ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಜಪಾನಿನಲ್ಲಿ ಫ್ಯಾಕ್ಸ್‌ ಇನ್ನೂ ಜೀವಂತ

ಜಪಾನಿನಲ್ಲಿ ಎಲ್ಲ ರಸ್ತೆಗಳಿಗೆ ಹೆಸರಿಲ್ಲದಿರುವುದರಿಂದ ತಕ್ಷಣ ಪತ್ತೆ ಹಚ್ಚುವುದು ಕಷ್ಟ. ಹೀಗಾಗಿ ಪದೇ ಪದೆ ಸ್ಮಾರ್ಟ್ ಫೋನ್ ನೋಡುವುದು ಅನಿವಾರ್ಯ. ಜಗತ್ತಿನ ಬಹುತೇಕ ದೇಶಗಳಲ್ಲಿ ಫ್ಯಾಕ್ಸ್‌ ಮಷೀನುಗಳು ಕಾಲಗರ್ಭವನ್ನು ಸೇರಿದ್ದರೂ, ತಾಂತ್ರಿಕವಾಗಿ ಮುಂದುವರಿದಿರುವ ಜಪಾನಿನಲ್ಲಿ ಅವು ಇನ್ನೂ ಜೀವಂತವಾಗಿವೆ.

Vishweshwar Bhat Column: ಜಪಾನಿನಲ್ಲಿ ಫ್ಯಾಕ್ಸ್‌ ಇನ್ನೂ ಜೀವಂತ

-

ಸಂಪಾದಕರ ಸದ್ಯಶೋಧನೆ

ಎಲ್ಲರಿಗೂ ಶಿಷ್ಟಾಚಾರ ಗೊತ್ತು. ಆದರೆ ಇಲೆಕ್ಟ್ರಾನಿಕ್ ಶಿಷ್ಟಾಚಾರ (Electronic Etiquettes) ) ಗೊತ್ತಿರುವ ಸಾಧ್ಯತೆ ಕಮ್ಮಿ. ಆದರೆ ಜಪಾನಿನಲ್ಲಿ ಇಲೆಕ್ಟ್ರಾನಿಕ್ ಶಿಷ್ಟಾಚಾರ ತಿಳಿದಿರಲೇ ಬೇಕು. ಜಪಾನ್ ಪ್ರಪಂಚದ ಅತ್ಯಂತ connected ದೇಶಗಳಲ್ಲಿ ಒಂದು. ರೈಲಿನಲ್ಲಿ ಪ್ರಯಾ ಣಿಸುವಾಗ ಬಹುತೇಕ ಮಂದಿ ಫೋನ್, ಟ್ಯಾಬ್ಲೆಟ್ ಅಥವಾ ಇ-ರೀಡರ್‌ಗಳ ಪರದೆಗಳಿಗೆ ಅಂಟಿಕೊಂಡಿರುವುದನ್ನು ಗಮನಿಸಬಹುದು.

ಯಾರೂ ಮತ್ತೊಬ್ಬರ ಹತ್ತಿರ ಮಾತಾಡುವುದಿಲ್ಲ. ತಮ್ಮ ಪಾಡಿಗೆ ತಾವು ಗ್ಯಾಜೆಟ್‌ನಲ್ಲಿ ಮಗ್ನರಾಗಿರುವುದನ್ನು ಕಾಣಬಹುದು. ಆಪಲ್ ಐಫೋನ್ ಮಾರುಕಟ್ಟೆಗೆ ಬಂದ ಸ್ವಲ್ಪ ಸಮಯದ ನಂತರ, ಜಪಾನ್‌ನಲ್ಲಿ ಸ್ಮಾರ್ಟ್ ಫೋನ್‌ಗಳು ಪ್ರಸರಣಗೊಂಡವು,

ಸೋಷಿಯಲ್ ನೆಟ್‌ವರ್ಕ್ ಸರ್ವೀಸ್ (SNS) ಹರಡುವಿಕೆಯೊಂದಿಗೆ ಜನರ ಸಾರ್ವಜನಿಕ ಮತ್ತು ಖಾಸಗಿ ವರ್ತನೆಗಳೇ ಬದಲಾಗಿ ಹೋದವು. ಆದರೆ ಜಪಾನ್ ತನ್ನ ಸ್ವಂತ ‘ಮೊಬೈಲ್ ಸಂಸ್ಕೃತಿ’ಯನ್ನು ವರ್ಷಗಳ ಹಿಂದೆಯೇ ಸದ್ದಿಲ್ಲದೆ ಅಭಿವೃದ್ಧಿಪಡಿಸಿತ್ತು.

