Dr Sathish K Patil Column: ದೆಹಲಿ ಚುನಾವಣೆಯತ್ತ ಒಂದು ನೋಟ

ಮೊದಲನೆಯದು ಆಡಳಿತಾರೂಢ ಆಮ್ ಆದ್ಮಿ ಪಕ್ಷಕ್ಕೆ ಇರುವ ಅನುಕೂಲಕರ ಅಂಶಗಳತ್ತ ಗಮನಿಸಿದಾಗ ಕಳೆದ ಹತ್ತು ವರ್ಷಗಳಲ್ಲಿ ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರಕಾರ ಮಾಡಿದ ಅಭಿವೃದ್ಧಿ ಕಾರ್ಯಗಳಾದ ಉಚಿತ ನೀರು, ವಿದ್ಯುತ್, ಮೊಹಲ್ಲಾ ಕ್ಲಿನಿಕ್, ಪಬ್ಲಿಕ್ ಶಾಲೆಗಳು ಈ ಸಲವು ಮತ್ತೆ ತಮ್ಮ ಕೈ ಹಿಡಿಯುತ್ತವೆ ಎನ್ನುವ ಆಲೋಚನೆಯಲ್ಲಿ ಆಮ್ ಆದ್ಮಿ ಪಕ್ಷವಿದೆ

sathishkpatil ok
Profile Ashok Nayak January 18, 2025

Source : Vishwavani Daily News Paper

ವಿಶ್ಲೇಷಣೆ

ಡಾ.ಸತೀಶ್‌ ಕೆ.ಪಾಟೀಲ್

ದೇಶಾದ್ಯಂತ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಈ ಸಲದ 70 ಸದಸ್ಯ ಬಲದ ದೆಹಲಿ ವಿಧಾನಸಭೆಯ ಚುನಾವಣೆಗೆ ವೇದಿಕೆ ಸಿದ್ಧವಾಗಿದೆ. ಸತತ ಮೂರನೇ ಬಾರಿಗೆ ಮತ್ತೆ ಅಧಿ ಕಾರಕ್ಕೆ ಬರುವ ತವಕದಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಇದ್ದರೆ, ಹೇಗಾದರೂ ಮಾಡಿ ದೆಹಲಿಯಲ್ಲಿ ಅಧಿಕಾರ ಗದ್ದುಗೆ ಹಿಡಿಯಬೇಕು ಎನ್ನುವ ಪ್ರಯತ್ನ ದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಇವೆ. ಹಾಗಾದರೆ ಈ ಸಲದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಅಧಿಕಾರ

ಪಡೆಯುವ ಸಾಧ್ಯತೆ ಇದೆ ಎನ್ನುವ ಅಂಶಗಳತ್ತ ಲಕ್ಷ ವಹಿಸಿದಾಗ, ಮೊದಲನೆಯದು ಆಡಳಿತಾರೂಢ ಆಮ್ ಆದ್ಮಿ ಪಕ್ಷಕ್ಕೆ ಇರುವ ಅನುಕೂಲಕರ ಅಂಶಗಳತ್ತ ಗಮನಿಸಿದಾಗ ಕಳೆದ ಹತ್ತು ವರ್ಷಗಳಲ್ಲಿ ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರಕಾರ ಮಾಡಿದ ಅಭಿವೃದ್ಧಿ ಕಾರ್ಯಗಳಾದ ಉಚಿತ ನೀರು, ವಿದ್ಯುತ್, ಮೊಹಲ್ಲಾ ಕ್ಲಿನಿಕ್, ಪಬ್ಲಿಕ್ ಶಾಲೆಗಳು ಈ ಸಲವು ಮತ್ತೆ ತಮ್ಮ ಕೈ ಹಿಡಿಯುತ್ತವೆ ಎನ್ನುವ ಆಲೋಚನೆಯಲ್ಲಿ ಆಮ್ ಆದ್ಮಿ ಪಕ್ಷವಿದೆ.

