ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gururaj Gantihole Column: ಜುಗಾರಿ ಮತ್ತು ಸಿನಿಮಾ ಜಗತ್ತಿನ ರಾಜಧಾನಿಗಳ ಜೊತೆಗೊಂದು ಸುತ್ತು

ಇಂಗ್ಲೆಂಡ್‌ನ ಪ್ರಥಮ ವಸಾಹತು ಜೇಮ್ಸ್‌ಟೌನ್, 1607ರಲ್ಲಿ ವರ್ಜಿನಿಯಾದಲ್ಲಿ ಸ್ಥಾಪನೆಯಾಯಿತು. ಮೆಸಾಚುಯೆಟ್ಸ್‌ನಲ್ಲಿ ಪಿಲ್ಗ್ರಿಮ್‌ಗಳು 1620ರಲ್ಲಿ ಪ್ಲೈಮೌತ್ ಕಾಲನಿ ಸ್ಥಾಪನೆ ಮಾಡಿದರು. ನಂತರ, ಕ್ಯಾನಡಾ ಮತ್ತು ಮಿಸ್ಸಿಸಿಪಿ ನದಿಯ ಇತರೆ ಭಾಗಗಳಲ್ಲಿ ಫ್ರೆಂಚ್ ವಲಸೆಗಳು, ಫ್ಲೋರಿಡಾ, ಟೆಕ್ಸಾಸ್, ಕ್ಯಾಲಿಫೋರ್ನಿಯಾ ಮುಂತಾದವುಗಳಲ್ಲಿ ಸ್ಪೇನಿಷ್ ವಲಸೆಗಳು ಆರಂಭ ಗೊಂಡವು.

ಜುಗಾರಿ ಮತ್ತು ಸಿನಿಮಾ ಜಗತ್ತಿನ ರಾಜಧಾನಿಗಳ ಜೊತೆಗೊಂದು ಸುತ್ತು

ಗಂಟಾಘೋಷ

1931ರಲ್ಲಿ ಜೂಜಾಟವನ್ನು ಕಾನೂನುಬದ್ಧಗೊಳಿಸಿದ ಮೇಲೆ, ವೇಗಾಸ್‌ನಲ್ಲಿ ಏನೇ ಮಾಡಿದರೂ ಹೊರ ಜಗತ್ತಿಗೆ ತಿಳಿಯದು, ಇಲ್ಲಿ ಎಲ್ಲವೂ ಸ್ವೀಕೃತವೆಂಬ ಚಟುವಟಿಕೆಗಳು ನಡೆಯತೊಡಗಿದವು.‌ ದಿನದ 24 ಗಂಟೆಯೂ ಮದ್ಯಪಾನ, ನೈಟ್‌ಲೈಫ್, ಕೈಗೆಟಕುವ ಸ್ವೇಚ್ಛಾಚಾರದಿಂದ ಸಾಮಾಜಿಕ, ಧಾರ್ಮಿಕ ಮೌಲ್ಯಗಳಿಲ್ಲದ ಜನರಿಂದ ತುಂಬಿ ಪಾಪದ ನಗರವಾಗಿ (Sin City) ಗುರುತಿಸಲ್ಪಟ್ಟಿತು.

ಐವತ್ತು ರಾಜ್ಯಗಳೊಂದಿಗೆ ಶ್ವೇತಜನರು, ಅಫ್ರಿಕನ್ -ಅಮೆರಿಕನ್ಸ್, ಲಾಟಿನೋ, ಏಷ್ಯನ್, ನೇಟಿವ್ ಜನಾಂಗ ನಿವಾಸಿಗಳೊಂದಿಗೆ, 34 ಕೋಟಿ ಜನಸಂಖ್ಯೆ ಮತ್ತು 98,33,520 ಚ.ಕಿಮೀ. ವಿಸ್ತೀರ್ಣ ಹೊಂದಿರುವ ಅಮೆರಿಕದಲ್ಲಿ ಇಂದು ಇಡೀ ಜಗತ್ತಿಗೇ ಮೋಡಿ ಮಾಡುವ ಎರಡು ನಗರಗಳೆಂದರೆ ಲಾಸ್ ವೆಗಾಸ್ ಮತ್ತು ಲಾಸ್ ಏಂಜಲೀಸ್.

