್ನು ಕೇಳುವ ಅವಸರ ಸರ್ಕಾರದಲ್ಲಿ ಕಾಣಲಿಲ್ಲ. ತಲೆಬುರುಡೆ ಎಲ್ಲಿಂದ ಬಂದಿತು. ಅದನ್ನು ಚೆನ್ನಯ್ಯನ ಕೈಗೆ ಕೊಟ್ಟವರು ಯಾರು. ಅವನು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಮತ್ತು ದೆಹಲಿಗೆ ಅಷ್ಟೊಂದು ವಿಶ್ವಾಸದಿಂದ ಹಾಗೂ ಸುಲಭವಾಗಿ ಹೇಗೆ ಹೋಗಿ ಬರುತ್ತಿದ್ದ ಎನ್ನುವ ಪ್ರಶ್ನೆಗಳು ಹಾಗೇ ಉಳಿದುಬಿಟ್ಟವು.
ಕೊನೆಗೂ ಒಂದಿಷ್ಟು ಬಂಧನಗಳನ್ನು ಮಾಡಲಾದರೂ ಅಷ್ಟರಲ್ಲಿ ಅನೇಕ ವಾರಗಳ ಕಾಲ ನಡೆದ ನಾಟಕವು ಸಾರ್ವಜನಿಕರ ವಿಶ್ವಾಸಕ್ಕೆ ಆಗಲೇ ಘಾಸಿ ಮಾಡಿತ್ತು. ಒಂದು ಹಂತದಲ್ಲಿ ಚಿನ್ನಯ್ಯ ವಕೀಲರಿಂದ ಸುತ್ತುವರೆದು ಅವರ ಮಧ್ಯೆ ನಡೆದು ಬರುತ್ತಿದ್ದ, ಇನ್ನೊಮ್ಮೆ ಕಾನೂನು ತಜ್ಞ ರೊಂದಿಗಿನ ತಂಡಗಳೊಂದಿಗಿನ ಕೋಟೆಯಲ್ಲಿ ಕಾರಿನಲ್ಲಿ ಬಂದಿಳಿದ. ನಂತರ, ಈ ಕಥೆಯ ಅಸಲಿಯತ್ತು ಬಯಲಾದಾಗ, ಅವನಿಗೆ ಮೂಲಭೂತ ಕಾನೂನು ಪ್ರಾತಿನಿಧ್ಯವೂ ಸಿಗಲಿಲ್ಲ. ಅವನನ್ನು ಭಯವನ್ನುಂಟುಮಾಡಲು ಬಳಸಿ, ನಂತರ ತ್ಯಜಿಸಲಾಯಿತು. ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳು ಹೇಳಲಾಗಿತ್ತು. ಅವನೊಂದು ದಾಳವಾಗಿದ್ದ.
ದುಃಖದ ಪ್ರತಿನಿಧಿ
ಚಿನ್ನಯ್ಯ ಭಯದ ಪ್ರತಿನಿಧಿಯಾಗಿದ್ದರೆ, ಸುಜಾತಾ ಭಟ್ ದುಃಖದ ಪ್ರತಿನಿಽಯಾಗಿದ್ದರು. ಅವರು ತನ್ನ ಮಗಳಾದ ಅನನ್ಯಾಳ ಅತ್ಯಾಚಾರವಾಗಿದೆ, ಲೈಂಗಿಕವಾಗಿ ದುರ್ಬಳಕೆ ಮಾಡಿ ಅವಳನ್ನು ಹೂಳಲಾಗಿದೆ ಎಂದು ಆರೋಪಿಸಿದರು. ನಂತರದ ಬಂದ ವರದಿಗಳು ಈ ಮಗಳು ಅಸ್ತಿತ್ವದಲ್ಲೇ ಇರದಿರುವ ಸಾಧ್ಯತೆಯನ್ನು ತೋರಿಸಿದವು, ಹಾಗೂ ಹೆಸರು ಮತ್ತು ಛಾಯಾಚಿತ್ರವನ್ನು ಸಹ ಸೃಷ್ಟಿಸಲಾಗಿರಬಹುದು ಎನ್ನುವುದನ್ನು ಸೂಚಿಸಿದವು. ಅತ್ಯಾಚಾರಕ್ಕೊಳಗಾದ ಮಗಳ ಬಗ್ಗೆ ಹೇಳಿಕೊಳ್ಳುವುದು ಸಮಾಜದಲ್ಲಿ ಅನುಭೂತಿಯ ಆಳವಾದ ಅಲೆಯನ್ನು ಸೃಷ್ಟಿಸುತ್ತದೆ. ಅಂತಹ ಕಥೆ ಸುಳ್ಳೆಂದು ಸಾಬೀತಾದರೆ, ಅದು ಭ್ರಮನಿರಸನವನ್ನುಂಟು ಮಾಡುವದಷ್ಟೇ ಅಲ್ಲದೇ ಆಕ್ರೋಶ ವನ್ನೂ ಉಂಟುಮಾಡುತ್ತದೆ. ತಾಯಂದಿರು ಮತ್ತು ಹೆಣ್ಣುಮಕ್ಕಳು ಆಸ್ತಿತ್ವದಲ್ಲೇ ಇಲ್ಲದಿದ್ದ ಒಂದು ಜೀವಕ್ಕಾಗಿ ಶೋಕಿಸುವಂತೆ ಮಾಡಲಾಯಿತು.
