Hari Paraak Column: ಡಿಕ್ಷನರಿ - ಅರ್ಥಶಾಸ್ತ್ರ
ಕುರಿ, ಕೋತಿ, ಕತ್ತೆಗಳ ನಂತರ ಸಿಂಗ್ ಬಾಬು ಅವರಿಗೆ ಪ್ರೇಕ್ಷಕರ ನಿರೀಕ್ಷೆಯನ್ನು ತಲುಪಲಾಗಿಲ್ಲ. ತಮ್ಮ ಪುತ್ರ ಆದಿತ್ಯ ಅವರೊಂದಿಗೆ ಒಂದಷ್ಟು ಪ್ರಯತ್ನ ಮಾಡಿದರೂ ಅದಾವುದೂ ಕೈ ಹಿಡಿಯಲಿಲ್ಲ. ಜತೆಗೆ ಉಪೇಂದ್ರ ಮತ್ತು ರಮ್ಯಾ ಅವರಿದ್ದ ‘ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್’ ಅನ್ನೋ ಸಿನಿಮಾ ಮುಗಿದಿ ದ್ದರೂ, ಬಿಡುಗಡೆ ಮಾಡಿದ್ರೆ ಲಾಸ್ ಆಗುತ್ತೆ ಅನ್ನೋ ವಿಚಿತ್ರ ಕಾರಣಕ್ಕೆ ಡಬ್ಬಾ ಸೇರಿಕೊಂಡಿದೆ.


ತುಂಟರಗಾಳಿ
ಸಿನಿಗನ್ನಡ
ರಾಜೇಂದ್ರಸಿಂಗ್ ಬಾಬು ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ ಅನ್ನೋ ಮಾತಿಗೆ ದಶಕಗಳ ಹಿಂದೆ ಚಿತ್ರಪ್ರೇಮಿಗಳನ್ನು ರೋಮಾಂಚನಗೊಳಿಸುವ ತಾಕತ್ತು ಇತ್ತು. ಆದರೆ ಈಗ ಅದೇ ಮಾತು ಹೇಳಿದರೆ, ‘ನಿರ್ದೇಶನ ಮಾಡ್ತಾರೆ, ಆದ್ರೆ ನಿಜವಾಗ್ಲೂ ಮಾಡ್ತಾರಾ, ಮಾಡಿದ್ರೆ ಕಂಪ್ಲೀಟ್ ಮಾಡ್ತಾರಾ, ಮಾಡಿದ್ರೆ ರಿಲೀಸ್ ಮಾಡ್ತಾರಾ?’ ಅನ್ನೋ ಪ್ರಶ್ನೆ ಬಂದರೆ ತಪ್ಪಿಲ್ಲ. ಯಾಕಂದ್ರೆ, ಸಿಂಗ್ ಬಾಬು ಅಭಿಮಾನಿಗಳಿಗೆ ಇತ್ತೀಚಿನ ವರ್ಷಗಳಲ್ಲಿ ಖುಷಿಪಡುವ ಅವಕಾಶವನ್ನೇ ಕೊಟ್ಟಿಲ್ಲ.
ಕುರಿ, ಕೋತಿ, ಕತ್ತೆಗಳ ನಂತರ ಸಿಂಗ್ ಬಾಬು ಅವರಿಗೆ ಪ್ರೇಕ್ಷಕರ ನಿರೀಕ್ಷೆಯನ್ನು ತಲುಪಲಾಗಿಲ್ಲ. ತಮ್ಮ ಪುತ್ರ ಆದಿತ್ಯ ಅವರೊಂದಿಗೆ ಒಂದಷ್ಟು ಪ್ರಯತ್ನ ಮಾಡಿದರೂ ಅದಾವುದೂ ಕೈ ಹಿಡಿಯ ಲಿಲ್ಲ. ಜತೆಗೆ ಉಪೇಂದ್ರ ಮತ್ತು ರಮ್ಯಾ ಅವರಿದ್ದ ‘ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್’ ಅನ್ನೋ ಸಿನಿಮಾ ಮುಗಿದಿದ್ದರೂ, ಬಿಡುಗಡೆ ಮಾಡಿದ್ರೆ ಲಾಸ್ ಆಗುತ್ತೆ ಅನ್ನೋ ವಿಚಿತ್ರ ಕಾರಣಕ್ಕೆ ಡಬ್ಬಾ ಸೇರಿಕೊಂಡಿದೆ.
