#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

BJP karnataka: ಬಣ ಬಡಿದಾಟದಲ್ಲಿ ಚದುರಿದ ಕೇಸರಿ ದಳ

ಪಕ್ಷದ ರಾಜ್ಯಾಧ್ಯಕ್ಷರ ನೇಮಕದಿಂದಲೇ ಆರಂಭವಾದ ಬಿರುಗಾಳಿ ನಂತರ ಪ್ರತಿಪಕ್ಷ ನಾಯಕ ಆಯ್ಕೆಗೆ ತಟ್ಟಿ ನಂತರ ರಾಜ್ಯಾಧ್ಯಕ್ಷರ ಬದಲಾವಣೆ, ಪ್ರತಿಪಕ್ಷ ಸ್ಥಾನದ ಬದಲಾವಣೆಯ ಕೂಗಿ ನಿಂದ ಹಿಡಿದ ಲ್ಲಿಂದ ಆರಂಭವಾದ ಎರಡು ಬಣ, ಹೋಳಾಗಿ, ಆ ಬಣಗಳನ್ನು ವಹಿಸಿಕೊಳ್ಳಲು ಒಳಬಣ ಗಳಾಗಿ, ತಟಸ್ಥ ಬಣ ಎಂದುಕೊಂಡರೂ ಸಂಘ ಪರಿವಾರದ ಮಗದೊಂದು ತಂಡವಾಗಿ, ಈಗ ಮಾಜಿಗಳ ಬಣ, ಅದರಲ್ಲಿ ಜಾತಿ ಬಣ, ಸಂಸದರ ಬಣ ಅದರಲ್ಲೂ ಮಾಜಿ ಸಂಸದರೊಂದು ಒಳ ಬಣ, ಬೆಂಗಳೂರು ಬಣ, ಮಂಗಳೂರು ಬಣ, ಉತ್ತರ ಭಾಗದ್ದೇ ನಾಲ್ಕೈದು ಬಣಗಳಾಗಿ ಕೇಸರಿಯ ದಳಗಳೇ ಚದುರಿ ಹೋಗುತ್ತಿದೆ

BJP karnataka: ಬಣ ಬಡಿದಾಟದಲ್ಲಿ ಚದುರಿದ ಕೇಸರಿ ದಳ

Profile Ashok Nayak Jan 25, 2025 1:07 PM

ಧ್ಯಾನ್ ಪೂಣಚ್ಚ

ರಾಜ್ಯ ಉಸ್ತುವಾರಿ ವಿರುದ್ಧ ವರಿಷ್ಠರೇ ಅಸಮಾಧಾನ

ರಾಧಾಮೋಹನ್ ನಡೆಗೆ ಜೆ.ಪಿ. ನಡ್ಡಾ ಗರಂ

ರೆಡ್ಡಿ-ರಾಮುಲು ಜಗಳದಲ್ಲಿ ವರಿಷ್ಠರ ಎಂಟ್ರಿ

ಬಿವೈವಿ ಮತ್ತೆ ದೆಹಲಿಗೆ

ಶ್ರೀರಾಮುಲುಗೆ ಆಹ್ವಾನವಿತ್ತಿಲ್ಲ ಎಂದ ಡಿಕೆಶಿ

ಬೆಂಗಳೂರು: ಬಣ ಬಡಿದಾಟದ ನಡುವೆ ಬಿಜೆಪಿ ಒಡೆದಮನೆಯಾಗಿದ್ದು, ಇಲ್ಲಿ ಒಂದೆರಡಲ್ಲ ಹತ್ತಾರು ಬಣಗಳು ಸಕ್ರಿಯವಾಗಿದೆ. ರಾಜ್ಯದೊಳಗಿನ ಪಕ್ಷದ ಸಮಸ್ಯೆ ಬಗೆಹರಿಸಲು ಆಯೋಜನೆ ಗೊಂಡ ಉಸ್ತು ವಾರಿಗಳೇ ಸ್ಥಳೀಯ ನಾಯಕರಿಗೆ ತಲೆನೋವಾಗಿ ವರಿಷ್ಠರಿಂದಲೇ ಛೀಮಾರಿ ಹಾಕಿಸಿಕೊಳ್ಳುವಂತಾಗಿದೆ. ಈ ನಡುವೆ ರಾಜ್ಯಾಧ್ಯಕ್ಷರ ಬದಲಾವಣೆ ಹಿಂದೆ ನಡೆಯುತ್ತಿರುವ ಘಟನೆ ಗಳಿಂದ ಕಾರ್ಯಕರ್ತರ ಸ್ಥಿತಿ ಗೊಂದಲದ ಗೂಡಾಗಿದೆ.

