ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಸಾಕುಪ್ರಾಣಿಗಳಿಗೂ ಕೆಫೆ

ಪ್ರಾಣಿ ಕೆಫೆ ಅಥವಾ ಸಾಕುಪ್ರಾಣಿ ಕೆಫೆ ಎಂದೂ ಕರೆಯುವ ಒಂದು ವಿಶಿಷ್ಟ ಸ್ಥಳವಾಗಿದ್ದು, ಜನರು ಆಹಾರ ಮತ್ತು ಪಾನೀಯಗಳನ್ನು ಆನಂದಿಸುವಾಗ ಬೆಕ್ಕು, ನಾಯಿ, ಮೊಲ, ಗೂಬೆ ಅಥವಾ ಕುರಿ ಗಳಂ ಥ ವಿವಿಧ ಪ್ರಾಣಿಗಳನ್ನು ನೋಡಬಹುದು ಮತ್ತು ಅವುಗಳ ಜತೆ ಆಟವಾಡಲೂಬಹುದು. ಮೊದಲ ಪ್ರಾಣಿ ಕೆಫೆ 1998ರಲ್ಲಿ ತೈವಾನ್‌ನಲ್ಲಿ ಆರಂಭವಾಯಿತು.

ಸಾಕುಪ್ರಾಣಿಗಳಿಗೂ ಕೆಫೆ

ಸಂಪಾದಕರ ಸದ್ಯಶೋಧನೆ

ಜಪಾನ್ ಹೊಸ ಮತ್ತು ಆಧುನಿಕ ಸಂಸ್ಕೃತಿಯನ್ನು ಅಪ್ಪಿಕೊಳ್ಳುವುದರಲ್ಲಿ, ಅದನ್ನು ಸೆಳೆದು ಕೊಳ್ಳುವುದರಲ್ಲಿ ಎತ್ತಿದ ಕೈ. ಅನನ್ಯ ಅನುಭವಗಳನ್ನು ನೀಡುವ ಮತ್ತು ಹೊಸತನ್ನು ಸ್ವೀಕರಿಸುವ ಮನೋಭಾವಕ್ಕಾಗಿ ಜಪಾನ್ ಪ್ರಖ್ಯಾತ. ಇದಕ್ಕೆ ಒಂದು ಉತ್ತಮ ಉದಾಹರಣೆ ಪ್ರಾಣಿ ಕೆಫೆಗಳು ( Animal Cafes). ಟೋಕಿಯೋ ಮತ್ತು ಇತರ ಪ್ರಮುಖ ನಗರಗಳಲ್ಲಿ, ಜನರು ವಿವಿಧ ಪ್ರಾಣಿಗಳ ಜತೆ ಸಮಯ ಕಳೆಯಲು ವಿಶೇಷ ರೀತಿಯ ಕೆಫೆ ಗಳಿಗೆ ಭೇಟಿ ನೀಡುತ್ತಾರೆ. ಬೆಕ್ಕು, ನಾಯಿ, ಕಾಗೆ, ಮೊಲ ಸೇರಿದಂತೆ ಸಸ್ಯಹಾರಿ ಪ್ರಾಣಿಗಳು ಮತ್ತು ಜಪಾನಿನ ಇತರ ವಿಶೇಷ ಜೀವಿಗಳನ್ನು ನೋಡಲು ಈ ಕೆಫೆಗಳಿಗೆ ಹೋಗುತ್ತಾರೆ.

ಪ್ರಾಣಿ ಕೆಫೆ ಅಥವಾ ಸಾಕುಪ್ರಾಣಿ ಕೆಫೆ ಎಂದೂ ಕರೆಯುವ ಒಂದು ವಿಶಿಷ್ಟ ಸ್ಥಳವಾಗಿದ್ದು, ಜನರು ಆಹಾರ ಮತ್ತು ಪಾನೀಯಗಳನ್ನು ಆನಂದಿಸುವಾಗ ಬೆಕ್ಕು, ನಾಯಿ, ಮೊಲ, ಗೂಬೆ ಅಥವಾ ಕುರಿ ಗಳಂಥ ವಿವಿಧ ಪ್ರಾಣಿಗಳನ್ನು ನೋಡಬಹುದು ಮತ್ತು ಅವುಗಳ ಜತೆ ಆಟವಾಡಲೂಬಹುದು. ಮೊದಲ ಪ್ರಾಣಿ ಕೆಫೆ 1998ರಲ್ಲಿ ತೈವಾನ್‌ನಲ್ಲಿ ಆರಂಭವಾಯಿತು.