ಇದರ ಜೊತೆಗೆ ಈ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೀಡಿದ ಉಚಿತ ಗ್ಯಾರಂಟಿ ಯೋಜನೆಗಳಾದ ಮಹಿಳೆಯರಿಗೆ ಪ್ರತಿ ತಿಂಗಳು 2100 ರುಪಾಯಿ, ಅರ್ಚಕರಿಗೆ ಮಾಸಿಕ 18 ಸಾವಿರ ರುಪಾಯಿ, ವಿದ್ಯಾರ್ಥಿಗಳಿಗೆ ವ್ಯಾಪಾರಿಗಳಿಗೆ ಮತ್ತು ವೃದ್ಧರಿಗೆ ವಿಶೇಷ ಯೋಜನೆ ಗಳ ಭರಪೂರ ಭರವಸೆಗಳನ್ನು ನೀಡಿದೆ. ಈ ಅಂಶಗಳು ಮತ್ತೆ ತಮ್ಮ ನೆರವಿಗೆ ಬರುತ್ತವೆ ಎನ್ನುವ ವಿಶ್ವಾಸದಲ್ಲಿ ಆಮ್ ಆದ್ಮಿ ಪಕ್ಷವಿದೆ.

ಇನ್ನು ಪ್ರತಿಪಕ್ಷಗಳಿಗಿಂತ ಮೊದಲೇ ಆಮ್ ಆದ್ಮಿ ಚುನಾವಣೆ ಸಿದ್ಧತೆ ಮಾಡಿಕೊಂಡಿದೆ. ಚುನಾವಣೆ ಘೋಷಣೆಗೆ ಐದು ತಿಂಗಳ ಮೊದಲೇ ಅರವಿಂದ್ ಕೇಜ್ರಿವಾಲ್ ತಮ್ಮ ಪಕ್ಷದ 70 ಅಭ್ಯರ್ಥಿಗಳ ಘೋಷಣೆ ಮಾಡಿ ಇತರೆ ವಿರೋಧಿ ಪಕ್ಷಗಳಿಗಿಂತ ಮೊದಲೇ ಚುನಾ ವಣೆಯ ಅಖಾಡಕ್ಕೆ ಇಳಿದಿದ್ದು ತಮ್ಮ ನೆರವಿಗೆ ಬರುತ್ತದೆ ಎನ್ನುವ ವಿಶ್ವಾಸವನ್ನು ಹೊಂದಿದೆ.

ಇನ್ನೂ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರ ಜನಪ್ರಿಯತೆ ಮೀರಿಸುವ ಸಿಎಂ ಸ್ಥಾನದ ನಾಯಕ ವಿರೋಧಿಪಕ್ಷಗಳಾದ ಬಿಜೆಪಿ ಮತ್ತು

ಕಾಂಗ್ರೆಸ್‌ನಲ್ಲಿ ಇಲ್ಲದೇ ಇರುವುದು ತಮ್ಮ ನೆರವಿಗೆ ಬರುತ್ತದೆ ಎನ್ನುವ ಲೆಕ್ಕಾಚಾರವನ್ನು ಆಮ್ ಆದ್ಮಿ ಪಕ್ಷವು ಇಟ್ಟುಕೊಂಡಿದೆ. ಇನ್ನೂ ಚುನಾವಣೆ ಮುಂಚೆ ಸಿಎಂ ಸ್ಥಾನಕ್ಕೆ

ಅರವಿಂದ್ ಕೇಜ್ರಿವಾಲ್ ರಾಜೀನಾಮೆ ನೀಡುವ ಮೂಲಕ ಜನರ ಅನುಕಂಪ ಗಿಟ್ಟಿಸ ಬಹುದು ಎನ್ನುವ ಇನ್ನೊಂದು ಲೆಕ್ಕಾಚಾರ ಹಾಕಿಕೊಂಡಿದ್ದಾರೆ.

ಈ ಕಾರಣಕ್ಕೆ ಜೈಲಿನಿಂದ ಜಾಮೀನಿನ ಮೇಲೆ ಹೊರ ಬಂದ ತಕ್ಷಣ ಸಿಎಂ ಸ್ಥಾನಕ್ಕೆ ರಾಜೀ ನಾಮೆ ನೀಡಿ ಜನರ ಅನುಕಂಪ ಗಳಿಸುವ ತಂತ್ರ ಅನುಸರಿಸಿದ್ದಾರೆ. ಈ ಅಂಶವು ಈ ಚುನಾ ವಣೆಯಲ್ಲಿ ತಮ್ಮ ನೆರವಿಗೆ ಬರುತ್ತದೆ ಎನ್ನುವ ಆಲೋಚನೆ ಮಾಡಿದ್ದಾರೆ. ಇನ್ನೂ ಅರ ವಿಂದ್ ಕೇಜ್ರಿವಾಲ್ ಅವರು ತಾವು ಸಿಎಂ ಸ್ಥಾನ ತೊರೆದು ಅದನ್ನು ಅತಿಷ ಮರ್ಲೆನಾ ಅವರಿಗೆ ನೀಡುವ ಮೂಲಕ ದೆಹಲಿ ಮಹಿಳಾ ಮತದಾರರ ಮನಸ್ಸು ಗೆಲ್ಲಬಹುದು ಎನ್ನುವ ಇನ್ನೊಂದು ಲೆಕ್ಕಾಚಾರ ಹೊಂದಿದ್ದಾರೆ.