ಲಾಸ್ ವೆಗಾಸ್ ತನ್ನ ಪಾಪದ ನಗರ ಇಮೇಜ್‌ನಿಂದ ‘ಫ್ಯಾಮಿಲಿ ಫ್ರೆಂಡ್ಲಿ ಮನೋರಂಜನಾ ನಗರ’ ವಾಗಿ ರೂಪಿಸಿಕೊಳ್ಳಲು ಪ್ರಯತ್ನಿಸಿತು. ಇದಕ್ಕಾಗಿ, ಜಾಗತಿಕ ಸಭೆ/ಮೇಳಗಳ (Expo’s & Conven tions) ಕೇಂದ್ರವಾಗಿ ಈ ಮಾಯಾನಗರಿ ಮಾರ್ಪಟ್ಟಿದ್ದರೆ, ಸಿನಿಮಾ ಎಂಬ ಪ್ರಭಾವಶಾಲಿ ದೃಶ್ಯ ಉದ್ಯಮ ಇಂದು ಇಡೀ ಜಗತ್ತನ್ನು, ಮಾನವ ಜನಾಂಗವನ್ನು ಮಂತ್ರಮುಗ್ಧ ಗೊಳಿಸಿ ತನ್ನ ಹಿಡಿತದಲ್ಲಿಟ್ಟುಕೊಂಡಿರುವ ಲಾಸ್ ಏಂಜಲೀಸ್ ನಗರವು ಹಾಲಿವುಡ್ ಸಿನಿಮಾ ನಗರಿಯಾಗಿ ಮಾರ್ಪಟ್ಟಿದೆ.

ನೂರಾರು ಯುದ್ಧಗಳು, ಅಸ್ತಿತ್ವಕ್ಕಾಗಿ ನಡೆದ ರಕ್ತಪಾತದ ಹೋರಾಟಗಳು, ಜನಾಂಗೀಯ ಘರ್ಷಣೆ ಗಳು ಮತ್ತು ಆ ದೇಶದ ರಾಜಕಾರಣಿಗಳು ನಿಜವಾಗಿಯೂ ಘನವೆತ್ತ ನಾಯಕರಂತೆ ನಡೆದು ಕೊಂಡು ಆ ದೇಶವನ್ನು ಪ್ರತೀ ಹಂತದಲ್ಲೂ ಒಂದುಗೂಡಿಸುತ್ತ ’ಯುನೈಟೆಡ್ ಸ್ಟೇಟ್ಸ್’ ಕೂಟ ವನ್ನು ವೈಭೋಗದ ರಾಷ್ಟ್ರವನ್ನಾಗಿ ಮಾಡಿದರು.

ಕ್ರಿಸ್ತಪೂರ್ವದ ಹಿಂದೆ ಆದಿಮಾನವರು ಬೇರಿಂಗ್ ಸ್ಟ್ರೇಟ್ (Bering Strait) ಮೂಲಕ ಏಷ್ಯಾದಿಂದ ಇಲ್ಲಿಗೆ ಬಂದು ನೆಲೆಸಿದ್ದರು ಎಂದು ಪರಿಗಣಿಸಲಾಗಿದ್ದು, ಇವರನ್ನು ‘ನೇಟಿವ್ ಅಮೇರಿಕನ್ಸ್’ ಎಂದು ಕರೆಯುತ್ತಾರೆ. ಪೋವಾಟನ್ (Powhatan), ಇರುಕ್ವಾಯ್ (Iroquois), ಸಿಯೋಕ್ಸ್ (Sioux), ಅಪಾಚೆ ಮುಂತಾದ ಜನಾಂಗಗಳು ಈ ಪ್ರದೇಶದಲ್ಲಿ ನೆಲೆಸಿದ್ದವು ಎನ್ನಲಾಗಿದೆ.

ಕ್ರಿಸ್ಟೋಫರ್ ಕೊಲಂಬಸ್ 1452ರಲ್ಲಿ ಈ ಖಂಡವನ್ನು ಕಂಡುಹಿಡಿದ ನಂತರ ಸ್ಪೇನ್, ಫ್ರಾನ್ಸ್, ಪೋರ್ಚುಗಲ್, ಇಂಗ್ಲೆಂಡ್ ಮೊದಲಾದ ಯುರೋಪಿಯನ್ ರಾಷ್ಟ್ರಗಳು ವಲಸೆ, ವಿಸ್ತರಣೆ ಆರಂಭಿಸಿ ದವು. ಅಮೆರಿಕದ ಪೂರ್ವ ಕರಾವಳಿ ಭಾಗದಲ್ಲಿ ವಲಸೆ ಕಾಲನಿಗಳು ಸ್ಥಾಪನೆಯಾಗಲಾ ರಂಭಿಸಿದವು.

