Keshava Prasad B Column: ಕೋಳಿ ಅಂಕವೇ ಆದರೂ, ದುಡ್ಡು ಇಟ್ಟರೆ ಜೂಜಾಟವೇ !
ಗೇಮಿಂಗ್ ಇಂಡಸ್ಟ್ರಿಯ ಬಿಸಿನೆಸ್ ಹಿತಾಸಕ್ತಿಯ ವಾದವೇ ಬೇರೆ. “ನೋಡಿ, ರಿಯಲ್ ಮನಿ ಗೇಮಿಂಗ್ ಅನ್ನು ನಿಷೇಧಿಸಿದರೆ ದೇಶದಲ್ಲಿ 2 ಲಕ್ಷ ಜನರು ಉದ್ಯೋಗ ಕಳೆದುಕೊಳ್ಳುತ್ತಾರೆ. 400 ಕಂಪನಿಗಳು ಬಾಗಿಲು ಮುಚ್ಚಬೇಕಾಗುತ್ತದೆ. 25000 ಕೋಟಿ ರುಪಾಯಿ ಹೂಡಿಕೆ ನಷ್ಟವಾಗುತ್ತದೆ. ಈ ಸೆಕ್ಟರ್‌ಗೆ ವಿದೇಶಿ ಹೂಡಿಕೆಗಳೂ ಸ್ಥಗಿತವಾಗುತ್ತವೆ. ಈಗ ಆನ್ ಲೈನ್ ಗೇಮಿಂಗ್ ಮಾರುಕಟ್ಟೆಯಲ್ಲಿ ವರ್ಷಕ್ಕೆ 31000 ಕೋಟಿ ರುಪಾಯಿ ಆದಾಯ ಸಿಗುತ್ತದೆ.


ಮನಿ ಮೈಂಡೆಡ್
ಕೋಳಿ ಅಂಕ ಅಥವಾ ಕೋರಿಕಟ್ಟ ಎನ್ನುವ ಜನಪದ ಕ್ರೀಡೆ ಇದೆ. ಅಂದರೆ, ಜೋಡಿ ಕೋಳಿಗಳ ಕಾಲಿಗೆ ಹರಿತವಾದ ಬಾಳು (ಕತ್ತಿ) ಕಟ್ಟಿ, ಅವುಗಳ ಮಧ್ಯೆ ಕಾದಾಟವಾಡಿಸುವುದು. ಊರ ಜನರಿಗೆ ಗಮ್ಮತ್ತು. ಆದರೆ ಕೋಳಿ ಕಟ್ಟದ ಹೆಸರಿನಲ್ಲಿ ಹಣವನ್ನು ಪಣಕ್ಕಿಟ್ಟು ಆಡಿದರೆ ಜೂಜಾಟವಾಗುತ್ತದೆ. ಅದು ಕಾನೂನುಬಾಹಿರ.
ಹಬ್ಬಗಳ ವಿರಾಮದ ಸಂದರ್ಭ ನೆಂಟರಿಷ್ಟರು ಕಾಫಿ-ಚಹಾ ಹೀರುತ್ತಾ, ಒಂದಷ್ಟು ಹೊತ್ತು ಇಸ್ಪೀಟ್ ಎಲೆಗಳಲ್ಲಿ ಆಡಿದರೆ ಅದೊಂದು ಸಂಭ್ರಮ. ಆದರೆ ಅದನ್ನೇ ಯಾವುದೋ ಅಡ್ಡೆಗಳಲ್ಲಿ ದುಡ್ಡನ್ನು ಪಣಕ್ಕಿಟ್ಟು ಆಡಿದರೆ ಅದು ತಪ್ಪು. ಸಮಕಾಲೀನ ಆನ್‌ಲೈನ್ ಗೇಮಿಂಗ್ ಕೂಡ ಹಾಗೆಯೇ!
