Birth centenary of Ramakrishna Hegde: ಹೆಗಡೆಯವರ ಮಾರ್ಗದರ್ಶನವೇ ನನಗೆ ದಾರಿ
ನಾನು ಶಾಸಕನಾಗಿ ಆಯ್ಕೆಯಾದ ನಂತರ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದರಿಂದ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಾಯಿತು. ಸುಮಾರು ಎರಡು ವರ್ಷಗಳ ಅವರು ಬಸವರಾಜ ರಾಯರೆಡ್ಡಿ ಹಾಗೆ ಒಬ್ಬ ಶಾಸಕ ಕೆಲಸ ಮಾಡಬೇಕು ಎಂದು ಹೇಳುತ್ತಿದ್ದರು. ಅಷ್ಟೇ ಅಲ್ಲ, ಅವರೇ ಬರವಣಿಗೆಯಲ್ಲಿ ಎಲ್ಲಾ ಶಾಸಕರಿಗೂ ಪತ್ರ ಬರೆಸಿ ನನ್ನಂತೆ ಕೆಲಸ ಮಾಡಬೇಕು ಎಂದು ಹೇಳಿದ್ದರು
-
ಬಸವರಾಜ ರಾಯರೆಡ್ಡಿ, ಉನ್ನತ ಶಿಕ್ಷಣ ಸಚಿವ
ರಾಮಕೃಷ್ಣ ಹೆಗಡೆಯವರನ್ನು ನೆನಪಿಸಿಕೊಂಡಾಗ ಅದು ಕೇವಲ ಕರ್ನಾಟಕದ ಮಾಜಿ ಮುಖ್ಯ ಮಂತ್ರಿಯೊಬ್ಬರ ನೆನಪಾಗಿ ಉಳಿಯುವುದಿಲ್ಲ. ಅದು ಒಂದು ರಾಜಕೀಯ ಸಂಸ್ಕೃತಿಯ, ಒಂದು ಮೌಲ್ಯಾಧಾ ರಿತ ಸಾರ್ವಜನಿಕ ಬದುಕಿನ ಮತ್ತು ಯುವಕರನ್ನು ಗುರುತಿಸಿ ಬೆಳೆಸಿದ ಅಪರೂಪದ ನಾಯಕತ್ವದ ನೆನಪು. ನನ್ನ ಪಾಲಿಗೆ ರಾಮಕೃಷ್ಣ ಹೆಗಡೆಯವರ ಸಂಬಂಧ ಇನ್ನೂ ವಿಶೇಷ ವಾದದ್ದು. ಅದು ಕೇವಲ ರಾಜಕೀಯ ಸಂಬಂಧವಾಗಿರಲಿಲ್ಲ. ಕುಟುಂಬದ ಸಂಬಂಧದ ಆತ್ಮೀಯತೆ, ಹಿರಿಯರ ಮಾರ್ಗದರ್ಶನ, ಒಬ್ಬ ನಾಯಕನ ವಿಶ್ವಾಸ ಮತ್ತು ಒಬ್ಬ ತಂದೆಯಂತಿದ್ದ ಕಾಳಜಿ- ಇವೆಲ್ಲವೂ ಆ ಸಂಬಂಧದಲ್ಲಿ ಬೆರೆತಿದ್ದವು.
ನಾನು 1983ರಲ್ಲಿ ಕ್ರಾಂತಿ ರಂಗದಿಂದ ಜನತಾ ಪಾರ್ಟಿಗೆ ಸೇರಿದೆ. ಜನತಾ ಪಾರ್ಟಿಯಲ್ಲಿ ಸೇರಿದಾಗ ನನ್ನನ್ನು ರಾಜ್ಯದ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿದರು. ಮಂಜುನಾಥ್ ಅಧ್ಯಕ್ಷರಾಗಿ ದ್ದರು. ಆವಾಗಿನಿಂದಲೇ ನನ್ನ ಮೇಲೆ ರಾಮಕೃಷ್ಣ ಹೆಗಡೆಯವರಿಗೆ ಬಹಳ ಪ್ರೀತಿ, ವಿಶೇಷವಾ ದಂತಹ ಪ್ರೀತಿ ಇತ್ತು. ಅದಕ್ಕೆ ನಮ್ಮ ಕುಟುಂಬದ ಹಳೆಯ ಸಂಬಂಧವೂ ಒಂದು ಕಾರಣ. ನಿಜಲಿಂಗಪ್ಪನವರ ಕಾಲದಿಂದಲೇ ನಮ್ಮ ಕುಟುಂಬದ ಸಂಬಂಧ ಇತ್ತು.
