ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Sewage water is no longer a waste: ಚರಂಡಿ ನೀರು ಇನ್ನು ಅಸಹ್ಯವಲ್ಲ, ನಿಮ್ಮ ಅಡುಗೆ ಅನಿಲದ ಮೂಲ!

ಕಟ್ಟಕಡೆಯಲ್ಲಿ ಮಿಥಾನೊಜೆನಿಸಿಸ್ ಎಂಬ ಪ್ರಕ್ರಿಯೆ ನಡೆಯುತ್ತದೆ. ಇದರಲ್ಲಿಯೇ ಮಿಥೇಲ್ ಅನಿಲ ಉತ್ಪತ್ತಿಯಾಗುತ್ತದೆ. ಈ ಅನಿಲವು ನೀರಿನಿಂದ ಬೇರ್ಪಟ್ಟು ಮೇಲಕ್ಕೆ ಹೋಗುತ್ತದೆ. ಅದನ್ನು ಕೊಳವೆಗಳ ಮೂಲಕ ಸ್ಟೋರೇಜ್ ಕಂಟೈನರ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ. ಮೇಲಿನ ಪ್ರಕ್ರಿಯೆಯಲ್ಲಿ ಮಿಥೇನ್ ಅನಿಲ ಉತ್ಪತ್ತಿಯಾದ ಕೂಡಲೇ ಅದು ಎಲ್‌ಪಿಜಿಯಂತೆ ಅಡುಗೆ ಅನಿಲ ವಾಗಿರುವುದಿಲ್ಲ.

ಚರಂಡಿ ನೀರು ಇನ್ನು ಅಸಹ್ಯವಲ್ಲ, ನಿಮ್ಮ ಅಡುಗೆ ಅನಿಲದ ಮೂಲ!

-

Profile
Ashok Nayak Apr 22, 2026 3:38 PM

ಬೆಂಗಳೂರಿನ ಜನತೆಗೆ ಸದ್ಯದಲ್ಲೇ ಸರಬರಾಜು ಆಗಲಿದೆ ಡ್ರೈನೇಜ್ ಗ್ಯಾಸ್

ಮಿಥೇನ್ ರಾಸಾಯನಿಕ ಉಳ್ಳ ಅನಿಲ ಉತ್ಪಾದನೆ

ಬೆಂಗಳೂರಿನ ಚರಂಡಿ ನೀರನ್ನು ಒಂದೆಡೆ ಸಂಸ್ಕರಿಸಿ ಅದರಿಂದ ಅಡುಗೆ ಅನಿಲವನ್ನು ತಯಾರಿ ಸುವ ಬೃಹತ್ ಯೋಜನೆಗೆ ಬೆಂಗಳೂರಿನ ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ) ಮುಂದಾಗಿದೆ. ಸರಕಾರ ಹಾಗೂ ಖಾಸಗಿ ಕಂಪನಿಗಳ ಸಹಯೋಗದಡಿಯಲ್ಲಿ ಬೆಂಗಳೂರಿನ ಚರಂಡಿ ನೀರಿನಿಂದ ಡ್ರೈನೇಜ್ ಗ್ಯಾಸ್ ತಯಾರಿಸುವ ಯೋಜನೆಗೆ ಬೆಂಗಳೂರಿನ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯು (ಬಿಡಬ್ಲ್ಯೂಎಸ್‌ಎಸ್‌ಬಿ) ಮುಂದಾಗಿದೆ. ಅದರಿಂದ ವಾರ್ಷಿಕ 12ಕೋಟಿ ರು. ಆದಾಯದ ನಿರೀಕ್ಷೆಯನ್ನು ಮಂಡಳಿ ಇಟ್ಟುಕೊಂಡಿದೆ.

