ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಬಿಗ್‌ ಬಾಸ್‌ ಮನೆಯಿಂದ ಅಭಿಷೇಕ್‌ ಔಟ್‌!

Bigg Boss Kannada 12: ಮುಂಬರುವ ದಿನಗಳಲ್ಲಿ ಬಿಗ್‌ ಬಾಸ್‌ ಕನ್ನಡ 12 ರ ಮನೆ ಮತ್ತಷ್ಟು ರೋಚಕವಾಗಿರಲಿದೆ. ಅಭಿಷೇಕ್‌ ಆಟದಲ್ಲಿ ಆಕ್ಟಿವ್‌ ಆಗೇ ಇದ್ದರು. ಮನೆಯಲ್ಲಿ ಮೊದಲ ಬಾರಿಗೆ ಜೋಡಿ ಕ್ಯಾಪ್ಟನ್‌ಶಿಪ್‌ ಕೊಡಲಾಗಿತ್ತು. ಟಾಸ್ಕ್‌ ಆಡದಿದ್ದರೂ ಸ್ಪಂದನಾ ಕ್ಯಾಪ್ಟನ್‌ ಆಗಿ ಹೊರಹೊಮ್ಮಿದ್ದರು. ಕ್ಯಾಪ್ಟನ್‌ಶಿಪ್‌ಗಾಗಿ ಈ ವಾರ ನಡೆದ ಟಾಸ್ಕ್‌ಗಳಲ್ಲಿ ಸ್ಪರ್ಧಿಗಳು ಜೋಡಿಯಾಗಿ ಪಾಲ್ಗೊಂಡಿದ್ದರು. ಇದರಲ್ಲಿ ಅಭಿ-ಸ್ಪಂದನಾ ಜೋಡಿ ಟಾಸ್ಕ್‌ಗಳಲ್ಲಿ ಗೆದ್ದು ಕ್ಯಾಪ್ಟನ್‌ ಆಗಿದ್ದರು. ಅಷ್ಟೇ ಅಲ್ಲ ಅಭಿಷೇಕ್‌ ಅವರು ಕ್ಯಾಪ್ಟನ್‌ ಆಗಿದ್ದು ಎರಡನೇ ಬಾರಿ.

ಬಿಗ್‌ ಬಾಸ್‌ ಮನೆಯಿಂದ ಅಭಿಷೇಕ್‌ ಔಟ್‌!

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Dec 7, 2025 10:46 PM

ಬಿಗ್ ಬಾಸ್ ಕನ್ನಡ 12ರಲ್ಲಿ (Bigg Boss Kannada 12) ಜಾಹ್ನವಿ ಬಳಿಕ ಅಭಿಷೇಕ್‌ ಶ್ರೀಕಾಂತ್‌ ಅವರು ಔಟ್‌ ಆಗಿದ್ದಾರೆ. ಈ ವಾರ ಧ್ರುವಂತ್, ಸೂರಜ್ ಸಿಂಗ್, ರಾಶಿಕಾ ಶೆಟ್ಟಿ, ಮಾಳು ನಿಪನಾಳ, ಕಾವ್ಯಾ ಶೈವ, ಅಭಿಷೇಕ್, ಗಿಲ್ಲಿ ನಟ ಮತ್ತು ರಕ್ಷಿತಾ ಶೆಟ್ಟಿ (Rakshitha Shetty) ಅವರು ನಾಮಿನೇಟ್ ಆಗಿದ್ದರು. ಹೀಗಾಗಿ ಈ ವಾರ ಅತೀ ಕಡಿಮೆ ಮತ ವೋಟ್‌ ಪಡೆದ ಅಭಿಷೇಕ್‌ ಬಿಗ್‌ಬಾಸ್‌ ಮನೆಗೆ ವಿದಾಯ ಹೇಳಿದ್ದಾರೆ.

ಎರಡು ಬಾರಿ ಕ್ಯಾಪ್ಟನ್‌!

