ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಒಂದೇ ಒಂದು ಜಿರಳೆಯೂ ಇಲ್ಲದ ಪ್ರದೇಶ ಈ ಭೂಮಿ ಮೇಲಿದೆ; ಅದ್ಯಾವುದು ಗೊತ್ತೆ?

ಸಾಮಾನ್ಯವಾಗಿ ಜಿರಳೆಗಳು ಪ್ರತಿಯೊಂದು ಪ್ರದೇಶಗಳಲ್ಲೂ ಕಾಣಸಿಗುತ್ತವೆ. ಆದರೆ ಭೂಮಿಯ ಕೆಲವೊಂದು ಪ್ರದೇಶಗಳಿವೆ. ಇಲ್ಲಿ ಒಂದೇ ಒಂದು ಜಿರಳೆಗಳು ಕಾಣಸಿಗುವುದಿಲ್ಲ ಎನ್ನುತ್ತಾರೆ ಸಂಶೋಧಕರು. ಇದು ಆಶ್ಚರ್ಯಕರವಾದರೂ ಸತ್ಯ. ಭೂಮಿಯ ಮೇಲಿರುವ ಕೆಲವು ಪ್ರದೇಶಗಳಲ್ಲಿ ಜಿರಳೆಗಳೇ ಇಲ್ಲ. ಅಂತಹ ಪ್ರದೇಶಗಳು ಯಾವುದು ಗೊತ್ತೇ ? ಇಲ್ಲಿದೆ ಸಂಪೂರ್ಣ ಮಾಹಿತಿ.

ಭೂಮಿಯ ಮೇಲೆ ಜಿರಳೆಗಳೇ ಇಲ್ಲದ ಸ್ಥಳ ಯಾವುದು ಗೊತ್ತೆ?

ಸಾಂದರ್ಭಿಕ ಚಿತ್ರ -

ಬೆಂಗಳೂರು: ಸಾಮಾನ್ಯವಾಗಿ ಚರಂಡಿಯಿಂದ ಹಿಡಿದು ಅತ್ಯಂತ ಸ್ವಚ್ಛ ಪ್ರದೇಶಗಳಲ್ಲೂ ಜಿರಳೆಗಳು (Cockroaches on earth) ಕಾಣಸಿಗುತ್ತವೆ. ಹೀಗಾಗಿ ಜಿರಳೆಗಳೇ (Cockroaches) ಇಲ್ಲದ ಪ್ರದೇಶವೇ ಇಲ್ಲ ಎಂದು ನೀವಂದುಕೊಂಡಿದ್ದಾರೆ ನಿಮ್ಮ ಊಹೆ ತಪ್ಪು. ಯಾಕೆಂದರೆ ಭೂಮಿಯ ಮೇಲೆ ಇರುವ ಕೆಲವೊಂದು ಪ್ರದೇಶಗಳಲ್ಲಿ ಜಿರಳೆಗಳೇ ಇಲ್ಲ. ಲಕ್ಷಾಂತರ ವರ್ಷಗಳಿಂದ ಭೂಮಿಯ ಮೇಲೆ ವಾಸವಾಗಿರುವ ಜಿರಳೆಗಳು ಭೂಮಿಯ (earth) ಕೆಲವು ಭಾಗಗಳಲ್ಲಿ ಇಲ್ಲವೇ ಇಲ್ಲ ಎನ್ನಬಹುದು. ಇದಕ್ಕೆ ಮುಖ್ಯ ಕಾರಣ ಅಲ್ಲಿನ ಪರಿಸರ ವ್ಯವಸ್ಥೆ ಎಂಬುದನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ.

ಸಾಮಾನ್ಯವಾಗಿ ಜಿರಳೆಗಲ್ ಭೂಮಿಯ 1,050 ಮೀಟರ್ ಆಳ 55- 60 ಡಿಗ್ರಿ ಸೆಲ್ಸಿಯಸ್ ನಲ್ಲೂ ಬದುಕುತ್ತವೆ. ಭೂಮಿ ಮೇಲೆ ಮಾತ್ರವಲ್ಲ ಬಾಹ್ಯಾಕಾಶದಲ್ಲೂ ಅವು ಜೀವಿಸುತ್ತವೆ ಎಂಬುದನ್ನು ವಿಜ್ಞಾನಿಗಳ ತಂಡ ಪ್ರಯೋಗ ಮಾಡಿ ನೋಡಿದೆ. ಪ್ರತಿಕೂಲ ಹವಾಮಾನ, ಬಾಹ್ಯಾಕಾಶ, ವಿಕಿರಣಗಳು, ಕನಿಷ್ಠ ಆಮ್ಲಜನಕ, ಗುರುತ್ವಾಕರ್ಷಣೆಯಿಲ್ಲದೆಯೂ ಬದುಕುವ ಜಿರಳೆಗಳು ಭೂಮಿಯ ಕೆಲವೊಂದು ಪ್ರದೇಶಗಳಲ್ಲಿ ಇಲ್ಲವೇ ಇಲ್ಲ ಎನ್ನುವುದು ಅಚ್ಚರಿಯ ಸಂಗತಿ ಎಂದೇ ಹೇಳಬಹುದು.

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮತ್ತೊಂದು ಅಂತಾರಾಷ್ಟ್ರೀಯ ಮಾನ್ಯತೆಯ ಗರಿ, ಏನಿದು ಎಸಿಐ-3?