ಇಂಗ್ಲೆಂಡ್‌ನ ಪ್ರಥಮ ವಸಾಹತು ಜೇಮ್ಸ್‌ಟೌನ್, 1607ರಲ್ಲಿ ವರ್ಜಿನಿಯಾದಲ್ಲಿ ಸ್ಥಾಪನೆ ಯಾಯಿತು. ಮೆಸಾಚುಯೆಟ್ಸ್‌ನಲ್ಲಿ ಪಿಲ್ಗ್ರಿಮ್‌ಗಳು 1620ರಲ್ಲಿ ಪ್ಲೈಮೌತ್ ಕಾಲನಿ ಸ್ಥಾಪನೆ ಮಾಡಿದರು. ನಂತರ, ಕ್ಯಾನಡಾ ಮತ್ತು ಮಿಸ್ಸಿಸಿಪಿ ನದಿಯ ಇತರೆ ಭಾಗಗಳಲ್ಲಿ ಫ್ರೆಂಚ್ ವಲಸೆಗಳು, ಫ್ಲೋರಿಡಾ, ಟೆಕ್ಸಾಸ್, ಕ್ಯಾಲಿಫೋರ್ನಿಯಾ ಮುಂತಾದವುಗಳಲ್ಲಿ ಸ್ಪೇನಿಷ್ ವಲಸೆಗಳು ಆರಂಭ ಗೊಂಡವು.

ಬ್ರಿಟನ್ ಸರಕಾರವು ಟೌನ್ ಶೆಂಡ್ ಆಕ್ಟ್ ಎಂಬ ಹೊಸ ತೆರಿಗೆ ನೀತಿಗಳನ್ನು ಅಮೆರಿಕನ್ನರ ಮೇಲೆ ಹೇರಿದರು. ಅದರಲ್ಲೂ ಚಹಾದ ಮೇಲೆ ನೂರಾರು ಪಟ್ಟು ತೆರಿಗೆ ಹಾಕಿದ್ದನ್ನು ಸ್ಥಳೀಯ ನಿವಾಸಿ ಗಳು ‘No Taxation without representation’ ಎಂದು ಉಗ್ರ ಹೋರಾಟ ಕೈಗೊಂಡು, ಕೋಟ್ಯಂತರ ಮೌಲ್ಯದ, 3 ಹಡಗುಗಳಲ್ಲಿ ತುಂಬಿದ್ದ 342 ಚಹಾ ಕಂಟೈನೇರುಗಳ ನ್ನೆಲ್ಲಾ ಬೋಸ್ಟನ್ ಬಂದರಿನ ಸಮುದ್ರಕ್ಕೆ ಎಸೆದರು.

ಇದರಿಂದ ಕೋಪಗೊಂಡ ಇಂಗ್ಲೆಂಡ್, Intolerable Acts (ಅಸಹ್ಯ ಕಾನೂನುಗಳು) ಎಂದು ವಿಪರೀತ ನಿಯಮಗಳನ್ನು ಹೇರಿತು. ಸ್ಥಳೀಯ ಪ್ರಬುದ್ಧ ಯುವಕರು ಅಮೆರಿಕದ 13 ಕಾಲನಿ ಗಳನ್ನು ಒಗ್ಗಟ್ಟಾಗಿಸುವ ಮೂಲಕ, ಸ್ವಾತಂತ್ರ್ಯ ಹೋರಾಟಕ್ಕೆ ಪ್ರಥಮ ಮುನ್ನುಡಿ ಬರೆದರು. ಆ ಮೂಲಕ 1775 ರಿಂದ 1789ರ ವರೆಗೆ ನಡೆದ ಹೋರಾಟವನ್ನು Intolerable Acts ಎಂದೇ ಕರೆಯ ಲಾಗುತ್ತದೆ.

ಲೆಕ್ಸಿಂಗ್ಟನ್ ಮತ್ತು ಕಾಂಕೋರ್ಡ್ ಯುದ್ಧ (1775), ಸೆರಟೋಗಾ ಯುದ್ಧ (1777), ಯೋರ್ಕ್‌ಟೌನ್ ಅಂತಿಮ ವಿಜಯ (1781) ನಡೆದು ಕೊನೆಗೂ ಅಮೇರಿಕ ಸ್ವಾತಂತ್ರ್ಯ ಗಳಿಸಿಕೊಂಡಿತು. ಸ್ವತಂತ್ರ ಗೊಂಡ ಬಳಿಕ ಥಾಮಸ್ ಜೇ-ರಸನ್ (ಮುಂದೆ ಮೂರನೇ ರಾಷ್ಟ್ರಪತಿಯಾಗುತ್ತಾರೆ), Declaration of Independence ಎಂಬ ಮಹತ್ವದ ದಾಖಲೆಯನ್ನು 1776ರಲ್ಲಿ ಬರೆದರು.

