ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Siddaramaiah Record: ರಾಜಕೀಯ ಮರುಜನ್ಮ ನೀಡಿದ 'ಬಾದಾಮಿ'

ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡ ಮೇಲೆ ಅವರ ಅತ್ಯಾಪ್ತ ರಾಗಿದ್ದ ಸಚಿವರಾದ ಆರ್.ಬಿ.ತಿಮ್ಮಾಪುರ, ಸತೀಶ ಜಾರಕಿಹೊಳಿ ಹಾಗೂ ಜಮೀರ್ ಅಹ್ಮದ್ ಸೇರಿದಂತೆ ಮಾಜಿ ಸಚಿವ ಎಸ್.ಆರ್.ಪಾಟೀಲ, ದಿ.ಎಚ್.ವೈ.ಮೇಟಿ, ಶಾಸಕರಾದ ವಿಜಯಾ ನಂದ ಕಾಶಪ್ಪನ ವರ, ಜೆ.ಟಿ.ಪಾಟೀಲ ಸೇರಿದಂತೆ ಅಂದಿನ ಸಚಿವ ಸಂಪುಟವೇ ಬಾದಾಮಿ ಯಲ್ಲಿ ಬಿಡು ಬಿಟ್ಟು, ತಮ್ಮ ನಾಯಕನನ್ನು ಗೆಲ್ಲಿಸಿಕೊಂಡು ಬರಲು ಹಗಲಿರುಳು ಶ್ರಮವಹಿಸಿ ದರು.

Siddaramaiah Record: ರಾಜಕೀಯ ಮರುಜನ್ಮ ನೀಡಿದ 'ಬಾದಾಮಿ'

-

Ashok Nayak
Ashok Nayak Jan 6, 2026 4:50 PM

ಅಭಿಷೇಕ ಪಾಟೀಲ

ಜಿಲ್ಲಾ ವರದಿಗಾರರು, ಬಾಗಲಕೋಟೆ

ಸಿದ್ದರಾಮಯ್ಯ 2ನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿಯುವಲ್ಲಿ ಬಾದಾಮಿ ವಿಧಾನ ಸಭಾ ಮತಕ್ಷೇತ್ರದ ಅತೀ ಮುಖ್ಯವಾದ ಪಾತ್ರ ವಹಿಸಿದೆ ಎಂದರೆ ತಪ್ಪಾಗಲಾರದು.

2013ರಿಂದ 2018ರಲ್ಲಿ ರಾಜ್ಯದ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು, ಎಂದಿನಂತೆ ಚಾಮುಂಡೇಶ್ವರಿಯಿಂದ ಸ್ಪರ್ಧೆ ನಡೆಸುವ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಅಲ್ಲಿ ಅವರಿಗೆ ಗೆಲುವು ಕಷ್ಟ ಎಂದು ಗೊತ್ತಾದಾಗ ಅದರ ತೆಗೆ ಮತ್ತೊಂದು ಕ್ಷೇತ್ರ ಆಯ್ಕೆ ಮಾಡಿ ಕೊಳ್ಳಲು ಮುಂದಾದಾಗ. ಈಡೀ ರಾಜ್ಯದ ವಿವಿಧ ಕ್ಷೇತ್ರಗಳಿಂದ ಸ್ಪರ್ಧಿಸುವಂತೆ ಅವರಿಗೆ ಆಹ್ವಾನ ಬಂದಿತಾದರೂ, ಅವರು ಬಹಳ ಯೋಚನೆ ಮಾಡಿ ಬಾದಾಮಿಯನ್ನು ಆಯ್ಕೆ ಮಾಡಿಕೊಂಡರು. ಇಲ್ಲಿ ಬಂದು ನಿಂತು ಗೆದ್ದು, ರಾಜಕೀಯ ಮರುಜನ್ಮ ಪಡೆದು ಕೊಂಡರು.

ನಂತರ ಸಮ್ಮಿಶ್ರ ಸರಕಾರದಲ್ಲಿ ಸಮನ್ವಯ ಸಮಿತಿ ನಾಯಕ ಹಾಗೂ ಮುಂದೆ ವಿರೋಧ ಪಕ್ಷದ ನಾಯಕರಾಗಿ, 2023ರಲ್ಲಿ ಮತ್ತೊಮ್ಮೆ ರಾಜ್ಯದ ಚುಕ್ಕಾಣಿ ಹಿಡಿದಿದ್ದಾರೆ.