ಜತೆಗೆ ಇತ್ತೀಚಿನ ದಿನಗಳಲ್ಲಿ ಅಂದಿನ ಕಾಲದ ಸಿಂಗ್ ಬಾಬು ಅವರ ನಿರ್ದೇಶನದ ಝಲಕ್ ಸಿನಿ ಪ್ರಿಯರಿಗೆ ಕಾಣಿಸುತ್ತಿಲ್ಲ. ಹಾಗಂತ ಬಾಬು ಡಲ್ ಆಗಿದ್ದಾರೆ ಎಂದರ್ಥ ಅಲ್ಲ. ಆದರೆ ಅವರ ಕಾನ್ಸೆಪ್ಟ್ ಗಳು ಇಂದಿನ ಪೀಳಿಗೆಯ ಚಿತ್ರಗಳಿಗೆ ಮ್ಯಾಚ್ ಆಗುತ್ತಿಲ್ಲ. ಸುನಿಲ್ ಕುಮಾರ್ ದೇಸಾಯಿ ಸೇರಿದಂತೆ ಅನೇಕ ಹಿರಿಯ ನಿರ್ದೇಶಕರು ಎದುರಿಸುತ್ತಿರೋ ಸವಾಲು ಇದು.
ಇದನ್ನೂ ಓದಿ: Hari Paraak Column: ಡಾಟ್ ಬಾಲ್ ಆಡಿ ಧೋನಿ ನಿರ್ಮಿಸಿದ ಮರಗಳ ಕಾಡು: ತಲಕಾಡು
ಇಂಥ ಸಂದರ್ಭದಲ್ಲಿ ಈಗ ಸಿಂಗ್ ಬಾಬು ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ ಅನ್ನೋ ಸುದ್ದಿ ಬಂದಿತ್ತು. ಆದರೆ ಈ ಸುದ್ದಿಗೆ ತೂಕ ಬಂದಿದ್ದು ಸಿನಿಮಾದ ಹೆಸರು ‘ಬಂಧನ 2’ ಅನ್ನೋ ಕಾರಣ ಕ್ಕಾಗಿ. ತಮ್ಮ ಯಶಸ್ವಿ ಚಿತ್ರ ‘ಬಂಧನ’ದ ಮುಂದುವರಿದ ಭಾಗವನ್ನು ಸಿಂಗ್ ಬಾಬು ನಿರ್ದೇಶನ ಮಾಡುತ್ತಿದ್ದಾರೆ ಅನ್ನೋ ಮಾತು ಕೇಳಿ ಎಲ್ಲರೂ ರೋಮಾಂಚಿತರಾಗಿದ್ದರು.
ಆದರೆ ಅದೇ ಸಮಯದಲ್ಲಿ ಈ ಚಿತ್ರದ ನಾಯಕ ನಟ ಆದಿತ್ಯ ಅನ್ನೋ ಮಾತು ಕೇಳಿ ಖುಷಿ ಪಡಬೇಕಾ ಬೇಡ್ವಾ ಅಂತ ಗೊಂದಲದಲ್ಲಿದ್ದರು- ‘ಇಂಥ ಸಿನಿಮಾ ಮಾಸ್ ಇಮೇಜ್ ಇರೋ ಆದಿತ್ಯ ಅವರಿಗೆ ಸೂಟ್ ಆಗುತ್ತಾ?’ ಅಂತ. ಮೂಲಗಳ ಪ್ರಕಾರ ಈ ಚಿತ್ರದಲ್ಲಿ ಸುಹಾಸಿನಿ, ಜೈಜಗದೀಶ್ ಇರುತ್ತಾರೆ ಎನ್ನಲಾಗಿತ್ತು. ಆದರೆ ಈ ಚಿತ್ರದ ಬಗ್ಗೆ ಈಗ ಮಾತೇ ಇಲ್ಲ.
