ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಸಂಪಾದಕನ ಬದುಕು

ಜಗತ್ತಿನ ಎಲ್ಲಾ ದೇಶಗಳಿಂದ ಅಲ್ಲಿಗೆ ಪ್ರವಾಸಿಗರು ವಿಹಾರಕ್ಕೆ ಬರುತ್ತಾರೆ. ಇಬಿಜಾ ನಾನು ನೋಡಿದ ಅತ್ಯಂತ ಸುಂದರ ದ್ವೀಪಗಳಂದು. ನಾನು ಹೋಗಿದ್ದಾಗ, ಅಲ್ಲಿ ವೈಫೈ ಸೌಲಭ್ಯ ಇರಲಿಲ್ಲ. ಕೈಯಲ್ಲಿ ಬರೆದು, ಫ್ಯಾಕ್ಸ್ ಮಾಡಬೇಕಿತ್ತು. ನಾನು ಹೋಟೆಲ್ ರೂಮಿನಲ್ಲಿ ಬರೆದು, ಅಲ್ಲಿನ ಬಿಜಿನೆಸ್ ಸೆಂಟರ್‌ಗೆ ಹೋಗಿ, ಫ್ಯಾಕ್ಸ್ ಮಾಡುತ್ತಿದ್ದೆ. ಒಂದು ಪುಟ ಫ್ಯಾಕ್ಸ್‌ಗೆ ಐನೂರು ರುಪಾಯಿ!

Vishweshwar Bhat Column: ಸಂಪಾದಕನ ಬದುಕು

-

ಸಂಪಾದಕರ ಸದ್ಯಶೋಧನೆ

ರಾಜ್ಯದ ಬೇರೆ ಬೇರೆ ಪತ್ರಿಕೆಗಳ ಸಂಪಾದಕನಾಗಿ, ಕಳೆದ 25 ವರ್ಷಗಳಿಂದ ಕೆಲಸ ಮಾಡು ತ್ತಿದ್ದೇನೆ. ಒಂದು ದಿನವೂ ನನ್ನ ಪಾಲಿಗೆ ನೀರಸ ದಿನವೆಂಬುದು ಇಲ್ಲವೇ ಇಲ್ಲ. ವರ್ಷದಲ್ಲಿ ಒಂದು ಸಲ, ಎರಡು ದಿನ ಜ್ವರ, ಅಸೌಖ್ಯ ಎಂದು ಮಲಗಿರಬಹುದು. ಆದರೆ ಒಂದು ದಿನ ಸಹ ರಜಾ ಹಾಕಿದ್ದಿಲ್ಲ.

ಪತ್ನಿ- ಮಗನೊಂದಿಗೆ ಪ್ರವಾಸ ಹೋಗಿದ್ದರೂ, ಆಫೀಸನ್ನು ಮರೆತಿದ್ದಿಲ್ಲ. ಅನೇಕ ಸಲ ಅವರು, ‘ನೀವು ನಮ್ಮ ಜತೆ ಬರುವ ಬದಲು, ಆಫೀಸಿನ ಇರಬಹುದಿತ್ತಲ್ಲ? ಆಫೀಸಿನ ಬಗ್ಗೆ ಯೋಚಿಸದಿದ್ದರೆ, ಒಂದು ದಿನ ಏನಾದರೂ ಬರೆಯದಿದ್ದರೆ, ಓದದಿದ್ದರೆ ಜಗತ್ತೇನೋ ಮುಳುಗಿಹೋಗುವುದಿಲ್ಲ’ ಎಂದು ಅನೇಕ ಸಲ ತಮಾಷೆಗೆ ಹೇಳಿದ್ದಿದೆ.

