‌Vishweshwar Bhat Column: ಗಂಡನನ್ನು ಹೇಗೆ ಕರೆಯುವುದು ?

ನಮ್ಮ ಯಜಮಾನರನ್ನು ಕರೆಯಬೇಕೆಂದರೆ ರೀ ಎಂದು ಅಂತಾರೆ. ಕಟ್ಟುನಿಟ್ಟಾದ ಹಾಗೂ ಸಾಂಪ್ರದಾಯಿಕವಾದ ಕುಟುಂಬದಲ್ಲಿ ಬೆಳೆದವರು ತಮ್ಮ ಮನೆಯಲ್ಲಿ ಎಲ್ಲ ಹೆಂಗಸರು ಅ

Profile Ashok Nayak December 31, 2024
ಸಂಪಾದಕರ ಸದ್ಯಶೋಧನೆ ವಿಶ್ವೇಶ್ವರ ಭಟ್ ಕನ್ನಡದಲ್ಲಿ ಹೆಂಡತಿ ತನ್ನ ಗಂಡನನ್ನು ಏನೇನು ಪದಗಳನ್ನು ಬಳಸಿ ಕರೆಯುತ್ತಾಳೆ ಎಂಬ ಪ್ರಶ್ನೆಯನ್ನು ‘ಕೋರಾ’ ವೆಬ್‌ಸೈಟಿನಲ್ಲಿ ಯಾರೋ ಕೇಳಿದ್ದರು. ಅದಕ್ಕೆ ಒಬ್ಬರು ಹೀಗೆ ಉತ್ತರಿಸಿದ್ದರು- “ಮನೆಯ ಹಿರಿಯರ ಮುಂದೆ ಅವರು/ಇವರು ಅಂತ, ಮಕ್ಕಳೊಂದಿಗೆ ಮಾತಾಡುವಾಗ ನಿಮ್ಮ ಅಪ್ಪ/ಚಿಕ್ಕಪ್ಪ, ಸೋದರಮಾವ ಅಂತ, ಸಂಬಂಧಿಗಳೊಡನೆ ‘ನಮ್ಮ ಯಜಮಾನರು’ ಎಂದು ಸಂಬೋಽಸುವುದು ವಾಡಿಕೆ. ನಮ್ಮ ಯಜಮಾನರನ್ನು ಕರೆಯಬೇಕೆಂದರೆ ರೀ ಎಂದು ಅಂತಾರೆ. ಕಟ್ಟುನಿಟ್ಟಾದ ಹಾಗೂ ಸಾಂಪ್ರದಾಯಿಕವಾದ ಕುಟುಂಬದಲ್ಲಿ ಬೆಳೆದವರು ತಮ್ಮ ಮನೆಯಲ್ಲಿ ಎಲ್ಲ ಹೆಂಗಸರು ಅವರವರ ಗಂಡನನ್ನ ‘ರೀ’ ಎಂದೇ ಕರೆಯುತ್ತಾರೆ. ಗಂಡನ ಹೆಸರು ಹೆಂಡತಿ ಬಾಯಲ್ಲಿ ಬರಬಾರದೆಂಬ ಸಂಪ್ರದಾಯವು ಇದೆ. ಅದಲ್ಲದೇ ಗಂಡ ಹೆಂಡತಿಗಿಂತ ವಯಸ್ಸಿನಲ್ಲಿ ದೊಡ್ಡವರಿರುತ್ತಾರೆ. ಹೀಗಾಗಿ ಅವರನ್ನು ಬಹುವಚನ ಕೊಟ್ಟು ಮಾತಾಡಿಸುವುದು ಸಂಪ್ರದಾಯ ಮತ್ತು ರೂಢಿ. ಅದೇ ಯಜಮಾನರು ಹೆಂಡತಿಯನ್ನು ‘ಲೇಯ’ ಎಂದು ಹೆಸರು ಹೇಳದೇ ಕರೆಯುವುದುಂಟು". ಇನ್ನೊಬ್ಬರು ಈ ಪ್ರಶ್ನೆಗೆ ಈ ರೀತಿ ಉತ್ತರಿಸಿದ್ದರು- “ಇದು