ಈ ಮೇಲಿನ ಎಲ್ಲ ಅಂಶಗಳಿಂದ ಮತ್ತೆ ದೆಹಲಿಯ ಅಧಿಕಾರ ಗದ್ದುಗೆ ಹಿಡಿದು ಹ್ಯಾಟ್ರಿಕ್ ಗೆಲುವನ್ನ ಪಡೆಯಬೇಕು ಎನ್ನುವ ಆಶಾವಾದವನ್ನು ಅರವಿಂದ್ ಕೇಜ್ರಿವಾಲರ ಆಮ್ ಆದ್ಮಿ ಪಕ್ಷವು ಹೊಂದಿದೆ. ಇನ್ನು ಪ್ರತಿಪಕ್ಷಗಳಾದ ಬಿಜೆಪಿ ಕಾಂಗ್ರೆಸ್ ಪಕ್ಷಗಳಿಗೆ ಈ ಚುನಾವ ಣೆಯಲ್ಲಿ ಅಧಿಕಾರಕ್ಕೆ ಬರಲು ಇರುವ ಅನುಕೂಲಕರ ಅಂಶಗಳತ್ತ ಗಮನಿಸಿದಾಗ ಮೊದಲನೆಯದು ಆಡಳಿತ ವಿರೋಧಿ ಅಲೆ.

ಕಳೆದ ಹತ್ತು ವರ್ಷಗಳಿಂದ ದೆಹಲಿಯಲ್ಲಿ ರಾಜ್ಯಭಾರ ನಡೆಸುತ್ತಿರುವ ಆಡಳಿತ ರೂಢ ಆಮ್ ಆದ್ಮಿ ಪಕ್ಷ ಈ ಸಲ ವ್ಯಾಪಕವಾದ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ. ಯಮುನಾ ನದಿ ಮಲೀನ, ಸಂಚಾರ ದಟ್ಟಣೆ, ವಾಯು ಮಾಲಿನ್ಯ, ಯಮುನಾ ನದಿ ಪ್ರವಾಹದಿಂದ ಜನರು ಅನುಭವಿಸಿದ ತೊಂದರೆ ಇತ್ಯಾದಿ ಅಂಶಗಳಿಂದ ಆಡಳಿತ ವಿರೋಧಿ ಅಲೆ ಆಮ್ ಆದ್ಮಿ ಪಕ್ಷಕ್ಕೆ ನಷ್ಟ ಉಂಟು ಮಾಡಿದರೆ ಈ ಅಂಶಗಳು ತಮ್ಮ ನೆರವಿಗೆ ಬರುತ್ತವೆ ಎನ್ನುವ ಆಲೋಚನೆಯಲ್ಲಿ ಪ್ರತಿಪಕ್ಷಗಳು ಇವೆ.

ಇನ್ನು ವಿರೋಧಪಕ್ಷವಾದ ಬಿಜೆಪಿ ಆಪ್ ಸರಕಾರದ ವಿರುದ್ಧ ವ್ಯಾಪಕ ಭ್ರಷ್ಟಾಚಾರದ ಆರೋಪ ಮಾಡುತ್ತಿದೆ. ಸ್ವತಃ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲರ ಮೇಲೆ ಕೇಳಿ ಬಂದಿರುವ ದೆಹಲಿ ಅಬಕಾರಿ ಹಗರಣ ಮತ್ತು ಇದೇ ವಿಷಯಕ್ಕೆ ಸಂಬಂಧಿಸಿ ದಂತೆ ಅರವಿಂದ್ ಕೇಜ್ರಿವಾಲ್ ಅವರು ಜೈಲಿಗೆ ಹೋಗಿಬಂದು ಈ ಚುನಾವಣೆಯಲ್ಲಿ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಪ್ರಬಲ ಅಸ್ತ್ರ ಸಿಕ್ಕಂತೆ ಆಗಿದೆ.

