ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Harish Kera Column: ಮಧ್ಯರಾತ್ರಿ ಚಂದ್ರ ತಳಿಯ ತುಂಬುತಿರುವುದು

‘ಮಾರ್ಗಶಿರ ಪುಷ್ಯ- ಹೇಮಂತ ಋತು/ ಹಿಮ ಸುರಿವ ಹಾದಿಯಲಿ ಬೆಳಗಾಯಿತು/ ಮಾಘ ಫಲ್ಗುಣ ಶಿಶಿರ ಋತು/ಕಂಬಳಿಯ ಹೊದ್ದರೂ ಮೈ ನಡುಗಿತು’ ಎಂದು ಬರೆಯುತ್ತಾರೆ ಪ್ರೇಮ ಕವಿ. ಋತುವೈಭವದಲ್ಲಿ ಚಳಿಗಾಲಕ್ಕೆ ಬೇರೆಯೇ ಸ್ಥಾನ. ವಸಂತ ಎಂದರೆ ಚೆಲುವು, ಚಿಗುರು, ವರ್ಷ ಎಂದರೆ ಮಳೆ, ಹಸಿರು ಎಂದೆಲ್ಲ ಹೇಳುವ ಕವಿಗಳು ಚಳಿಗಾಲಕ್ಕೆ ಬಂದಾಗ ಯಾಕೋ ತುಸು ಥಂಡಾ ಹೊಡೆಯುತ್ತಾರೆ.

Harish Kera Column: ಮಧ್ಯರಾತ್ರಿ ಚಂದ್ರ ತಳಿಯ ತುಂಬುತಿರುವುದು

-

ಹರೀಶ್‌ ಕೇರ
ಹರೀಶ್‌ ಕೇರ Nov 20, 2025 7:41 AM

ಕಾಡುದಾರಿ

ಚಳಿಗಾಲ ಮೌನದ ಸುದೀರ್ಘ ಮೆರವಣಿಗೆ. ಬೆಚ್ಚನೆಯ ಸೂರಿದ್ದವರಿಗೆ ಇದು ಸುಖ. ಮುಂಜಾನೆಯ ಕಿರಣಗಳನ್ನು ಮುದುಕ-ಮುದುಕಿಯರು ಜೋರಾಗಿ ಕೆಮ್ಮುತ್ತ ಸ್ವಾಗತಿಸು ತ್ತಾರೆ. ಸಂಜೆ ಮುಂಜಾನೆ ಆಟದ ಮೈದಾನಗಳು, ಪಾರ್ಕುಗಳು ಖಾಲಿ ಹೊಡೆಯುತ್ತವೆ. ಅಡಕೆಯ ಸೋಗೆಗಳಿಂದ ತಟಪಟನೆ ಬೀಳುತ್ತಿರುವ ಮುಂಜಾನೆ ಯ ಇಬ್ಬನಿಗಳು ಒದ್ದೆ ಮಾಡಿದ ನೆಲ ಒಣಗಬೇಕಾದರೆ ಮಧ್ಯಾಹ್ನ.

ಮುಂಜಾನೆಗಳು ಕಣ್ಣು ತೆರೆಯಲು ಹಠ ಮಾಡುತ್ತಿವೆ. ಸಂಜೆಗಳು ಶಾಲು ಹೊದ್ದು ಕಾಫಿ ಹೀರುತ್ತಿವೆ. ರಾತ್ರಿಗಳು ಮಂಕಾದ ಚಂದಿರನ ಸುತ್ತಲಿನ ಬೂದು ಆವರಣದತ್ತ ನೋಟ ನೆಟ್ಟಿರುವಾಗ, ತಾರೆಗಳು ಕಣ್ ಮಿಟುಕಿಸುತ್ತವೆ. ದೂರದಲ್ಲಿ ಯಾರೋ ‘ಮಧ್ಯರಾತ್ರಿ ಚಂದ್ರ ಚಳಿಯ ತುಂಬುತಿರುವುದು’ ಎಂದು ಹಳೇ ಚಿತ್ರಗೀತೆಯನ್ನು ಗುನುಗುನಿಸುತ್ತಿದ್ದಾರೆ.

