ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಟ್ಟರ ಮನೆಯಲ್ಲಿ ಕೊನೆ ದಿನಗಳನ್ನು ಕಳೆದ ಭೈರಪ್ಪ

ಮೈಸೂರಿನಿಂದ ಬೆಂಗಳೂರಿಗೆ ಆಗಮಿಸಿದ ಭೈರಪ್ಪ ನವರು ಕೆಲ ದಿನಗಳ ಕಾಲ ಭಟ್ಟರ ನಿವಾಸ ದಲ್ಲಿಯೇ ತಂಗಿದ್ದರು. ಬಳಿಕ ಭೈರಪ್ಪನವರ ಖಾಸಗಿ ತನಕ್ಕೆ ಧಕ್ಕೆಯಾಗಬಾರದು ಎನ್ನುವ ಕಾರಣಕ್ಕೆ ವಿಶ್ವೇಶ್ವರ ಭಟ್ಟರು, ತಮ್ಮ ಫ್ಲ್ಯಾಟ್ ಒಂದನ್ನು ಭೈರಪ್ಪನವರಿಗೆ ಬಿಟ್ಟುಕೊಟ್ಟರು. ಆ ಸಮಯದಲ್ಲಿ ‘ನೀವು ನನ್ನನ್ನು ಔಟ್ ಹೌಸ್‌ನಲ್ಲಿ ಉಳಿಸುತ್ತೀರಾ ಎಂದುಕೊಂಡಿದ್ದೆ. ಆದರೆ ಮನೆಯನ್ನೇ ಬಿಟ್ಟು ಕೊಟ್ಟಿದ್ದೀರಾ’ ಎಂದು ಭಟ್ಟರ ಬಗ್ಗೆ ಅಭಿಮಾನದ ಮಾತುಗಳನ್ನು ಭೈರಪ್ಪನವರು ಆಡಿದ್ದರು.

ಭಟ್ಟರ ಮನೆಯಲ್ಲಿ ಕೊನೆ ದಿನಗಳನ್ನು ಕಳೆದ ಭೈರಪ್ಪ

-

Ashok Nayak Ashok Nayak Sep 25, 2025 3:04 PM

ಸರಸ್ವತಿ ಪುತ್ರರ ಅವಿನಾಭಾವ ಒಡನಾಟ

ಭಟ್ಟರ ಮನೆಯಲ್ಲಿಯೇ ಕೊನೆಯ ಎಂಟು ತಿಂಗಳು ಕಳೆದ ಭೈರಪ್ಪ

ನಿತ್ಯ ಎರಡು ತಾಸು ಭೈರಪ್ಪನವರಿಗೆ ಪತ್ರಿಕೆ ಓದಿ ಹೇಳುತ್ತಿದ್ದ ಭಟ್ಟರು

ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದ ಎಸ್.ಎಲ್. ಭೈರಪ್ಪ ಅವರಿಗೆ ರಾಜ್ಯಾದ್ಯಂತ ಅಭಿಮಾನಿಗಳ ಬಳಗವಿತ್ತು. ಭೈರಪ್ಪನವರು ಹೇಳಿದರೆ, ತಲೆ ಮೇಲೆ ಹೊತ್ತು ಕೆಲಸ ಮಾಡುವ ಅಭಿಮಾನಿಗಳಿಗೇನು ಕಡಿಮೆಯಿರಲಿಲ್ಲ. ಆದರೆ ಭೈರಪ್ಪನವರು ಮಾತ್ರ ತಮ್ಮ ಕೊನೆಯ ದಿನಗಳನ್ನು ಕಳೆದಿದ್ದು ವಿಶ್ವೇಶ್ವರ ಭಟ್ಟರ ಮನೆಯಲ್ಲಿ.

ಹೌದು, ಸರಸ್ವತಿ ಪುತ್ರರು ಮೈಸೂರಿನ ತಮ್ಮ ಮನೆಯಿಂದ ಹೊರಬರಬೇಕಾದಾಗ ಅವರಿಗೆ ನೆನಪಾ ಗಿದ್ದು ವಿಶ್ವೇಶ್ವರ ಭಟ್ಟರು. ಭಟ್ಟರಿಗೆ ಕರೆ ಮಾಡಿ, ‘ನಾನು ನಿಮ್ಮ ಮನೆಯಲ್ಲಿ ಇರಬಹುದೇ’ ಎಂದು ಹೇಳಿದಷ್ಟೆ. ಮರುದಿನ ಭೈರಪ್ಪನವರ ವಾಸಸ್ಥಾನ ರಾಜರಾಜೇಶ್ವರಿ ನಗರದಲ್ಲಿರುವ ವಿಶ್ವೇಶ್ವರ ಭಟ್ಟರ ಮನೆಯಾಯಿತು.