ಅಣ್ಣಾ ಹಜಾರೆ ಅವರ ನೇತೃತ್ವದ ಭ್ರಷ್ಟಾಚಾರ ವಿರೋಧಿ ಆಂದೋಲನದ ಮೂಲಕ ಮುನ್ನೆಲೆಗೆ ಬಂದ ಅರವಿಂದ್ ಕೇಜ್ರಿವಾಲ್ ಅವರು ಭ್ರಷ್ಟಾಚಾರದ ಆರೋಪ ಹೊತ್ತಿದ್ದು

ವಿಪರ್ಯಾಸವೇ ಸರಿ. ಇನ್ನು ಸರಳತೆಗೆ ಹೆಸರಾಗಿದ್ದ ಅರವಿಂದ್ ಕೇಜ್ರಿವಾಲ್ ಅವರು ಐಷಾರಾಮಿಯ ಬಂಗಲೆ ಶೀಶ್ ಮಹಲ್ ನಿರ್ಮಾಣ ಸೇರಿ ಈ ಭ್ರಷ್ಟಾಚಾರ ವಿಷಯವನ್ನು ಈ ಚುನಾವಣೆಯಲ್ಲಿ ಪ್ರಬಲವಾಗಿ ಪ್ರತಿಪಾದಿಸುತ್ತಿರುವ ಬಿಜೆಪಿ ಪಕ್ಷವು ಈ ಅಂಶಗಳು ತಮ್ಮ ನೆರುವಿಗೆ ಈ ಚುನಾವಣೆಯಲ್ಲಿ ಬರುತ್ತವೆ ಎನ್ನುವ ವಿಶ್ವಾಸ ಇಟ್ಟುಕೊಂಡಿದೆ.

ಇನ್ನೂ ಬಿಜೆಪಿ ಪಕ್ಷವು ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದು ದೆಹಲಿಯಲ್ಲಿ ಅಧಿಕಾರಕ್ಕೆ ಬಂದರೆ ಹೆಚ್ಚಿನ ನೆರವು ಒದಗಿಸಿ ದೆಹಲಿಯನ್ನು ಅಭಿವೃದ್ಧಿ ಮಾಡುತ್ತೇವೆ ಎನ್ನುವ ಪ್ರಧಾನಿ ಮೋದಿ ಅವರ ಭರವಸೆ ನೀಡುತ್ತಿದ್ದು ಅದಕ್ಕಾಗಿ ಡಬಲ್ ಇಂಜಿನ್ ಸರಕಾರಕ್ಕೆ ದೆಹಲಿ ಜನರು ಮೊರೆ ಹೋಗಿದ್ದಾರೆ. ಇನ್ನು ಅವರ ಜನಪ್ರಿಯತೆ ಹಾಗೂ ನಾಯಕತ್ವವು ಈ ಚುನಾವಣೆಯಲ್ಲಿ ನೆರವಿಗೆ ಬರುತ್ತದೆ ಎನ್ನುವ ನಂಬಿಕೆಯನ್ನು ಬಿಜೆಪಿ ಪಕ್ಷವು ಹೊಂದಿದೆ.

