Gururaj Gantihole Column: ದುಡಿಮೆಯೇ ಘನತೆ ಎಂದು ಸಾರುವ ಕಾಲೇಜು

ಅಭಿವೃದ್ಧಿ, ಶಿಕ್ಷಣ, ಯುವಜನತೆಗೆ ಅಗತ್ಯವಿರುವ ಕೌಶಲಯುತ ತರಬೇತಿಗಳ ಕುರಿತಂತೆ ಅಂದಿನ ಬ್ರಿಟಿಷ್ ಆಡಳಿತ ಗಂಭೀರವಾಗಿ ಚಿಂತಿಸಿತು. ಅಂತೆಯೇ ಅಂದಿನ ಮದ್ರಾಸು ಬ್ರಿಟಿಷ್ ಸರಕಾರ ಕೂಡ ಭಾರತದಲ್ಲಿ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿತು

gururaj_gantihole column
Profile Ashok Nayak January 16, 2025

Source : Vishwavani Daily News Paper

ಗಂಟಾಘೋಷ

ಗುರುರಾಜ್‌ ಗಂಟಿಹೊಳೆ

ವಿಶ್ವಯುದ್ಧದ ನಂತರ ವಿವಿಧ ದೇಶಗಳಲ್ಲಿ ಉಂಟಾದ ಭೀಕರತೆ, ಆಹಾರದ ಕೊರತೆ, ದುಡಿಯುವ ವರ್ಗದ ಅನುಪಸ್ಥಿತಿ ಇತ್ಯಾದಿ ವಿಚಾರಗಳು ಇನ್ನಷ್ಟು ಭಯಾನಕವಾಗುವ ಲಕ್ಷಣ ಗಳು ಗೋಚರಿಸತೊಡಗಿದವು.

ಹೀಗಾಗಿ, ಅಭಿವೃದ್ಧಿ, ಶಿಕ್ಷಣ, ಯುವಜನತೆಗೆ ಅಗತ್ಯವಿರುವ ಕೌಶಲಯುತ ತರಬೇತಿಗಳ ಕುರಿತಂತೆ ಅಂದಿನ ಬ್ರಿಟಿಷ್ ಆಡಳಿತ ಗಂಭೀರವಾಗಿ ಚಿಂತಿಸಿತು. ಅಂತೆಯೇ ಅಂದಿನ ಮದ್ರಾಸು ಬ್ರಿಟಿಷ್ ಸರಕಾರ ಕೂಡ ಭಾರತದಲ್ಲಿ ವಿವಿಧ ಯೋಜನೆಗಳನ್ನು ಹಮ್ಮಿ ಕೊಂಡಿತು.

ಇದರ ಭಾಗವಾಗಿ, ತಾಂತ್ರಿಕ ಶಿಕ್ಷಣವನ್ನು ಪ್ರಾರಂಭಿಸಬೇಕೆಂದು ನಿರ್ಧರಿಸಿ ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದಲ್ಲಿ ತಲಾ ಒಂದೊಂದು ಪಾಲಿಟೆಕ್ನಿಕ್‌ಗಳನ್ನು ಆರಂಭಿಸ ಲಾಯಿತು. ಆದರೆ, ನಮ್ಮ ರಾಜ್ಯಕ್ಕೂ ಒಂದು ಪಾಲಿಟೆಕ್ನಿಕ್ ಬೇಕೆಂದು ಹಠತೊಟ್ಟು, ಸಂಬಂಧಿತ ಯೋಜನೆ ರೂಪಿಸಿ, ಬ್ರಿಟಿಷ್ ಆಡಳಿತದ ಮೇಲೆ ಒತ್ತಡ ತಂದು, ಅಂದಿನ ಮದ್ರಾಸ್ ಪ್ರಾಂತ್ಯಕ್ಕೆ ಒಳಪಟ್ಟಿದ್ದ ಮಂಗಳೂರಿನಲ್ಲಿ (ನಂತರದಲ್ಲಿ ಮಂಗಳೂರು ಮೈಸೂರು ಪ್ರಾಂತ್ಯಕ್ಕೆ ಸೇರಿಕೊಂಡು, ಮೈಸೂರು ರಾಜ್ಯದ ಭಾಗವಾಯಿತು) 4ನೇ ಸಂಸ್ಥೆಯು ಸ್ಥಾಪನೆಯಾಗಲು ಕಾರಣರಾಗಿದ್ದು ರಾವ್ ಬಹದ್ದೂರ್ ನಿಟ್ಟೆಗುತ್ತು ಶರತ್ ಭಂಡಾರಿ ಎಂಬುವವರು.