ಚಿತ್ರ ಅನೌನ್ಸ್ ಆಗಿದ್ದನ್ನ ನೋಡಿ ಕೆಲವರು ‘ಸಿಂಗ್ ಬಾಬು ಹೊಸ ಚಿತ್ರ ಬರ್ತಾ ಇದೆ. ಅದೂ ಬಂಧನ ೨’ ಅಂತ ಥ್ರಿಲ್ ಆಗಿದ್ದರೆ, ಇನ್ನು ಕೆಲವರು, ‘ಹೌದಾ, ಮಾಡಿ ರಿಲೀಸ್ ಮಾಡ್ಲಿ, ಆಮೇಲೆ ಮಾತಾಡೋಣ’ ಅನ್ನೋ ವೈರಾಗ್ಯವನ್ನೂ ತೋರಿಸುತ್ತಿದ್ದರು. ಈಗ ಬಾಬು ಅವರು ಸಿನಿಮಾ ಮಾಡೋದನ್ನು ಮರೆತು ಮೊನ್ನೆ ಮೈಸೂರಿನ ಫಿಲ್ಮ್ ಸಿಟಿ ವಿಷಯದಲ್ಲಿ ಕಾಣಿಸಿಕೊಂಡಿದ್ದನ್ನು ನೋಡಿದಾಗ ಇದೆಲ್ಲ ನೆನಪಾಯ್ತು.
ಲೂಸ್ ಟಾಕ್- ಯೋಗಿ ಆದಿತ್ಯನಾಥ್
ನಿಮ್ಮನ್ನ ಸ್ವಾಮಿ ಅಂತ ಕರಿಬೇಕಾ, ಸರ್ ಅಂತ ಕರಿಬೇಕಾ ಅನ್ನೋದೇ ಕನ್ ಫ್ಯೂಷನ್.
- ಮುಖ್ಯಮಂತ್ರಿ ಆಗಿರೋದ್ರಿಂದ ಸರ್ ಅನ್ಬೋದು. ಆದ್ರೆ, ಶಬರಿಮಲೆ ಸೀಸನ್ನಲ್ಲಿ ಮಾತ್ರ, ಸ್ವಾಮಿ ಅಂತ ಕರೆಯಬಹುದು.
ಸರಿ, ನಿಮ್ಮ ಯುಪಿ ದೇಶದ ನಂಬರ್ ಒನ್ ಅಂತ ಎಲ್ಲಾ ಕಡೆ ಜಾಹೀರಾತು ಕೊಡ್ತಾ ಇದ್ದೀರಲ್ಲ, ಇದು ನಿಜ್ವಾಗ್ಲೂ ನಿಜನಾ?
- ನಂಬರ್ ಒನ್ ಅಂತ ಹೇಳಿದ್ದೀವಿ, ಯಾವುದರಲ್ಲಿ, ಯಾವ ಕಡೆಯಿಂದ ಅಂತೆ ಮಾತ್ರ ಕೇಳಬೇಡಿ.
ಆದ್ರೂ, ಯುಪಿಯಲ್ಲಿ ಕ್ರೈಮ್ ರೇಟ್ ಜಾಸ್ತಿ ಇದೆ ಅಂತ ವರದಿಗಳು ಹೇಳ್ತಾವಲ್ಲ?
- ಏನ್ ಮಾಡೋದು ಅಲಹಾಬಾದ್ ಹೆಸರನ್ನು ಪ್ರಯಾಗ್‌ರಾಜ್ ಅಂತ ಬದಲಾವಣೆ ಮಾಡಿದ ಮೇಲೆ, ನಮ್ಮ ಆಡಳಿತ ‘ಪ್ರಯಾಸ್‌ರಾಜ್’ ಆಗಿಬಿಟ್ಟಿದೆ.
ಅದ್ಸರಿ, ಯುಪಿಯಲ್ಲಿ ಏನ್ ತೊಂದರೆ ಆದ್ರೂ ಅದಕ್ಕೆ ಹಿಂದಿನ ಸರಕಾರಗಳೇ ಕಾರಣ ಅಂತ ಹೇಳ್ತಾ ಇರ್ತೀರಲ್ಲ?
- ಏನ್ ಮಾಡೋದು, ಹಿಸ್ಟರಿ ಕ್ರಿಯೇಟ್ ಮಾಡೋದು ಕಷ್ಟ, ಅದಕ್ಕೆ ತಿದ್ದುತ್ತಾ ಇದ್ದೀವಿ.
ಸರಿ, ನೀವು ಪೇಪರ್ ಓದ್ತೀರಾ ಅಂತ ಗೊತ್ತು. ಪೇಪರ್‌ಗಳಲ್ಲಿ ನಿಮ್ಮ ಇಷ್ಟದ ಸೆಕ್ಷನ್
ಯಾವುದು?
