ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Thimmanna Bhagwat Column: ರಾಜ್ಯಪಾಲರ ಭಾಷಣ: ವಿವಾದವಿಲ್ಲದಿದ್ದರೆ ಯಾವತ್ತಿಗೂ ಭೂಷಣ

ಭಾರತದ ಪ್ರಜಾಪ್ರಭುತ್ವ ಬಹುತೇಕ ಇಂಗ್ಲೆಂಡಿನ ವ್ಯವಸ್ಥೆಯಂತೇ ಇದೆ. ಅಲ್ಲಿ ಹೇಗೆ ರಾಜ ಅಥವಾ ರಾಣಿ ಸಾಂವಿಧಾನಿಕ ಮುಖ್ಯಸ್ಥರೋ ನಮ್ಮಲ್ಲಿ ರಾಷ್ಟ್ರಪತಿಗಳು ಕೇಂದ್ರದಲ್ಲಿ ಮತ್ತು ರಾಜ್ಯಪಾಲರು ರಾಜ್ಯಗಳಲ್ಲಿ ಕಾರ್ಯಾಂಗದ ಮುಖ್ಯಸ್ಥರು. ಅವರದ್ದು ಕೇವಲ ಅಲಂಕಾರಿಕ ಹುದ್ದೆಯಲ್ಲ. ಬದಲಾಗಿ ಅನೇಕ ವಿಷಯಗಳಲ್ಲಿ ಅವರಿಗೆ ವಿವೇಚನಾಧಿಕಾರವಿದೆ. ಮಂತ್ರಿಮಂಡಲದ ಸಲಹೆಗಳನ್ನೆಲ್ಲಾ ಅಕ್ಷರಶಃ ಪಾಲಿಸಬೇಕಾಗಿಲ್ಲ

ರಾಜ್ಯಪಾಲರ ಭಾಷಣ: ವಿವಾದವಿಲ್ಲದಿದ್ದರೆ ಯಾವತ್ತಿಗೂ ಭೂಷಣ

-

Ashok Nayak
Ashok Nayak Jan 30, 2026 12:27 PM

ಕಾನೂನ್‌ ಸೆನ್ಸ್‌

ತಿಮ್ಮಣ್ಣ ಭಾಗ್ವತ್

ರಾಜ್ಯಪಾಲರು ಸಾಂವಿಧಾನಿಕ ಹುದ್ದೆಯನ್ನು ಹೊಂದಿದ್ದು 174ನೇ ವಿಧಿಯ ಪ್ರಕಾರ ರಾಜ್ಯ ಸರಕಾರದ ಕಾರ್ಯಗಳು ಕಾರ್ಯಾಂಗದ ಮುಖ್ಯಸ್ಥರಾದ ಅವರ ಹೆಸರಿನಲ್ಲಿಯೇ ನಡೆಯು ತ್ತವೆ. ಅಂದಮಾತ್ರಕ್ಕೆ ಅವರು ಸರ್ವಾಧಿಕಾರಿಗಳಲ್ಲ. ಸಂವಿಧಾನದ ಪ್ರಕಾರ ತಮ್ಮ ವ್ಯಕ್ತಿಗತ ವಿವೇಚನೆಯ ಆಧಾರದಲ್ಲಿ ಕಾರ್ಯನಿರ್ವಹಿಸುವ ಕೆಲ ಅಪವಾದಗಳನ್ನು ಹೊರತುಪಡಿಸಿ ರಾಜ್ಯಪಾಲರು ಮಂತ್ರಿಮಂಡಲದ ಸಲಹೆಯ ಪ್ರಕಾರವೇ ಕಾರ್ಯ ನಿರ್ವಹಿಸಬೇಕಾಗುತ್ತದೆ.

