Dr Manjula Hullahalli Column: ಬಹುಮುಖಿ ವ್ಯಕ್ತಿತ್ವದ ಬಂಗಾರಪ್ಪ
ಶಾರದಾ ಕಲಾಸಂಘದ ಮೂಲಕ ‘ಕ್ರಾಂತಿಕಾರಿ ಬಸವಣ್ಣ’ ನಾಟಕದಲ್ಲಿ ಬಸವಣ್ಣನ ಪಾತ್ರಧಾರಿ ಯಾಗಿ ವಿಜೃಂಭಿಸಿದವರು ಬಂಗಾರಪ್ಪನ ವರು. ತಮ್ಮ ರಾಜಕೀಯ ಬದುಕಿನಲ್ಲೂ ಬಸವಣ್ಣನವರ ವಚನ ಗಳನ್ನು ಮಾರ್ಗದರ್ಶಕ ಸೂತ್ರಗಳನ್ನಾಗಿ ಅಳವಡಿಸಿಕೊಂಡವರು. ರಾಜಕಾರಣದ ಸಮಯ ಅವರೊಳಗಿನ ನಟನ ಉನ್ನತೋನ್ನತ ಬೆಳವಣಿಗೆಗೆ ಅವಕಾಶ ಮಾಡಿಕೊಡಲಿಲ್ಲ. ಸಂಗೀತಕ್ಕೂ ವಿಶಿಷ್ಟ ಸ್ಥಾನ ನೀಡುವ ಬಂಗಾರಪ್ಪನವರಿಗೆ ಗಂಗೂಬಾಯಿ ಹಾನಗಲ್ರ ಹಿಂದೂಸ್ಥಾನಿ ಸಂಗೀತ, ಪ್ರವೀಣ ಗೋಲ್ಕಿಂಡಿಯವರ ಕೊಳಲುನಾದ, ಜಾಕೀರ್ ಹುಸೇನರ ತಬಲಾ ಮಿಡಿತ ಎಲ್ಲವೂ ಬೇಕು.
-
ಡಾ.ಮಂಜುಳಾ ಹುಲ್ಲಹಳ್ಳಿ
ಎಸ್.ಬಂಗಾರಪ್ಪನವರ ವ್ಯಕ್ತಿತ್ವದ ಛಾಪು, ರೂಪುರೇಷೆಗಳು, ಮನಸ್ಥಿತಿ ಇತ್ಯಾದಿಗಳು ಅಪರಿಚಿತ ವಾಗಿಯೂ ಇರಲಿಲ್ಲ. ಮಾಧ್ಯಮಗಳ ಮೂಲಕ ಅವರ ವ್ಯಕ್ತಿತ್ವದ ಒಂದು ಚಿತ್ರಣ ನನಗೆ ದಕ್ಕಿತ್ತು. ಆದರೂ ಬಂಗಾರಪ್ಪ ನವರ ಬಗೆಗೆ ಒಂದು ಲೇಖನ ಬರೆಯಬೇಕೆಂದಾಗ ನನ್ನಲ್ಲಿ ಹೆಚ್ಚಿನ ಮಾಹಿತಿ ಇಲ್ಲ ಎಂಬುದನ್ನು ಸಂಕೋಚದಿಂದಲೇ ಹೇಳಬೇಕಾಯಿತು. ಆಗ ಆದಾಗ ತಾನೇ ಭೇಟಿಯಾಗಿದ್ದ ಬಂಗಾರಪ್ಪನವರು ’ಅದಕ್ಕೇನಂತೆ, ಹಾಗೆ ದೂರದಿಂದ ಬಂಗಾರಪ್ಪ ಎಂದು ನೀವು ದೂರದಿಂದ ನನ್ನ ಬಗ್ಗೆ ಏನನ್ನು ಗ್ರಹಿಸಿದ್ದಿರೋ ಅದನ್ನೇ ಬರೆಯಿರಿ’ ಎಂದು ಸೂಚಿಸಿದರು.
