ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಒಂದೇ ಓವರ್‌ನಲ್ಲಿ 28 ರನ್‌ ಬಾರಿಸಿ ರೋಹಿತ್‌ ದಾಖಲೆ ಸರಿಗಟ್ಟಿದ ದುಬೆ

Shivam Dube: ರೋಹಿತ್ ಮತ್ತು ದುಬೆ ಇಬ್ಬರೂ ಟಿ20ಐ ಕ್ರಿಕೆಟ್‌ನಲ್ಲಿ ಭಾರತದ ಪರ ಒಂದೇ ಓವರ್‌ನಲ್ಲಿ 28 ರನ್ ಗಳಿಸಿದ್ದಾರೆ. ಸಂಜು ಸ್ಯಾಮ್ಸನ್ 30 ರನ್‌ಗಳೊಂದಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ, ಯುವರಾಜ್ ಸಿಂಗ್ 36 ರನ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. 2007 ರಲ್ಲಿ ಇಂಗ್ಲೆಂಡ್ ವಿರುದ್ಧ ಆರು ಸಿಕ್ಸರ್‌ಗಳನ್ನು ಬಾರಿಸಿದಾಗ ಯುವರಾಜ್‌ ಈ ಸಾಧನೆ ಮಾಡಿದ್ದರು.

ಒಂದೇ ಓವರ್‌ನಲ್ಲಿ 28 ರನ್‌ ಬಾರಿಸಿ ರೋಹಿತ್‌ ದಾಖಲೆ ಸರಿಗಟ್ಟಿದ ದುಬೆ

Shivam Dube -

Abhilash BC
Abhilash BC Jan 29, 2026 11:21 AM

ವಿಶಾಖಪಟ್ಟಣಂ, ಜ.29: ಬುಧವಾರ ನಡೆದ ನ್ಯೂಜಿಲ್ಯಾಂಡ್‌(India vs New Zealand 4th T20I) ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್‌ ಮೂಲಕ ಅರ್ಧಶತಕ ಬಾರಿಸಿದ ಆಲ್‌ರೌಂಡರ್‌ ಶಿವಂ ದುಬೆ(Shivam Dube) ಅವರು ಟಿ20ಐ ಕ್ರಿಕೆಟ್‌ನಲ್ಲಿ ಒಂದೇ ಓವರ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಅವರ ದಾಖಲೆಯನ್ನು ಸರಿಗಟ್ಟಿದರು.

ರೋಹಿತ್ ಮತ್ತು ದುಬೆ ಇಬ್ಬರೂ ಟಿ20ಐ ಕ್ರಿಕೆಟ್‌ನಲ್ಲಿ ಭಾರತದ ಪರ ಒಂದೇ ಓವರ್‌ನಲ್ಲಿ 28 ರನ್ ಗಳಿಸಿದ್ದಾರೆ. ಸಂಜು ಸ್ಯಾಮ್ಸನ್ 30 ರನ್‌ಗಳೊಂದಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ, ಯುವರಾಜ್ ಸಿಂಗ್ 36 ರನ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. 2007 ರಲ್ಲಿ ಇಂಗ್ಲೆಂಡ್ ವಿರುದ್ಧ ಆರು ಸಿಕ್ಸರ್‌ಗಳನ್ನು ಬಾರಿಸಿದಾಗ ಯುವರಾಜ್‌ ಈ ಸಾಧನೆ ಮಾಡಿದ್ದರು.

ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ದುಬೆ 23 ಎಸೆತಗಳಲ್ಲಿ 65 ರನ್ ಗಳಿಸಿದರು. ತಂಡವನ್ನು ಗೆಲುವಿನ ಹತ್ತಿರಕ್ಕೆ ಕೊಂಡೊಯ್ಯುತ್ತಿದ್ದ ವೇಳೆ ರನೌಟ್‌ ಆಗಿ ವಿಕೆಟ್‌ ಕಳೆದುಕೊಂಡರು.