ಆ ರಾಗಕ್ಕೆ ಜೊಂಪುಹೋಗಿ ನಡುವೆ ಎಲ್ಲಾ ಕಣ್ಣು ತೆರೆದರೆ, ಕಾಲ ಚಲಿಸದೆ ಇದ್ದ ಇದೆ. ಮಾರ್ಗಶಿರ ಮಾಸ. ಚಳಿ ಏರುತ್ತಿದೆ. ಬೆಂಗಳೂರಿನಲ್ಲಿ ಕಡಲೆಕಾಯಿ ಪರಿಷೆಗೆ ಬಂದ ರಾಶಿ ರಾಶಿ ಕಡಲೆಯಿಂದ ಮಣ್ಣಿನ ಬಿಸುಪು. ದಾರಿ ಬದಿ ಯಾರೋ ತುಸು ವಯಸ್ಸಾದವರು ಇಯರ್ ಫೋನ್ ಹಚ್ಚಲು ಮರೆತು ಹಾಗೇ ಕೇಳಿಸಿಕೊಳ್ಳುತ್ತ ಹೋಗುತ್ತಿದ್ದಾರೆ.

‘ಮಾಸಾನಾಂ ಮಾರ್ಗಶೀರ್ಷಃ’ ಮಾಸಗಳಲ್ಲಿ ಮಾರ್ಗಶಿರ ತಾನು ಎಂದು ಶ್ರೀಕೃಷ್ಣ ಗೀತೆ ಯಲ್ಲಿ ಅರ್ಜುನನಿಗೆ ಬೋಽಸಿದ ಎಂದು ಆಚಾರ್ಯರು ಅಲ್ಲಿ ಹೇಳುತ್ತಿರುವುದು ಕೇಳುತ್ತಿದೆ. ಮಾಸಗಳಲ್ಲಿ ನಾನು ಮಾರ್ಗಶಿರ- ಧನುರ್ಮಾಸದ ಚಳಿಯ ಕುಳಿರು ಇಳಿಯುವ ಮೊದಲೇ ಮುಂಜಾನೆ ಎದ್ದು ತಣ್ಣೀರಿನಲ್ಲಿ ಮಿಂದು ದೇವಾಲಯದತ್ತ ಹೆಜ್ಜೆ ಹಾಕುತ್ತಿರು ವವರ ಕಿವಿಗಳಲ್ಲೂ ಅದು ಕೇಳಿಸುತ್ತಿದೆ.

Screenshot_9 ಋ

‘ಮಾರ್ಗಶಿರ ಪುಷ್ಯ- ಹೇಮಂತ ಋತು/ ಹಿಮ ಸುರಿವ ಹಾದಿಯಲಿ ಬೆಳಗಾಯಿತು/ ಮಾಘ ಫಲ್ಗುಣ ಶಿಶಿರ ಋತು/ಕಂಬಳಿಯ ಹೊದ್ದರೂ ಮೈ ನಡುಗಿತು’ ಎಂದು ಬರೆಯುತ್ತಾರೆ ಪ್ರೇಮಕವಿ. ಋತುವೈಭವದಲ್ಲಿ ಚಳಿಗಾಲಕ್ಕೆ ಬೇರೆಯೇ ಸ್ಥಾನ. ವಸಂತ ಎಂದರೆ ಚೆಲುವು, ಚಿಗುರು, ವರ್ಷ ಎಂದರೆ ಮಳೆ, ಹಸಿರು ಎಂದೆಲ್ಲ ಹೇಳುವ ಕವಿಗಳು ಚಳಿಗಾಲಕ್ಕೆ ಬಂದಾಗ ಯಾಕೋ ತುಸು ಥಂಡಾ ಹೊಡೆಯುತ್ತಾರೆ.

ಚಳಿಗಾಲವನ್ನು ಮನತುಂಬಿ ಬಣ್ಣಿಸುವವರು ಕಡಿಮೆ ಅಥವಾ ಇಲ್ಲವೇ ಇಲ್ಲ. ವಿಂಟರು, ಅದಕ್ಕಿಲ್ಲ ನೆಂಟರು. ಋತುವೈಭವದಲ್ಲಿ ಹೇಮಂತ-ಶಿಶಿರಗಳನ್ನು ಕೆ. ಎಸ್.ನರಸಿಂಹ ಸ್ವಾಮಿಯವರು ಸ್ಮರಿಸುವುದು ಹೀಗೆ- ‘ಮಾಗಿಯ ಮಂಜಿನ ಮುಸುಕುಗಳೇ/ ಕಣ್ಣಿಗೆ ಮೋಸವ ಮಾಡುವಿರಿ/ ತರುಲತೆಗಳ ಜೀವಾಳವನೆ/ ಹಿಡಿದಡಿಸಿ ನೋಡುವಿರಿ’.

