Dr Sadhanashree Column: ಬಿಸಿಲಿನ ತಾಪಕ್ಕೆ ತಂಪಿನ ಸ್ಪರ್ಶ- ಆಯುರ್ವೇದದ ಸಮಗ್ರ ಪರಿಹಾರಗಳು
ಇದು ಬೇಸಿಗೆಯ ಸಹಜ ಪರಿಣಾಮವೇ ಇರಬಹುದು ಎಂದು ಅವನು ಭಾವಿಸಿದ್ದ. ಒಂದು ದಿನ ಅವನು ಆಯುರ್ವೇದ ವೈದ್ಯರನ್ನು ಭೇಟಿಯಾದಾಗ ಅವರು ಹೇಳಿದರು-ಬಿಸಿಲು ಸಮಸ್ಯೆ ಯಲ್ಲ; ಪ್ರಕೃತಿಗೆ ವಿರುದ್ಧವಾಗಿ ಬದುಕುವುದೇ ಸಮಸ್ಯೆ ಎಂದು ಹೇಳಿ ಗ್ರೀಷ್ಮದಲ್ಲಿ ಅನುಸರಿಸ ಬೇಕಾದ ಕ್ರಮಗಳನ್ನು ವಿವರಿಸಿದರು. ಕೆಲವೇ ದಿನಗಳಲ್ಲಿ ಅವನ ದೇಹದಲ್ಲಿ ತಂಪು, ಮನಸ್ಸಿನಲ್ಲಿ ಶಾಂತಿ ಮತ್ತು ಶಕ್ತಿಯಲ್ಲಿ ಸ್ಪಷ್ಟ ಬದಲಾವಣೆ ಕಂಡುಬಂತು.
-
ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ
ಶಿವಪ್ಪ ಎಂಬ ಒಬ್ಬ ಪರಿಶ್ರಮಿ ಕೃಷಿಕನಿದ್ದ. ಗ್ರೀಷ್ಮ ಋತುವಿನ ಕಿಡಿಕಾರುವ ಬಿಸಿಲಿನಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೆ ದುಡಿದ ಬಳಿಕ ಅವನಿಗೆ ತೀವ್ರ ದಾಹ, ದಣಿವು, ತಲೆನೋವು ಮತ್ತು ಅಸಹನೆ ಕಾಣಿಸಿಕೊಳ್ಳುತ್ತಿತ್ತು. ದಿನದಿಂದ ದಿನಕ್ಕೆ ಅವನ ದೇಹ ದುರ್ಬಲ ವಾಗುತ್ತಿತ್ತು.
ಇದು ಬೇಸಿಗೆಯ ಸಹಜ ಪರಿಣಾಮವೇ ಇರಬಹುದು ಎಂದು ಅವನು ಭಾವಿಸಿದ್ದ. ಒಂದು ದಿನ ಅವನು ಆಯುರ್ವೇದ ವೈದ್ಯರನ್ನು ಭೇಟಿಯಾದಾಗ ಅವರು ಹೇಳಿದರು-ಬಿಸಿಲು ಸಮಸ್ಯೆಯಲ್ಲ; ಪ್ರಕೃತಿಗೆ ವಿರುದ್ಧವಾಗಿ ಬದುಕುವುದೇ ಸಮಸ್ಯೆ ಎಂದು ಹೇಳಿ ಗ್ರೀಷ್ಮದಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ವಿವರಿಸಿದರು. ಕೆಲವೇ ದಿನಗಳಲ್ಲಿ ಅವನ ದೇಹದಲ್ಲಿ ತಂಪು, ಮನಸ್ಸಿನಲ್ಲಿ ಶಾಂತಿ ಮತ್ತು ಶಕ್ತಿಯಲ್ಲಿ ಸ್ಪಷ್ಟ ಬದಲಾವಣೆ ಕಂಡುಬಂತು.
ಋತುಚರ್ಯೆ - ಪ್ರಕೃತಿಯೊಂದಿಗೆ ಹೊಂದಾಣಿಕೆಯ ಜೀವನ ಆಯುರ್ವೇದದಲ್ಲಿ ಋತುಚರ್ಯೆ ಎಂದರೆ ಋತುಗಳಿಗೆ ಅನುಗುಣವಾಗಿ ಜೀವನಶೈಲಿಯನ್ನು ರೂಪಿಸುವುದು. ಪ್ರತಿಯೊಂದು ಋತುವೂ ತನ್ನದೇ ಆದ ಗುಣಗಳನ್ನು ಹೊಂದಿದೆ ಮತ್ತು ಅವು ದೇಹದ ದೋಷಗಳ ಮೇಲೆ ಪರಿಣಾಮ ಬೀರುತ್ತವೆ. ಈ ಬದಲಾವಣೆಗಳಿಗೆ ಅನುಗುಣವಾಗಿ ಆಹಾರ, ನಿದ್ರೆ ಮತ್ತು ಆಚರಣೆಗಳನ್ನು ಹೊಂದಿಸಿಕೊಳ್ಳುವುದು ಆರೋಗ್ಯದ ಮೂಲ.
ಗ್ರೀಷ್ಮ ಋತು - ಉಷ್ಣತೆ ಮತ್ತು ರೂಕ್ಷತೆಯ ಕಾಲ. ಗ್ರೀಷ್ಮದಲ್ಲಿ ಸೂರ್ಯನ ತಾಪ ಅತ್ಯಧಿಕ ವಾಗಿದ್ದು, ಗಾಳಿ ಒಣಗುತ್ತದೆ. ದೇಹದ ಜಲಾಂಶ ಕಡಿಮೆಯಾಗುತ್ತದೆ. ಇದರ ಪರಿಣಾಮ ವಾಗಿ ದಾಹ, ದಣಿವು, ಉಷ್ಣತೆ ಹೆಚ್ಚಾಗುತ್ತದೆ. ದೋಷ ಸ್ಥಿತಿ: ವಾತ ಸಂಚಯ , ಪಿತ್ತ ಚಯ ಮತ್ತು ಕಫ ಕ್ಷಯವಾಗಿ ದೇಹಬಲವು ಹೀನವಾಗುತ್ತದೆ. ಗ್ರೀಷ್ಮದಲ್ಲಿ ದೇಹವನ್ನು ತಂಪಾಗಿಡುವ ಸಮಗ್ರ ಮಾರ್ಗಗಳ ಬಗ್ಗೆ ತಿಳಿದುಕೊಳ್ಳೋಣ:
1 ಶೀತಲ ಸ್ವಭಾವದ ಆಹಾರ ಸೇವನೆ: ಗ್ರೀಷ್ಮ ಋತುವಿನಲ್ಲಿ ಆಹಾರವು ಹಗುರ, ಶೀತಲ ಮತ್ತು ಜೀರ್ಣಸೌಕರ್ಯಯುಕ್ತವಾಗಿರಬೇಕು. ಅಕ್ಕಿ, ಗೋಧಿ, ಹಾಲು, ತುಪ್ಪ, ದ್ರಾಕ್ಷಿ, ಕಲ್ಲಂಗಡಿ, ಸೌತೆಕಾಯಿ, ತೆಂಗಿನಕಾಯಿ ಮುಂತಾದವು ದೇಹಕ್ಕೆ ಶೀತಲತೆ ನೀಡುತ್ತವೆ. ಇವುಗಳಲ್ಲಿ ಮಧುರ ರಸ ಹೆಚ್ಚಾಗಿದ್ದು ಪಿತ್ತ ಶಮನಕ್ಕೆ ಸಹಕಾರಿ.
ಇದನ್ನೂ ಓದಿ: Dr Sadhanashree Column: ಬಿಸಿಲಿನ ತಾಪಕ್ಕೆ ತಂಪಿನ ಸ್ಪರ್ಶ: ಆಯುರ್ವೇದದ ಸಮಗ್ರ ಪರಿಹಾರಗಳು
ಇದಕ್ಕೆ ವಿರುದ್ಧವಾಗಿ ಅತಿಯಾಗಿ ಖಾರ, ಉಪ್ಪು, ಹುಳಿ ಮತ್ತು ಕರಿದ ಆಹಾರಗಳು ದೇಹದ ಒಳಗಿನ ಉಷ್ಣತೆಯನ್ನು ಹೆಚ್ಚಿಸುತ್ತವೆ. ಆದ್ದರಿಂದ ಇವುಗಳನ್ನು ಕಡಿಮೆ ಮಾಡುವುದು ಅತ್ಯಂತ ಅಗತ್ಯ. ಗ್ರೀಷ್ಮದಲ್ಲಿ ಹೆಚ್ಚು ತಿನ್ನುವುದಕ್ಕಿಂತ, ಅಲ್ಪ ಪ್ರಮಾಣದಲ್ಲಿ, ಸರಿಯಾದ ಸಮಯದಲ್ಲಿ, ಸುಲಭವಾಗಿ ಜೀರ್ಣವಾಗುವ ಆಹಾರ ಸೇವಿಸುವುದು ಮುಖ್ಯ.
2 ಸಮರ್ಪಕ ದ್ರವಪಾನ - ದೇಹದ ಜೀವಾಳ: ಗ್ರೀಷ್ಮದಲ್ಲಿ ದೇಹದಿಂದ ಬೆವರು ಮುಖಾಂತರ ಜಲಾಂಶ ಹೊರಹೋಗುತ್ತದೆ. ಇದರಿಂದ ದೇಹದಲ್ಲಿ ಶೋಷಣೆ ಉಂಟಾಗು ತ್ತದೆ. ಆದ್ದರಿಂದ ದ್ರವಪಾನವನ್ನು ಹೆಚ್ಚಿಸಬೇಕು. ಆದರೆ ಬಾಯಾರಿಕೆಗೆ ತಕ್ಕಂತೆ! ಅತಿಯಾಗಿ ತಣ್ಣನೆಯ ಫ್ರಿಡ್ಜ್ ನೀರನ್ನು ಸೇವಿಸುವುದರಿಂದ ಅಗ್ನಿ ದುರ್ಬಲವಾಗುತ್ತದೆ. ಆದ್ದರಿಂದ ಸಹಜ ತಂಪಾದ ಪಾನೀಯಗಳನ್ನು ಸೇವಿಸುವುದು ಉತ್ತಮ. ಈ ಕಾಲದಲ್ಲಿ ಎಳನೀರಿನ ಸೇವನೆ ಅತ್ಯಂತ ಹಿತ !