1782ರಲ್ಲಿ ಅಮೆರಿಕ ಸಂವಿಧಾನ (U.S. Constitution) ರಚನೆಯಾಯಿತು. ನಂತರ, 1789ರಲ್ಲಿ ಜಾರ್ಜ್ ವಾಷಿಂಗ್ಟನ್ ಪ್ರಥಮ ರಾಷ್ಟ್ರಪತಿಯಾಗಿ ಆಯ್ಕೆಯಾದರು. ಫ್ರೆಂಚರಿಂದ ಭೂಮಿ ಖರೀದಿ ಸುವ ಮೂಲಕ ಅಮೆರಿಕವನ್ನು ವಿಸ್ತರಿಸುವ ಕಾರ್ಯ ನಡೆಯಿತು. ಟೆಕ್ಸಾಸ್ ಯುದ್ಧ, ಮೆಕ್ಸಿಕನ್ ಯುದ್ಧಗಳು ನಡೆದು, 1846-48ರಲ್ಲಿ ನ್ಯೂಮೆಕ್ಸಿಕೋ, ಕ್ಯಾಲಿಫೋರ್ನಿಯಾ ಹಸ್ತಾಂತರ ವಾದವು.

ಗೃಹಯುದ್ಧಗಳು ನಡೆದು, ಅಬ್ರಹಾಂ ಲಿಂಕನ್, ರಾಬರ್ಟ್ ಲೀ, ಯುಲಿಸಿಸ್ ಗ್ರಾಂಟ್ ಅವರಂಥ ನಾಯಕರು ಹುಟ್ಟಿಕೊಂಡರು. ಉದ್ಯಮೀಕರಣ ಯುಗ ಪ್ರಾರಂಭಗೊಂಡು ರೈಲ್ವೆ, ಉಕ್ಕು, ತೈಲ ಉದ್ಯಮಗಳು ಬೆಳೆಯಲಾರಂಭಿಸಿ, ಎಂಡ್ರೂ ಕಾರ್ನೆಗಿ, ಜಾನ್ ರಾಕೆಫೆಲ್ಲರ್ ಮೊದಲಾದ ಉದ್ಯಮ ಶಾಹಿಗಳು ಬೆಳಕಿಗೆ ಬಂದರು.

ಗ್ರೇಟ್ ಡಿಪ್ರೆಷನ್ (1929) ಮೂಲಕ ಇಡೀ ಅಮೆರಿಕ ಅರ್ಥವ್ಯವಸ್ಥೆಯೇ ಕುಸಿಯಿತು. ಶೇ.30ರಷ್ಟು ಜನರಿಗೆ ಆಹಾರ, ಉದ್ಯೋಗವಿಲ್ಲದೆ ಪರದಾಡುವಂತಾಯಿತು. ಫ್ರಾಂಕ್ಲಿನ್ ಡಿ. ರೂಸ್ವೆಲ್ಟ್ ‘ನ್ಯೂ ಡೀಲ್’ ಯೋಜನೆಯ ಮೂಲಕ ಉದ್ಯೋಗ ಸೃಷ್ಟಿ ಮತ್ತು ಸಾಲಮನ್ನಾ ಘೋಷಿಸಿದರು. ದ್ವಿತೀಯ ವಿಶ್ವಯುದ್ಧ(1941-1945)ದಲ್ಲಿ ಜಪಾನ್ ದೇಶವು ಅಮೆರಿಕದ ಪರ್ಲ್ ಹಾರ್ಬರ್ ಮೇಲೆ ದಾಳಿ ಮಾಡಿತು. ಇದಕ್ಕೆ ಪ್ರತಿಕಾರವಾಗಿ, 1945ರಲ್ಲಿ ಹಿರೋಶಿಮಾ ಮತ್ತು ನಾಗಾಸಾಕಿ ಮೇಲೆ ಅಣು ಬಾಂಬ್ ದಾಳಿ ನಡೆಸಿತಲ್ಲದೆ, ಯುದ್ಧದ ನಂತರ ಅಮೆರಿಕ ಜಗತ್ತಿನ ಸೂಪರ್ ಪವರ್ ಆಗಿ ಹೊರ ಹೊಮ್ಮಿತು.

