Minister Vijayanand Kashappanavar Interview: ಜಯಮೃತ್ಯುಂಜಯ ಕಂಡಕಂಡಲ್ಲಿ ಮಲಗುವ ಟೂರಿಂಗ್ ಟಾಕೀಸ್!
ರಾಜ್ಯದ ಬಿಜೆಪಿ ಸಂಸದರಿಗೆ ಪ್ರಧಾನಿ ಮೋದಿ ಎದುರು ನಿಂತು ಮಾತನಾಡುವ ಧಮ್ ಇಲ್ಲ ಎಂದು ಗೇಲಿ ಮಾಡಿರುವ ಸಚಿವ ವಿಜಯಾನಂದ ಕಾಶಪ್ಪನವರ್, ಎಸ್ಐಆರ್ ಮೂಲಕ ವೋಟ್ ಚೋರಿ ಮಾಡಿ ಗೆಲ್ಲುವ ಮೋದಿ ಕುತಂತ್ರ ಯಶಸ್ವಿ ಆಗುವುದಿಲ್ಲ ಎಂದು ಟೀಕಿಸಿದ್ದಾರೆ. ಪಂಚಮಸಾಲಿ ಮೀಸಲಿಗೆ ಸಂಬಂಧಿಸಿದಂತೆ ಬಸವಜಯ ಮೃತ್ಯುಂಜಯ ಸ್ವಾಮೀಜಿಯನ್ನು ಢೋಂಗಿ ಸನ್ಯಾಸಿ, ಕಂಡಕಂಡಲ್ಲಿ ಮಲಗುವ ಟೂರಿಂಗ್ ಟಾಕೀಸ್ ಎಂದು ಜರಿದಿದ್ದಾರೆ
-
ಸಂದರ್ಶನ: ಚಿದಾನಂದ ರುದ್ರಾಪುರಮಠ
ರಾಜ್ಯದ ಬಿಜೆಪಿ ಸಂಸದರಿಗೆ ಪ್ರಧಾನಿ ಮೋದಿ ಎದುರು ನಿಂತು ಮಾತನಾಡುವ ಧಮ್ ಇಲ್ಲ ಎಂದು ಗೇಲಿ ಮಾಡಿರುವ ಸಚಿವ ವಿಜಯಾನಂದ ಕಾಶಪ್ಪನವರ್(Vijayanand Kashappanavar), ಎಸ್ಐಆರ್ ಮೂಲಕ ವೋಟ್ ಚೋರಿ ಮಾಡಿ ಗೆಲ್ಲುವ ಮೋದಿ ಕುತಂತ್ರ ಯಶಸ್ವಿ ಆಗುವುದಿಲ್ಲ ಎಂದು ಟೀಕಿಸಿದ್ದಾರೆ. ಪಂಚಮಸಾಲಿ ಮೀಸಲಿಗೆ ಸಂಬಂಧಿಸಿದಂತೆ ಬಸವಜಯ ಮೃತ್ಯುಂಜಯ ಸ್ವಾಮೀಜಿಯನ್ನು ಢೋಂಗಿ ಸನ್ಯಾಸಿ, ಕಂಡಕಂಡಲ್ಲಿ ಮಲಗುವ ಟೂರಿಂಗ್ ಟಾಕೀಸ್ ಎಂದು ಜರಿದಿದ್ದಾರೆ. ಬಿಜೆಪಿಯ ಬಂಡಾಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧವೂ ಪ್ರಹಾರ ಮಾಡಿzರೆ. ಸಚಿವರಾದ ಬಳಿಕ ವಿಶ್ವವಾಣಿ ಟಿವಿಗೆ ಮೊದಲ ಸಂದರ್ಶನ ನೀಡಿರುವ ವಿಜಯಾನಂದ ಕಾಶಪ್ಪನವರ್, ಹಲವು ವಿಷಯಗಳ ಕುರಿತು ಆಕ್ರಮಣಕಾರಿ ಯಾಗಿ ಮಾತನಾಡಿದ್ದಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ.
ಸ್ವಾಮೀಜಿಯ ಡಬಲ್ ಗೇಮ್!