ಘನತೆವೆತ್ತ ರಾಜ್ಯಪಾಲರಾದ ಥಾವರ್ ಚಾಂದ್ ಗೆಹ್ಲೋಟ್‌ರವರು ರಾಜ್ಯದ ಶಾಸನ ಸಭೆಗಳ ಜಂಟಿ ಅಧಿವೇಶನದಲ್ಲಿ ಮಾಡಿದ ಭಾಷಣದ ವಿಷಯದಲ್ಲಿ ವಿವಾದ ತಲೆದೋರಿದೆ. ರಾಜ್ಯದ ಮಂತ್ರಿ ಮಂಡಲ ಸಿದ್ಧಪಡಿಸಿದ ಭಾಷಣವನ್ನು ಪೂರ್ತಿ ಓದದೇ ಸದನದಿಂದ ನಿರ್ಗಮಿಸಿದ ರಾಜ್ಯಪಾಲರ ವರ್ತನೆಯನ್ನು ಮುಖ್ಯಮಂತ್ರಿಗಳು ಮತ್ತು ಆಳುವ ಪಕ್ಷದ ಇತರ ಸದಸ್ಯರು ಟೀಕಿಸಿದರೆ, ಬಿಜೆಪಿಯ ನಾಯಕರು, “ರಾಜ್ಯ ಸರಕಾರವು ಮಾನ್ಯ ರಾಜ್ಯಪಾಲರಿಗೆ ಅವಮಾನ ಮಾಡಿದೆ" ಎಂದು ಆರೋಪಿಸಿದ್ದಾರೆ.

ಮಂತ್ರಿಮಂಡಲ ಸಿದ್ಧಪಡಿಸಿದ ಭಾಷಣವನ್ನು ಪೂರ್ತಿ ಓದದ ರಾಜ್ಯಪಾಲರ ಕ್ರಮವನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸುವುದಾಗಿ ಮಾನ್ಯ ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದು ವರದಿಯಾಗಿದೆ.

ಇಂಥದೇ ಘಟನೆಗಳು ಕಾಂಗ್ರೆಸ್ ಸರಕಾರವಿರುವ ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲೂ ನಡೆದಿವೆ. ಸಂವಿಧಾನದ 176(1) ನೇ ವಿಧಿಯ ಪ್ರಕಾರ ರಾಜ್ಯಗಳ ಚುನಾವಣೆ ನಡೆದ ನಂತರದ ವಿಧಾನಸಭೆಯ ಮೊದಲ ಅಧಿವೇಶನದ ಮೊದಲನೇ ದಿನ ಮತ್ತು ಪ್ರತಿ ವರ್ಷದ ಮೊದಲ ಅಧಿವೇಶನದ ಮೊದಲನೇ ದಿನ ವಿಧಾನಸಭೆಯನ್ನು ಉದ್ದೇಶಿಸಿ (ವಿಧಾನ ಪರಿಷತ್ ಇರುವ ರಾಜ್ಯ ಗಳಲ್ಲಿ ಎರಡೂ ಸದನಗಳ ಜಂಟಿ ಅಧಿವೇಶವನ್ನು ಉದ್ದೇಶಿಸಿ) ರಾಜ್ಯಪಾಲರು ಭಾಷಣ ಮಾಡಬೇಕು.

ಇಲ್ಲಿ The Governor 'Shall' address ಎಂದು ಹೇಳಲಾಗಿರುವುದರಿಂದ ಹಾಗೆ ಭಾಷಣ ಮಾಡು ವುದು ಕಡ್ಡಾಯ ಎಂಬ ಅರ್ಥ ಕೊಡುತ್ತದೆ. ಇದೇ ರೀತಿಯ ನಿಯಮ ರಾಷ್ಟ್ರಪತಿಗಳಿಗೂ ಅನ್ವಯಿಸುತ್ತದೆ. ಆದರೆ ಅವರು ಮಾಡುವ ಭಾಷಣ ಹೇಗಿರಬೇಕು, ಅದನ್ನು ಯಾರು ಸಿದ್ಧಪಡಿಸ ಬೇಕು ಎಂಬುದನ್ನು ಸಂವಿಧಾನ ನೇರವಾಗಿ ಹೇಳಿಲ್ಲ. ರಾಜ್ಯಪಾಲರು ತಮ್ಮ ಭಾಷಣದಲ್ಲಿ ಸದನದ ಅಧಿವೇಶನವನ್ನು ಕರೆದ ಕಾರಣವನ್ನು ತಿಳಿಸಬೇಕು ಎಂದಷ್ಟೇ ಹೇಳಿದೆ. ರಾಜ್ಯಪಾಲರು ಸಾಂವಿ ಧಾನಿಕ ಹುದ್ದೆಯನ್ನು ಹೊಂದಿದ್ದು 174ನೇ ವಿಧಿಯ ಪ್ರಕಾರ ರಾಜ್ಯ ಸರಕಾರದ ಕಾರ್ಯಗಳು ಕಾರ್ಯಾಂಗದ ಮುಖ್ಯಸ್ಥರಾದ ಅವರ ಹೆಸರಿನಲ್ಲಿಯೇ ನಡೆಯುತ್ತವೆ.