ಹಾಗೆ ನೋಡಿದರೆ ಅನ್ವಯಿಸಬಹುದಾದ ವಿಶೇಷಣಗಳನ್ನೆಲ್ಲಾ ಈ ‘ಎಸ್’ ಪ್ರತಿನಿಧಿಸುತ್ತಿದೆ. ಭೌಗೋಳಿಕವಾಗಿ ಹೇಳುವುದಾದರೆ ‘ಎಸ್’ ಎಂದರೆ ಸಾರೆಕೊಪ್ಪ, ಹುಟ್ಟೂರು. ‘ಎಸ್’ ಎಂದರೆ ಸೊರಬ ಲೋಕಸಭಾ ಕ್ಷೇತ್ರ. ‘ಎಸ್’ ಎಂದರೆ ಶಿವಮೊಗ್ಗ ಮೆಟ್ಟಿದ ಜಿಲ್ಲೆ. ಇನ್ನು ರಾಜಕೀಯ ನೆಲೆಯಲ್ಲಿ ಹೇಳುವುದಾದರೆ ಶಾಂತವೇರಿ ಗೋಪಾಲ ಗೌಡರ ಶಿಷ್ಯ, ಸಮಾಜವಾದಿ ಸಿದ್ದಾಂತವಾದಿ, ಸೋಲಿಲ್ಲದ ಸರದಾರ, ಶಾಸಕ, ಸಂಸದ ಹೀಗೆಲ್ಲ ಅರ್ಥೈಸ ಬಹುದು. ಹಾಗೆಯೇ ‘ಎಸ್’ ಬಂಗಾರಪ್ಪ ನವರ ಮನಸ್ಥಿತಿಗೂ ಸಂಕೇತವಾಗಿ ನಿಲ್ಲುತ್ತದೆ. ಒಟ್ಟಾರೆ ‘ಸಾರೇಕೊಪ್ಪ’ ಬಂಗಾರಪ್ಪ ‘ಸ್ವಾಭಿಮಾನಿ’ ಬಂಗಾರಪ್ಪ ಎನ್ನುವವರೆಗೂ ಈ ‘ಎಸ್’ ಹರಡಿಕೊಳ್ಳುತ್ತದೆ.
ಇದನ್ನೂ ಓದಿ: Rohini Chandrashekher Column: ಮತದಾನ: ಬರೀ ಹಕ್ಕೇ ಅಥವಾ ಪ್ರಜಾಪ್ರಭುತ್ವದ ಆತ್ಮವೇ?
ಸಾಹಿತ್ಯದ ಬಗ್ಗೆ ಅಭಿರುಚಿ: ಸಾಹಿತ್ಯ ಪ್ರೇಮಿ ಬಂಗಾರಪ್ಪನವರು ವಿಶಿಷ್ಟ ಸ್ಥಾನ ಪಡೆಯುತ್ತಾರೆ. ಮುಖ್ಯಮಂತ್ರಿ ಬಂಗಾರಪ್ಪನವರು ‘ಕನ್ನಡದಲ್ಲಿ ಟಿಪ್ಪಣಿಗಳಿಲ್ಲದ ಕಡತಗಳನ್ನು ತಮಗೆ ಕಳಿಸ ಬಾರದು’ ಎಂದು ಆದೇಶ ಮಾಡಿದ್ದರೆಂದರೆ ಆ ಬಗ್ಗೆ ಹೆಮ್ಮೆ ಪಡದ ಕನ್ನಡಿಗರು ಯಾರಿದ್ದಾರು? ಮೈಸೂರು ಮಹಾರಾಜ ಕಾಲೇಜಿನಲ್ಲಿ ಐಚ್ಛಿಕ ಕನ್ನಡದ ವಿದ್ಯಾರ್ಥಿಯಾಗಿ, ದೇಜಗೌ, ತ.ಸು. ಶಾಮರಾಯರ ಶಿಷ್ಯತ್ವ ಪಡೆದಿದ್ದ ಬಂಗಾರಪ್ಪನವರು ಕನ್ನಡದ ಕೆಲಸಕ್ಕೆ ತಮ್ಮನ್ನು ತೆತ್ತುಕೊಂಡ ಪರಿಯನ್ನು ಓದುತ್ತಿದ್ದರೆ ಮೈನವಿರೇಳುತ್ತದೆ.
ಸತತವಾದ ಸಾಹಿತ್ಯದ ಅಭ್ಯಾಸವೇ ಬಂಗಾರಪ್ಪನವರು ಅತ್ಯುತ್ತಮ ವಾದ ವಾಗ್ಮಿಗಳಾಗಿ ರೂಪುಗೊಳ್ಳಲು ಕಾರಣವಾಗಿದೆ. ಈ ಸಂದರ್ಭದಲ್ಲಿ ಪ್ರೊ.ದೇಜಗೌ ಹೇಳುತ್ತಿದ್ದ ಮಾತುಗಳು ನೆನಪಿಗೆ ಬರುತ್ತವೆ. ಬಂಗಾರಪ್ಪ ನವರು ಮುಖ್ಯಮಂತ್ರಿ ಗದ್ದುಗೆಯಿಂದ ಇಳಿಯಬೇಕಾಗಿ ಬಂದಿದ್ದ ಸನ್ನಿವೇಶ. ಆ ಸಮಯದಲ್ಲಿ ಕುವೆಂಪು ಪ್ರತಿಷ್ಠಾನಕ್ಕೆ ಹಣ ಕೇಳುವುದು ಸೂಕ್ತವಲ್ಲ ಅನ್ನಿಸಿದರೂ ಇನ್ನೂ ಸಂದರ್ಭವೇ ಸಿಕ್ಕದಲ್ಲ ಎಂದೆಣಿಸಿ ಅವರನ್ನು ಭೇಟಿ ಆಗಿ ಪ್ರಸ್ತಾಪಿಸಿದೆ. ‘ಎಷ್ಟು ಹಣ ಬೇಕು ಗುರುಗಳೇ?’ ಎಂದು ಕೇಳಿದರು.