ಜಯಮೃತ್ಯುಂಜಯ ಸ್ವಾಮೀಜಿ ಮಠದಲ್ಲಿ ಇರುತ್ತಿರಲಿಲ್ಲ. ಕಂಡಕಂಡಲ್ಲಿ ಮಲಗೋದೇ ಅಭ್ಯಾಸ. ಈ ಸ್ವಾಮೀಜಿ ಟೂರಿಂಗ್ ಟಾಕೀಸ್ ಇದ್ದ ಹಾಗೆ. ಮಠಾಧೀಶರ ಕೆಲಸ ಮಾಡೋದು ಬಿಟ್ಟು ಹಳ್ಳಿ ಹಳ್ಳಿಗೆ ಹೋಗಿ ಭಾಷಣ ಬಿಗಿಯೋದು, ಅದರ ವಿಡಿಯೊ ಫೇಸ್ಬುಕ್, ವ್ಯಾಟ್ಸಾಪ್ನಲ್ಲಿ ಹಾಕೋದೇ ಇವರ ಕೆಲಸ. ಬಿಜೆಪಿಯಿಂದ ಉಚ್ಚಾಟಿತರಾಗಿರುವ ಬಸನ ಗೌಡ ಪಾಟೀಲ್ ಯತ್ನಾಳ್ ಈ ಸ್ವಾಮೀಜಿಯನ್ನು ತನ್ನ ಹಿಂದೆ ಕರೆದುಕೊಂಡು ಅಡ್ಡಾಡುತ್ತಿದ್ದ. ಇವರಿಬ್ಬರು ಸೇರಿ ಈಗ ಕಾಂಗ್ರೆಸ್ ಲಿಂಗಾಯತ ವಿರೋಧಿ ಸರಕಾರ ಎಂದು ವಿನಾ ಕಾರಣ ಆರೋಪ ಮಾಡುತ್ತಿದ್ದಾರೆ. ಲಿಂಗಾಯತ ರಿಗಾಗಿ ನಾವು ಕಾನೂನಾತ್ಮಕವಾಗಿ ಹೋರಾಟ ನಡೆಸಿದ್ದೇವೆ. ಸಿಎಂ ಡಿ.ಕೆ.ಶಿವಕುಮಾರ್ ಅವರಿಗೂ ಈ ಬಗ್ಗೆ ಮಾಹಿತಿ ಇದೆ. ಪ್ರಾಮಾಣಿಕವಾಗಿ ಸಮುದಾಯಕ್ಕೆ ನ್ಯಾಯ ಕೊಡಿಸುತ್ತೇವೆ.
ನಮ್ಮ ಜಿಲ್ಲೆಯವರಿಗೇ ಅಸೂಯೆ
ನಾನು ಸಚಿವ ಆಗಿದ್ದಕ್ಕೆ ನಮ್ಮ ಜಿಲ್ಲೆಯ ಕೆಲವು ನಾಯಕರೇ ಅಸೂಯೆಪಟ್ಟರು. ನಾನು ಸಚಿವ ನಾದ ನಂತರ ನನ್ನ ವಿರುದ್ಧ ಬಂದ ಆಡಿಯೊ ನಮ್ಮ ಜಿಲ್ಲೆಯ ನಾಯಕರದ್ದೇ. ಅದನ್ನು ಅವರು ಸುಳ್ಳು ಮಾಡಲು ಆಗಲ್ಲ. ಆದರೆ ನಾನು ಅವರಿಗೆ ಹೇಳೋದು ಒಂದೇ ಮಾತು, ನೀವು ಸಚಿವ ರಾದಾಗ ನಾನು ಅಸೂಯೆ ಪಟ್ಟಿಲ್ಲ, ದ್ವೇಷದ ರಾಜಕಾರಣ ಮಾಡಿಲ್ಲ. ಇದೀಗ ನಾನು ಸಚಿವ ನಾಗಿದ್ದೇನೆ, ಸಹಕಾರ ಕೊಡಿ ಎಂದು ಅವರ ಮನೆ ಬಾಗಿಲಿಗೆ ಹೋಗಿ ಕೇಳಿದ್ದೇನೆ. ಅವರು ನನ್ನ ವಿರುದ್ಧ ಏನೇ ಮಾಡಿದರೂ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡುತ್ತಿದ್ದೇನೆ.