ಈ ಮೂಲಕ ತ್ಯಾಜ್ಯವೂ ಆದಾಯದ ಮೂಲ ಆಗುತ್ತದೆ ಎಂದು ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾದ್ ಮನೋಹರ್ ಹೇಳಿದ್ದಾರೆ. ದಶಕಗಳ ಹಿಂದೆ, ಪಂಜಾಬ್ ಹಾಗೂ ಚಂಡೀಗಢ ಮುಂತಾದ ಕಡೆ ಗೋವುಗಳ ತ್ಯಾಜ್ಯದಿಂದ ತಯಾರಿಸಲಾದ ಬಯೋಗ್ಯಾಸ್ ಆ ಪ್ರಾಂತ್ಯದಲ್ಲಿ ಹೊಸ ಕ್ರಾಂತಿಯನ್ನೇ ಉಂಟು ಮಾಡಿತ್ತು. ಅದಕ್ಕೂ ಇದಕ್ಕೂ ಏನು ವ್ಯತ್ಯಾಸ? ನಾವು ನಮ್ಮ ಮನೆಗಳಲ್ಲಿ ಬಳಸುವ ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್‌ನಷ್ಟು (ಎಲ್‌ಪಿಜಿ) ದಕ್ಷತೆಯನ್ನು ಈ ಡ್ರೈನೇಜ್ ಗ್ಯಾಸ್ ನೀಡುತ್ತದೆಯೇ ಎಂಬುದರ ಬಗ್ಗೆ ಬನ್ನಿ ತಿಳಿಯೋಣ.

ಮೊದಲಿಗೆ, ಚರಂಡಿ ನೀರಿನಿಂದ ಇಂಧನ ಹೇಗೆ ಉತ್ಪತ್ತಿಯಾಗುತ್ತದೆ ಎಂಬುದನ್ನು ತಿಳಿಯೋಣ. ಚರಂಡಿ ನೀರನ್ನು ಏರೋಬಿಕ್ ಡೈಜೆಷನ್ ಎಂಬ ಪ್ರಕ್ರಿಯೆಗೆ ಒಳಪಡಿಸಿದಾಗ ಅದು ಎಲ್‌ಪಿಜಿ ಯಂಥ ಇಂಧನವನ್ನು ಸೃಷ್ಟಿಸುತ್ತದೆ. ಇದರಲ್ಲಿ ಪ್ರಧಾನವಾಗಿ ಮಿಥೇನ್ ( CH4 ) ಎಂಬ ರಾಸಾಯನಿಕ ಇರುತ್ತದೆ.

ಇದನ್ನೂ ಓದಿ: Dr N Someshwara Column: ವೈದ್ಯಕೀಯ ಜಗತ್ತಿನ ಮಹಾನ್‌ ದುರಂತ: ಈಥರ್‌ ವಾರ್‌ !

ಇದು ಎಲ್‌ಪಿಜಿಯಂತೆ ದಹನಕಾರಿ. ಇದನ್ನು ಉತ್ಪತ್ತಿ ಮಾಡುವ ವಿಧಾನ ಹೀಗಿದೆ: ಮೊದಲಿಗೆ ಚರಂಡಿ ನೀರನ್ನು ಸ್ಲಡ್ಜ್ ಕಲೆಕ್ಷನ್ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ವರ್ಗಾಯಿಸಲಾಗುತ್ತದೆ. ಅಲ್ಲಿ, ಚರಂಡಿ ನೀರಿನಲ್ಲಿ ಬೆರೆತಿರುವ ಮಣ್ಣು, ಇತ್ಯಾದಿ ಘನ ತ್ಯಾಜ್ಯಗಳನ್ನು ಬೇರ್ಪಡಿಸಲಾಗುತ್ತದೆ. ಆನಂತರ, ಇದನ್ನು ಅನ್‌ಏರೋಬಿಕ್ ಡೈಜೆಷನ್ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ.