ನಾನು ಹತ್ತಾದರೂ ಕೊಟ್ಟಾರು ಎಂದುಕೊಂಡು ‘ಇಪ್ಪತ್ತೈದು ಲಕ್ಷ’ ಎಂದು ಕೇಳಿದೆ. ಅವರು ಕೂಡಲೇ ‘ಆಗಲಿ’ ಎಂದು ಆದೇಶ ನೀಡಿಯೇ ಬಿಟ್ಟರು. ಆಗ ಅಯ್ಯೋ ಐವತ್ತು ಕೇಳಿದ್ದರೂ ಕೊಡುತ್ತಿದ್ದರಲ್ಲ ಎಂದೆನಿಸಿತ್ತು ಸಾಹಿತ್ಯದ ಕೆಲಸಗಳಿಗೆ ಬಂಗಾರಪ್ಪನವರ ಕೊಡುಗೈತನವನ್ನು ಈ ಘಟನೆ ಸ್ಪಷ್ಟವಾಗಿ ತೆರೆದಿಡುತ್ತದೆ. ಕನ್ನಡದ ಮೇಲಿನ ಪ್ರೇಮ: ಕನ್ನಡ, ಕನ್ನಡಿಗ, ಕರ್ನಾಟಕದ ಅಭಿವೃದ್ಧಿಗೆ ಬಂಗಾರಪ್ಪನವರದು ಯಾವಾಗಲೂ ತೆರೆದ ಮನಸ್ಸು. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಹಂಪಿ ಕನ್ನಡ ವಿಶ್ವವಿದ್ಯಾಲಯ ಯೋಜನೆಗಳಿಗೆ ಜೀವತಂದು ಕನ್ನಡ ಪುಸ್ತಕ ಪ್ರಕಟಣೆಗೆ ಒಂದು ಕೋಟಿ ರೂ.ಗಳ ಠೇವಣಿ ಇಟ್ಟದ್ದು ಬಂಗಾರಪ್ಪನವರು ಕನ್ನಡಿಗರಿಗೆ ನೀಡಿದ ವಿಶೇಷ ಉಡುಗೊರೆ, ಜತೆಗೆ ಅಕಾಡೆಮಿಗಳ ಅಧ್ಯಕ್ಷರಿಗೆ ವಾಹನಯೋಗವನ್ನು ಕಲ್ಪಿಸಿದ್ದೂ ಮುಖ್ಯಮಂತ್ರಿ ಬಂಗಾರಪ್ಪನವರೇ. ನಾಟಕ ಲೋಕದಲ್ಲೂ ಬಂಗಾರಪ್ಪನವರ ಸಾಧನೆ ಇದೆ.
ಶಾರದಾ ಕಲಾಸಂಘದ ಮೂಲಕ ‘ಕ್ರಾಂತಿಕಾರಿ ಬಸವಣ್ಣ’ ನಾಟಕದಲ್ಲಿ ಬಸವಣ್ಣನ ಪಾತ್ರಧಾರಿ ಯಾಗಿ ವಿಜೃಂಭಿಸಿದವರು ಬಂಗಾರಪ್ಪನ ವರು. ತಮ್ಮ ರಾಜಕೀಯ ಬದುಕಿನಲ್ಲೂ ಬಸವಣ್ಣನವರ ವಚನ ಗಳನ್ನು ಮಾರ್ಗದರ್ಶಕ ಸೂತ್ರಗಳನ್ನಾಗಿ ಅಳವಡಿಸಿಕೊಂಡವರು. ರಾಜಕಾರಣದ ಸಮಯ ಅವರೊಳಗಿನ ನಟನ ಉನ್ನತೋನ್ನತ ಬೆಳವಣಿಗೆಗೆ ಅವಕಾಶ ಮಾಡಿಕೊಡಲಿಲ್ಲ. ಸಂಗೀತಕ್ಕೂ ವಿಶಿಷ್ಟ ಸ್ಥಾನ ನೀಡುವ ಬಂಗಾರಪ್ಪನವರಿಗೆ ಗಂಗೂಬಾಯಿ ಹಾನಗಲ್ರ ಹಿಂದೂಸ್ಥಾನಿ ಸಂಗೀತ, ಪ್ರವೀಣ ಗೋಲ್ಕಿಂಡಿಯವರ ಕೊಳಲುನಾದ, ಜಾಕೀರ್ ಹುಸೇನರ ತಬಲಾ ಮಿಡಿತ ಎಲ್ಲವೂ ಬೇಕು. ಕ್ರೀಡೆಯಲ್ಲೂ ಆಸಕ್ತಿ: ಕ್ರೀಡೆಯ ಬಗೆಗೂ ವೈಯಕ್ತಿಕ ಒಲವು ಬೆಳೆಸಿಕೊಂಡಿರುವ ಬಂಗಾರಪ್ಪನವರು ವಿದ್ಯಾರ್ಥಿ ದೆಸೆಯಿಂದಲೂ ಅತ್ಯುತ್ತಮ ಕ್ರೀಡಾಪಟು, ಅದರಲ್ಲೂ ಕುಸ್ತಿಯ ಬಗೆಗೆ ವಿಶೇಷ ಆಸಕ್ತಿ. ಈಗ ಬ್ಯಾಡ್ಮಿಂಟನ್ ಕಡೆಗೆ ವಿಶೇಷ ಪ್ರೀತಿ.