ಇದನ್ನೂ ಓದಿ: Thimmanna Bhagwath Column: ತಾಳಮದ್ದಳೆ ʼಅಧಿಕ ಪ್ರಸಂಗʼ ವಾದರೆ, ಪ್ರೇಕ್ಷಕರು ಯಾಕೆ ಮೂಕರಾಗಿರಬೇಕು ?

ಅಂದಮಾತ್ರಕ್ಕೆ ಅವರು ಸರ್ವಾಧಿಕಾರಿಗಳಲ್ಲ. ಸಂವಿಧಾನದ ಪ್ರಕಾರ ತಮ್ಮ ವ್ಯಕ್ತಿಗತ ವಿವೇಚನೆ ಯ ಆಧಾರದಲ್ಲಿ ಕಾರ್ಯನಿರ್ವಹಿಸುವ ಕೆಲ ಅಪವಾದಗಳನ್ನು ಹೊರತುಪಡಿಸಿ ರಾಜ್ಯಪಾಲರು ಮಂತ್ರಿಮಂಡಲದ ಸಲಹೆಯ ಪ್ರಕಾರವೇ ಕಾರ್ಯನಿರ್ವಹಿಸಬೇಕಾಗುತ್ತದೆ.

74(1) ನೇ ವಿಧಿಯ ಪ್ರಕಾರ ರಾಷ್ಟ್ರಪತಿಗಳು ಕೇಂದ್ರ ಮಂತ್ರಿಮಂಡಲದ ಸಹಾಯ ಮತ್ತು ಸಲಹೆಯ ಪ್ರಕಾರ ತನ್ನ ಸಂವಿಧಾನದತ್ತ ಕರ್ತವ್ಯಗಳನ್ನು ನಿರ್ವಹಿಸಬೇಕು. ಆದರೆ ರಾಜ್ಯಪಾಲರ ಕಾರ್ಯ ನಿರ್ವಹಣೆಯ ವಿಷಯದಲ್ಲಿ 163ನೇ ವಿಧಿ 74ನೇ ವಿಧಿಗಿಂತ ಸ್ವಲ್ಪ ಭಿನ್ನವಾಗಿದೆ.

163ನೇ ವಿಧಿಯ ಅನುಸಾರ, ರಾಜ್ಯದ ಮಂತ್ರಿಮಂಡಲದ ಸಹಾಯ ಮತ್ತು ಸಲಹೆಯ ಪ್ರಕಾರ ರಾಜ್ಯಪಾಲರು ಕಾರ್ಯನಿರ್ವಹಿಸಬೇಕು ಎಂದು ಇದೆಯಾದರೂ ಅವರು ತಮ್ಮ ವಿವೇಚನೆಯ ಆಧಾರದಲ್ಲಿ ನಿರ್ವಹಿಸಬಹುದಾದ ಕಾರ್ಯಗಳಿಗೆ ಇದು ಅನ್ವಯವಾಗುವದಿಲ್ಲ.

If any question arises whether any matter is or is not a matter as respects which the Governor is by or under this Constitution required to act in his discretion, the decision of the Governor in his discretion shall be final, and the validity of anything done by the Gover nor shall not be called in question on the ground that he ought or ought not to have acted in his discretion.