ಪಕ್ಷದ ರಾಜ್ಯಾಧ್ಯಕ್ಷರ ನೇಮಕದಿಂದಲೇ ಆರಂಭವಾದ ಬಿರುಗಾಳಿ ನಂತರ ಪ್ರತಿಪಕ್ಷ ನಾಯಕ ಆಯ್ಕೆಗೆ ತಟ್ಟಿ ನಂತರ ರಾಜ್ಯಾಧ್ಯಕ್ಷರ ಬದಲಾವಣೆ, ಪ್ರತಿಪಕ್ಷ ಸ್ಥಾನದ ಬದಲಾವಣೆಯ ಕೂಗಿ ನಿಂದ ಹಿಡಿದಲ್ಲಿಂದ ಆರಂಭವಾದ ಎರಡು ಬಣ, ಹೋಳಾಗಿ, ಆ ಬಣಗಳನ್ನು ವಹಿಸಿಕೊಳ್ಳಲು ಒಳಬಣ ಗಳಾಗಿ, ತಟಸ್ಥ ಬಣ ಎಂದುಕೊಂಡರೂ ಸಂಘ ಪರಿವಾರದ ಮಗದೊಂದು ತಂಡವಾಗಿ, ಈಗ ಮಾಜಿಗಳ ಬಣ, ಅದರಲ್ಲಿ ಜಾತಿ ಬಣ, ಸಂಸದರ ಬಣ ಅದರಲ್ಲೂ ಮಾಜಿ ಸಂಸದರೊಂದು ಒಳ ಬಣ, ಬೆಂಗಳೂರು ಬಣ, ಮಂಗಳೂರು ಬಣ, ಉತ್ತರ ಭಾಗದ್ದೇ ನಾಲ್ಕೈದು ಬಣಗಳಾಗಿ ಕೇಸರಿಯ ದಳಗಳೇ ಚದುರಿ ಹೋಗುತ್ತಿದೆ.

ಇದನ್ನೂ ಓದಿ: BJP Protest: ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ನ್ಯಾಯ ಕೊಡಿಸುವವರೆಗೆ ಬಿಜೆಪಿ ವಿರಮಿಸುವುದಿಲ್ಲ: ಆರ್.ಅಶೋಕ್

ತೀವ್ರಗೊಂಡ ಒಳಬೇಗುದಿ: ಪಕ್ಷದ ರಾಜ್ಯಾಧ್ಯಕ್ಷ ನೇಮಕದಿಂದ ಆರಂಭವಾದ ಅಸಹನೆ ನಂತರ ಪ್ರತಿಪಕ್ಷದ ನಾಯಕರ ಆಯ್ಕೆಯ ಸಮಯದ ನಂತರವೂ ಒಳಬೇಗುದಿ ಇದೆ. ಇದಲ್ಲದೆ ಪಕ್ಷದ ಪದಾಧಿಕಾರಿಗಳ ನೇಮಕ ವಿಚಾರದಲ್ಲೂ, ಆನಂತರ ನಡೆದ ವಕ್ ಹೋರಾಟದಲ್ಲೂ ಈ ಒಳ ಬೇಗುದಿ ಮುಂದುವರಿದಿತ್ತು. ಬಸನಗೌಡ ಪಾಟೀಲ್ ಯತ್ನಾಳ್ ಮೊದಲಿಗೆ ರಾಜ್ಯಾಧ್ಯಕ್ಷರ ಬದಲಾ ವಣೆಗೆ ಧ್ವನಿ ಎತ್ತಿದ್ದಲ್ಲದೆ, ನಂತರ ವಕ್ ವಿಚಾರದಲ್ಲಿ ತಾರಕಕ್ಕೇರಿ ಪ್ರತ್ಯೇಕ ಹೋರಾಟವನ್ನೇ ಮಾಡಿದ್ದರು.