ಭಾರತ ನಾಲ್ಕನೇ ಟಿ20ಐ ಸೋತ ನಂತರ, ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮಾತನಾಡಿ, "ನಾವು ಉದ್ದೇಶಪೂರ್ವಕವಾಗಿ ಆರು ಬ್ಯಾಟ್ಸ್‌ಮನ್‌ಗಳನ್ನು ಆಡಿಸಿದ್ದೇವೆ. ಐದು ಬೌಲರ್‌ಗಳನ್ನು ಹೊಂದಲು ಮತ್ತು ನಮ್ಮನ್ನು ನಾವೇ ಸವಾಲು ಮಾಡಿಕೊಳ್ಳಲು ಬಯಸಿದ್ದೇವೆ. ವಿಶ್ವಕಪ್ ತಂಡದ ಭಾಗವಾಗಿರುವ ಆಟಗಾರರನ್ನು ನಾವು ಆಡಿಸಲು ಬಯಸಿದ್ದೇವೆ. ಇಲ್ಲದಿದ್ದರೆ, ನಾವು ಇತರ ಆಟಗಾರರನ್ನು ಆಡಿಸುತ್ತಿದ್ದೆವು. ನಾವು ಮೊದಲು ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದೇವೆ" ಎಂದು ಸೂರ್ಯಕುಮಾರ್ ಯಾದವ್ ಪಂದ್ಯದ ನಂತರದ ಪ್ರಸ್ತುತಿ ಸಮಾರಂಭದಲ್ಲಿ ಹೇಳಿದರು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ ಕಿವೀಸ್​ ಪಡೆ 215 ರನ್ ಗಳಿಸಿತು ಈ ಗುರಿಯನ್ನು ಬೆನ್ನತ್ತಿದ ಭಾರತ 18.4 ಓವರ್‌ಗಳಲ್ಲಿ 165 ರನ್‌ಗಳಿಗೆ ಆಲೌಟ್ ಆಗುವ ಮೂಲಕ 50 ರನ್‌ಗಳ ಸೋಲನ್ನು ಕಂಡಿತು.

ಕಳೆದ ಎರಡು ಪಂದ್ಯಗಳಲ್ಲಿ ಅಬ್ಬರಿಸಿದ ನಾಯಕ ಸೂರ್ಯಕುಮಾರ್​ 8 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಆಲ್​ರೌಂಡರ್ ಹಾರ್ದಿಕ್ (2) ಸಹ ಹೆಚ್ಚುಹೊತ್ತು ಕ್ರೀಸ್​ನಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ಸತತ ಮೂರು ಪಂದ್ಯಗಳಲ್ಲಿ ವಿಫಲವಾಗಿದ್ದ ಸ್ಯಾಮ್ಸನ್​ ಈ ಪಂದ್ಯದಲ್ಲೂ ಸಾಮಾನ್ಯ ಪ್ರದರ್ಶನ ನೀಡಿದರು. ಅವರು ಕೇವಲ 24 ರನ್ ಗಳಿಸಿದರು. ಉಳಿದಂತೆ ರಿಂಕು ಸಿಂಗ್ 39 ರನ್ ಗಳ ಕೊಡುಗೆ ನೀಡಿದರು.

ಕಿವೀಸ್ ಪರ ನಾಯಕ ಸ್ಯಾಂಟ್ನರ್ ಅದ್ಭುತ ಪ್ರದರ್ಶನ ನೀಡಿದರು. ಅವರು 4 ಓವರ್‌ಗಳಲ್ಲಿ 26 ರನ್​ಗಳಿಗೆ 3 ವಿಕೆಟ್ ಪಡೆದರು. ಸೋಧಿ ಮತ್ತು ಡಫಿ ಕೂಡ ತಲಾ 2 ವಿಕೆಟ್ ಕಿತ್ತರು. ಸೀಫರ್ಟ್ 36 ಎಸೆತಗಳಲ್ಲಿ 62 ಮತ್ತು ಕಾನ್ವೇ 23 ಎಸೆತಗಳಲ್ಲಿ 44 ರನ್ ಗಳಿಸಿದರು. ಡ್ಯಾರಿಲ್ ಮಿಚೆಲ್ 18 ಎಸೆತಗಳಲ್ಲಿ 39 ರನ್‌ ಬಾರಿಸಿದರು.