ರಾಜಕೀಯ ಮರುಜನ್ಮ

2013ರಿಂದ ಐದು ವರ್ಷ ಅತ್ಯುತ್ತಮ ಆಡಳಿತ ನೀಡಿದ್ದ ಸಿಎಂ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿಯಲ್ಲಿ ಸೋಲುವ ಮಾತುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಅವರ ಮುಂದಿನ ಆಯ್ಕೆ ಬಹಳ ಕಷ್ಟಕರವಾಗಿತ್ತು. ಬಹಳ ಅಳೆದು ತೂಗಿ ಬಾದಾಮಿಯನ್ನು ಆಯ್ಕೆ ಮಾಡಿಕೊಂಡ ಅವರಿಗೆ ಗೆಲುವು ನಿಶ್ಚಿತ ಎಂದು ಗೊತ್ತಿದ್ದರೂ ಚಿಂತೆ ತಪ್ಪಿರಲಿಲ್ಲ, ಕಾರಣ ಎರಡು ಕ್ಷೇತ್ರದಲ್ಲಿ ಸೋತರೆ ಮುಂದಿನ ರಾಜಕೀಯ ಭವಿಷ್ಯ ಇಲ್ಲಿಗೆ ನಿಲ್ಲುತ್ತದೆ ಎಂಬ ಭಯದಲ್ಲಿಯೇ ಚುನಾವಣೆ ಎದುರಿಸಿದರು.

ಇದನ್ನೂ ಓದಿ: Siddaramaiah Record: ಕಲ್ಯಾಣ ಕರ್ನಾಟಕದ ಅಭಿವೃದ್ದಿಗೆ ʼಸಿದ್ದʼಹಸ್ತ

ಅಂದುಕೊಂಡಂತೆ ಚಾಮುಂಡೇಶ್ವರ ಸೋತ ಅವರಿಗೆ ಬಾದಾಮಿ ಜನತೆ ಕೈ ಹಿಡಿದು ರಾಜಕೀಯ ಮರುಜನ್ಮ ನೀಡಿದ್ದರಿಂದಲೇ 2023ರಲ್ಲಿ ಮತ್ತೊಮ್ಮೆ ಅವರು ರಾಜ್ಯದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿದೆ.

ಬಾದಾಮಿಯಲ್ಲಿ ಅತ್ಯಾಪ್ತರ ಬಿಡಾರ

2018ರಲ್ಲಿ ಬಾದಾಮಿ ಮತಕ್ಷೇತ್ರದಿಂದ ಸ್ಪರ್ಧೆ ನಡೆಸಲು ಕಾಂಗ್ರೆಸ್‌ನ ಬಿ.ಬಿ. ಚಿಮ್ಮನಕಟ್ಟಿ ತಯಾರಿ ನಡೆಸಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ಬಾದಾಮಿ ಆಯ್ಕೆ ಮಾಡಿಕೊಳ್ಳಲು ಮುಂದಾದಾಗ ಬಿ.ಬಿ.ಚಿಮ್ಮನಕಟ್ಟಿ ಅವರು ತಾವು ಹಿಂದೆ ಸರಿದು ಸಿದ್ದರಾಮಯ್ಯ ಅವರಿಗೆ ಟಿಕೆಟ್ ಬಿಟ್ಟು ಕೊಟ್ಟರು.

ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡ ಮೇಲೆ ಅವರ ಅತ್ಯಾಪ್ತರಾಗಿದ್ದ ಸಚಿವರಾದ ಆರ್.ಬಿ.ತಿಮ್ಮಾಪುರ, ಸತೀಶ ಜಾರಕಿಹೊಳಿ ಹಾಗೂ ಜಮೀರ್ ಅಹ್ಮದ್ ಸೇರಿದಂತೆ ಮಾಜಿ ಸಚಿವ ಎಸ್.ಆರ್.ಪಾಟೀಲ, ದಿ.ಎಚ್.ವೈ.ಮೇಟಿ, ಶಾಸಕರಾದ ವಿಜಯಾನಂದ ಕಾಶಪ್ಪನ ವರ, ಜೆ.ಟಿ.ಪಾಟೀಲ ಸೇರಿದಂತೆ ಅಂದಿನ ಸಚಿವ ಸಂಪುಟವೇ ಬಾದಾಮಿಯಲ್ಲಿ ಬಿಡು ಬಿಟ್ಟು, ತಮ್ಮ ನಾಯಕನನ್ನು ಗೆಲ್ಲಿಸಿಕೊಂಡು ಬರಲು ಹಗಲಿರುಳು ಶ್ರಮವಹಿಸಿದರು.

ಬಾದಾಮಿಯಿಂದ ಸ್ಪರ್ಧೆ ಖಚಿತವಾದ ಬಳಿಕ ಸಿಎಂ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರಕ್ಕೆ ಬಂದಿರುವುದು ಕೇವಲ ಎರಡೇ ಬಾರಿ. ಪೂರ್ತಿ ರಾಜ್ಯ ಸಂಚರಿಸಿ ಪಕ್ಷವನ್ನು ಅತೀ ಹೆಚ್ಚು ಸ್ಥಾನದಲ್ಲಿ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಹೊಂದಿದ್ದರಿಂದ ಅವರು ಬಾದಾಮಿಗೆ ಆಗಮಿಸಿದ್ದು ಬೆರಳೆಣಿಕೆಯಷ್ಟೇ. ಮೊದಲ ಬಾರಿಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಬಾದಾಮಿಯಲ್ಲಿ ಬೃಹತ್ ಮೆರವಣಿಗೆ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಕೆ ಮಾಡಿದರು.

