ಕನ್ಯಾಕುಮಾರಿಯಲ್ಲೊಂದು ಸೂರ್ಯೋದಯ
ಕನ್ಯಾಕುಮಾರಿಯಲ್ಲೊಂದು ಸೂರ್ಯೋದಯ





ಪವನ್ ಕುಮಾರ್ ಆಚಾರ್ಯ
ಭಾರತ ಮಾತೆಯ ಪಾದ ಎಂದರೆ ಯಾವುದು? ಕನ್ಯಾಕುಮಾರಿ ಎನ್ನಬಹುದೆ! ದಕ್ಷಿಣ ಸಮುದ್ರ ತೀರದಲ್ಲಿರುವ ಕನ್ಯಾ ಕುಮಾರಿಗೆ ಹೋದಾಗ ವಿವಿಧ ಭಾವಗಳು ಮನಸ್ಸನ್ನು ಆವರಿಸುತ್ತವೆ. ಅಲ್ಲಿನ ಸಮುದ್ರ ತೀರವನ್ನು, ದಕ್ಷಿಣ ತುದಿಯನ್ನು ಸ್ಪರ್ಶಿಸಿ ನಮಸ್ಕರಿ ದಷ್ಟೇ ಕುಶಿ ಕನ್ಯಾಕುಮಾರಿ ಪ್ರವಾಸದ ಅನುಭವ. ಅದು ನಿಜಕ್ಕೂ ಅವಿಸ್ಮರಣೀಯ.
ಪ್ರಕೃತಿಯ ವೈಭವದ ಇನ್ನೊಂದು ಅದ್ಭುತವನ್ನು ನೋಡಬೇಕೆಂದರೆ ಕನ್ಯಾಕುಮಾರಿ ಯಾತ್ರೆಯನ್ನು ಕೈಗೊಳ್ಳಲೇಬೇಕು. ಕನ್ಯಾಕುಮಾರಿ ಭಾರತದ ಜನಪ್ರಿಯ ಪ್ರವಾಸಿತಾಣ. ಇಲ್ಲಿನ ವಿಶಿಷ್ಟ ಸುರ್ಯೋದಯ, ಸೂರ್ಯಾಸ್ತಮಾನ ಹೆಸರುವಾಸಿ.
ಒಂದೇ ಸ್ಥಳದಲ್ಲಿ ನಿಂತು, ಸಮುದ್ರದ ಅಂಚಿನಿಂದ ಮೇಲೆ ಬರುವ ಸೂರ್ಯನನ್ನು ನೋಡಬಹುದು, ಸಂಜೆ ಸೂರ್ಯನು ಸಮುದ್ರದಲ್ಲಿ ಮುಳುಗುವುದನ್ನೂ ಕಾಣಬಹುದು. ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಕನ್ಯಾಕುಮಾರಿಯ ಸಮುದ್ರ ತೀರದಲ್ಲಿ ಜನಸಾಗರ!
ಕನ್ಯಾಕುಮಾರಿಗೆ ಬಂದವರು ತಿರುವಳ್ಳೂರು ಪ್ರತಿಮೆ ಮತ್ತು ವಿವೇಕಾನಂದ ರಾಕ್ ಸ್ಮಾರಕ ವನ್ನು ನೋಡುವುದು ಸಾಮಾನ್ಯ. ಸಮುದ್ರ ತೀರದಲ್ಲಿ ಕನ್ಯಾಕುಮಾರಿ ದೇವಿಗೆ ಸಮರ್ಪಿತವಾದ ದೇವಾಲಯವಿದೆ. ಆಸ್ತಿಕರು ಈ ದೇವಾಲಯವನ್ನು ಸಂದರ್ಶಿಸಿ, ಪೂಜಿಸುವುದೂ ಇದೆ. ಇಲ್ಲೇ ಇರುವ ಗಾಂಧಿ ಸ್ಮಾರಕ, ಸುನಾಮಿ ಮೆಮೋರಿಯಲ್ ಪಾರ್ಕ್, ಭಗವತಿ ಅಮ್ಮನ್ ದೇವಸ್ಥಾನ ಇತರ ಪ್ರೇಕ್ಷಣೀಯ ಭಾಗಗಳು.
ಬಂಡೆಯ ಮೇಲಿರುವ ತಿರುವಳ್ಳೂರು ಪ್ರತಿಮೆ ೨೯ ಮೀಟರ್ (೯೫ ಅಡಿ) ಎತ್ತರವಿದೆ. ವಿವೇಕಾನಂದ ಸ್ಮಾರಕವು ವಾವಾತುರೈ ಮುಖ್ಯ ಭೂಭಾಗದ ಪೂರ್ವಕ್ಕೆ ಸುಮಾರು ೫೦೦ ಮೀಟರ್ ದೂರದಲ್ಲಿದೆ. ಇದನ್ನು ೧೯೭೦ರಲ್ಲಿ ಸ್ವಾಮೀ ವಿವೇಕಾನಂದರ ಗೌರವಾರ್ಥವಾಗಿ ನಿರ್ಮಿಸಲಾಗಿದೆ.