ಇಲ್ಲಿ, ದೊಡ್ಡ ದೊಡ್ಡ ಏರ್‌ಟೈಟ್ ಟ್ಯಾಂಕ್‌ಗಳಲ್ಲಿ ಸಂಗ್ರಹಿಡಲಾಗುತ್ತದೆ. ಈ ಟ್ಯಾಂಕ್‌ಗಳನ್ನು ಬಯೋಗ್ಯಾಸ್ ಡೈಜೆಸ್ಟರ್‌ಗಳೆಂದು ಕರೆ ಯುತ್ತಾರೆ. ಇದರೊಳಗೆ ಸಂಗ್ರಹವಾಗುವ ಚರಂಡಿ ನೀರಿನಲ್ಲಿ ಕೆಲವಾರು ರಾಸಾಯನಿಕ ಪ್ರಕ್ರಿಯೆಗಳು ನಡೆಯುತ್ತವೆ. ಆಮ್ಲಜನಕದ ಗೈರಿನಲ್ಲಿ ಚರಂಡಿ ನೀರಿ ನಲ್ಲಿರುವ ವಿಶೇಷ ಬ್ಯಾಕ್ಟೀರಿಯಾಗಳು ಇಡೀ ನೀರನ್ನು ರಾಸಾಯನಿಕ ಅಣುಗಳಮಟ್ಟದಲ್ಲಿ ವಿಭಜನೆಗೊಳಿಸುತ್ತವೆ. ಈ ರಾಸಾಯನಿಕ ಪ್ರಕ್ರಿಯೆಯು ಮುಂದುವರಿದು ಹೈಡ್ರೋಲಿಸಿಸ್, ಆಸಿಡೋಜೆನಿಸಿಸ್, ಆಸಿಟೋಜೆನಿಸಿಸ್ ಎಂಬ ಮೂರು ಹಂತದ ರಾಸಾ ಯನಿಕ ಪ್ರಕ್ರಿಯೆಗಳು ನಡೆಯುತ್ತವೆ.

ಕಟ್ಟಕಡೆಯಲ್ಲಿ ಮಿಥಾನೊಜೆನಿಸಿಸ್ ಎಂಬ ಪ್ರಕ್ರಿಯೆ ನಡೆಯುತ್ತದೆ. ಇದರಲ್ಲಿಯೇ ಮಿಥೇಲ್ ಅನಿಲ ಉತ್ಪತ್ತಿಯಾಗುತ್ತದೆ. ಈ ಅನಿಲವು ನೀರಿನಿಂದ ಬೇರ್ಪಟ್ಟು ಮೇಲಕ್ಕೆ ಹೋಗುತ್ತದೆ. ಅದನ್ನು ಕೊಳವೆಗಳ ಮೂಲಕ ಸ್ಟೋರೇಜ್ ಕಂಟೈನರ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ. ಮೇಲಿನ ಪ್ರಕ್ರಿಯೆಯಲ್ಲಿ ಮಿಥೇನ್ ಅನಿಲ ಉತ್ಪತ್ತಿಯಾದ ಕೂಡಲೇ ಅದು ಎಲ್‌ಪಿಜಿಯಂತೆ ಅಡುಗೆ ಅನಿಲ ವಾಗಿರುವುದಿಲ್ಲ. ಏಕೆಂದರೆ, ಆ ಕಚ್ಚಾ ಮಿಥೇನ್ ಅನಿಲದಲ್ಲಿ ಶೇ 50-70ರಷ್ಟು ಮಿಥೇನ್ ಅನಿಲವಿದ್ದರೆ, ಶೇ.30-40ರಷ್ಟು ಕಾರ್ಬನ್ ಡೈಆಕ್ಸೈಡ್ ಇರುತ್ತದೆ.

indhana

ಇದರ ಜೊತೆಗೆ, ತ್ಯಾಜ್ಯ ನೀರಿನ ಕೆಲವು ಕಣಗಳು, ಹೈಡ್ರೋಜನ್ ಸಲೈಡ್ ( H2S ) ಇರುತ್ತದೆ. ಇದನ್ನು ಎಲ್‌ಪಿಜಿಯಂಥ ಇಂಧನವನ್ನಾಗಿಸಲು ಈ ಕೆಳಗಿನ ಮೂರು ವಿಧಾನಗಳನ್ನು ಅನುಸರಿಸಲಾಗುತ್ತದೆ.

೧. ಸ್ಕ್ರಬಿಂಗ್: ಸ್ಟೀಲ್‌ನ ನಾರು ತುಂಬಿರುವ ಕೊಳವೆಗಳಿಂದ ಈ ಮಿಥೇನ್ ಅನಿಲವನ್ನು ಹಾಯಿಸಿ, ಅದನ್ನು ಸೋಸಲಾಗುತ್ತದೆ. ಇದರಿಂದ ಕಾರ್ಬನ್ ಡೈ ಆಕ್ಸೈಡ್ ಹಾಗೂ ಹೈಡ್ರೋಜನ್ ಸಲೈಡ್ ಅನಿಲಗಳನ್ನು ತೆಗೆದುಹಾಕಲಾಗುತ್ತದೆ. ಈ ಹಂತದಲ್ಲಿ ಈ ಅನಿಲದ ಕೆಟ್ಟ ವಾಸನೆಯನ್ನೂ ಹೋಗಲಾಡಿಸಲಾಗುತ್ತದೆ.

