ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Keshava Prasad B Column: ಮೂಕ ಜೀವಿಗಳ ಕಣ್ಣೀರು ಒರೆಸುವ ಅನಂತ್‌ ಅಂಬಾನಿ

ಸಾಮಾನ್ಯವಾಗಿ ಗಾಯಗೊಂಡ ಆನೆಯಂತಹ ದೊಡ್ಡ ಪ್ರಾಣಿಗಳನ್ನು ರಸ್ತೆ ಮಾರ್ಗವಾಗಿ ನೂರಾರು ಕಿಲೋಮೀಟರ್ ಸಾಗಿಸುವುದು ಅಪಾಯಕಾರಿ. ಈ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಅನಂತ್ ಅಂಬಾನಿ, ಸ್ವಲ್ಪವೂ ಸಮಯ ವ್ಯರ್ಥ ಮಾಡದೆ ವಿಶೇಷ ವಿಮಾನದ ಮೂಲಕ ಆನೆಗೆ ಏರ್‌ಲಿಫ್ಟ್ ವ್ಯವಸ್ಥೆಯನ್ನು ಸಿದ್ಧಗೊಳಿಸಲು ಸೂಚಿಸಿದರು! ‌

ಮೂಕ ಜೀವಿಗಳ ಕಣ್ಣೀರು ಒರೆಸುವ ಅನಂತ್‌ ಅಂಬಾನಿ

-

ಮನಿ ಮೈಂಡೆಡ್

ನಾಗಾಲ್ಯಾಂಡ್‌ನ ಅರಣ್ಯ ಪ್ರದೇಶದಲ್ಲಿ ಕೆಲ ತಿಂಗಳುಗಳ ಹಿಂದೆ ನೆರೆಯ ಸಂದರ್ಭ ಹಿಂಡಿನಿಂದ ಬೇರ್ಪಟ್ಟು, ತೀವ್ರ ಗಾಯಗಳಿಂದ ನರಳುತ್ತಿದ್ದ 53 ವರ್ಷದ ಹಿರಿಯ ಆನೆಯೊಂದನ್ನು ಸ್ಥಳೀಯರು ರಕ್ಷಿಸಿದ್ದರು. ಹೀಗಿದ್ದರೂ, ದೇಹದ ಮೇಲೆ ಆಳವಾದ ಗಾಯಗಳು, ಹೆಜ್ಜೆ ಇಡಲೂ ಆಗದಷ್ಟು ನಿಃಶಕ್ತಿ ಇತ್ತು. ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಆ ಮೂಕ ಜೀವಿಗೆ ತುರ್ತು ವೈದ್ಯಕೀಯ ನೆರವು ತಕ್ಷಣವೇ ಬೇಕಾಗಿತ್ತು. ವಿಷಯ ತಿಳಿದ ತಕ್ಷಣವೇ ಅನಂತ್ ಅಂಬಾನಿ ಅವರ ನಿರ್ದೇಶನದಂತೆ ಗುಜರಾತ್‌ನ ಜಾಮ್‌ನಗರದಲ್ಲಿದ್ದ ‘ವಂತಾರಾ’ ಮೂಲಸೌಕರ್ಯ ಪಡೆ ತಕ್ಷಣವೇ ಕಾರ್ಯ ಪ್ರವೃತ್ತವಾಯಿತು.

ಸಾಮಾನ್ಯವಾಗಿ ಗಾಯಗೊಂಡ ಆನೆಯಂತಹ ದೊಡ್ಡ ಪ್ರಾಣಿಗಳನ್ನು ರಸ್ತೆ ಮಾರ್ಗವಾಗಿ ನೂರಾರು ಕಿಲೋಮೀಟರ್ ಸಾಗಿಸುವುದು ಅಪಾಯಕಾರಿ. ಈ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಅನಂತ್ ಅಂಬಾನಿ, ಸ್ವಲ್ಪವೂ ಸಮಯ ವ್ಯರ್ಥ ಮಾಡದೆ ವಿಶೇಷ ವಿಮಾನದ ಮೂಲಕ ಆನೆಗೆ ಏರ್‌ಲಿಫ್ಟ್ ವ್ಯವಸ್ಥೆಯನ್ನು ಸಿದ್ಧಗೊಳಿಸಲು ಸೂಚಿಸಿದರು! ‌