ಅಲ್ಲಿಂದ ಸರಿಸುಮಾರು ಎಂಟು ತಿಂಗಳ ಕಾಲ ಕಳೆದು, ಕೊನೆಯ ಉಸಿರು ಎಳೆಯುವಾಗ ವಿಶ್ವೇಶ್ವರ ಭಟ್ಟರೇ ಭೈರಪ್ಪನವರೊಂದಿಗೆ ಇದ್ದರು. ಎಸ್.ಎಲ್. ಭೈರಪ್ಪ ಅವರ ಕಾದಂಬರಿಗಳನ್ನು ಓದಿ ಕೊಂಡು ಬೆಳೆದ ವಿಶ್ವೇಶ್ವರ ಭಟ್ಟರು, ಬಳಿಕ ವಿಜಯ ಕರ್ನಾಟಕಕ್ಕೆ ಬಂದ ಬಳಿಕ ಭೈರಪ್ಪನವ ರೊಂದಿಗೆ ಒಡನಾಟ ಹೆಚ್ಚಾಯಿತು.

ಅಲ್ಲಿಂದ ಬೆಂಗಳೂರಿನಲ್ಲಿ ಭಟ್ಟರ ಮನೆಯಲ್ಲಿ ನೆಲೆಸುವ ತನಕ ವಾರಕ್ಕೆ ಕನಿಷ್ಠ ಒಮ್ಮೆಯಾದರೂ ಭಟ್ಟರು ಹಾಗೂ ಭೈರಪ್ಪನವರು ಫೋನ್‌ನಲ್ಲಿ ಮಾತನಾಡುತ್ತಿದ್ದರು. ಸಾಹಿತ್ಯ, ವಿದೇಶ, ಅಧ್ಯಯನ ದಲ್ಲಿ ಇಬ್ಬರಿಗೂ ಸಮಾನ ಆಸಕ್ತಿ ಇದ್ದಿದ್ದರಿಂದ ಇಬ್ಬರ ನಡುವಿನ ಆತ್ಮೀಯತೆ ಇನ್ನಷ್ಟು ಹೆಚ್ಚಾಗಲು ಕಾರಣವಾಯಿತು.

ಇದನ್ನೂ ಓದಿ: Vishweshwar Bhat Column: ರಸ್ತೆಯ ಬಿರುಕುಗಳಲ್ಲಿ ಅರಳಿದ ಹೂ

ಫ್ಲ್ಯಾಟ್ ಅನ್ನೇ ಬಿಟ್ಟುಕೊಟ್ಟಿದ್ದ ಭಟ್ಟರು: ಮೈಸೂರಿನಿಂದ ಬೆಂಗಳೂರಿಗೆ ಆಗಮಿಸಿದ ಭೈರಪ್ಪ ನವರು ಕೆಲ ದಿನಗಳ ಕಾಲ ಭಟ್ಟರ ನಿವಾಸದಲ್ಲಿಯೇ ತಂಗಿದ್ದರು. ಬಳಿಕ ಭೈರಪ್ಪನವರ ಖಾಸಗಿ ತನಕ್ಕೆ ಧಕ್ಕೆಯಾಗಬಾರದು ಎನ್ನುವ ಕಾರಣಕ್ಕೆ ವಿಶ್ವೇಶ್ವರ ಭಟ್ಟರು, ತಮ್ಮ ಫ್ಲ್ಯಾಟ್ ಒಂದನ್ನು ಭೈರಪ್ಪನವರಿಗೆ ಬಿಟ್ಟುಕೊಟ್ಟರು. ಆ ಸಮಯದಲ್ಲಿ ‘ನೀವು ನನ್ನನ್ನು ಔಟ್ ಹೌಸ್‌ನಲ್ಲಿ ಉಳಿಸು ತ್ತೀರಾ ಎಂದುಕೊಂಡಿದ್ದೆ. ಆದರೆ ಮನೆಯನ್ನೇ ಬಿಟ್ಟುಕೊಟ್ಟಿದ್ದೀರಾ’ ಎಂದು ಭಟ್ಟರ ಬಗ್ಗೆ ಅಭಿಮಾನದ ಮಾತುಗಳನ್ನು ಭೈರಪ್ಪನವರು ಆಡಿದ್ದರು.