ಇಲ್ಲಿಯೂ ಸಾಮಾನ್ಯ ಆಟಗಳ ವಿನ್ಯಾಸವಿದೆ. ಅದು ಸರಳ ಮತ್ತು ಮೋಜಿನದ್ದು. ನಿರುಪದ್ರವಿ ಆಟ. ಆದರೆ ಆನ್‌ಲೈನ್ ಗೇಮಿಂಗ್‌ನಲ್ಲಿ ‘ರಿಯಲ್ ಮನಿ ಗೇಮ್ಸ್’ ಎನ್ನುವ ಅಪಾಯಕಾರಿ ಮಾದರಿ ಇದೆ. ಇದರಲ್ಲಿ ಹಣವನ್ನು ಪಣಕ್ಕಿಟ್ಟು ಆಟವಾಡಬೇಕಾಗುತ್ತದೆ. ಇದಕ್ಕೆ ಹೆಚ್ಚು ಕೌಶಲ, ಕಾರ್ಯ ತಂತ್ರ, ಹೆಚ್ಚು ಸಮಯ ಬೇಕು. ಇದರಲ್ಲಿ ಹಣದ ಲಾಭ ಆಗಲೂಬಹುದು, ಭಾರಿ ನಷ್ಟವೂ ಆದೀತು.
ಗೇಮಿಂಗ್ ಇಂಡಸ್ಟ್ರಿಯ ಬಿಸಿನೆಸ್ ಹಿತಾಸಕ್ತಿಯ ವಾದವೇ ಬೇರೆ. “ನೋಡಿ, ರಿಯಲ್ ಮನಿ ಗೇಮಿಂಗ್ ಅನ್ನು ನಿಷೇಧಿಸಿದರೆ ದೇಶದಲ್ಲಿ 2 ಲಕ್ಷ ಜನರು ಉದ್ಯೋಗ ಕಳೆದುಕೊಳ್ಳುತ್ತಾರೆ. 400 ಕಂಪನಿಗಳು ಬಾಗಿಲು ಮುಚ್ಚಬೇಕಾಗುತ್ತದೆ. 25000 ಕೋಟಿ ರುಪಾಯಿ ಹೂಡಿಕೆ ನಷ್ಟವಾಗುತ್ತದೆ. ಈ ಸೆಕ್ಟರ್‌ಗೆ ವಿದೇಶಿ ಹೂಡಿಕೆಗಳೂ ಸ್ಥಗಿತವಾಗುತ್ತವೆ. ಈಗ ಆನ್ ಲೈನ್ ಗೇಮಿಂಗ್ ಮಾರುಕಟ್ಟೆ ಯಲ್ಲಿ ವರ್ಷಕ್ಕೆ 31000 ಕೋಟಿ ರುಪಾಯಿ ಆದಾಯ ಸಿಗುತ್ತದೆ. ಸರಕಾರಗಳಿಗೂ ಇದರಲ್ಲಿ 20000 ಕೋಟಿ ರುಪಾಯಿ ಜಿಎಸ್‌ಟಿ ನಷ್ಟವಾಗುತ್ತದೆ" ಎಂದು ಇಂಡಸ್ಟ್ರಿಯ ಪ್ರತಿನಿಧಿಗಳು ಹೇಳುತ್ತಾರೆ.
ಇದನ್ನೂ ಓದಿ: Keshava Prasad B Column: ಟ್ರಂಪ್ ಹುಚ್ಚಾಟಕ್ಕೆ ಮೋದಿ ಬ್ರೇಕ್, ರಷ್ಯಾ-ಚೀನಾ-ಬ್ರೆಜಿಲ್ ಸಾಥ್ !
ಆನ್‌ಲೈನ್ ರಿಯಲ್ ಮನಿ ಗೇಮ್‌ಗಳನ್ನು ನಿಷೇಧಿಸುವುದರಿಂದ ಕ್ರಿಕೆಟ್ ಇತ್ಯಾದಿ ಆಟಗಳಿಗೆ ಜಾಹೀರಾತು ಆದಾಯ ಕಡಿಮೆಯಾಗಬಹುದು. ಬಿಸಿಸಿಐ ಮತ್ತು ಜಿಯೊ ಸ್ಟಾರ್ ಕಂಪನಿಯ ಆದಾಯಕ್ಕೆ ಕೊರತೆ ಆಗುವ ನಿರೀಕ್ಷೆ ಇದೆ. ಈ ಫ್ಯಾಂಟಸಿ ಸ್ಪೋರ್ಟ್ಸ್ ಕಂಪನಿಗಳು ಐಪಿಎಲ್ ಮತ್ತು ಐಸಿಸಿ ಟೂರ್ನಮೆಂಟ್‌ಗಳಲ್ಲಿ ಪ್ರಮುಖ ಪ್ರಾಯೋಜಕತ್ವವನ್ನು ವಹಿಸುತ್ತಿವೆ.