ಇದಾದ ನಂತರ ಕೇಂದ್ರದ ನಾಯಕರ ಮಾತಿನಂತೆ ಒಂದಷ್ಟು ದಿನ ಸುಮ್ಮನಾದರೂ, ರಾಜ್ಯಾಧ್ಯಕ್ಷ ರನ್ನೇ ರಮೇಶ್ ಜಾರಕಿಹೊಳಿ ಬಚ್ಚಾ ಎಂದಿದ್ದಲ್ಲದೆ ಇಬ್ಬರ ನಡುವೆ ಮಾತಿನ ಸಮರವಾದರೂ ಕೇಂದ್ರದ ನಾಯಕರಾಗಲಿ, ವರಿಷ್ಠರಾಗಲಿ ಕರೆದು ಮಾತನಾಡಲಿಲ್ಲ. ಸ್ಥಳೀಯವಾಗಿ ಮುಖಂಡರೂ ಕೂಡ ಬಣಜಗಳ ನೋಡಿಕೊಂಡು ಹೋದರೇ ಹೊರತು, ಯಾರ ಬಣದಲ್ಲೂ ಗುರುತಿಸಿಕೊಂಡರೆ ಕಷ್ಟ ಎಂದು ಒಳಗೊಳಗೇ ಸುಮ್ಮನಾದರು.

ಇದು ಕಾರ್ಯಕರ್ತರಲ್ಲಿ ಮತ್ತಷ್ಟು ಸಮಸ್ಯೆ ತಂದೊಡ್ಡಿದೆ. ಇದಾದ ನಂತರ ಪ್ರತಿಪಕ್ಷದ ನಾಯಕರು ಪ್ರಬಲವಾಗಿ ಆಡಳಿತ ಪಕ್ಷದ ವಿರುದ್ಧ ಹೋರಾಡುತ್ತಿಲ್ಲ ಎಂಬ ವಿಚಾರ ಪಕ್ಷ ಹಾಗೂ ಕಾರ್ಯ ಕರ್ತರ ಮಧ್ಯೆ ಇಂದಿಗೂ ಇದೆ. ದೆಹಲಿಗೆ ವಿಜಯೇಂದ್ರ ದೌಡು, ಗರಿಗೆದರಿದ ಕುತೂಹಲ: ಪಕ್ಷದ ಬಣ ಬಡಿದಾಟ ತಾರಕಕ್ಕೇರಿರುವ ಬೆನ್ನಲ್ಲೇ ಬಿ.ವೈ.ವಿಜಯೇಂದ್ರ ದಿಢೀರನೆ ಶುಕ್ರವಾರ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

ಯತ್ನಾಳ್ ಹಾಗೂ ರಾಜ್ಯಾಧ್ಯಕ್ಷರ ಸ್ಥಾನದ ಬಗ್ಗೆ ವರಿಷ್ಠರು ಏನನ್ನೂ ಹೇಳದೆ ಹಾಗೂ ಕ್ರಮ ಕೈಗೊ ಳ್ಳದೆ, ಕೋರ್ ಸಮಿತಿಯಲ್ಲಾದ ಶಿಫಾರಸು ಪಟ್ಟಿ ಕೇಂದ್ರ ಸಮಿತಿಗೆ ಕಳುಹಿಸದೆ, ಹಿರಿಯ ನಾಯಕರ ತಂಡಕ್ಕೆ ಒಪ್ಪಿಸಿರುವುದೇ ಉಸ್ತುವಾರಿಗೆ ಕೂಡ ರಾಜ್ಯಾಧ್ಯಕ್ಷರ ಮೇಲೆ ವಿಶ್ವಾಸವಿಲ್ಲ ಎಂಬ ಸಂದೇಹ ರವಾನೆಯಾಗಿದೆ. ಅಕಸ್ಮಾತ್ ವಿಜಯೇಂದ್ರ ತಂತ್ರದಂತೆ ಚುನಾವಣೆ ನಡೆದರೆ ಜಿಲ್ಲಾಧ್ಯಕ್ಷರು ಹಾಗೂ ಮಂಡಲಕ್ಕೊಬ್ಬ ಪರಿಷತ್ ಸದಸ್ಯರೊಬ್ಬರಿಗೆ ಮತಹಾಕಲು ಅವಕಾಶವಿದೆ.

