ಈ ಬದ್ಧತೆ ಎಂದೂ ʼಭದ್ರʼ
ಮಾರ್ಗ ಭಿನ್ನ ಅಷ್ಟೇ, ಸಮಾನ ಅವಕಾಶಗಳಿರುವ ಸಮಾನತೆ, ಸ್ವಾತಂತ್ರ್ಯ ಹಾಗೂ ಶೋಷಣೆರಹಿತ ಸಮಾಜದ ರಚನೆಯೇ ಈ ಎಲ್ಲಾ ವಿಚಾರಗಳ, ವಾದಗಳ, ಪ್ರತಿಪಾದನೆಗಳ ಹಾಗೂ ಸಿದ್ಧಾಂತಗಳ ಮೂಲ ಗುರಿ ಹಾಗೂ ಸಂದೇಶ. ಇಂತಹ ವೈಚಾರಿಕ ಸಂಘರ್ಷಗಳ ಕಾಲದಲ್ಲಿ ಕಣ್ಣು ಬಿಟ್ಟ ಕೂಸು ಎಸ್.ಬಂಗಾರಪ್ಪ. ಅವರು ಬೆಳೆದರು. ಬೆಳೆಯುತ್ತಲೇ ಬಂದರು.
-
ಎಸ್.ವಿ.ಜಯಶೀಲರಾವ್, ಹಿರಿಯ ಪತ್ರಕರ್ತರು
ಸಮಾಜದ ಕಟ್ಟ ಕಡೆಯವರಿಗೆ ಮೊಟ್ಟ ಮೊದಲ ಸ್ಥಾನ... ಇದು ಪ್ರಸಿದ್ಧ ಪತ್ರಕರ್ತ ಲೋಹಿಯಾ ವಾದಿ, ವಿನೋಬಾ ಬಾವೆ ಅವರ ಸರ್ವೋದಯದ ಜೀವದಾನಿ ದಿವಂಗತ ಖಾದ್ರಿ ಶಾಮಣ್ಣ ಅವರು ಭಾವ ಪರವಶರಾಗಿ ಹೇಳುತ್ತಿದ್ದ ಮಾತು. ಕೇವಲ ಮಾತಲ್ಲ. ಕೂಗುತ್ತಿದ್ದ ಘೋಷಣೆ.
ಪ್ರಾಚೀನ ಕಾಲದಿಂದಲೂ ಭಾರತದ ಜನತೆಯ ಆದರ್ಶವಾಗಿರುವ ‘ಸರ್ವೇಜನಾಃ ಸುಖಿನೋ ಭವಂತು’, ರಾಜ ಮಹಾರಾಜರ ಧರ್ಮ ಆಡಳಿತ, ಕಾರ್ಲ್ ಮಾರ್ಕ್ಸ್ ಸಮಾಜವಾದ, ಜಯಪ್ರಕಾಶ್ ನಾರಾಯಣ್ ಹಾಗೂ ಡಾ|| ರಾಮಮನೋಹರ ಲೋಹಿಯಾ ಅವರ ಸಮಾಜವಾದ, ಮಹಾತ್ಮಾ ಗಾಂಧಿ ಅವರ ರಾಮರಾಜ್ಯ ವಿನೋಬಾ ಬಾವೆ ಅವರ ಸರ್ವೋ ದಯ, ವಿಕಾಸಗೊಂಡ ಪ್ರಜಾ ಪ್ರಭುತ್ವ ಪದ್ಧತಿ, ಭಾರತದ ಬಂಧ ವಿಮೋಚನೆಗಾಗಿ ಗಾಂಧಿ ನಾಯಕತ್ವದಲ್ಲಿ ನಡೆದ ಅಹಿಂಸಾತ್ಮಕ ಚಳವಳಿ, ಸ್ವಾತಂತ್ರ್ಯ ಬಂದ ನಂತರ, ಸಮಾಜದ ನಿರ್ಮಾ ಣಕ್ಕಾಗಿ ಭಾರತದ ಜನತೆ ರೂಪಿಸಿಕೊಂಡಿರುವ ಸಂವಿಧಾನ ಇವೆಲ್ಲ ಹಾಗೂ ಇವೆಲ್ಲದರ ಆದರ್ಶ, ಸಂದೇಶ ಒಂದೇ.