ಆಯುರ್ವೇದದ ಪಂಚಸಾರ ಪಾನಕ: ಬೆಲ್ಲ ಕರಗಿಸಿದ ನೀರಿಗೆ, ನಿಂಬೆಹಣ್ಣಿನ / ದ್ರಾಕ್ಷಿ ರಸ, ಚಿಟಿಕೆ ಶುಂಠಿ ಪುಡಿ, ಚಿಟಿಕೆ ಏಲಕ್ಕಿ ಪುಡಿ ಸೇರಿಸಿ ತಯಾರಿಸುವ ಈ ಪಾನೀಯವನ್ನು ಸ್ವಲ್ಪ ಸಮಯ ಮಡಿಕೆಯಲ್ಲಿ ಇಟ್ಟು ತಂಪಾಗಿಸಿ ಸೇವಿಸುವುದರಿಂದ ದೇಹಕ್ಕೆ ಶಕ್ತಿ ಮತ್ತು ಶೀತಲತೆ ನೀಡುತ್ತದೆ. ಇದು ದಾಹ ತಣಿಸುವುದರ ಜೊತೆಗೆ ಜೀರ್ಣಕ್ರಿಯೆಯನ್ನೂ ಸುಧಾರಿಸುತ್ತದೆ.
3 ಮಧುರ, ತಿಕ್ತ, ಕಷಾಯ ರಸಗಳ ಸೇವನೆ: ಆಯುರ್ವೇದದ ಪ್ರಕಾರ ರಸ (ಠಿZoಠಿಛಿ) ದೇಹದ ದೋಷಗಳ ಮೇಲೆ ಪರಿಣಾಮ ಬೀರುತ್ತದೆ. ಗ್ರೀಷ್ಮದಲ್ಲಿ ಮಧುರ (oಡಿಛಿಛಿಠಿ), ತಿಕ್ತ (ಚಿಜಿಠಿಠಿಛ್ಟಿ), ಕಷಾಯ (Zoಠ್ಟಿಜ್ಞಿಜಛ್ಞಿಠಿ) ರಸಗಳನ್ನು ಹೆಚ್ಚಾಗಿ ಸೇವಿಸಬೇಕು. ಮಧುರ ರಸ ದೇಹವನ್ನು ಪೋಷಿಸುತ್ತದೆ, ತಿಕ್ತ ರಸ ದೇಹವನ್ನು ಶೋಧಿಸುತ್ತದೆ, ಕಷಾಯ ರಸ ಶೀತಲತೆ ನೀಡುತ್ತದೆ. ಈ ರಸಗಳು ಪಿತ್ತವನ್ನು ನಿಯಂತ್ರಿಸಿ ದೇಹವನ್ನು ಸಮತೋಲನದಲ್ಲಿಡುತ್ತವೆ.
4 ಮಧ್ಯಾಹ್ನದ ಬಿಸಿಲಿನಿಂದ ದೂರವಿರಿ: ಗ್ರೀಷ್ಮದಲ್ಲಿ ಮಧ್ಯಾಹ್ನ ಸೂರ್ಯನ ಕಿರಣಗಳು ಅತ್ಯಂತ ತೀವ್ರವಾಗಿರುತ್ತವೆ. ಈ ಸಮಯದಲ್ಲಿ ಹೊರಗೆ ಹೋಗುವುದರಿಂದ ದೇಹದ ಉಷ್ಣತೆ ಹೆಚ್ಚಾಗಿ ದಣಿವು, ತಲೆನೋವು ಮತ್ತು ಹೀಟ್ ಸ್ಟ್ರೋಕ್ ಸಮಸ್ಯೆಗಳು ಉಂಟಾಗ ಬಹುದು. ಆದ್ದರಿಂದ ಸಾಧ್ಯವಾದಷ್ಟು ಮಧ್ಯಾಹ್ನ ಸಮಯದಲ್ಲಿ ಹೊರಗೆ ಹೋಗುವು ದನ್ನು ತಪ್ಪಿಸಬೇಕು. ಹೊರಗೆ ಹೋಗಬೇಕಾದರೆ ತಲೆಯ ಭಾಗವನ್ನು ರಕ್ಷಿಸಿಕೊಳ್ಳುವುದು ಅಗತ್ಯ.
5 ಹತ್ತಿಯ ಹಗುರ ಉಡುಪು: ಹತ್ತಿ ಬಟ್ಟೆಗಳು ಬೆವರು ಹೀರಿಕೊಳ್ಳುತ್ತವೆ ಮತ್ತು ದೇಹವನ್ನು ತಂಪಾಗಿಡುತ್ತವೆ. ಗ್ರೀಷ್ಮದಲ್ಲಿ ಗಾಢ ಬಣ್ಣದ ಬಟ್ಟೆಗಳು ತಾಪವನ್ನು ಹೆಚ್ಚು ಆಕರ್ಷಿಸುತ್ತವೆ. ಆದ್ದರಿಂದ ಲಘು ಬಣ್ಣದ, ಹಗುರ ಬಟ್ಟೆಗಳನ್ನು ಧರಿಸುವುದು ಉತ್ತಮ. ಸಿಂಥೆಟಿಕ್ ಬಟ್ಟೆಗಳು ದೇಹದಲ್ಲಿ ಉಷ್ಣತೆಯನ್ನು ಹೆಚ್ಚಿಸುತ್ತವೆ, ಆದ್ದರಿಂದ ಅವನ್ನು ತಪ್ಪಿಸುವುದು ಸೂಕ್ತ.
6 ಗುಲಾಬಿ ಚಂದನಾದಿ ಲೇಪನ ಮತ್ತು ಶೀತಲ ಸ್ಪರ್ಶ: ಚಂದನದ ಲೇಪ, ಗುಲಾಬಿ ನೀರು ಮುಂತಾದವುಗಳು ದೇಹಕ್ಕೆ ತಕ್ಷಣ ಶೀತಲತೆ ನೀಡುತ್ತವೆ. ಚಂದನ ಪಿತ್ತ ಶಮನದಲ್ಲಿ ಅತ್ಯಂತ ಪ್ರಸಿದ್ಧ. ತಲೆಗೆ, ಎದೆಗೆ ಅಥವಾ ಮುಖಕ್ಕೆ ಚಂದನ ಲೇಪನ ಹಚ್ಚುವುದರಿಂದ ಉಷ್ಣತೆ ಕಡಿಮೆಯಾಗುತ್ತದೆ. ಇವು ಮನಸ್ಸಿಗೂ ಶಾಂತಿಯನ್ನು ನೀಡುತ್ತವೆ.