ಹಾಗಾಗಿ ಅಲ್ಲಿ 39 ಜಿಲ್ಲೆಗಳಲ್ಲಿ ತಮ್ಮ ನಿಷ್ಠರಿಗೆ ಅವಕಾಶ ಕಲ್ಪಿಸಬೇಕಾಗಿದೆ. ತಟಸ್ಥ ಬಣ ಎನ್ನ ಲಾದ ಅಶೋಕ ಹಾಗೂ ಬೊಮ್ಮಾಯಿಯವರ ಲೆಕ್ಕಾಚಾರದಂತೆ ಅಧ್ಯಕ್ಷ ವಿಜಯೇಂದ್ರ ಮುಂದು ವರಿಯುವ ಸಾಧ್ಯತೆ ಊಹಿಸಿದ್ದಾರೆ.

ಹೀಗಿದ್ದರೂ ವಿಜಯೇಂದ್ರ ಮುಂದುವರಿದರೆ ಹಿಡಿತದಲ್ಲಿಟ್ಟುಕೊಳ್ಳಬೇಕು ಎಂಬ ಲೆಕ್ಕಾಚಾರವೂ ಅವರಲ್ಲದೆ. ಈ ಎಲ್ಲ ಲೆಕ್ಕಾಚಾರಗಳ ಮಧ್ಯೆ ಪಕ್ಷದ ಕೆಲವು ರಾಷ್ಟ್ರಿಯ ನಾಯಕರನ್ನು ಭೇಟಿಮಾಡಿ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಲಿzರೆ ಎನ್ನಲಾಗಿದೆ. ಪರಮಾಪ್ತರಾಗಿದ್ದ ಮಾಜಿ ಸಚಿವ ರಾದ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ನಡುವಿನ ಹಾದಿಬೀದಿ ಜಗಳ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಬೀದಿ ರಂಪಾಟದ ನಡುವೆ ವಿಜಯೇಂದ್ರ ದಿಢೀರನೆ ದೆಹಲಿಗೆ ತೆರಳಿರುವುದು ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿದೆ.

ಸಂಘ, ಜೀ ಹಾಗೂ ಬಣ - ಒಳ ಬಣಗಳೆಷ್ಟಿವೆ?

ಬಿಜೆಪಿಯಲ್ಲೀಗ ಬಹಿರಂಗವಾಗಿ ಮೂರು ಬಣ ಎನ್ನಲಾಗುತ್ತಿದ್ದರೂ, ಅಂತರಂಗವಾಗಿ ಹತ್ತಾರು ಬಣಗಳಿದೆ. ತಟಸ್ಥ ಎನ್ನಲಾಗುತ್ತಿರುವ ಬಣವಿದ್ದರೂ ಅವು ಸಂಘ ಪರಿವಾರದ ಬಣ ಎನ್ನಲಾಗು ತ್ತಿದೆ. ಇದೆಲ್ಲದರ ನಡುವೆಯೇ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ದೊಂದು ಬಣವೂ ಸೃಷ್ಟಿಯಾದಂತಿದೆ. ಈ ಮಧ್ಯೆ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆ ಯಿಂದ ಮುಕ್ತಿ ನೀಡಿ ಎಂದು ಸುನಿಲ್ ಕುಮಾರ್ ವರಿಷ್ಠರಿಗೆ ಕೇಳಿಕೊಂಡಿದ್ದರೂ ಅಂತರಂಗದಲ್ಲಿ ಮತ್ತೊಂದು ಕರಾವಳಿ ಬಣ ಸೃಷ್ಟಿಯಾದಂತಿದೆ. ಉಳಿದಂತೆ ಸಂಸದರಾದ ಬಿ.ವೈ.ರಾಘವೇಂದ್ರ, ಯದುವೀರ್, ಬ್ರಿಜೇಶ್ ಚೌಟಅವರು ತಟಸ್ಥರಾದವರಂತೆ ಕಾಣುತ್ತಿದ್ದಾರೆ. ಸಚಿವರಾದ ಪ್ರಲ್ಹಾದ್ ಜೋಶಿ ಕೇಂದ್ರದ ಆಣತಿಯಂತೆ ನಡೆಯುತ್ತಿದ್ದರೂ, ಸಂಸದ ಜಗದೀಶ್ ಶೆಟ್ಟರ್ ಅವರ ಬಣದಲ್ಲಿ ದ್ದಾರೆ. ಸಂಸದ ಬಸವರಾಜ ಬೊಮ್ಮಾಯಿ

