ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Roopa Gururaj Column: ಜಬ ನಾಮ ಸುನಾವೈ

ಹನುಮಾನ್ ಚಾಲೀಸಾವನ್ನು ಭಕ್ತಿಯಿಂದ ಪಠಿಸುವುದರಿಂದ ಮನಸ್ಸಿನಲ್ಲಿರುವ ಭಯ, ಆತಂಕ ಮತ್ತು ನಕಾರಾತ್ಮಕ ಆಲೋಚನೆಗಳು ದೂರವಾಗಿ, ಹೊಸ ಚೈತನ್ಯ ಹಾಗೂ ಆತ್ಮವಿಶ್ವಾಸ ಮೂಡುತ್ತದೆ. ಹನುಮಂತನು ಬುದ್ಧಿ, ಶಕ್ತಿ ಮತ್ತು ಧೈರ್ಯದ ಸಂಕೇತ ವಾಗಿರುವುದರಿಂದ, ಚಾಲೀಸಾದ ಪಠಣವು ಜೀವನದ ಕಷ್ಟಕಾಲದಲ್ಲಿ ಮನೋಬಲವನ್ನು ಹೆಚ್ಚಿಸಿ ಅಡೆತಡೆಗಳನ್ನು ನಿವಾರಿಸಲು ಸಹಕರಿಸುತ್ತದೆ.

Roopa Gururaj Column: ಜಬ ನಾಮ ಸುನಾವೈ

-

ಒಂದೊಳ್ಳೆ ಮಾತು

ಹನುಮಾನ್ ಚಾಲೀಸಾವನ್ನು ಭಕ್ತಿಯಿಂದ ಪಠಿಸುವುದರಿಂದ ಯಾವುದೇ ರೀತಿಯ ಭೂತ ಪ್ರೇತಗಳಾಗಲಿ ಅಥವಾ ಮನಸ್ಸಿನಲ್ಲಿರುವ ಅಜ್ಞಾತ ಭಯ, ನಕಾರಾತ್ಮಕ ಆಲೋಚನೆಗಳು ಮತ್ತು ದುಸ್ವಪ್ನಗಳು ದೂರವಾಗುತ್ತವೆ.

ಜೋ ಯಹ ಪಢೈ ಹನುಮಾನ ಚಾಲೀಸಾ |

ಹೋಯ ಸಿದ್ಧಿ ಸಾಖೀ ಗೌರೀಸಾ ||

ಅರ್ಥ: ಯಾರು ಈ ಹನುಮಾನ್ ಚಾಲೀಸಾವನ್ನು ಭಕ್ತಿಯಿಂದ ಪಠಿಸುತ್ತಾರೋ, ಅವರಿಗೆ ಖಂಡಿತವಾಗಿಯೂ ಸಿದ್ಧಿ ದೊರೆಯುತ್ತದೆ. ಇದಕ್ಕೆ ಸಾಕ್ಷಾತ್ ಕಾಶೀ ವಿಶ್ವನಾಥನೇ ಸಾಕ್ಷಿ ಎಂದು ಕೊನೆಯಲ್ಲಿ ಆಶೀರ್ವದಿಸುತ್ತಾರೆ ತುಳಸಿದಾಸರು.

ಇದನ್ನೂ ಓದಿ: Roopa Gururaj Column: ತಪ್ಪಿತಸ್ಥ ಅಧಿಕಾರಿಯನ್ನು ಆದಿತ್ಯಾ ಬಿರ್ಲಾ ನಡೆಸಿಕೊಂಡ ರೀತಿ

ಹನುಮಾನ್ ಚಾಲೀಸಾವನ್ನು ಭಕ್ತಿಯಿಂದ ಪಠಿಸುವುದರಿಂದ ಮನಸ್ಸಿನಲ್ಲಿರುವ ಭಯ, ಆತಂಕ ಮತ್ತು ನಕಾರಾತ್ಮಕ ಆಲೋಚನೆಗಳು ದೂರವಾಗಿ, ಹೊಸ ಚೈತನ್ಯ ಹಾಗೂ ಆತ್ಮವಿಶ್ವಾಸ ಮೂಡುತ್ತದೆ. ಹನುಮಂತನು ಬುದ್ಧಿ, ಶಕ್ತಿ ಮತ್ತು ಧೈರ್ಯದ ಸಂಕೇತ ವಾಗಿರುವುದರಿಂದ, ಚಾಲೀಸಾದ ಪಠಣವು ಜೀವನದ ಕಷ್ಟಕಾಲದಲ್ಲಿ ಮನೋಬಲವನ್ನು ಹೆಚ್ಚಿಸಿ ಅಡೆತಡೆಗಳನ್ನು ನಿವಾರಿಸಲು ಸಹಕರಿಸುತ್ತದೆ.

ಅಲ್ಲದೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ದೋಷದಂತಹ ಗ್ರಹ ದೋಷಗಳ ಪ್ರಭಾವ ವನ್ನು ತಗ್ಗಿಸಲು ಮತ್ತು ದೈನಂದಿನ ಜೀವನದಲ್ಲಿ ಏಕಾಗ್ರತೆ ಹಾಗೂ ಶಿಸ್ತನ್ನು ಮೈಗೂಡಿಸಿ ಕೊಳ್ಳಲು ಇದು ಅತ್ಯಂತ ಪ್ರಭಾವಶಾಲಿ ಸ್ತೋತ್ರ. ಸಕಾರಾತ್ಮಕ ಶಕ್ತಿಯನ್ನು ವೃದ್ಧಿಸುವ ಈ ಪಠಣವು ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿಯನ್ನು ನೀಡುತ್ತದೆ. ಜೈ ಹನುಮಾನ್..