Shashidharaswamy R Hiremath Column: ಹಣ್ಣು ನುಂಗಿ ಬೀಜ ಬಿತ್ತುವ ಚಂಬುಕುಟಿಕ
ಸನಿಹದಲ್ಲಿರುವ ದೊಡ್ಡ ಅರಳೆ ಮರದಿಂದ ಆ ಸದ್ದು ತೇಲಿ ಬರುತ್ತಿತ್ತು. ಆ ಅರಳಿ ಮರದಲ್ಲಿ ಕುಳಿತು ತಾಮ್ರದ ಕುಸುರಿ ಕೆಲಸ ಮಾಡುತ್ತಿರುವ ಕುಶಲಕರ್ಮಿ ಯಾರಿರಬಹುದು? ಎಂದು ಕಣ್ಣೋಟದಿಂದ ಮರವನೆಲ್ಲ ಜಾಲಾಡಿದೆ. ಹಸಿರೆಲ್ಲಗಳ ಮಧ್ಯ ಅಡಗಿದ ಹಸಿರು ವರ್ಣದ ಅಕ್ಕಸಾಲಿಗನ ದರ್ಶನವಾಗಿತು. ಈ ಹಕ್ಕಿಯೇ ‘ಕಂಚು ಕುಟಿಗ’ ಅಥವಾ ಚಂಬುಕುಟಿಕ.
ಶಶಿಧರಸ್ವಾಮಿ ಆರ್. ಹಿರೇಮಠ
ಕಾಡಿನ ವಿವಿಧ ಪ್ರಭೇದದ ಹಣ್ಣುಗಳನ್ನು ಇಡಿಯಾಗಿ ತಿಂದು, ಜೀರ್ಣಿಸಿಕೊಂಡು, ಬೀಜ ಗಳನ್ನು ಬೇರೆಡೆ ವಿಸರ್ಜಿಸುವುದರಿಂದಾಗಿ, ಇವು ಕಾಡುಮರಗಳ ಬೀಜಪ್ರಸಾರಕ್ಕೆ ಬೆಂಬಲ ನೀಡುವ ಹಕ್ಕಿಗಳು.
ಶಿರಸಿಯ ಇಸಳೂರ ಕಾಡಿನಲ್ಲಿ ನಡೆದುಕೊಂಡು ಪಕ್ಷಿ ವೀಕ್ಷಣೆಗೆ ಸಾಗುತ್ತಿದ್ದೆ. ಟೊಂಯಿಕ್...... ಟೊಂಯಿಕ್...... ಎಂದು ಒಂದೇ ಸಮ ನಿರಂತರವಾಗಿ ತಾಮ್ರದ ಮೇಲೆ ಸುತ್ತಿಗೆಯಿಂದ ಬಡಿದಾಗ ಬರುವಂತೆ ಶಬ್ದವು ನನ್ನನ್ನು ನಿಲ್ಲುವಂತೆ ಮಾಡಿತು. ಆ ಸದ್ದನ್ನು ಆಲಿಸತೊಡಗಿದೆ,
ಸನಿಹದಲ್ಲಿರುವ ದೊಡ್ಡ ಅರಳೆ ಮರದಿಂದ ಆ ಸದ್ದು ತೇಲಿ ಬರುತ್ತಿತ್ತು. ಆ ಅರಳಿ ಮರದಲ್ಲಿ ಕುಳಿತು ತಾಮ್ರದ ಕುಸುರಿ ಕೆಲಸ ಮಾಡುತ್ತಿರುವ ಕುಶಲಕರ್ಮಿ ಯಾರಿರಬಹುದು? ಎಂದು ಕಣ್ಣೋ ಟದಿಂದ ಮರವನೆಲ್ಲ ಜಾಲಾಡಿದೆ. ಹಸಿರೆಲ್ಲಗಳ ಮಧ್ಯ ಅಡಗಿದ ಹಸಿರು ವರ್ಣದ ಅಕ್ಕಸಾಲಿಗನ ದರ್ಶನವಾಗಿತು. ಈ ಹಕ್ಕಿಯೇ ‘ಕಂಚು ಕುಟಿಗ’ ಅಥವಾ ಚಂಬುಕುಟಿಕ.