ಪಯಣದ ಪ್ರತಿ ಕ್ಷಣದಲ್ಲೂ ಆನೆಗೆ ನೋವು ನಿವಾರಕಗಳು ಮತ್ತು ಆಮ್ಲಜನಕವನ್ನು ಪೂರೈಸಲು ಅನುಭವಿ ಪಶುವೈದ್ಯರಿದ್ದರು. ಆನೆ ಗಗನಮಾರ್ಗವಾಗಿ ಕೆಲವೇ ಗಂಟೆಗಳಲ್ಲಿ ಒಡಿಶಾದ ಕಾಡಿನಿಂದ ಗುಜರಾತ್‌ನ ಜಾಮ್‌ನಗರದ ‘ವಂತಾರಾ’ ಪ್ರಾಣಿ ಆಸ್ಪತ್ರೆಗೆ ಸುರಕ್ಷಿತವಾಗಿ ಬಂದು ತಲುಪಿತು.

ವಂತಾರಾಗೆ ಬಂದಿಳಿದ ತಕ್ಷಣ, ಅನಂತ್ ಅಂಬಾನಿ ಖುದ್ದಾಗಿ ಭೇಟಿ ನೀಡಿ ಅದರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿದರು. ವಂತಾರಾದ ಅತ್ಯಾಧುನಿಕ ಐಸಿಯು ಮತ್ತು ವೈದ್ಯಕೀಯ ಉಪಚಾರದಿಂದಾಗಿ ಕೆಲವೇ ವಾರಗಳಲ್ಲಿ ಚೇತರಿಸಿಕೊಂಡಿತು. ಇಂದು ವಂತಾರಾದ ಹಸಿರು ಮಡಿಲಲ್ಲಿ ಇತರ ಆನೆಗಳೊಂದಿಗೆ ಮುಕ್ತವಾಗಿ ಓಡಾಡುತ್ತಾ ಸಂತೋಷದಿಂದ ಜೀವಿಸುತ್ತಿದೆ. ‌ರಿಲಯನ್ಸ್ ಜಿಯೋ ಲಿಸ್ಟಿಂಗ್ ಅನಂತ್ ಅಂಬಾನಿಯವರ ಭಾಷಣ ಈಗ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ: Keshava Prasad B Column: ಟ್ರಂಪ್‌ ಸರ್ಕಾರಕ್ಕೆ ಭಾರತದ ಪವರ್‌ ಇದ್ದಕ್ಕಿದ್ದಂತೆ ಗೊತ್ತಾಯಿತೇ ?

‘ಎಲ್ಲರಿಗೂ ಕೃತಜ್ಞತೆಗಳೊಂದಿಗೆ ನನ್ನ ಮಾತನ್ನು ಆರಂಭಿಸುತ್ತೇನೆ. ಎಲ್ಲರಿಗೂ ಹೃದಯಪೂರ್ವಕ ಆಭಾರಿಯಾಗಿರುವೆ. ಇಂದು ಸ್ಟಾಕ್ ಎಕ್ಸ್‌ʼಚೇಂಜ್‌ನಲ್ಲಿ ಬಾರಿಸಿದ ಗಂಟೆ ನನಗೆ ದೇವಾಲಯದ ಗಂಟೆಯಂತೆಯೇ ಕೇಳಿಸಿತು. ಏಕೆಂದರೆ ನನಗೆ ಬಿಸಿನೆಸ್ ಎಂದರೆ ಪೂಜೆ. ಎಲ್ಲ ಪೂಜೆಯ ಕೊನೆಯಲ್ಲಿ ಪ್ರಸಾದವನ್ನು ಹಂಚುತ್ತಾರೆ. ಪ್ರಸಾದ ರೂಪದಲ್ಲಿ ಜಿಯೋವನ್ನು ಎಲ್ಲರಿಗೂ ಹಂಚುತ್ತಿದ್ದೇವೆ’ ಎಂದು ವಿನಮ್ರತೆಯಿಂದ ಮಾತು ಆರಂಭಿಸಿದರು.