ಒಳ್ಳೆ ಪ್ರಶ್ನೆ ಆಯ್ತಲ್ಲ ಮಾರಾಯ್ರೆ, ಅವರವರ ಹೆಂಡತಿ ಯನ್ನು ಅವರು ಹೇಗಾದರೂ ಕರೆದುಕೊಳ್ಳಲಿ ಬಿಡಿ, ನಾವ್ಯಾಕೆ ತಲೆಬಿಸಿ ಮಾಡಿಕೊಳ್ಳಬೇಕು? ಆದರೂ ಗಂಡಂದಿರು ಹೆಂಡತಿಯರನ್ನು ಕರೆಯುವಷ್ಟು ಭಿನ್ನವಾಗಿ, ಸಲಗೆಯಿಂದ, ಪ್ರೀತಿಯಿಂದ ಬೇರೆ ಯಾವ ಸಂಬಂಧಗಳ ನಡುವೆ ಯೂ ಸಂಬೋಧನೆಗಳು ಇರುವುದಿಲ್ಲ ಎನ್ನುವುದು ಮಾತ್ರ ಸತ್ಯ. ಕೆಲವರು ‘ಲೇ’ ಅಂತಾರೆ. ಕೆಲವರು ‘ಇವ್ಳೇ’ ಅಂತಾರೆ. ಮತ್ತೆ ಕೆಲವರು ‘ರೀ’ ಅನ್ನಬಹುದು. ಹೆಸರು ಹಿಡಿದು ಕರೆಯು ವವರು ಮಾತ್ರ ಜಾಸ್ತಿ ಇರುವುದನ್ನು ಗಮನಿಸಬಹುದು. ಹೆಸರುಗಳನ್ನು ಸಂಕ್ಷಿಪ್ತಗೊಳಿಸಿ ಕರೆಯುವವರು ಅದಕ್ಕಿಂತ ಸ್ವಲ್ಪ ಜಾಸ್ತಿ. ಶಾರದಾ ಅಂತ ಇದ್ದರೆ ಶಾರಿ ಅನ್ನೋರು, ಪಾರ್ವತಿ ಅಂತ ಇದ್ರೆ ಪಾರಿ ಅನ್ನೋರು, ಪ್ರಮೀಳಾ ಅಂತ ಇದ್ರೆ ಪ್ರಮ್ಮಿ ಎನ್ನಬಹುದು, ಹೀಗೆ ಶಾರ್ಟ್ ಮಾಡಿ ಕರೆಯುವವರು ಮಾತ್ರ ಜಾಸ್ತಿ ಇರ್ತಾರೆ. ಇತ್ತೀಚಿನ ಪೀಳಿಗೆಯವರು ಮದುವೆಯಾದ ಹೊಸತರಲ್ಲಿ ಹೆಂಡತಿಯನ್ನು ಚಿನ್ನು, ಮುನ್ನು, ಪುಟ್ಟ, ಬೇಬಿ ಇತ್ಯಾದಿ ಕರೆಯುತ್ತಾರೆ. ಹೇಗೆ ಕರೆದರೂ ಹೆಂಡತಿ ಹೆಂಡತಿಯೇ ತಾನೇ..". ಈ ಪ್ರಶ್ನೆಗೆ ಲೀಲಾದೇವಿ ಎನ್ನುವವರು ಉತ್ತರಿಸಿದ್ದು ಹೀಗೆ- “ನಾನು ಕಂಡಂತೆ ಹೆಂಡತಿಯನ್ನು ಹೆಸರು ಅಥವಾ ಕಿರುಹೆಸರಿಂದ ಕರೆಯುವುದು ಸಾಮಾನ್ಯ. ಕೆಲ ಗಂಡಂದಿರು ಪ್ರೀತಿ ಯಿಂದ ‘ಚಿನ್ನ, ಪುಟ್ಟಿ, ರಾಣಿ’ ಎಂದು ಕರೆಯುತ್ತಾರೆ. ಕೆಲ ಹಿರಿಯರು ‘ಏನಮ್ಮ/ನೋಡಮ್ಮ’ ಅಂತಾರೆ. ಆದರೆ ನಮ್ಮ ಯಜಮಾನರಿಗೆ ಈ ವಿಧಾನಗಳು