ಮತ್ತೊಮ್ಮೆ, ಭೀತಿ ಹರಡುವ ಮೊದಲು ಅದನ್ನು ಪರೀಕ್ಷಿಸಲು ಸರ್ಕಾರ ಏನೂ ಮಾಡಲಿಲ್ಲ. ಇದು ನಿರೂಪಣೆಯನ್ನು ಪರೀಕ್ಷಿಸದೇ ಅದು ಹರಡಲು ಅವಕಾಶ ಮಾಡಿಕೊಟ್ಟಿತು, ಮತ್ತು ಹಾಗೆ ಮಾಡುವ ಮೂಲಕ ಅದು ಯಾರ ಮರ್ಯಾದೆಯನ್ನು ರಕ್ಷಿಸುವುದಾಗಿ ಹೇಳುತ್ತದೆಯೋ ಅದೇ ಮಹಿಳೆಯರಿಗೆ ದ್ರೋಹ ಬಗೆಯಿತು.
ಎಐ ಚಿತ್ರಗಳು
ಆನ್‌ಲೈನ್ ವ್ಯವಸ್ಥೆಯೂ ಕೂಡ ಗೊಂದಲವನ್ನು ಹೆಚ್ಚಿಸಿತು. ಯೂಟ್ಯೂಬರ್‌ಗಳು, ಸ್ವಯಂ ಘೋಷಿತ ತನಿಖಾಧಿಕಾರಿಗಳು ಮತ್ತು ಎಐನಿಂದ-ರಚಿಸಲಾದ ಚಿತ್ರಗಳು ವದಂತಿಗಳಿಗೆ ಸತ್ಯದ ಹೊಳಪನ್ನು ನೀಡಿದವು. ಅವರು ತೀರ್ಪು ನೀಡುವ ಖಚಿತತೆಯೊಂದಿಗೆ ಮಾತನಾಡಿದರು. ಕಾಂಗ್ರೆಸ್ ಸರ್ಕಾರವು ಇದು ಬೆಳೆಯಲು ಅವಕಾಶ ಮಾಡಿಕೊಟ್ಟಿತು. ಯಾವುದೇ ಸಮಯೋಚಿತ ಮಧ್ಯ ಪ್ರವೇಶವು ಭಯದ ಹರಡುವಿಕೆಯನ್ನು ತಡೆಯಲಿಲ್ಲ. ಮೊದಲೇ ಮಾತನಾಡಬೇಕಿದ್ದ ಮಹಿಳಾ ಆಯೋಗವು ನಿಧಾನವಾಗಿ ಮತ್ತು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ವರ್ತಿಸಿತು.