ಇದನ್ನೂ ಓದಿ: MLA Ashok Kumar Rai Interview: ಪಕ್ಷ ರಾಜಕೀಯ ಮೀರಿ ಪುತ್ತೂರಿನ ಅಭಿವೃದ್ದಿಗೆ ಪಣ
ದೊಡ್ಡನಗೌಡ ಪಾಟೀಲ್ ಒಬ್ಬ ಸ್ಯಾಡಿಸ್ಟ್
ಹುನಗುಂದ ಕ್ಷೇತ್ರದ ಮಾಜಿ ಶಾಸಕ ದೊಡ್ಡನ ಗೌಡ ಪಾಟೀಲ್ ಒಬ್ಬ ಸ್ಯಾಡಿ. ಅವನ ವಿರುದ್ಧ ನಾನು ಎರಡು ಬಾರಿ ಗೆದ್ದಿದ್ದೇನೆ. ನನ್ನ ವಿರುದ್ಧ ಅವನು ಎರಡು ಬಾರಿ ಗೆದ್ದಿದ್ದಾನೆ. ಆತ ಅಸೂಯೆ, ವಿಷ ತುಂಬಿದ ಹಾವು. ಅವನೊಬ್ಬ ಜನಪ್ರತಿನಿಧಿಯೇ ಅಲ್ಲ. ಬೇರೆ ಜಿಲ್ಲೆಯಿಂದ ಬಂದು ನಮ್ಮ ಜಿಲ್ಲೆಯಲ್ಲಿ ರಾಜಕಾರಣ ಮಾಡ್ತಿದ್ದಾನೆ.
ಬ್ರಿಟಿಷರು ಬಂದಂತೆ ನಮ್ಮ ಜಿಲ್ಲೆಗೆ ವ್ಯಾಪಾರಕ್ಕಾಗಿ ಬಂದವನು. ನಾನು ರಾಜಕಾರಣದ ಮನೆತನದಿಂದ ಬಂದವನು. 2004ರಲ್ಲಿ ಯಡಿ ಯೂರಪ್ಪ ಅವರ ಗಾಳಿಯಲ್ಲಿ ಗೆದ್ದು ಬಂದವನು ಅವನು. ಆದರೆ ನನ್ನನ್ನು ಗಾಳಿಯಲ್ಲಿ ಗೆದ್ದು ಬಂದಿದ್ದೇನೆ ಎಂದು ಆರೋಪ ಮಾಡುತ್ತಿzನೆ. ಆತ ಎರಡು ಬಾರಿ ಶಾಸಕನಾಗಿ ಏನು ಅಭಿವೃದ್ಧಿ ಮಾಡಿದ್ದಾನೆ ತೋರಿಸಲಿ. ನಮ್ಮ ತಂದೆ ಮಾಡಿದ ಕೆಲಸವನ್ನು ತಾನು ಮಾಡಿದ್ದೇನೆ ಎಂದು ಹೇಳಿಕೊಂಡು ಅಡ್ಡಾಡುತ್ತಾನೆ.
ಪಂಚಮಸಾಲಿಗಳಿಗೆ 2ಎ ಮೀಸಲಾತಿ ಯಾವಾಗ?