ಡ್ರೀಮ್ ಇಲೆವನ್ ಸಂಸ್ಥೆಯು ಐಪಿಎಲ್ ನ ಟೈಟಲ್ ಸ್ಪಾನ್ಸರ್ ಕೂಡ ಆಗಿತ್ತು. ಒಂದು ಕಡೆ ಗೇಮಿಂಗ್ ಕಂಪನಿಗಳ ಮಾಲೀಕರು ಶ್ರೀಮಂತರಾಗುತ್ತಿzರೆ; ಡ್ರೀಮ್ ಇಲೆವನ್ ಕಂಪನಿಯ ಸಿಇಒ ಹಾಗೂ ಸಹ ಸಂಸ್ಥಾಪಕರಾಗಿರುವ ಹರ್ಷ್ ಆನಂದ್ ಜೈನ್ ಅವರು ಮುಂಬೈನ ಮಲಬಾರ್ ಹಿಲ್ ನಲ್ಲಿ 138 ಕೋಟಿ ರುಪಾಯಿಗೆ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ್ದರು.
ಮತ್ತೊಂದು ಕಡೆ 45 ಕೋಟಿ ಜನರು ವಾರ್ಷಿಕ 20000 ಕೋಟಿ ರುಪಾಯಿಗಳನ್ನು ಆನ್‌ಲೈನ್ ಗೇಮಿಂಗ್‌ಗಳಲ್ಲಿ ಕಳೆದುಕೊಳ್ಳುತ್ತಿದ್ದಾರೆ. ಮೇಲ್ನೋಟಕ್ಕೆ ಅತ್ಯಂತ ಸಂಭಾವಿತನಂತೆ ಕಾಣುವ ವ್ಯಕ್ತಿ ಕೂಡ ತಾನು ಎ ಇದ್ದರೂ, ಮನೆಯವರಿಗೂ ಗೊತ್ತಾಗದಂತೆ ಗುಟ್ಟಾಗಿ ಮೊಬೈಲ್‌ನ ಆನ್ ಲೈನ್ ಬೆಟ್ಟಿಂಗ್ ವ್ಯಸನಿಯಾಗಿಬಿಡಬಹುದು.
ದುಡಿಮೆಯ ಹಣವನ್ನೆಲ್ಲ ಕಳೆದುಕೊಂಡು ಬರಿಗೈ ದಾಸನಾಗಬಹುದು. ಹೀಗಾಗಿ ಅನೇಕ ಕುಟುಂಬ ಗಳು ಬೀದಿಪಾಲಾಗಿವೆ. ಮಕ್ಕಳು ಅನಾಥವಾಗಿವೆ. ಅತ್ಯಂತ ಅಪಾಯಕಾರಿ ಬೆಳವಣಿಗೆ ಏನೆಂದರೆ, 2020ರಿಂದ 2024ರ ಅವಧಿಯಲ್ಲಿ ದೇಶದಲ್ಲಿ ಆನ್‌ಲೈನ್ ಆಟವಾಡುವ ಗೇಮರ್ಸ್ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. ಅದು 36 ಕೋಟಿಗಳಿಂದ ಬರೋಬ್ಬರಿ 50 ಕೋಟಿಗೆ ಜಿಗಿದಿದೆ.