ಇದರ ಅರ್ಥವೆಂದರೆ, ಯಾವೆಲ್ಲ ವಿಷಯಗಳಲ್ಲಿ ರಾಜ್ಯಪಾಲರು ತಮ್ಮ ವಿವೇಚನೆಯನ್ನು ಬಳಸ ಬಹುದೋ ಅಲ್ಲಿ ಅವರ ನಿರ್ಣಯವೇ ಅಂತಿಮ ಮತ್ತು ಅದು ಪ್ರಶ್ನಾರ್ಹವಾಗುವುದಿಲ್ಲ. ರಾಜ್ಯ ಪಾಲರ ಕಾರ್ಯನಿರ್ವಹಣೆಯ ವಿಷಯದಲ್ಲಿ ಸುಪ್ರೀಂ ಕೋರ್ಟು ಅನೇಕ ಪ್ರಕರಣಗಳಲ್ಲಿ ಆದೇಶ ನೀಡಿದೆ. ‘ಶಮ್‌ಶೇರ್ ಸಿಂಗ್ ಮತ್ತು ಇತರರು ವರ್ಸಸ್ ಪಂಜಾಬ್ ಸರಕಾರ’, ‘ನಬಮ್ ರೆಬಿಯಾ ವರ್ಸಸ್ ಡೆಪ್ಯುಟಿ ಸ್ಪೀಕರ್ ಅರುಣಾಚಲ ಪ್ರದೇಶ’, ‘ಎಮ್.ಪಿ.ಪೊಲೀಸ್ ಎಸ್ಟಾಬ್ಲಿಶ್ಮೆಂಟ್ ವರ್ಸಸ್ ಮಧ್ಯಪ್ರದೇಶ ಸರಕಾರ’ ಪ್ರಕರಣಗಳು ಈ ಪೈಕಿ ಮುಖ್ಯವಾದಂಥವು. ‌

Governor Gehlot

ಭಾರತದ ಪ್ರಜಾಪ್ರಭುತ್ವ ಬಹುತೇಕ ಇಂಗ್ಲೆಂಡಿನ ವ್ಯವಸ್ಥೆಯಂತೇ ಇದೆ. ಅಲ್ಲಿ ಹೇಗೆ ರಾಜ ಅಥವಾ ರಾಣಿ ಸಾಂವಿಧಾನಿಕ ಮುಖ್ಯಸ್ಥರೋ ನಮ್ಮಲ್ಲಿ ರಾಷ್ಟ್ರಪತಿಗಳು ಕೇಂದ್ರದಲ್ಲಿ ಮತ್ತು ರಾಜ್ಯಪಾಲರು ರಾಜ್ಯಗಳಲ್ಲಿ ಕಾರ್ಯಾಂಗದ ಮುಖ್ಯಸ್ಥರು. ಅವರದ್ದು ಕೇವಲ ಅಲಂಕಾರಿಕ ಹುದ್ದೆಯಲ್ಲ. ಬದಲಾಗಿ ಅನೇಕ ವಿಷಯಗಳಲ್ಲಿ ಅವರಿಗೆ ವಿವೇಚನಾಧಿಕಾರವಿದೆ. ಮಂತ್ರಿಮಂಡಲದ ಸಲಹೆ ಗಳನ್ನೆಲ್ಲಾ ಅಕ್ಷರಶಃ ಪಾಲಿಸಬೇಕಾಗಿಲ್ಲ. ಎಲ್ಲಾ ವಿಷಯಗಳಲ್ಲಿ ವಿವರಣೆ ಕೇಳಬಹುದು, ಸಲಹೆ ಗಳನ್ನು ನೀಡಬಹುದು ಹಾಗೂ ಮಂತ್ರಿಮಂಡಳದ ಪುನರ್‌ಪರಿಶೀಲನೆಗೆ ಕಳುಹಿಸಬಹುದು. ತಮ್ಮ ವಿವೇಚನೆಯ ಅಧಿಕಾರವಿರುವ ವಿಷಯಗಳಲ್ಲಿ ಸ್ವಂತ ನಿರ್ಧಾರ ಕೈಗೊಳ್ಳಬಹುದು.

ರಾಜ್ಯಪಾಲರ ಭಾಷಣವೂ ಒಂದು ಕಾರ್ಯಾಂಗ ವಿಷಯವೇ ಆಗುತ್ತದೆ. ಆದ್ದರಿಂದ ಅವರು ರಾಜ್ಯ ಮಂತ್ರಿಮಂಡಲ ತಯಾರಿಸಿದ ಭಾಷಣವನ್ನೇ ಓದಬೇಕಾಗುತ್ತದೆ ಎಂಬುದು ಅನೇಕರ ವಾದ. ಆದರೆ ತಮ್ಮ ಭಾಷಣವನ್ನು ರಾಜಕೀಯಕ್ಕೆ ಬಳಸುವ ಪ್ರಯತ್ನವನ್ನು ವಿರೋಧಿಸುವ ಹಕ್ಕು ಖಂಡಿತ ರಾಜ್ಯಪಾಲರಿಗೆ ಇದೆ.