ಇದನ್ನೂ ಓದಿ: Vishweshwar Bhat Column: ಶಿಂಟೋ ಧರ್ಮದ ಕುರಿತು

ಅಲ್ಲಿ ಬೆಕ್ಕಿಗಾಗಿ ಕೆಫೆಯನ್ನು ತೆರೆಯಲಾಗಿತ್ತು. ಇದನ್ನು ನೋಡಿ, ಜಪಾನ್ ಕೂಡ 2004ರಲ್ಲಿ ಟೋಕಿ ಯೋದಲ್ಲಿ ತನ್ನ ಮೊದಲ ಮಾರ್ಜಾಲ ಕೆಫೆಯನ್ನು ತೆರೆಯಿತು. ಇದನ್ನು ಅನುಸರಿಸಿ, ಹಲವಾರು ಪ್ರಾಣಿಗಳ ಕೆಫೆಗಳು ಜನಪ್ರಿಯವಾದವು. ಟೋಕಿಯೋದಂದೇ ಕನಿಷ್ಠ 39 ಮಾರ್ಜಾಲ ಕೆಫೆಗಳಿವೆ.

ಒಟ್ಟಾರೆ ಜಪಾನಿನಲ್ಲಿ 150ಕ್ಕೂ ಹೆಚ್ಚು ಮಾರ್ಜಾಲ ಕೆಫೆಗಳನ್ನು ಹೊಂದಿದೆ. ಜಪಾನಿನ ಅನೇಕ ಅಪಾರ್ಟ್‌ಮೆಂಟ್ ಗಳಲ್ಲಿ ಸಾಕುಪ್ರಾಣಿಗಳನ್ನು ಹೊಂದುವುದನ್ನು ನಿಷೇಧಿಸಲಾಗಿದೆ. ಅದಕ್ಕಿಂತ ಹೆಚ್ಚಾಗಿ ಜಪಾನಿನಲ್ಲಿ ಪ್ರಾಣಿಗಳನ್ನು ಮನೆಯಲ್ಲಿಟ್ಟುಕೊಳ್ಳಲು ಅನೇಕರಿಗೆ ಸಾಧ್ಯವಿರುವುದಿಲ್ಲ. ಇಲ್ಲಿಯ ಅಪಾರ್ಟ್‌ಮೆಂಟ್‌ಗಳು ತೀರಾ ಸಣ್ಣದಾಗಿರುವುದರಿಂದ, ಮನುಷ್ಯರಿಗಷ್ಟೇ ವಾಸಿಸಲು ಸಾಧ್ಯ. ಹೀಗಿರುವಾಗ ಸಾಕುಪ್ರಾಣಿಗಳೊಂದಿಗೆ ವಾಸಿಸುವುದು ಕಷ್ಟ.

ಇದು ಸಾಕುಪ್ರಾಣಿಗಳ ಕೆಫೆಗಳ ಜನಪ್ರಿಯತೆಗೆ ಕಾರಣವಾಗಿರಬಹುದು. ಸಾಕುಪ್ರಾಣಿಗಳೊಂದಿಗೆ ಸಮಯ ಕಳೆಯಬಯಸುವ ಪ್ರಾಣಿಪ್ರಿಯರು ಅಲ್ಲಿನ ಅನಿಮಲ್ ಕೆಫೆಗೆ ಹೋಗುತ್ತಾರೆ. ನಗರ ಜೀವ ನದ ಒತ್ತಡವನ್ನು ನಿವಾರಿಸಲು ನಾಯಿ, ಬೆಕ್ಕುಗಳೊಂದಿಗೆ ಕೆಲ ಹೊತ್ತು ಕಳೆಯಲು ಬಯಸುವವರ ಸಂಖ್ಯೆ ಅಧಿಕ. ಅಲ್ಲಿ ಬೆಕ್ಕು ಕೆಫೆ ( Cat Cafe), ನಾಯಿ ಕೆಫೆ (Dog Cafe), ಗೂಬೆ ಕೆಫೆ ಮೊಲ ಮತ್ತು ಹಾವು ಕೆಫೆ (Rabbit and Reptile Cafe), ಮುಂಗೂಸಿ ಕೆಫೆ, ಕಾಗೆ ಕೆಫೆ ಸೇರಿದಂತೆ ಹದಿನೈ ದಕ್ಕೂ ಹೆಚ್ಚು ಪ್ರಾಣಿ-ಪಕ್ಷಿಗಳಿಗೆ ಮೀಸಲಾದ ಕೆಫೆಗಳಿವೆ.

ಸಾಮಾನ್ಯವಾಗಿ ಈ ಕೆಫೆಗಳಲ್ಲಿ ಪ್ರತಿ ಗಂಟೆಗೆ 80-2000 ಯೆನ್ (ರೂ450-ರೂ1200) ಶುಲ್ಕವಿರುತ್ತದೆ. ಕೆಲವೊಮ್ಮೆ ಪಾನೀಯಗಳು ಉಚಿತವಾಗಿರುತ್ತವೆ0. ಈ ಕೆಫೆಗಳಿಗೆ ಪ್ರವೇಶಿಸುವಾಗ ಕೈಗಳನ್ನು ಸ್ವಚ್ಛ ವಾಗಿ ತೊಳೆದುಕೊಳ್ಳಬೇಕು. ಪ್ರಾಣಿಗಳಿಗೆ ಕಿರುಕುಳ ಕೊಡಬಾರದು. ಫ್ಲ್ಯಾಶ್ ಫೋಟೋ ಬಳಸಿ ಫೋಟೋ ತೆಗೆದು ಅವುಗಳಿಗೆ ಹಿಂಸೆ ಅಥವಾ ಕಿರುಕುಳ ಕೊಡಬಾರದು.