ಸ್ಮಾರ್ಟ್ ಫೋನ್‌ಗಳ ಬಳಕೆ ಹೆಚ್ಚಿರುವುದು, ಅಗ್ಗದ ದರದಲ್ಲಿ ಡೇಟಾ ಸಿಗುತ್ತಿರುವುದು ಇದಕ್ಕೆ ಕಾರಣ. ಇವತ್ತು, ಆನ್‌ಲೈನ್ ಗೇಮಿಂಗ್ ವ್ಯಸನದ ಪರಿಣಾಮವಾಗಿ ದುರಂತ ಅಂತ್ಯವನ್ನು ಕಂಡ ಅನೇಕ ಕುಟುಂಬಗಳು ಇವೆ. ಒಡಿಶಾದ ರಾಯಗಢ ಜಿಲ್ಲೆಯ ಗಾಮನಗುಡ ಎಂಬಲ್ಲಿ 15 ವರ್ಷದ ಸೈನಾ ಸಾಹು ಎಂಬ ಬಾಲಕಿ ಆನ್ ಲೈನ್ ಗೇಮ್‌ನಲ್ಲಿ ಲಕ್ಷಾಂತರ ರುಪಾಯಿ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡಳು.
ಆಕೆ ಪ್ರತಿದಿನವೂ ಮೊಬೈಲ್ ನಲ್ಲಿ ಆನ್‌ಲೈನ್ ಗೇಮಿಂಗ್‌ನಲ್ಲಿ ತಲ್ಲೀನಳಾಗುತ್ತಿದ್ದಳು. ಮನೆಯವರು ಎಷ್ಟು ತಡೆದರೂ ಕೇಳುತ್ತಿರಲಿಲ್ಲ. ಇಂದೋರ್ ನಲ್ಲಿ ವಿದ್ಯಾರ್ಥಿಯೊಬ್ಬ ಆನ್‌ಲೈನ್ ಗೇಮ್‌ನಲ್ಲಿ 2800 ರುಪಾಯಿ ಕಳೆದುಕೊಂಡಿದ್ದಕ್ಕೇ ನೇಣಿಗೆ ಶರಣಾಗಿದ್ದ!
ಕರ್ನಾಟಕದಲ್ಲೂ 2023ರಿಂದ ಇಲ್ಲಿಯವರೆಗೆ ಆನ್‌ಲೈನ್ ಜೂಜಿನಲ್ಲಿ ನಷ್ಟ ಮಾಡಿಕೊಂಡು 32 ಮಂದಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಮೂರನೇ ಎರಡರಷ್ಟು ಸಂತ್ರಸ್ತರು ಬೆಂಗಳೂರಿನವರು. ಡ್ರೈವರ್‌ಗಳು, ಸಣ್ಣಪುಟ್ಟ ವ್ಯಾಪಾರಿಗಳು, ಸಂಬಳ ದಾರರು ಆನ್‌ಲೈನ್ ಜೂಜಾಟದ ಪರಿಣಾಮವಾಗಿ ಸಾಲ ಸೋಲ ಮಾಡಿ, ನಷ್ಟಕ್ಕೀಡಾಗಿ ಬದುಕನ್ನು ಕೊನೆಗೊಳಿಸಿಕೊಂಡ ಪ್ರಕರಣಗಳು ಕಳವಳಕಾರಿಯಾಗಿವೆ.
ದೇಶದ ಬಹುತೇಕ ರಾಜ್ಯಗಳಲ್ಲಿ ಇಂಥ ದುರ್ಘಟನೆಗಳು ನಡೆದಿದ್ದು, ಆನ್‌ಲೈನ್ ಗೇಮಿಂಗ್ ಸಾಮಾಜಿಕ ಪಿಡುಗಾಗುತ್ತಿದೆಯೇ ಎಂಬ ಪ್ರಶ್ನೆಯನ್ನು ಅವು ಹುಟ್ಟುಹಾಕಿದ್ದವು. ಮೈಸೂರಿನಲ್ಲಿ ವ್ಯಕ್ತಿಯೊಬ್ಬರು ಸೋದರಿಯ ಹೆಸರಿನಲ್ಲಿ 80 ಲಕ್ಷ ರು.ಸಾಲ ಮಾಡಿ, ಅದೆಲ್ಲವನ್ನೂ ಆನ್‌ಲೈನ್ ಜೂಜಿನಲ್ಲಿ ಕಳೆದುಕೊಂಡರು.