ಜಿಯೋದ ಯಶೋಗಾಥೆಯನ್ನು, ಅದು ಭಾರತೀಯರ ಜನ ಜೀವನದಲ್ಲಿ ತಂದ ಬದಲಾವಣೆ ಗಳನ್ನು ಉದಾಹರಣೆ ಸಹಿತ ಮಗ ವಿವರಿಸುತ್ತಿದ್ದಂತೆ ತಂದೆ ಮುಕೇಶ್ ಅಂಬಾನಿ ಕಣ್ಣಲ್ಲಿ ಆನಂದ ಭಾಷ್ಪ. ತಾಯಿ ನೀತಾ ಅಂಬಾನಿಯಂತೂ ಸ್ವತಃ ಮಕ್ಕಳಂತೆ ಸಂಭ್ರಮಿಸುತ್ತಿದ್ದರು. ‘ನನಗೆ ಸಂಪೂರ್ಣ ವಿಶ್ವಾಸವಿದೆ. ಮುಂಬರುವ ದಿನಗಳು ಭಾರತದ್ದು. ಭಾರತದ ನಾಳೆಗಳು ಅದರ ಯುವಜನರದ್ದು. ವಿಕಸಿತ ಭಾರತದ ಕನಸನ್ನು ನನಸಾಗಿಸಲು ನಾವೆಲ್ಲರೂ ಪಣ ತೊಟ್ಟು ಶ್ರಮಿಸಲಿದ್ದೇವೆ’ ಎಂದು ಕನಸನ್ನು ಹರವಿಟ್ಟರು 31 ವರ್ಷ ವಯಸ್ಸಿನ ಉತ್ಸಾಹಿ ಯುವಕ ಅನಂತ್ ಅಂಬಾನಿ.

ಇಂದಿನ ತಂತ್ರಜ್ಞಾನ ಹಾಗೂ ಆಧುನಿಕತೆಯ ಯುಗದಲ್ಲಿ, ವೈಭವೋಪೇತ ಜೀವನದ ನಡುವೆಯೂ ಭಾರತೀಯ ಮೂಲ ಸಂಸ್ಕೃತಿ, ಆಧ್ಯಾತ್ಮ ಹಾಗೂ ಜೀವದಯೆಯನ್ನು ನೆಚ್ಚಿಕೊಂಡು ಬಾಳುವುದು ಸುಲಭದ ಮಾತಲ್ಲ. ಆದ್ದರಿಂದ ಭಾರತ ಮಾತ್ರವಲ್ಲದೆ, ಏಷ್ಯಾದ ಅತ್ಯಂತ ಶ್ರೀಮಂತ ಉದ್ಯಮಿ ಗಳಲ್ಲಿ ಮುಂಚೂಣಿಯಲ್ಲಿರುವ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಇಂದು ಭಾರತೀಯ ಯುವಜನತೆಗೆ ಧಾರ್ಮಿಕತೆ, ವಿನಯ ಮತ್ತು ನಾಯಕತ್ವದ ಹೊಸ ಭರವಸೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

K P 30

ಸಂಪತ್ತಿನ ಸಿರಿವಂತಿಕೆಗಿಂತ ಸಂಸ್ಕಾರದ ಶ್ರೀಮಂತಿಕೆ ದೊಡ್ಡದು ಎಂಬುದನ್ನು ಅವರು ತಮ್ಮ ಪ್ರತಿನಿತ್ಯದ ನಡವಳಿಕೆ ಮತ್ತು ಕಾರ್ಯಗಳಲ್ಲಿ ನಿರೂಪಿಸುತ್ತಿದ್ದಾರೆ. ಅನಂತ್ ಅವರ ಹೃದಯ ವಂತಿಕೆಗೆ ಅತಿ ದೊಡ್ಡ ಸಾಕ್ಷಿ ‘ವಂತಾರ’ (Vantara). ಗುಜರಾತ್‌ನ ಜಾಮನಗರದಲ್ಲಿ ಸುಮಾರು 3000 ಎಕರೆಗೂ ಹೆಚ್ಚು ಪ್ರದೇಶದಲ್ಲಿ ನಿರ್ಮಿಸಲಾಗಿರುವ ಈ ತಾಣ, ಕೇವಲ ಪ್ರಾಣಿ ಸಂಗ್ರಹಾಲ ಯವಲ್ಲ; ಅದು ಸಂಕಷ್ಟದಲ್ಲಿರುವ, ಗಾಯಗೊಂಡ ಮತ್ತು ಅನಾಥ ಪ್ರಾಣಿಗಳಿಗೆ ಜೀವದಾನ ನೀಡುವ ‘ಪ್ರಕೃತಿಯ ಧಾಮ’.