ಅಂಟಾರ್ಕ್ಟಿಕಾ ಖಂಡದಲ್ಲಿ ಜಿರಳೆಯೇ ಇಲ್ಲ. ಇಲ್ಲಿನ ತಾಪಮಾನ 50 ಡಿಗ್ರಿಯಿಂದ 89 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ. ಹೀಗಾಗಿ ಇಲ್ಲಿ ಜಿರಳೆಗಳು ಬದುಕುವುದೇ ಅಸಾಧ್ಯ. ಮಾತ್ರವಲ್ಲದೆ ಇಲ್ಲಿ ಕಟ್ಟುನಿಟ್ಟಾದ ಜೈವಿಕ ಸುರಕ್ಷತಾ ನಿಯಮ ಜಾರಿಯಲ್ಲಿದೆ. 2015ರಲ್ಲಿ ನ್ಯೂಜಿಲೆಂಡ್ ನಿಲ್ದಾಣದಲ್ಲಿ ಒಂದು ಜರ್ಮನ್ ಜಿರಳೆ ಕಂಡುಬಂದಿದ್ದು, ಅದನ್ನು ತಕ್ಷಣವೇ ಕೊಲ್ಲಲಾಯಿತು. ಹೀಗಾಗಿ ಇಲ್ಲಿ ಒಂದೇ ಒಂದು ಜಿರಳೆಯೂ ಕಾಣಸಿಗುವುದಿಲ್ಲ.

ಸೈಬೀರಿಯಾದ ಕೆಲವು ಶೀತ ಪ್ರದೇಶಗಳಲ್ಲಿ ತಾಪಮಾನ 60ರಿಂದ 70 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುತ್ತದೆ. ಹೀಗಾಗಿ ಇಲ್ಲಿ ಜಿರಳೆಗಳು ಬದುಕುವುದೇ ಕಷ್ಟವಾಗಿದೆ. ಇಲ್ಲಿನ ಒಯ್ ಮ್ಯಾಕೋನ್ ಮತ್ತು ವರ್ಖೋಯಾನ್ಸ್ ಕ್ ನಂತಹ ಸ್ಥಳಗಳಲ್ಲಿ ತೀವ್ರ ಚಳಿ ಇರುವುದರಿಂದ ಇಲ್ಲಿ ಜಿರಳೆಗಳು ಕಂಡು ಬರುವುದಿಲ್ಲ.

ಹಿಮಾಲಯದ ಅತಿ ಎತ್ತರದ ಶಿಖರಗಳಲ್ಲಿ ಆಮ್ಲಜನಕದ ಕೊರತೆಯಿದೆ. ತಾಪಮಾನವು ಶೂನ್ಯಕ್ಕಿಂತಲೂ ಕೆಳಗೆ ಇಳಿಯುತ್ತದೆ. ಇದರಿಂದಾಗಿ ಇಲ್ಲಿ ಜಿರಳೆಗಳು ಕಾಣಸಿಗುವುದಿಲ್ಲ. ಇಲ್ಲಿನ 5,300 ಮೀಟರ್‌ಗಳ ಎತ್ತರದ ಬೇಸ್ ಕ್ಯಾಂಪ್‌ಗಳಲ್ಲಿಯೂ ಸಹ ಜಿರಳೆಗಳು ಇರುವುದಿಲ್ಲ.

ಪೆಸಿಫಿಕ್ ಸಾಗರ ದ್ವೀಪಗಗಳಾದ ಪಾಲ್ಮಿರಾ ಅಟಾಲ್, ಜಾರ್ವಿಸ್ ದ್ವೀಪ ಮತ್ತು ಹೌಲ್ಯಾಂಡ್ ದ್ವೀಪದಂತಹ ದ್ವೀಪಗಳಲ್ಲಿ ಜಿರಳೆಗಳೇ ಇಲ್ಲ. ಇಲ್ಲಿರುವ ಯುಎಸ್ ಮೀನು ಮತ್ತು ವನ್ಯಜೀವಿಗಳು ಈ ಕೀಟ ಇಲ್ಲಿಗೆ ಬರುವುದನ್ನು ತಡೆದಿದೆ.

ವಯಸ್ಸು 80 ಆದ್ರೂ ಉತ್ಸಾಹಕ್ಕೇನು ಕಮ್ಮಿ ಇಲ್ಲ.... 15,000 ಅಡಿ ಎತ್ತರದಿಂದ ಸ್ಕೈ ಡೈವಿಂಗ್! ವಿಡಿಯೊ ವೈರಲ್‌

ಗ್ರೀನ್‌ಲ್ಯಾಂಡ್‌ನ ಹಿಮಾವೃತ ಪ್ರದೇಶಗಳಲ್ಲಿ ತೀವ್ರ ಶೀತ ಮತ್ತು ದಟ್ಟವಾದ ಮಂಜುಗಡ್ಡೆ ಇರುವುದರಿಂದ ಜಿರಳೆಗಳು ಇಲ್ಲಿ ಹುಟ್ಟಿಲ್ಲ. ಇಲ್ಲಿನ ಶೇ. 99ರಷ್ಟು ಪ್ರದೇಶವು ಜಿರಳೆಗಳಿಂದ ಮುಕ್ತವಾಗಿದೆ.