ಬೆಂಗಳೂರಿನಲ್ಲಿ ಆಟೋ ಚಾಲಕರೊಬ್ಬರು ಸಾಲ ಮಾಡಿ ಪಡೆದಿದ್ದ ಬರೋಬ್ಬರಿ 10 ಲಕ್ಷ ರುಪಾಯಿಗಳನ್ನು ಆನ್‌ಲೈನ್ ಗೇಮಿಂಗ್‌ನಲ್ಲಿ ಕಳೆದುಕೊಂಡರು. ಹಾಸನದಲ್ಲಿ ವ್ಯಕ್ತಿಯೊಬ್ಬರು 15 ಲಕ್ಷ ರು. ನಷ್ಟಕ್ಕೀಡಾಗಿ ಹೇಮಾವತಿ ನಾಲೆಗೆ ಹಾರಿದರು. ಇಂಥ 32 ದಾರುಣ ಘಟನೆಗಳು ನಮ್ಮ ರಾಜ್ಯದ ಸಂಭವಿಸಿವೆ. ವರದಿಯಾಗದಿರುವ ಇನ್ನಷ್ಟು ಪ್ರಕರಣಗಳೂ ಇರಬಹುದು.
ಆದ್ದರಿಂದ ಜನರು ಇನ್ನಾದರೂ ಇಂಥ ಆನ್‌ಲೈನ್ ಮನಿ ಗೇಮಿಂಗ್‌ಗಳಿಂದ ದೂರವಿರಲೇಬೇಕು. ಈ ಸಂತ್ರಸ್ತರು ಇದೇ ಲಕ್ಷಾಂತರ ರುಪಾಯಿಗಳನ್ನು ಮ್ಯೂಚುವಲ್ ಫಂಡ್ ‘ಸಿಪ್’ನಲ್ಲಿ ಅಥವಾ ಉತ್ತಮ ಕಂಪನಿಯ ಷೇರಿನದರೂ, ಇಟಿಎಫ್, ಬಾಂಡ್, ಬಂಗಾರದದರೂ ಹೂಡಿಕೆ ಮಾಡಿರು ತ್ತಿದ್ದರೆ, ಮುಂದಿನ 10-15 ವರ್ಷದಲ್ಲಿ ಅದು ದೊಡ್ಡ ಮೊತ್ತವಾಗಿರುತ್ತಿತ್ತು.
ಅವರ ಸಂಪತ್ತು ನಿಸ್ಸಂದೇಹವಾಗಿ ವೃದ್ಧಿಸುತ್ತಿತ್ತು. ಗೇಮಿಂಗ್ ಅಪ್ಲಿಕೇಶನ್‌ಗಳಿಂದ ಯುವಜನರು ವ್ಯಸನಿಗಳಾಗುತ್ತಿರುವ, ಲಕ್ಷಾಂತರ ಹಣವನ್ನು ಕಳೆದುಕೊಂಡು ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರಕಾರ ಇದನ್ನು ನಿಷೇಧಿಸಲು 14 ಪುಟಗಳ ‘ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ವಿಧೇಯಕ-2025’ ಅನ್ನು ಲೋಕಸಭೆಯಲ್ಲಿ ಮಂಡಿಸಿ ಅಂಗೀಕಾರವನ್ನು ಪಡೆದುಕೊಂಡಿದೆ.
ಅದರ ಪ್ರಕಾರ ಎಲ್ಲ ಬಗೆಯ ರಿಯಲ್ ಮನಿ ಗೇಮ್‌ಗಳು ಕಾನೂನಿಗೆ ವಿರುದ್ಧ. ಅದನ್ನು ಪ್ರಚಾರ ಮೂಡುವುದೂ ಅಪರಾಧ. ಅದಕ್ಕೆ ಮೂರು ವರ್ಷಗಳ ಅವಧಿಯ ಶಿಕ್ಷೆ ಮತ್ತು 1 ಕೋಟಿ ರುಪಾಯಿ ತನಕ ದಂಡ ವಿಧಿಸಬಹುದು.