ಆದರೆ ಎಲ್ಲಿಗೆ ಹೋಗಲಿ, ಬರಲಿ, ಪತ್ರಿಕೆಯನ್ನು ಜತೆಗೆ ಕಟ್ಟಿಕೊಂಡೇ ಹೋಗಬೇಕು. ಪತ್ರಕರ್ತ ವೈಎನ್ಕೆ, ಸಂಪಾದಕರು ರಜಾ ಹಾಕಿ, ಪ್ರವಾಸ ಹೋಗುವ ಬಗ್ಗೆ For an editor, a holiday is an opportunity to travel within ಎಂದು ಹೇಳುತ್ತಿದ್ದರು. ಇದು ಅಕ್ಷರಶಃ ಸತ್ಯ. ಪತ್ರಕರ್ತರಾದವರಿಗೆ ರಜೆ ಎಂಬುದೇ ಇಲ್ಲ. ಅದೇನೂ ಇಲ್ಲದಿದ್ದರೂ, ಬೆಳಗ್ಗೆ ಎದ್ದು ನಾಲ್ಕು ಪತ್ರಿಕೆಗಳನ್ನು ತಿರುವಿ ಹಾಕಲೇಬೇಕು.

ಇದನ್ನೂ ಓದಿ: Vishweshwar Bhat Column: ವಿಮಾನದ ಬಿಡಿಭಾಗಗಳು

ಪತ್ರಿಕೆ ಸಿಗದ, ಕಾಣದ ಊರಿಗೆ ಪ್ರವಾಸ ಹೋದರೆ, ಅದು ರಜೆ. ಈಗಂತೂ ಎಲ್ಲೇ ಹೋದರೂ ಮೊಬೈಲ್ ಮತ್ತು ಅದಕ್ಕೆ ಇಂಟರ್‌ನೆಟ್ ಸಂಪರ್ಕ ಇದ್ದೇ ಇರುತ್ತದೆ. ಹೀಗಾಗಿ ಪತ್ರಿಕೆಗಳನ್ನು ತಪ್ಪಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಕುಟುಂಬ ಸಮೇತ ಪ್ರವಾಸ ಹೋಗುವು ದಾದರೆ, ಹೆಂಡತಿ ಇಲ್ಲದಿದ್ದರೋ ಪರವಾಗಿಲ್ಲ,

ಆದರೆ ಮೊಬೈಲ್ ಇಲ್ಲದೇ ಪ್ರವಾಸ ಹೋಗುವುದು ಸಾಧ್ಯವೇ? ಉಹುಂ.. ಇಲ್ಲವೇ ಇಲ್ಲ. ಇನ್ನು ನೆಟ್ ಮತ್ತು ವೈಫೈ ಇಲ್ಲದ ಜಾಗಕ್ಕೆ ಹೋಗಬೇಕು. ಇಲ್ಲದಿದ್ದರೆ ಪತ್ರಕರ್ತರು ಹೇಗೋ ಪತ್ರಿಕೆಗಳಿಗೆ ತಗುಲಿಕೊಂಡು ಬಿಡುತ್ತಾರೆ. ಕೈಗೆ ಪತ್ರಿಕೆ ಸಿಕ್ಕರೆ, ಹೇಗೋ ಆಫೀಸಿಗೆ ಕನೆಕ್ಟ್ ಆಗಿಬಿಡುತ್ತಾರೆ. ಅದರಲ್ಲೂ ನೀವು ಅಂಕಣ ಬರೆಯುವವರಾದರೆ, ರಜಾ ಇಲ್ಲವೇ ಇಲ್ಲ. ಕೆಲವರು ಮೊದಲೇ ಬರೆದಿಟ್ಟು ಹೋಗುತ್ತಾರೆ.

ಆದರೆ ನಾನು ಕಳೆದ 25 ವರ್ಷಗಳಿಂದ ವಾರಕ್ಕೆ ನಾಲ್ಕು ಅಂಕಣ ಬರೆಯುತ್ತಿರುವವನು. ಇದರೊಂದಿಗೆ ನಿತ್ಯ ಅಂಕಣಗಳು ಬೇರೆ. ಪ್ರವಾಸಿ ಪ್ರಪಂಚ ಆರಂಭವಾದ ಬಳಿಕ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆ. ಜಗತ್ತಿನ ಯಾವ ದೇಶದಲ್ಲಿದ್ದರೂ, ಅಂಕಣ ಮತ್ತು ದೈನಂದಿನ ಕಾರ್ಯ ನಿರ್ವಹಿಸದೇ ಬಿಟ್ಟವನಲ್ಲ. ಹೀಗಾಗಿ ರಜೆ ಎಲ್ಲಿ? ಬೇರೆಯವರಾಗಿದ್ದರೆ, ಸಂಪಾದಕರಿಗೆ ಏನೋ ಸುಳ್ಳು ಹೇಳಬಹುದು.

