#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Dr Vijay Darda Column: ಗಾಜಾಪಟ್ಟಿಯಲ್ಲಿ ಟ್ರಂಪ್‌ ಟವರ್ಸ್‌ ನಿರ್ಮಾಣ ?

‘ಸರಿಯಾಗಿ ಅಭಿವೃದ್ಧಿಪಡಿಸಿದರೆ ಗಾಜಾ ಕರಾವಳಿ ಒಂದು ಅಮೂಲ್ಯ ಪ್ರವಾಸಿ ತಾಣವಾಗಲಿದೆ. ಅದು ಮೊನಾಕೋಗಿಂತ ಸುಂದರ ಹಾಗೂ ಶ್ರೀಮಂತ ಸ್ಥಳ’ ಎಂದು ಕುಶ್ನರ್ ಹೇಳಿದರು. ಈ ಎರಡೂ ಹೇಳಿಕೆಗಳನ್ನು ಕನೆಕ್ಟ್ ಮಾಡಿ ನೋಡಿದರೆ ಸಹಜವಾಗಿಯೇ ಒಂದು ಪ್ರಶ್ನೆ ಮೂಡುತ್ತದೆ. ಗಾಜಾದಲ್ಲೂ ಟ್ರಂಪ್ ಟವರ್ಸ್ ನಿರ್ಮಾಣವಾಗಲಿದೆಯೇ? ಡೊನಾಲ್ಡ್ ಟ್ರಂಪ್ ಒಬ್ಬ ರಿಯಲ್ ಎಸ್ಟೇಟ್ ಉದ್ಯಮಿ

Dr Vijay Darda Column: ಗಾಜಾಪಟ್ಟಿಯಲ್ಲಿ ಟ್ರಂಪ್‌ ಟವರ್ಸ್‌ ನಿರ್ಮಾಣ ?

ಹಿರಿಯ ಪತ್ರಕರ್ತ ಡಾ.ವಿಜಯ್‌ ದರಡಾ

Profile Ashok Nayak Feb 13, 2025 7:28 AM

ಸಂಗತ

ವಿಜಯ್‌ ದರಡಾ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಿನಕ್ಕೊಂದು ಅಚ್ಚರಿ ನೀಡುತ್ತಿದ್ದಾರೆ. ಗಾಜಾಪಟ್ಟಿ ಕುರಿತು ಅವರ ಹಾಗೂ ಶ್ವೇತಭವನದ ಮಾಜಿ ಸಲಹೆಗಾರ ಮತ್ತು ಟ್ರಂಪ್ ಅಳಿಯ ಜೇರ‍್ಡ್ ಕುಶ್ನರ್ ಅವರ ಇತ್ತೀಚಿನ ಎರಡು ಹೇಳಿಕೆಗಳನ್ನು ಗಮನಿಸಿ. ಗಾಜಾವನ್ನು ಸಂಪೂರ್ಣ ನಿರ್ನಾಮ ಮಾಡಿ ಹೊಸ ತಾಗಿ ಕಟ್ಟಬೇಕು ಎಂದು ಟ್ರಂಪ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಅದರ ಬೆನ್ನಲ್ಲೇ, ‘ಗಾಜಾವನ್ನು ವಶಪಡಿಸಿಕೊಂಡು ಮಧ್ಯಪ್ರಾಚ್ಯದ ರಿವಿಯೆರಾ ಮಾಡಲು ಅಮೆ ರಿಕ ಸಿದ್ಧವಿದೆ’ ಎಂದೂ ಹೇಳಿದರು. ರಿವಿಯೆರಾ ಎಂಬುದು ಇಟಾಲಿಯನ್ ಪದ. ಬೀಚ್ ಅಥವಾ ಸಮುದ್ರದ ದಂಡೆ ಎಂದು ಅದರರ್ಥ.