ಅನಂತ್ ಅವರಿಗೆ ಗೋವಿನ ಮೇಲೆ ಅಪಾರ ಭಕ್ತಿ. ವಂತಾರದಲ್ಲಿ ನೂರಾರು ವೃದ್ಧ ಹಾಗೂ ಅನಾರೋಗ್ಯ ಪೀಡಿತ ಹಸುಗಳಿಗೆ ಅತ್ಯಾಧುನಿಕ ವೈದ್ಯಕೀಯ ಆರೈಕೆ ಮತ್ತು ಪೌಷ್ಟಿಕ ಆಹಾರ ಒದಗಿಸಲಾಗುತ್ತಿದೆ. ಕಷ್ಟದಲ್ಲಿರುವ 200ಕ್ಕೂ ಹೆಚ್ಚು ಆನೆಗಳಿಗೆ ವಿಶ್ವದರ್ಜೆಯ ಆಸ್ಪತ್ರೆ, ಆಯುರ್ವೇದ ಮಸಾಜ್ ಹಾಗೂ ಪ್ರತ್ಯೇಕ ಕೊಳಗಳ ಸೌಲಭ್ಯವನ್ನು ಇಲ್ಲಿ ಕಲ್ಪಿಸಲಾಗಿದೆ.

ವಂತಾರ ಅಂದರೆ ‘ಅರಣ್ಯದ ನಕ್ಷತ್ರ’ ಎಂಬ ಅರ್ಥವಿರುವ ಯೋಜನೆ, ಜಾಗತಿಕ ಮಟ್ಟದಲ್ಲಿ ಪ್ರಾಣಿ ದಯೆ, ಸಂರಕ್ಷಣೆ ಮತ್ತು ವನ್ಯಜೀವಿಗಳ ಪುನರ್ವಸತಿಯ ವಿಶಾಲ ಪರಿಕಲ್ಪನೆಯಾಗಿದೆ. ‘ಇದು ಪ್ರಾಣಿಸಂಗ್ರಹಾಲಯವಲ್ಲ, ಪ್ರಾಣಿಗಳ ಶೂಶ್ರೂಷೆ ಮತ್ತು ಸೇವೆ ಮಾಡುವ ಸೇವಾಲಯ’ ಎಂಬ ನಿಲುವಿನೊಂದಿಗೆ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಇಲ್ಲಿ ಕೃತಕ ಕಾಂಕ್ರೀಟ್ ಗೋಡೆಗಳ ಬದಲಾಗಿ, ಕಾಡಿನ ನೈಸರ್ಗಿಕ ವಾತಾವರಣವನ್ನೇ ಮರು ಸೃಷ್ಟಿಸಿ ಪ್ರಾಣಿಗಳಿಗೆ ಮುಕ್ತವಾಗಿ ಸಂಚರಿಸಲು ಅನುವಾಗುವಂತೆ ಪ್ರದೇಶವನ್ನು ವಿನ್ಯಾಸಗೊಳಿಸ ಲಾಗಿದೆ. ಆನೆಗಳಿಗಾಗಿ ವಿಶೇಷ ಆಸ್ಪತ್ರೆ ಮತ್ತು ಆವಾಸಸ್ಥಾನವನ್ನು ಕಲ್ಪಿಸಲಾಗಿದೆ. ಸುಮಾರು 600ಕ್ಕೂ ಹೆಚ್ಚು ಎಕರೆ ಪ್ರದೇಶವನ್ನು ಅವುಗಳ ನೈಸರ್ಗಿಕ ವಾಸಸ್ಥಾನವಾಗಿ ರೂಪಿಸಲಾಗಿದೆ. ಆನೆಗಳಿಗಾಗಿ 14000 ಚದರ ಅಡಿಯ ವಿಶಾಲ ಅಡುಗೆಮನೆ ಇದ್ದು, ವೈದ್ಯಕೀಯ ಅಗತ್ಯಕ್ಕೆ ತಕ್ಕಂತೆ ಆಹಾರ ಸಿದ್ಧಪಡಿಸಲಾಗುತ್ತದೆ.