ಇದನ್ನೂ ಓದಿ: Vishweshwar Bhat Column: ಪೈಲಟ್‌ʼಗೆ ಮಾತ್ರ ಗೊತ್ತು

‘ಐ-ಮೋಡ್’ ಎಂಬ ತಂತ್ರಜ್ಞಾನದೊಂದಿಗೆ ವೆಬ್‌ನೊಂದಿಗೆ, ಸೆಲ್ ಐಫೋನ್‌ಗಳ ಸಮ್ಮಿಲನದೊಂದಿಗೆ ವಾಣಿಜ್ಯ ಯಶಸ್ಸನ್ನು ಕಂಡ ಮೊದಲನೆಯ ದೇಶ ಎಂಬ ಅಗ್ಗಳಿಕೆಗೆ ಪಾತ್ರವಾಗಿತ್ತು. ಜಪಾನ್‌ನಲ್ಲಿ, ಮಕ್ಕಳು ತಮ್ಮ ಹ್ಯಾಂಡ್ ಸೆಟ್‌ಗಳೊಂದಿಗೆ ವಿಡಿಯೋ ಗಳನ್ನು ವೀಕ್ಷಿಸುವ ಅಥವಾ ಕ್ಷಿಪ್ರ-ಫೈರ್ ಸಂದೇಶ ಕಳುಹಿಸುವ ದೃಶ್ಯವು ಇಪ್ಪತ್ತೊಂದನೇ ಶತಮಾನದಲ್ಲಿ ಅಲ್ಲ, ಇಪ್ಪತ್ತನೇ ಶತಮಾನದಲ್ಲಿ ಹುಟ್ಟಿಕೊಂಡ ವಿದ್ಯಮಾನವಾಗಿತ್ತು.

ಹೊರಗಿನ ಪ್ರಪಂಚವು ಅದರ ಬಗ್ಗೆ ಹೆಚ್ಚು ಕೇಳಿರಲಿಲ್ಲ. ಜಪಾನ್ ಹೊರಗಿನ ಪ್ರಪಂಚಕ್ಕೆ ಗೊತ್ತಾಗದಂತೆ, ತನ್ನ ಅಗತ್ಯಕ್ಕೆ ತಕ್ಕುದಾದ ತಂತ್ರಜ್ಞಾನವನ್ನು ನಿರ್ಮಿಸಿಕೊಳ್ಳುವುದರಲ್ಲಿ ನಿಸ್ಸೀಮ. ಇದನ್ನು ‘ಗ್ಯಾಲಪಗೋಸ್ ಸಿಂಡ್ರೋಮ್’ ಅಂತಾರೆ. ಜಗತ್ತಿಗೆಲ್ಲ ಒಂದು ಮಾದರಿ ತಂತ್ರಜ್ಞಾನವಿದ್ದರೆ, ಜಪಾನ್ ತನಗೆ ಸೀಮಿತವಾದ ತಂತ್ರಜ್ಞಾನವನ್ನು ನಿರ್ಮಿಸಿಕೊಳ್ಳು ತ್ತದೆ.

ಜಪಾನಿನ ಮೊಬೈಲ್ ಸಂಸ್ಕೃತಿಯನ್ನು ಐಫೋನ್ ಮತ್ತು ನಂತರ ಆಂಡ್ರಾಯ್ಡ ಹ್ಯಾಂಡ್‌ ಸೆಟ್‌ಗಳು ಪುನರ್ ವಿನ್ಯಾಸಗೊಳಿಸಿದ್ದು ಇತಿಹಾಸ. ಜಪಾನಿನಲ್ಲಿ ಕಿರು ಸಂದೇಶ ಕಳಿಸು ವಾಗಲೂ ಎಸ್ಸೆಮ್ಮೆಸ್ ಬದಲು ಇ-ಮೇಲ್ ಬಳಸುವುದು ಸಾಮಾನ್ಯ. ಒಮ್ಮೊಮ್ಮೆ ಎಸ್ಸೆಮ್ಮೆಸ್‌ಗಿಂತ ಇ-ಮೇಲ್ ಐಡಿಯೇ ಉದ್ದವಾಗಿದ್ದರೂ, ಇ-ಮೇಲ್ ಅನ್ನೇ ಅವರು ನೆಚ್ಚಿಕೊಳ್ಳುತ್ತಾರೆ.