ಸಾಮಾನ್ಯವಾಗಿ ಮೋಜಿನ ತಾಣ ಅಥವಾ ಐಷಾ ರಾಮಿ ಬೀಚ್ ಬಗ್ಗೆ ಹೇಳುವಾಗ ಈ ಪದ ಬಳಸ ಲಾಗುತ್ತದೆ. ಪ್ರವಾಸೋದ್ಯಮಕ್ಕೂ ಈ ಪದಕ್ಕೂ ಬಹಳ ನಂಟು. ಫ್ರೆಂಚ್ ರಿವಿಯೆರಾ ಹಾಗೂ ಇಟಾಲಿಯನ್ ರಿವಿಯೆರಾಗಳು ಜಗತ್ತಿನ ಅತ್ಯಂತ ಪ್ರಸಿದ್ಧ ಐಷಾರಾಮಿ ಪ್ರವಾಸಿ ತಾಣಗಳು. ಟ್ರಂಪ್ ಇಂತಹ ದ್ದೊಂದು ಹೇಳಿಕೆ ನೀಡಿ ಜಗತ್ತನ್ನು ಅಚ್ಚರಿಗೆ ತಳ್ಳಿದ ಬೆನ್ನಲ್ಲೇ ಅವರ ಅಳಿಯ ಕೂಡ ಗಾಜಾದ ಬಗ್ಗೆ ಮಾತನಾಡಿದರು.

ಇದನ್ನೂ ಓದಿ: Dr Vijay Darda Column: ದೇವ ಭಾವು ವಿಶ್ವಾಸಾರ್ಹವಾಗಿ ಬಂಡವಾಳ ಬೇಟೆಯ ಗರಿ !

‘ಸರಿಯಾಗಿ ಅಭಿವೃದ್ಧಿಪಡಿಸಿದರೆ ಗಾಜಾ ಕರಾವಳಿ ಒಂದು ಅಮೂಲ್ಯ ಪ್ರವಾಸಿ ತಾಣವಾಗಲಿದೆ. ಅದು ಮೊನಾಕೋಗಿಂತ ಸುಂದರ ಹಾಗೂ ಶ್ರೀಮಂತ ಸ್ಥಳ’ ಎಂದು ಕುಶ್ನರ್ ಹೇಳಿದರು. ಈ ಎರಡೂ ಹೇಳಿಕೆಗಳನ್ನು ಕನೆಕ್ಟ್ ಮಾಡಿ ನೋಡಿದರೆ ಸಹಜವಾಗಿಯೇ ಒಂದು ಪ್ರಶ್ನೆ ಮೂಡುತ್ತದೆ. ಗಾಜಾದಲ್ಲೂ ಟ್ರಂಪ್ ಟವರ್ಸ್ ನಿರ್ಮಾಣವಾಗಲಿದೆಯೇ? ಡೊನಾಲ್ಡ್ ಟ್ರಂಪ್ ಒಬ್ಬ ರಿಯಲ್ ಎಸ್ಟೇಟ್ ಉದ್ಯಮಿ.

ಜಗತ್ತಿನಾದ್ಯಂತ ಅವರ ಐಷಾರಾಮಿ ಟ್ರಂಪ್ ಟವರ್ ನಿರ್ಮಾಣಗೊಂಡಿವೆ. ಅಲ್ಲಿ ಸಾವಿರಾರು ಕೋಟಿ ರುಪಾಯಿ ವ್ಯವಹಾರ ನಡೆಯುತ್ತಿದೆ. ಭಾರತದಲ್ಲೂ ಟ್ರಂಪ್ ಟವರ್ಗಳಿವೆ. ಆದರೆ, ನಿಜಕ್ಕೂ ಗಾಜಾವನ್ನು ಅಮೆರಿಕ ವಶಪಡಿಸಿಕೊಳ್ಳಲು ಸಾಧ್ಯವೇ? ಕಾನೂನಿನ ಪ್ರಕಾರ ನೋಡುವುದಾದರೆ ಖಂಡಿತ ಸಾಧ್ಯವಿಲ್ಲ.