ವಿಳಂಬವು ನಿರ್ಲಕ್ಷ್ಯವಾಗಿ ಮಾರ್ಪಟ್ಟಿತು, ಮತ್ತು ನಿರ್ಲಕ್ಷ್ಯವು ಮೌನ ಸಮ್ಮತಿಯಾಯಿತು. ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಈ ಕಥೆಯು ತಕ್ಷಣವೇ ಕರ್ನಾಟಕದಾಚೆಯವರೆಗೂ ಸಾಗಿತ್ತು. ಕೇರಳದ ರಾಜಕಾರಣಿಗಳೂ ತನಿಖೆಗೆ ಒತ್ತಾಯಿಸಿದರು. ಬಿಬಿಸಿ ಮತ್ತು ಅಲ್ ಜಜೀರಾ ಸೇರಿದಂತೆ ಅಂತಾರಾರಾಷ್ಟ್ರೀಯ ಮಾಧ್ಯಮಗಳು ಧರ್ಮಸ್ಥಳವನ್ನು ದೌರ್ಜನ್ಯದ ಕೇಂದ್ರಬಿಂದು ಎನ್ನುವಂತೆ ಬಿಂಬಿಸುವ ವರದಿಗಳನ್ನು ಪ್ರಸಾರ ಮಾಡಿದವು.
ಸೇವೆ ಮತ್ತು ಸಾಮರಸ್ಯಕ್ಕೆ ಹೆಸರುವಾಸಿಯಾದ ದೇವಾಲಯದ ಈ ಪಟ್ಟಣವನ್ನು ಅನ್ಯಾಯವಾಗಿ ಅನುಮಾನದ ದೃಷ್ಟಿಯಿಂದ ನೋಡುವಂತೆ ಮಾಡಲಾಯಿತು. ವಿದೇಶದಲ್ಲಿರುವ ಕನ್ನಡಿಗರು ಅವಮಾನಕರ ಪ್ರಶ್ನೆಗಳನ್ನು ಕೇಳಬೇಕಾಯಿತು: ಅವರ ರಾಜ್ಯವು ಸಾಮೂಹಿಕ ಸಮಾಧಿಗಳನ್ನು ಮರೆಮಾಚಿದೆಯೇ, ಅವರ ಧರ್ಮವು ಈ ಭಯಾನಕ ಅತ್ಯಾಚಾರಗಳಿಗೆ ಸಮ್ಮತಿ ನೀಡಿತ್ತೇ? ಮತ್ತೊಮ್ಮೆ, ರಾಜ್ಯ ಸರ್ಕಾರದ ಬಳಿ ಯಾವುದೇ ಕಾರ್ಯತಂತ್ರವಿರಲಿಲ್ಲ, ಸುಸಂಬದ್ಧ ಸಂವಹನ ವಿರಲಿಲ್ಲ, ಅಕಾಲಿಕ ತೀರ್ಪಿನ ವಿರುದ್ಧ ತನ್ನದೇ ಜನರನ್ನು ರಕ್ಷಿಸಲು ಯಾವುದೇ ಯೋಜನೆಗಳಿರ ಲಿಲ್ಲ. ನಂತರ ತನ್ನ ಎಸ್‌ಐಟಿ ಶೋಧದ ಅಂಶಗಳನ್ನು ವರದಿ ಮಾಡಿದಾಗ, ಈ ಹುರುಳಿಲ್ಲದ ಆರೋಪಗಳ ಮುಖವಾಡಗಳು ಬಯಲಾಗಲು ಪ್ರಾರಂಭಿಸಿದವು.
ಅನೇಕ ಸ್ಥಳಗಳಲ್ಲಿ ನಡೆದ ಉತ್ಖನನಗಳಲ್ಲಿ ಏನೂ ಕಾಣಲಿಲ್ಲ. ಆದರೂ ಸ್ಪಷ್ಟೀಕರಣವು ಆಪಾದನೆಯೆದುರು ದುರ್ಬಲವೆನಿಸಿತು. ಮೂಲಭೂತ ಸಂಗತಿಗಳನ್ನು ಪರಿಶೀಲಿಸದೇ, ಧಾವಂತ ದಲ್ಲಿ ಎಸ್‌ಐಟಿ ಸ್ಥಾಪಿಸಿ, ಸರ್ಕಾರವು ವದಂತಿಗಳಿಗೆ ಇಂಬು ನೀಡಿತು. ಮತ್ತು ಆ ವದಂತಿಗಳು ಬಯಲಾದಾಗ, ಅದು ಭರವಸೆ ನೀಡುವ ವಿಶ್ವಾಸಾರ್ಹತೆಯನ್ನು ಹೊಂದಿರಲಿಲ್ಲ.
