ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಐಷಾರಾಮಿ ಜೀವನ ಶೈಲಿ ನನಗೆ ಇಷ್ಟವಿಲ್ಲ, ಅದೇ ದುಡ್ಡಿನಲ್ಲಿ ಒಬ್ಬರ ಜೀವನ ಬದಲಾಯಿಸಬಹುದು: ವರುಣ್‌ ಚಕ್ರವರ್ತಿ!

ಭಾರತ ಟಿ20 ತಂಡದ ಸ್ಪಿನ್ನರ್‌ ವರುಣ್‌ ಚಕ್ರವರ್ತಿ ಹಣದ ಜೊತೆ ತಮ್ಮ ಸಂಬಂಧ ಯಾವ ರೀತಿ ಇದೆ ಎಂಬುದನ್ನು ರಿವೀಲ್‌ ಮಾಡಿದ್ದಾರೆ. ತಮ್ಮ ಪ್ರಕಾರ ಐಷಾರಾಮಿ ಜೀವನ ಹಾಗೂ ದುಬಾರಿ ವಸ್ತುಗಳನ್ನು ಖರೀದಿಸುವುದರ ಬಗ್ಗೆ ತಮ್ಮ ದೃಷ್ಟಿಕೋನ ಹೇಗಿದೆ ಎಂಬುದನ್ನು ಅವರು ತಿಳಿಸಿದ್ದಾರೆ. ಅಲ್ಲದೆ ತಮ್ಮ ಸ್ನೇಹಿತರ ಬಗ್ಗೆಯೂ ಅವರು ಮಾತನಾಡಿದ್ದಾರೆ.

ʻದುಡ್ಡಿಗಿಂತ ಸ್ನೇಹಿತರು ಮುಖ್ಯʼ: ವರುಣ್‌ ಚಕ್ರವರ್ತಿ ಮನದಾಳದ ಮಾತು!

ವರುಣ್‌ ಚಕ್ರವರ್ತಿ -

Profile Ramesh Kote Oct 18, 2025 12:04 AM

ನವದೆಹಲಿ: ಕಳೆದ 2025ರ ಏಷ್ಯಾ ಕಪ್‌ (Asia Cup 2025) ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದ ಭಾರತ ತಂಡದಲ್ಲಿ (India) ಸ್ಪಿನ್ನರ್‌ ವರುಣ್‌ ಚಕ್ರವರ್ತಿ (Varun Chakravarthy) ಕೂಡ ಇದ್ದರು. ಅವರು ಸದ್ಯ ವಿರಾಮದಲ್ಲಿದ್ದಾರೆ. ಇತ್ತೀಚೆಗೆ ಬ್ರೇಕ್‌ ವಿಥ್‌ ಚಾಂಪಿಯನ್ಸ್‌ ಕಾರ್ಯಕ್ರಮದಲ್ಲಿ ಟೀಮ್‌ ಇಂಡಿಯಾ ಸ್ಪಿನ್ನರ್‌ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದಾರೆ. ಐಷಾರಾಮಿ ಜೀವನ ಶೈಲಿ ಹಾಗೂ ದುಬಾರಿ ವಾಚ್‌ಗಳು ಸೇರಿದಂತೆ ಈ ಎಲ್ಲಾ ಸಂಗತಿಗಳ ಬಗ್ಗೆ ತಾನು ಹೊಂದಿರುವ ದೃಷ್ಟಿಕೋನ ಏನೆಂದು ವರುಣ್‌ ಬಹಿರಂಗಪಡಿಸಿದ್ದಾರೆ. ಅಲ್ಲದೆ ಮಧ್ಯಮ ವರ್ಗದ ಹುಡುಗನಾಗಿ ತಾನು ಯಾವ ರೀತಿ ಯೋಚಿಸುತ್ತೇನೆಂದು ತಿಳಿಸಿದ್ದಾರೆ.

"ದುಡ್ಡಿಗಾಗಿ ನಾನು ಸಾಕಷ್ಟು ಕಷ್ಟಪಟ್ಟಿದ್ದೇನೆ. ಹೂಡಿಕೆ ಮಾಡುವುದೆಂದರೆ ಎಫ್‌ಡಿ ಒಂದೇ ನನಗೆ ಗೊತ್ತಿರುವುದು. ನನ್ನದು ಮಧ್ಯಮ ವರ್ಗದ ಕುಟುಂಬದ ಮನಸ್ಥಿತಿ. ಹಣ ಎಷ್ಟೊಂದು ಶಕ್ತಿಶಾಲಿ ಎಂದು ನನಗೆ ತಿಳಿದಿದೆ. ನೀವು ಯಾವುದರಲ್ಲಾದರೂ ಶಕ್ತಿಶಾಲಿಯಾಗಿದ್ದರೆ, ಅದನ್ನು ನೀವು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಬೇಕಾಗುತ್ತದೆ," ಎಂದು ಹೇಳಿದ್ದಾರೆ.