ಕೊರೆಯುವ ಚಳಿಯಲ್ಲಿ ನಿಂತವನು ಎಡಬಲ ನೋಡಲು ಹೆದರುವನಂತೆ. ‘ಚಳಿಗಾಲದ ಬಿಳಿ ಬಾನಿನಲಿ ಚಂದಿರ ಮಂಕಾಗಿ ಅಲೆಯುವನು. ಬೆಚ್ಚನೆ ಮೂಲೆಯ ಹಿಡಿದವನು ಮುಗಿಯದ ಕತೆಯನು ಹೇಳುವನು’- ಎನ್ನುವರು. ಕತೆ ಹೇಳಲು, ಕೇಳಲು, ಓದಲು ಚಳಿಗಾಲ ಸಕಾಲ. ಅಡಕೆ ಸಿಪ್ಪೆ, ತೆಂಗಿನ ಸಿಪ್ಪೆ ಹಾಕಿ ಹೊಗೆಯೆಬ್ಬಿಸಿ, ನುಸಿ ಓಡಿಸಿ ಮನೆತುಂಬಾ ತುಂಬಿಕೊಳ್ಳುವ ಬೆಚ್ಚಗಿನ ಘಾಟು ಅಗ್ಗಿಷ್ಟಿಕೆ ಕತೆಗಳನ್ನು ಸುತ್ತ ಕುಣಿಸುವ ಅಗ್ನಿಕುಂಡ.

‘ಮಾರ್ಗಶಿರ ಪುಷ್ಯ- ಹೇಮಂತ ಋತು/ ಹಿಮ ಸುರಿವ ಹಾದಿಯಲಿ ಬೆಳಗಾಯಿತು/ ಮಾಘ ಫಲ್ಗುಣ ಶಿಶಿರ ಋತು/ಕಂಬಳಿಯ ಹೊದ್ದರೂ ಮೈ ನಡುಗಿತು’ ಎಂದು ಬರೆಯುತ್ತಾರೆ ಪ್ರೇಮಕವಿ. ಋತುವೈಭವದಲ್ಲಿ ಚಳಿಗಾಲಕ್ಕೆ ಬೇರೆಯೇ ಸ್ಥಾನ. ವಸಂತ ಎಂದರೆ ಚೆಲುವು, ಚಿಗುರು, ವರ್ಷ ಎಂದರೆ ಮಳೆ, ಹಸಿರು ಎಂದೆಲ್ಲ ಹೇಳುವ ಕವಿಗಳು ಚಳಿಗಾಲಕ್ಕೆ ಬಂದಾಗ ಯಾಕೋ ತುಸು ಥಂಡಾ ಹೊಡೆಯುತ್ತಾರೆ.

ಚಳಿಗಾಲವನ್ನು ಮನತುಂಬಿ ಬಣ್ಣಿಸುವವರು ಕಡಿಮೆ ಅಥವಾ ಇಲ್ಲವೇ ಇಲ್ಲ. ವಿಂಟರು, ಅದಕ್ಕಿಲ್ಲ ನೆಂಟರು. ಋತುವೈಭವದಲ್ಲಿ ಹೇಮಂತ-ಶಿಶಿರಗಳನ್ನು ಕೆ. ಎಸ್.ನರಸಿಂಹ ಸ್ವಾಮಿಯವರು ಸ್ಮರಿಸುವುದು ಹೀಗೆ- ‘ಮಾಗಿಯ ಮಂಜಿನ ಮುಸುಕುಗಳೇ/ ಕಣ್ಣಿಗೆ ಮೋಸವ ಮಾಡುವಿರಿ/ ತರುಲತೆಗಳ ಜೀವಾಳವನೆ/ ಹಿಡಿದಡಿಸಿ ನೋಡುವಿರಿ’.

ಕೊರೆಯುವ ಚಳಿಯಲ್ಲಿ ನಿಂತವನು ಎಡಬಲ ನೋಡಲು ಹೆದರುವನಂತೆ. ‘ಚಳಿಗಾಲದ ಬಿಳಿ ಬಾನಿನಲಿ ಚಂದಿರ ಮಂಕಾಗಿ ಅಲೆಯುವನು. ಬೆಚ್ಚನೆ ಮೂಲೆಯ ಹಿಡಿದವನು ಮುಗಿಯದ ಕತೆಯನು ಹೇಳುವನು’- ಎನ್ನುವರು. ಕತೆ ಹೇಳಲು, ಕೇಳಲು, ಓದಲು ಚಳಿಗಾಲ ಸಕಾಲ. ಅಡಕೆ ಸಿಪ್ಪೆ, ತೆಂಗಿನ ಸಿಪ್ಪೆ ಹಾಕಿ ಹೊಗೆಯೆಬ್ಬಿಸಿ, ನುಸಿ ಓಡಿಸಿ ಮನೆತುಂಬಾ ತುಂಬಿಕೊಳ್ಳುವ ಬೆಚ್ಚಗಿನ ಘಾಟು ಅಗ್ಗಿಷ್ಟಿಕೆ ಕತೆಗಳನ್ನು ಸುತ್ತ ಕುಣಿಸುವ ಅಗ್ನಿಕುಂಡ.