ಅನ್ವಯಿಸಲ್ಲ. ನನ್ನ ಹೆಸರು ಲೀಲಾದೇವಿ. ಮನೆಯವರೆಲ್ಲ ಸಾಮಾನ್ಯ ವಾಗಿ ನನ್ನನ್ನು ‘ಲೀಲಾ’ ಎಂದು ಕರೆಯುತ್ತಾರೆ. ನನ್ನ ಯಜಮಾನರ ವಿಧಾನ ಮಾತ್ರ ಬೇರೆ. ರಾಯರು ನನ್ನ ಕಳೆದ ಇಪ್ಪತ್ತೊಂದು ವರುಷಗಳ ವೈವಾಹಿಕ ಜೀವನದಲ್ಲಿ ಸದಾ ‘ಲೇ’ ಎಂದೇ ಕರೆದಿದ್ದಾರೆ. ಪ್ರಣಯತನ, ಮೋಹ, ವಾತ್ಸಲ್ಯ ತೋರುವಾಗ ‘ಲೇ ರಾಣಿ’ ಅಂತಾರೆ. ಕೆಲವೊಮ್ಮೆ ಸಿಟ್ಟಿಗೆದ್ದು ಏನ್ರೀ? ನನ್ನ ಹೆಸರಾದರು ನೆನಪುಂಟಾ? ಎಂದು ಕೇಳಿದ್ದೇನೆ. ‘ಲೇ, ಟೆನ್ಶನ್ ತಗೋಬೇಡ ಕಣೆ ಲೇ ಎಂದು ಉತ್ತರಿಸಿ ನಗುತ್ತ ಹೋಗುತ್ತಾರೆ". ಇತ್ತೀಚಿನ ದಿನಗಳಲ್ಲಿ ಹೆಂಡತಿ ತನ್ನ ಗಂಡನನ್ನು ಏಕವಚನದಲ್ಲಿ ಸಂಬೋಧಿಸುವುದನ್ನು ಗಮನಿಸಬಹುದು. ಕೆಲವರಂತೂ ಗಂಡನನ್ನು ಹೋಗಲೋ, ಬಾರಲೋ ಅಂತ ಕರೆಯುತ್ತಾರೆ. ಇದು ಅಗೌರವ ಸೂಚಕವಲ್ಲ. ಅವರ ಪಾಲಿಗೆ ಇದು ಸಲುಗೆ. ಗಂಡನನ್ನು ಸರೀಕನಂತೆ, ಆಪ್ತವಾಗಿ ಕರೆಯುವುದರ ಸಂಕೇತ. ಗಂಡ ಹೆಂಡತಿಯ ಹೆಸರನ್ನು ಸಂಬೋಽಸುವುದಾದರೆ, ಹೆಂಡತಿಯೇಕೆ ಗಂಡನ ಹೆಸರು ಹೇಳಿ ಕರೆಯಬಾರದು ಎಂಬುದು ವಾದ. ಇದರಲ್ಲಿ ತಪ್ಪೇನೂ ಇಲ್ಲ. ಇದು ಗಂಡ-ಹೆಂಡಿರ ನಡುವಿನ ಒಡಂಬಡಿಕೆ. ಗಂಡನ ಜತೆ ಆತನ ತಂದೆ-ತಾಯಿ ವಾಸವಾಗಿರುವ ಮನೆಯಲ್ಲಿ ಹೆಂಡತಿ ತನ್ನ ಗಂಡನ ಹೆಸರು ಹೇಳಿ ಸಂಬೋಧಿ ಸುವ ಧೈರ್ಯ ತೋರದಿರಬಹುದು. ಆಗ ‘ರೀ’ ಸಹಾಯಕಾರಿ. ಇನ್ನು ಕೆಲವರು ಗಂಡನನ್ನು ‘ಏನೂಂದ್ರೆ’ ಎನ್ನುವುದನ್ನು ಕೇಳಿದ್ದೇನೆ. ಇದನ್ನೂ ಓದಿ: @vishweshwarbhat
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