- ಹೆಸರು ಬದಲಾವಣೆ
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಖೇಮು ಒಂದು ಹುಡುಗೀನ ತುಂಬಾ ಲವ್ ಮಾಡ್ತಾ ಇದ್ದ. ಆದರೆ ಆ ಹುಡುಗಿ ಇವನನ್ನು ಇಷ್ಟಪಡ್ತಾ ಇರಲಿಲ್ಲ. ತುಂಬಾ ಯತ್ನಿಸಿದ ಮೇಲೂ ಹುಡುಗಿ ಖೇಮುವನ್ನು ಮದುವೆ ಆಗಲು ಒಪ್ಪಲಿಲ್ಲ. ಖೇಮುಗೆ ದೊಡ್ಡ ನಿರಾಸೆ ಆಗುವಂತೆ ಅವಳ ಮದುವೆ ಕೂಡ ಫಿಕ್ಸ್ ಆಯ್ತು. ಈಗ ಖೇಮು ತೀರಾ ನಿರಾಸೆಗೊಳಗಾದ. ಸ್ನೇಹಿತ ಸೋಮುವನ್ನು ‘ಎಣ್ಣೆ ಹೊಡಿಬೇಕು ಬಾ’ ಅಂತ ಕರೆದು ತನ್ನ ಮನಸ್ಸಿನ ನೋವನ್ನೆ ತೋಡಿಕೊಂಡ. ಅದಕ್ಕೆ ತುಂಬಾ ಯೋಚಿಸಿದ ಸೋಮು, ‘ನೋಡು, ಒಂದ್ ಕೆಲ್ಸ ಮಾಡು. ಅವಳನ್ನು ಮದ್ವೆ ಆಗ್ತಾ ಇರೋ ಹುಡುಗನ ಹತ್ರ ಹೋಗಿ, ನನಗೆ ಆ ಹುಡುಗಿ ಜತೆ ಅಫರ್ ಇತ್ತು ಅಂತ ಹೇಳು. ಆಗ ಮದುವೆ ಮುರಿದು ಬೀಳತ್ತೆ’ ಅಂದ.
‘ಅವನು ಹೆಂಗ್ ನಂಬ್ತಾನೆ?’ ಅಂತ ಕೇಳಿದ ಖೇಮು. ಅದಕ್ಕೆ ಸೋಮು, ‘ನನ್ನ ಮೈ ಮೇಲೆ ಟೋಟಲ್ 6 ಮಚ್ಚೆ ಇದೆ ಅಂತ ನನ್ ತಂಗಿ ಹತ್ರ ನಿನ್ ಹುಡುಗಿ ಹೇಳಿದ್ಳಂತೆ. ನೀನು ಸುಮ್ನೆ, ಅವಳ ದೇಹದಲ್ಲಿ ಇಂಥ ಕಡೆ ಮಚ್ಚೆ ಇದೆ ಅಂತ ಮದುವೆ ಆಗೋ ಹುಡುಗನಿಗೆ ಹೇಳು. ಮದುವೆ ಮುರಿದು ಬೀಳುತ್ತೆ’ ಅಂತ ಹೇಳಿದ. ಸರಿ ಖೇಮು ಮರುದಿನ ಸೋಮು ಹೇಳಿದ ಪ್ಲ್ಯಾನ್ ವರ್ಕ್‌ಔಟ್ ಮಾಡೋಕೆ ಹೋಗಿ ಸಪ್ಪೆ ಮೋರೆ ಹಾಕ್ಕೊಂಡು ಬಂದ.
ಅವನನ್ನು ನೋಡಿದ ಸೋಮು, ‘ಏನಾಯ್ತೋ?’ ಅಂತ ಕೇಳಿದ. ಅದಕ್ಕೆ ಖೇಮು ಹೇಳಿದ, ‘ಇಲ್ಲಾ ಕಣೋ, ನಮ್ಮ ಪ್ಲ್ಯಾನ್ ವರ್ಕ್‌ಔಟ್ ಆಗ್ಲಿಲ್ಲ. ನಾನು, ನೀನು ಹೇಳಿದ ಐಡಿಯಾ ಪ್ರಕಾರ ಹೇಳಿದ್ದಕ್ಕೆ ಆ ಹುಡುಗ, ಅದಕ್ಕೇ ನಿವಾಗ? ಅಂತ ತುಂಬಾ ಕ್ಯಾಷುವಲ್ ಆಗಿ ಹೇಳಿಬಿಟ್ಟ. ವಾಪಸ್ಸು ಬಂದೆ’. ‘ಸರಿ, ನೀನು ಏನಂತ ಹೇಳಿದೆ?’ ಅಂತ ಸೋಮು ಕೇಳಿದ. ಅದಕ್ಕೆ ಖೇಮುವಿನಿಂದ ಉತ್ತರ ಬಂತು- ‘ನಾನ್ ಒಂದ್ ಮಾತು ಹೇಳ್ತೀನಿ. ಇದಕ್ಕೇನರ್ಥ ಅಂತ ನೀನೇ ಡಿಸೈಡ್ ಮಾಡು. ನೀನು ಮದ್ವೆ ಆಗ್ತಾ ಇರೋ ಹುಡುಗಿಯ ಎಡಗೆನ್ನೆಯ ಮೇಲೆ ಒಂದು ಮಚ್ಚೆ ಇದೆ, ಅಂತ ಹೇಳಿದೆ’.