ಇದನ್ನೂ ಓದಿ: Harish Kera Column: ವಿದ್ಯಾವಂತರೇಕೆ ಕೇಡಿನ ಹಾದಿ ತುಳಿದಿದ್ದಾರೆ ?

ಜಗುಲಿಯ ಈಜಿಚೇರಿನಲ್ಲಿ ಕೂತು ತೂಕಡಿಸುವ ಅಜ್ಜಯ್ಯನನ್ನೂ ಅದು ಬೆಚ್ಚಗಿಟ್ಟಿದೆ. ಸುತ್ತ ಕುಳಿತವರ ಕಣ್ಣಿನಲ್ಲಿ ಅದೆಷ್ಟು ಅಗ್ಗಿಷ್ಟಿಕೆಗಳು ಕುಣಿಯುತ್ತಿವೆ. ಒಂದೊಂದೇ ಕತೆಗಳು ಚಳಿ ಕಾಯಿಸುತ್ತಿರುವ ಒಕ್ಕಲಿನ ಕೆಲಸದವರ ಬಾಯಿಯಿಂದ ಹೊರಹೊಮ್ಮುತ್ತಿವೆ- ಚಳಿಗಾಲದ, ಮಳೆಗಾಲದ, ಥಂಡಿಯ, ಕಾಡಿನ ಕತೆಗಳು. ಮಲೆನಾಡಿನ ನಿಗೂಢ ಮಲೆಕಾನ ನಗಳಲ್ಲಿ ಅಲೆದು ಬಂದ ವೀರರು ಅವರು.

ಇಂಥ ಅದೆಷ್ಟು ‘ಐತ’ರು ಅದೆಷ್ಟು ‘ಪೀಂಚಲು’ಗಳನ್ನು ಮಲೆಗಳಲ್ಲಿ ನಡೆಸಿ ತಮ್ಮ ಬಿಡಾರ ಕ್ಕೊಯ್ದಿಲ್ಲ! ಹುಲಿಗೂ ಹೆದರದ ‘ಹುಲಿಯ’ ಹೆಸರಿನ ನಾಯಿಗಳದೆಷ್ಟು! ಆ ಕತೆಗಳನ್ನು ಬೆಂಕಿಯ ಬೆಳಕಿನಲ್ಲಿ ಕುಳಿತು ಐತ ಹೇಳಬೇಕು, ಕೇಳಿಸಿಕೊಳ್ಳುತ್ತ ಸೆರಗಿನ ಮರೆಯಲ್ಲಿ ಪೀಂಚಲು ನಗಬೇಕು. ಮಕ್ಕಳು ಕೇಳಬೇಕು.

ಪುಟ್ಟ ಮಕ್ಕಳನ್ನು ಮಡಿಲಲ್ಲಿ ಮಲಗಿಸಿಕೊಂಡಿರುವ ಕೃಶ ಶರೀರದ ಅಜ್ಜಿಯ ಒಡಲಿನಲ್ಲಿ ಅಷ್ಟೊಂದು ಕತೆಗಳೆಲ್ಲಿದ್ದವೊ! ಕತೆ ಕೇಳುತ್ತ ಕೇಳುತ್ತ ಮಕ್ಕಳು ನಿದ್ದೆಯ ಮಡಿಲು ಸೇರು ವಾಗ ಅಜ್ಜಿ ತುಟಿಗೆ ಬಂದ ಇನ್ನೊಂದಷ್ಟು ಕತೆಗಳನ್ನು ನಾಳೆಗೆ ಎತ್ತಿಟ್ಟುಕೊಳ್ಳುತ್ತಾಳೆ.

ಇಂಥ ನಾಳೆಗಳು ಬರುತ್ತಲೇ ಇರುತ್ತವೆ. ಕತೆಗಳು ಮಾಯಾಮೋಹಕ ಜಗತ್ತೊಂದನ್ನು ನಿರ್ಮಿಸುತ್ತಲೇ ಇರುತ್ತವೆ. ಮಕ್ಕಳ ಅಂತರಂಗದ ನೆರಳಿನಲ್ಲಿ ಬೆಳಕಿನ ಛಾಯಾ ಜಗತ್ತೊಂದು ತನ್ನನ್ನು ಕಟ್ಟಿಕೊಳ್ಳುತ್ತ ಬೆಳೆಯುತ್ತಿರುತ್ತದೆ. ಕತೆ ಅಂತರಂಗದಲ್ಲಿರುತ್ತದೆ. ನಡುಗುವ ಚಳಿಗೆ ಗರ್ಭದ ನಡುಗುತ್ತ ಮಿಡುಕುತ್ತ ಬೆಳೆಯುತ್ತದೆ. ಬೆಳಕು ಸಿಕ್ಕಿದೆಡೆ ಬಾಗಿ ಹೊರಚಾಚುತ್ತದೆ. ಚಳಿಗಾಲದ ಬೆಳಕೂ ಚಳಿಯ ಹಿಡಿತದಲ್ಲಿರುತ್ತದೆ. ಹೀಗಾಗಿ ಚಳಿಗಾಲ ದಲ್ಲಿ ಹುಟ್ಟುವ ಕತೆಗೆ ಬೆಳೆಯುವ ಹಂಬಲ.