ಇದನ್ನೂ ಓದಿ: Madhu Bangarappa: ಈ ವರ್ಷ 1008 ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ಆರಂಭ: ಮಧು ಬಂಗಾರಪ್ಪ
ಮಾರ್ಗ ಭಿನ್ನ ಅಷ್ಟೇ, ಸಮಾನ ಅವಕಾಶಗಳಿರುವ ಸಮಾನತೆ, ಸ್ವಾತಂತ್ರ್ಯ ಹಾಗೂ ಶೋಷಣೆರಹಿತ ಸಮಾಜದ ರಚನೆಯೇ ಈ ಎಲ್ಲಾ ವಿಚಾರಗಳ, ವಾದಗಳ, ಪ್ರತಿಪಾದನೆಗಳ ಹಾಗೂ ಸಿದ್ಧಾಂತಗಳ ಮೂಲ ಗುರಿ ಹಾಗೂ ಸಂದೇಶ. ಇಂತಹ ವೈಚಾರಿಕ ಸಂಘರ್ಷಗಳ ಕಾಲದಲ್ಲಿ ಕಣ್ಣು ಬಿಟ್ಟ ಕೂಸು ಎಸ್.ಬಂಗಾರಪ್ಪ. ಅವರು ಬೆಳೆದರು. ಬೆಳೆಯುತ್ತಲೇ ಬಂದರು. ಬಡವರು, ದುರ್ಬಲರು, ಅವಕಾಶ ಹಾಗೂ ಆತ್ಮಗೌರವ ವಂಚಿತರು ನೂರಾರು ರೀತಿಗಳಲ್ಲಿ ಅಮಾನುಷ ಶೋಷಣೆಗೆ ಒಳಗಾದವರು ಇವರ ಪರವಾಗಿ ಹೋರಾಡಲು ಮನಸ್ಸು ಮಾಡಿದರು. ಪಣತೊಟ್ಟರು. ಜೀವನದಲ್ಲಿ ಪರಿಸರದ ಪರಿಚಯವಾಗುತ್ತಿದ್ದಂತೆ ಸಮಾಜಮುಖಿಯಾ ದರು. ಮೇಲೆದ್ದು ಹೊರಟರು.
ಸಮಾಜವಾದಿ ಸಮಾಜದ ಹಾಗೂ ಸರ್ವತ್ರ ಕಲ್ಯಾಣ ಕ್ಷೇತ್ರದ ನಿರ್ಮಾಣ ಮಾಡಲು ಮುನ್ನೆಜ್ಜೆ ಗಳನ್ನಿಡುತ್ತ ತಮ್ಮ ಬಾಳಿನ ಮಹಾಪಯಣವನ್ನು ಆರಂಭಿಸಿ ದರು. ಈ ನಿತ್ಯೋತ್ಸಾಹಿ, ನಿರಂತರ ಉತ್ಸಾಹಿ ಅಂದಿನಿಂದ ನಿಂತಿಲ್ಲ. ನಿಲ್ಲುವುದೂ ಇಲ್ಲ. 1967ರಲ್ಲಿ ಕರ್ನಾಟಕದ ವಿಧಾನಸಭೆಯನ್ನು ಪ್ರವೇಶಿಸಿದ ಲೋಹಿಯಾ ಸಮಾಜವಾದಿ ಎಸ್.ಬಂಗಾರಪ್ಪ ಅವರು ಸಚಿವರಾಗಿ, ಮುಖ್ಯ ಮಂತ್ರಿಯಾಗಿ, ಲೋಕಸಭೆ ಸದಸ್ಯರಾಗಿ ನಾಲ್ಕು ದಶಕಗಳ ಕಾಲಕ್ಕಿಂತ ಹೆಚ್ಚು ಕಾಲ ನಿರಂತರ ಸೇವೆ ಸಲ್ಲಿಸಿದ್ದಾರೆ.
