ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hari Paraak Column: ಡಿ ಆರ್‌ ಎಸ್‌ ಅಂದ್ರೆ ಡ್ರೋನ್‌ ರಿವ್ಯೂ ಸಿಸ್ಟಮ್‌

ಒಂದು ಮಧ್ಯಾಹ್ನ ಕ್ಯೂಟ್ ನಾಯಿಮರಿಯೊಂದು ಅಷ್ಟೇ ಕ್ಯೂಟ್ ಆಗಿರೋ ಹೇಮಾ ಮನೆಗೆ ಬಂತು. ಬಾಗಿಲ ಹತ್ರನೇ ನಿಂತ್ಕಂಡಿದ್ದ ನಾಯಿಮರಿಯ ತಲೆ ಸವರಿದಳು ಹೇಮಾ, ನಾಯಿ ಮೆಲ್ಲನೆ ಮನೆಯೊಳಗೆ ಬಂತು. ಆ ಕಡೆ, ಈ ಕಡೆ ನೋಡಿ ಒಂದು ಮೂಲೆಯಲ್ಲಿ ಮಲಗಿ ಬಿಟ್ಟಿತು. ಒಂದೆರಡು ಗಂಟೆಗಳಾದ ಮೇಲೆ ಎದ್ದು ನಿಂತ ನಾಯಿಯನ್ನು ನೋಡಿ ಹೇಮಾ ಬಾಗಿಲು ತೆರೆದಳು. ಅವಳನ್ನೇ ಹಿಂಬಾಲಿಸಿದ ನಾಯಿ ಬಾಗಿಲು ತೆರೆದ ಕೂಡಲೇ ಹೊರಟು ಹೋಯಿತು.

ಡಿ ಆರ್‌ ಎಸ್‌ ಅಂದ್ರೆ ಡ್ರೋನ್‌ ರಿವ್ಯೂ ಸಿಸ್ಟಮ್‌

ಹರಿ ಪರಾಕ್‌ ಹರಿ ಪರಾಕ್‌ May 11, 2025 8:11 AM

ತುಂಟರಗಾಳಿ

ನೆಟ್‌ ಪಿಕ್ಸ್

ಒಂದು ಮಧ್ಯಾಹ್ನ ಕ್ಯೂಟ್ ನಾಯಿಮರಿಯೊಂದು ಅಷ್ಟೇ ಕ್ಯೂಟ್ ಆಗಿರೋ ಹೇಮಾ ಮನೆಗೆ ಬಂತು. ಬಾಗಿಲ ಹತ್ರನೇ ನಿಂತ್ಕಂಡಿದ್ದ ನಾಯಿಮರಿಯ ತಲೆ ಸವರಿದಳು ಹೇಮಾ, ನಾಯಿ ಮೆಲ್ಲನೆ ಮನೆಯೊಳಗೆ ಬಂತು. ಆ ಕಡೆ, ಈ ಕಡೆ ನೋಡಿ ಒಂದು ಮೂಲೆಯಲ್ಲಿ ಮಲಗಿ ಬಿಟ್ಟಿತು. ಒಂದೆರಡು ಗಂಟೆಗಳಾದ ಮೇಲೆ ಎದ್ದು ನಿಂತ ನಾಯಿಯನ್ನು ನೋಡಿ ಹೇಮಾ ಬಾಗಿಲು ತೆರೆದಳು. ಅವಳನ್ನೇ ಹಿಂಬಾಲಿಸಿದ ನಾಯಿ ಬಾಗಿಲು ತೆರೆದ ಕೂಡಲೇ ಹೊರಟು ಹೋಯಿತು.