ಸ್ಥಳೀಯ ದಂತಕಥೆಗಳ ಪ್ರಕಾರ, ಈ ಬಂಡೆಯ ಮೇಲೆ ಕುಮಾರಿ ದೇವಿಯು ತಪಸ್ಸು ಮಾಡಿದ್ದಳು. ವಿವೇಕಾನಂದರೂ ಸಹ ಅದೇ ಸ್ಥಳದಲ್ಲಿ ಧ್ಯಾನ ಮಾಡಿದ್ದರಿಂದ ಅಲ್ಲಿ ಬರುವ ಎಲ್ಲಾ ಪ್ರವಾಸಿಗರ ಅನುಕೂಲಕ್ಕಾಗಿ ಒಂದು ಧ್ಯಾನ ಮಂದಿರವನ್ನೂ ಕಟ್ಟಿ ದ್ದಾರೆ. ಅದರ ಒಳಗೆ ಪ್ರವೇಶಿಸುತ್ತಿದ್ದಂತೆ ಓಂ ಎನ್ನುವ ಶಬ್ದ ನಮ್ಮ ಮನಸ್ಸನ್ನು ಒಮ್ಮೆಲೆ ಏಕಾಗ್ರತೆಯತ್ತ ಸೆಳೆಯುತ್ತದೆ. ಸ್ಮಾರಕದ ಬಳಿ ಹೋಗ ಬೇಕಾದರೆ ಸಮುದ್ರದಲ್ಲಿ ಹೋಗಬೇಕು. ಪ್ರವಾಸಿಗರ ಅನುಕೂಲಕ್ಕಾಗಿ ದೋಣಿ ಅಥವಾ ಬೋಟ್ ಸರ್ವಿಸ್ ಇದೆ. ಸಮುದ್ರದ ಮಧ್ಯೆ ಈ ಬಂಡೆ ಇರುವುದರಿಂದ ಜೋರಾಗಿ ಗಾಳಿ ಬೀಸುತ್ತಾ ಇರುತ್ತದೆ.
ಸುನಾಮಿ ಸ್ಮಾರಕ
ದಕ್ಷಿಣ ಭಾರತದ ಕರಾವಳಿಯುದ್ದಕ್ಕೂ ೨೦೦೪ರ ಡಿಸೆಂಬರ್‌ನಲ್ಲಿ ಸುನಾಮಿ ಅಲೆಗಳು ಬಡಿದವು. ಸಾವಿರಾರು ಜನರು ಸಮುದ್ರದ ನೀರಿನಲ್ಲಿ ಕೊಚ್ಚಿ ಹೋದರು.
ಕನ್ಯಾಕುಮಾರಿಯಲ್ಲೂ ಸುನಾಮಿಯ ಅಲೆಗಳು ಉಕ್ಕಿಬಂದು, ಬಹಳಷ್ಟು ಹಾನಿ ಯಾಯಿತು. ಆ ದುರಂತದ ನೆನಪಿಗಾಗಿ ಇಲ್ಲಿ ಸುನಾಮಿ ಸ್ಮಾರಕವನ್ನು ನಿರ್ಮಿಸಲಾಗಿದೆ. ಪ್ರವಾಸಿಗರು ನೋಡುವ ತಾಣಗಳಲ್ಲಿ ಅದೂ ಸೇರಿದೆ.
ಶಾಪಿಂಗ್
ಕನ್ಯಾಕುಮಾರಿಯಲ್ಲಿ ನಿಮಗೆ ಬೇಕಾದಷ್ಟು ಶಾಪಿಂಗ್ ಮಾಡಬಹುದು. ಕಡಿಮೆ ಬೆಲೆಗೆ ಇಲ್ಲಿ ಕೆಲವು ಆಯ್ದ ವಸ್ತುಗಳು ಲಭ್ಯವಿದ್ದು ಸಾಕಷ್ಟು ಅಂಗಡಿಗಳನ್ನು ನೋಡ ಬಹುದು. ಮುಖ್ಯವಾಗಿ ಶಂಖ, ಕವಡೆ, ಚಿಪ್ಪುಗಳಿಂದ ಮಾಡಿದ ವಸ್ತುಗಳು, ಆಟಿಕೆಗಳು ಇಲ್ಲಿ ಬಹಳ ಕಡಿಮೆ ಬೆಲೆಗೆ ದೊರೆಯು ತ್ತಿದ್ದು, ಜನಸಾಮಾನ್ಯರು ಮತ್ತು ಬಜೆಟ್ ಪ್ರವಾಸಿಗರು ಖರೀದಿಸುವ ಹಲವು ವಸ್ತುಗಳೂ ಇಲ್ಲಿವೆ.
ಕನ್ಯಾಕುಮಾರಿಯಲ್ಲಿ ಅಂದು ನೋಡಿದ ಸೂರ್ಯೋದಯ ಇಂದಿಗೂ ನೆನಪಿನ ಬುತ್ತಿಯಲ್ಲಿ ಭದ್ರವಾಗಿದೆ. ತುಂಬಾ ಸುಂದರ ವಾದ ದೃಶ್ಯ. ಜತೆಗೆ, ವಿವೇಕಾನಂದರು ಧ್ಯಾನ ಮಾಡಿ, ನಮ್ಮ ದೇಶದ ಉದ್ಧಾರಕ್ಕಾಗಿ ಸಂಕಲ್ಪ ಮಾಡಿರುವ ಈ ತಾಣವನ್ನು ಎಲ್ಲರೂ ಒಮ್ಮೆಯಾದರೂ ಸಂದರ್ಶಿಸಬೇಕು.