ಜೊತೆಗೆ ಆಯುರ್ವೇದ ಮಸಾಜ, ಜಲಚಿಕಿತ್ಸೆಗೆ ಕೊಳಗಳು ಹಾಗೂ ಆನೆಗಳ ಸಂಧಿನೋವು ಶಮನಗೊಳಿಸಲು ವಿಶೇಷ ಮಣ್ಣಿನ ಚಿಕಿತ್ಸಾ ಸೌಲಭ್ಯವಿದೆ. ದೇಶ-ವಿದೇಶಗಳಿಂದ ರಕ್ಷಿಸಲ್ಪಟ್ಟ 2000ಕ್ಕೂ ಹೆಚ್ಚು ವಿವಿಧ ತಳಿಯ ಪ್ರಾಣಿ ಮತ್ತು ಪಕ್ಷಿಗಳಿಗೆ ಇಲ್ಲಿ ಆರೈಕೆ ನೀಡಲಾಗುತ್ತಿದೆ. ವಂತಾರದಲ್ಲಿ 25000 ಚದರ ಅಡಿಯಲ್ಲಿ ನಿರ್ಮಿಸಲಾದ ಪ್ರಾಣಿ ಆಸ್ಪತ್ರೆಯಿದೆ. ಚಿಕಿತ್ಸೆ ನೀಡಲು ಎಂಆರ್‌ಐ, ಸಿಟಿ ಸ್ಕ್ಯಾನ್, ಎಂಡೋಸ್ಕೋಪಿ, ರೊಬೊಟಿಕ್ ಸರ್ಜರಿ ಉಪಕರಣಗಳು, ಐಸಿಯು ಹಾಗೂ ಕೃತಕ ಅಂಗಾಂಗ ಜೋಡಣೆಯ ಚಿಕಿತ್ಸಾ ಘಟಕಗಳು ಇಲ್ಲಿ ಲಭ್ಯವಿವೆ.

ಕಾನೂನುಬಾಹಿರವಾಗಿ ಸಾಗಣೆಯಾಗುವ, ಬೇಟೆಗಾರರಿಂದ ಗಾಯಗೊಂಡ, ಅಥವಾ ದೈಹಿಕ ಯಾತನೆ ಅನುಭವಿಸುವ ಮೂಕಪ್ರಾಣಿಗಳನ್ನು ನಾನಾ ಭಾಗಗಳಿಂದ ರಕ್ಷಿಸಿ ತರಲಾಗುತ್ತದೆ. ಅಳಿವಿನಂಚಿನಲ್ಲಿರುವ ವಿವಿಧ ವನ್ಯಜೀವಿ ತಳಿಗಳ ವಂಶಾಭಿವೃದ್ಧಿ ಹಾಗೂ ಪರಿಸರ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಸಂಶೋಧಕರೊಂದಿಗೆ ಸಂಶೋಧನೆ ನಡೆಸಲಾಗುತ್ತಿದೆ.