ರಾಜಕೀಯದಲ್ಲಿ ಅವರು ಹೇಗೆ ಭಾಗವಹಿಸುವಂತಿಲ್ಲವೋ, ರಾಜಕೀಯಕ್ಕೆ ತಮ್ಮನ್ನು ಬಳಸಲು ಅವರು ಅವಕಾಶ ನೀಡಿದರೆ ಅದು ಸಂವಿಧಾನದ ರಕ್ಷಕರಾಗಿ ಅವರ ಕರ್ತವ್ಯದ ಚ್ಯುತಿಯಾಗುತ್ತದೆ. ‘ಎಮ್.ಪಿ. ಪೊಲೀಸ್ ಎಸ್ಟಾಬ್ಲಿಶ್‌ಮೆಂಟ್ ವರ್ಸಸ್ ಮಧ್ಯಪ್ರದೇಶ ಸರಕಾರ’ ಪ್ರಕರಣದಲ್ಲಿ ಸುಪ್ರೀಂ ಕೋರ್ಟಿನ ಅವಲೋಕನದ ಸಾರಾಂಶ ಹೀಗಿದೆ: “ಸಾಮಾನ್ಯ ನಿಯಮವೆಂದರೆ ರಾಜ್ಯಪಾಲರು ರಾಜ್ಯ ಮಂತ್ರಿಮಂಡಲದ ಸಲಹೆಯ ಪ್ರಕಾರವೇ ಕಾರ್ಯನಿರ್ವಹಿಸಬೇಕು. ಆದರೆ ಕೆಲವು ಅಪವಾದದ ಸಂದರ್ಭಗಳಲ್ಲಿ ರಾಜ್ಯಪಾಲರು ತಮ್ಮ ಸ್ವಂತ ವಿವೇಚನೆಯ ಮೇರೆಗೆ ಕಾರ್ಯ ನಿರ್ವಹಿಸಬಹುದು. ಅಂಥ ಕೆಲವು ಸಂದರ್ಭಗಳನ್ನು ಈ ಆದೇಶದಲ್ಲಿ ಹೇಳಲಾಗಿದೆ.

ಆದರೆ ಇಲ್ಲಿ ಹೇಳಲಾದ ಸಂದರ್ಭಗಳೇ ಅಂತಿಮ ಯಾದಿಯಲ್ಲ. ಇನ್ನೂ ಕೆಲವು ಸಲ ಪ್ರಜಾ ಪ್ರಭುತ್ವದ ಮೂಲತತ್ವಗಳಿಗೆ ಅಪಾಯವಿರುವ ಸಂದರ್ಭಗಳಲ್ಲಿ ಮಂತ್ರಿಮಂಡಲದ ಸಲಹೆಯಲ್ಲಿ ಪಕ್ಷಪಾತಿ ಧೋರಣೆ (Bias) ಎದ್ದು ಕಾಣುವಂತಿದ್ದರೆ ರಾಜ್ಯಪಾಲರು ಅಂಥ ಸಲಹೆಗಳಿಗೆ ವ್ಯತಿರಿಕ್ತ ವಾದ ನಿರ್ಣಯವನ್ನು ಕೈಗೊಳ್ಳಬಹುದು".

ರಾಷ್ಟ್ರಪತಿಗಳು ಮತ್ತು ರಾಜ್ಯಪಾಲರು ಪ್ರಮಾಣವಚನ ಸ್ವೀಕಾರದ ವೇಳೆ ಸಂವಿಧಾನದ ರಕ್ಷಣೆಯ ಶಪಥವನ್ನು ಸ್ವೀಕರಿಸುತ್ತಾರೆ. ಆದ್ದರಿಂದ ಸಂವಿಧಾನದ ರಕ್ಷಣೆ ಅವರ ಪ್ರಾಥಮಿಕ ಹೊಣೆ ಯಾಗುತ್ತದೆ. ಮಂತ್ರಿಮಂಡಲದ ಯಾವುದೇ ಸಲಹೆಗಳು ಅಥವಾ ವಿಧೇಯಕಗಳು ಸಂವಿಧಾನದ ಕಲಮುಗಳಿಗೆ ವ್ಯತಿರಿಕ್ತವಾಗಿದ್ದರೆ ಅವನ್ನು ಪರಿಗಣಿಸುವಾಗ ಅವರು ತಮ್ಮ ವಿವೇಚನೆಯನ್ನು ಬಳಸುವ ಅಧಿಕಾರ ಹೊಂದಿರುತ್ತಾರೆ. ಈ ವಿಷಯದಲ್ಲಿ ಇತ್ತೀಚೆಗೆ ರಾಷ್ಟ್ರಪತಿಗಳು 143ನೇ ವಿಧಿ ಯನ್ವಯ ಕೇಳಿದ ಪ್ರಶ್ನೆಗಳಿಗೆ ನೀಡಿದ ಉತ್ತರದಲ್ಲಿ ಸುಪ್ರೀಂ ಕೋರ್ಟು ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದೆ.