7 ಹಗಲುನಿದ್ರೆ - ಗ್ರೀಷ್ಮದ ವಿಶೇಷ ಅನುಮತಿ: ಸಾಮಾನ್ಯವಾಗಿ ಹಗಲುನಿದ್ರೆ ಆಯುರ್ವೇದದಲ್ಲಿ ನಿಷೇDiತ. ಆದರೆ ಗ್ರೀಷ್ಮದಲ್ಲಿ ದೇಹಬಲ ಕಡಿಮೆಯಾಗಿರುವುದರಿಂದ ಸ್ವಲ್ಪ ಸಮಯ ಊಟಕ್ಕೆ ಮುನ್ನ ಖಾಲಿ ಹೊಟ್ಟೆಯಲ್ಲಿ ದಿನನಿದ್ರೆ ಅನುಮತಿಸಲಾಗಿದೆ. ಇದು ದೇಹಕ್ಕೆ ವಿಶ್ರಾಂತಿ ನೀಡಿ ಶಕ್ತಿಯನ್ನು ಪುನಃಸ್ಥಾಪಿಸುತ್ತದೆ. ಆದರೆ ಅತಿಯಾಗಿ, ಊಟದ ನಂತರ ನಿದ್ರೆ ಮಾಡುವುದು ತಪ್ಪು.
8ಸೌಮ್ಯ ವ್ಯಾಯಾಮ ಮತ್ತು ಯೋಗಾಭ್ಯಾಸ: ಗ್ರೀಷ್ಮದಲ್ಲಿ ಹೆಚ್ಚು ವ್ಯಾಯಾಮ ಮಾಡಿದರೆ ದೇಹದ ಶಕ್ತಿ ಕುಗ್ಗುತ್ತದೆ. ಆದ್ದರಿಂದ ಸೌಮ್ಯ ಯೋಗ, ಧ್ಯಾನ, ಪ್ರಾಣಾಯಾಮ ಗಳನ್ನು ಅಭ್ಯಾಸ ಮಾಡಬೇಕು. ವಿಶೇಷವಾಗಿ ಶೀತಲಿ ಮತ್ತು ಶೀತಕಾರಿ ಪ್ರಾಣಾಯಾಮಗಳು ದೇಹದ ಒಳಗಿನ ಉಷ್ಣತೆಯನ್ನು ಕಡಿಮೆ ಮಾಡುತ್ತವೆ.
9 ಶೀತಲ ಸ್ನಾನ ಮತ್ತು ಪರಿಸರ: ತಂಪಾದ ನೀರಿನಲ್ಲಿ ಸ್ನಾನ ಮಾಡುವುದರಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ. ದಿನಕ್ಕೆ ಕನಿಷ್ಠ ಎರಡು ಬಾರಿ ಸ್ನಾನ ಮಾಡುವುದು ಉಪಯುಕ್ತ. ಮನೆಯಲ್ಲೂ ಗಾಳಿಯ ಹರಿವು, ಹಸಿರು ಸಸ್ಯಗಳು, ನೀರಿನ ಸಾನ್ನಿಧ್ಯ ಇತ್ಯಾದಿಗಳು ವಾತಾವರಣವನ್ನು ತಂಪಾಗಿಡುತ್ತವೆ.
10 ಮನಃಶಾಂತಿ - ಆಂತರಿಕ ಶೀತಲತೆ: ಗ್ರೀಷ್ಮದಲ್ಲಿ ದೇಹದ ಜೊತೆಗೆ ಮನಸ್ಸೂ ಉಷ್ಣ ವಾಗುತ್ತದೆ. ಇದರಿಂದ ಕೋಪ, ಅಸಹನೆ ಹೆಚ್ಚಾಗಬಹುದು. ಧ್ಯಾನ, ಭಜನೆ, ಪ್ರಕೃತಿ ಯೊಂದಿಗೆ ಸಮಯ ಕಳೆಯುವುದು ಮನಸ್ಸಿಗೆ ಶಾಂತಿ ನೀಡುತ್ತದೆ. ಮನಸ್ಸು ಶಾಂತವಾಗಿ ದ್ದರೆ ದೇಹವೂ ಶೀತಲವಾಗಿರುತ್ತದೆ.