ಇದನ್ನೂ ಓದಿ: Dr Sadhanashree Column: ಊಟವಾದ ಮೇಲೆ ಬಾಳೆಹಣ್ಣನ್ನು ತಿನ್ನಬಾರದು
ಕಂಚು ಕುಟಿಗ ಹಕ್ಕಿಯನ್ನು ಚಿಟ್ಟುಗುಟುರ, ಚಂಬು ಕಟಿಗ, ಕಿಸ್ಕಾರ ಎಂದೆಲ್ಲ ನಾನಾ ಹೆಸರು ಗಳಿಂದ ಕರೆಯುತ್ತಾರೆ. ಸಂಸ್ಕೃತದಲ್ಲಿ ದಿಂಡಿಮಾಣವಕ, ಹೇಮಕರ್ತೃ ಎಂದು ಕರೆಯಲಾಗುತ್ತದೆ. ಇಂಗ್ಲೀಷಿನಲ್ಲಿ ಕಾಪರ್‌ಸ್ಮಿತ್ ಬಾರ್ಬೆಟ್, ಕ್ರಿಮ್‌ಸನ್ ಬ್ರೇಸ್ಟೆಡ್ ಬಾರ್ಬೆಟ್ ಎನ್ನುವರು. ಈ ಹಕ್ಕಿ ಯನ್ನು ಗುರುತಿಸಲು ತುಸು ಕಷ್ಟಪಡಬೇಕು!
ಎಲೆಯ ಹಸಿರುನೊಂದಿಗೆ ಲೀನವಾಗುವ ಹಕ್ಕಿ ಗಮನವಿಟ್ಟು ನೋಡಿದರೆ ಮಾತ್ರ ಕಾಣಿಸುತ್ತದೆ. ಬಲವಾದ ಕಪ್ಪನೇ ಕೊಕ್ಕಿನ ತಳ ಹಾಗೂ ಮೇಲ್ಭಾದಲ್ಲಿ ಮೀಸೆಯನ್ನು ಹೊಂದಿದೆ, ಕೊಕ್ಕಿನ ಬುಡದಲ್ಲಿರುವ ಕೂದಲಿನಲ್ಲಿ ಪರಾಗಗಳು ಅಂಟಿಕೊಂಡು, ಪರಾಗಸ್ಪರ್ಶದಲ್ಲಿ ಸಹಕಾರಿಯಾಗಿವೆ. ಎಲೆ ಹಸುರು ಬಣ್ಣದ ಇದಕ್ಕೆ ಹಣೆಯ ಮೇಲೆ ಹಾಗೂ ಎದೆಯ ಮೇಲೆ ಕುಂಕುಮ ಕೆಂಪಿನ ಅಗಲ ವಾದ ಮಚ್ಚೆಗಳಿವೆ. ಹೊಟ್ಟೆ ಹಳದಿ ಬಣ್ಣದ್ದಾಗಿ ಕಪ್ಪು ಚುಕ್ಕಿಗಳಿವೆ. ಗಂಟಲಿನ ಭಾಗವು ಹಳದಿ ಬಣ್ಣದಿಂದ ಕೂಡಿದೆ. ಪುಟ್ಟ ಮೊಟಾದ ಚೋಟುದ್ದ ಬಾಲ ಹಾರುವಾಗ ಸ್ಪಷ್ಟವಾಗಿ ಕಾಣುತ್ತದೆ.
ನಾಲ್ಕಾರು ಹಕ್ಕಿಗಳ ಚದುರಿದ ಸಮೂಹದಲ್ಲಿ ಆಲ, ಅರಳಿ, ಬಸಿರಿ, ಗೋಣಿ ಮರಗಳು ಹಣ್ಣು ಬಿಟ್ಟಾಗ ಕುಳಿತು ಕೂಗುತ್ತಿರುತ್ತವೆ. ಗಂಡು-ಹೆಣ್ಣು ಹಕ್ಕಿಗಳಲ್ಲಿ ವ್ಯತ್ಯಾಸವಿಲ್ಲ. ಗಂಡ-ಹೆಣ್ಣು ಹಕ್ಕಿ ಗಳೆರಡು ಛಂಧೋಬದ್ದವಾಗಿ ಟೊಂಯಕ್ ಟೊಂಯಕ್ ಎಂದು ಒಂದೇ ಸಮ ನಿರಂತರವಾಗಿ ಕೂಗುತ್ತವೆ.
ಇದರ ಕೂಗು ತಾಮ್ರದ ಮೇಲೆ ಸುತ್ತಿಗೆಯಿಂದ ಬಡಿದಾಗ ಬರುವ ಸದ್ದಿನಂತಿದೆ ಹಾಗಾಗಿ ಇದಕ್ಕೆ ಇಂಗ್ಲೀಷನಲ್ಲಿ ’ಕಾಪರ್‌ಸ್ಮಿತ್ ಬಾರ್ಬೆಟ್’ ಹೆಸರು ಬಂದಿದೆ. ಈ ಹಕ್ಕಿಯನ್ನು ಗಮನಿಸದಿದ್ದರೂ ಇದರ ದನಿಯನ್ನು ಎಲ್ಲರೂ ಕೇಳಿರುತ್ತಾರೆ.
ಜನವಸತಿ ಪ್ರದೇಶ, ತೋಟ, ಕುರುಚಲು ಕಾಡಿನ ಮರಗಳು ಇವುಗಳ ಆವಾಸ ತಾಣವಾಗಿವೆ. ಡಿಸೆಂ ಬರ್‌ಯಿಂದ ಜೂನ್‌ವರೆಗೆ ಒಣಗಿದ ಹಾಲುವಾಣ ಅಥವಾ ನುಗ್ಗೆ, ಗೋರುಕಲು ಮೊದಲಾದ ಮೃದು ಮರಗಳಲ್ಲಿ ಪೊಟ್ಟರೆ ಕೊರೆದು ಗೂಡು ಮಾಡುತ್ತದೆ. ಗೂಡಿನಲ್ಲಿ ಹೊಳೆವ ಬಿಳಿ ಬಣ್ಣದ ಮೂರು ಮೊಟ್ಟೆಗಳನ್ನಿಟ್ಟು ಸುಮಾರು 14-15 ದಿನಗಳವರೆಗೆ ಕಾವು ನೀಡಿ ಮರಿ ಮಾಡಿಸುತ್ತವೆ.
ಹಣ್ಣು ಹಾಗೂ ಕೀಟವನ್ನು ಆಹಾರವಾಗಿ ಭಕ್ಷಿಸುತ್ತವೆ. ಹಣ್ಣುಗಳನ್ನು ಅಧಿಕವಾಗಿ ಭಕ್ಷಿಸುವ ಇವು ಬೀಜ ಪ್ರಸರಣ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇವು ಅಂತರ್ವಾಹಕ ಬೀಜ ಪ್ರಸರಕ ಗಳಾಗಿದ್ದು, ಹಣ್ಣುಗಳನ್ನು ತಿಂದು, ಅದರೊಂದಿಗಿನ ಬೀಜಗಳೂ ಕೂಡ ಪಕ್ಷಿಯ ಹೊಟ್ಟೆ ಸೇರಿ, ಹಿಕ್ಕೆಯೊಂದಿಗೆ ಹೊರಬರುತ್ತದೆ. ಇವು ನುಂಗಿದ ಬೀಜಗಳಿಗೆ ಕೆಲವೊಮ್ಮೆ ಕಠಿಣ ಹೊರ-ಕವಚ ವಿದ್ದು, ಪಚನಕ್ರಿಯೆಯಲ್ಲಿ ಈ ಹೊರಕವಚವು ಕರಗಿ, ಹಿಕ್ಕೆಯಿಂದ ಹೊರಬರುತ್ತದೆ. ಹೀಗೆ ಹೊರ ಬಂದ ಬೀಜಗಳು ಮೊಳೆಕೆಯೊಡಯಲು ಸುಲಭವಾಗುತ್ತದೆ. ಬೀಜಗಳ ಹಿಕ್ಕೆ ಹಾಕುತ್ತಾ ಕಾಡನ್ನು ಬೆಳೆಸುವ ಹಕ್ಕಿಗಳು ಇವು!