ಲೈನ್‌ಮ್ಯಾನ್
ಲೈಫಲ್ಲಿ ಏನೂ ಸಾಧನೆ ಮಾಡಿರದ ತಮ್ಮ ಮಕ್ಕಳನ್ನ ಬಾಲಿವುಡ್ ಮಂದಿ ಹೆಂಗೆ ಬಯ್ತಾರೆ?
- ಆ ಹೀರೋನ ನೋಡಿ ಕಲ್ತೊ, ನಿನ್ ವಯಸ್ಸಿಗೆ ಮೂರ್ ಮೂರ್ ಮದ್ವೆ ಆಗಿದ್ದ
ಅವ್ನು ಹಂಗಾದ್ರೆ ಸಲ್ಮಾನ್ ಖಾನ್ ಕಥೆ?
- ಅವ್ನಿಗೆ ಅವ್ನ್ ಅಪ್ಪ ಅಮ್ಮನೇ ಬಯ್ತಾರೆ: ನಿನ್ ಜತೆಗಿದ್ದ ‘ಹುಡಿಗೀರಿಗೆ’ ಮದ್ವೆ ಆಗಿ ಮಕ್ಕಳಾಯ್ತು,
ನಿಂದ್ಯಾವಾಗ್ಲೋ?
ಕಿವಿ ಚುಚ್ಚುವವರ ಕೆಲಸಕ್ಕೆ ಏನಂತಾರೆ?
- ಇಯರ್ ರಿಂಗ್ ಏಯ್ಡ್
ಡಿಕ್ಷನರಿಗೆ ಇನ್ನೊಂದು ಹೆಸರು
- ‘ಅರ್ಥ’ ಶಾಸ್ತ್ರ
ಅಮೆರಿಕಕ್ಕೆ ಸಂಬಂಧಪಟ್ಟ ಸುದ್ದಿ
- ‘ಸ್ಟೇಟ್ಸ್’ ಲೆವೆಲ್ ಸುದ್ದಿ
ಒನ್ ಡೇ ಮ್ಯಾಚಲ್ಲಿ ಸೆಂಚುರಿ ಹೊಡೆದು ಟೆಸ್ಟ್ ಮ್ಯಾಚಲ್ಲಿ ಸೊನ್ನೆಗೆ ಔಟಾಗೋ ಬ್ಯಾಟ್ಸ್ ಮನ್ ನೋಡಿ ಹೇಳೋ ಮಾತು
- ಎವ್ವೆರಿ ಡೇ ಈಸ್ ನಾಟ್ ಒನ್ ಡೇ
‘ಸಿನಿಮಾರಂಗ’ದಲ್ಲಿ ಒಂದು ಸೂಪರ್‌ಹಿಟ್ ಕೊಟ್ಟು ನಂತರದ ಸಿನಿಮಾ ಫ್ಲಾಪ್ ಆದ್ರೆ ಜನ ಏನಂತಾರೆ?
- ಎವ್ವೆರಿ ಡೇ ಈಸ್ ನಾಟ್ ‘ಫ್ರೈಡೇ’
ಕಾಲೇಜಿನಲ್ಲಿ ವಿದ್ಯಾರ್ಥಿಗಳು ಡೆಸ್ಕ್ ಅಥವಾ ಬೆಂಚ್ ಮೇಲೆ ಬರೆಯುವ ಕವಿತೆಗಳು
- ‘ಬೆಂಚ್ ಮಾರ್ಕ್’ ಸಾಹಿತ್ಯ