ಮುಂಬರುವ ದಿನಗಳಲ್ಲಿ ಬಿಗ್‌ ಬಾಸ್‌ ಕನ್ನಡ 12 ರ ಮನೆ ಮತ್ತಷ್ಟು ರೋಚಕವಾಗಿರಲಿದೆ. ಅಭಿಷೇಕ್‌ ಆಟದಲ್ಲಿ ಆಕ್ಟಿವ್‌ ಆಗೇ ಇದ್ದರು. ಮನೆಯಲ್ಲಿ ಮೊದಲ ಬಾರಿಗೆ ಜೋಡಿ ಕ್ಯಾಪ್ಟನ್‌ಶಿಪ್‌ ಕೊಡಲಾಗಿತ್ತು. ಟಾಸ್ಕ್‌ ಆಡದಿದ್ದರೂ ಸ್ಪಂದನಾ ಕ್ಯಾಪ್ಟನ್‌ ಆಗಿ ಹೊರಹೊಮ್ಮಿದ್ದರು

ಕ್ಯಾಪ್ಟನ್‌ಶಿಪ್‌ಗಾಗಿ ಈ ವಾರ ನಡೆದ ಟಾಸ್ಕ್‌ಗಳಲ್ಲಿ ಸ್ಪರ್ಧಿಗಳು ಜೋಡಿಯಾಗಿ ಪಾಲ್ಗೊಂಡಿದ್ದರು. ಇದರಲ್ಲಿ ಅಭಿ-ಸ್ಪಂದನಾ ಜೋಡಿ ಟಾಸ್ಕ್‌ಗಳಲ್ಲಿ ಗೆದ್ದು ಕ್ಯಾಪ್ಟನ್‌ ಆಗಿದ್ದರು. ಅಷ್ಟೇ ಅಲ್ಲ ಅಭಿಷೇಕ್‌ ಅವರು ಕ್ಯಾಪ್ಟನ್‌ ಆಗಿದ್ದು ಎರಡನೇ ಬಾರಿ.

ಇದನ್ನೂ ಓದಿ: Bigg Boss Kannada 12: ಇದೊಂದು ಕಾರಣಕ್ಕೆ ಗಿಲ್ಲಿ ಯಾರಿಗಾದರೂ ಕಚ್ಚುತ್ತಾ ಇರ್ತಾರೆ! ಕಿಚ್ಚನ ಮುಂದೆ ಧ್ರುವಂತ್‌ ನೇರ ಮಾತು

ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ನಟ ಅವರ ಮಾತುಗಳು ಹೆಚ್ಚಾಗಿ ಸದ್ದು ಮಾಡುತ್ತೆ ಅನ್ನೋದು ಗೊತ್ತಿರೋ ವಿಚಾರ. ಅಭಿಷೇಕ್‌ ಅವರು ಗಿಲ್ಲಿ ವಿರುದ್ಧ ಮಾತನಾಡಿದ್ದೂ ಇದೆ. ಟಾಸ್ಕ್ ಮುಗಿದ ಬಳಿಕ ಗಾರ್ಡನ್ ಏರಿಯಾದಲ್ಲಿ ಸ್ಪಂದನಾ ಮತ್ತು ಅಭಿಷೇಕ್ ಮಾತನಾಡುತ್ತಿರುತ್ತಾರೆ. ಗಿಲ್ಲಿಗೆ ತನ್ನ ತಂಡದಲ್ಲಿ ರಕ್ಷಿತಾ ಆಟವಾಡೋದು ಬೇಕಿರಲಿಲ್ಲ.

ವಂಶದ ಕುಡಿ ಅಂತ ಕರೀತಾನೆ, ಆದ್ರೆ ಆಟಕ್ಕೆ ರಕ್ಷಿತಾ ಬೇಡ. ಎಲ್ಲವೂ ಇಲ್ಲಿ ಬದಲಾಗುತ್ತಿರುತ್ತದೆ. ರಕ್ಷಿತಾ ಅವರನ್ನು ಆಟಕ್ಕೆ ಗಿಲ್ಲಿ ಕರದೇ ಇರಲಿಲ್ಲ. ಅಂತಿಮವಾಗಿ ಅಶ್ವಿನಿ ಅವರೇ ಕರೆದರು ಎಂದು ಅಭಿಷೇಕ್ ಹೇಳಿದ್ದರು.

ಫ್ಲರ್ಟ್ ಮಾಡುವುದರಲ್ಲೇ ಕಳೆಯುತ್ತಿದ್ದ ಅಭಿಷೇಕ್!

