Dr Niranjan Vanalli Column: ಏಪ್ರಿಲ್ ಹತ್ತು ಬಂತೆಂದರೆ
ಅಧ್ಯಾಪಕರು ಮಕ್ಕಳಿಗೂ ಅವರ ಪಾಲಕರು ಬಂದರೆ ಅವರಿಗೂ ಮಕ್ಕಳ ಫಲಿತಾಂಶವನ್ನು ಹೇಳುತ್ತಾರೆ. ಅಂಕಪಟ್ಟಿಗಳನ್ನು ಕೊಡುತ್ತಾರೆ. ಕೆಲವರು ಖುಷಿಯಿಂದ ಕುಣಿದರೆ ಕೆಲವರು ಒಂದು ಅಂಕ ಕಡಿಮೆಯಾಗಿದ್ದರೂ ಭಾರೀ ಅನಾಹುತವಾದಂತೆ ಕೂಗಾಡುತ್ತಾರೆ. ಈಗ ಒಂಬತ್ತನೆ ತರಗತಿಯವರೆಗೂ ಮಕ್ಕಳನ್ನು ಫೈಲು ಮಾಡುವಂತಿಲ್ಲ. ಹೀಗಾಗಿ ರಿಸಲ್ಟಿನ ದಿನಕ್ಕೆ ಮೊದಲಿದ್ದ ಖದರಿಲ್ಲ.


ಡಾ.ನಿರಂಜನ ವಾನಳ್ಳಿ
ಏಪ್ರಿಲ್ ಹತ್ತು ಬಂದರೆ ಒಂಥರಾ ಖುಷಿ. ಒಂಥರಾ ಆತಂಕ. ಹಿಂದಿನ ರಾತ್ರಿಯೆಲ್ಲ ನಿದ್ದೆ ಇರುವುದಿಲ್ಲ. ಯಾಕೆಂದರೆ ಏಪ್ರಿಲ್ 10ರಂದು ನಮ್ಮ ಶಾಲೆಗಳಲ್ಲಿ ರಿಸಲ್ಟು! ಮಾರ್ಚ್ ಕೊನೆಯ ವಾರ ಪರೀಕ್ಷೆಗಳು ಮುಗಿದು ಶಾಲೆಗಳಲ್ಲಿ ಮಕ್ಕಳಿಗೆ ಕೆಲಸವೇ ಇಲ್ಲ. ಉರು ಹೊಡೆಯುವ ಗೋಜಿಲ್ಲ, ಓದಿ ಬರೆಯುವ ಕಾಟವಿಲ್ಲ. ಯಾವಾಗಲೂ ಶಾಲೆ ಹೀಗೇ ಇದ್ದರೆ ಎಷ್ಟು ಚೆನ್ನಾಗಿ ಇರುತ್ತದೆ ಎಂದುಕೊಂಡವರೆಷ್ಟೋ! ಏಪ್ರಿಲ್ ಮೊದಲವಾರದ ದಿನಗಳು ನಮಗೆ ಆರಾಂ ದಿನಗಳು, ಆದರೆ ಮಾಸ್ತರು- ಅಕ್ಕೋರುಗಳಿಗೆ ಪುರುಸೊತ್ತೇ ಇಲ್ಲ. ಏನೇ ಕೇಳಲು ಹೋದರೂ ಸಿಟ್ಟೇಬರುತ್ತದೆ. ಯಾಕೆಂದರೆ ಆಗಷ್ಟೇ ಪರೀಕ್ಷೆ ಮುಗಿಸಿದ್ದು ಅವರು ಎಲ್ಲಾ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಮಾಡ ಬೇಕು. ಅದನ್ನು ಬೇಕಾಬಿಟ್ಟಿ ಮಾಡು ವಂತಿಲ್ಲ. ಉತ್ತರ ಪತ್ರಿಕೆಗಳನ್ನು ಹಾಕಿದ ಅಂಕಗಳ ಸಮೇತ ಪಾಲಕರಿಗೆ ಕೊಡಬೇಕು. ಯಾಕೆ ಅಂಕಗಳು ಕಡಿಮೆ ಆಗಿವೆ ಎಂಬುದನ್ನು ಮಕ್ಕಳಿಗೆ ವಿವರಿಸಬೇಕಿತ್ತು.
ಅವರ ಒತ್ತಾಯವನ್ನು ತಡೆದುಕೊಳ್ಳಬೇಕು. ಹೀಗಾಗಿ ಏಪ್ರಿಲ್ ಹತ್ತರವರೆಗೆ ಮಾಸ್ತರು - ಅಕ್ಕೋರುಗಳಿಗೆ ಯಾರೊಡನೆ ಹರಟಲಿಕ್ಕೂ ಸಮಯವಿದ್ದಿಲ್ಲ. ಅಂತೂ ನಾವೆಲ್ಲ ಕಾದಿದ್ದ ಏಪ್ರಿಲ್ ಹತ್ತು ಬರುತ್ತದೆ. ಕೆಲವರು ಖುಷಿಯಿಂದ, ಕೆಲವರು ದುಗುಡದಿಂದ ಶಾಲೆಯ ಒಳಗೆ ಬರುತ್ತಾರೆ.