ಅನಂತ್ ಅಂಬಾನಿ ಅವರು ತಮ್ಮ ಧಾರ್ಮಿಕತೆ ಹಾಗೂ ಆಧ್ಯಾತ್ಮಿಕ ನಂಬಿಕೆಯನ್ನು ಕೇವಲ ಪೂಜೆ-ಪುನಸ್ಕಾರಗಳಿಗೆ ಸೀಮಿತಗೊಳಿಸದೆ, ‘ಪ್ರಾಣಿ ಸೇವೆ’ಯ ಮೂಲಕ ಪ್ರತ್ಯಕ್ಷವಾಗಿ ಬದುಕಿ ತೋರಿಸುತ್ತಿzರೆ. ಸಂಪತ್ತು ಮನುಷ್ಯನಿಗೆ ಅಹಂಕಾರವನ್ನು ನೀಡಬಹುದು, ಆದರೆ ಸಂಸ್ಕಾರ ಮತ್ತು ಕರುಣೆ ಇದ್ದರೆ ಅದೇ ಸಂಪತ್ತು ಕೋಟ್ಯಂತರ ಮೂಕ ಜೀವಿಗಳ ಪಾಲಿನ ಸಂಜೀವಿನಿಯಾಗುತ್ತದೆ ಎಂಬುದಕ್ಕೆ ಅನಂತ್ ಅಂಬಾನಿ ಅವರ ಈ ಸ್ವಭಾವವೇ ನಿದರ್ಶನ.

ಇತ್ತೀಚೆಗೆ ವಿದೇಶದಲ್ಲಿ ಕಸಾಯಿಖಾನೆಗೆ ಹೋಗುತ್ತಿದ್ದ ಹಿಪ್ಪಾಪೊಟಾಮಸ್‌ಗಳನ್ನು (ನೀರಾನೆ) ಅನಂತ್ ಅಂಬಾನಿ ರಕ್ಷಿಸಿದ್ದರು. ಕೊಲಂಬಿಯಾ ದೇಶದಲ್ಲಿ ನಿಯಂತ್ರಣ ಮೀರಿ ಬೆಳೆದಿದ್ದ ಹಾಗೂ ಕೊಲ್ಲಲು ಆದೇಶ ನೀಡಲಾಗಿದ್ದ ಸುಮಾರು 80 ಹಿಪ್ಪಾಪೊಟಾಮಸ್‌ಗಳನ್ನು ಕೊಲ್ಲದಂತೆ ಅನಂತ್ ಅಂಬಾನಿ ಮನವಿ ಮಾಡಿ, ಅವುಗಳನ್ನು ರಕ್ಷಿಸಲು ಮುಂದೆ ಬಂದಿದ್ದರು. ಈ ಮೂಕ ಜೀವಿಗಳು ತಾವು ಹುಟ್ಟಿದ ಜಾಗ ಅಥವಾ ಪರಿಸ್ಥಿತಿಯನ್ನು ತಾವೇ ಆಯ್ಕೆ ಮಾಡಿಕೊಂಡಿಲ್ಲ. ನಮ್ಮ ಬಳಿ ಇವುಗಳನ್ನು ರಕ್ಷಿಸುವ ಸೌಲಭ್ಯವಿರುವಾಗ, ಜೀವ ಉಳಿಸುವುದು ನಮ್ಮ ಧರ್ಮ ಎಂದು ಅನಂತ್ ಅಂಬಾನಿ ಹೇಳಿದರು. ಆ ಮೂಕಜೀವಿಗಳನ್ನು ಸುರಕ್ಷಿತವಾಗಿ ಹಿಡಿದು, ವಿಮಾನದ ಮೂಲಕ ಜಾಮ್ ನಗರದಲ್ಲಿರುವ ತಮ್ಮ ‘ವಂತಾರ’ ಸಂರಕ್ಷಣಾ ಕೇಂದ್ರಕ್ಕೆ ಕರೆತರುವ ಸಂಪೂರ್ಣ ವೆಚ್ಚ ಹಾಗೂ ಹೊಣೆಗಾರಿಕೆಯನ್ನು ವಹಿಸಿಕೊಳ್ಳುವುದಾಗಿ ಭರವಸೆ ನೀಡಿದರು.