11 ರಾತ್ರಿ ಭೋಜನ: ಗ್ರೀಷ್ಮ ಋತುವಿನಲ್ಲಿ ದೇಹದ ಜೀರ್ಣಶಕ್ತಿ (ಅಗ್ನಿ) ಸ್ವಾಭಾವಿಕವಾಗಿ ಕಡಿಮೆಯಾಗಿರುತ್ತದೆ. ದಿನವಿಡೀ ಬಿಸಿಲಿನ ಪರಿಣಾಮದಿಂದ ದೇಹ ದಣಿದಿರುವುದರಿಂದ, ರಾತ್ರಿ ಸಮಯದಲ್ಲಿ ಜೀರ್ಣಕ್ಕೆ ಜಡವಾದ ಊಟವನ್ನು ಸೇವಿಸುವುದು ಜೀರ್ಣಕ್ರಿಯೆಗೆ ಒತ್ತಡ ಉಂಟುಮಾಡುತ್ತದೆ. ಇದರ ಪರಿಣಾಮವಾಗಿ ಅಜೀರ್ಣ, ಉರಿಯೂತ, ಹೊಟ್ಟೆ ಉಬ್ಬರ ಮತ್ತು ನಿದ್ರೆಯ ಅಶಾಂತಿ ಕಾಣಿಸಿಕೊಳ್ಳಬಹುದು. ಆದ್ದರಿಂದ ಈ ಋತುವಿನಲ್ಲಿ ರಾತ್ರಿ ಭೋಜನವನ್ನು ತಗ್ಗಿಸುವುದು ಅಥವಾ ಸಂಪೂರ್ಣವಾಗಿ ಬಿಡುವುದು (ಅಪರೂಪ ವಾಗಿ, ದೇಹಕ್ಕೆ ಅನುಗುಣವಾಗಿ) ಒಂದು ಉತ್ತಮ ಆಯ್ಕೆ ಎಂದು ಆಯುರ್ವೇದ ಸೂಚಿಸು ತ್ತದೆ. ಇದಕ್ಕೆ ಬದಲು, ರಾತ್ರಿ ಸಮಯದಲ್ಲಿ ಒಂದು ಲೋಟ ಹಾಲಿಗೆ ಸ್ವಲ್ಪ ಕಲ್ಲು ಸಕ್ಕರೆ ಮತ್ತು ಸ್ವಲ್ಪ ಬೆಣ್ಣೆ ಸೇರಿಸಿ ಸೇವಿಸುವುದು ಅತ್ಯಂತ ಹಿತಕರ.
ಇದರಿಂದಾಗುವ ಪ್ರಯೋಜನಗಳು: ಹಾಲು ಮಧುರ ರಸದೊಂದಿಗೆ ಶೀತಲ ಗುಣವನ್ನು ಹೊಂದಿದ್ದು, ದೇಹಕ್ಕೆ ಪೋಷಕತ್ವ ನೀಡುತ್ತದೆ. ಕಲ್ಲು ಸಕ್ಕರೆ (ಮಿಶ್ರಿ) ದೇಹವನ್ನು ತಂಪಾಗಿಸಿ ದಾಹವನ್ನು ಕಡಿಮೆ ಮಾಡುತ್ತದೆ. ಬೆಣ್ಣೆ ದೇಹದ ಒಣತನವನ್ನು ಕಡಿಮೆ ಮಾಡಿ, ವಾತ-ಪಿತ್ತವನ್ನು ಶಮನಗೊಳಿಸುತ್ತದೆ. ಈ ಸಂಯೋಜನೆ ದೇಹವನ್ನು ಶಾಂತ ಗೊಳಿಸಿ ಉತ್ತಮ ನಿದ್ರೆಗೆ ಸಹಕಾರ.
12 ಸಂಜೆ ಸಮಯದಲ್ಲಿ ಶೀತಲ, ಸಾತ್ವಿಕ ಜೀವನಶೈಲಿ ಅನುಸರಣೆ: ಗ್ರೀಷ್ಮ ಋತು ವಿನಲ್ಲಿ ಸಂಜೆ ಸಮಯವನ್ನು ಶಾಂತ, ಶೀತಲ ಮತ್ತು ಸಾತ್ವಿಕವಾಗಿ ಕಳೆಯುವುದು ಅತ್ಯಂತ ಮುಖ್ಯ. ದಿನವಿಡೀ ಬಿಸಿಲಿನ ಪರಿಣಾಮದಿಂದ ದೇಹ ಮತ್ತು ಮನಸ್ಸು ಎರಡೂ ಒತ್ತಡದಲ್ಲಿರುತ್ತವೆ. ಆದ್ದರಿಂದ ಸಂಜೆ ವೇಳೆಯಲ್ಲಿ ತೀವ್ರ ಶಾರೀರಿಕ ಅಥವಾ ಮಾನಸಿಕ ಚಟುವಟಿಕೆಗಳನ್ನು ತಪ್ಪಿಸಿ, ಶಾಂತ ವಾತಾವರಣವನ್ನು ಆರಿಸಿಕೊಳ್ಳಬೇಕು.
ಸಂಜೆಯ ಸಮಯದಲ್ಲಿ: ತಂಪಾದ ಸ್ಥಳದಲ್ಲಿ ವಿಶ್ರಾಂತಿ ಪಡೆಯುವುದು ಹಸಿರು ಪರಿಸರದಲ್ಲಿ ನಡೆಯುವುದು ಮೃದುವಾದ ಸಂಗೀತವನ್ನು ಕೇಳುವುದು ಧ್ಯಾನ ಅಥವಾ ಭಜನೆ ಮಾಡುವುದು ಇವು ಮನಸ್ಸಿನ ಉಷ್ಣತೆಯನ್ನು ಕಡಿಮೆ ಮಾಡಿ, ದೇಹ-ಮನಸ್ಸಿಗೆ ಸಮತೋಲನವನ್ನು ನೀಡುತ್ತವೆ.