‘ನಾನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನದಂದು ಬೆಳಿಗ್ಗೆಯೂ ಷಟಲ್ ಬ್ಯಾಡ್ಮಿಂಟನ್ ಆಡಿದ್ದೆ. ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ನಂತರ ಅವತ್ತು ಸಂಜೆಯೂ ಷಟಲ್ ಬ್ಯಾಡ್ಮಿಂಟನ್ ಆಡಿದ್ದೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ವಿಶ್ವ, ಆಶ್ರಯ, ಅನ್ವಯ, ಆರಾಧನಾ, ಹನಿತೆನೆ, ಕರೆಕಲ್ಯಾಣ, ಭೂಸುಧಾರಣೆ, ಅನಿಲ ಯೋಜನೆ, ಕೃಷಿ ಕಾರ್ಮಿಕ ಶ್ರಮ ಕಲ್ಯಾಣ ನಿಧಿ, ಸಮಗ್ರ ವಿಕಾಸ, ಕೃಷಿ ಪ್ರಶಸ್ತಿ, ಏಕಲವೃ ಕ್ರೀಡಾ ಪ್ರಶಸ್ತಿ ಮುಂತಾದ ಯೋಜನೆಗಳ ಹರಿಕಾರ ಬಂಗಾರಪ್ಪನವರ ಮನ ಸದಾ ಮಾನವೀಯತೆಯತ್ತ ಮಿಡಿಯುತ್ತಿರುತ್ತದೆ.
‘ಮಾನವೀಯತೆ’ ಎಂದಾಗ ನೆನಪಿಗೆ ಬರುತ್ತದೆ, ಪಿ.ಯು.ಸಿ ಓದಿರುವ ತಮ್ಮ ಮಗಳಿಗೆ ಯಾವುದಾ ದರೂ ನೌಕರಿ ನೀಡಿ ತಮ್ಮ ಆ ಹುಡುಗಿಯ ಜವಾಬ್ದಾರಿ ವಹಿಸಿಕೊಂಡು ಅವಳನ್ನು ಎಂ.ಬಿ.ಬಿ. ಎಸ್. ಓದಿಸಿದರಂತೆ. ಅತ್ಯುತ್ತಮ ನಾಯಕತ್ವದ ಬಗೆಗೆ ನಮ್ಮ ಸಾಹಿತ್ಯದಲ್ಲಿ ಹೀಗೆ ವರ್ಣನೆಯಿದೆ. ‘ಕೊಟ್ಟ ಮಾತಿಗೆ ತಪ್ಪಬಾರದು, ದುಪ್ಪರಿಗೆ ಸಹಾಯ ಮಾಡಬಾರದು, ಸಜ್ಜನರಿಗೆ ತೊಂದರೆ ಕೊಡಬಾರದು, ದೀನ ದಲಿತರಿಗೆ ಅನಾಥರಿಗೆ ಕೊಡುಗೈ ದಾನಿಯಾಗಿರಬೇಕು. ರಣರಂಗದಿಂದ ಹಿಮ್ಮೆಟ್ಟಬಾರದು.....’ ಈ ಎಲ್ಲಾ ಸತ್ಯ ಗುಣಗಳನ್ನು ಬಂಗಾರಪ್ಪನವರಲ್ಲಿ ಕಾಣಬಹುದು.
(ಕೃಪೆ: ಎಸ್.ಬಂಗಾರಪ್ಪ ಅಭಿನಂದನಾ ಗ್ರಂಥ)