“ಒಂದು ವೇಳೆ ಅವರಿಗೆ ವಿವೇಚನಾಽಕಾರವಿಲ್ಲವೆಂದು ಪರಿಗಣಿಸುವುದಾದರೆ, ಆಗ ಮಂತ್ರಿಮಂಡಲ ದ ಸಲಹೆ ಸಂವಿಧಾನಕ್ಕೆ ವಿರುದ್ಧವಿದ್ದರೂ ರಾಜ್ಯಪಾಲರು ಅಂಥ ಸಲಹೆಯ ಪ್ರಕಾರವೇ ನಡೆಯ ಬೇಕಾಗುತ್ತದೆ. ಹಾಗಾದಲ್ಲಿ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಸಂವಿಧಾನವನ್ನು ರಕ್ಷಿಸುವ ತಮ್ಮ ಕರ್ತವ್ಯದಲ್ಲಿ ವಿಫಲರಾಗುತ್ತಾರೆ" ಎಂದು ಸುಪ್ರೀಂ ಕೋರ್ಟು ಸ್ಪಷ್ಟಪಡಿಸಿದೆ.

ಅಂಥ ವಿವೇಚನೆಯ ಅಧಿಕಾರವಿರುವ ವಿಷಯಗಳನ್ನು ಸಂವಿಧಾನದಲ್ಲಿ ನೇರವಾಗಿ ಹೇಳದಿರುವ ಸಂದರ್ಭಗಳಲ್ಲಿ ಸಂವಿಧಾನದ ಆಶಯಗಳಿಗನುಗುಣವಾಗಿ ಅರ್ಥೈಸಿಕೊಳ್ಳಬೇಕಾಗುವುದು. (the circumstances or occasions where the Governor is to discharge his functions without being bound by the aid and advice of the Council of Ministers, are either expressly provided, or through necessary implication where the constitutional context requires exercise of this discretion.) ‘ತಮಿಳುನಾಡು ಸರಕಾರ ವರ್ಸಸ್ ತಮಿಳುನಾಡು ರಾಜ್ಯಪಾಲರು’ ಪ್ರಕರಣದಲ್ಲಿ ಶಮ್‌ಶೇರ್ ಸಿಂಗ್ ಪ್ರಕರಣದ ಅದೇಶವನ್ನು ಅರ್ಥೈಸಿರುವ ಪರಿ ಸರಿಯಲ್ಲವೆಂದು ಹೇಳಿದ ಸುಪ್ರಿಂ ಕೋರ್ಟು, ರಾಜ್ಯಪಾಲರಿಗೆ ಕೇವಲ ಸಂವಿಧಾನದಲ್ಲಿ ನಿರ್ದಿಷ್ಟಪಡಿಸಿದ ಸಂದರ್ಭಗಳಲ್ಲಿ ಮಾತ್ರ ವಿವೇಚನಾಧಿಕಾರವಿದೆ ಎಂಬುದು ಸರಿಯಲ್ಲವೆಂದಿತು.

ಭಾರತದ ಗಣತಂತ್ರ ವ್ಯವಸ್ಥೆಯಲ್ಲಿ ರಾಜ್ಯಗಳು ತಮಗೆ ಸಂಬಂಧಿಸಿದ ವಿಷಯಗಳಲ್ಲಿ ಸ್ವತಂತ್ರ ಅಽಕಾರ ಹೊಂದಿದ್ದರೂ ಸಂಸತ್ತು ಮತ್ತು ಕೇಂದ್ರ ಮಂತ್ರಿಮಂಡಲಗಳಿಗೆ ಹೆಚ್ಚಿನ ಅಧಿಕಾರವಿದೆ. ರಾಜ್ಯಪಾಲರ ನಿರ್ಣಯಗಳು ಅನೇಕ ಸಲ ಅವರ ವಿವೇಚನೆಗಿಂತ ಹೆಚ್ಚಾಗಿ *ಅಪರೋಕ್ಷವಾಗಿ* ಕೇಂದ್ರ ಮಂತ್ರಿಮಂಡಲದ ಸೂಚನೆಗಳ ಪ್ರಕಾರ ನಡೆಯುತ್ತವೆ.