ಸೇರಿದಂತೆ ಹಲವು ಸಂಸದರೂ ತಮ್ಮದೊಂದು ಬಣ ಸೃಷ್ಟಿಸಿಕೊಂಡಿದ್ದಾರೆ. ಇದರೊಂದಿಗೆ ಮಾಜಿ ಸಂಸದರೂ ಕೂಡ ಅಲ್ಲಲ್ಲಿ ಕಾಣಿಸಿಕೊಂಡು ಒಳಬಣವೊಂದಾಗಿದೆ. ಬೆಂಗಳೂರಿನಲ್ಲಿ ಅಶೋಕ ದೊಂದು ಬಣವಾದರೆ ಅಶ್ವತ್ಥ ನಾರಾಯಣರದ್ದೊಂದು ಒಳಬಣವಿದೆ ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ ಎನ್ನುವುದು ಕಾರ್ಯಕರ್ತರ ಮಾತಾಗಿದೆ.

ವರಿಷ್ಠರ ಅಸಮಾಧಾನ

ಜಿಲ್ಲಾಧ್ಯಕ್ಷರ ನೇಮಕ ಸಂಬಂಧ ಸಭೆಯಲ್ಲಿ ತೀವ್ರ ಗೊಂದಲಗಳು ಮೂಡಿವೆ. ಪ್ರಮುಖವಾಗಿ 39 ಜಿಲ್ಲಾಧ್ಯಕ್ಷರ ನೇಮದಲ್ಲಿ 23 ಜಿಲ್ಲಾಧ್ಯಕ್ಷರ ನೇಮಕ ಸರಿಯಾಗಿಲ್ಲ. ರಾಜ್ಯಾಧ್ಯಕ್ಷರ ಬಣದ ಪರವಾ ಗಿದೆ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಬೆಂಗಳೂರು ಉತ್ತರ, ದಕ್ಷಿಣ, ಕೇಂದ್ರ, ತುಮಕೂರು, ಚಿತ್ರದುರ್ಗ, ಯಾದಗಿರಿ, ಗದಗ ಸೇರಿದಂತೆ 9 ಜಿಲ್ಲೆಗಳ ಅಧ್ಯಕ್ಷರ ಬದಲಾವಣೆ ಆಗಲೇಬೇಕು ಎಂದು ಪಟ್ಟು ಹಿಡಿಯಲಾಗಿದೆ.

ಹೀಗಾಗಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾಡಿದ್ದ ಪಟ್ಟಿಗೆ ಅಷ್ಟಾಗಿ ವಿಶ್ವಾಸವಿಲ್ಲದಂತಾಗಿದೆ. ಈ ಸಂಬಂಧ ಹಿರಿಯರಿಗೆ ಪಟ್ಟಿ ಮಾಡುವ ಜವಾಬ್ದಾರಿ ಉಸ್ತುವಾರಿಗಳು ವಹಿಸಿದ್ದರು. ಇದಕ್ಕೂ ಕೂಡ ಆಕ್ಷೇಪ ವ್ಯಕ್ತವಾಗಿದೆ. ಉಸ್ತುವಾರಿಗಳು ಹೇಳಿದಂತೆ ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಅವರ ನಿವಾಸದಲ್ಲಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವರು ಬುಧವಾರ ಚರ್ಚೆ ನಡೆಸಿದ್ದಾರೆ. ಜಿಲ್ಲಾಧ್ಯಕ್ಷರ ನೇಮಕದಲ್ಲಿ ಈ ಎಲ್ಲವೂ 4 ಪರಿಗಣಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಉಸ್ತುವಾರಿಗಳೇ ಹೊರೆ!

ಬಿಜೆಪಿಯ ಆಂತರಿಕ ಸಮಸ್ಯೆ ಬಗೆಹರಿಸಬೇಕಿದ್ದ ಕೋರ್ ಕಮಿಟಿ ಸಭೆಯೇ ಕೇಂದ್ರಕ್ಕೂ ಹಾಗೂ ರಾಜ್ಯದ ಕೆಲ ನಾಯಕರಿಗೂ ಹೊರೆಯಾದಂತಿದೆ. ಪಕ್ಷ ಸಂಘಟನೆ ಕೋರ್ ಕಮಿಟಿ ಸಭೆಯಲ್ಲಿ ಪಕ್ಷದ ಪ್ರಮುಖ ನಾಯಕ ಶ್ರೀರಾಮುಲು ತಮ್ಮ ಮೇಲಿನ ಆರೋಪದಿಂದಾಗಿ ಪಕ್ಷ ಬಿಡುವ ಮಾತ ನಾಡಿದ್ದರು. ಇದಾಗಿ ಅಲ್ಲೊಂದು ಬಣಸೃಷ್ಟಿಯಾಗಿ ಆಪ್ತಮಿತ್ರರಂತಿದ್ದ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ನಡುವೆ ಸಾರ್ವಜನಿಕವಾಗಿ ಮಾತಿನ ಸಮರ ಮುಂದುವರಿದಿದೆ.