ಹಿಪ್ಪೋಗಳಿಗೆ ಸೂಕ್ತವಾದ ಕೃತಕ ಜಲಾಶಯ ಮತ್ತು ನೈಸರ್ಗಿಕ ಆವಾಸಸ್ಥಾನವನ್ನು ವಂತಾರದಲ್ಲಿ ಸಿದ್ಧಪಡಿಸಿ, ಅವುಗಳಿಗೆ ಜೀವನಪರ್ಯಂತ ಉಚಿತ ಆರೈಕೆ ನೀಡಲು ಸಿದ್ಧರಾಗಿರುವುದಾಗಿ ಪ್ರಸ್ತಾವನೆ ಸಲ್ಲಿಸಿದರು. ‘ನನ್ನ ಆಶ್ರಯದಲ್ಲಿ 9 ಲಕ್ಷ ಗೋವುಗಳು ಇವೆ. ಅವುಗಳಲ್ಲಿ 7 ಲಕ್ಷ ಹಸುಗಳು ಹಾಲನ್ನು ಕೊಡುವುದಿಲ್ಲ. ಅವುಗಳು ನಾನಾ ರಾಜ್ಯಗಳಲ್ಲಿ ಅನಾಥವಾಗಿದ್ದವು. ಅವುಗಳ ಸೇವೆಯನ್ನು ನಾನು ಮಾಡುತ್ತೇವೆ. ನಾನು ಏನನ್ನು ಸೇವಿಸುತ್ತೇನೆಯೋ, ಅದನ್ನೇ ಗೋವುಗಳಿಗೂ ಅರ್ಪಿಸುವೆ. ದಿನನಿತ್ಯ ಅವುಗಳನ್ನು ಉಪಚರಿಸಿ ಮೈದಡವಿಯೇ ನಾನು ಉಳಿದ ಕೆಲಸಗಳಿಗೆ ಹೋಗುತ್ತೇನೆ’ ಎನ್ನುತ್ತಾರೆ ಅನಂತ್ ಅಂಬಾನಿ!

ಅನಂತ್ ಅಂಬಾನಿ ಅವರ ಜೀವನದಲ್ಲಿ ಧಾರ್ಮಿಕತೆ ಎನ್ನುವುದು ಕೇವಲ ತೋರಿಕೆಯಲ್ಲ, ಅದು ಅವರ ಪ್ರತಿ ಉಸಿರಿನಲ್ಲಿ ಬೆರೆತ ಜೀವಭಾವ. ದೇಶದ ಪ್ರಮುಖ ಪುಣ್ಯಕ್ಷೇತ್ರಗಳಾದ ಬದರಿನಾಥ್, ಕೇದಾರನಾಥ್, ತಿರುಪತಿ ತಿರುಮಲ, ದ್ವಾರಕಾ ಹಾಗೂ ಕಾಶಿ ವಿಶ್ವನಾಥ ದೇವಾಲಯಗಳಿಗೆ ಅವರು ನಿಯಮಿತವಾಗಿ ನೀಡುವ ಭೇಟಿ ಮತ್ತು ಅಲ್ಲಿ ಸಲ್ಲಿಸುವ ಪ್ರಾರ್ಥನೆ ಅವರ ಶ್ರದ್ಧೆಗೆ ಸಾಕ್ಷಿ.