ಆದರೆ ಅಮೆರಿಕ ಯಾವತ್ತೂ ಅಂತಾರಾಷ್ಟ್ರೀಯ ಕಾನೂನುಗಳಿಗೆ ಗೌರವ ನೀಡಿದೆಯೇ? ಅದಕ್ಕಿಂತ ಮುಖ್ಯವಾಗಿ, ಜಗತ್ತಿನಲ್ಲಿ ಅಮೆರಿಕವನ್ನು ತಡೆಯುವವರು ಯಾರಿದ್ದಾರೆ? ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡುವವರೆಗೆ ಗಾಜಾ ವಿಷಯದಲ್ಲಿ ಅಮೆರಿಕದ ಪ್ಲಾನ್ ಏನು ಎಂಬುದರ ಸುಳಿವು ಕೂಡ ಜಗತ್ತಿಗೆ ಇರಲಿಲ್ಲ.

ಇದನ್ನೂ ಓದಿ: IND-W vs WI-W: ನಾಳೆ ಭಾರತ-ವಿಂಡೀಸ್‌ ಮೊದಲ ಮಹಿಳಾ ಟಿ20

ನೆತನ್ಯಾಹು ಅಮೆರಿಕಕ್ಕೆ ಹೋಗಿ ಟ್ರಂಪ್ ಜತೆ ಮಾತುಕತೆ ನಡೆಸಿದರು. ಬಳಿಕ ಡೊನಾಲ್ಡ್ ಟ್ರಂಪ್ ಗಾಜಾವನ್ನು ವಶಪಡಿಸಿಕೊಳ್ಳುವ ಆಘಾತಕಾರಿ ಹೇಳಿಕೆ ನೀಡಿದರು. ನಿರಾಶ್ರಿತ ಪ್ಯಾಲೆಸ್ತೀನಿ ಯನ್ನರಿಗೆ ಬೇರೆಲ್ಲೂ ಜಾಗವಿಲ್ಲ ಎಂಬ ಕಾರಣಕ್ಕಷ್ಟೇ ಅವರು ಗಾಜಾಕ್ಕೆ ಮರಳಲು ಬಯಸುತ್ತಾರೆ, ಅವರಿಗೆ ಬದುಕಲು ಒಳ್ಳೆಯ ಜಾಗ ಸಿಕ್ಕರೆ ಗಾಜಾಕ್ಕೆ ಹೋಗುವುದಿಲ್ಲ.

ಏಕೆಂದರೆ ಗಾಜಾದಲ್ಲಿ ಈಗ ಏನೂ ಉಳಿದಿಲ್ಲ. ಅದು ಸರ್ವನಾಶವಾಗಿದೆ ಎಂದು ಟ್ರಂಪ್ ಹೇಳಿದರು. ಹೀಗಾಗಿ ಗಾಜಾದಲ್ಲಿದ್ದ ಪ್ಯಾಲೆಸ್ತೀನಿಯನ್ನರಿಗೆ ಶಾಂತಿಯುತವಾಗಿ ಬದುಕು ಸಾಗಿಸಲು ಜಗತ್ತಿನಲ್ಲಿ ಎಲ್ಲಾದರೂ ಒಂದು ಕಡೆ ಜಾಗ ಮಾಡಿಕೊಡಬೇಕಿದೆ ಎಂಬುದು ಅವರ ಅಭಿಪ್ರಾಯ. ನಾವು ಗಾಜಾವನ್ನು ವಶಪಡಿಸಿಕೊಂಡ ಮೇಲೆ ಅಲ್ಲಿರುವ ಜೀವಂತ ಬಾಂಬ್ ಗಳನ್ನು ನಿಷ್ಕ್ರೀಯ ಗೊಳಿಸುತ್ತೇವೆ.