ಮಹಿಳೆಯರಿಗೆ, ಈ ಅನುಭವವು ವಿಶೇಷವಾಗಿ ಕ್ರೂರವಾಗಿತ್ತು. ಎರಡು ತಿಂಗಳುಗಳಿಂದ, ಒಂದು ಪವಿತ್ರ ಸ್ಥಳವು ನೀಚ ಅಪರಾಧಗಳನ್ನು ಮರೆ ಮಾಡಿರಬಹುದಾದ ಸಾಧ್ಯತೆಯ ಅಡಿಯಲ್ಲಿ ನಾವು ಬದುಕಿದೆವು. ತನಿಖೆಗಳು ಈಗ ಹಾಗೇನೂ ಇಲ್ಲ ಎನ್ನುವುದನ್ನು ಸೂಚಿಸಿದರೂ, ಆ ಸಾಧ್ಯತೆಯ ನೆನಪೇ ಒಂದು ಗಾಯವಾಗಿ ಉಳಿದು ಬಿಡುತ್ತದೆ.
ಸರ್ಕಾರವು ಮಹಿಳೆಯರನ್ನು ಅಂತಹ ಆಘಾತದಿಂದ ರಕ್ಷಿಸುವ ಬದಲು, ಅವರ ಭಯವನ್ನು ಬಳಸಿಕೊಳ್ಳಲು ಅವಕಾಶ ಮಾಡಿಕೊಟ್ಟಿತು. ಇದು ದುಃ ಖವನ್ನು ರಂಗಭೂಮಿಯಾಗಿ ಪರಿವರ್ತಿಸಿತು. ಇದು ಕೇವಲ ಗೊಂದಲವಾಗಿರಲಿಲ್ಲ; ಇದು ಆಡಳಿತದ ವೈಫಲ್ಯವಾಗಿತ್ತು. ಪ್ರತಿ ಹಂತದಲ್ಲೂ ಸರ್ಕಾರವು ಪರಿಶೀಲನೆಗಿಂತ ಅವಕಾಶವಾದವನ್ನು, ಸುಸಂಬದ್ಧತೆಯ ಬದಲು ವಿರೋಧಾಭಾಸವನ್ನು ಮತ್ತು ಜವಾಬ್ದಾರಿಯ ಬದಲು ಮೌನವನ್ನು ಆರಿಸಿಕೊಂಡಿತು. ತನ್ನ ಜನರನ್ನು ವದಂತಿಗಳಿಂದ ರಕ್ಷಿಸಬೇಕಾದ ರಾಜ್ಯವು, ಬದಲಿಗೆ ವದಂತಿಗಳನ್ನು ಹರಡುವ ವೇದಿಕೆಯಾಯಿತು.
ಎಸ್‌ಐಟಿ ಮುಂದುವರಿದರೂ ಬಹಳಷ್ಟು ದೊಡ್ಡ ಪ್ರಶ್ನೆಗಳು ಉಳಿದಿವೆ. ಚೆನ್ನಯ್ಯನಿಗೆ ತಲೆಬುರುಡೆ ಕೊಟ್ಟವರು ಯಾರು. ಅನನ್ಯಾಳನ್ನು ಸೃಷ್ಟಿ ಮಾಡುವಂತೆ ಸುಜಾತಾ ಭಟ್ ಅವರನ್ನು ಪ್ರೇರೇಪಿಸಿ ದವರು ಯಾರು? ಬಹಿರಂಗಪಡಿಸುವಿಕೆಯ ಸಮಯ ಯಾರ ಕೈಗೊಂಬೆಯಾಗಿತ್ತು. ಮತ್ತು ಸರ್ಕಾರವು ಪರಿಶೀಲನೆಯಿಲ್ಲದೆ ಈ ಹಕ್ಕುಗಳಿಗೆ ತನ್ನ ಮಾನ್ಯತೆಯನ್ನು ನೀಡಿದ್ದೇಕೆ? ಇವು ಎಸ್‌ಐಟಿಯ ವ್ಯಾಪ್ತಿಯನ್ನು ಮೀರಿದ ಪ್ರಶ್ನೆಗಳಾಗಿವೆ. ಅವುಗಳಿಗೆ ರಾಷ್ಟ್ರೀಯ ಮಟ್ಟದಲ್ಲಿನ ಸ್ವತಂತ್ರ ವಿಚಾರಣೆಯ ಅಗತ್ಯವಿದೆ.