ಕೇಂದ್ರ ಮಂತ್ರಿಮಂಡಲ ಸಂಸತ್ತಿಗೆ ಉತ್ತರದಾಯಿತ್ವ ಹೊಂದಿರುವುದರಿಂದ ರಾಜ್ಯಪಾಲರ ಯಾವುದೇ ನಿರ್ಣಯಗಳು ಸರ್ವಾಧಿಕಾರದ ನಿರ್ಣಯಗಳಾಗಿರುವುದಿಲ್ಲ. ರಾಜ್ಯಗಳು ಗಣತಂತ್ರ ವ್ಯವಸ್ಥೆಯ ವಿಶಾಲ ತಳಹದಿಯ ಅಡಿಯಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಹಾಗೆ ಮಾಡದೆ ತಮಗೆ ಇಚ್ಛೆ ಬಂದಂತೆ ವರ್ತಿಸಿದರೆ ಗಣತಂತ್ರ ವ್ಯವಸ್ಥೆಗೆ ಅಪಾಯವಾಗುತ್ತದೆ ಮತ್ತು ಅದು ಸಂವಿಧಾನದ ಆಶಯಗಳಿಗೂ ವ್ಯತಿರಿಕ್ತವಾಗುತ್ತದೆ.

ರಾಜ್ಯ ಮಂತ್ರಿಮಂಡಲ ಸಿದ್ಧ ಪಡಿಸಿದ ಭಾಷಣದಲ್ಲಿ ಕೇಂದ್ರ ಸರಕಾರದ ನೀತಿಗಳ ವಿರುದ್ಧ ಹಾಗೂ ರಾಜ್ಯಕ್ಕೆ ಕೇಂದ್ರ ಸರಕಾರ ನೀಡಿದ ಹಣಕಾಸು ಮಂಜೂರಿ ಕುರಿತು ಟೀಕೆಗಳಿದ್ದವು ಎನ್ನ ಲಾಗುತ್ತಿದೆ. ಸಂಸತ್ತಿನಲ್ಲಿ ಅಂಗೀಕಾರವಾಗಿ ರಾಷ್ಟ್ರಪತಿಗಳ ಅಂಕಿತ ಪಡೆದ ವಿಬಿ- ಜಿ ರಾಮ್ ಜಿ ಕಾಯಿದೆ ಕುರಿತು ಕೂಡಾ ಟೀಕೆಗಳಿದ್ದವು ಎಂದು ವರದಿಯಾಗಿದೆ.

ತಮ್ಮ ಭಾಷಣದಲ್ಲಿ ಅಂಥ ಟೀಕೆಗಳನ್ನು ಮಾಡಲು ರಾಜ್ಯಪಾಲರು ಒಪ್ಪದಿರುವುದು ಆಕ್ಷೇಪಾರ್ಹ ವೆನಿಸುವುದಿಲ್ಲ. ಯಾಕೆಂದರೆ ಮೊದಲನೆಯದಾಗಿ ಹಾಗೆ ರಾಜ್ಯಪಾಲರ ಬಾಯಲ್ಲಿ ಟೀಕೆ ಮಾಡಿಸುವ ಮೂಲಕ ರಾಜಕೀಯ ಉದ್ದೇಶಗಳಿಗೆ ಅವರನ್ನು ಬಳಸಿಕೊಂಡಂತಾಗುತ್ತದೆ ಮತ್ತು ಅಂಥ ಟೀಕೆಗಳ ಸತ್ಯಾಸತ್ಯತೆಯನ್ನು ತಿಳಿಯದೆ ಹಾಗೆ ಟೀಕೆ ಮಾಡುವುದು ರಾಜ್ಯಪಾಲರ ಘನತೆಗೆ ತಕ್ಕುದಾಗಿರುವುದಿಲ್ಲ.