1905ರಲ್ಲಿ ಸಾಲ್ಟ್ ಲೇಕ್ ರೈಲ್‌ ರೋಡ್(SLR), ಲಾಸ್ ವೆಗಾಸ್ ಮೂಲಕ ಹಾದು ಹೋದ ಮೇಲೆ ಈ ಪ್ರದೇಶವು ವಾಣಿಜ್ಯದಲ್ಲಿ ಮಹತ್ವಪೂರ್ಣ ತಾಣವಾಯಿತು. ರೈಲು ಸಂಚಾರದ ಜತೆಗೆ ವ್ಯಾಪಾರ ಕೇಂದ್ರ ರೂಪುಗೊಂಡಿತು. ಅದೇ ವರ್ಷ ಮೇ 15ರಂದು ಲಾಸ್ ವೆಗಾಸ್ ನಗರವನ್ನು ಅಧಿಕೃತವಾಗಿ ಸ್ಥಾಪಿಸಲಾಯಿತು.

ಜುಗಾರಿ ಕ್ರೀಡೆ, ಥೀಮ್ ಕ್ಯಾಸಿನೋಗಳು, ನೈಟ್ ಶೋಗಳು, ಮತ್ತು ವಿಶಾಲ ರೆಸಾರ್ಟ್‌ಗಳ ಮಹಾ ನಗರವಾಗಿ ಪ್ರಖ್ಯಾತಿ ಹೊಂದಿದ್ದರೂ, ಕೇವಲ ನೂರು ವರ್ಷಗಳ ಹಿಂದೆ ಬೇಟೆಗಾರರ ಮರಳುಗಾಡಿ ನ ತಾಣವಾಗಿತ್ತು. ಲಾಸ್ ವೆಗಾಸ್ ಶಬ್ದ ಸ್ಪ್ಯಾನಿಷ್ ಮೂಲದಿಂದ ಬಂದಿದ್ದು, ‘ಹಸಿರು ಕಣಿವೆಗಳು’ ಎಂಬ ಅರ್ಥ ನೀಡುತ್ತದೆ. 1800ರ ಪ್ರಾರಂಭಿಕ ದಶಕದಲ್ಲಿ ಸ್ಪ್ಯಾನಿಷ್ ಎಕ್ಸ್ ಪ್ಲೋರರ್‌ಗಳು ಈ ಪ್ರದೇಶ ಕಂಡು, ಹಸಿರು ವಾತಾವರಣ ನೋಡಿ ಈ ಹೆಸರು ಇಟ್ಟರೆಂಬುದು ಪ್ರತೀತಿ.

1844ರಲ್ಲಿ ಜಾನ್ ಫ್ರೆಮಾಂಟ್ ಎಂಬ ಅಮೆರಿಕನ್ ಮಿಲಿಟರಿ ಎಕ್ಸ್‌ಪ್ಲೋರರ್ ಈ ಪ್ರದೇಶವನ್ನು ದಾಟಿದಾಗಲೇ, ಲಾಸ್ ವೆಗಾಸ್ ಭೂಪಟದಲ್ಲಿ ಅಧಿಕೃತವಾಗಿ ಕಾಣಿಸಿಕೊಳ್ಳಲು ಪ್ರಾರಂಭವಾಯಿತು. ಮೋರಮನ್ ಮಿಷನರಿಗಳು 1855ರಲ್ಲಿ ಒಂದು ವರ್ಷದ ಮಟ್ಟಿಗೆ ಇಲ್ಲಿ ಒಂದು ತಾತ್ಕಾಲಿಕ ನಿವಾಸ ವನ್ನು ಸ್ಥಾಪಿಸಿದರು. 1905ರಲ್ಲಿ ಸಾಲ್ಟ್‌ಲೇಕ್ ರೇಲ್ರೋಡ್ ಲಾಸ್ ವೆಗಾಸ್ ಮೂಲಕ ಹಾದು ಹೋದ ಮೇಲೆ ಈ ಪ್ರದೇಶವು ವಾಣಿಜ್ಯದಲ್ಲಿ ಮಹತ್ವಪೂರ್ಣ ತಾಣವಾಯಿತು.