೨. ಅಪ್ ಗ್ರೇಡಿಂಗ್: ಮೇಲಿನ ಹಂತದಲ್ಲಿ ಕಾರ್ಬನ್ ಡೈ ಆಕ್ಸೈಡ್ ಸಂಪೂರ್ಣವಾಗಿ ನಿರ್ಮೂಲನೆ ಯಾಗಿರುವುದಿಂದ ಈಗಿರುವ ಮಿಥೇನ್ ಅನಿಲವು ಬಯೋಮಿಥೇನ್ ರೂಪವನ್ನು ಗಳಿಸಿರುತ್ತದೆ. ಇದನ್ನು, ಮರುಬಳಕೆ ಮಾಡಬಹುದಾದ ನೈಸರ್ಗಿಕ ಇಂಧನ ಎಂದು ಕರೆಯುತ್ತಾರೆ. ಇದು ಮನೆಗಳಲ್ಲಿ ಬಳಸುವ ಎಲ್‌ಪಿಜಿ ಹಾಗೂ ವಾಹನಗಳಲ್ಲಿ ಬಳಸುವ ಸಿಎನ್‌ಜಿಯಷ್ಟೇ ಪರಿಣಾಮಕಾರಿ ಆಗಿರುತ್ತದೆ.

೩. ಕಂಪ್ರೆಷನ್: ಈ ಹಂತದಲ್ಲಿ ಇದನ್ನು ತೀವ್ರ ಒತ್ತಡದಲ್ಲಿ ಟ್ಯಾಂಕುಗಳಲ್ಲಿ ಕಂಪ್ರೆಸ್ ಮಾಡಿ ಸಂಗ್ರಹಿಸಲಾಗುತ್ತದೆ. ಇದರಿಂದ ಇದರ ಸುಲಭ ಸಾಗಣೆ ಸಾಧ್ಯ. ಡ್ರೈನೇಜ್ ಗ್ಯಾಸ್, ಗೋಬರ್ ಗ್ಯಾಸ್ ಒಂದೇನಾ? ಹೌದು. ಇವೆರಡೂ ಒಂದೇ. ಈ ಎರಡನ್ನೂ ಬೇರೆ ಬೇರೆ ಮೂಲಗಳಿಂದ ಪಡೆಯ ಲಾಗುತ್ತದಷ್ಟೆ. ಆದರೆ, ಇವೆರಡನ್ನೂ ತಯಾರಿಸುವ ವಿಧಾನ, ಇವುಗಳಲ್ಲಿರುವ ರಾಸಾಯನಿಕಗಳ ಆಧಾರದಲ್ಲಿ ಹೇಳುವುದಾದರೆ ಇವೆರಡೂ ಒಂದೇ. ಇವೆರಡೂ ಬಯೋಗ್ಯಾಸ್ ಕ್ಯಾಟಗರಿ ಅಡಿಯಲ್ಲಿ ಬರುತ್ತದೆ. ಹೆಸರು ಮಾತ್ರ ಗೋ ಬರ್ ಗ್ಯಾಸ್ (ಗೋವುಗಳ ಸಗಣಿಯಿಂದ ಮಾಡಿದ್ದು), ಡ್ರೈನೇಜ್ ಗ್ಯಾಸ್ (ಚರಂಡಿ ನೀರಿನಿಂದ ಮಾಡಿದ್ದು).

ಈ ಅನಿಲಗಳ ಕ್ಷಮತೆ ಹೇಗೆ?

