ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಹಿರಿಯ ನಾಗರಿಕರಿಗೆ ಆರೋಗ್ಯಕರ ಜೀವನಶೈಲಿಗೆ ಆಯುರ್ ವೇದ ಉತ್ತಮ: ಡಾ.ಎಸ್.ಮಂಜುಳ ಸಲಹೆ

ನಗರದ ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಜಿಲ್ಲಾ ಸರ್ಕಾರಿ ನಿವೃತ್ತನೌಕರರ ಸಂಘದ ವತಿಯಿಂದ ಶನಿವಾರ ಏರ್ಪಡಿಸಿದ್ದ ಮಾಹೆಗೊಮ್ಮೆ ಆರೋಗ್ಯ ಸಲಹೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ಇಂದಿನ ದಿನಗಳಲ್ಲಿ ಬಿಪಿ, ಸಕ್ಕರೆ ಕಾಯಿಲೆ ಜೊತೆಗೆ ಇನ್ನಿತರ ಆರೋಗ್ಯ ಸಮಸ್ಯೆಗಳು ಸಣ್ಣ ವಯಸ್ಸಿಗೆ ಕಂಡು ಬರುತ್ತಿರುವುದರಿಂದ, ಪ್ರತಿಯೊಬ್ಬರೂ ಕೆಲವೊಂದು ಆರೋಗ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು.

ಹಿರಿಯ ನಾಗರಿಕರಿಗೆ ಆರೋಗ್ಯಕರ ಜೀವನಶೈಲಿಗೆ ಆಯುರ್ ವೇದ ಉತ್ತಮ

-

Ashok Nayak
Ashok Nayak Nov 22, 2025 10:19 PM

ಚಿಕ್ಕಬಳ್ಳಾಪುರ: ಹಿರಿಯ ನಾಗರೀಕರು ನಿವೃತ್ತಿಯ ನಂತರ ಒತ್ತಡಮುಕ್ತ ಜೀವನ ನಡೆಸ ಬೇಕಾದರೆ ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯವೂ ಮುಖ್ಯವಾಗುತ್ತದೆ. ಆರೋಗ್ಯಕರ ಜೀವನಶೈಲಿಗೆ ಆಯುರ್ ವೇದ ಉತ್ತಮ ಔಷಧವಾಗಿದ್ದು, ಚಿಂತೆ ಬಿಡಿ, ನೂರ್ಕಾಲ ಬಾಳಿ ಎಂದು ಆಯುರ್ ವೇದ ತಜ್ಞೆ ಡಾ.ಎಸ್.ಮಂಜುಳ ಹಿರಿಯ ನಾಗರೀಕ ರಿಗೆ ಆರೋಗ್ಯ ಸಲಹೆ ನೀಡಿದರು.   

ನಗರದ ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಜಿಲ್ಲಾ ಸರ್ಕಾರಿ ನಿವೃತ್ತನೌಕರರ ಸಂಘದ ವತಿಯಿಂದ ಶನಿವಾರ ಏರ್ಪಡಿಸಿದ್ದ ಮಾಹೆಗೊಮ್ಮೆ ಆರೋಗ್ಯ ಸಲಹೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ಇಂದಿನ ದಿನಗಳಲ್ಲಿ ಬಿಪಿ, ಸಕ್ಕರೆ ಕಾಯಿಲೆ ಜೊತೆಗೆ ಇನ್ನಿತರ ಆರೋಗ್ಯ ಸಮಸ್ಯೆಗಳು ಸಣ್ಣ ವಯಸ್ಸಿಗೆ ಕಂಡು ಬರುತ್ತಿರುವುದರಿಂದ, ಪ್ರತಿಯೊಬ್ಬರೂ ಕೆಲವೊಂದು ಆರೋಗ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ಇದರ ಜೊತೆಗೆ ಇಳಿ ವಯಸ್ಸಿನಲ್ಲಿನ ಜನರು ಆರೋಗ್ಯದ ವಿಚಾರದಲ್ಲಿ ಎಷ್ಟು ಜಾಗರೂಕತೆ ಮಾಡುತ್ತಾರೆಯೋ ಅಷ್ಟು ಒಳ್ಳೆಯದು ಎಂದರು.

