ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Veteran actor Balakrishna: ಹಿಂದೂ ಧರ್ಮರಕ್ಷಣೆ ಪ್ರತಿಯೊಬ್ಬರ ಹೊಣೆ: ನಟ ಬಾಲಕೃಷ್ಣ

ಬಾಲಕೃಷ್ಣ ಅವರು ಅವರ ತಂದೆ ಎನ್ .ಟಿ . ರಾಮರಾವ್, ವರನಟ ಪದ್ಮಭೂಷಣ ಡಾ ರಾಜ ಕುಮಾರ್ , ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸ್ಮರಣೆ ಮಾಡಿದ ಬಾಲಕೃಷ್ಣ ನಾನು ಲೆಜೆಂಡಾದರೆ, ಶಿವರಾಜ್ ಕುಮಾರ್ ಲೀಡರ್ ಎಂದು ಸಂಬೋಧಿಸಿ ನಟನೆ  ರಾಜ್ ಕುಟುಂಬಕ್ಕೆ ಕರಗತವಾಗಿದೆ ಎಂದು ಅಖಂಡ-2 ಶಿವನ ಆಧಾರಿತ ಚಿತ್ರವಾಗಿದ್ದು ಚಿಂತಾ ಮಣಿ ಕ್ಷೇತ್ರದಲ್ಲಿ ಕೈಲಾಸ ಗಿರಿ ಕ್ಷೇತ್ರಕ್ಕೆ ಭೇಟಿ ನೀಡಿ ಭಗವಂತನ ದರ್ಶನ ಪಡೆಯಲಿದ್ದೇನೆ.

ಹಿಂದೂ ಧರ್ಮರಕ್ಷಣೆ ಪ್ರತಿಯೊಬ್ಬರ ಹೊಣೆ: ನಟ ಬಾಲಕೃಷ್ಣ

-

Ashok Nayak
Ashok Nayak Nov 22, 2025 10:27 PM

ಹಿಂದೂ ಧರ್ಮರಕ್ಷಣೆ ಪ್ರತಿಯೊಬ್ಬರ ಹೊಣೆ:ನಟ ಬಾಲಕೃಷ್ಣ

ಅಭಿಮಾನಿಗಳ ಹರ್ಷೋದ್ದಾರದ ಮಳೆ ನಡುವೆ ಅಖಂಡ 2 ಟ್ರೈಲ‌ರ್ ಬಿಡುಗಡೆ

ಚಿಂತಾಮಣಿ: ಸನಾತನ ಹಿಂದೂ ಧರ್ಮದ ರಕ್ಷಣೆ ಹಾಗೂ ಈ ಧರ್ಮಕ್ಕೆ ಆಪತ್ತು ಬಂದಾಗ ಯಾವ ರೀತಿ ಭಗವಂತ ಮಾನವನ ರೂಪದಲ್ಲಿ ಹೋರಾಟ ನಡೆಸಿ ಸನ್ಮಾರ್ಗ ದಲ್ಲಿ ಕೊಂಡೊಯ್ಯುತ್ತಾನೆ ಎಂಬುದಕ್ಕೆ ಅಖಂಡ 2 ಚಿತ್ರವು ಸಾಕ್ಷಿಯಾಗಲಿದೆ ಎಂದು ಹಿರಿಯ ನಟ ಬಾಲಕೃಷ್ಣ ಅಭಿಪ್ರಾಯಪಟ್ಟರು.

ನಗರ ಹೊರವಲಯದ ಚಿನ್ನಸಂದ್ರದ ಬಳಿ ನಡೆದ ಅಖಂಡ 2 ಚಿತ್ರದ ಟ್ರೈಲ‌ರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ ಸನಾತನ ಹಿಂದೂ ಧರ್ಮರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ. ಅದಕ್ಕೆ ಧಕ್ಕೆ ಬಂದರೆ ಹೋರಾಟ ನಡೆಸಬೇಕು ಅನ್ಯಾಯಕ್ಕೆ ತಲೆಬಾಗದೆ ಅದರ ವಿರುದ್ಧ ಹೋರಾಟ ನಡೆಸಬೇಕೆಂಬ ಅಂಶಕ್ಕೆ ಒತ್ತು ನೀಡಲಾಗಿದೆ ಎಂದರು.