ಇದನ್ನೂ ಓದಿ: Yagati Raghu Naadig Column: ಕರ್ಮಯೋಗಿಯೊಂದಿಗೆ ಕಥೆಗಾರನ ಕಥಾಕಾಲಕ್ಷೇಪ..!
ಅಧ್ಯಾಪಕರು ಮಕ್ಕಳಿಗೂ ಅವರ ಪಾಲಕರು ಬಂದರೆ ಅವರಿಗೂ ಮಕ್ಕಳ ಫಲಿತಾಂಶವನ್ನು ಹೇಳುತ್ತಾರೆ. ಅಂಕಪಟ್ಟಿಗಳನ್ನು ಕೊಡುತ್ತಾರೆ. ಕೆಲವರು ಖುಷಿಯಿಂದ ಕುಣಿದರೆ ಕೆಲವರು ಒಂದು ಅಂಕ ಕಡಿಮೆಯಾಗಿದ್ದರೂ ಭಾರೀ ಅನಾಹುತವಾದಂತೆ ಕೂಗಾಡುತ್ತಾರೆ. ಈಗ ಒಂಬತ್ತನೆ ತರಗತಿಯವರೆಗೂ ಮಕ್ಕಳನ್ನು ಫೈಲು ಮಾಡುವಂತಿಲ್ಲ. ಹೀಗಾಗಿ ರಿಸಲ್ಟಿನ ದಿನಕ್ಕೆ ಮೊದಲಿದ್ದ ಖದರಿಲ್ಲ.
ಆ ದಿನ ಶಾಲೆಗಳಲ್ಲಿ ಪರೀಕ್ಷಾ ಫಲಿತಾಂಶ ಸಿಗುತ್ತದೆ ಎಂಬುದಷ್ಟೇ ವಿಶೇಷ. ಅದೂ ಈಗ ಏಪ್ರಿಲ್ ಹತ್ತರಂದೇ ಆಗಬೇಕೆಂಬ ನಿಯಮವಿಲ್ಲ. ಒದೊಂದು ಶಾಲೆಗಳಲ್ಲಿ ಒಂದೊಂದು ಥರ ಇರುವುದನ್ನು ನೋಡುತ್ತೇವೆ. ಹತ್ತರಂದು ರಿಸಲ್ಟ್ ಬಂದರೆ ಮರುದಿನದಿಂದ ಬೇಸಿಗೆ ರಜಾ! ಮತ್ತೆ ಸುಮಾರು ಒಂದೂವರೆ ತಿಂಗಳು ಮಕ್ಕಳು ಶಾಲೆಯತ್ತ ಮುಖ ಹಾಕಿಯೂ ಮಲಗುವುದಿಲ್ಲ.
ಏಪ್ರಿಲ್ ಹತ್ತು ರಿಸಲ್ಟ್ ದಿನ ಎಂಬ ಕಾರಣಕ್ಕಷ್ಟೇ ನಮಗೆ ಖುಷಿಯ ದಿನವಾಗಿರಲಿಲ್ಲ. ಆ ದಿನದಿಂದ ರಜೆ ಶುರುವಾಗುತ್ತಲ್ಲ ಅದಕ್ಕೆ. ಆಗ ರಜೆಯಲ್ಲಿ ಅಜ್ಜನ ಮನೆಗೆ ಹೋಗುತ್ತಿದ್ದೆವು. ಅಥವಾ ಅಪ್ಪ ಅಮ್ಮನ ಜೊತೆ ಪ್ರವಾಸ ಹೋಗುತ್ತಿದ್ದೆವು. ಮಲೆನಾಡಿನ ಮಕ್ಕಳಿಗೆ ಕಾಡು ತಿರುಗುವ, ಕಾಡಿನ ಹಣ್ಣುಗಳನ್ನು ಹುಡುಕುವ ಕೆಲಸವಿರುತ್ತಿತ್ತು.
ಎಮ್ಮೆಗಳ ಜೊತೆ ಹೊಳೆಗೆ ಹೋಗಿ ಅವುಗಳನ್ನು ಮೀಸುವ ಜೊತೆ ಈಜಾಟ ಆಡುವ ಉದ್ಯೋಗವಿರುತ್ತಿತ್ತು. ಅದಕ್ಕೆಲ್ಲ ಏಪ್ರಿಲ್ ಹತ್ತೇ ಓನಾಮ. ಆರಂಭದ ದಿನ. ಅದಕ್ಕೇ ಜೀವನ ದಲ್ಲಿ ಏಪ್ರಿಲ್ ಹತ್ತಕ್ಕೆ ಮಹತ್ವ. ಎಷ್ಟು ವರ್ಷ ಕಳೆದರೂ ಏಪ್ರಿಲ್ ಹತ್ತು ಬಂದರೆ ಏನೋ ಪುಳಕ. ಕಳೆದ ದಿನಗಳ ಮೆಲುಕು ಹಾಕುವ ಖುಷಿ.