ಮನುಷ್ಯನಿಗೆ ಆರೋಗ್ಯ ಎಂಬ ಹೆಚ್ಚುವರಿ ಅಂಶವಿದ್ದರೆ ಮಾತ್ರ ದೀರ್ಘಾಯುಷ್ಯವು ವರದಾನವಾಗಬಹುದು. ಕಾಲಕ್ಕೆ ಅನುಗುಣವಾಗಿ ಜೀವನವು ಪ್ರಗತಿಶೀಲ ಬದಲಾವಣೆ ಗಳನ್ನು ಪ್ರದರ್ಶಿಸುವುದರಿಂದ, ಆರೋಗ್ಯಕರ, ಸಂತೋಷದ ಜೀವನವನ್ನು ನಡೆಸಲು ಜೀವನಶೈಲಿಯಲ್ಲಿ ಮಾರ್ಪಾಡುಗಳು ಅಗತ್ಯವಾಗಿರುತ್ತದೆ. ತಮ್ಮ ಚಿಕ್ಕ ವಯಸ್ಸಿನಲ್ಲಿ ಉತ್ತಮ ಆರೋಗ್ಯ ಅಭ್ಯಾಸಗಳನ್ನು ಅನುಸರಿಸುವ ಜನರು ತಮ್ಮ ವಯಸ್ಸಿನ ಹೊರ ತಾಗಿಯೂ ತುಲನಾತ್ಮಕವಾಗಿ ಹೆಚ್ಚು ದೃಢವಾಗಿರುತ್ತಾರೆ. 

ಇದನ್ನೂ ಓದಿ: Chikkaballapur News: ಚದುರಂಗ ಆಡುವುದರಿಂದ ಆಲೋಚನಾ ಶಕ್ತಿ, ಏಕಾಗ್ರತೆ ಹೆಚ್ಚುತ್ತದೆ : ಸಿ.ಇ.ಒ ಡಾ. ವೈ.ನವೀನ್ ಭಟ್ ಚಾಲನೆ

ಆದರೆ ಆರೋಗ್ಯಕರ ಜೀವನಶೈಲಿಗೆ ಇದು ಎಂದಿಗೂ ತಡವಲ್ಲ . ಉತ್ತಮ ಆರೋಗ್ಯ ಅಭ್ಯಾಸಗಳನ್ನು ಅನುಸರಿಸುವುದರಿಂದ ವಯಸ್ಸಾದವರಿಗೆ ಜೀವನಶೈಲಿಯಲ್ಲಿ ನೆಮ್ಮದಿ ಸಿಗುತ್ತದೆ. ಇದು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಸಹ ತಡೆಯಬಹುದು.ಸರಿಯಾದ ಔಷಧಿಗಳು ಮತ್ತು ಆಹಾರದೊಂದಿಗೆ ಆರೋಗ್ಯವನ್ನು ಸುಧಾರಿಸಬಹುದು ಎಂದು ತಿಳಿಸಿದರು.

ನಿಯಮಿತವಾಗಿ ದೃಷ್ಟಿ, ಶ್ರವಣ ಮತ್ತು ದಂತ ತಪಾಸಣೆಯನ್ನು ವಯಸ್ಸಾದವರು ಪ್ರತಿ ವರ್ಷ  ಮಾಡಿಸಿಕೊಳ್ಳಬೇಕು. ಅವರ ಸಲಹೆ ಸೂಚನೆಯನ್ನು   ಪಾಲಿಸಬೇಕು. ಜೊತೆಗೆ ಗ್ಲುಕೋಮಾದಂತಹ ಆರೋಗ್ಯ ಸಮಸ್ಯೆಗಳಿಗೆ ತುತ್ತಾದವರು ಅವರ ಕಣ್ಣುಗಳನ್ನು ಪರೀಕ್ಷಿಸಿಕೊಳ್ಳಬೇಕು. ಸರಿಯಾದ ಕನ್ನಡಕವನ್ನು ಹೊಂದಿರುವುದು ಬೀಳುವ ಸಾಧ್ಯತೆ ಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

