ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಪ್ಪನ ಹುಟ್ಟುಹಬ್ಬಕ್ಕೆ ಮಗನ ವಿಶೇಷ ಗಿಫ್ಟ್; ಹೊಸ ಸ್ಕೂಟಿ ಕಂಡು ಭಾವುಕರಾದ ತಂದೆ

Viral Video: ಉತ್ತರ ಪ್ರದೇಶದ ಬರೇಲಿಯ ಯುವಕನೊಬ್ಬ ತನ್ನ ತಂದೆಯ ಹುಟ್ಟುಹಬ್ಬದ ದಿನ ಭಾವ ನಾತ್ಮಕ ವಾಗಿ ಖುಷಿ ಪಡಿಸಿದ್ದಾನೆ. ತಂದೆಗೆ ಸ್ಕೂಟಿಯನ್ನು ಗಿಫ್ಟ್ ಆಗಿ ನೀಡುವ ಮೂಲಕ ಈ ಕನಸನ್ನು ನನಸಾಗಿಸಿಕೊಂಡಿದ್ದಾನೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ಈ ಯುವಕ ತನ್ನ ಹೊಸ ಸ್ಕೂಟಿಯ ಕೀಯನ್ನು ತನ್ನ ತಂದೆಗೆ ಹಸ್ತಾಂತರಿಸಿ ವಿಶೇಷ ಹುಟ್ಟುಹಬ್ಬವನ್ನಾಗಿ ಹೇಗೆ ಮಾಡಿಕೊಂಡನೆಂದು ಶೇರ್ ಮಾಡಿಕೊಂಡಿದ್ದಾನೆ.

ತಂದೆಯ ಬರ್ತಡೇಗೆ ಮಗನ ವಿಶೇಷ ಗಿಫ್ಟ್; ಇಲ್ಲಿದೆ‌ ಭಾವನಾತ್ಮಕ ವಿಡಿಯೊ!

ಹೊಸ ಸ್ಕೂಟಿ ಕಂಡು ಭಾವುಕರಾದ ತಂದೆ -

Profile
Pushpa Kumari Jan 29, 2026 11:47 AM

ಲಖನೌ ಜ.29: ಪ್ರತಿಯೊಬ್ಬರಿಗೂ ತಮ್ಮ ಪೋಷಕರನ್ನು ಸಂತೋಷ ಪಡಿಸಬೇಕೆಂಬ ಕನಸು ಇರುತ್ತದೆ. ಟ್ರಿಪ್ ಕರೆದೊಯ್ಯುವುದು, ಹೊಸ ಡ್ರೆಸ್ ಕೊಡಿಸುವುದು ಹೀಗೆ ಸಣ್ಣ ಪುಟ್ಟ ವಿಚಾರದಲ್ಲಿ ಅವರನ್ನು ಸಂತೋಷಪಡಿಸುವ ಅನೇಕ ಮಕ್ಕಳಿದ್ದಾರೆ. ಅಂತೆಯೇ ಉತ್ತರ ಪ್ರದೇಶದ ಬರೇಲಿಯ ಯುವಕನೊಬ್ಬ ತನ್ನ ತಂದೆಯ ಹುಟ್ಟುಹಬ್ಬದ ದಿನ ಭಾವನಾತ್ಮಕವಾಗಿ ಖುಷಿ ಪಡಿಸಿದ್ದಾನೆ. ತಂದೆಗೆ ಸ್ಕೂಟಿಯನ್ನು ಗಿಫ್ಟ್ ಆಗಿ ನೀಡುವ ಮೂಲಕ ಈ ಕನಸನ್ನು ನನಸಾಗಿಸಿಕೊಂಡಿದ್ದಾನೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ (Viral Video) ವೀಡಿಯೊದಲ್ಲಿ, ಈ ಯುವಕ ತನ್ನ ಹೊಸ ಸ್ಕೂಟಿಯ ಕೀಯನ್ನು ತನ್ನ ತಂದೆಗೆ ಹಸ್ತಾಂತರಿಸಿ ವಿಶೇಷ ಹುಟ್ಟುಹಬ್ಬವನ್ನಾಗಿ ಹೇಗೆ ಮಾಡಿಕೊಂಡನೆಂದು ಶೇರ್ ಮಾಡಿಕೊಂಡಿದ್ದಾನೆ.