ನಾನು ಯಾರಿಗೆ ಸುಳ್ಳು ಹೇಳಲಿ? ಹೇಗೆ ಕೆಲಸ ಕದಿಯಲಿ? ನನಗೆ ನಾನು ಸುಳ್ಳು ಹೇಳಿ ಕೊಳ್ಳಲು ಸಾಧ್ಯವಿಲ್ಲವಲ್ಲ. ‘ವಿಜಯ ಕರ್ನಾಟಕ’ದಲ್ಲಿದ್ದಾಗ ನಾನು ಒಮ್ಮೆ ಸ್ಪೇನ್ ದೇಶದ ಬಾರ್ಸಿಲೋನದಿಂದ ಒಂದೂವರೆ ಗಂಟೆ ವಿಮಾನ ಪ್ರಯಾಣದಷ್ಟು ದೂರದಲ್ಲಿರುವ, ಮೆಡಿಟರೇ ನಿಯನ್ ಸಮುದ್ರದಲ್ಲಿರುವ ಇಬಿಜಾ ಎಂಬ ಪುಟ್ಟ ದ್ವೀಪಕ್ಕೆ ಹೋಗಿದ್ದೆ. ಇದನ್ನು Dance floor of the world ಎಂದು ಕರೆಯುತ್ತಾರೆ.

ಜಗತ್ತಿನ ಎಲ್ಲಾ ದೇಶಗಳಿಂದ ಅಲ್ಲಿಗೆ ಪ್ರವಾಸಿಗರು ವಿಹಾರಕ್ಕೆ ಬರುತ್ತಾರೆ. ಇಬಿಜಾ ನಾನು ನೋಡಿದ ಅತ್ಯಂತ ಸುಂದರ ದ್ವೀಪಗಳಂದು. ನಾನು ಹೋಗಿದ್ದಾಗ, ಅಲ್ಲಿ ವೈಫೈ ಸೌಲಭ್ಯ ಇರಲಿಲ್ಲ. ಕೈಯಲ್ಲಿ ಬರೆದು, ಫ್ಯಾಕ್ಸ್ ಮಾಡಬೇಕಿತ್ತು. ನಾನು ಹೋಟೆಲ್ ರೂಮಿನಲ್ಲಿ ಬರೆದು, ಅಲ್ಲಿನ ಬಿಜಿನೆಸ್ ಸೆಂಟರ್‌ಗೆ ಹೋಗಿ, ಫ್ಯಾಕ್ಸ್ ಮಾಡುತ್ತಿದ್ದೆ. ಒಂದು ಪುಟ ಫ್ಯಾಕ್ಸ್‌ಗೆ ಐನೂರು ರುಪಾಯಿ! ಆದರೆ ಬೇರೆ ಮಾರ್ಗವಿಲ್ಲ. ಆದರೆ ಹೇಗೆ ಕಳಿಸಿದರೂ ಮೇಲಿನ ನಾಲ್ಕು ಮತ್ತು ಕೆಳಗಿನ ನಾಲ್ಕು ಸಾಲು ಕಟ್ ಆಗುತ್ತಿತ್ತು. ಆಗ ಫೋನಿನಲ್ಲಿ ಎಲ್ಲವನ್ನೂ ಓದಿ ಹೇಳಬೇಕಾಗುತ್ತಿತ್ತು. ನಾನು ಅನುಭವಿಸಿದ ಇಂಥ ಗೋಳು ಒಂದೆರಡಲ್ಲ. ಅದಕ್ಕೇ ಹೇಳಿದ್ದು ಈ 25 ವರ್ಷಗಳಲ್ಲಿ ಒಂದೇ ಒಂದು ದಿನ ನೀರಸ ಎಂಬುದೇ ಇರಲಿಲ್ಲ.