ಅದಕ್ಕಾಗಿಯೇ ಈ ಸಮಸ್ಯೆ ಜೀವಂತವಾಗಿ ಉಳಿದಿದೆ. ಅದಕ್ಕಾಗಿಯೇ ಬಿಜೆಪಿಯೂ ಸೇರಿದಂತೆ ರಾಜಕೀಯ ಪಕ್ಷಗಳ ಗುಂಪುಗಳು ಧರ್ಮಸ್ಥಳದ ಪರವಾಗಿ ನಿಂತಿವೆ. ಒಂದು ನಿರ್ಧಾರಕ್ಕೆ ಬರುವಾಗ ಆತುರಪಡುವುದು ಮುಖ್ಯವಲ್ಲ, ಆದರೆ ಸೇವೆ ಮತ್ತು ಸಾಮರಸ್ಯದೊಂದಿಗೆ ದೀರ್ಘಕಾಲದ ಸಂಬಂಧ ಹೊಂದಿರುವ ದೇವಾಲಯಕ್ಕೆ ನಿಖರವಾದ ಪುರಾವೆಗಳಿಲ್ಲದೆ ಅತ್ಯಾಚಾರದ ಕೇಂದ್ರ ವೆಂದು ಹಣೆಪಟ್ಟಿ ಹಚ್ಚುವ ಮತ್ತು ಕರ್ನಾಟಕದ ಮಹಿಳೆಯರನ್ನು ಭೀತಿಯ ಹಿನ್ನೆಲೆಯಲ್ಲಿ ನಡೆಯುವ ರಾಜಕೀಯದಲ್ಲಿ ದಾಳಗಳನ್ನಾಗಿ ಮಾಡುವ ಹಕ್ಕು ಯಾರಿಗೂ ಇಲ್ಲ ಎಂದು ಒತ್ತಿ ಹೇಳುವುದು ಇದರ ಉದ್ದೇಶವಾಗಿದೆ.
ಕರ್ನಾಟಕವು ಈ ಬಿರುಗಾಳಿಯನ್ನು ಎದುರಿಸಿದೆ, ಆದರೆ ಎದುರಿಸುವುದೇ ನ್ಯಾಯವಲ್ಲ. ಗಾಯಗಳು ಮಾಯಲು ಉತ್ತರದಾಯಿತ್ವದ ಅಗತ್ಯವಿರುತ್ತದೆ, ಮತ್ತು ಉತ್ತರದಾಯಿತ್ವಕ್ಕೆ ಗಾಳಿ ಬಂದ ದಿಕ್ಕಿಗೆ ತೂರಿಕೊಳ್ಳುವ ಬದಲು ಮುನ್ನಡೆಸಲು ಸಿದ್ಧರಿರುವ ಸರ್ಕಾರದ ಅಗತ್ಯವಿದೆ. ಧರ್ಮಸ್ಥಳವು ಅನೇಕ ಬಿರುಗಾಳಿಗಳನ್ನು ಮೆಟ್ಟಿ ನಿಂತಿದೆ. ಅದು ಇದನ್ನೂ ಕೂಡ ಮೆಟ್ಟಿ ನಿಲ್ಲುತ್ತದೆ. ಆದರೆ ಗೊಂದಲದ ಸ್ಥಳದಲ್ಲಿ ಸ್ಪಷ್ಟತೆ ಬರುವವರೆಗೆ ಮತ್ತು ಹಿಂಜರಿಕೆಯ ಸ್ಥಳದಲ್ಲಿ ನಾಯಕತ್ವ ಬರುವವರೆಗೆ, ಈ ಎರಡು ತಿಂಗಳುಗಳಿಂದ ನಮ್ಮ ಮೇಲೆ ಹರಡಿದ್ದ ಕರಿ ನೆರಳು ಮಾಯವಾಗುವುದಿಲ್ಲ.