ಮನೆಗಳಲ್ಲಿ ನಾವು ಬಳಸುವ ಎಲ್‌ಪಿಜಿ ಗ್ಯಾಸ್‌ಗೆ ಹೋಲಿಸಿದರೆ ಡ್ರೈನೇಜ್ ಗ್ಯಾಸ್ ಅಥವಾ ಗೋಬರ್ ಗ್ಯಾಸ್ ಗಳ ಕ್ಷಮತೆ ಹೇಗೆ? ಎಂಬ ಪ್ರಶ್ನೆ ಬರುತ್ತದೆ. ಡ್ರೈನೇಜ್ ಗ್ಯಾಸ್ ಅಥವಾ ಗೋಬರ್ ಗ್ಯಾಸ್‌ಗಳನ್ನು ತಯಾರಿಸಿ ಬಳಸಬಹುದು. ಆದರೆ, ಇವಕ್ಕೆ ಹೋಲಿಸಿದರೆ ಎಲ್‌ಪಿಜಿ ಪವರ್ ಫುಲ್. ಅದು ಹೇಗೆಂದರೆ, ಪ್ರತಿಯೊಂದು ವಸ್ತುವಿಗೂ ಸಾಂದ್ರತೆ ಎಂಬ ಗುಣವಿರುತ್ತದೆ. ವಸ್ತುವು ಹೆಚ್ಚು ಸಾಂದ್ರವಾಗಿದ್ದರೆ, ಅದರ ಅಣುಗಳು ಹತ್ತಿರದಲ್ಲಿದ್ದು, ತೂಕ ಹೆಚ್ಚಾಗಿರುತ್ತದೆ (ಉದಾಹರಣೆಗೆ: ಕಬ್ಬಿಣ). ಸಾಂದ್ರತೆ ಕಡಿಮೆಯಿದ್ದರೆ, ಅಣುಗಳು ದೂರವಿದ್ದು ತೂಕ ಕಡಿಮೆ ಇರುತ್ತದೆ (ಉದಾಹರಣೆಗೆ: ಕಾಗದ ಅಥವಾ ನೀರು).

ಇಲ್ಲಿ ಡ್ರೈನೇಜ್ ಗ್ಯಾಸ್ ಹಾಗೂ ಗೋಬರ್ ಗ್ಯಾಸ್ ಎರಡೂ ಕಡಿಮೆ ಸಾಂದ್ರತೆಯುಳ್ಳವು. ಹಾಗಾಗಿ, ಒಂದು ಕ್ಯೂಬಿಕ್ ಅಳತೆಯ ಡಬ್ಬಿಯಲ್ಲಿ ಇವುಗಳನ್ನು ತುಂಬಿಸಿದಾಗ, ಡ್ರೈನೇಜ್ ಗ್ಯಾಸ್ 1.20 ಕೆಜಿ ಹಿಡಿಸಿದರೆ, ಅದೇ ಕ್ಯೂಬಿಕ್ ಮೀಟರ್ ಜಾಗದಲ್ಲಿ ಗೋಬರ್ ಗ್ಯಾಸ್ 1.15 ಕೆಜಿಯಷ್ಟು ತುಂಬುತ್ತದೆ. ಇನ್ನು, ಎಲ್‌ಪಿಜಿಯು 2.50 ಕೆಜಿಯಷ್ಟು ಹಿಡಿಸುತ್ತದೆ.

ಅಂದರೆ, ಎಲ್‌ಪಿಜಿಯೇ ಹೆಚ್ಚು ತೂಕವುಳ್ಳದ್ದು. ಇನ್ನು, ಕ್ಷಮತೆಯ ವಿಚಾರಕ್ಕೆ ಬರುವುದಾದರೆ, ಎಲ್‌ಪಿಜಿ ಹೆಚ್ಚು ಪವರ್‌ಪುಲ್ ಇಂಧನ. ಇದರಿಂದ ಹೊರಹೊಮ್ಮುವ ಉಷ್ಣಾಂಶ ಪ್ರತಿ ಕ್ಯೂಬಕ್ ಮೀಟರ್‌ನಲ್ಲಿ ತುಂಬಬಹುದಾದ ಎಲ್‌ಪಿಜಿ ಇಂಧನವನ್ನು ದಹಿಸಿದಾಗ 11000 ದಿಂದ 12000 ಕಿಲೋ ಕ್ಯಾಲರಿ ಯಷ್ಟು ಶಕ್ತಿ ಉತ್ಪಾದನೆಯಾಗುತ್ತೆ.