ಬಾಲಕೃಷ್ಣ ಅವರು ಅವರ ತಂದೆ ಎನ್ .ಟಿ . ರಾಮರಾವ್, ವರನಟ ಪದ್ಮಭೂಷಣ ಡಾ ರಾಜಕುಮಾರ್ , ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸ್ಮರಣೆ ಮಾಡಿದ ಬಾಲಕೃಷ್ಣ ನಾನು ಲೆಜೆಂಡಾದರೆ, ಶಿವರಾಜ್ ಕುಮಾರ್ ಲೀಡರ್ ಎಂದು ಸಂಬೋಧಿಸಿ ನಟನೆ  ರಾಜ್ ಕುಟುಂಬಕ್ಕೆ ಕರಗತವಾಗಿದೆ ಎಂದು ಅಖಂಡ-2 ಶಿವನ ಆಧಾರಿತ ಚಿತ್ರವಾಗಿದ್ದು ಚಿಂತಾ ಮಣಿ ಕ್ಷೇತ್ರದಲ್ಲಿ ಕೈಲಾಸ ಗಿರಿ ಕ್ಷೇತ್ರಕ್ಕೆ ಭೇಟಿ ನೀಡಿ ಭಗವಂತನ ದರ್ಶನ ಪಡೆಯಲಿದ್ದೇನೆ. ಸಚಿವ ಡಾ.ಎಂ ಸಿ ಸುಧಾಕರ್ ಅವರ ಸಹಕಾರಕ್ಕೆ ಅಭಾರಿಯಾಗಿದ್ದೇನೆ .ನನ್ನನ್ನು ಮೂರು ಬಾರಿ ಆರಿಸಿದ್ದ ಹಿಂದೂಪುರ ಕ್ಷೇತ್ರದ ಜನತೆ ಹಾಗೂ ತಮ್ಮ ಕೈಲಾದ ಸಹಾಯ ಮಾಡಲು ಶಕ್ತಿ ನೀಡಿರುವ ಭಗವಂತನಿಗೆ ಆಭಾರಿಯಾಗಿದ್ದೇನೆ ಎಂದರು.

ಇದನ್ನೂ ಓದಿ: Chikkaballapur News: ಚದುರಂಗ ಆಡುವುದರಿಂದ ಆಲೋಚನಾ ಶಕ್ತಿ, ಏಕಾಗ್ರತೆ ಹೆಚ್ಚುತ್ತದೆ : ಸಿ.ಇ.ಒ ಡಾ. ವೈ.ನವೀನ್ ಭಟ್ ಚಾಲನೆ

ಕೊರೆಯುವ ಚಳಿ ಹಾಗೂ ಮಳೆಯ ನಡುವೆಯೂ ನನ್ನ ಹಾಗೂ ನಟ ಶಿವರಾಜ್ ಕುಮಾರ್ ಅಭಿಮಾನಿಗಳು ಕಾರ್ಯಕ್ರಮದ ಸ್ಥಳದಲ್ಲಿ ಇದ್ದು ನಮ್ಮನ್ನು ಬೆಂಬಲಿಸಿದ್ದನ್ನು ಕಂಡರೆ ನಮ್ಮ ಮೇಲೆ ಅವರಿಗಿರುವ ವಿಶ್ವಾಸದ ಅರಿವಾಗುತ್ತದೆ.ಇದಕ್ಕಾಗಿ ನಾನು ಆಭಾರಿಯಾಗಿ ದ್ದೇನೆ ಎಂದರು.

ನಟ ಶಿವರಾಜ್ ಕುಮಾರ್ ಮಾತನಾಡಿ ಹಿರಿಯ ನಟ ಬಾಲಕೃಷ್ಣ ಅಭಿನಯಿಸಿಸಿರುವ ಅಖಂಡ2 ಚಿತ್ರದ ಬಿಡುಗಡೆ ಮಾಡಿರುವುದು ಸಂತಸ ತಂದಿದೆ. ಅವರ ಅಭಿನಯ ಅಮೋಘವಾಗಿದೆ. ಚಿತ್ರದಲ್ಲಿನ ಸಂದೇಶವು ಸೂಕ್ತವಾಗಿದೆ ಈ ಚಿತ್ರ ಯಶಸ್ವಿ ಕಾಣಲೆಂದು ಹಾರೈಸಿದರು.