ಇಡೀ ಪ್ರದೇಶವನ್ನು ಮರುನಿರ್ಮಾಣ ಮಾಡುತ್ತೇವೆ. ಅಲ್ಲಿ ಉದ್ಯೋಗಗಳನ್ನು ಸೃಷ್ಟಿಸುತ್ತೇವೆ. ಇಡೀ ಮಧ್ಯಪ್ರಾಚ್ಯ ಹೆಮ್ಮೆ ಪಡುವಂತಹ ತಾಣವನ್ನು ಅಲ್ಲಿ ಸೃಷ್ಟಿ ಮಾಡುತ್ತೇವೆ ಎಂದೂ ಟ್ರಂಪ್ ಹೇಳಿದರು. ಜೋರ್ಡನ್, ಈಜಿಪ್ಟ್ ಹಾಗೂ ಇನ್ನಿತರ ಅರಬ್ ದೇಶಗಳು ನಿರಾಶ್ರಿತ ಪ್ಯಾಲೆಸ್ತೀನಿ ಯನ್ನರಿಗೆ ಆಶ್ರಯ ನೀಡಬೇಕು ಎಂದು ಕೂಡ ಕರೆ ನೀಡಿದರು.

ಇದನ್ನೂ ಓದಿ: IND vs ENG: ರೋಹಿತ್‌,ಕೊಹ್ಲಿಯಿಂದ ಸಾಧ್ಯವಾಗದ ಅಪರೂಪದ ದಾಖಲೆ ಬರೆದ ಶುಭಮನ್‌ ಗಿಲ್‌!

ಇದೆಲ್ಲ ನಿಜಕ್ಕೂ ಸಾಧ್ಯವೆ? ಆ ದೇಶಗಳು ಏಕೆ ನಿರಾಶ್ರಿತ ಪ್ಯಾಲೆಸ್ತೀನಿಗಳಿಗೆ ಆಶ್ರಯ ನೀಡುತ್ತವೆ ಯೇ? ಎಲ್ಲಕ್ಕಿಂತ ಮುಖ್ಯವಾಗಿ, ಗಾಜಾದ ಜನರು ಏಕೆ ತಾಯ್ನೆಲ ತೊರೆದು ಬೇರೆ ಕಡೆ ಹೋಗು ತ್ತಾರೆ? ಗಾಜಾ ಅವರ ಮನೆ. ಹೀಗಿರುವಾಗ ಟ್ರಂಪ್ ಏಕೆ ಅವರನ್ನು ಮನೆಯಿಂದ ಹೊರಹಾಕುವ ಬಗ್ಗೆ ಮಾತನಾಡುತ್ತಿದ್ದಾರೆ? ನಿಜವಾಗಿಯೂ ಅವರಿಗೆ ಗಾಜಾದ ಪ್ಯಾಲೆಸ್ತೀನಿಯನ್ನರ ಬಗ್ಗೆ ಕಾಳಜಿ ಯಿದ್ದರೆ ಆ ಪ್ರದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡಿ, ಗಾಜಾದ ಜನರಿಗೆ ತಮ್ಮ ನೆಲದಲ್ಲೇ ಸಹಜ ಜೀವನ ಸಾಗಿಸುವ ಹಕ್ಕು ಕೊಡಿಸಲು ಯತ್ನಿಸಬೇಕು.

ಆದರೆ, ಗಾಜಾದ ವಿಷಯದಲ್ಲಿ ಅಮೆರಿಕದ ಕಳಕಳಿಯು ಮಾನವೀಯ ಕಳಕಳಿಯನ್ನೂ ಮೀರಿದ ಹಿತಾಸಕ್ತಿಯಂತೆ ತೋರುತ್ತಿದೆ. ಗಾಜಾದ ಮೇಲೆ ಅಮೆರಿಕ ಹಿಡಿತ ಸಾಧಿಸಿದರೆ ಇರಾನ್, ಚೀನಾ ಹಾಗೂ ರಷ್ಯಾದ ವಿರುದ್ಧ ವ್ಯೂಹಾತ್ಮಕ ಮಿಲಿಟರಿ ನೆಲೆ ಸ್ಥಾಪಿಸಲು ಅದು ಹೇಳಿ ಮಾಡಿಸಿದ ಜಾಗವಾಗುತ್ತದೆ. ಅಲ್ಲಿ ಅಮೆರಿಕದ ಸೇನೆಯನ್ನು ನಿಯೋಜಿಸುವುದು ಟ್ರಂಪ್ ಅವರ ನಿಜವಾದ ಉದ್ದೇಶ.