ಪ್ರತ್ಯೇಕ ಫ್ಲ್ಯಾಟ್‌ನಲ್ಲಿ ವಾಸವಿದ್ದರೂ ನಿತ್ಯ ಬೆಳಗ್ಗೆ ತಿಂಡಿ, ಮಧ್ಯಾಹ್ನದ ಊಟ ಹಾಗೂ ರಾತ್ರಿ ಊಟಕ್ಕೆ ವಿಶ್ವೇಶ್ವರ ಭಟ್ಟರ ಮನೆಗೆ ಆಗಮಿಸುತ್ತಿದ್ದರು. ಶಿಸ್ತಿನ ಜೀವನಕ್ಕೆ ಹೆಸರಾಗಿರುವ ಭೈರಪ್ಪ ನವರಿಗೆ ಸಮಯಕ್ಕೆ ಸರಿಯಾಗಿ ಊಟ-ತಿಂಡಿ ಸಿದ್ಧವಿರಬೇಕಿತ್ತು. ಈ ವಿಷಯದಲ್ಲಿ ಕೊಂಕಾಗದಂತೆ ಭಟ್ಟರ ಕುಟುಂಬ ಭೈರಪ್ಪನವರನ್ನು ನೋಡಿಕೊಂಡರು. ಇನ್ನು ಭೈರಪ್ಪನವರೊಂದಿಗೆ ಇಡೀ ದಿನವಿರುವುದಕ್ಕೆ, ಮಾರ್ಕಾಂಡೇಯೆ ಎನ್ನುವವರನ್ನು ನೇಮಿಸಿಕೊಳ್ಳಲಾಗಿತ್ತು.

ಹಾಗೇ ನೋಡಿದರೆ, ಭೈರಪ್ಪನವರ ದಿನ ಆರಂಭವಾಗುತ್ತಿದ್ದದ್ದು ಬೆ.೪ ಗಂಟೆಗೆ. ಈ ಇಳಿವಯಸ್ಸಿ ನಲ್ಲಿಯೂ ನಿತ್ಯ ಒಂದು ಗಂಟೆ ಕಾಲವಾಯುವಿಹಾರ ಮಾಡುತ್ತಿದ್ದ ಅವರು, ಅಲ್ಲಿಂದ ನೇರವಾಗಿ ಭಟ್ಟರ ನಿವಾಸಕ್ಕೆ ಬರುತ್ತಿದ್ದರು. ಬಳಿಕ ವಿಶ್ವೇಶ್ವರ ಭಟ್ಟರು ಎರಡು ಗಂಟೆಗಳ ಕಾಲ ದಿನಪತ್ರಿಕೆ ಗಳನ್ನು ಓದಿ ಹೇಳುತ್ತಿದ್ದರು. ಬಳಿಕ ಸಾಹಿತ್ಯ, ಸಂಸ್ಕೃತಿ, ರಾಜಕೀಯ ಸೇರಿದಂತೆ ಹಲವು ವಿಷಯ ಗಳ ಬಗ್ಗೆ ಚರ್ಚಿಸುತ್ತಿದ್ದರು.

ಆಸ್ಪತ್ರೆಯಲ್ಲಿ ಭೈರಪ್ಪ ಜತೆಗಿದ್ದ ಭಟ್ಟರು

ಕೆಲದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಭೈರಪ್ಪನವರು ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಬುಧವಾರ ಹೃದಯಾಘಾತವಾಗುತ್ತಿದ್ದಂತೆ ವಿಶ್ವೇಶ್ವರ ಭಟ್ಟರು ಆಸ್ಪತ್ರೆಗೆ ತೆರಳಿದರು. ಭೈರಪ್ಪನವರ ಕೊನೆಯ ಕ್ಷಣದಲ್ಲಿ ಅವರ ಪತ್ನಿ, ಮಕ್ಕಳು ಅಥವಾ ಬಂಧು-ಬಳಗ ವಿರಲಿಲ್ಲ. ಬದಲಿಗೆ ವಿಶ್ವೇಶ್ವರ ಭಟ್ಟರಿದ್ದರು. ಬಳಿಕ ಬೆಂಗಳೂರಿನ ಸಾರ್ವಜನಿಕ ದರ್ಶನ, ಮೈಸೂರಿ ನಲ್ಲಿ ಸಾರ್ವಜನಿಕ ದರ್ಶನ ವ್ಯವಸ್ಥೆ ಸೇರಿದಂತೆ ಪ್ರತಿಹಂತದಲ್ಲಿಯೂ ನಿಂತು ಕಾರ್ಯನಿರ್ವಹಿಸಿ ದರು.