ಕೇಂದ್ರ ಸಚಿವ ಅಶ್ವಿನ್ ವೈಷ್ಣವ್ ಅವರ ಈ ಮಾತನ್ನು ಗಮನಿಸಿ- “ಆನ್‌ಲೈನ್ ಗೇಮ್ ಆಡುವವರು ನಿಜವಾಗಿಯೂ ಅದಕ್ಕೆ ಜವಾಬ್ದಾರರಲ್ಲ. ಅವರು ಅದರ ಬಲಿಪಶುಗಳು. ಆದ್ದರಿಂದ ಸಂತ್ರಸ್ತರಿಗೆ ಶಿಕ್ಷೆಯಾಗದಂತೆ ಸರಕಾರ ಎಚ್ಚರ ವಹಿಸಲಿದೆ. ಇಲ್ಲಿ ಜನರಿಂದ ದುಡ್ಡು ಪಡೆದು ಆನ್ ಲೈನ್ ಗೇಮ್ ಸರ್ವೀಸ್‌ಗಳನ್ನು ಪೂರೈಸುವವರು ಮತ್ತು ಅದನ್ನು ಬೆಂಬಲಿಸಿ ಜಾಹೀರಾತುಗಳನ್ನು ಕೊಡು ವವರು, ಪ್ರಚಾರ ಮಾಡುವವರು ಇಲ್ಲಿ ಹೊಣೆಗಾರರಾಗುತ್ತಾರೆ".
ಸರಕಾರವು ವಿಧೇಯಕದ ಅಂಗೀಕಾರದ ಮೂಲಕ ನಿಷೇಧಿಸಲು ಹೊರಟಿರುವ ರಿಯಲ್ ಮನಿ ಗೇಮಿಂಗ್ಸ್ ಎಂದರೇನು? ಇವುಗಳು ಆನ್‌ಲೈನ್ ಗೇಮ್ಸ್ ಆಗಿದ್ದು, ಮೊಬೈಲ್‌ನಲ್ಲಿಯೇ ಆಡಬಹುದು. ಇಲ್ಲಿ ಹಣವನ್ನು ಗಳಿಸಬಹುದು ಅಥವಾ ನಷ್ಟವೂ ಆದೀತು. ನಷ್ಟಕ್ಕೀಡಾದವರೇ ಹೆಚ್ಚು.
ಹಾಗಾದರೆ ಭಾರತದಲ್ಲಿರುವ ಜನಪ್ರಿಯ ರಿಯಲ್ ಮನಿ ಗೇಮ್‌ಗಳು ಯಾವುವು? ಫ್ಯಾಂಟಸಿ ಸ್ಪೋರ್ಟ್ಸ್, ರಮ್ಮಿ, ಪೋಕರ್, ತೀನ್ ಪತ್ತಿ, ಆನ್‌ಲೈನ್ ಕ್ಯಾಸಿನೊಗಳು ಇವೆ. ಫ್ಯಾಂಟಸಿ ಸ್ಪೋರ್ಟ್ಸ್ ನಲ್ಲಿ ಡ್ರೀಮ್ ಇಲೆವನ್ ಮತ್ತು ಎಂಪಿಎಲ್ (ಮೊಬೈಲ್ ಪ್ರೀಮಿಯರ್ ಲೀಗ್) ಭಾರಿ ಜನಪ್ರಿಯತೆ ಗಳಿಸಿವೆ. ಇದರಲ್ಲಿ ಆಟ ಆಡುವವರು ನಿಜವಾದ ಕ್ರೀಡಾಪಟುಗಳ ಹೆಸರಿನಲ್ಲಿ ವರ್ಚುವಲ್ ಟೀಮ್‌ಗಳನ್ನು ಸೃಷ್ಟಿಸುತ್ತಾರೆ.
ನಿಜವಾದ ಪಂದ್ಯಗಳಲ್ಲಿ ಕ್ರೀಡಾಪಟುಗಳ ಪರ್ಫಾರ್ಮೆನ್ಸ್ ಅನ್ನು ಅಧರಿಸಿ ಗೇಮರ್ಸ್ ಅಂಕ ಗಳನ್ನು ಗಳಿಸುತ್ತಾರೆ. ಕ್ರಿಕೆಟ್, ಫುಟ್ಬಾಲ್, ಬಾಸ್ಕೆಟ್ಬಾಲ್ ಮತ್ತು ಕಬಡ್ಡಿಯಲ್ಲಿ ಈ ಪ್ಲಾಟ್ ಫಾರ್ಮ್‌ಗಳ ಆನ್‌ಲೈನ್ ಗೇಮ್ ಸೇವೆಯನ್ನು ನೋಡಬಹುದು.