ಆಗ ಇಸ್ರೇಲ್ ಮೇಲೂ ಹತ್ತಿರದಿಂದ ಕಣ್ಣಿಡಬಹುದು, ಜತೆಗೆ ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬಹುದು. ಟ್ರಂಪ್ ಏನು ಮಾಡಲು ಹೊರಟಿದ್ದಾರೆ ಎಂಬು ದನ್ನು ಅರ್ಥ ಮಾಡಿಕೊಳ್ಳಲು ಆಗದಷ್ಟು ಜಗತ್ತಿಗೆ ಅಂಧತ್ವ ಬಂದಿಲ್ಲ. ಹೀಗಾಗಿಯೇ ಅವರ ಬಗ್ಗೆ ಮಧ್ಯಪ್ರಾಚ್ಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಸೌದಿ ಅರೇಬಿಯಾ, ಯುಎಇ, ಈಜಿಪ್ಟ್, ಪ್ಯಾಲೆಸ್ತೀನಿ ಅಽಕಾರಿಗಳು, ಕತಾರ್ ಹಾಗೂ ಅರಬ್ ನಾಯಕರು ಜಂಟಿ ಹೇಳಿಕೆ ಬಿಡುಗಡೆ ಮಾಡಿ ಟ್ರಂಪ್‌ರ ಯೋಜನೆಯನ್ನು ಸಾರಾಸಗಟಾಗಿ ವಿರೋಧಿಸಿದ್ದಾರೆ.

ಇದನ್ನೂ ಓದಿ: Thimmanna Bhagwat Column: ಉಯಿಲಿನ ಹುಯಿಲು: ಶಿವನ ಪಾದ ಸೇರಿದವರನ್ನು ಸಾಕ್ಷ್ಯಕ್ಕೆ ಕರೆಯಲಾಗದು !

ಎರಡು ದೇಶಗಳ ಸಿದ್ಧಾಂತವನ್ನು ಸಂಪೂರ್ಣ ಹೊಸಕಿಹಾಕುವುದೇ ಟ್ರಂಪ್ ಅವರ ಅಂತಿಮ ಗುರಿ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಅದನ್ನು ಸಾಧಿಸಲು ಟ್ರಂಪ್ ತಮ್ಮ ದೇಶದ ಬಲಾಢ್ಯ ಮಿಲಿಟರಿಯನ್ನು ಬಳಕೆ ಮಾಡುತ್ತಾರಾ ಎಂಬುದೇ ಈಗಿರುವ ಪ್ರಶ್ನೆ. ಇದನ್ನು ಒಬ್ಬ ಪತ್ರಕರ್ತ ನೇರವಾಗಿಯೇ ಕೇಳಿದಾಗ ಟ್ರಂಪ್ ಹೇಳಿದ್ದೇನು ಗೊತ್ತಾ? ‘ಅದಕ್ಕೂ ಅಮೆರಿಕ ಹಿಂಜರಿಯುವುದಿಲ್ಲ!

ಜಗತ್ತಿನಲ್ಲಿ ಎಲ್ಲೂ ಯುದ್ಧ ನಡೆಯಬಾರದು ಎಂದು ಅಮೆರಿಕ ಬಯಸುತ್ತದೆ’ ಎಂದು ಟ್ರಂಪ್ ಹೇಳುತ್ತಾರೆ. ಆದರೆ ಇತಿಹಾಸವನ್ನು ನೋಡಿದರೆ, ತನ್ನ ಗುರಿ ಸಾಧಿಸಲು ಅಮೆರಿಕ ಯಾವ ಹಂತಕ್ಕಾ ದರೂ ಹೋಗುತ್ತದೆ. ಟ್ರಂಪ್ ಕೂಡ ತಾನು ಅಂದುಕೊಂಡಿದ್ದನ್ನು ಮಾಡಿ ಮುಗಿಸಲು ಏನು ಬೇಕಾದರೂ ಮಾಡುತ್ತಾರೆ.