ಸಾವಿರಾರೂ ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮವನ್ನು ನೋಡಿದ್ದ ಸಿದ್ದರಾಮಯ್ಯಗೆ ಗೆಲುವಿ ಭರವಸೆ ಮೂಡಿತ್ತು. ನಂತರ ಬಹಿರಂಗ ಪ್ರಚಾರಕ್ಕೆ ತೆರೆ ಬೀಳುವ ಮುನ್ನ ಬಾದಾಮಿ ಕ್ಷೇತ್ರದ ವಿವಿಧೆಡೆ ಸಂಚರಿಸಿ, ಪ್ರಚಾರ ಕೈಗೊಂಡಿದ್ದರು.

ಸಿದ್ದರಾಮಯ್ಯ ಆಗಮಿಸುವ ಸುದ್ದಿ ತಿಳಿದು ಸಾವಿರಾರೂ ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸೇರಿ ಅವರನ್ನು ಅದ್ಧೂರಿಯಾಗಿ ಬರಮಾಡಿಕೊಂಡು ಗೆಲ್ಲಿಸುವು ದಾಗಿ ಆಶ್ವಾಸನೆ ನೀಡಿದ್ದರು. ಅದರಂತೆ ಅವರನ್ನು ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಿದರು.

ಬಾದಾಮಿ ವಿಧಾನಸಭಾ ಕ್ಷೇತ್ರದಿಂದ ಸಿದ್ದರಾಮಯ್ಯ ಅವರು ಸ್ಪರ್ಧಿಸುವುದು ಖಚಿತ ವಾಗುವವರೆಗೆ ಬಿಜೆಪಿ ತನ್ನ ಟಿಕೆಟ್ ಘೋಷಣೆ ಮಾಡಿರಲಿಲ್ಲ. ರಾಮುಲು ಅವರು ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತವಾದ ಮೇಲೂ ಹೈಕಮಾಂಡ್ ಆದೇಶದಂತೆ ಬಾದಾಮಿ ಯಿಂದಲೂ ಸ್ಪರ್ಧೆ ನಡೆಸಿದರು.

ಎರಡು ಕಡೆಯಿಂದ ಸ್ಪರ್ಧೆ ನಡೆಸಿದ್ದ ಶ್ರೀರಾಮುಲು ಮೊಳಕಾಲ್ಮೂರಿನಲ್ಲಿ ಗೆಲುವು ದಾಖಲಿಸಿದರೇ, ಬಾದಾಮಿಯಲ್ಲಿ ಸಿದ್ದರಾಮಯ್ಯ ವಿರುದ್ಧ 1696 ಅಂತರಗಳಿಂದ ಸೋತರು.

ಸೋಲು ಊಹಿಸಲು ಸಾಧ್ಯವಿರಲಿಲ್ಲ

2018ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿನ ವಾತಾವರಣ ಇದೆ ಎಂದು ಗೊತ್ತಾದಾಗ ಅವರು ಆಯ್ಕೆ ಮಾಡಿ, ಗೆದ್ದಿರುವುದು ಬಾದಾಮಿ ಕ್ಷೇತ್ರದಿಂದ. ಆದರೆ ಅಂದು ಸಿದ್ದರಾಮಯ್ಯ ಅವರು ಸ್ಪರ್ಧಿಸಿದ್ದ ಎರಡು ಕ್ಷೇತ್ರಗಳಲ್ಲಿ ಸೋಲು ಕಂಡಿದರೆ ಅದು ಅವರ ರಾಜಕೀಯ ಅಂತ್ಯ ಎಂದು ಹೇಳಲಾಗಿತ್ತು. ಒಂದು ವೇಳೆ ಅಂದಿನ ಸಂದರ್ಭದಲ್ಲಿ ಬಾದಾಮಿ ಜನರು ಸಿದ್ದರಾಮಯ್ಯ ಅವರನ್ನು ಗೆಲ್ಲಿಸದಿದ್ದರೆ ಅವರು ಎರಡನೇ ಬಾರಿ ರಾಜ್ಯದ ಚುಕ್ಕಾಣಿ ಹಿಡಿಯುವುದು ಸಾಧ್ಯವಾಗುತ್ತಿರಲಿಲ್ಲ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ದಾಖಲೆಯನ್ನು ತಲುಪುವುದು ಕನಸಿನ ಮಾತಾಗುತ್ತಿತ್ತು.