Vishwavani Impact: ಸ್ಮೃತಿ ಭವನ ನಿರ್ಮಾಣಕ್ಕೆ ಅನುಮತಿ ನಿರಾಕರಣೆ
ಈ ಕುರಿತು ವಿಶ್ವವಾಣಿಯಲ್ಲಿ ಸ್ಮೃತಿ ಭವನ ಹೆಸರಲ್ಲಿ ಗಡಿ ಕದನ ಎಂಬ ಹೆಸರಿನಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ವರದಿ ಬೆನ್ನ ಬೆಳಗಾವಿಯ ಕನ್ನಡಪರ ಸಂಘಟನೆ ಮುಖಂ ಡರು ಜಿಲ್ಲಾಧಿಕಾರಿ ಗಳನ್ನು ಭೇಟಿಯಾಗಿ ಯಾವುದೇ ಕಾರಣಕ್ಕೂ ಬೆಳಗಾವಿಯ ಸ್ಮೃತಿ ಭವನ ನಿರ್ಮಾಣಕ್ಕೆ ಅವಕಾಶ ನೀಡದಂತೆ ಮನವಿ ಸಲ್ಲಿಸಿದ್ದರು.
 
                                -
 Ashok Nayak
                            
                                Apr 11, 2025 10:18 AM
                                
                                Ashok Nayak
                            
                                Apr 11, 2025 10:18 AM
                            ಬೆಳಗಾವಿ: 1986 ರ ಸೀಮಾ ಲಡಾಯಿ ಸಂಘರ್ಷದಲ್ಲಿ ಮೃತಪಟ್ಟ ದಂಗೆಕೋರರ ಸ್ಮರಣಾರ್ಥ ಸ್ಮೃತಿ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದ ಎಂಇಎಸ್ ನಡೆಗೆ ಹಿನ್ನಡೆ ಉಂಟಾಗಿದ್ದು ಯಾವುದೇ ಕಾರಣಕ್ಕೂ ಈ ರೀತಿಯ ಭವನ ನಿರ್ಮಾಣಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ವಿಶ್ವವಾಣಿಯಲ್ಲಿ ಸ್ಮೃತಿ ಭವನ ಹೆಸರಲ್ಲಿ ಗಡಿ ಕದನ ಎಂಬ ಹೆಸರಿನಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ವರದಿ ಬೆನ್ನ ಬೆಳಗಾವಿಯ ಕನ್ನಡಪರ ಸಂಘಟನೆ ಮುಖಂಡರು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಯಾವುದೇ ಕಾರಣಕ್ಕೂ ಬೆಳಗಾವಿಯ ಸ್ಮೃತಿ ಭವನ ನಿರ್ಮಾಣಕ್ಕೆ ಅವಕಾಶ ನೀಡದಂತೆ ಮನವಿ ಸಲ್ಲಿಸಿದ್ದರು.
ಇದನ್ನೂ ಓದಿ: Vishweshwar Bhat Column Impact: : ʼಹಕ್ಕಿ-ಕಪ್ಪೆಗಳ ಬಗ್ಗೆಯೂ ಸದನದಲ್ಲಿ ಸಭಾತ್ಯಾಗ ಮಾಡಬೇಕುʼ ಅಂಕಣ ಪ್ರಸ್ತಾಪ
ಪದೇ, ಪದೇ ಗಡಿಯಲ್ಲಿ ಒಂದಿಂದು ಖ್ಯಾತೆ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿರುವ ಮಹಾರಾಷ್ಟ್ರ ಸರಕಾರ ಈಗ ಸ್ಮೃತಿ ಭವನ ನಿರ್ಮಾಣಕ್ಕೆ ಹತ್ತು ಕೋಟಿ ರು. ದೇಣಿಗೆ ನೀಡಲು ಮುಂದಾಗಿದೆ. ಇದರಿಂದ ಗಡಿಯಲ್ಲಿ ಕನ್ನಡ ಭಾಷಿಕರ ಮೇಲೆ ದ್ವೇಷ ಮೂಡಿಸುವ ಪ್ರಯತ್ನಕ್ಕೆ ಎಂಇಎಸ್ ಕೈ ಹಾಕಿದ್ದು ಯಾವುದೇ ಕಾರಣಕ್ಕೂ ಅವಕಾಶ ನೀಡದಂತೆ ಕನ್ನಡಿಗರು ಮನವಿ ಮಾಡಿದ್ದಾರೆ.
*
ಗಡಿ ಭಾಗದಲ್ಲಿ ಭಾಷೆ ಹೆಸರಿನಲ್ಲಿ ಸೌಹಾರ್ದತೆಗೆ ಧಕ್ಕೆ ತರುವ ಯಾವುದೇ ಕಾರ್ಯಕ್ಕೂ ಅವಕಾಶ ನೀಡುವುದಿಲ್ಲ. ಸ್ಮೃತಿ ಭವನ ಕಟ್ಟಡ ಕಾಮಗಾರಿಗೆ ಯಾವೆಲ್ಲ ಅನುಮತಿ ಪಡೆಯಲಾಗಿದೆ ಎಂದು ಪರಿಶೀಲನೆ ನಡೆಸುತ್ತೇನೆ. ಈ ಕುರಿತು ನೋಟಿಸ್ ಜಾರಿ ಮಾಡುತ್ತೇನೆ.
-ಮೊಹಮ್ಮದ್ ರೋಷನ್, ಬೆಳಗಾವಿ ಜಿಲ್ಲಾಧಿಕಾರಿ
 
            