ಇದು ಪಕ್ಷಕ್ಕೆ ಆದ ಮತ್ತೊಂದು ಹಿನ್ನಡೆ. ಇದೇ ವೇಳೆಯಲ್ಲಿ ರಾಜ್ಯದ ಸಮಸ್ಯೆ ಬಗೆಹರಿಸಬೇಕಿದ್ದ ಉಸ್ತುವಾರಿ ರಾಧಾಮೋಹನ್‌ದಾಸ್ ಅಗರವಾಲ್ ಅವರ ನಡೆಯಿಂದ ಸಂಘಟನೆಗೆ ಸಮಸ್ಯೆ ಯಾಗಿದೆ. ದಾಸ್ ಅವರ ಈ ನಡೆಗೆ ಸ್ವತಃ ಬಿಜೆಪಿ ವರಿಷ್ಠರು ತೀವ್ರ ಅಕ್ಷೇಪ ವ್ಯಕ್ತಪಡಿಸಿದ್ದಾರೆ. ಕೋರ್ ಕಮಿಟಿ ಸಭೆಯಲ್ಲಿ ಬಗೆಹರಿಯಬೇಕಿದ್ದ ಹಾಗೂ ಅದರ ವರದಿ ಕೇಂದ್ರಕ್ಕೆ ಸಲ್ಲಿಸಬೇಕಿದ್ದ ಉಸ್ತು ವಾರಿಗಳು ಮತ್ತದೇ ಸಮಸ್ಯೆಯನ್ನು ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ಸರಿಮಾಡಲು ತಿಳಿಸಿರು ವುದು ಮತ್ತೊಂದು ಬಣ ಸೃಷ್ಟಿಯಾಗಲು ಕಾರಣವಾಗಿದೆ. ಕೋರ್ ಕಮಿಟಿಯಲ್ಲಿ ನಡೆದ ಸಂಘ ಟನಾ ಪರ್ವದ ವರದಿಯನ್ನು ಕೇಂದ್ರ ಸಮಿತಿಗೆ ಕಳುಹಿಸದಿರುವುದು, ರಾಜ್ಯಾಧ್ಯಕ್ಷರ ಮೇಲೆ ಉಸ್ತು ವಾರಿಗಳಿಗೆ ವಿಶ್ವಾಸವಿಲ್ಲದಿರುವುದು ಹಾಗೂ ಜಿಲ್ಲಾಧ್ಯಕ್ಷರ ವಿಚಾರವನ್ನು ಮಾಜಿ ಸಿಎಂಗಳಿಗೆ ವಹಿಸಿರುವುದು ಹಾಗೂ ಕೋರ್ ಕಮಿಟಿಯಲ್ಲಿ ನಡೆದ ಶ್ರೀರಾಮುಲು ಘಟನೆಯೂ ಕೂಡ ವರಿಷ್ಠರ ಕೆಂಗಣ್ಣಿಗೆ ಕಾರಣವಾಗಿದೆ.

ಉಸ್ತುವಾರಿಗಳ ದ್ವಂದ್ವ ಹಾಗೂ ಗೊಂದಲಕಾರಿ ನಡೆಯ ಬಗ್ಗೆ ರಾಷ್ಟ್ರಾಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇದೆಲ್ಲದರ ನಡುವೆಯೇ ಶ್ರೀರಾಮುಲುಗೆ ಸ್ವತಃ ಜೆ.ಪಿ.ನಡ್ಡಾ ಕರೆ ಮಾಡಿರುವುದು ಹಾಗೂ ಬಿ.ವೈ.ವಿಜಯೇಂದ್ರ ದೆಹಲಿಯತ್ತ ಮುಖ ಮಾಡಿರುವುದು ಕುತೂಹಲ ಮೂಡಿಸಿದೆ.