ರೈಲು ಸಂಚಾರದ ಜತೆಗೆ ಇಲ್ಲಿ ವ್ಯಾಪಾರ ಕೇಂದ್ರಗಳು ರೂಪುಗೊಂಡವು. ಇದೇ ವರ್ಷ ಮೇ 15 ರಂದು ಲಾಸ್ ವೆಗಾಸ್ ನಗರವನ್ನು ಅಧಿಕೃತವಾಗಿ ಸ್ಥಾಪಿಸಲಾಯಿತು. ನೆವಾಡಾ ರಾಜ್ಯಸರಕಾರ ಜೂಜಾಟವು (ಜುಗಾರಿ) ಇನ್ಮುಂದೆ ಕಾನೂನುಬದ್ಧ ಎಂದು ಘೋಷಿಸಿದ್ದು, ಅಮೇರಿಕಾದ ಆರ್ಥಿಕ, ವಾಣಿಜ್ಯ ಇತಿಹಾಸವನ್ನು ಬದಲಿಸಿತು.

ಹೂವರ್ ಅಣೆಕಟ್ಟು (Hoover Dam) ನಿರ್ಮಾಣದ ಹಂತದಲ್ಲಿತ್ತು. ನಿರ್ಮಾಣದಲ್ಲಿ ತೊಡಗಿದ್ದ ಸಾವಿರಾರು ಕಾರ್ಮಿಕರಿಗೆ, ಮನರಂಜನೆ, ವಿಶ್ರಾಂತಿ, ಮೋಜುಮಸ್ತಿಗೆ ಅನಿಯಮಿತ ಪರವಾನಿಗೆ ಕೊಡಲಾಯಿತು. ಕೆಲಸದ ಸಮಯ ಹೊರತುಪಡಿಸಿ, ಜನರು ಇಲ್ಲಿಯೇ ಕಳೆಯುತ್ತಿದ್ದರು. ಇದು ಪ್ರಚಾರಗೊಂಡು ಲಕ್ಷ ಲಕ್ಷ ಯುವಕ-ಯುವತಿಯರು ಲಾಸ್ ವೇಗಾಸ್‌ಗೆ ವಿಲಾಸಿ ಬದುಕಿನ ಕ್ಷಣ ಕ್ಕಾಗಿ ಹರಿದುಬಂದರು. ಇದಕ್ಕಾಗಿ, ಸ್ಥಳೀಯ ಆಡಳಿತವು ಕೆಲ ಕಾಲನಿಗಳನ್ನು ಕಟ್ಟಬೇಕಾಗಿ ಬಂತು.

ಲಾಸ್ ವೇಗಾಸ್‌ನ ಚರಿತ್ರೆಯಲ್ಲಿ ರೋಚಕ ಅಧ್ಯಾಯ ಆರಂಭವಾಗಿದ್ದು, ಅಪರಾಧ ಜಾಲಗಳ ಮಾಫಿಯಾ ದೊರೆ, ನ್ಯೂಯಾರ್ಕ್ ಮಾಫಿಯಾ ಲೀಡರ್ ಬಗ್ಸಿ ಸೀಗಲ್ (Bugsy Siegel) 1946 ರಲ್ಲಿ ‘Flamingo Hotel & Casinoʼ ಸ್ಥಾಪಿಸಿದರು. ಇದು ಆಧುನಿಕ ಲಕ್ಸುರಿ ಕ್ಯಾಸಿನೋ ಸಂಸ್ಕೃತಿಗೆ ಚಾಲನೆ ನೀಡಿದ ಪ್ರಮುಖ ಘಟನೆಯಾಯಿತಲ್ಲದೆ, ಇಲ್ಲಿಂದ ಸರಣಿಯಾಗಿ 50-60ರ ದಶಕಗಳಲ್ಲಿ Stardust, Tropicana, Riviera ದಂತಹ ಅನೇಕ ಕ್ಯಾಸಿನೋಗಳು ಮಾಫಿಯಾ ಮೂಲಕ ಸ್ಥಾಪನೆಯಾದವು.

1970ರಲ್ಲಿ ಕಾರ್ಪೋರೇಟ್ ವ್ಯವಸ್ಥೆಗೆ ತೆರೆದುಕೊಂಡ ಮೇಲೆ, ಕಾರ್ಪೊರೇಟ್ ಹೋಟೆಲ್, ಸಂಸ್ಥೆ ಗಳು ಮತ್ತು ರೆಸಾರ್ಟ್ ಕಂಪನಿಗಳು ಇಲ್ಲಿನ ಬೆಳವಣಿಗೆಗೆ ಹೊಸದಿಕ್ಕು ನೀಡಿದವು. "“El Pueblo de Nuestra Señora la Reina de los Ángeles”' ಮುಂತಾದ ಬಹುಮಹಡಿ ಕ್ಯಾಸಿನೋ ರೆಸಾರ್ಟ್‌ಗಳು ನಿರ್ಮಿಸಲ್ಪಟ್ಟವು. ವಿಶ್ವಮಟ್ಟದ ಶೋಗಳು, ಸಂಗೀತ ಕಾರ್ಯಕ್ರಮಗಳು, ಎಲ್ವಿಸ್ ಪ್ರಿಸ್ಲೆ ಮತ್ತು ಸಿಲೀನ್ ಡಿಯೋನ್ ಮುಂತಾದ ಸೆಲೆಬ್ರಿಟಿಗಳ ’ರೆಸಿಡೆನ್ಸಿ ಪರ್ಫಾರ್ಮೆನ್ಸ್‌ಗಳು’ ಪ್ರವಾಸೋದ್ಯಮಕ್ಕೆ ಬಲ ನೀಡಿದವು.