‘ಈ ಚಳಿಯ ಇರುಳು ಎಷ್ಟೊಂದು ದೀರ್ಘ/ ಇದನು ಕಳೆಯಲು ನಿನ್ನ ಅಪ್ಪುಗೆಯೊಂದೆ ಮಾರ್ಗ’ ಅಂತ ಹೇಳುತ್ತಾನೆ ಉರ್ದು ಕವಿಯೊಬ್ಬ. ಚಳಿ ಕಳೆಯಲು ಅವರವರಿಗೆ ಅವರವ ರದೇ ಮಾರ್ಗಗಳಿವೆಯೇನೋ. ಬೇಸಿಗೆ ಬಿಸಿಲಿನಿಂದ ಪಾರಾಗಲು ಮದಿರೆ, ತಣ್ಣೆಳಲು, ಮಾನಿನಿಯ ನಳಿದೋಳ್ಗಳ ಉಪಾಯ ಹೇಳಿದ ಉಮರ್ ಖಯ್ಯಾಮ, ಚಳಿ ದಾಟಲು ಯಾವ ಉಪಾಯವನ್ನೂ ಹೇಳಿದಂತಿಲ್ಲ.

‘ಆನ್ ಅಫರ್ ಟು ರಿಮೆಂಬರ್’ ಚಲನಚಿತ್ರದಲ್ಲಿ ಒಂದು ಡಯಲಾಗ್ ಬರುತ್ತದೆ: ‘ಬೆಚ್ಚಗಿನ ನೆನಪುಗಳು ಇಲ್ಲದವರಿಗೆ ಚಳಿಗಾಲ ಮತ್ತಷ್ಟು ಶೀತಲವಾಗಿರುತ್ತದೆ...’ ಎಷ್ಟು ನಿಜ ಅಲ್ಲವೆ ? ಜಗತ್ತು ಮೌನವಾಗಿ ಮಲಗಿ ನಿದ್ರಿಸುವ ಕಾಲ. ಕೊರಿಯಾದ ಚಿತ್ರಕಾರನೊಬ್ಬನ ಚಿತ್ರ ಹೀಗಿದೆ: ಒಂದು ಚುಮುಚುಮು ಮುಂಜಾನೆ ಪುಟ್ಟ ಹುಡುಗಿಯೊಬ್ಬಳು ಹರಕು ಕಂಬಳಿ ಹೊದ್ದು ಮುದುಡಿ ಮುದ್ದೆಯಾಗಿ ನಿರ್ಜನ ರಸ್ತೆಯಲ್ಲಿ ಏನನ್ನೋ ಹುಡುಕುತ್ತ ನಡೆಯು ತ್ತಿರುವಳು.

ಸುತ್ತ ಕವಿದ ಮಂಜು. ದೂರದಲ್ಲಿ ಮಿನುಮಿನುಗು ನಕ್ಷತ್ರಗಳಂತೆ ಪಟ್ಟಣದ ಬೀದಿ ದೀಪಗಳು. ಚುಕ್ಕಿಗಳು, ಕತ್ತಲು, ಮಂಜು. ಚಿತ್ರ ನೋಡುವವರನ್ನೂ ನಖಶಿಖಾಂತ ನಡುಗಿಸುವ ಚಳಿ. ಚೀನಾದಲ್ಲಿ, ಜಪಾನಿನಲ್ಲಿ, ಇಂಗ್ಲೆಂಡಿನಲ್ಲಿ, ಬೇಡ ನಮ್ಮದೇ ಹಿಮಾ ಲಯದಲ್ಲಿ- ಚಳಿ ಹೇಗಿರುತ್ತದೆ? ಚೀನಾದ ಚೆರಿ ಗಿಡಗಳ ಅಡಿಯಲ್ಲಿ ಉದುರಿದ ಎಲೆಗಳು, ಲಂಡನ್ನಿನ ಥೇಮ್ಸ ನದಿಯ ದಡದಲ್ಲಿ ಇಳಿಜಾರು ಚಾವಣಿಯ ಮೇಲಿನ ಹಿಮರಾಶಿ, ಜಪಾನಿನ ಸಮುರಾಯ್‌ನ ಉಸಿರಿನೊಂದಿಗೆ ಬೆರೆತು ಬರುವ ಮಂಜುಗಾಳಿ... ಹೋಲಿಸಿದರೆ ನಮ್ಮೂರಿನ, ನಮ್ಮ ನಾಡಿನ ಚಳಿ ಕರುಣಾಳು.

