Vishwavani Editorial: ನಮ್ಮ ಸಂಸ್ಕೃತಿ ನಿತ್ಯನೂತನ
ಡಿ.ವಿ.ಗುಂಡಪ್ಪನವರು. ‘ಅಪ್ಪ ಹಾಕಿದ ಆಲದಮರವೆಂದು ಅದಕ್ಕೇ ಸಂಪೂರ್ಣವಾಗಿ ಜೋತು ಬೀಳುತ್ತೇನೆ’ ಎನ್ನುವುದಾಗಲೀ, ‘ಹಳೆಯದೆಲ್ಲ ಗೊಡ್ಡು ಸಂಪ್ರದಾಯ, ಆಧುನಿಕ ಚಿಂತನೆ ಯಷ್ಟೇ ಸರ್ವಥಾ ಯೋಗ್ಯ’ ಎಂದು ಪಟ್ಟುಹಿಡಿಯುವುದಾಗಲೀ ಯಾವ ಕಾಲಕ್ಕೂ ಸ್ವೀಕಾ ರಾರ್ಹ ಎನಿಸುವುದಿಲ್ಲ. ಹಳತು ಮತ್ತು ಹೊಸತರ ಹಿತಮಿತವಾದ ಮಿಶ್ರಣವಿದ್ದರೇನೇ ಬದುಕು ಸೊಗಸು
Source : Vishwavani Daily News Paper
ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು, ಹೊಸ ಯುಕ್ತಿ ಹಳೆತತ್ವ ದೊಡ ಗೂಡೆ ಧರ್ಮ, ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ, ಜಸವು ಜನಜೀವನಕೆ- ಮಂಕುತಿಮ್ಮ’ ಎಂದಿದ್ದಾರೆ
ಡಿ.ವಿ.ಗುಂಡಪ್ಪನವರು. ‘ಅಪ್ಪ ಹಾಕಿದ ಆಲದಮರವೆಂದು ಅದಕ್ಕೇ ಸಂಪೂರ್ಣವಾಗಿ ಜೋತುಬೀಳುತ್ತೇನೆ’ ಎನ್ನುವುದಾಗಲೀ, ‘ಹಳೆಯದೆಲ್ಲ ಗೊಡ್ಡು ಸಂಪ್ರದಾಯ, ಆಧುನಿಕ ಚಿಂತನೆಯಷ್ಟೇ ಸರ್ವಥಾ ಯೋಗ್ಯ’ ಎಂದು ಪಟ್ಟುಹಿಡಿಯುವುದಾಗಲೀ ಯಾವ ಕಾಲ ಕ್ಕೂ ಸ್ವೀಕಾರಾರ್ಹ ಎನಿಸುವುದಿಲ್ಲ. ಹಳತು ಮತ್ತು ಹೊಸತರ ಹಿತಮಿತವಾದ ಮಿಶ್ರಣ ವಿದ್ದರೇನೇ ಬದುಕು ಸೊಗಸು.
ಹೀಗಾಗಿಯೇ ನಮ್ಮ ಸಂಸ್ಕೃತಿಯಲ್ಲಿ, ಹಳತರ ಪ್ರಾತಿನಿಧಿಕ ರೂಪವಾದ ಅಜ್ಜ ಹಾಗೂ ಭವಿಷ್ಯದ ಭರವಸೆಯ ಸ್ವರೂಪವಾದ ಮೊಮ್ಮಗ ಒಂದಾಗಿ ಬೆರೆತು ಸಂಭ್ರಮಿಸುವ ಪರಿಕಲ್ಪನೆಗೆ ಇನ್ನಿಲ್ಲದ ಜೀವಂತಿಕೆ ಇರುವುದು. ಉತ್ತರ ಪ್ರದೇಶ ರಾಜ್ಯದ ಪ್ರಯಾಗ್‌ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಮಕರ ಸಂಕ್ರಾಂತಿ ಹಬ್ಬದಂದು ದೇಶ-ವಿದೇಶಗಳ ಬರೋಬ್ಬರಿ 2.50 ಕೋಟಿ ಭಕ್ತರು ಪುಣ್ಯಸ್ನಾನ ಕೈಗೊಂಡ ಮಾಹಿತಿಯ ಹಿನ್ನೆಲೆಯಲ್ಲಿ ಈ ಮಾತನ್ನು ಹೇಳಬೇಕಾಗಿ ಬಂದಿದೆ.
ಪಾಪ-ಪುಣ್ಯಗಳ ಕುರಿತಾದ ಗ್ರಹಿಕೆಯನ್ನು ನಂಬುವುದು ಬಿಡುವುದು ಅವರವರ ವಿವೇಚ ನೆಗೆ ಬಿಟ್ಟ ವಿಷಯ. ಆದರೆ, 144 ವರ್ಷಗಳ ಬಳಿಕ ಬಂದಿರುವ ಈ ಪವಿತ್ರ ಪರ್ವಕಾಲದಲ್ಲಿ ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ಹೀಗೊಂದು ಪುಣ್ಯಸ್ನಾನ ವನ್ನು ಕೈಗೊಂಡರೆ ಬದುಕು ಪಾವನವಾಗುತ್ತದೆ ಎಂಬ ನಂಬಿಕೆಯೊಂದಿಗೆ ಶ್ರದ್ಧಾವಂತರು ಅಲ್ಲಿಗೆ ಧಾವಿಸುವು ದಿದೆಯಲ್ಲಾ, ಆ ನಂಬಿಕೆಯೇ ಅವರನ್ನು ಕಾಪಾಡುತ್ತದೆ ಎನ್ನಲಡ್ಡಿಯಿಲ್ಲ.
‘ನಂಬಿಕೆಯೇ ದೇವರು’ ಎಂಬ ಮಾತು ನಮ್ಮಲ್ಲಿ ಚಾಲ್ತಿಯಲ್ಲಿರುವುದು ಪ್ರಾಯಶಃ ಈ ನೆಲೆಯಲ್ಲೇ ಇರಬೇಕು. ಮನೆಗೆ ಬಂದ ಬಂಧುಗಳು ಒಂದು ದಿನದ ಮಟ್ಟಿಗೆ ಉಳಿಯ ಬೇಕಾದಾಗ, ಅತಿಥಿ ಸತ್ಕಾರದ ನೆಲೆಯಲ್ಲಿ ಅವರಿಗೆ ಕಲ್ಪಿಸಿಕೊಡಬೇಕಾದ ವ್ಯವಸ್ಥೆಗಳ ಬಗ್ಗೆ ಮನೆಯ ಯಜಮಾನ ಸಾಕಷ್ಟು ಕಸರತ್ತು ಮಾಡುವುದುಂಟು. ಅಂಥದ್ದರಲ್ಲಿ ನಿರ್ದಿಷ್ಟ ನೆಲೆಗೆ ಏಕಕಾಲಕ್ಕೆ ಕೋಟ್ಯಂತರ ಜನರು ಬಂದಾಗ, ಅವರನ್ನು ನಿರ್ವಹಿಸುವುದು ನಿಜಕ್ಕೂ
ಸವಾಲೇ. ಇದನ್ನು ಸಮರ್ಥವಾಗಿ ಎದುರಿಸಿರುವ ಉತ್ತರ ಪ್ರದೇಶ ಸರಕಾರಕ್ಕೆ ಅಭಿನಂದಿಸ ಲೇಬೇಕು.
ಇದನ್ನೂ ಓದಿ: ಭಗವಂತನನ್ನೇ ಬೀದಿಗೆಳೆದಾಗ ಬಾಯಿ ಮುಚ್ಚಿ ಕುಳಿತವರು ಈಗ....?!