"ನಾನು ಯಾವ ರೀತಿ ಆಲೋಚನೆ ಮಾಡುತ್ತೇನೆಂದರೆ, ದುಡ್ಡಿನಿಂದ ನನ್ನ ಜೀವನದ ಶೈಲಿ ಬದಲಿಸಿಕೊಳ್ಳುವುದರ ಬದಲು, ಒಬ್ಬರ ಬದುಕನ್ನು ಬದಲಿಸಬಹುದು. ಇದು ತುಂಬಾ ಶಕ್ತಿಶಾಲಿಯಾಗಿದೆ," ಎಂದು ಹೇಳುವ ಮೂಲಕ ವರುಣ್‌ ಚಕ್ರವರ್ತಿ ತಮ್ಮ ಸಾಮಾಜಿಕ ಪ್ರಜ್ಞೆ ಹಾಗೂ ಮಾನವೀಯ ಗುಣಗಳನ್ನು ಎತ್ತಿ ಹಿಡಿದಿದ್ದಾರೆ.

IND vs AUS: ಆಸ್ಟ್ರೇಲಿಯಾ ಒಡಿಐ ಸರಣಿಯಲ್ಲಿ ವಿಶೇಷ ದಾಖಲೆ ಬರೆಯುವ ಸನಿಹದಲ್ಲಿ ಶುಭಮನ್‌ ಗಿಲ್‌!

ದುಬಾರಿ ವಾಚ್‌ ಖರೀದಿಸುವ ಬಗ್ಗೆ ಮಾತನಾಡಿದ ವರುಣ್‌

ಇದೇ ವೇಳೆ ವರುಣ್‌ ಚಕ್ರವರ್ತಿ ದುಬಾರಿ ವಾಚ್‌ ಖರೀದಿಸುವ ಬಗ್ಗೆ ತಮ್ಮಲ್ಲಿ ಉಂಟಾಗುವ ಭಾವನೆಗಳನ್ನು ಬಹಿರಂಗಪಡಿಸಿದ್ದಾರೆ. "ತುಂಬಾ ಹಣವನ್ನು ಖರ್ಚು ಮಾಡುವಾಗ ನನಗೆ ತುಂಬಾ ತಪ್ಪಿತಸ್ಥ ಭಾವನೆ ಉಂಟಾಗುತ್ತದೆ. 30 ಅಥವಾ 40 ಲಕ್ಷ ರೂ. ಬೆಲೆಯ ವಾಚ್‌ ಅನ್ನು ಖರೀದಿಸಿದರೆ, ಆ ಹಣದಲ್ಲಿ ಯಾರಾದರೂ ಒಬ್ಬರ ಎರಡು ಅಥವಾ ಮೂರು ತಲೆಮಾರಿನ ಜೀವನವನ್ನು ಬದಲಿಸಬಹುದು," ಎಂದು ಸ್ಪಿನ್ನರ್‌ ತಿಳಿಸಿದ್ದಾರೆ.

ಮಧ್ಯಮ ವರ್ಗದ ಹುಡುಗನಾಗಿ ದುಬಾರಿ ವಸ್ತುಗಳನ್ನು ಖರೀದಿಸುವಾಗ ನಿಮಗೆ ತಪ್ಪಿತಸ್ಥ ಭಾವನೆ ಉಂಟಾಗುತ್ತದೆಯೇ?

"ಒಂದು ವಾಚ್‌ ಅನ್ನು ನಾನು 3 ಲಕ್ಷ ಅಥವಾ ಅದಕ್ಕಿಂತ ಜಾಸ್ತಿ ಹಣ ಕೊಟ್ಟು ಖರೀದಿಸಿದ್ದೆ. ಇದರಿಂದ ನನಗೆ ಕೊಂದ ಭಾವನೆ ಉಂಟಾಗಿತ್ತು. ದುಬಾರಿ ವಸ್ತುಗಳನ್ನು ಖರೀದಿಸುವವರು ಇದ್ದಾರೆ. ನೋಡಿ, ನನ್ನ ಜೊತೆ ಬೆಳೆದ ಹುಡುಗರಲ್ಲಿ ಕೆಲವರು ಇನ್ನೂ ಫುಡ್‌ ಡೆಲಿವರಿಯಂತಹ ಕೆಲಸಗಳನ್ನು ಮಾಡುತ್ತಿದ್ದಾರೆ. ನಾನು ದುಬಾರಿ ವಸ್ತುಗಳೊಂದಿಗೆ ಅವರನ್ನು ಭೇಟಿ ಮಾಡಲು ಹೋಗಬೇಕೆಂದು ನನಗೆ ಎಂದಿಗೂ ಕಲ್ಪನೆ ಬಂದಿಲ್ಲ. ಅವರ ಗೌರವಕ್ಕೆ ಕುತ್ತು ತರುತ್ತೇನೆಂದು ನಾನು ಭಾವಿಸುತ್ತೇನೆ. ಅದು ನನ್ನ ಸ್ವಂತ ನಿರ್ಧಾರ, ನಾನು ಯಾರನ್ನು ಯಾವುದರಿಂದಲೂ ನಿರ್ಧರಿಸುವುದಿಲ್ಲ," ಎಂದು ವರುಣ್‌ ಚಕ್ರವರ್ತಿ ಹೇಳಿದ್ದಾರೆ.