ಆದರೆ, ಗೋಬರ್ ನಿಂದಾಗಿ ಪ್ರತಿ ಕ್ಯೂಬಿಕ್ ಮೀಟರ್ ನಲ್ಲಿರುವ ಡ್ರೈನೇಜ್ ಗ್ಯಾಸ್ ಉರಿಸಿದಾಗ 4500 ರಿಂದ 5500 ಕಿಲೋಕ್ಯಾಲರಿ ಯಷ್ಟು ಶಕ್ತಿ ಉತ್ಪಾದನೆಯಾಗುತ್ತದೆ. ಇನ್ನು, ಒಂದು ಕ್ಯೂಬಿಕ್ ಮೀಟರ್‌ನಲ್ಲಿರುವ ಗೋಬರ್ ಗ್ಯಾಸನ್ನು ಉರಿಸಿದಾಗ 4700ರಿಂದ 6000 ಕಿಲೋಕ್ಯಾಲರಿಯಷ್ಟು ಶಕ್ತಿ ಉತ್ಪಾದನೆಯಾಗುತ್ತದೆ.

ಭಾರತದಲ್ಲಿ ಬಯೋಗ್ಯಾಸ್ ಇರುವ ತಾಣಗಳು

ಭಾರತದಲ್ಲಿ ಡ್ರೈನೇಜ್ ನೀರಿನಿಂದ ಅಡುಗೆ ಅನಿಲ ತಯಾರಿಸುವ ಘಟಕಗಳು ಕೆಲವೆಡೆ ಇವೆ. ತಮಿಳುನಾಡಿನ ಸೆಲೈಯ್ಯೂರ್‌ನಲ್ಲಿ ಸಾರ್ವಜನಿಕ ಶೌಚಾಲಯದ ನೀರಿನಿಂದ ಅಡುಗೆ ಅನಿಲ ವನ್ನು ತಯಾರಿಸಲಾಗುತ್ತಿದೆ. ಬಯೋ-ಮಿಥೇನೇಷನ್ ಪ್ಲಾಂಟ್ ಮೂಲಕ ತಯಾರಾಗುವ ಈ ಅನಿಲವು ಅಲ್ಲಿನ 30 ಮನೆಗಳಿಗೆ ಸಪ್ಲೈ ಆಗುತ್ತದೆ. ಡ್ರೈನೇಜ್ ಗ್ಯಾಸ್‌ನ ಮತ್ತೊಂದು ಉತ್ಪಾದನಾ ಘಟಕವನ್ನು ಉತ್ತರ ಪ್ರದೇಶದ ಅಲ್ಲಲ್ಲಿ ಕಾಣಬಹುದು. ಘಾಸಿಯಾಬಾದ್‌ನ ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಅಭಿಷೇಕ್ ವರ್ಮಾ, ಅಭಿನೇಂದ್ರ ಪಟೇಲ್ ಎಂಬುವರು ಗಾಜಿಯಾಬಾದ್‌ನ ಸೂರ್ಯನಗರ್ ರಾಜಕಾಲುವೆಯಲ್ಲಿ ಹರಿಯುತ್ತಿದ್ದ ನೀರನ್ನು ಪರೀಕ್ಷೆಗೊಳಪಡಿಸಿ ಅದರಲ್ಲಿ ಶೇ. 65ರಷ್ಟು ಪರಿಶುದ್ಧವಾದ ಮಿಥೇನ್ ಇರುವುದನ್ನು ಪತ್ತೆ ಮಾಡಿದ್ದರು. ಅದರಿಂದ ಅಡುಗೆ ಅನಿಲವನ್ನು ಸಣ್ಣಪ್ರಮಾಣದಲ್ಲಿ ತಯಾರಿಸಿ ಅದೇ ಹತ್ತಿರದಲ್ಲಿದ್ದ ರಾಮು ಎಂಬಾತನ ಟೀ ಅಂಗಡಿಗೆ ಸರಬರಾಜು ಮಾಡುವಂತೆ ಮಾಡಿದ್ದರು. ಅದು ನಂತರ ಮಾಧ್ಯಮಗಳಲ್ಲಿ ವರದಿಯಾಗಿ ಇತರಸಣ್ಣ ಚಹಾ ಅಂಗಡಿಗಳು ಡ್ರೈನೇಜ್ ನೀರನ್ನೇ ಬಳಸಿ ಅನಿಲ ಉತ್ಪಾದನೆ ಮಾಡಿಕೊಂಡು ಅದನ್ನೇ ತಮ್ಮ ಚಹಾ ಅಂಗಡಿಯ ಇಂಧನವನ್ನಾಗಿ ಮಾಡಿಕೊಂಡಿವೆ.