ಬದರಿನಾಥ- ಕೇದಾರನಾಥ ದೇವಾಲಯ ಸಮಿತಿಯ (BKTC) ಸದಸ್ಯರಾಗಿ ಸೇವೆ ಸಲ್ಲಿಸಿರುವ ಅವರು, ಕ್ಷೇತ್ರಗಳ ಅಭಿವೃದ್ಧಿಗಾಗಿ ಕೋಟ್ಯಂತರ ರೂಪಾಯಿ ದೇಣಿಗೆ ನೀಡಿದ್ದಾರೆ. ತಿರುಪತಿ ತಿರುಮಲ ದೇವಸ್ಥಾನಕ್ಕೆ ತಮ್ಮ ಅಪಾರ ಭಕ್ತಿ ಮತ್ತು ಸೇವೆಯ ಭಾಗವಾಗಿ ಕಾಲಕಾಲಕ್ಕೆ ಹಲವು ಕೊಡುಗೆಗಳನ್ನು ಹಾಗೂ ದೇಣಿಗೆಗಳನ್ನು ನೀಡಿದ್ದಾರೆ. ತಿರುಮಲ ಬೆಟ್ಟದ ಪರಿಸರ ಮಾಲಿನ್ಯವನ್ನು ತಡೆಯುವ ನಿಟ್ಟಿನಲ್ಲಿ ಹಾಗೂ ಭಕ್ತರ ಸಾರಿಗೆ ಸೌಲಭ್ಯಕ್ಕಾಗಿ ಸುಮಾರು 27.5 ಕೋಟಿ ಮೌಲ್ಯದ 25 ಅತ್ಯಾಧುನಿಕ ಎಲೆಕ್ಟ್ರಿಕ್ ಬಸ್‌ಗಳನ್ನು ರಿಲಯನ್ಸ್ ಸಂಸ್ಥೆಯ ಪರವಾಗಿ ಟಿಟಿಡಿಗೆ ಹಸ್ತಾಂತರಿಸಿ ದ್ದಾರೆ. ಕೇವಲ ಬಸ್‌ಗಳನ್ನು ನೀಡುವುದಷ್ಟೇ ಅಲ್ಲದೆ, ಅವುಗಳನ್ನು ಚಾಲನೆ ಮಾಡಲು 50 ಚಾಲಕರ ವೇತನ, ಅಗತ್ಯವಿರುವ ಇವಿ ಚಾರ್ಜಿಂಗ್ ಸ್ಟೇಷನ್‌ಗಳು ಮತ್ತು ಸುಸ್ಥಿರ ನಿರ್ವಹಣೆಯ ಸಂಪೂರ್ಣ ವೆಚ್ಚವನ್ನು ತಾವೇ ಭರಿಸುವುದಾಗಿ ಒಪ್ಪಿಕೊಂಡಿದ್ದಾರೆ.

ತಿರುಮಲದಲ್ಲಿರುವ ಗೋಶಾಲೆಯನ್ನು ಮೇಲ್ದರ್ಜೆಗೇರಿಸಲು ಮತ್ತು ಆಧುನೀಕರಿಸಲು ಅನಂತ್ ಅಂಬಾನಿ ಮುಂದೆ ಬಂದಿದ್ದಾರೆ. ಕೇರಳದ ಪ್ರಸಿದ್ಧ ಪ್ರಾಚೀನ ದೇವಾಲಯಗಳ ಜೀರ್ಣೋದ್ಧಾರಕ್ಕೆ 22.5 ಕೋಟಿ ರುಪಾಯಿ ದೇಣಿಗೆ ನೀಡಿದ್ದಾರೆ. ಇವೆಲ್ಲದರ ಜತೆಗೆ ಅವರೊಬ್ಬ ಉತ್ತಮ ಬಿಸಿನೆಸ್ ಮ್ಯಾನ್ ಕೂಡಾ. ಮುಖ್ಯವಾಗಿ ರಿಲಯನ್ಸ್ ಇಂಡಸ್ಟ್ರೀಸ್‌ನ ಇಂಧನ ಮತ್ತು ರಿನ್ಯೂವೇಬಲ್ ಎನರ್ಜಿ ವಿಭಾಗಗಳ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಅಲ್ಲೂ ತಮ್ಮ ಛಾಪನ್ನು ಮೂಡಿಸಿದ್ದಾರೆ.

ಆಂಧ್ರಪ್ರದೇಶದಲ್ಲಿ ರಿಲಯ ಅನಂತ್ ಅಂಬಾನಿ ಅವರ ನೇತೃತ್ವದಲ್ಲಿ ಬೃಹತ್ ಪ್ರಮಾಣದ ಸಿಬಿಜಿ ( Compressed Biogas- CBG / ಬಯೋಗ್ಯಾಸ್) ಪ್ಲಾಂಟ್‌ಗಳನ್ನು ಸ್ಥಾಪಿಸಲು ಮುಂದಾಗಿದೆ. ಇದು ರಾಜ್ಯದ ಇಂಧನ ವಲಯ ಹಾಗೂ ಗ್ರಾಮೀಣ ಆರ್ಥಿಕತೆಯಲ್ಲಿ ಸಕಾರಾತ್ಮಕ ಬದಲಾವಣೆಗೆ ನಾಂದಿ ಹಾಡುವ ನಿರೀಕ್ಷೆ ಇದೆ.