ಹೀಗಾಗಿ ಹೆಗಡೆಯವರು ನನಗೆ ಒಬ್ಬ ಮನೆ ಯಜಮಾನರಂತೆ ನನ್ನ ಜತೆಗೆ ಇದ್ದರು. ರಾಮಕೃಷ್ಣ ಹೆಗಡೆಯವರು ಕುಟುಂಬದ ಸದಸ್ಯನಾಗಿ, ಅವರಿಗೆ ಒಬ್ಬ ಮಾನಸ ಪುತ್ರನಾಗಿ ನನ್ನನ್ನು ನೋಡ್ತಾ ಇದ್ರು. 1985ರಲ್ಲಿ ನಾನು ಮೊದಲನೇ ಸಾರಿ ಶಾಸಕನಾಗ ಬೇಕಾದ ಸಂದರ್ಭದಲ್ಲಿ ಯಲಬುರ್ಗಾ ವಿಧಾನಸಭಾ ಕ್ಷೇತ್ರದಿಂದ ನನಗೆ ಜನತಾ ಪಾರ್ಟಿ ಟಿಕೆಟ್ ಕೊಡಿಸುವಲ್ಲಿ ಪ್ರಮುಖ ಕಾರಣಕರ್ತರು ರಾಮಕೃಷ್ಣ ಹೆಗಡೆಯವರೇ. ಅವರು ಜನತಾ ಪಾರ್ಟಿಯ ಟಿಕೆಟ್ ಕೊಡಿಸಿದ ನಂತರ ನಾನು ಪ್ರಥಮ ಬಾರಿಗೆ ಆಯ್ಕೆಯಾದೆ. ಆಗ ಯಲಬುರ್ಗಾ ಬಹಳಷ್ಟು ಹಿಂದುಳಿದ ತಾಲೂಕಾಗಿತ್ತು.
ಇದನ್ನೂ ಓದಿ: Birth centenary of Ramakrishna Hegde: ಹೆಗಡೆಯವರಿಗೇ ಹೆಗಡೆಯವರೇ ಸಾಟಿ
ನಾನು ಶಾಸಕನಾಗಿ ಆಯ್ಕೆಯಾದ ನಂತರ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದರಿಂದ ಕ್ಷೇತ್ರ ದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಾಯಿತು. ಸುಮಾರು ಎರಡು ವರ್ಷಗಳ ಅವರು ಬಸವರಾಜ ರಾಯರೆಡ್ಡಿ ಹಾಗೆ ಒಬ್ಬ ಶಾಸಕ ಕೆಲಸ ಮಾಡಬೇಕು ಎಂದು ಹೇಳುತ್ತಿದ್ದರು. ಅಷ್ಟೇ ಅಲ್ಲ, ಅವರೇ ಬರವಣಿಗೆಯಲ್ಲಿ ಎಲ್ಲಾ ಶಾಸಕರಿಗೂ ಪತ್ರ ಬರೆಸಿ ನನ್ನಂತೆ ಕೆಲಸ ಮಾಡಬೇಕು ಎಂದು ಹೇಳಿದ್ದರು. ಅದರ ಹಿಂದೆ ಒಂದು ದೊಡ್ಡ ಉದ್ದೇಶ ಇತ್ತು. ಯಾರು ಉತ್ತಮವಾಗಿ ಮತ್ತು ಪ್ರಾಮಾಣಿಕ ವಾಗಿ ಕೆಲಸ ಮಾಡುತ್ತಾರೆ ಅವರನ್ನು ಪ್ರೋತ್ಸಾಹಿಸಬೇಕು. ಯುವಕರನ್ನು ಬೆಳೆಸಬೇಕು. ಹೊಸ ಪೀಳಿಗೆಯ ನಾಯಕರಿಗೆ ಅವಕಾಶ ನೀಡಬೇಕು.