ಸರಕಾರಿ ಗೌರವ ನೀಡುವಂತೆ ಸಿಎಂಗೆ ಮನವಿ

ಭೈರಪ್ಪನವರು ನಿಧನ ಹೊಂದಿದ ವಿಷಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದ ವಿಶ್ವೇಶ್ವರ ಭಟ್ಟರು, ನಾಡಿನ ಅಸ್ಮಿತೆಯಾಗಿರುವ, ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪನವರಿಗೆ ಸಕಲ ಸರಕಾರಿ ಗೌರವ ನೀಡಬೇಕಿರುವುದು ಸರಕಾರದ ಆದ್ಯ ಕರ್ತವ್ಯ. ಆದ್ದರಿಂದ ಬೆಂಗಳೂರು, ಮೈಸೂರು ಎರಡು ಕಡೆಯಲ್ಲಿಯೂ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಬೇಕು. ಇದರೊಂದಿಗೆ ಸಕಲ ಸರಕಾರಿ ಗೌರವವನ್ನು ಕೊಡುವುದಕ್ಕೆ ಅಗತ್ಯ ಆದೇಶ ಹೊರಡಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿದ್ದರಾಮಯ್ಯ ಅವರು ಕೂಡಲೇ, ಸಕಲ ಸರಕಾರಿ ಗೌರವ ಹಾಗೂ ಸಾರ್ವಜನಿಕ ದರ್ಶನಕ್ಕೆ ಅಗತ್ಯ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹುಟ್ಟೂರಿಗೆ ನೀರು ಕೊಡಿಸುವಲ್ಲಿ ಮಹತ್ವದ ಪಾತ್ರ

ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದ ಭೈರಪ್ಪ ಅವರು, ತಮಗಾಗಿ ಎಂದಿಗೂ ಅರ್ಜಿ ಹಿಡಿದು ರಾಜಕಾರಣಿಗಳ ಮನೆ ಮುಂದೆ ಸುಳಿದವರಲ್ಲ. ಆದರೆ ತಮ್ಮ ಹುಟ್ಟೂ ರಾದ ಸಂತೇಶಿವರದಲ್ಲಿ ನೀರಿನ ಸಮಸ್ಯೆಗೆ ಪದೇಪದೆ ಸ್ಥಳೀಯರು ಗಮನಕ್ಕೆ ತಂದಾಗ ಅದನ್ನು ಸರಿಪಡಿಸಲು ಹಲವು ದಾರಿಗಳಲ್ಲಿ ಪ್ರಯತ್ನಿಸಿದ್ದರು. ಆದರೆ ಅಧಿಕಾರಿಗಳು ಪ್ರತಿ ಬಾರಿಯೂ ಒಂದೊಂದು ನೆಪ ಹೇಳಿ ಯೋಜನೆ ಆರಂಭಕ್ಕೆ ಕ್ರಮವಹಿಸುತ್ತಿರಲಿಲ್ಲ. ಆದರೆ ಕೊನೆಯದಾಗಿ ವಿಶ್ವೇಶ್ವರ ಭಟ್ಟರ ನಿವಾಸಕ್ಕೆ ಬಂದು, ತಮ್ಮೂರಿನ ನೀರಿನ ಸಮಸ್ಯೆ ಬಗ್ಗೆ ಹೇಳಿದಾಗ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಯೋಜನೆ ಮಂಜೂರು ಮಾಡಿಸುವಲ್ಲಿ ಭಟ್ಟರು ಮಹತ್ವದ ಪಾತ್ರವಹಿಸಿದ್ದರು. ಬೊಮ್ಮಾಯಿ ಅವರು ಒಪ್ಪಿಗೆ ನೀಡಿದರೂ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದಾಗ, ಭಟ್ಟರೇ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಯೋಜನೆ ಪೂರ್ಣಗೊಳಿಸುವುದಕ್ಕೆ ಹೋರಾಡಿದ್ದರು.