ಚಳಿಗೆ ಮುದುಡಿ ಸತ್ತರು ಎಂದು ಇಲ್ಲಿ ಓದಿದ ನೆನಪಿಲ್ಲ. ಚಳಿಗಾಲ ಮೌನದ ಸುದೀರ್ಘ ಮೆರವಣಿಗೆ. ಬೆಚ್ಚನೆಯ ಸೂರಿದ್ದವರಿಗೆ ಇದು ಸುಖ. ಮುಂಜಾನೆಯ ಕಿರಣಗಳನ್ನು ಮುದುಕ- ಮುದುಕಿಯರು ಜೋರಾಗಿ ಕೆಮ್ಮುತ್ತ ಸ್ವಾಗತಿಸುತ್ತಾರೆ.

ಸಂಜೆ ಮುಂಜಾನೆ ಆಟದ ಮೈದಾನಗಳು, ಪಾರ್ಕುಗಳು ಖಾಲಿ ಹೊಡೆಯುತ್ತವೆ. ಅಡಕೆಯ ಸೋಗೆಗಳಿಂದ ತಟಪಟನೆ ಬೀಳುತ್ತಿರುವ ಮುಂಜಾನೆಯ ಇಬ್ಬನಿಗಳು ಒದ್ದೆ ಮಾಡಿದ ನೆಲ ಒಣಗಬೇಕಾದರೆ ಮಧ್ಯಾಹ್ನ. ಈ ಹಗಲುಗಳು ಎಷ್ಟೊಂದು ಚಿಕ್ಕವೆಂದರೆ, ಒದ್ದೆ ನೆಲ ಒಣಗುವ ಮುನ್ನವೇ ಅದು ಮತ್ತೆ ತಂಪಾಗುವ ಸಂಜೆಯೂ ಆಗಮಿಸಿ ಬಿಡುತ್ತದೆ.

ಹಾಲು ತುಂಬಿದ ಭತ್ತದ ತೆನೆಗಳು ನಿಧಾನವಾಗಿ ಜೇನುಬಣ್ಣಕ್ಕೆ ತಿರುಗುತ್ತ, ಸಂಜೆಯ ಗಾಳಿಗೆ ಸುಯ್ಯನೆ ಶಬ್ದ ಮಾಡುತ್ತ ಸಮುದ್ರದ ಅಲೆಗಳಂತೆ ಹೊಯ್ದಾಡಿ, ಅದುವರೆಗೆ ಬೆವರು ಹರಿಸಿದ ರೈತನಿಗೆ ನಿಟ್ಟುಸಿರಿನ ಫೀಲಿಂಗ್ ನೀಡುತ್ತವೆ. ಚಳಿಗಾಲದ ರಾತ್ರಿಗಳು ಎಷ್ಟೊಂದು ದೀರ್ಘವೆಂದು, ಹೊದೆಯಲು ರಗ್ಗಿಲ್ಲದ ಬಡವರಲ್ಲಿ ಕೇಳಬೇಕು. ಈ ರಾತ್ರಿಗಳು ಎಷ್ಟೊಂದು ಸುಖಕರವೆಂದು ನವದಂಪತಿಗಳನ್ನು ಕೇಳಬೇಕು. ಈ ರಾತ್ರಿಗಳು ಎಷ್ಟು ರಗಳೆಯದೆಂದು ರಾತ್ರಿ ಪಾಳಿಯವರಲ್ಲಿ ಕೇಳಬೇಕು.