ಬೇರೆ ದೇಶಗಳಿಗಿಂತ ಜಪಾನಿನಲ್ಲಿ ಇಲೆಕ್ಟ್ರಾನಿಕ್ ಶಿಷ್ಟಾಚಾರವನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಟ್ರೇನ್ ಮತ್ತು ಬಸ್ಸುಗಳಲ್ಲಿ ಓಡಾಡುವಾಗ ಯಾರ ಮೊಬೈಲೂ ಕಿರುಚಿಕೊಳ್ಳುವುದಿಲ್ಲ. ಕಾರಣ, ಸಾಮಾನ್ಯವಾಗಿ ಎಲ್ಲರೂ ಆಗ ತಮ್ಮ ತಮ್ಮ ಮೊಬೈಲ್‌ ಗಳನ್ನು ಸೈಲೆಂಟ್ ಮೋಡ್‌ನಲ್ಲಿಟ್ಟಿರುತ್ತಾರೆ. ಆ ಸಮಯದಲ್ಲಿ ಕರೆ ಬಂದರೂ, ತಾವು ಟ್ರೇನ್ ಅಥವಾ ಬಸ್ಸಿನಲ್ಲಿ ಇರುವುದಾಗಿಯೂ, ನಂತರ ಮಾತಾಡುವುದಾಗಿಯೂ ತಿಳಿಸು ತ್ತಾರೆ.

ತುರ್ತು ಸಂದರ್ಭದಲ್ಲಿ ಪಕ್ಕದವರ ಅನುಮತಿ ಪಡೆದು ಮಾತಾಡುತ್ತಾರೆ. ಇಲ್ಲದಿದ್ದರೆ, ಅತ್ತ ಕಡೆಯವರು ಮಾತಾಡುತ್ತಾರೆ ಮತ್ತು ಇವರು ಮಾತಾಡದೇ ಬರೀ ಕೇಳಿಸಿಕೊಳ್ಳುತ್ತಿರುತ್ತಾರೆ. ಹೀಗಾಗಿ ಟ್ರೇನುಗಳಲ್ಲಿ ಯಾರ ಮೊಬೈಲ್‌ಗಳೂ ವಿವಿಧ ರಿಂಗ್ ಟೋನ್ ಗಳಿಂದ ಒದರುವು ದಿಲ್ಲ.

ಒಂದು ವೇಳೆ ಮೊಬೈಲ್ ಕಿರುಚಿಕೊಂಡರೆ, ಅಕ್ಕ-ಪಕ್ಕದಲ್ಲಿದ್ದವರು ದುರುಗುಟ್ಟಿ ನೋಡದೇ ಹೋಗುವುದಿಲ್ಲ. ವೃದ್ಧರು, ಗರ್ಭಿಣಿಯರು, ಮಕ್ಕಳನ್ನು ಎತ್ತಿಕೊಂಡ ಮಹಿಳೆಯರು, ವಿಕಲ ಚೇತನರು ಕುಳಿತುಕೊಂಡ ‘ಪ್ರಯಾರಿಟಿ ಸೀಟು’ಗಳ ಸನಿಹದಲ್ಲಿದ್ದವರಂತೂ ತಮ್ಮ ಮೊಬೈಲ್‌ಗಳನ್ನು ಸ್ವಿಚ್ ಆಫ್ ಮಾಡಿರುತ್ತಾರೆ. ‌

ಆದರೆ ಈ ದಿನಗಳಲ್ಲಿ ಜಪಾನಿನ ರಸ್ತೆಗಳಲ್ಲಿ ಓಡಾಡುವವರು ಸ್ಮಾರ್ಟ್ ಫೋನ್ ಸ್ಕ್ರೀನ್ ನೋಡುತ್ತಾ ಹೋಗುವುದು ಹೆಚ್ಚಾಗಿದೆ. ಇದಕ್ಕೆ ಕಾರಣ ನೇವಿಗೇಶನ್ ಆಪ್ ನೋಡುವುದು ಅನಿವಾರ್ಯವಾಗಿರುವುದು. ಜಪಾನಿನಲ್ಲಿ ಎಲ್ಲ ರಸ್ತೆಗಳಿಗೆ ಹೆಸರಿಲ್ಲದಿರುವುದರಿಂದ ತಕ್ಷಣ ಪತ್ತೆ ಹಚ್ಚುವುದು ಕಷ್ಟ. ಹೀಗಾಗಿ ಪದೇ ಪದೆ ಸ್ಮಾರ್ಟ್ ಫೋನ್ ನೋಡುವುದು ಅನಿವಾರ್ಯ. ಜಗತ್ತಿನ ಬಹುತೇಕ ದೇಶಗಳಲ್ಲಿ ಫ್ಯಾಕ್ಸ್‌ ಮಷೀನುಗಳು ಕಾಲಗರ್ಭವನ್ನು ಸೇರಿದ್ದರೂ, ತಾಂತ್ರಿಕವಾಗಿ ಮುಂದುವರಿದಿರುವ ಜಪಾನಿನಲ್ಲಿ ಅವು ಇನ್ನೂ ಜೀವಂತ ವಾಗಿವೆ.