13 ಸಂಸ್ಕಾರಿತ ಜಲ ಸೇವನೆ: ಗ್ರೀಷ್ಮ ಋತುವಿನಲ್ಲಿ ದೇಹದ ಜಲಾಂಶವು ನಿರಂತರವಾಗಿ ಕಡಿಮೆಯಾಗುತ್ತಿರುತ್ತದೆ. ಸಾಮಾನ್ಯ ನೀರನ್ನು ಮಾತ್ರ ಸೇವಿಸುವುದರಿಂದ ದಾಹ ತಣಿಯಬಹುದು, ಆದರೆ ದೇಹಕ್ಕೆ ಅಗತ್ಯವಾದ ಶೀತಲ ಗುಣ ಮತ್ತು ಔಷಧಿಯ ಪೋಷಕತೆ ಸಿಗುವುದಿಲ್ಲ. ಆದ್ದರಿಂದ ಆಯುರ್ವೇದವು ಸಂಸ್ಕಾರಿತ ಜಲ ಎಂಬ ವಿಶಿಷ್ಟ ವಿಧಾನವನ್ನು ಸೂಚಿಸುತ್ತದೆ -ಔಷಧಿಯ ದ್ರವ್ಯಗಳನ್ನು ನೀರಿನಲ್ಲಿ ಸಂಸ್ಕರಿಸಿ ತಯಾರಿಸುವ ನೀರು. ಇದು ಕೇವಲ ದಾಹವನ್ನು ತಣಿಸುವುದಲ್ಲ, ದೇಹದ ಒಳಗಿನ ಉಷ್ಣತೆಯನ್ನು ಸಮತೋಲನ ಗೊಳಿಸಿ ದೋಷಗಳನ್ನು ಶಮನಗೊಳಿಸುತ್ತದೆ.
ಗ್ರೀಷ್ಮದಲ್ಲಿ ಉಪಯುಕ್ತವಾದ ಕೆಲವು ಔಷಧಿಯ ಜಲಗಳ ಉದಾಹರಣೆಗಳು: ಏಲಾ ಜಲ: ಏಲಕ್ಕಿಯನ್ನು ನೀರಿನಲ್ಲಿ ಹಾಕಿ ಕುದಿಸಿ ತಂಪಾಗಿಸಿದ ಜಲ. ಇದು ದೇಹಕ್ಕೆ ಸುಗಂಧಯುಕ್ತ ಶೀತಲತೆ ನೀಡುತ್ತದೆ, ದಾಹವನ್ನು ಕಡಿಮೆ ಮಾಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಹಗುರವಾಗಿಡುತ್ತದೆ.
ಉಶೀರ ಜಲ: ಉಶೀರ (ವೇಟಿವರ್) ಬೇರುಗಳನ್ನು ನೀರಲ್ಲಿ ನೆನೆಸಿಟ್ಟು ಅಥವಾ ಕುದಿಸಿ ತಯಾರಿಸುವ ಜಲ. ಇದು ಅತ್ಯಂತ ಶೀತಲ ಗುಣವನ್ನು ಹೊಂದಿದ್ದು, ಪಿತ್ತ ಶಮನದಲ್ಲಿ ವಿಶೇಷವಾಗಿ ಪರಿಣಾಮಕಾರಿ. ದೇಹದ ಉಷ್ಣತೆಯನ್ನು ತಕ್ಷಣ ಕಡಿಮೆ ಮಾಡುತ್ತದೆ.
ಸಾರಿವಾ ಪಾನಕ / ದ್ರಾಕ್ಷಿ ಪಾನಕ: ಸಾರಿವಾ (ಅನಂತಮೂಲ) ಬಳಸಿ ತಯಾರಿಸುವ ಪಾನಕ. ಇದು ರಕ್ತವನ್ನು ಶುದ್ಧೀಕರಿಸಿ, ದಾಹ ಮತ್ತು ಉರಿಯನ್ನು ಕಡಿಮೆ ಮಾಡುತ್ತದೆ. ಗ್ರೀಷ್ಮದಲ್ಲಿ ಪಿತ್ತದ ಹೆಚ್ಚಳವನ್ನು ತಡೆಯಲು ಅತ್ಯುತ್ತಮ.
ಶ್ರೀಗಂಧ ಜಲ (ಖ್ಟಜಿಜZbeZ UZಠಿಛ್ಟಿ): ಚಂದನವನ್ನು ನೀರಲ್ಲಿ ಸಂಸ್ಕರಿಸಿ ತಯಾರಿಸುವ ಜಲ. ಇದು ದೇಹ ಮತ್ತು ಮನಸ್ಸಿಗೆ ಆಳವಾದ ಶೀತಲತೆಯನ್ನು ನೀಡುತ್ತದೆ. ಪಿತ್ತವನ್ನು ಶಮನಗೊಳಿಸಿ ಮನಸ್ಸಿಗೆ ಶಾಂತಿಯನ್ನು ಉಂಟುಮಾಡುತ್ತದೆ.
ಉಪಯೋಗಿಸುವ ವಿಧಾನ: ಈ ರೀತಿಯ ಸಂಸ್ಕೃತ ಜಲವನ್ನು ದಿನವಿಡೀ ಸಾಮಾನ್ಯ ನೀರಿನ ಬದಲು ಕುಡಿಯಬಹುದು. ಅತಿಶೀತಗೊಳಿಸದೆ, ಸಹಜ ತಂಪಿನಲ್ಲಿ ಸೇವಿಸುವುದು ಹೆಚ್ಚು ಹಿತಕರ.
