ದೇವಾಲಯಗಳ ವೈಶಿಷ್ಟ್ಯವೇ ಕರ್ನಾಟಕದ ಹೆಮ್ಮೆ

ದೇವಾಲಯಗಳ ವೈಶಿಷ್ಟ್ಯವೇ ಕರ್ನಾಟಕದ ಹೆಮ್ಮೆ

image-6d859951-6029-4fae-86f8-d5ddf9e644d7.jpg
Profile Vishwavani News July 30, 2022
image-f830531e-735a-47a2-80f9-b610cd11ad34.jpg ಸಂವಾದ ೩೫೪ ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಕರ್ನಾಟಕದ ದೇವಾಲಯಗಳ ಹಿರಿಮೆ ತೋರಿದ ಕೆಂಗೇರಿ ಚಕ್ರಪಾಣಿ ಬೆಂಗಳೂರು: ದೇವಾಲಯಗಳೆಂದರೆ ಭಕ್ತಿಯ ಸ್ವರೂಪ. ಅದರ ಜತೆಗೆ ಕರ್ನಾಟಕದ ದೇವಾಲಯಗಳು ಸೌಂದರ್ಯದ ಗಣಿ ಗಳಿದ್ದಂತೆ. ಭಾರತೀಯ ಸಂಸ್ಕೃತಿಯಲ್ಲಿ ದೇವಾಲಯಗಳ ನಿರ್ಮಾಣ ಮತ್ತರವಾದ ಪಾತ್ರ ವಹಿಸಿದೆ ಎಂದು ಸಂಸ್ಕೃತಿ ಚಿಂತಕ ಕೆಂಗೇರಿ ಚಕ್ರ ಪಾಣಿ ಪ್ರತಿಪಾದಿಸಿದರು. ವಿಶ್ವವಾಣಿ ಕ್ಲಬ್‌ಹೌಸ್ ಶುಕ್ರವಾರ ಏರ್ಪಡಿಸಿದ್ದ ‘ಕರ್ನಾಟಕದ ದೇವಾಲಯಗಳ ವೈಶಿಷ್ಟ್ಯ’ ಕುರಿತ ಸಂವಾದದಲ್ಲಿ ಮಾತನಾಡಿ, ರಾಷ್ಟ್ರಕೂಟರು, ಚಾಳುಕ್ಯರು, ಕದಂಬರು, ಹೊಯ್ಶರು, ಕಲ್ಯಾಣಿ ಚಾಲುಕ್ಯರ, ವಿಜಯನಗರ ಮತ್ತು ಮೈಸೂರಿನ ಅರಸರು ನಿರ್ಮಿಸಿದ ದೇವಾಲ ಯಗಳು ವಿಶ್ವವಿಖ್ಯಾತಿಯನ್ನು ಉಲ್ಲೇಖಿಸಿದರು. ಧಾರ್ಮಿಕ ಶ್ರದ್ಧೆಯಿಂದ ಹಾಗೂ ಸ್ಥಳಿಯ ನಾಗರಿಕರ ಇಚ್ಛೆಯಿಂದಾಗಿ ನಮ್ಮ ದೇವಾ ಲಯಗಳು ಕೇವಲ ಶ್ರದ್ಧಾ ಕೇಂದ್ರ ಗಳಾಗುವುದಲ್ಲದೆ, ಅಧ್ಯಾತ್ಮಿಕಯನ್ನು ಸ್ಪರ್ಶಿಸುವ ಕೆಲಸವನ್ನು ಮಾಡಿಕೊಂಡು ಬಂದಿವೆ. ನಾಗರಿಕತೆಯ ವಿಚಾರದಲ್ಲಿ ದೇವಾಲಯಗಳು ಮಹತ್ತರ ಪಾತ್ರ ವಹಿಸಿದೆ. ದೇವಾಲಯಗಳು ಕೇವಲ ಧಾರ್ಮಿಕ ಕ್ಷೇತ್ರವಾಗದೆ, ನಮ್ಮ ಪ್ರಾಚೀನರ ಅವಶ್ಯಕತೆ ಪೂರೈಸುವ ಕೇಂದ್ರವಾಗಿತ್ತು. ವಿದ್ಯೆ ಕಲಿಸುವ ಕೇಂದ್ರ ಕೂಡ ಆಗಿತ್ತು. ಪೂಜಾರಿಗಳು, ಅಗ್ರಣಿಗಳು, ಬನದ ತೋಟಿಗರು, ಅಂಗವರಿಕರು, ಡೋಲು ವಾದ್ಯಕರು, ಮೇಳವಾದ್ಯದವರು, ನರ್ತಕಿಯರು, ಶಾನಭೋಗರು ಸೇರಿ ಅನೇಕರಿಗೆ ದೇವಾಲಯಗಳು ಆಶ್ರಯ ತಾಣವಾಗಿತ್ತು. ಕೆಲವು ಶಾಸನಗಳ ಪ್ರಕಾರ ದೇವಾಲಯಗಳು ನ್ಯಾಯಸ್ಥಾನಗಳಾಗಿಯೂ ಕಾರ್ಯನಿರ್ವಹಿಸಿರುವ ಉದಾಹರಣೆಗಳು ನಮಗೆ ಸಿಗುತ್ತವೆ. ಭಾರತೀಯ ದೇವಾಲಯಗಳ ಅಧ್ಯಯನ ಎಂದರೆ ಅದು ಕರ್ನಾಟಕದ ದೇವಾಲಯಗಳ ಅಧ್ಯಯನ ಮಾಡಿದಂತೆ. ಅಂತಹ ಅಪರೂಪದ ದೇವಾಲಯಗಳು ನಮ್ಮಲ್ಲಿವೆ. ಕರ್ನಾಟಕದಲ್ಲಿ ವೈಶಿಷ್ಟ್ಯಪೂರ್ಣ, ವೈವಿಧ್ಯಮಯ ದೇವಾಲಯಗಳು ಕಾಣಸಿಗುತ್ತವೆ. ಇಲ್ಲಿ ಏಕತಾನತೆ ಇಲ್ಲ. ಹಿಂದಿನ ಕಾಲದ ರಾಜರು ಆಯಾ ಕಾಲಘಟ್ಟಕ್ಕೆ ತಕ್ಕಂತೆ ದೇವಾಲಯಗಳನ್ನು ನಿರ್ಮಿಸಿ ದ್ದಾರೆ. ಹೀಗಾಗಿ ಕನ್ನಡ ನಾಡಿನ ದೇವಾಲಯಗಳು ತನ್ನದೇ ಆದ ವಿಶೇಷತೆ ಹೊಂದಿವೆ. ಕನ್ನಡ ನಾಡಿನ ದೇವಾಲಯಗಳ ನಿರ್ಮಾಣದಲ್ಲಿ ರಾಷ್ಟ್ರಕೂಟರು, ಬಾದಾಮಿಯ ಚಾಲುಕ್ಯರು, ಕದಂಬರು, ಹೊಯ್ಸಳರು, ಕಲ್ಯಾಣಿ ಚಾಲುಕ್ಯರು, ವಿಜಯನಗರದ ಅರಸರು, ಮೈಸೂರು ಒಡೆಯರು ಹೀಗೆ ಒಬ್ಬೊಬ್ಬರ ಕಾಲದಲ್ಲಿ ವೈವಿದ್ಯಮಯ ದೇವಾಲಯಗಳು ನಿರ್ಮಾಣಗೊಂಡಿವೆ ಎಂದು ವಿವರಿಸಿದರು. *** ಭಾರತ ಎಷ್ಟೋ ಧರ್ಮಗಳಿಗೆ ತಾಯಿ. ಅದರಲ್ಲೂ ನಮ್ಮ ಹಿಂದೂ ಧರ್ಮದಲ್ಲಿರುವಷ್ಟು ದೇವರು, ದೇವಾಲಯಗಳು ಜಗತ್ತಿನ ಬೇರಾವ ಧರ್ಮದಲ್ಲೂ ಸಿಗುವುದಿಲ್ಲ. ಎಲ್ಲಾ ದೇವಾಲಯಗಳನ್ನೂ ತುಂಬಾ ವೈವಿದ್ಯಮಯವಾಗಿ ವೈಶಿಷ್ಟ್ಯಪೂರ್ಣವಾಗಿ ಕಟ್ಟಲಾಗಿದೆ. ಅದರಲ್ಲೂ ಕರ್ನಾಟಕದಲ್ಲಿ ಅಸಂಖ್ಯಾತ ಪುರಾತನ ದೇವಾಲಯಗಳಿವೆ. ಎಷ್ಟೋ ದೇವಾಲಯಗಳು ಬೇರೆ ಕಾರಣ ಗಳಿಂದ ಅನನ್ಯವಾಗಿವೆ. ಅವುಗಳು ತನ್ನದೇ ಆದ ವಿಶೇಷ ಛಾಪನ್ನು ಮೂಡಿಸಿವೆ. ಶಿಲ್ಪ ಕಲಾಕೃತಿಗಳಿಂದಲೂ ವಿಶಿಷ್ಟವಾದುದು. ಕೆಂಗೇರಿ ಚಕ್ರಪಾಣಿ ಅವರು ತಮ್ಮ ‘ದೇಗುಲಗಳ ದರಿ’ ೫ ಸಂಪುಟಗಳ ಪುಸ್ತಕದ ಮೂಲಕ ಸಾವಿರಾರು ದೇವಾಲಯಗಳ ಚಿತ್ರ ಸೆರೆಹಿಡಿದು ಪ್ರದರ್ಶಿಸುವುದಲ್ಲದೆ, ಅವುಗಳ ಮಹತ್ವವನ್ನು ಸಾಮಾನ್ಯರಿಗೆ ತಿಳಿಸುವ ಕೆಲಸ ಮಾಡುತ್ತಿದ್ದಾರೆ. - ವಿಶ್ವೇಶ್ವರ ಭಟ್ ಪ್ರಧಾನ ಸಂಪಾದಕರು, ವಿಶ್ವವಾಣಿ *** ದೇಗುಲ ನಿರ್ಮಾಣದ ವಿಶೇಷ ಚೋಳರ ಕಾಲದ ದೇವಾಲಯಗಳು ಬೆಂಗಳೂರು ಗ್ರಾಮಂತರ, ಮೈಸೂರು, ತುಮಕೂರಿನಲ್ಲಿ ಹೆಚ್ಚು ಕಾಣಿಸುತ್ತವೆ. ದೇವಾಲಯ ನಿರ್ಮಾಣದಲ್ಲಿ ವೈವಿದ್ಯತೆ ತಂದ ಕೀರ್ತಿ ಕಲ್ಯಾಣ ಚಾಲುಕ್ಯರಿಗೆ ಸೇರುತ್ತದೆ. ದೇವಾಲಯ ನಿರ್ಮಾಣದ ವಿನ್ಯಾಸವನ್ನೇ ಬದಲಿಸಿದರು. ತಿಳಿ ಹಸಿರು ಬಣ್ಣ ಮಾಧ್ಯಮವನ್ನಾಗಿ ಬಳಸಿ ಉತ್ತರ ಕರ್ನಾಟಕದಲ್ಲಿ ನೂರಾರು ದೇವಾಲಯಗಳನ್ನು ನಿರ್ಮಿಸಿದ್ದಾರೆ. ದೇವಾಲಯವನ್ನು ವಿಶ್ವವಿಖ್ಯಾತ ಮಟ್ಟಕ್ಕೆ ಏರಿಸಿದವರು ಹೊಯ್ಸಳರು. ನಕ್ಷತ್ರಾಕಾರದ ತಳವಿನ್ಯಾಸ, ಬಿತ್ತಿ ಶಿಲ್ಪಗಳನ್ನು ನಿರ್ಮಿಸಿರುವುದು ಇವರ ಕಾಲದ ದೇವಾಲಯಗಳ ವಿಶೇಷತೆ. *** ಸಂಸ್ಕೃತಿ ಉಳಿಸಿದ ವಿಜಯನಗರದ ಅರಸರು ದೇವಾಲಯ ಸಂಸ್ಕೃತಿಯನ್ನು ಉಳಿಸಿದ ಕೀರ್ತಿ ವಿಜಯನಗರದ ಅರಸರಿಗೆ ಸಲ್ಲುತ್ತದೆ. ಯಾಲಿ ಸ್ತಂಬಗಳು ವಿಜಯನಗರದ ವೈಶಿಷ್ಟ್ಯ. ಇವರ ಕಾಲದಲ್ಲಿ ದೇವಲಯಗಳು ಬೃಹದಾಕಾರವಾಗಿ ಬೆಳೆಯಿತು. ದೇವಾಲಯ ನಿರ್ಮಾಣದಲ್ಲಿ ಬಳಸುತ್ತಿದ್ದ ಬಳಪದ ಕಲ್ಲನ್ನು ಹೊರತಾಗಿ, ಕಣಶಿಲೆಯನ್ನು ಬಳಸಿದ ಮೊದಲಿಗರು. ದೇವಾಲಯದ ನಿರ್ಮಾಣಕ್ಕಾಗಿ ಅಚ್ಚ್ಯುತನಾರಾ ಯಣ ಕಾಲದಲ್ಲಿ ‘ಆನಂದನಿಧಿ ದತ್ತಿ’ ಪ್ರಾರಂಭಿಸಲಾಗಿತ್ತು. ಇಲ್ಲಿ ಶೇಖರಿಸಿದ ಹಣದಿಂದ ದೇವಾಲಯಗಳ ನಿರ್ಮಾಣ ಅಭಿ ವೃದ್ಧಿ ಮಾಡಲಾಗುತ್ತಿತ್ತು. ಜತೆಗೆ ಇದೇ ಹಣದಲ್ಲಿ ಪೂಜಾ ಕಾರ್ಯ ನಡೆಯುತ್ತಿತ್ತು. *** ದೇವಾಲಯ ಅಧ್ಯನದಲ್ಲಿ ಮುಖ್ಯವಾಗಿ ನಾವು ಶಾಸ್ತ್ರ ಗ್ರಂಥಗಳ ಮೊರೆ ಹೋಗುತ್ತೇವೆ. ಅವುಗಳಲ್ಲಿ ಒಂದಾದ ಮಯಮತ, ಮಾನಸಾರ, ಭೋಜನ ಸಮನಾಂಗಣ, ಸೂತ್ರಧಾರ ಮುಂತಾದ ಬಗ್ಗೆ ಕಾಣಬಹುದು. ನಮ್ಮ ರಾಜ್ಯದಲ್ಲಿ ಕದಂಬರ ದೇವಾಲಯ ಹೆಚ್ಚಾಗಿ ಕಾಣಸಿಗದಿದ್ದರೂ, ಅವರು ನಿರ್ಮಸಿರುವ ಕಲಾಕೃತಿಗಳು ಹೆಚ್ಚಾಗಿ ಕಾಣಸಿಗುತ್ತದೆ. ಕನ್ನಡ ನಾಡಿನ ಅತ್ಯಂತ ಪ್ರಾಚೀನ ಶಿವಲಿಂಗ ತಾಳಗುಂದದ ಪ್ರಣವೇಶ್ವರನನ್ನು ಸ್ಮರಿಸಲೇಬೇಕು. *** ಬಾದಾಮಿ ಚಾಲುಕ್ಯರು ಗುಹಾಂತರ ದೇವಾಲಯ ನಿರ್ಮಾಣದಲ್ಲಿ ಅಗ್ರಗಣ್ಯರು. ಐಹೊಳೆಯಲ್ಲಿ ೧೨೫ ದೇವಾಲಯ ಈಗಲೂ ಉಳಿದುಕೊಂಡಿದೆ. ಶಾಸನಗಳು ದೇವಾಲಯ ನಿರ್ಮಾಣದಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ವಿರೂಪಾಕ್ಷ ದೇವಾಲಯ ಕಂಚಿ ಕೈಲಾಸ ದೇವಾಲಯದಂತೆ ನಿರ್ಮಿಸಲಾಗಿದೆ. ವಿಜಯನಗರದ ಅರಸರು ಉಳಿಸದಿದ್ದರೆ ಇಂದು ಒಂದು ದೇವಾಲಯವೂ ಕಾಣಸಿಗುತ್ತಿರಲಿಲ್ಲ.
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