ರಮ್ಮಿ ಜನಪ್ರಿಯ ಕಾರ್ಡ್ ಗೇಮ್ ಆಗಿದ್ದು, ಆನ್‌ಲೈನ್ ನಲ್ಲೂ ಮನಿ ರಮ್ಮಿ ಗೇಮ್ಸ್ ಇವೆ. ಗೆಲ್ಲುವವರಿಗೆ ನಗದು ಬಹುಮಾನ ಇರುತ್ತದೆ. ಇದೀಗ ಇಂಥ ಅಪಾಯಕಾರಿ ಆನ್ ಲೈನ್ ಜೂಜಾಟ ಗಳಿಗೆ ಕೇಂದ್ರ ಸರಕಾರ ನಿಷೇಧ ಹೇರುತ್ತಿರುವುದರಿಂದ, ಡ್ರೀಮ್ 11, ಮೈ11 ಸರ್ಕಲ್, ವಿನ್ ಝೋ, ಗೇಮ್ಸ್ 247, ಜಂಗಲ್ ಗೇಮ್ಸ ಸೇರಿದಂತೆ 400 ಕಂಪನಿಗಳಿಗೆ ಸವಾಲು ಎದುರಾಗಿದೆ.
ಹಾಗಂತ ಈ ವಿಧೇಯಕವು ಹಣವನ್ನು ಪಣಕ್ಕಿಟ್ಟು ಜೂಜಾಡುವುದನ್ನು ಮಾತ್ರ ನಿಷೇಧಿಸುತ್ತಿದೆ. ಆದರೆ ಇ-ಸ್ಪೋರ್ಟ್ಸ್ ಅನ್ನು ನಿಷೇಽಸಿಲ್ಲ. ಹೊಸ ಕಾನೂನಿನಲ್ಲಿ ಅದಕ್ಕೆ ಉತ್ತೇಜನ ಇದೆ. ವಿಧೇಯಕವು ಇ-ಸ್ಪೋರ್ಟ್ಸ್ ಮತ್ತು ರಿಯಲ್ ಮನಿ ಗೇಮಿಂಗ್ ನಡುವಣ ವ್ಯತ್ಯಾಸವನ್ನು ಸ್ಪಷ್ಟವಾಗಿ ಗುರುತಿಸಿದೆ.
ಉದಾಹರಣೆಗೆ ಸ್ಪರ್ಧಾತ್ಮಕವಾಗಿರುವ ವಿಡಿಯೊ ಗೇಮಿಂಗ್ ಗಳಾದ ಬಿಜಿಎಂಐ, ಪಬ್ಜಿ, ಲೀಗ್ ಆಫ್ ಲೆಜೆಂಡ್ಸ್ ಅನ್ನು ನಿಷೇಧಿಸಿಲ್ಲ. ನಗದು ಬಹುಮಾನಗಳನ್ನು ಒಳಗೊಂಡಿರುವ, ರಿಯಲ್ ಮನಿ ಗೇಮ್ ಪ್ಲಾಟ್ ಫಾರ್ಮ್‌ಗಳನ್ನು ಮಾತ್ರ ಕಾನೂನುಬಾಹಿರಗೊಳಿಸಲಾಗುತ್ತಿದೆ.
ಆನ್‌ಲೈನ್ ಗೇಮಿಂಗ್ ಕಂಪನಿಗಳು ಈಗ ಕಾನೂನಿನ ಬಲೆಗಳಿಂದ ಬೈಪಾಸ್ ಆಗುವ ಮಾರ್ಗೋ ಪಾಯಗಳನ್ನು ಕಂಡುಕೊಳ್ಳಬಹುದು. ಆದರೆ ಜನಸಾಮಾನ್ಯರು ಆನ್‌ಲೈನ್ ಮನಿ ಗೇಮ್‌ಗಳ ಅಪಾಯಗಳನ್ನು ಅರ್ಥ ಮಾಡಿಕೊಂಡು ತಾವಾಗಿಯೇ ದೂರವಿರುವುದು ಕೂಡ ಅಷ್ಟೇ ಮುಖ್ಯ ವಾಗುತ್ತದೆ.