ಹೇಳಿಕೇಳಿ ಗಾಜಾಪಟ್ಟಿ ಕೇವಲ 45 ಕಿ.ಮೀ. ಉದ್ದದ, 6 ಕಿ.ಮೀ.ಯಿಂದ 10 ಕಿ.ಮೀ. ಅಗಲದ ಸಣ್ಣ ಜಾಗ. ಅದರ ಮೂರು ಕಡೆ ಇಸ್ರೇಲ್‌ನ ನಿಯಂತ್ರಣವಿದೆ. ಆ ಜಾಗದ ವ್ಯೂಹಾತ್ಮಕ ಪ್ರಾಮುಖ್ಯತೆ ಯನ್ನು ಟ್ರಂಪ್ ಅರ್ಥ ಮಾಡಿಕೊಂಡಿದ್ದಾರೆ. ಆದ್ದರಿಂದಲೇ ಗಾಜಾವನ್ನು ಅಮೆರಿಕದ ಹಿಡಿತಕ್ಕೆ ತೆಗೆದುಕೊಳ್ಳುವ ಬಗ್ಗೆ ಮಾತನಾಡುತ್ತಿದ್ದಾರೆ. ಅದನ್ನೊಂದು ಫ್ಯಾಂಟಸಿಯ ರೀತಿ ಯಾರೂ ಕಡೆಗಣಿಸಲು ಸಾಧ್ಯವಿಲ್ಲ. ಕಡೆಗಣಿಸಿದರೆ ಅಪಾಯ ಕಾದಿದೆ.

ಟ್ರಂಪ್ ಮತ್ತು ಇಸ್ರೇಲ್ ಒಂದಾಗಿ ಗಾಜಾದಲ್ಲಿ ಸೇನೆ ನಿಯೋಜಿಸಲು ನಿರ್ಧರಿಸುತ್ತಾರೆ ಎಂದು ಊಹಿಸಿಕೊಳ್ಳಿ. ಮುಂದೆ ಏನಾಗುತ್ತದೆ? ದೊಡ್ಡ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗುತ್ತದೆ. ಏಕೆಂದರೆ ಅರಬ್ ರಾಷ್ಟ್ರಗಳು ಇಂತಹ ಪಾರುಪತ್ಯವನ್ನು ಖಂಡಿತ ಸಹಿಸುವುದಿಲ್ಲ. ಆದರೆ ಅವು ಅಮೆರಿಕದ ಜೊತೆಗೆ ಸಂಘರ್ಷಕ್ಕೆ ಇಳಿಯುತ್ತವೆಯೇ? ಅಮೆರಿಕಕ್ಕೆ ಸವಾಲೆಸೆಯುವ ತಾಕತ್ತು ಯಾವ ದೇಶಕ್ಕಿದೆ? ಯಾವ ದೇಶ ಈ ಹೋರಾಟದ ನೇತೃತ್ವ ವಹಿಸಿಕೊಳ್ಳುತ್ತದೆ? ಅಂತಹದ್ದೊಂದು ಸಂಘರ್ಷದಲ್ಲಿ ಸೌದಿ ಅರೇಬಿಯಾದ ಪಾತ್ರ ಏನಿರುತ್ತದೆ? ಏಕೆಂದರೆ, ಅಮೆರಿಕ ಮತ್ತು ಸೌದಿ ನಡುವೆ ಸುದೀರ್ಘವಾದ ಸ್ನೇಹ ಸಂಬಂಧವಿದೆ.