ಸುಮಾರು 6 ಲಕ್ಷದಷ್ಟು ಜನಸಂಖ್ಯೆ ಹೊಂದಿರುವ ಈ ನಗರ, ವಿಶ್ವದ ಪ್ರಮುಖ ಮನರಂಜನೆಯ ಆರ್ಥಿಕ ತಾಣವಾಗಿ ಬೆಳೆದಿದ್ದು, ಕ್ಯಾಸಿನೋ, ಹೋಟೆಲ್, ರೆಸ್ಟೋರೆಂಟ್‌ಗಳ ಜೊತೆಗೆ ವಿಶ್ವಮಟ್ಟದ ಕಾನರೆನ್ಸ್, ಸಭೆ ಸಮಾರಂಭಗಳಿಗೆ ವಿದೇಶದಿಂದ ಗಣ್ಯರನ್ನು, ಕಂಪನಿಗಳನ್ನು ಇಲ್ಲಿಗೆ ಆಹ್ವಾನಿಸ ಲಾಗುತ್ತದೆ.

ಸ್ಪೇನಿಷ್ ಆಡಳಿತದ ಕಾಲದಲ್ಲಿ ‘Entertainment Capital of the World ’(ನಮ್ಮ ದೇವಿಯ ರಾಣಿ, ದೇವದೂತರ ಪಟ್ಟಣ) ಎಂದು ಹೆಸರು ನೀಡುವ ಮೂಲಕ, 44 ಮಂದಿ ಮೆಕ್ಸಿಕನ್ನರು 1781ರ ಆಗಸ್ಟ್ 4ರಂದು ಲಾಸ್ ಏಂಜಲೀಸ್ ನಗರವನ್ನು ಸ್ಥಾಪಿಸಿದರು. ಒಂದು ಸಣ್ಣ ಗ್ರಾಮದಿಂದ ಆರಂಭ ಗೊಂಡ ಇದರ ಇತಿಹಾಸವು ಇಂದು ಅಮೇರಿಕ ಸೇರಿದಂತೆ ವಿಶ್ವದ ಮನರಂಜನೆ ಬದುಕನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದೆ. 1821ರಲ್ಲಿ ಮೆಕ್ಸಿಕೋ ಸ್ಪೇನಿನಿಂದ ಸ್ವಾತಂತ್ರ್ಯ ಪಡೆದುಕೊಂಡಾಗ ಲಾಸ್ ಏಂಜಲೀಸ್ ಸಹ ಮೆಕ್ಸಿಕೋ ಭಾಗವಾಯಿತು.

ಅಮೆರಿಕ-ಮೆಕ್ಸಿಕೋ ಯುದ್ಧದ (1846-1848)ನಂತರ, ಗುಡಾಲುಪೆ ಹಿಡಾಲ್ಗೊ ಒಪ್ಪಂದದ ಮೂಲಕ ಲಾಸ್ ಏಂಜಲೀಸ್ ಸೇರಿದಂತೆ ಕೆಲಿಫೋರ್ನಿಯಾ ರಾಜ್ಯವು ಅಮೆರಿಕದ ಭಾಗವಾಯಿತು. 1850ರಲ್ಲಿ ಲಾಸ್ ಎಂಜಲ್ಸ್ ಅನ್ನು ಅಧಿಕೃತವಾಗಿ ನಗರವಾಗಿ ಘೋಷಿಸಲಾಯಿತು. 1876ರಲ್ಲಿ ಸೌತ್ ಪೆಸಿಫಿಕ್ ರೈಲುಸಂಸ್ಥೆ ಇಲ್ಲಿಗೆ ರೈಲು ಆರಂಭಿಸಿದಾಗ, ಪ್ರವಾಹರೂಪದಲ್ಲಿ ಲಾಸ್ ಏಂಜ ಲೀಸ್‌ಗೆ ವಲಸೆ ಪ್ರಾರಂಭವಾಯಿತು.