28-12-72ರಂದು ಕರ್ನಾಟಕದ ವಿಧಾನ ಸಭೆ, ರಾಜ್ಯದ ಹೆಸರು ಕರ್ನಾಟಕ ಎಂದಾಗಬೇಕು ಎಂಬ ನಿರ್ಣಯವನ್ನು ಸರ್ವಾನುಮತ ದಿಂದ ಅಂಗೀಕರಿಸಿದ ಶುಭ ಹಾಗೂ ಚಾರಿತ್ರಿಕ ಸಂದರ್ಭ. ಬಂಗಾರಪ್ಪ ಅವರು ಅರಳಿದ ಮಲ್ಲಿಗೆಯನ್ನು ಸಭೆಯಲ್ಲಿ ಸುತ್ತ ಎರಚಿ, ಸಮಗ್ರ ಕರ್ನಾಟಕಕ್ಕೆ ಮೈಸೂರು ಮಲ್ಲಿಗೆಯ ಕಂಪನ್ನು ಬೀರಿದರು. ಸಮಸ್ತ ಕನ್ನಡಿಗರೊಡನೆ ಸಂತೋಷವನ್ನು ಹಂಚಿಕೊಂಡರು. ಬಂಗಾರಪ್ಪ ಅವರು 15 ಸಾವಿರಕ್ಕಿಂತ ಹೆಚ್ಚು ಸಾಮೂಹಿಕ ವಿವಾಹಗಳು ನಡೆಯಲು ಕಾರಣರಾಗಿದ್ದಾರೆ.
ಇವರು ಸಮಾಜಮುಖಿ ಎನ್ನುವುದಕ್ಕೆ ಅಪರೂಪ ನಿದರ್ಶನವೇ ಸಾಕು. ಒಮ್ಮೆ ಇವರು ವಿಧಾನಸಭೆ ಯಲ್ಲಿ ಮಾಡಿದ ಭಾಷಣದಲ್ಲಿ ಓರ್ವ ವ್ಯಕ್ತಿ ಬಗ್ಗೆ ಕಟುವಾದ ಟೀಕೆ ಮಾಡಿದರು. ಕೆಲ ಸಮಯದ ನಂತರ ನಾನು ಇವರನ್ನು ಲಾಬಿಯಲ್ಲಿ ಭೇಟಿ ಮಾಡಿದೆ. ವ್ಯಕ್ತಿಯೊಬ್ಬರ ಬಗ್ಗೆ ಬಂಗಾರಪ್ಪ ಅವರು ಮಾಡಿದ ಟೀಕೆ ನಿರಾಧಾರವಾದುದು ಎಂದು ನಾನು ಬಂಗಾರಪ್ಪ ಅವರಿಗೆ ಹೇಳಿದೆ. ನನಗೆ ಗೊತ್ತಿದ್ದ ಸತ್ಯವನ್ನು ಅವರ ಗಮನಕ್ಕೆ ತಂದೆ. ಸರಿ ಎಂದು ಹೇಳಿ ಸುಮ್ಮನಾದರು.
ಕೆಲ ನಿಮಿಷಗಳ ನಂತರ, ನಾನು ಪತ್ರಿಕಾ ಗ್ಯಾಲರಿಗೆ ಹಿಂದಿರುಗಿದೆ. ಬಂಗಾರಪ್ಪ ಅವರು ಅಷ್ಟು ಹೊತ್ತಿಗೆ ವಿಧಾನಸಭೆ ಪ್ರವೇಶಿಸಿ ತಮ್ಮ ಸ್ಥಾನದಲ್ಲಿ ಕುಳಿತಿದ್ದರು. ಬಂಗಾರಪ್ಪ ವೈಯಕ್ತಿಕ ವಿವರಣೆ ಯೊಂದನ್ನು ಸಭೆಯಲ್ಲಿ ನೀಡಲು ಸಭಾಧ್ಯಕ್ಷರ ಅನುಮತಿ ಕೋರಿದರು. ಬಂಗಾರಪ್ಪ ವೈಯಕ್ತಿಕ ವಿವರಣೆ ನೀಡಿ ತಾವು ಸಭೆಯ ಮಾನ್ಯ ಸದಸ್ಯರೊಬ್ಬರನ್ನು ಕುರಿತು ಮಾಡಿದ ಟೀಕೆ ನಿರಾಧಾರ ವಾದದ್ದು ಅದನ್ನು ವಾಪಸ್ಸು ಪಡೆದು ಕ್ಷಮೆಯಾಚಿಸುವುದಾಗಿ ತಿಳಿಸಿದರು.