ಟ್ರಂಪ್ ಯೋಜನೆ ಪ್ರಾದೇಶಿಕ ಸ್ಥಿರತೆಗೆ ಅಪಾಯ ತಂದೊಡ್ಡಲಿದೆ ಎಂದು ಈಗಾಗಲೇ ಸೌದಿ ಅರೇಬಿಯಾ ಹೇಳಿದೆ. ಇನ್ನು, ರಷ್ಯಾ ಮತ್ತು ಚೀನಾ ಏನು ಮಾಡುತ್ತವೆ? ಮಧ್ಯಪ್ರಾಚ್ಯದಲ್ಲಿ ಸಾಕಷ್ಟು ಪ್ರಭಾವ ಹೊಂದಿರುವ ಹಮಾಸ್ ಮತ್ತು ಹೆಜ್ಬುಲ್ಲಾ ಗುಂಪುಗಳ ಜತೆಗೆ ಕೆಲವು ದೇಶಗಳೂ ಕೈಜೋಡಿಸಿ ಅಮೆರಿಕದ ವಿರುದ್ಧ ಯುದ್ಧ ಮಾಡುತ್ತವೆಯೇ? ಮಧ್ಯಪ್ರಾಚ್ಯದಲ್ಲಿ ಯುದ್ಧವೇ ನಾದರೂ ಆರಂಭವಾದರೆ ಜಗತ್ತಿನ ಮೇಲೆ ಅದರ ಪರಿಣಾಮ ಏನು? ಎಷ್ಟೆಲ್ಲಾ ಪ್ರಶ್ನೆಗಳಿವೆ.

ಆದರೆ ಟ್ರಂಪ್ ಇಂತಹ ಯಾವ ಪ್ರಶ್ನೆಗಳ ಬಗ್ಗೆಯೂ ತಲೆಕೆಡಿಸಿಕೊಳ್ಳುವುದಿಲ್ಲ. ಟ್ರಂಪ್ ಯೋಚಿಸು ವುದು ಒಂದೇ ವಿಷಯದ ಬಗ್ಗೆ. ಅವರಿಗೆ ಅಮೆರಿಕ ಮತ್ತೆ ಗ್ರೇಟ್ ಆಗಬೇಕು. ಹೀಗಾಗಿ ಅವರು ಹೋದಲ್ಲಿ ಬಂದಲ್ಲಿ ‘ಅಮೆರಿಕ ಫಸ್ಟ್’ ಎನ್ನುತ್ತಿದ್ದಾರೆ. ಅದೇ ಅವರ ಏಕೈಕ ಅಜೆಂಡಾ. ಹಾಗಂತ ಮೇಲ್ನೋಟಕ್ಕೆ ಕಾಣಿಸುತ್ತಿದೆ. ಆದರೆ ಅದರ ಹಿಂದೆ ಟ್ರಂಪ್‌ಗೆ ತನ್ನ ಉದ್ಯಮ ಸಾಮ್ರಾಜ್ಯವನ್ನು ವಿಸ್ತರಿಸುವ, ಜಗತ್ತನ್ನು ಆಳುವ, ವೈಯಕ್ತಿಕವಾಗಿ ತಾನು ಇನ್ನಷ್ಟು ಶ್ರೀಮಂತನೂ, ಪ್ರಭಾವಿಯೂ ಆಗುವ ಉದ್ದೇಶಗಳಿವೆ.

ಹೀಗಾಗಿ ಗಾಜಾ ವಿಷಯದಲ್ಲಿ ಅಮೆರಿಕ ಕೈಗೊಳ್ಳುವ ನಿರ್ಧಾರದ ಹಿಂದೆ ಅಮೆರಿಕ ಮತ್ತು ಟ್ರಂಪ್ ಅವರ ಹಿತಾಸಕ್ತಿಯೇ ಅಡಗಿರುತ್ತದೆಯೇ ಹೊರತು ಅದರಿಂದ ಜಗತ್ತಿನ ಮೇಲಾಗುವ ಪರಿಣಾಮಗಳ ಬಗ್ಗೆ ಟ್ರಂಪ್ ತಲೆಕೆಡಿಸಿಕೊಳ್ಳುವುದಿಲ್ಲ. ಅಮೆರಿಕ ಇರುವುದೇ ಹಾಗೆ. ಅದು ಇಡೀ ಜಗತ್ತು ಸುಖ ವಾಗಿರಬೇಕು ಎಂದು ಬಾಯ್ಮಾತಿನಲ್ಲಿ ಹೇಳುತ್ತದೆ.