ಹೀಗಾಗಿ ನನ್ನನ್ನು ಒಂದು ಮಾದರಿ ಶಾಸಕ ಎಂದು ರಾಜ್ಯಕ್ಕೆ ಪರಿಚಯ ಮಾಡಿಕೊಟ್ಟವರು ರಾಮಕೃಷ್ಣ ಹೆಗಡೆಯವರು. ಇಂದು ನಾನು ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತನಾಡುವಾಗ ಅದರ ಹಿಂದೆ ಅವರ ಮಾರ್ಗದರ್ಶನದ ದೊಡ್ಡ ಪಾತ್ರವಿದೆ ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆ ಯಿಲ್ಲ. ನನ್ನ ರಾಜಕೀಯ ಬದುಕಿನ ವಿವಿಧ ಹಂತಗಳಲ್ಲಿ ಹೆಗಡೆಯವರು ನೀಡಿದ ಅವಕಾಶ ಗಳನ್ನು ಮರೆಯಲು ಸಾಧ್ಯವಿಲ್ಲ. ನಾನು ಎರಡನೇ ಬಾರಿ ಆಯ್ಕೆಯಾದಾಗ ನನ್ನನ್ನು ಚೀಫ್ ವ್ಹಿಪ್ ಮಾಡಲಿಕ್ಕೆ ಅವರೇ ಕಾರಣ.
ನಂತರ 1994ರಲ್ಲಿ ನಾನು ಮೂರನೇ ಬಾರಿ ಆಯ್ಕೆಯಾದಾಗ ದೇವೇಗೌಡರ ಕ್ಯಾಬಿನೆಟ್‌ನಲ್ಲಿ ನನ್ನನ್ನು ಸಚಿವನನ್ನಾಗಿ ಮಾಡುವಲ್ಲಿಯೂ ಅವರ ಪಾತ್ರವಿತ್ತು. ಹೇಗೆ ಕಾರ್ಯನಿರ್ವಹಿಸಬೇಕು, ಸಾರ್ವಜನಿ ಕರೊಂದಿಗೆ ಹೇಗೆ ನಡೆದುಕೊಳ್ಳಬೇಕು, ಸರಕಾರದ ಜವಾಬ್ದಾರಿ ಹೇಗೆ ನಿರ್ವಹಿಸಬೇಕು, ರಾಜಕೀಯದಲ್ಲಿ ಯಾವ ಮೌಲ್ಯಗಳನ್ನು ಕಾಪಾಡಿಕೊಳ್ಳಬೇಕು ಎಂಬುದನ್ನು ಹೇಳಿಕೊಟ್ಟರು. ಅದು ಒಂದು ರೀತಿಯಲ್ಲಿ ಔಪಚಾರಿಕವಲ್ಲದ ತರಬೇತಿ. ಮೌಲ್ಯ ಆಧಾರಿತ ರಾಜಕೀಯ ಎಂಬುದರ ಅರ್ಥ ಹೆಗಡೆಯವರಿಂದ ತಿಳಿಯಿತು. ಪ್ರಾಮಾಣಿಕತೆ ಎಂದರೇನು, ರಾಜಕೀಯ ರಂಗದಲ್ಲಿ ಹೇಗಿರಬೇಕು, ಸಾರ್ವಜನಿಕರ ಜತೆ ಹೇಗೆ ಇರಬೇಕು, ಸರಕಾರವನ್ನು ಹೇಗೆ ನಡೆಸಬೇಕು ಇವೆಲ್ಲ ವನ್ನೂ ಅವರಿಂದ ಕಲಿತೆವು. ಅವರ ಆದರ್ಶಗಳಿಂದ ನಾನು ಇವತ್ತಿಗೂ ಪರಿಪಾಲನೆ ಮಾಡ್ತಾ ಇದ್ದೀನಿ. ಹೆಗಡೆಯವರು ರಾಜಕಾರಣವನ್ನು ಕೇವಲ ಅಧಿಕಾರ ಪಡೆಯುವ ಮಾರ್ಗವಾಗಿ ನೋಡುತ್ತಿರಲಿಲ್ಲ.