ಪಂಚಮಸಾಲಿ ಸಮುದಾಯದ ಮೀಸಲಾತಿ ಬೇಡಿಕೆ ಬಹಳ ವರ್ಷಗಳಿಂದ ಚರ್ಚೆಯಲ್ಲಿದೆ. ಈ ವಿಚಾರದಲ್ಲಿ ಎಲ್ಲರಿಗೂ ನ್ಯಾಯ ದೊರೆಯುವಂತಹ ಪರಿಹಾರ ಅಗತ್ಯ. ಹಿಂದಿನ ಬಿಜೆಪಿ ಸರಕಾರ 2ಸಿ ಮತ್ತು 2ಡಿ ಪ್ರವರ್ಗಗಳನ್ನು ಅವಸರದಲ್ಲಿ ಸೃಷ್ಟಿಸಿತ್ತು. ಮೀಸಲಾತಿ ವಿಚಾರದಲ್ಲಿ ಸಂವಿಧಾನಾತ್ಮಕವಾಗಿ ಮತ್ತು ಕಾನೂನುಬದ್ಧವಾಗಿ ಪರಿಹಾರ ಕಂಡುಕೊಳ್ಳಲು ನಮ್ಮ ಸರಕಾರ ಬದ್ಧವಾಗಿದೆ. ಸಮುದಾಯದ ಭಾವನೆಗಳಿಗೆ ಗೌರವ ನೀಡುವುದರ ಜತೆಗೆ ಕಾನೂನಿನ ಚೌಕಟ್ಟಿನಲ್ಲಿ ನಿರ್ಧಾರ ಕೈಗೊಳ್ಳಬೇಕಿದೆ. ಬಿಜೆಪಿ ಸರಕಾರ 2ಸಿ ಮತ್ತು 2ಡಿ ಪ್ರವರ್ಗಗಳನ್ನು ನೀಡಿದಾಗ ಬೆಂಗಳೂರಿನಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸ್ವಾಗತ ಮಾಡಿದರು. ನಾನು ಅವರ ಕೈಯಲ್ಲಿರುವ ಮೈಕ್ ಕಿತ್ತುಕೊಂಡು ಇದಕ್ಕೆ ವಿರೋಧ ಮಾಡಿದೆ. ನಾವು ಕಿತ್ತುಕೊಂಡು ತಿನ್ನುವ ಸಮುದಾಯದಲ್ಲಿ ಹುಟ್ಟಿಲ್ಲ, ಒಕ್ಕಲಿಗರ ಮತ್ತು ಅಲ್ಪಸಂಖ್ಯಾ ತರ ಮೀಸಲಾತಿಯನ್ನು ಕಿತ್ತು ನಮಗೆ ಕೊಡುವುದು ಬೇಡ ಎಂದು ವಿರೋಧ ಮಾಡಿದೆ. ನಮ್ಮ ಹೋರಾಟದಲ್ಲಿ ಕ್ಷಣಕ್ಷಣಕ್ಕೂ ಗುರುತಿಸಿಕೊಂಡ ಈ ಸ್ವಾಮೀಜಿ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ನಮ್ಮ ಸಮುದಾಯಕ್ಕೆ ಮೋಸ ಮಾಡಿದರು. ಮೀಸಲಾತಿ ವಿಷಯ ಸುಪ್ರೀಂ ಕೋರ್ಟ್ ಅಂಗಳ ದಲ್ಲಿದೆ. ಈ ಬಗ್ಗೆ ಕೇಂದ್ರದ ವಿರುದ್ಧ ದ್ವನಿ ಎತ್ತಲು ಬಿಜೆಪಿ ಸಂಸದರಿಗೆ ಧೈರ್ಯವಿಲ್ಲ.
ಬಿಜೆಪಿ ಸಂಸದರು ಗಂಡಸರೇ ಅಲ್ಲ!