ಆದರೆ ತೆರೆಯ ಮರೆಯಲ್ಲಿ ಸಾಕಷ್ಟು ಕಿತಾಪತಿ ಮಾಡುತ್ತಿರುತ್ತದೆ. ಜಾಗತಿಕ ವಿಷಯಗಳಲ್ಲಿ ಅಮೆರಿಕ ಕೈಗೊಳ್ಳುವ ಪ್ರತಿಯೊಂದು ನಿರ್ಧಾರದ ಹಿಂದೆಯೂ ಅಮೆರಿಕದ ಆರ್ಥಿಕತೆಗೆ ನಿರಂತರ ವಾಗಿ ಹಣ ಹರಿದು ಬರುತ್ತಿರಬೇಕು ಎಂಬ ಉದ್ದೇಶವೇ ಇದ್ದಿರುತ್ತದೆ.

ಮುಗಿಸುವ ಮುನ್ನ...

ಮಿಸ್ಟರ್ ಡೊನಾಲ್ಡ್ ಟ್ರಂಪ್, ನೀವು ವಲಸಿಗರನ್ನು ಅವರವರ ದೇಶಕ್ಕೆ ಗಡಿಪಾರು ಮಾಡುತ್ತಿದ್ದೀರಿ. ಅಮೆರಿಕದಲ್ಲಿರುವ ವಲಸಿಗರ ಕೈಗೆ ಕೋಳ ಹಾಕಿ, ಕಾಲಿಗೆ ಸರಪಳಿ ಬಿಗಿದು ಮಿಲಿಟರಿ ವಿಮಾನಕ್ಕೆ ಹತ್ತಿಸಿ ಕಳಿಸುತ್ತಿದ್ದೀರಿ. ನಿಮ್ಮ ಬಳಿ ಅಧಿಕಾರವಿದೆ ಎಂದು ರಾಜಾರೋಷವಾಗಿ ಇದನ್ನೆಲ್ಲ ಮಾಡು ತ್ತಿದ್ದೀರಿ. ಜಗತ್ತು ನೋಡುತ್ತಿದೆ. ನಿಮ್ಮ ಕೆಲಸದಿಂದ ಜಗತ್ತಿಗೆ ಘಾಸಿಯಾಗಿದೆ.

ಅಮೆರಿಕದ ಪ್ರಜೆಗಳನ್ನು ಬೇರೆ ದೇಶಗಳು ಕೂಡ ಹೀಗೆಯೇ ನಡೆಸಿಕೊಂಡರೆ ಏನಾಗುತ್ತದೆ ಎಂಬು ದನ್ನು ಯೋಚಿಸಿದ್ದೀರಾ? ಹಾಗೆ ಮಾಡಿದರೆ ನಿಮಗೆ ನೋವಾಗುವುದಿಲ್ಲವೇ? ಅಮೆರಿಕದ ಘನತೆಗೆ ಧಕ್ಕೆ ಬರುವುದಿಲ್ಲವೇ? ಮಿಸ್ಟರ್ ಟ್ರಂಪ್, ಸ್ವಲ್ಪ ಮಾನವೀಯವಾಗಿ ಯೋಚಿಸಿ. ನಿಜವಾದ ದೊಡ್ಡ ತನ ಇರುವುದು ವಿಶಾಲ ಹೃದಯದಲ್ಲಿ. ಮನುಷ್ಯತ್ವಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ. ನಾವು ಇನ್ನೇನು ತಾನೇ ಹೇಳಲು ಸಾಧ್ಯ!