ಚಲನಚಿತ್ರ ನಿರ್ಮಾಣ ಸಂಸ್ಥೆಗಳು 1900ರ ಪ್ರಾರಂಭದಲ್ಲಿ ನ್ಯೂಯಾರ್ಕ್‌ನಿಂದ ಲಾಸ್ ಏಂಜ ಲೀಸ್‌ಗೆ ಬಂದವು. ಹವಾಮಾನ, ರಿಜಿಸ್ಟ್ರಿಯ ಹಕ್ಕು ಸವಲತ್ತು, ನೈಸರ್ಗಿಕ ಭೂದೃಶ್ಯಗಳಿಗಾಗಿಯೇ ಹಾಲಿವುಡ್ ಸ್ಥಾಪಿಸಿ, ಚಲನಚಿತ್ರ ನಿರ್ಮಾಣದ ಕೇಂದ್ರವನ್ನಾಗಿ ರೂಪಿಸಿದರು. ಇದರಿಂದ ಲಾಸ್ ಎಂಜಲ್ಸ್ ಜಗತ್ತಿನ Entertainment Capital of the World ಎಂಬ ಬಿರುದನ್ನು ಪಡೆದು ಮೆರೆಯು ತ್ತಿದೆ.

1931ರಲ್ಲಿ ಜೂಜಾಟವನ್ನು ಕಾನೂನುಬದ್ಧಗೊಳಿಸಿದ ಮೇಲೆ, ವೇಗಾಸ್‌ನಲ್ಲಿ ಏನೇ ಮಾಡಿದರೂ ಹೊರಜಗತ್ತಿಗೆ ತಿಳಿಯದು, ಇಲ್ಲಿ ಎಲ್ಲವೂ ಸ್ವೀಕೃತವೆಂಬ ಚಟುವಟಿಕೆಗಳು ನಡೆಯತೊಡಗಿದವು. ದಿನದ 24 ಗಂಟೆಯೂ ಮದ್ಯಪಾನ, ನೈಟ್‌ಲೈಫ್, ಕೈಗೆಟಕುವ ಸ್ವೇಚ್ಚಾಚಾರದಿಂದ ಸಾಮಾಜಿಕ, ಧಾರ್ಮಿಕ ಮೌಲ್ಯಗಳಿಲ್ಲದ ‌ಜನರಿಂದ ತುಂಬಿ ಪಾಪದ ನಗರವಾಗಿ (Sin City) ಗುರುತಿಸಲ್ಪಟ್ಟಿತು.

ಲಾಸ್ ಏಂಜೆಲಿಸ್‌ನಲ್ಲಿ ಸೃಜನಾತ್ಮಕತೆಯ ನದಿ ಹರಿದು ಹೋಗುತ್ತಿದ್ದರೆ, ಲಾಸ್ ವೇಗಾಸ್‌ನಲ್ಲಿ ಸುಖ ಸಂಭ್ರಮದ ಸಮುದ್ರದ ಅಲೆಗಳು ಭೋರ್ಗರೆಯುತ್ತಿವೆ ಎಂಬ ಭ್ರಮೆಯಲ್ಲಿದ್ದ ಪಾಶ್ಚಾತ್ಯರು, ಮನರಂಜನೆ, ಮಿತಿಗಳಿಲ್ಲದ ಸ್ವೇಚ್ಚಾಚಾರಗಳೇ ಬದುಕಿನ ಅಂತಿಮ ಗುರಿಯಲ್ಲವೆಂದು ಅರಿಯ ತೊಡಗಿದ್ದಾರೆ.

ಆಧುನಿಕತೆಯಲ್ಲಿ ಎಷ್ಟೇ ಮುಂದುವರೆದಿದ್ದರೂ, ಪಾಪದ ನಗರ, ನೈಟ್ ಕಲ್ಚರ್ ಸಂಸ್ಕೃತಿ ಎಂಬ ಆಪಾದನೆಯಿಂದ ಮುಕ್ತವಾಗಲು ಪುಣ್ಯ ಸಂಪಾದನೆ, ಸಹಬಾಳ್ವೆಯ ಮಹತ್ವ ಅರಿತು, ಇಂದಿನ ತಲೆಮಾರು ಬದಲಾವಣೆಗೆ ತೆರೆದುಕೊಳ್ಳುತ್ತಿರುವುದು ಖುಷಿಯ ವಿಚಾರ!