ಈ ರಾತ್ರಿಗಳು ಎಷ್ಟು ಯಾತನಾದಾಯಕವೆಂದು ಜೈಲುವಾಸಿಗಳಲ್ಲಿ ಕೇಳಬೇಕು. ಈ ರಾತ್ರಿಗಳು ಎಷ್ಟು ಶ್ರಮದಾಯಕವೆಂದು ಲಾಂಗ್‌ಜರ್ನಿ ಬಸ್ ಚಾಲಕರಲ್ಲಿ, ರಾತ್ರಿ ರಾಣಿ ಯರಲ್ಲಿ ಕೇಳಬೇಕು. ಬೆಂಗಳೂರಿನ ಚಳಿಗಾಲದ ಮುಂಜಾನೆ ನಿಷ್ಕರುಣಿ. ಅದು ಶಾಲು ಹೊದ್ದು ನಡುಗುತ್ತಿರುವ ಹೆಣ್ಣುಮಕ್ಕಳನ್ನು ತುಂಬಿಕೊಂಡು ಗಾರ್ಮೆಂಟ್ ಫ್ಯಾಕ್ಟರಿಗಳತ್ತ, ಸ್ವೆಟರ್ ಜಾಕೆಟ್ ಹಾಕಿದ್ದ ಮಕ್ಕಳನ್ನು ತರುಬಿಕೊಂಡು ಶಾಲೆಗಳತ್ತ ಹೊರಟಿದೆ.

ಅದಕ್ಕೂ ಮುನ್ನ, ಮಬ್ಬಿನ ತೆರೆ ಪೂರ್ತಿ ತೆರೆಯುವ ಮೊದಲೇ, ಲಾಂಗ್ ಟ್ರಿಪ್ ಬಸ್‌ಗಳಿಂದ ಜನ ದಿಮಿದಿಮಿ ಇಳಿಯುತ್ತಿರುವಾಗ, ಅವರ ಮುಂದೆ ಪ್ರತ್ಯಕ್ಷರಾಗಿ ‘ಬಿಸ್ಸಿಬಿಸಿ ಕಾಫಿ ಚಾಯ್...’ ಎಂದು ಕೂಗುಹಾಕತೊಡಗಿದೆ. ‌ಬೀದಿಯ ತರಗೆಲೆಗಳನ್ನು ಪರಾಪರಾ ಗುಡಿಸು ತ್ತಿರುವ ಪೌರ ಕಾರ್ಮಿಕ ಮಹಿಳೆ, ಯಾರಿಗೋ ಬಯ್ಯುತ್ತಿರುವುದು ಇಲ್ಲಿಗೇ ಕೇಳುತ್ತಿದೆ.

ಸಂಜೆ ಬೀದಿಯ ಬದಿಯಲ್ಲಿ ಬೆಂಕಿ ಹಚ್ಚಿ ಬಿಸಿಯಾಗುತ್ತಾ ಕೂತಿರುವವರು, ಮುಂಜಾನೆ ಯಾರೋ ಹಚ್ಚಿ ಅರಿಹೋದ ಬೂದಿಗುಪ್ಪೆಗಳನ್ನು ನೋಡುತ್ತ ಕೆ.ಎಸ್. ನರಸಿಂಹಸ್ವಾಮಿ ಯವರ ‘ಗಡಿಯಾರದಂಗಡಿಯ ಮುಂದೆ’ ಕವನದ ಸಾಲುಗಳು ನೆನಪಾಗುತ್ತವೆ. ಅದು ಕಾಲದ ಹಾಡು. ಕಾಲದ ರುದ್ರಚಕ್ರಕ್ಕೆ ಸಿಲುಕಿ ಅಸಹಾಯಕತೆ ಯಿಂದ ತಿರುಗುತ್ತಿರುವ ಜೀವಚೈತನ್ಯ ಹಾಡಿಕೊಂಡ ಹಾಡು.

ಮಳೆ ನಿಂತು ಚಳಿ ಬಂತು. ಗಲ್ಲ ಬೆಳ್ಳಗೆ ಹುಡುಗಿ

ಬಿಳಿಹೂವ ಮುಟ್ಟಿಸಿದೆ ನನ್ನ ತುಟಿಗೆ

ಸಂಜೆಗೊಬ್ಬಳು ಮುದುಕಿ, ಕೊನೆಯ ಕೆಂಡವ ಕೆದಕಿ

ಎತ್ತಿ ಮುಡಿದಳು ಇದ್ದ ಗಂಟು ಜಡೆಗೆ

ಮಳೆ ನಿಂತುಹೋಗಿ ಚಳಿ ಬಂದ ಕಾಲದಲ್ಲಿ ಹೂವುಗಳೆಲ್ಲ ಬಿಳಿಯಾಗಿವೆ. ತುಟಿಗೆ ಮುಟ್ಟಿಸಿದರೂ ಅಲ್ಲಿ ಒದ್ದೆಯಿಲ್ಲದೆ, ಶುಷ್ಕ ಗಾಳಿಗೆ ಒಣಗಿದೆ. ಸಂಜೆ ಎಂಬುದು ದಿನದ ಸಂಜೆ ಮಾತ್ರವಲ್ಲದೆ ಬದುಕಿನ ಸಂಜೆಯೂ ಆಗಿದೆ. ಸಂಜೆಯೆಂಬ ಮುದುಕಿ ಉಳಿದ ಬೆಂಕಿಯನ್ನು ಕೆದಕಿ ಕಂಡುಕೊಂಡ ಒಂದೇ ಬೆಂಕಿ ಕೆಂಡವನ್ನು ದಿಗಂತವೆಂಬ ಜಡೆಗೆ ಇಟ್ಟಿದ್ದಾಳೆ.