ನಟ ಬಾಲಕೃಷ್ಣ ಸಿನಿಮಾ ರಂಗ ಪ್ರವೇಶಿಸಿ ಐವತ್ತು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಅವರನ್ನು ಅಭಿನಂದಿಸುತ್ತಿದ್ದೇನೆ .ಅವರು ಮತ್ತಷ್ಟು ಮಗದಷ್ಟು ಸಿನಿಮಾ ರಂಗದಲ್ಲಿ ಬೆಳೆಯಲಿ ಎಂದು ಆಶಿಸಿದರು. 

ತಮ್ಮೊಂದಿಗೆ ನಟಿಸಬೇಕೆಂಬ ಬಾಲಕೃಷ್ಣರವರ ಆಸೆಗೆ ಸಂತಸ ವ್ಯಕ್ತಪಡಿಸಿದ ಶಿವರಾಜ್ ಕುಮಾರ್ ಇದಕ್ಕೆ ತಾವು ಸಿದ್ಧವಿರುವುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ನಟಿ ಸಂಯುಕ್ತ ಸೇರಿದಂತೆ ನಿರ್ಮಾಪಕರು ನಿರ್ದೇಶಕರು ಹಾಗೂ ಪ್ರಮುಖರು ಮಾತನಾಡಿ ಡಿಸೆಂಬರ್ ಐದರಂದು ಅಖಂಡ 2ಚಿತ್ರ ಬಿಡುಗಡೆಯಾಗಲಿದೆ ಎಂದರು.ಅಭಿಮಾನಿಗಳ ಹರ್ಷೋದ್ದಾರದ ಮಳೆ ನಡುವೆ ಅಖಂಡ 2 ಟ್ರೈಲ‌ರ್ ಬಿಡುಗಡೆ*

ಚಿಂತಾಮಣಿ :ಸನಾತನ ಹಿಂದೂ ಧರ್ಮದ ರಕ್ಷಣೆ ಹಾಗೂ ಈ ಧರ್ಮಕ್ಕೆ ಆಪತ್ತು ಬಂದಾಗ ಯಾವ ರೀತಿ ಭಗವಂತ ಮಾನವನ ರೂಪದಲ್ಲಿ ಹೋರಾಟ ನಡೆಸಿ ಸನ್ಮಾರ್ಗದಲ್ಲಿ ಕೊಂಡೊಯ್ಯುತ್ತಾನೆ ಎಂಬುದಕ್ಕೆ ಅಖಂಡ 2 ಚಿತ್ರವು ಸಾಕ್ಷಿಯಾಗಲಿದೆ ಎಂದು ಹಿರಿಯ ನಟ ಬಾಲಕೃಷ್ಣ ಅಭಿಪ್ರಾಯ ಪಟ್ಟರು.

ನಗರ ಹೊರವಲಯದ ಚಿನ್ನಸಂದ್ರದ ಬಳಿ ನಡೆದ ಅಖಂಡ 2 ಚಿತ್ರದ ಟ್ರೈಲ‌ರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ ಸನಾತನ ಹಿಂದೂ ಧರ್ಮರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ. ಅದಕ್ಕೆ ಧಕ್ಕೆ ಬಂದರೆ ಹೋರಾಟ ನಡೆಸಬೇಕು ಅನ್ಯಾಯಕ್ಕೆ ತಲೆಬಾಗದೆ ಅದರ ವಿರುದ್ಧ ಹೋರಾಟ ನಡೆಸಬೇಕೆಂಬ ಅಂಶಕ್ಕೆ ಒತ್ತು ನೀಡಲಾಗಿದೆ ಎಂದರು.

 ಬಾಲಕೃಷ್ಣ ಅವರು ಅವರ ತಂದೆ ಎನ್ .ಟಿ . ರಾಮರಾವ್, ವರನಟ ಪದ್ಮಭೂಷಣ ಡಾ ರಾಜಕುಮಾರ್ , ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸ್ಮರಣೆ ಮಾಡಿದ ಬಾಲಕೃಷ್ಣ ನಾನು ಲೆಜೆಂಡಾದರೆ, ಶಿವರಾಜ್ ಕುಮಾರ್ ಲೀಡರ್ ಎಂದು ಸಂಬೋಧಿಸಿ ನಟನೆ  ರಾಜ್ ಕುಟುಂಬಕ್ಕೆ ಕರಗತವಾಗಿದೆ ಎಂದು

ಅಖಂಡ-2 ಶಿವನ ಆಧಾರಿತ ಚಿತ್ರವಾಗಿದ್ದು ಚಿಂತಾಮಣಿ ಕ್ಷೇತ್ರದಲ್ಲಿ ಕೈಲಾಸ ಗಿರಿ ಕ್ಷೇತ್ರಕ್ಕೆ ಭೇಟಿ ನೀಡಿ ಭಗವಂತನ ದರ್ಶನ ಪಡೆಯಲಿದ್ದೇನೆ. ಸಚಿವ ಡಾ.ಎಂ ಸಿ ಸುಧಾಕರ್ ಅವರ ಸಹಕಾರಕ್ಕೆ ಅಭಾರಿಯಾಗಿದ್ದೇನೆ .ನನ್ನನ್ನು ಮೂರು ಬಾರಿ ಆರಿಸಿದ್ದ ಹಿಂದೂಪುರ ಕ್ಷೇತ್ರದ ಜನತೆ ಹಾಗೂ ತಮ್ಮ ಕೈಲಾದ ಸಹಾಯ ಮಾಡಲು ಶಕ್ತಿ ನೀಡಿರುವ ಭಗವಂತನಿಗೆ ಆಭಾರಿಯಾಗಿದ್ದೇನೆ ಎಂದರು.

ಕೊರೆಯುವ ಚಳಿ ಹಾಗೂ ಮಳೆಯ ನಡುವೆಯೂ ನನ್ನ ಹಾಗೂ ನಟ ಶಿವರಾಜ್ ಕುಮಾರ್ ಅಭಿಮಾನಿಗಳು ಕಾರ್ಯಕ್ರಮದ ಸ್ಥಳದಲ್ಲಿ ಇದ್ದು ನಮ್ಮನ್ನು ಬೆಂಬಲಿಸಿದ್ದನ್ನು ಕಂಡರೆ ನಮ್ಮ ಮೇಲೆ ಅವರಿಗಿರುವ ವಿಶ್ವಾಸದ ಅರಿವಾಗುತ್ತದೆ. ಇದಕ್ಕಾಗಿ ನಾನು ಆಭಾರಿ ಯಾಗಿದ್ದೇನೆ ಎಂದರು.

ನಟ ಶಿವರಾಜ್ ಕುಮಾರ್ ಮಾತನಾಡಿ ಹಿರಿಯ ನಟ ಬಾಲಕೃಷ್ಣ ಅಭಿನಯಿಸಿರುವ ಅಖಂಡ2 ಚಿತ್ರದ ಬಿಡುಗಡೆ ಮಾಡಿರುವುದು ಸಂತಸ ತಂದಿದೆ. ಅವರ ಅಭಿನಯ ಅಮೋಘವಾಗಿದೆ. ಚಿತ್ರದಲ್ಲಿನ ಸಂದೇಶವು ಸೂಕ್ತವಾಗಿದೆ ಈ ಚಿತ್ರ ಯಶಸ್ವಿ ಕಾಣಲೆಂದು ಹಾರೈಸಿದರು.

ನಟ ಬಾಲಕೃಷ್ಣ ಸಿನಿಮಾ ರಂಗ ಪ್ರವೇಶಿಸಿ ಐವತ್ತು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಅವರನ್ನು ಅಭಿನಂದಿಸುತ್ತಿದ್ದೇನೆ. ಅವರು ಮತ್ತಷ್ಟು ಮಗದಷ್ಟು ಸಿನಿಮಾ ರಂಗದಲ್ಲಿ ಬೆಳೆಯಲಿ ಎಂದು ಆಶಿಸಿದರು. 

ತಮ್ಮೊಂದಿಗೆ ನಟಿಸಬೇಕೆಂಬ ಬಾಲಕೃಷ್ಣರವರ ಆಸೆಗೆ ಸಂತಸ ವ್ಯಕ್ತಪಡಿಸಿದ ಶಿವರಾಜ್ ಕುಮಾರ್ ಇದಕ್ಕೆ ತಾವು ಸಿದ್ಧವಿರುವುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ನಟಿ ಸಂಯುಕ್ತ ಸೇರಿದಂತೆ ನಿರ್ಮಾಪಕರು ನಿರ್ದೇಶಕರು ಹಾಗೂ ಪ್ರಮುಖರು ಮಾತನಾಡಿ ಡಿಸೆಂಬರ್ ಐದರಂದು ಅಖಂಡ 2ಚಿತ್ರ ಬಿಡುಗಡೆಯಾಗಲಿದೆ ಎಂದರು.