ಏಕೆಂದರೆ ಸುಲಭವಾಗಿ ಮತ್ತು ರಾತ್ರೋರಾತ್ರಿ ದುಡ್ಡು ಮಾಡುವ ಬಗೆ ಹೇಗೆ ಎಂಬುದನ್ನೇ ಮನುಷ್ಯ ಆಲೋಚಿಸುತ್ತಾನೆ. ಹತ್ತಾರು ವರ್ಷ ಕಾದು, ಶಿಸ್ತುಬದ್ಧವಾಗಿ ಸಣ್ಣ ಮೊತ್ತಗಳನ್ನು ಹೂಡಿಕೆ ಮಾಡುತ್ತಾ ಸಂಪತ್ತನ್ನು ಸೃಷ್ಟಿಸಿಕೊಳ್ಳುವ, ಕಂಪೌಂಡಿಂಗ್ ಎಫೆಕ್ಟ್‌ನ ಲಾಭವನ್ನು ಪಡೆದುಕೊಳ್ಳುವ ವ್ಯವಧಾನ ಈಗಿನ ಜಮಾನದ ಯುವಜನತೆಗೆ ಕಡಿಮೆಯಾಗುತ್ತಿದೆ.
ಆದ್ದರಿಂದಲೇ ಸ್ಟಾಕ್ ಮಾರ್ಕೆಟ್‌ನಲ್ಲೂ ಈಕ್ವಿಟಿ ಹೂಡಿಕೆಯ ದೀರ್ಘಾವಧಿಯ ಇನ್ವೆಸ್ಟ್‌ಮೆಂಟ್ ಬದಲಿಗೆ, ಇಂಟ್ರಾ ಡೇ ಟ್ರೇಡಿಂಗ್ ಅಥವಾ ಫ್ಯೂಚರ್ಸ್ ಆಂಡ್ ಆಪ್ಷನ್ಸ್ ಟ್ರೇಡಿಂಗ್ ಆಕರ್ಷಿಸುತ್ತದೆ. ಜನರಿಗೆ ಬೆಳಗ್ಗೆ ದುಡ್ಡು ಹಾಕಿ, ಸಂಜೆಯ ವೇಳೆಗೆ ಹತ್ತು ಪರ್ಸೆಂಟ್ ಲಾಭ ಪಡೆಯುವ ಆಸೆ. ಸ್ಟಾಕ್ ಮಾರ್ಕೆಟ್‌ನ ಸೂಚ್ಯಂಕಗಳ ಏರಿಳಿತದಲ್ಲಿ, ಎ ವೀಕ್ ಪಾಯಿಂಟ್‌ನಲ್ಲಿ ಲಕ್ಷಾಂತರ ರುಪಾಯಿ ಹಾಕಿ, ಏರಿದೊಡನೆ ಷೇರುಗಳನ್ನು ಮಾರಿ ಲಾಭ ಗಳಿಸುವ ಮೋಹ.
ಆದರೆ ಅದಕ್ಕೆ ಗ್ಯಾರಂಟಿ ಇಲ್ಲ ಎಂಬ ಮುಖ್ಯವಾದ ಸಂಗತಿಯನ್ನೇ ಮರೆಯುತ್ತಾರೆ. ಇದೇ ಎಡ ವಟ್ಟಿಗೆ ಕಾರಣವಾಗುತ್ತದೆ. ಆದ್ದರಿಂದ “ದುಡ್ಡು ಮರದಲ್ಲಿ ಬೆಳೆಯುವುದಿಲ್ಲ" ಎಂಬ ಸತ್ಯವನ್ನು ಮನನ ಮಾಡಿಕೊಳ್ಳಬೇಕು.