ತನ್ನ ಹಳೆಯ ಬೈಕ್‌ನಲ್ಲಿ ‌ತಂದೆ ಮನೆಯಿಂದ ಹೊರಡಲು ಸಿದ್ಧವಾಗುತ್ತಿದ್ದಾಗ ಯುವಕ ಹೋಂಡಾ ಸ್ಕೂಟಿಯ ಕೀಯನ್ನು ತನ್ನ ತಂದೆಗೆ ನೀಡಿ ಅಚ್ಚರಿಗೊಳಿಸುವುದರೊಂದಿಗೆ ವೈರಲ್ ಕ್ಲಿಪ್ ಪ್ರಾರಂಭವಾಗುತ್ತದೆ. ಮಗ ಅದೇ ಸಮಯದಲ್ಲಿ ಅವರನ್ನು ತಡೆದು, ಕೈಗೆ ಹೊಸ ಸ್ಕೂಟಿಯ ಕೀಯನ್ನು ನೀಡುತ್ತಾನೆ. ಮೊದಲು ಇದನ್ನು ಗಮನಿಸದ ತಂದೆ, ಎದುರಿಗಿದ್ದ ಹೊಚ್ಚ ಹೊಸ ಹೋಂಡಾ ಸ್ಕೂಟಿಯನ್ನು ನೋಡಿ ಭಾವುಕರಾಗಿದ್ದಾರೆ.

ವಿಡಿಯೋ ನೋಡಿ:

ಹುಟ್ಟುಹಬ್ಬದ ಶುಭಾಶಯಗಳು ಪಾಪಾ ಜಿ, ನನ್ನ ಕಡೆಯಿಂದ ಒಂದು ಸಣ್ಣ ಉಡುಗೊರೆ ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ವೀಡಿಯೊದಲ್ಲಿ ಅವರ ಮುದ್ದಾದ ಸಂವಾದದ ದೃಶ್ಯ ತಂದೆ-ಮಗನ ನಡುವಿನ ಭಾಂದವ್ಯ ಏನೆಂದು ಸ್ಪಷ್ಟವಾಗಿತ್ತು. ತನ್ನ ಮಗ ತನಗಾಗಿ ಇಷ್ಟೊಂದು ದೊಡ್ಡ ಸರ್ಪ್ರೈಸ್ ನೀಡುತ್ತಾನೆ ಎಂದು ಅವರು ಅಂದುಕೊಂಡಿರಲಿಲ್ಲ. ಮಗನ ಈ ಪ್ರೀತಿಗೆ ತಂದೆಯೂ ಭಾವುಕ ವ್ಯಕ್ತ ಪಡಿಸಿದ್ದಾರೆ.

Viral Video: ಗಣಿಗಾರಿಕೆ ವಿರೋಧಿ ಪ್ರತಿಭಟನೆಯಲ್ಲಿ ಮಹಿಳಾ ಕಾನ್‌ಸ್ಟೇಬಲ್ ವಿವಸ್ತ್ರಗೊಳಿಸಿ ಹಲ್ಲೆ! ವಿಡಿಯೋ ವೈರಲ್‌

ತಂದೆ-ಮಗನ ಈ ವೀಡಿಯೊ ಆನ್‌ಲೈನ್‌ನಲ್ಲಿ ಎಲ್ಲರ ಹೃದಯವನ್ನು ತೇವಗೊಳಿಸಿತು. ಮಕ್ಕಳು ತಮ್ಮ ಹೆತ್ತವರನ್ನು ಬಹಳ ಪ್ರೀತಿ ಮತ್ತು ಗೌರವದಿಂದ ಹೇಗೆ ನಡೆಸಿಕೊಳ್ಳಬೇಕೆಂದು ಈ ವಿಡಿಯೊ ಸಾರಿ ಹೇಳುವಂತಿದೆ.ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಬಳಕೆದಾರರೊಬ್ಬರು ನೀವು ನನ್ನನ್ನು ಅಳುವಂತೆ ಮಾಡಿದ್ದೀರಿ ಗೆಳೆಯ ಎಂದು ಬರೆದು ಕೊಂಡಿದ್ದಾರೆ. ಮತ್ತೊಬ್ಬರು ನಿಮ್ಮ ತಂದೆಯ ಆ ನಗು ಅದ್ಭುತವಾಗಿತ್ತು ಎಂದು ಹೇಳಿದ್ದಾರೆ‌. ಇನ್ನೊಬ್ಬರು ಸಹೋದರ, ದೇವರು ನಿನ್ನನ್ನು ಆಶೀರ್ವದಿಸಲಿ.. ನೀನು ಶೀಘ್ರದಲ್ಲೇ ನಿನ್ನ ತಂದೆಗೆ ಕಾರನ್ನು ಉಡುಗೊರೆಯಾಗಿ ನೀಡುತ್ತೀಯ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.