ಪ್ರೆಸ್ ಗ್ಯಾಲರಿಯಲ್ಲಿ ಕುಳಿತಿದ್ದ ನಾನು ಚಕಿತನಾದೆ. ಮಾನ್ಯ ಸದಸ್ಯರೊಬ್ಬರನ್ನು ಕುರಿತ ತಾವು ಮಾಡಿದ್ದ ಟೀಕೆ ನಿರಾಧಾರವಾದದ್ದು ಎಂದು ತಿಳಿದು ಬಂದಾಗ ಅದನ್ನು ವಾಪಸ್ಸು ಪಡೆದು ಕ್ಷಮೆಯಾಚಿಸುವಂತಹ ಸೌಜನ್ಯದ ವರ್ತನೆ!. ಅದೂ ಒಬ್ಬ ಶಾಸಕರ ಇಂತಹ ಸಂಸದೀಯ ನಡವಳಿಕೆ ಉನ್ನತ ಮಟ್ಟದ ವರ್ತನೆ ಸರ್ವ ಕಾಲಕ್ಕೂ ಸೂರ್ತಿದಾಯಕ. ಈ ರೀತಿಯ ಸಂಸದೀಯ ನಡವಳಿಕೆ ಪ್ರಶಂಸನೀಯ ಹಾಗೂ ಅನುಕರಣೀಯ. ಇವರು ಸಂಸದೀಯ ನಡವಳಿಕೆಯಲ್ಲೂ ಒಂದು ಮಾದರಿಯೇ.
1991ರಲ್ಲಿ ತುಮಕೂರಿನಲ್ಲಿ ಭಾರತ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ವಾರ್ಷಿಕ ಅಧಿವೇಶನ, ಶ್ರೀ ಸಿದ್ಧಗಂಗಾ ಮಠಾಧೀಶರ ದಾಸೋಹದ ಆಶೀರ್ವಾದದಡಿಯಲ್ಲಿ. ಅಧಿವೇಶನಕ್ಕೆ ಎರಡು ದಿನ ಮುನ್ನ ಒಕ್ಕೂಟದ ಅಧ್ಯಕ್ಷ ಕೆ.ವಿಕ್ರಮರಾವ್, ರಾಜ್ಯ ಕಾರ್ಯನಿರತ ಪತ್ರಕರ್ತ ಸಂಘದ ಆಗಿನ ಅಧ್ಯಕ್ಷ ಎಸ್. ಅರ್ಜುನ ದೇವ ಹಾಗೂ ನಾನು ಆಗ ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪ ಅವರನ್ನು ಭೇಟಿ ಮಾಡಿದೆವು. ಸಮ್ಮೇಳನ ನಡೆಸಲು ಧನಸಹಾಯ ತೋರಿದವು.
ಒಂದು ಮೊತ್ತವನ್ನು ಸಹಾಯಧನವಾಗಿ ನೀಡುವುದಾಗಿ ಬಂಗಾರಪ್ಪ ಅವರು ಹೇಳಿದರು. ಸಾಲದು ಸಾರ್. ಇನ್ನೊಂದು ಲಕ್ಷ ಕೊಡಿ ಎಂದು ನಾನು ಕೋರಿದೆ. ತಕ್ಷಣ ಆಗಲಿ ಎಂದು ಮಂಜೂರು ಮಾಡಿದರು. ರಾಷ್ಟ್ರದ ಎಲ್ಲಾ ರಾಜ್ಯಗಳಿಂದ ಬರುವ ಪತ್ರಕರ್ತರು ಭಾಗವಹಿಸುವ ಸಮ್ಮೇಳನ ಎಂದು ಬಂಗಾರಪ್ಪ ಅವರಿಗೆ ಗೊತ್ತಿತ್ತು. ಮೇಲಾಗಿ ಪತ್ರಕರ್ತರು ಪತ್ರಿಕಾ ಸಂಘದ ಚಳವಳಿ ನಡೆಸುತ್ತಿದ್ದಾ ರೆಂಬುದೂ ತಿಳಿದಿತ್ತು. ಜೊತೆಗೆ ಸಹಾಯಧನ ದುರುಪಯೋಗವಾಗದೆಂಬ ವಿಶ್ವಾಸವೂ ಅವರಲ್ಲಿತ್ತು. ರಾಜ್ಯದ ಪತ್ರಕರ್ತರ ಪರವಾಗಿ ನಾವು ಕೃತಜ್ಞತೆ ಅರ್ಪಿಸಿದೆವು. ಸರ್ವರ ಸುಖ-ಸ್ವಾತಂತ್ರ್ಯ ಬಯಸುವ ಬಂಗಾರಪ್ಪ, ಜನಪರ ಬದ್ಧತೆಯಲ್ಲಿ ಬಂಗಾರವೇ.
(ಕೃಪೆ: ಶ್ರೀ ಎಸ್.ಬಂಗಾರಪ್ಪ ಅಭಿನಂದನಾ ಗ್ರಂಥ)