14 ಉತ್ತಮ ನಿದ್ರೆಗೆ ಪದಾಭ್ಯಂಗ: ಗ್ರೀಷ್ಮ ಋತುವಿನಲ್ಲಿ ದೇಹದ ಉಷ್ಣತೆ ಹೆಚ್ಚಿರುವು ದರಿಂದ ರಾತ್ರಿ ಸಮಯದಲ್ಲಿ ನಿದ್ರೆ ಅಶಾಂತವಾಗುವುದು ಸಾಮಾನ್ಯ. ದೇಹದ ಒಳಗಿನ ತಾಪಮಾನ ಹೆಚ್ಚಿರುವುದರಿಂದ ಮನಸ್ಸು ಸಹ ಚಂಚಲವಾಗಿದ್ದು, ಗಾಢ ನಿದ್ರೆ ಕಾಣಿಸಿಕೊಳ್ಳುವುದಿಲ್ಲ. ಆದ್ದರಿಂದ ನಿದ್ರೆಗೆ ಮುನ್ನ ದೇಹವನ್ನು ಶೀತಲಗೊಳಿಸುವ ಕ್ರಮಗಳನ್ನು ಅನುಸರಿಸುವುದು ಅತ್ಯಂತ ಅಗತ್ಯ. ಈ ಸಂದರ್ಭದಲ್ಲಿ ಆಯುರ್ವೇದವು ಸೂಚಿಸುವ ಅತ್ಯಂತ ಸರಳ ಮತ್ತು ಪರಿಣಾಮಕಾರಿ ವಿಧಾನವೇ ಪದಾಭ್ಯಂಗ (ಪಾದಗಳಿಗೆ ಮೃದುವಾಗಿ ಮಸಾಜ್ ಮಾಡುವುದು).
ಅನುಸರಿಸಬೇಕಾದ ಕ್ರಮ: ಮೊದಲು ಕಾಲುಗಳನ್ನು ತಂಪಾದ ನೀರಿನಿಂದ ಚೆನ್ನಾಗಿ ತೊಳೆಯಬೇಕು ಕಣ್ಣುಗಳನ್ನು ಸಹ ತಂಪಾದ ನೀರಿನಿಂದ ತೊಳೆಯುವುದು ನಂತರ ಸ್ವಲ್ಪ ತುಪ್ಪವನ್ನು ತೆಗೆದುಕೊಂಡು ಪಾದಗಳಿಗೆ 3-4 ನಿಮಿಷ ಮೃದುವಾಗಿ ಮಸಾಜ್ ಮಾಡಬೇಕು ಇದರ ಜೊತೆಗೆ ತಲೆಯ ಮೇಲಿನ ಭಾಗವಾದ ಬ್ರಹ್ಮರಂಧ್ರ ಪ್ರದೇಶಕ್ಕೆ ಸ್ವಲ್ಪ ಶೀತಲ ತುಪ್ಪವನ್ನು ಹಚ್ಚಬಹುದು.
ಇದರಿಂದಾಗುವ ಪ್ರಯೋಜನಗಳು:
ದೇಹದ ಉಷ್ಣತೆ ಕ್ರಮೇಣ ಕಡಿಮೆಯಾಗುತ್ತದೆ
ವಾತ ದೋಷ ಶಮನಗೊಂಡು ದೇಹದಲ್ಲಿ ಶಾಂತ ಸ್ಥಿತಿ ಉಂಟಾಗುತ್ತದೆ
ನರಮಂಡಲಕ್ಕೆ ವಿಶ್ರಾಂತಿ ಸಿಗುತ್ತದೆ
ಮನಸ್ಸು ಸ್ಥಿರವಾಗಿ, ಗಾಢ ನಿದ್ರೆ ಬರಲು ಸಹಾಯಕವಾಗುತ್ತದೆ
ದಿನವಿಡೀ ಬಂದ ದಣಿವು ಮತ್ತು ತಣಿವು ನಿವಾರಣೆಯಾಗುತ್ತದೆ
15 ಶಿರೋಶೀತಲತೆಗೆ ಲೇಪ ಮತ್ತು ಘೃತೋಪಚಾರ: ಗ್ರೀಷ್ಮ ಋತುವಿನಲ್ಲಿ ದೇಹದ ಉಷ್ಣತೆಯೊಂದಿಗೆ ತಲೆಯ ಭಾಗದಲ್ಲಿ ತಾಪಮಾನ ಹೆಚ್ಚಾಗುವುದು ಸಾಮಾನ್ಯ. ಇದರಿಂದ ತಲೆಬಿಸಿ, ಕಣ್ಣಿನ ಉರಿ, ಕೂದಲಿನ ಒಣತನ, ಅಸಹನೆ ಮತ್ತು ನಿದ್ರೆಯ ಅಶಾಂತಿ ಕಾಣಿಸಿಕೊಳ್ಳಬಹುದು. ಆದ್ದರಿಂದ ಶಿರಸ್ಸನ್ನು ಶೀತಲವಾಗಿಡುವುದು ಅತ್ಯಂತ ಅಗತ್ಯ. ಆಯುರ್ವೇದದಲ್ಲಿ ಇದಕ್ಕಾಗಿ ಸರಳವಾದ ಮತ್ತು ಪರಿಣಾಮಕಾರಿ ವಿಧಾನಗಳನ್ನು ಸೂಚಿಸಲಾಗಿದೆ.
ಅನುಸರಿಸಬಹುದಾದ ವಿಧಾನಗಳು:
ಆಮಲಕೀ ಲೇಪ: ನೆಲ್ಲಿಕಾಯಿ / ಆಮಲಕೀ ಪುಡಿಯನ್ನು ಮೊಸರಿನೊಂದಿಗೆ ಕಲಸಿ ಲೇಪ ತಯಾರಿಸಿ ತಲೆಗೆ ಹಚ್ಚಬೇಕು. ಆಮಲಕೀ ಪಿತ್ತ ಶಮನದಲ್ಲಿ ಪ್ರಸಿದ್ಧವಾಗಿದ್ದು, ತಲೆಗೆ ಶೀತಲತೆ ನೀಡುತ್ತದೆ ಮತ್ತು ಕೂದಲಿಗೂ ಪೋಷಕವಾಗಿದೆ.