ಮರುದಿನ ಅದೇ ಸಮಯಕ್ಕೆ ಬಾಗಿಲ ಬಳಿ ಸದ್ದಾಯಿತು. ಬಾಗಿಲು ತೆರೆದರೆ ಅದೇ ನಾಯಿ. ಹೇಮಾ ಳನ್ನು ನೋಡುತ್ತಿದ್ದಂತೆ ಅವಳ ಹಿಂದಿನಿಂದ ನುಸುಳಿ ಒಳಗೆ ಹೋಗಿ ಮತ್ತೆ ಅದೇ ಮೂಲೆಯಲ್ಲಿ ನೆಮ್ಮದಿಯಾಗಿ ಮಲಗಿತು. ಒಂದೆರಡು ಗಂಟೆಗಳ ನಂತರ ಎದ್ದುಹೋಯಿತು.

ಇದು ಪ್ರತಿದಿನ ಕಂಟಿನ್ಯೂ ಆಗತೊಡಗಿತು. ಹೇಮಾಗೆ ಆಶ್ಚರ್ಯ, ಯಾರ ನಾಯಿ ಇದು, ಇಲ್ಲೇಕೆ ಬರುತ್ತೆ, ಇಲ್ಲೇಕೆ ಮಲಗುತ್ತೆ ಅಂತ. ಒಮ್ಮೆ ನಾಯಿ ಹೋಗುವಾಗ ’‘ನಾಯಿ ಮಾಲೀಕರ ಗಮನಕ್ಕೆ. ಈ ನಾಯಿ ಯಾರದೋ ಗೊತ್ತಿಲ್ಲ, ಪ್ರತಿದಿನ ಮಧ್ಯಾಹ್ನ ನಮ್ಮ ಮನೆಗೆ ಬಂದು ನಿದ್ದೆ ಮಾಡಿ ಎದ್ದು ಹೋಗುತ್ತದೆ. ನನಗೆ ಏನೂ ಅರ್ಥವಾಗುತ್ತಿಲ್ಲ" ಎಂದು ಒಂದು ಚೀಟಿಯಲ್ಲಿ ಬರೆದು ನಾಯಿಯ ಕುತ್ತಿಗೆಯ ಪಟ್ಟಿಗೆ ಸಿಕ್ಕಿಸಿ ಕಳಿಸಿದಳು.

ಸರಿ, ಮರುದಿನ ನಾಯಿ ಮತ್ತೆ ಬಂತು. ಎಂದಿನಂತೆ ಬಾಗಿಲು ತೆರೆದ ಕೂಡಲೇ ತನ್ನ ಮಲಗುವ ಜಾಗ ಹುಡುಕಿಕೊಂಡು ಹೊರಟ ನಾಯಿಯ ಕುತ್ತಿಗೆಯಲ್ಲಿ ಇನ್ನೊಂದು ಚೀಟಿ ಇತ್ತು. ಅದರಲ್ಲಿ ಬರೆ ದಿತ್ತು “ಇದು ನಮ್ಮನೆ ನಾಯಿ, ವಟವಟ ಮಾತನಾಡುವ ನನ್ನ ಹೆಂಡತಿಯ ಕಾಟ ತಡೆಯಲಾಗದೆ ಮಧ್ಯಾಹ್ನದ ನಿzಗಾಗಿ ಅದು ನಿಮ್ ಮನೆಗೆ ಬರ್ತಾ ಇದೆ. ಅಂದ ಹಾಗೆ, ಇ- ಯೂ ಡೋಂಟ್ ಮೈಂಡ್, ನಾಳೆಯಿಂದ ನಾಯಿ ಜತೆ ನಾನೂ ಬರ‍್ಲಾ?"

ಇದನ್ನೂ ಓದಿ: Hari Paraak Column: ಸೋನು ನಿಗಮ್‌ ಹಾಡು ಮಾತು

ಲೂಸ್‌ ಟಾಕ್-‌ ಐಪಿಎಲ್‌ ಅಭಿಮಾನಿ

ಏನ್ರೀ ಐಪಿಎಲ್ ಅರ್ಧದ ನಿಂತುಹೋಯ್ತಲ್ಲ?