ಶ್ರವಣ ನಷ್ಟವು ಸಾಮಾನ್ಯವಾಗಿ ವಯಸ್ಸಾದಂತೆ ಸಂಭವಿಸುತ್ತದೆ, ಹೆಚ್ಚಾಗಿ ದೊಡ್ಡ ಶಬ್ದಕ್ಕೆ ಒಡ್ಡಿಕೊಳ್ಳುವುದರಿಂದ ಉಂಟಾಗುತ್ತದೆ. ಆದ್ದರಿಂದ ಶ್ರವಣ ತಪಾಸಣೆಗಳನ್ನು ನಿಯಮಿತ ಮಧ್ಯಂತರದಲ್ಲಿ ಮಾಡಬೇಕು. ಪ್ರತಿ ಆರು ತಿಂಗಳಿಗೊಮ್ಮೆ ದಂತವೈದ್ಯರನ್ನು ಭೇಟಿ ಮಾಡುವುದರಿಂದ ದಂತ ಕುಳಿಗಳ ಅಪಾಯವನ್ನು ಹೊರಗಿಡಬಹುದು ಎಂದು ಹೇಳಿದರು.

ನಿವೃತ್ತ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ.ಬಿ.ವಿ.ಕೃಷ್ಣ ಮಾತನಾಡಿ, ತಪ್ಪು ಗಳನ್ನು ತಿದ್ದಿ ಹೇಳುವ ಹಿರಿಯ ನಾಗರೀಕರು ಮನೆಯಲ್ಲಿರಬೇಕು.ಇತ್ತೀಚಿನ ದಿನಗಳಲ್ಲಿ ಹಿರಿಯರ ಮಾರ್ಗದರ್ಶನ ಇಲ್ಲದ ಕಾರಣ ವೈವಾಹಿಕ ಹಾಗೂ ಆಸ್ತಿ ಸಂಬಂಧಿ ಸಮಸ್ಯೆಗಳು ಹೆಚ್ಚಾಗುತ್ತಿವೆ. ಸಣ್ಣಪುಟ್ಟ ವಿಚಾರಗಳಿಗೂ ಕೋರ್ಟು ಕಛೇರಿ ಅಂತ ಅಲೆಯುವುದು ಸಾಮಾನ್ಯವಾಗಿದೆ. ಸದ್ಯ ನಮ್ಮ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಇಲ್ಲದಿರುವುದು ಸಮಾಧಾನದ ಸಂಗತಿಯಾಗಿದೆ ಎಂದರು.     

ಕಾರ್ಯಕ್ರಮದಲ್ಲಿ ನಿವೃತ್ತ ನೌಕರರ ಎಲ್ಲಾ ಪ್ರಶ್ನೆಗಳಿಗೆ ಸಾವಧಾನವಾಗಿ ಉತ್ತರ ನೀಡಿದ ಡಾ.ಎಸ್.ಮಂಜುಳ ರನ್ನು ಜಿಲ್ಲಾ ನಿವೃತ್ತ ನೌಕರ ಸಂಘದ ವತಿಯಿಂದ ಸಂಘದ ಅಧ್ಯಕ್ಷ ಡಾ. ಬಿ.ವಿ.ಕೃಷ್ಣ ಮತ್ತು ತಂಡದವರು ಗೌರವಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಆರ್ಟ್ ಆಪ್ ಲಿವಿಂಗ್ ಸಂಸ್ಥೆಯ ಭಾರತಿ, ಉಪಾಧ್ಯಕ್ಷ ಗೋಪಾಲ್ ರೆಡ್ಡಿ, ಕಾರ್ಯದರ್ಶಿ ತಿರುಮಳಪ್ಪ, ಖಜಾಂಚಿ ಶ್ರೀನಿವಾಸರೆಡ್ಡಿ, ಹಿರಿಯ ನಾಗರೀಕರ ವೇದಿಕೆಯ ಜಯರಾಮರೆಡ್ಡಿ,ಸರಸಮ್ಮ, ಬಿ.ಎಸ್. ನಾಗರಾಜ್, ನಿವೃತ್ತ ನೌಕರರು, ಹಿರಿಯ ನಾಗರೀಕರು.ಮತ್ತಿತರರು ಇದ್ದರು.