ಮೆಂತ್ಯ ಲೇಪ: ಮೆಂತ್ಯ ಕಾಳುಗಳನ್ನು ರಾತ್ರಿ ನೀರಲ್ಲಿ ನೆನೆಸಿಟ್ಟು, ಬೆಳಗ್ಗೆ ಅದನ್ನು ಮೊಸರಿನೊಂದಿಗೆ ರುಬ್ಬಿ ಲೇಪ ತಯಾರಿಸಬಹುದು. ಇದು ತಲೆಯ ಉಷ್ಣತೆಯನ್ನು ಕಡಿಮೆ ಮಾಡುತ್ತದೆ ಮತ್ತು ತಲೆಚರ್ಮವನ್ನು ಮೃದುವಾಗಿಸುತ್ತದೆ.
ಅನುಸರಿಸುವ ವಿಧಾನ: ಮೇಲಿನ ಲೇಪಗಳಲ್ಲಿ ಯಾವುದನ್ನಾದರೂ ಆಯ್ಕೆ ಮಾಡಿ ತಲೆಗೆ ಹಚ್ಚಬೇಕು ಸುಮಾರು 30-45 ನಿಮಿಷಗಳವರೆಗೆ ಇರಿಸಬೇಕು ನಂತರ ತಂಪಾದ ನೀರಿನಿಂದ ತಲೆ ತೊಳೆಯಬೇಕು ನೆಗಡಿ, ತಲೆಭಾರ ಇದ್ದಾಗ ಬೇಡ ಈ ಕ್ರಮವನ್ನು ಒಂದು ದಿನ ಬಿಟ್ಟು ಒಂದು ದಿನ ಅನುಸರಿಸುವುದು ಉತ್ತಮ.
ಘೃತೋಪಚಾರ: ತುಪ್ಪದಲ್ಲಿ ಅದ್ದಿದ ಹತ್ತಿಯನ್ನು ತಲೆಯ ಮೇಲೆ, ವಿಶೇಷವಾಗಿ ಮಧ್ಯಭಾಗದಲ್ಲಿ (ಬ್ರಹ್ಮರಂಧ್ರ ಪ್ರದೇಶದಲ್ಲಿ) ಇಟ್ಟು, ಸುಮಾರು 45 ನಿಮಿಷಗಳವರೆಗೆ ಇರಿಸಬಹುದು. ಇದು ಆಳವಾದ ಶೀತಲತೆ ನೀಡುವ ವಿಧಾನವಾಗಿದೆ. ನಂತರ ತಣ್ಣೀರಿನಲ್ಲಿ ತಲೆಸ್ನಾನ.
ಇದರಿಂದಾಗುವ ಪ್ರಯೋಜನಗಳು: ತಲೆಯ ಉಷ್ಣತೆಯನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ ಪಿತ್ತ ದೋಷವನ್ನು ಶಮನಗೊಳಿಸುತ್ತದೆ ಕಣ್ಣುಗಳ ಉರಿ ಮತ್ತು ತಲೆಬಿಸಿ ಕಡಿಮೆಯಾಗುತ್ತದೆ ಕೂದಲು ಮತ್ತು ತಲೆಚರ್ಮಕ್ಕೆ ಪೋಷಣೆ ನೀಡುತ್ತದೆ ಮನಸ್ಸಿಗೆ ಶಾಂತಿ ನೀಡಿ ಉತ್ತಮ ನಿದ್ರೆಗೆ ಸಹಕಾರಿ ಗ್ರೀಷ್ಮ ಋತು ದೇಹಕ್ಕೆ ಸವಾಲಿನ ಕಾಲವಾದರೂ, ಆಯುರ್ವೇದದ ಋತುಚರ್ಯೆಯನ್ನು ಅನುಸರಿಸಿದರೆ ಅದನ್ನು ಸುಲಭವಾಗಿ ಸಮತೋಲನಗೊಳಿಸಬಹುದು.
ಪ್ರಕೃತಿಯ ಗುಣಧರ್ಮಗಳನ್ನು ಅರಿತು ಅದಕ್ಕೆ ಹೊಂದಿಕೊಂಡ ಜೀವನಶೈಲಿಯನ್ನು ಅಳವಡಿಸಿಕೊಂಡರೆ ದೇಹದಲ್ಲಿ ಶೀತಲತೆ, ಮನಸ್ಸಿನಲ್ಲಿ ಶಾಂತಿ ಮತ್ತು ಜೀವನದಲ್ಲಿ ಸಮತೋಲನ ಸಾಧಿಸಬಹುದು. ಪ್ರಕೃತಿಗೆ ಹೊಂದಿಕೊಂಡ ಜೀವನವೇ ನಿಜವಾದ ಆರೋಗ್ಯದ ಮಂತ್ರ. ಈ ಗ್ರೀಷ್ಮದಲ್ಲಿ ಆಯುರ್ವೇದದ ಈ 15 ಮಾರ್ಗಗಳನ್ನು ಅನುಸರಿಸಿ. ದೇಹ ತಂಪಾಗಲಿ, ಮನಸ್ಸು ಹಗುರವಾಗಲಿ, ಜೀವನ ಆರೋಗ್ಯಕರವಾಗಲಿ.