ಅಲ್ಲದೆ, ಕೇಂದ್ರ ಸರಕಾರದ ಕಾಯಿದೆಗಳ ವಿರುದ್ಧ ಟೀಕೆ ಮಾಡಿದರೆ ತಮ್ಮನ್ನು ನೇಮಕ ಮಾಡಿದ ರಾಷ್ಟ್ರಪತಿಗಳ ವಿರುದ್ಧವೇ ಟೀಕೆ ಮಾಡಿದಂತಾಗುತ್ತದೆ. ಆ ಕಾರಣಕ್ಕೆ ರಾಜ್ಯಪಾಲರು ಸರಕಾರ ಸಿದ್ಧಪಡಿಸಿದ ಭಾಷಣ ಓದಲು ನಿರಾಕರಿಸಿರುವುದು ಸೂಕ್ತವಾಗುತ್ತದೆ.

ಎಲ್ಲದಕ್ಕಿಂತ ಮುಖ್ಯವಾಗಿ ರಾಜ್ಯಪಾಲರು ಮತ್ತು ರಾಜ್ಯ ಸರಕಾರದ ಸಂಬಂಧ ಸಮತೋಲಿತ ವಾಗಿರಬೇಕು. ಸಾಂವಿಧಾನಿಕ ಹುದ್ದೆಯಲ್ಲಿರುವ ಅವರನ್ನು ಅವರ ಘನತೆಗೆ ತಕ್ಕುದಾಗಿ ನಡೆಸಿ ಕೊಳ್ಳುವ ಹೊಣೆ ರಾಜ್ಯ ಸರಕಾರಕ್ಕಿದೆ. ಹಾಗೆ ಮಾಡದೆ ಅವರನ್ನು ಟೀಕಿಸುವುದು ಅಥವಾ ಅವಮಾನಿಸುವುದು ಗಣತಂತ್ರ ವ್ಯವಸ್ಥೆಗೆ ವಿರುದ್ಧವಾಗಿರುತ್ತದೆ.

ಹಾಗೆ ಮಾಡುತ್ತ ಹೋದರೆ ಅದು ಇತರ ಸಾಂವಿಧಾನಿಕ ಹುದ್ದೆಗಳಿಗೂ ವಿಸ್ತರಿಸಬಹುದು. ಇತ್ತೀಚೆಗೆ ತಮಿಳುನಾಡು ಉಚ್ಚ ನ್ಯಾಯಾಲಯದ ಮಧುರೈ ಪೀಠದ ಅದೇಶವೊಂದರ ವಿಷಯದಲ್ಲಿ ಜಸ್ಟೀಸ್ ಸ್ವಾಮಿನಾಥನ್ ವಿರುದ್ಧ ಕೆಲವು ರಾಜಕಾರಣಿಗಳು ವೈಯಕ್ತಿಕ ಟೀಕೆಗಳನ್ನು ಮಾಡಿದ್ದರು. ಇಂಥ ಬೆಳವಣಿಗೆಗಳು ಸ್ವಾಗತಾರ್ಹವಲ್ಲ.

ರಾಜಕಾರಣಿಗಳು ಇಂಥ ವಿಷಯಗಳಲ್ಲಿ ಹೆಚ್ಚಿನ ಪ್ರಬುದ್ಧತೆ ಪ್ರದರ್ಶಿಸಬೇಕಾದ ಅಗತ್ಯವಿದೆ. ಕೇವಲ ರಾಜಕೀಯ ಲಾಭಕ್ಕಾಗಿಯೋ ಅಥವಾ ತಮ್ಮ ವೈ-ಲ್ಯಗಳನ್ನು ಮುಚ್ಚಿಕೊಳ್ಳುವ ಕುರಿತಾ ಗಿಯೋ ಸಾಂವಿಧಾನಿಕ ಹುದ್ದೆಗಳನ್ನು ವಿವಾದಕ್ಕೆಡೆಮಾಡುವುದು ರಾಜಕೀಯ ಪ್ರಬುದ್ಧತೆ ಯೆನಿಸುವುದಿಲ್ಲ.

(ಲೇಖಕರು ಕಾನೂನು ತಜ್ಞರು ಮತ್ತು ಕೆವಿಜಿ ಬ್ಯಾಂಕ್‌ನ

ನಿವೃತ್ತ ಎಜಿಎಂ)