ರಾಜಕಾರಣ ಅಂದರೆ ಸಮಾಜ ಸೇವೆ, ಜನಸೇವೆ ಎಂಬುದು ಅವರ ಪರಿಪೂರ್ಣ ನಂಬಿಕೆಯಾಗಿತ್ತು. ರಾಜಕೀಯ ಸಂಬಂಧಗಳಲ್ಲಿ ಏನೇ ಬದಲಾವಣೆ ಗಳಾದರೂ ಹೆಗಡೆಯವರೊಂದಿಗೆ ನಿಕಟ ಸಂಪರ್ಕ ದೀರ್ಘಕಾಲ ಮುಂದುವರಿದಿತ್ತು. ವಿವಿಧ ಸಂದರ್ಭಗಳಲ್ಲಿ ತಮ್ಮಂತಹವರನ್ನು ಕರೆದು, ರಾಜಕೀಯದಲ್ಲಿ ಎದುರಾಗುವ ಕಠಿಣ ಪರಿಸ್ಥಿತಿಗಳನ್ನು ಹೇಗೆ ನಿರ್ವಹಿಸ ಬೇಕು ಎಂಬ ಬಗ್ಗೆ ಅವರು ಸಲಹೆ ನೀಡುತ್ತಿದ್ದರು. 2004ರವರೆಗೆ ನಾನು ಅವರ ಜತೆಗೆ ಅತ್ಯಂತ ನಿಕಟ ಸಂಪರ್ಕದ ಇದ್ದೆ.
ರಾಮಕೃಷ್ಣ ಹೆಗಡೆಯವರೊಂದಿಗೆ ನಡೆದ ಅನೇಕ ಘಟನೆಗಳಲ್ಲಿ ಮನಸ್ಸಿನಲ್ಲಿ ಇಂದಿಗೂ ಉಳಿದಿರುವ ಒಂದು ಘಟನೆ ಬಾಟ್ಲಿಂಗ್ ಹಗರಣದ ಸಂದರ್ಭದಲ್ಲಿ ನಡೆದದ್ದು. ಬಾಟ್ಲಿಂಗ್ ಹಗರಣದ ಹಿನ್ನೆಲೆಯಲ್ಲಿ ಹೆಗಡೆಯವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಂದರ್ಭ ದಲ್ಲಿ, ನೀವು ರಾಜೀನಾಮೆ ಕೊಡಬಾರದು ಎಂದು ಒತ್ತಾಯಿಸಿ ಕೆಲವು ಶಾಸಕರು ಧರಣಿ ಕುಳಿತಿದ್ದೆವು. ಆದರೆ ಹೆಗಡೆಯವರು ತಮ್ಮ ಬೆಂಬಲಿಗರು ಕೆಳಗೆ ಕುಳಿತು ಧರಣಿ ಮಾಡುತ್ತಿರುವು ದನ್ನು ಒಪ್ಪಲಿಲ್ಲ.
ನಮ್ಮಂತವರು ಕೆಳಗೆ ಕೂಡಬಾರದು, ಇದೆ ಮಾಡಬಾರದು ಎಂದು ಅವರು ಸಲಹೆ ನೀಡಿದ ಘಟನೆ ಮರಿಯಲಾಗದ ನೆನಪಾಗಿದೆ. ರಾಮಕೃಷ್ಣ ಹೆಗಡೆಯವರಿಂದ ನಾವು ಪಡೆದ ದೊಡ್ಡ ಪಾಠವೇನು ಎಂದು ನೋಡಿದರೆ ಅದು ಯಾವುದೇ ಒಂದು ರಾಜಕೀಯ ತಂತ್ರವಲ್ಲ. ಅದು ಒಂದು ರಾಜಕೀಯ ಜೀವನದ ಮೌಲ್ಯ ವ್ಯವಸ್ಥೆ. ಉತ್ತಮವಾಗಿ ಕೆಲಸ ಮಾಡುವವರನ್ನು ಗುರುತಿಸುವುದು, ಪ್ರಾಮಾಣಿಕ ರನ್ನು ಪ್ರೋತ್ಸಾಹಿಸುವುದು, ಯುವಕರಿಗೆ ಅವಕಾಶ ನೀಡುವುದು, ಸಾರ್ವಜನಿಕ ಬದುಕಿನಲ್ಲಿ ಶಿಸ್ತು ಕಾಪಾಡುವುದು, ರಾಜಕೀಯ ಅಧಿಕಾರ ಜನಸೇವೆಯ ಸಾಧನವಾಗಿ ಬಳಸುವುದು, ಕಠಿಣ ಸಂದರ್ಭ ದಲ್ಲಿಯೂ ಮೌಲ್ಯಗಳಿಂದ ಹಿಂದೆ ಸರಿಯದಿರುವುದು ಮತ್ತು ಮುಖ್ಯವಾಗಿ ಅಧಿಕಾರವನ್ನು ಜೀವನದ ಅಂತಿಮ ಗುರಿಯನ್ನಾಗಿ ಮಾಡಿಕೊಳ್ಳದಿರುವುದು ಇವೆಲ್ಲವೂ ರಾಮಕೃಷ್ಣ ಹೆಗಡೆಯವ ರಿಂದ ಕಲಿತ ಪಾಠಗಳು.