ಅಲ್ಲಿಗೆ ಹೋಗುವ ಅನೇಕರು ಉತ್ತಮ ತಳಿಯ ಪ್ರಾಣಿಗಳನ್ನು ನೋಡಲು, ಅವುಗಳೊಂದಿಗೆ ಆಟ ವಾಡಲು ಮತ್ತು ಫೋಟೋ ತೆಗೆದುಕೊಳ್ಳಲು ಬರುತ್ತಾರೆ. ಅಲ್ಲಿಗೆ ಹೋಗುವವರಿಗೆ ಕೆಫೆಯ ಸಿಬ್ಬಂದಿ ಪ್ರಾಣಿಗಳ ಬಗ್ಗೆ ಸ್ವಾರಸ್ಯಕರ ಮಾಹಿತಿ ನೀಡುತ್ತಾರೆ. ಈ ಕೆಫೆಗಳ ಯಶಸ್ಸಿಗೆ ಮಾನಸಿಕ ಆರೋಗ್ಯವೂ ಸೇರಿದೆ. ಪ್ರಾಣಿಗಳೊಂದಿಗೆ ಹೆಚ್ಚು ಸಮಯ ಕಳೆದರೆ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಎಂಬು ದೂ ಮುಖ್ಯ ಕಾರಣ.

ಇದೂ ಒಂದು ಥೆರಪಿಯಂತೆ ಕೆಲಸ ಮಾಡುತ್ತದೆ. ಈ ಕೆಫೆಗಳಲ್ಲಿ ನಿಮಗೆ ಇಷ್ಟದ ಪ್ರಾಣಿಗಳಿಗೂ ಆಹಾರವನ್ನು ತಿನ್ನಿಸಬಹುದು. ಇದಕ್ಕೆ ಹೆಚ್ಚುವರಿ ಹಣ ನೀಡಬೇಕಾಗುತ್ತದೆ. ಕೆಲವು ಕೆಫೆಗಳಲ್ಲಿ ನಾಯಿ, ಬೆಕ್ಕುಗಳು ಐದಾರು ವರ್ಷಗಳಿಗಿಂತ ಹೆಚ್ಚು ಕಾಲ ಇರುವುದರಿಂದ, ಅವುಗಳಿಗೆ ಗ್ರಾಹಕರ ಜತೆ ಯಾವ ರೀತಿ ವ್ಯವಹರಿಸಬೇಕೆಂಬುದು ರೂಢಿಯಾಗಿದೆ. ಈ ಕೆಫೆಗಳಿಗೆ ಬರುವವರು ಕನಿಷ್ಠ ಅರ್ಧ-ಮುಕ್ಕಾಲು ಗಂಟೆ ಕಳೆಯುತ್ತಾರೆ. ಕೆಲವರು ಇನ್ನೂ ಹೆಚ್ಚು ಕಾಲ ಕಳೆಯುವುದುಂಟು.

ಬಹುತೇಕ ಕೆ-ಗಳಲ್ಲಿ ಆಸನವನ್ನು ಕಾಯ್ದಿರಿಸುವುದು ಕಡ್ಡಾಯ. ಈ ಕೆಫೆಗಳಿಗೆ ನಮ್ಮ ಸಾಕುಪ್ರಾಣಿ ಗಳೊಂದಿಗೂ ಹೋಗಬಹುದು. ಆದರೆ ಅದಕ್ಕೆ ನಿಗದಿತ ನಿಯಮಗಳಿವೆ. ಟೋಕಿಯೋ ದಲ್ಲಿರುವ ಉರಗ (ಹಾವು) ಕೆಫೆಯೂ ಸಾಕಷ್ಟು ಜನಪ್ರಿಯ. ಜನಪ್ರಿಯ. ಅದೇ ರೀತಿ, ಹಲ್ಲಿ, ಕಪ್ಪೆ, ಆಮೆ, ಕೋತಿ, ಊಸರವಳ್ಳಿ, ಗಿಳಿ, ಗೂಬೆ, ಮೊಲ, ಕುರಿ, ಕುದುರೆ, ಕೆಫೆಗಳೂ ಸಾಕಷ್ಟು ಜನರನ್ನು ಆಕರ್ಷಿಸುತ್ತವೆ. ನೀವು ಅಲ್ಲಿ ಸಾಕುಪ್ರಾಣಿಗಳನ್ನು ಮುದ್ದಿಸಬಹುದು, ಅಪ್ಪಿಕೊಳ್ಳಬಹುದು ಮತ್ತು ಆಹಾರ ನೀಡಬಹುದು.