ಜಗತ್ತು ನೋಡುತ್ತಿದೆ. ಗಡಿಯಾರದಂಗಡಿಯ ಮುಂದೆ ನಿಂತ ಕುದುರೆಗೆ ಅಲ್ಲಿನ ಕನ್ನಡಿ ಯಲ್ಲಿ ತನ್ನ ಪ್ರತಿಬಿಂಬವಷ್ಟೇ ಕಾಣುತ್ತಿಲ್ಲ. ಬದಲು ತನಗೆ ಕಟ್ಟಿದ ಕಣ್ಣುಪಟ್ಟಿಯೂ ಕಂಡು ಇನ್ನಷ್ಟು ದಿಗಿಲು. ಎಷ್ಟೊಂದು ಗಡಿಯಾರ ಅಂಗಡಿಯಲ್ಲಿ!

ಪ್ರತಿಯೊಬ್ಬನಿಗೂ ಅವನದೇ ಸಮಯ. ‘ಗಂಟೆ ಎಷ್ಟೆಂದು ಕೇಳಿದೆ ನೀನು. ಹೇಳಿದೆನೆ- ಗಡಿಯಾರ ನಡೆದಷ್ಟು ಗಂಟೆ’ ಎಂಬುದು ಕವಿಯ ಷರಾ. ಚಳಿಗಾಲದಲ್ಲಿ ಆಗುವುದೀಗ ಗಡಿಯಾರ ನಿಂತುಹೋದ ಅನುಭವ. ಅದರ ಬ್ಯಾಟರಿ ಯಾಕೋ ತುಸು ನಿಧಾನ ವಾದಂತಿದೆ. ನೆಲದಡಿ, ಬಿಲದಡಿ, ಹಿಮದಡಿ ಅವಿತು ಮಲಗಿ ನಿದ್ರೆಹೋಗಿ ಕಾಲ ಕಳೆಯುವ ಜೀವಗಳಿಗೆ ಈಗ ಕಾಲ ಸರಿಯುತ್ತಿದೆಯೋ ಇಲ್ಲವೋ ಯಾರಿಗೆ ಗೊತ್ತು. ಅದಕ್ಕೆ ಶಿಶಿರಸುಪ್ತಿ, ಚಳಿನಿದ್ರೆ ಎಂಬ ಚಂದದ ಹೆಸರು.

ಇಂಥ ಹೊತ್ತಿನಲ್ಲಿ ಷೇಕ್ಸ್‌ಪಿಯರ್‌ನ ಸಾನೆಟ್ಟನ್ನೋ ‘ಮಲೆಗಳಲ್ಲಿ ಮದುಮಗಳನ್ನೋ’ ಓದಿಕೊಳ್ಳುವುದು ಜೀವದಾಯಿನಿ. ಷೇಕ್ಸ್‌ಪಿಯರ್ ಬರೆಯುತ್ತಾನೆ: ನೀನಿಲ್ಲದ ವಿರಹದ ಸಮಯವೆಂದರೆ ಕಠಿಣ ಚಳಿಗಾಲ. ಎಂಥ ಕಠೋರ ಕತ್ತಲೆಯ ದಿನಗಳು. ಡಿಸೆಂಬರಿನ ತೀವ್ರ ಶುಷ್ಕತೆ. ಫಲಭರಿತ ದಿನಗಳೂ ನೀನಿಲ್ಲದೆ ಒಣಗಿದಂತಿವೆ. ಆದರೂ ಅನಾಥರಿಗೆ ಮುಂಬ ರುವ ಬೇಸಿಗೆಯ ಸುಗ್ಗಿಯ ಪ್ರೀತಿಯ ಸುಖದ ಹಂಬಲ. ಹಕ್ಕಿಗಳು ಮೌನವಾಗಿವೆ. ತುಸುವೆ ಹಾಡಿದರೂ ಅದು ಮಂಕು ಬಡಿದಂಥ ಚೀರು. ಎಲೆಗಳೂ ಮಂಕು, ಬಡಿದಂತೆ ಕುಳಿರು ಗಾಳಿಯ ಸೋಂಕು....