- ಹಂಗೇನಿಲ್ಲ, ಸ್ಟ್ರಾಟೆಜಿಕ್ ಟೈಮ್ ಔಟ್ ಕೊಟ್ಟಿದ್ದಾರೆ ಅಷ್ಟೇ. ಆದ್ರೆ ಈ ಸಲ ಎರಡೂವರೆ ನಿಮಿಷ ಅಲ್ಲ. ಮಿನಿಮಮ್ 1 ವಾರ.

ರೀ, ಪಾಕಿಸ್ತಾನದ ಮೇಲೆ ಇಂಡಿಯಾ ಯುದ್ಧದ ರೀತಿ ಅಟ್ಯಾಕ್ ಮಾಡಿದೆ. ಅದಕ್ಕೆ ಐಪಿಎಲ್ ನಿಲ್ಲಿಸಿರೋದು..

- ಹಂಗಾದ್ರೆ ಇದನ್ನ ಕದನವಿರಾಮ ಅಂದ್ಕೊಳ್ಳೋಣ ಬಿಡಿ.

ಸರಿ, ಪಾಕಿಸ್ತಾನದ ಮೇಲೆ ಇಂಡಿಯಾ ಅಟ್ಯಾಕ್ ಮಾಡಿದ್ದು ಸರೀನಾ?

-ಸರೀನೇ ಕಣ್ರೀ. ನಾವು ಪಾಕಿಸ್ತಾನದ ಮೇಲೆ ಆಟ ಆಡಲ್ಲ ಅಂತ ಅಷ್ಟೇ ಹೇಳಿದ್ದು. ಅವರು ನಮ್ಮತ್ರನೇ ಆಟ ಆಡೋಕ್ ಬಂದ್ರೆ ಅಟ್ಯಾಕ್ ಮಾಡಲ್ಲ ಅಂತೇನೂ ಹೇಳಿಲ್ಲ.

ಅದ್ಸರಿ, ಪಾಕಿಸ್ತಾನ ಇಂಡಿಯಾದ ಮಿಲಿಟರಿ ಮೇಲೆ ಅಟ್ಯಾಕ್ ಮಾಡೋದು ಬಿಟ್ಟು ನಾಗರಿಕರ ಮೇಲೆ ಡ್ರೋನ್ ಅಟ್ಯಾಕ್ ಮಾಡ್ತಾ ಇದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ?

-ಈ ನಿರ್ಧಾರ ಸರಿ ಇಲ್ಲ. ಇಂಡಿಯಾದವರು ಡಿಆರ್‌ಎಸ್ ತಗೋಬೇಕು. ಡ್ರೋನ್ ರಿವ್ಯೂ ಸಿಸ್ಟಮ್

ಸರಿ ಹೋಯ್ತು. ಹೋಗ್ಲಿ ನಿಮ್ಮ ಪ್ರಕಾರ ಯುದ್ಧ ಬೇಕಾ ಬೇಡ್ವಾ?

-ಮಾಡ್ಕೊಳ್ಳಿ ಬಿಡ್ರೀ. ಐ ಮೀನ್ ಮಾಡ್ಲೇಬೇಕು. ನಾನೇನೂ ಹೋಗಿ ಬಾರ್ಡರ್‌ನಲ್ಲಿ ನಿಂತ್ಕೊಳ್ಳೋದ್ ಬೇಕಿಲ್ಲವಲ್ಲ. ಮಾಡೋರ್ ಮಾಡ್ತಾರೆ. ನಂಗೇನಾಗ್ಬೇಕಾಗಿದೆ.

(ಕಾಲ್ಪನಿಕ ಸಂದರ್ಶನ)

IPL R

ಲೈನ್‌ಮ್ಯಾನ್

ಸೆನ್ಸಾರ್‌ನವರು ಸಿನಿಮಾಗಳಲ್ಲಿ ಯಾವ ರೀತಿಯ ಹೊಸ ಹೊಸ ಎಚ್ಚರಿಕೆಗಳನ್ನು ಹಾಕ ಬೇಕು ಅಂತ ರೂಲ್ಸ್ ಮಾಡಬಹುದು? ‌

ಹೆಲ್ಮೆಟ್ ಇಲ್ಲದೆ ಗಾಡಿ ಓಡಿಸುವಾಗ, ಡ್ರಿಂಕ್ ಅಂಡ್ ಡ್ರೈವ್ ಮಾಡುವಾಗ

- ಪೊಲೀಸರು ದಂಡ ಹಾಕುತ್ತಾರೆ.

ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ಮಾಡುವಾಗ

- ಪೊಲೀಸರು ದಂಡ ಹಾಕುತ್ತಾರೆ.

ಹೆಣ್ಣು ಮಗುವನ್ನು ಕೊಲ್ಲುವಾಗ

-ಭ್ರೂಣಹತ್ಯೆ ಅಪರಾಧ ಮದುವೆ ಸಮಯದಲ್ಲಿ

- ವರದಕ್ಷಿಣೆ ತೆಗೆದುಕೊಳ್ಳುವುದು ಅಪರಾಧ

- ಮದುವೆ ಆದರೆ ಡಿವೋರ್ಸ್ ಆಗುವ ಸಂಭವವಿರುತ್ತದೆ

ಬೆಡ್‌ರೂಮ್ ಸೀನ್‌ನಲ್ಲಿ

-ಅಸುರಕ್ಷಿತ ಲೈಂಗಿಕ ಸಂಬಂಧದಿಂದ ಮಕ್ಕಳಾಗುತ್ತವೆ. ಏಯ್ಡ್ಸ್ ಬರುತ್ತದೆ.

ಫೈಟಿಂಗ್ ಸೀನ್‌ಗಳಲ್ಲಿ

-ಮನುಷ್ಯರನ್ನೂ ಗ್ರಾಫಿಕ್ಸ್ ಮಾಡಬೇಕು. ಪ್ರಾಣಿಹಿಂಸೆ ಅಷ್ಟೇ ಅಲ್ಲ ಮನುಷ್ಯರನ್ನೂ ಹಿಂಸೆ

ಮಾಡುವಂತಿಲ್ಲ ‌

ನಾಯಿ ಜತೆ ಆಟವಾಡುವ ನಾಯಕಿಯರಿಗೆ

-ನಾಯಿ ಕಚ್ಚಿದರೆ ರೇಬಿಸ್ ಬರುವ ಸಂಭವವಿರುತ್ತದೆ

ಸಿಟ್ಟಿನಿಂದ ತಟ್ಟೆಯಲ್ಲಿ ಕೈ ತೊಳೆದಾಗ

-ಊಟ ಮಾಡದಿದ್ದರೆ ಗ್ಯಾಸ್ಟ್ರಿಕ್ ಸಂಭವಿಸುತ್ತದೆ.

ಹೆಂಡತಿಗೆ ಹೊಡೆಯುವಾಗ, ಸಿಗರೇಟಿನಿಂದ ಸುಡುವಾಗ

-ಇದಕ್ಕೆ ಏನೂ ಆಗಲ್ಲ, ಸಿನಿಮಾ ಸ್ಟಾರ್‌ಗಳೇ ಮಾಡ್ತಾರಂತೆ, ಮಾಡ್ಕಳಿ, ಮಾಡ್ಕಳಿ...!

ಹೀಗೆ ಮೆಸೇಜ್‌ಗಳನ್ನು ತೋರಿಸಿದರೆ ಅಟ್‌ಲೀಸ್ಟ್ ‘ನಿಮ್ ಸಿನಿಮಾದಲ್ಲಿ ಯಾವ ಮೆಸೇಜ್ ಇದೆ’ ಅಂತ ಕೇಳುವವರಿಗೆ ಸಿನಿಮಾದವರು ‘ನೋಡಿ ಎಷ್ಟೊಂದ್ ಮೆಸೇಜ್ ಗಳಿವೆ’ ಅಂತ ಎದೆ ತಟ್ಟಿಕೊಂಡು ಉತ್ತರಿಸಬಹುದು.