ಅಭಿಷೇಕ್‌ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಆದಾಗಲೇ ‘ಮುದ್ದು ಲಕ್ಷ್ಮೀ’ ಧಾರಾವಾಹಿಯ ನಟಿ ಅಶ್ವಿನಿ ಜೊತೆ ಜಂಟಿ ಆಗಿದ್ದರು. ಆದರೆ, ಅವರು ತಮ್ಮ ಎನರ್ಜಿಯನ್ನು ಫ್ಲರ್ಟ್ ಮಾಡುವುದರಲ್ಲೇ ಕಳೆಯುತ್ತಿದ್ದರು. ಅಭಿಷೇಕ್ ಅವರು ಹುಡುಗಿಯರ ಜೊತೆ ಮಾತನಾಡೋದು ಅವರ ಜೊತೆ ಸುತ್ತಾಡೋದು ಬಿಟ್ಟು ಬೇರೆ ಏನನ್ನೂ ಮಾಡುತ್ತಿಲ್ಲ ಎಂಬ ಅಭಿಪ್ರಾಯ ಕೂಡ ಇತ್ತು.

ಪ್ರತಿ ಎಪಿಸೋಡ್​ಗಳಲ್ಲಿ ಯಾವುದೋ ಒಂದು ಮೂಲೆಯಲ್ಲಿ ಕುಳಿತು ಅಭಿಷೇಕ್ ಹಾಗೂ ಅಶ್ವಿನಿ ಹರಟೆ ಹೊಡೆಯುತ್ತಾ ಕುಳಿತುರುವುದಕ್ಕೂ ಟ್ರೋಲ್‌ ಕೂಡ ಆಗಿದ್ದರು.

ಧಾರಾವಾಹಿಯಲ್ಲಿ ಮಿಂಚಿದ ನಟ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ‘ಲಕ್ಷಣ’ ಧಾರಾವಾಹಿಯಲ್ಲಿ ಮೌರ್ಯ ಪಾತ್ರಕ್ಕೆ ಜೀವ ತುಂಬಿದ್ದವರು ನಟ ಅಭಿಷೇಕ್ ಶ್ರೀಕಾಂತ್. ಇತ್ತೀಚೆಗಷ್ಟೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ‘ವಧು’ ಸೀರಿಯಲ್‌ ದಿಢೀರನೆ ಮುಕ್ತಾಯವಾಯಿತು. ಈ ಸೀರಿಯಲ್‌ನಲ್ಲಿ ಹೀರೋ ಸಾರ್ಥಕ್ ಪಾತ್ರವನ್ನ ನಿರ್ವಹಿಸಿದ್ದವರು ಅಭಿಷೇಕ್ ಶ್ರೀಕಾಂತ್. ‘ಶಾಂತಂ ಪಾಪಂ’ ಸೀರಿಯಲ್‌ನಲ್ಲಿ ಅಭಿಷೇಕ್ ಶ್ರೀಕಾಂತ್ ಮೊದಲು ನಟಿಸಿದರು.

ಇದನ್ನೂ ಓದಿ: Bigg Boss Kannada 12: ಸುದೀಪ್​ಗೆ ರಜತ್ ಏಕವಚನದಲ್ಲಿ ಮಾತನಾಡಿದ್ದು ಹೌದಾ? ವಿಡಿಯೋ ಹಾಕಿ ಕಿಚ್ಚ ಕ್ಲಾರಿಟಿ ಕೊಟ್ಟಿದ್ದೇನು?

‘ಯಜಮಾನಿ’, ‘ಲಕ್ಷಣ’, ‘ನನ್ನ ದೇವರು’, 'ವಧು' ಮುಂತಾದ ಸೀರಿಯಲ್‌ಗಳಲ್ಲಿ ಅಭಿಷೇಕ್ ಶ್ರೀಕಾಂತ್ ಅಭಿನಯಿಸಿದ್ದಾರೆ. ಪರಮೇಶ್ವರ್ ಗುಂಡ್ಕಲ್ ಅವರ ‘ಕೋಟಿ’ ಸಿನಿಮಾದಲ್ಲೂ ಅಭಿಷೇಕ್ ಶ್ರೀಕಾಂತ್ ಮಿಂಚಿದ್ದರು.