ವಾಸ್ತವವಾಗಿ ಕೆಪಿಎಸ್ಸಿ ಕರ್ಮಕಾಂಡ ಬಿಜೆಪಿ ಸರಕಾರದ್ದು. ಕರ್ನಾಟಕವನ್ನು ಭ್ರಷ್ಟ ರಾಜ್ಯ ವನ್ನಾಗಿ ಮಾಡಿದ್ದು ಬಿಜೆಪಿ. ಇವರದ್ದು ನಲವತ್ತು ಪರ್ಸೆಂಟ್ ಸರಕಾರ. ನಮ್ಮ ಸರಕಾರದಲ್ಲಿ ಒಬ್ಬನೇ ಒಬ್ಬ ಮುಖ್ಯಮಂತ್ರಿ ಜೈಲಿಗೆ ಹೋಗಲಿಲ್ಲ. ಯಡಿಯೂರಪ್ಪ ಜೈಲು ಕಂಡು ಬಂದರು. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲ್ಲ. ನಮ್ಮ ಖಜಾನೆ ಖಾಲಿಯಾಗಿದೆ ಎಂದು ಡಬ್ಬಿ ಬಾರಿಸುತ್ತಾರೆ. ಈ ಬಿಜೆಪಿ ಸಂಸದರು ನರೇಂದ್ರ ಮೋದಿ ಮುಂದೆ ಹೋಗಿ ರೈತರ ಸಾಲ ಮನ್ನಾ ಮಾಡಿಸಲಿ. ನಮ್ಮ ಬಿಜೆಪಿ ಸಂಸದರು ಗಂಡಸರಾಗಿದ್ದರೇ ಮೋದಿ ಮುಂದೆ ಮಾತನಾಡಲಿ. ಯಡಿಯೂರಪ್ಪ, ಅಶೋಕ್ ಮತ್ತು ಬಿಜೆಪಿ ಸಂಸದರು ಮೋದಿ ಎದುರು ಹೋಗಿ ದೇಶದ ರೈತರ ಸಾಲಮನ್ನಾ ಮಾಡಲಿ ಅಂತ ಒತ್ತಾಯ ಮಾಡಲಿ. ಸೂಟು ಬೂಟು ಹಾಕ್ಕೊಂಡು ಮೋದಿ ಕೈಬೀಸಿ ಹೋಗಿಬಿಟ್ರೆ ಸಮಸ್ಯೆ ಬಗೆಹರಿಯುತ್ತಾ? ಈ ಬಿಜೆಪಿಗರ ಉದ್ದೇಶ ಹಿಂಬಾಗಿಲಿನಿಂದ ಬರಬೇಕು, ಅಧಿಕಾರ ಹಿಡಿಯಬೇಕು ಅನ್ನೋದು. ಇವರು ರೈತರ ಪರ ಇಲ್ಲ, ಮಹಿಳೆಯರ ಪರ ಇಲ್ಲ, ಬಡವರ ಪರ ಇಲ್ಲ. ತಾಕತ್ತಿದ್ದರೆ 2028ಕ್ಕೆ ಅಧಿಕಾರಕ್ಕೆ ಬರಲಿ ನೋಡೋಣ.
ಮೋದಿಗೆ ಬಂದಿದೆ ಕುತ್ತು!
ನರೇಂದ್ರ ಮೋದಿಗೆ ಈಗ ಬಂದಿದೆ ನೋಡಿ ಕುತ್ತು. 2024ರಲ್ಲಿ ಎಷ್ಟು ಸೀಟ್ ಬಂತು ಬಿಜೆಪಿಗೆ? ಕಾಂಗ್ರೆಸ್ ಒಂದು ಸಿಂಹವಿದ್ದಂತೆ. ಅದು ಎದ್ದರೂ ನಿಂತರೂ ಸಿಂಹವೇ. ಎಸ್ಐಆರ್ ಮೂಲಕ ವೋಟ್ ಚೋರಿ ಮಾಡಿ ಮುಂದಿನ ಚುನಾವಣೆಯಲ್ಲೂ ಗೆಲ್ಲುವ ಹುನ್ನಾರ ಮಾಡಿದ್ದಾರೆ ಮೋದಿ. ಈ ವಿಜಯೇಂದ್ರಗೆ ಇನ್ನೂ ಬುದ್ಧಿನೇ ಬೆಳೆದಿಲ್ಲ. ವೋಟ್ ಕದ್ದು ಗೆದು ಬೇಡ. ಇದು ನಾಚಿಕೆಗೇಡಿನ ಕೆಲಸ. ಹಿಂದುಳಿದ ವರ್ಗದವರ ಮತಗಳನ್ನು ಕಡಿಮೆ ಮಾಡುವುದು ಬಿಜೆಪಿಯ ಪ್ಲಾನ್. ಇದು ಸಾಧ್ಯವಾಗುವುದಿಲ್ಲ. ಕಾಂಗ್ರೆಸ್ ಗಟ್ಟಿಯಾಗಿದೆ, ಕಾಂಗ್ರೆಸ್ ಅಸ್ತಿತ್ವದಲ್ಲಿದೆ. 2029ಕ್ಕೆ ರಾಹುಲ್ ಗಾಂಧಿ ಪ್ರಧಾನಿ ಆಗಿಯೇ ಆಗುತ್ತಾರೆ. ಇದು ನನ್ನ ಗ್ಯಾರಂಟಿ!