ಒಬ್ಬ ರಾಜಕಾರಣಿ ಎಷ್ಟು ವರ್ಷ ಅಧಿಕಾರದಲ್ಲಿದ್ದ ಎಂಬುದು ಇತಿಹಾಸದ ಒಂದು ಅಂಕಿ ಮಾತ್ರ. ಆದರೆ ಆತನಿಂದ ಎಷ್ಟು ಜನರು ಬೆಳೆದರು, ಎಷ್ಟು ಜನರಿಗೆ ಅವಕಾಶ ಸಿಕ್ಕಿತು, ಎಷ್ಟು ಜನರ ಬದುಕಿಗೆ ರಾಜಕೀಯದ ಮೌಲ್ಯಗಳು ತಲುಪಿದವು ಎಂಬುದೇ ಆ ನಾಯಕನ ನಿಜವಾದ ಅಳತೆ. ಈ ದೃಷ್ಟಿಯಲ್ಲಿ ರಾಮಕೃಷ್ಣ ಹೆಗಡೆಯವರು ತಮ್ಮ ಕಾಲದ ಯುವಕರನ್ನು ಗುರುತಿಸಿ ಬೆಳೆಸಿದ ಅಪರೂಪದ ನಾಯಕ. ಬಸವರಾಜ ರಾಯರೆಡ್ಡಿಯವರಂತಹ ಅನೇಕ ಯುವ ಕರಿಗೆ ಅವರು ಅವಕಾಶ ನೀಡಿದರು.
ಹುದ್ದೆ ನೀಡಿದರು. ಜವಾಬ್ದಾರಿ ನೀಡಿದರು. ತಪ್ಪಾದಾಗ ಸಲಹೆ ನೀಡಿದರು. ಕಠಿಣ ಸಂದರ್ಭದಲ್ಲಿ ಮಾರ್ಗದರ್ಶನ ನೀಡಿದರು. ಆ ಕಾರಣಕ್ಕಾಗಿಯೇ ಅವರು ಕೇವಲ ನೆನಪಿನಲ್ಲಿ ಉಳಿಯುವ ಮಾಜಿ ಮುಖ್ಯಮಂತ್ರಿ ಅಲ್ಲ. ಅವರು ಒಬ್ಬ ಮನೆ ಯಜಮಾನ.
ಒಬ್ಬ ಮಾರ್ಗದರ್ಶಕರು. ಒಬ್ಬ ರಾಜಕೀಯ ಗುರು. ಒಬ್ಬ ಕುಟುಂಬದ ಹಿರಿಯರು. ಮತ್ತು ತಮ್ಮನ್ನು ಮಾನಸ ಪುತ್ರನಂತೆ ನೋಡಿದ ಆತ್ಮೀಯ ವ್ಯಕ್ತಿ. ರಾಮಕೃಷ್ಣ ಹೆಗಡೆಯವರ ರಾಜಕೀಯ ಬದುಕಿನ ಬಹುದೊಡ್ಡ ಸಂದೇಶವೆಂದರೆ, ರಾಜಕಾರಣ ಅಧಿಕಾರಕ್ಕಾಗಿ ಇರುವುದಲ್ಲ, ಸಮಾಜ ಸೇವೆ ಮತ್ತು ಜನಸೇವೆಗಾಗಿ ಎಂಬುದು. ಅವರಿಂದ ಪಡೆದ ಈ ಮೌಲ್ಯಾಧಾರಿತ ರಾಜಕೀಯದ ಪಾಠ ಇಂದಿಗೂ ಪಾಲಿಸುತ್ತಿದ್ದೇ