ಇನ್ನೂ ಇಂಡಿಯಾ ಮೈತ್ರಿಕೂಟದ ಪಕ್ಷಗಳಾದ ಆಮ್ ಆದ್ಮಿ ಮತ್ತು ಕಾಂಗ್ರೆಸ್ ಪಕ್ಷಗಳು ಈ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದು ಇದರಿಂದ ಜಾತ್ಯತೀತ ಮತಗಳು ವಿಭಜನೆಯಾಗಿ ಅದರ ಲಾಭ ನಮಗೆ ಆಗುತ್ತದೆ ಎನ್ನುವ ವಿಶ್ವಾಸವನ್ನು ಬಿಜೆಪಿ ಪಕ್ಷವು ಹೊಂದಿದರೆ, ಇದರ ಹಾನಿಯ ಭಯ ಆಮ್ ಆದ್ಮಿ ಪಕ್ಷಕ್ಕೆ ಇದೆ. ಈ ಮೇಲಿನ ಅಂಶಗಳಿಂದ ಈ ಚುನಾವಣೆಯಲ್ಲಿ ನಮಗೆ ವರ ಆಗಬಹುದು ಎನ್ನುವ ಆಲೋಚನೆಯಲ್ಲಿ ಪ್ರತಿಪಕ್ಷ ವಾದ ಬಿಜೆಪಿ ಇದೆ. ಇನ್ನೊಂದು ಗಮನಿಸುವ ಅಂಶವೆಂದರೆ ಕಳೆದ ಎರಡು ಲೋಕಸಭಾ ಮತ್ತು ವಿಧಾನ ಸಭೆಯ ಚುನಾವಣೆಯಲ್ಲಿ ದೆಹಲಿ ಮತದಾರರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಜೈಕಾರ ಹಾಕಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಬಹುಪರಾಕ್ ಎಂದಿದ್ದಾರೆ. ಈ ಅಂಶ ದಿಂದ ಆಮ್ ಆದ್ಮಿ ಪಕ್ಷವು ಈ ಚುನಾವಣೆಯಲ್ಲಿ ಹೆಚ್ಚಿನ ಆತ್ಮವಿಶ್ವಾಸ ಹೊಂದಿದೆ. ಹೀಗಾಗಿ ಲೋಕಸಭಾ ಚುನಾವಣೆಯೇ ಬೇರೆ ವಿಧಾನಸಭಾ ಚುನಾವಣೆಯೇ ಬೇರೆ. ಎರಡನ್ನು ಹೋಲಿಕೆ ಮಾಡುವುದು ಸರಿಯಲ್ಲ. ಒಟ್ಟಿನಲ್ಲಿ ಸತತವಾಗಿ ಮೂರನೇ ಬಾರಿಗೆ ಅಧಕಾರ ಹಿಡಿದು ಹ್ಯಾಟ್ರಿಕ್ ಗೆಲುವನ್ನು ಸಾಧಿಸುವ ಪ್ರಯತ್ನದಲ್ಲಿ ಆದ್ಮಿ ಪಕ್ಷವಿದೆ.

ಇನ್ನೂ 26 ವರ್ಷಗಳಿಂದ ದೆಹಲಿ ಅಧಿಕಾರದಿಂದ ದೂರವಿರುವ ಬಿಜೆಪಿ ಪಕ್ಷವು ಮತ್ತು 10 ವರ್ಷಗಳಿಂದ ದೆಹಲಿ ಗದ್ದುಗೆಯಿಂದ ದೂರವಿರುವ ಕಾಂಗೈ ಪಕ್ಷಗಳು ಹೇಗಾದರೂ ಮಾಡಿ ದೆಹಲಿಯಲ್ಲಿ ಅಧಿಕಾರ ಸ್ಥಾಪಿಸುವ ಪ್ರಯತ್ನದಲ್ಲಿ ಇವೆ. ಸದ್ಯದ ದೆಹಲಿ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಕಂಡುಬಂದರು ನಿಜವಾದ ಸ್ಪರ್ಧೆ ಇರುವುದು ಆಮ್ ಆದ್ಮಿ ಮತ್ತು ಬಿಜೆಪಿ ಪಕ್ಷಗಳ ನಡುವೆ. ಇದರಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಆಮ್ ಆದ್ಮಿ ಪಕ್ಷವು ಮರಳಿ ಅಧಿಕಾರ ಪಡೆಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಒಟ್ಟಿನಲ್ಲಿ ದೇಶದ ರಾಜಧಾನಿ ದೆಹಲಿ ವಿಧಾನಸಭೆಯಲ್ಲಿ ಅಂತಿಮವಾಗಿ ದೆಹಲಿ ಮತದಾರ ಪ್ರಭು ಯಾವ ಪಕ್ಷಕ್ಕೆ ಜೈಕಾರ ಹಾಕುತ್ತಾನೆ ಎನ್ನುವ ಪ್ರಶ್ನೆಗೆ ಫೆಬ್ರುವರಿ 8 ರವರೆಗೆ ಕಾಯಲೇಬೇಕು.

(ಲೇಖಕರು: ರಾಜಕೀಯ ವಿಶ್ಲೇಷಕರು ಹಾಗೂ ಪ್ರಾಧ್ಯಾಪಕರು)

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