ಇಲ್ಲೊಂದು ಕೌತುಕದ ಸಂಗತಿಯಿದೆ. ಮದ್ರಾಸ್ ಪ್ರಾಂತ್ಯದಿಂದ ಬಿಡುಗಡೆ ಹೊಂದಿದ ಮೈಸೂರು ರಾಜ್ಯವು ಸ್ವಾತಂತ್ರ್ಯಾನಂತರದಲ್ಲಿ ಭಾರತ ಒಕ್ಕೂಟಕ್ಕೆ ಸೇರಿಕೊಂಡು ಸ್ವತಂತ್ರ ರಾಜ್ಯವಾಯಿತು. ಇದಕ್ಕೆ ಕರ್ನಾಟಕ ಎಂದು ನಾಮಕರಣವಾಗಿದ್ದು 1973ರ ನವೆಂಬರ್ 1ರಂದು. ಆದರೆ, ಬ್ರಿಟಿಷರ ಕಾಲದಲ್ಲಿ ಮಂಗಳೂರಿನಲ್ಲಿ ಶುರುವಾದ ಈ ಪಾಲಿಟೆಕ್ನಿಕ್, 1946ರ ಆರಂಭದಿಂದಲೇ ‘ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜು’ ಎಂಬ ಹೆಸರಿನ ಮೂಲಕ ‘ಕರ್ನಾಟಕ’ವನ್ನು ಸೇರಿಸಿಕೊಂಡೇ ಶುರುಾಗಿದ್ದು ಮಾತ್ರ ಸೋಜಿಗವೇ ಸರಿ!

1946ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿಯಿಂದ ಪಾಂಡೇಶ್ವರದಲ್ಲಿ ಒಂದು ಬಾಡಿಗೆ ಕಟ್ಟಡದಲ್ಲಿ ಈ ಕಾಲೇಜನ್ನು ಪ್ರಾರಂಭಿಸಲಾಯಿತು. ಅಂದಿನಿಂದ ಇಂದಿನವರೆಗೂ ಸಾವಿರಾರು ಪ್ರತಿಭೆಗಳ ಬಾಳು ರೂಪಿಸಿರುವ ಈ ಕಾಲೇಜು ‘ಕೆಪಿಟಿ’ ಎಂದೇ ಜನಮಾನಸದಲ್ಲಿ ಗುರುತಿಸಿ ಕೊಂಡಿದೆ. ಈ ಕಾಲೇಜಿನಲ್ಲಿ ರೂಪುಗೊಂಡವರು ಪ್ರಪಂಚದ ಮೂಲೆಮೂಲೆ ಯಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.

ರಾಜ್ಯದ ಅತಿಹಳೆಯ ಕಾಲೇಜುಗಳಲ್ಲಿ ಒಂದಾದ ‘ಕೆಪಿಟಿ’, ಮಂಗಳೂರಿನ ಕದ್ರಿಹಿಲ್ಸ್‌ನಲ್ಲಿ 18 ಎಕರೆ ವಿಸ್ತಾರದ ಕ್ಯಾಂಪಸ್ ಹೊಂದಿದೆ. ಭಾರತದಲ್ಲಿ ಆಟೋಮೊಬೈಲ್ ಎಂಜಿನಿಯ ರಿಂಗ್ ಎಂದರೇನೆಂದೇ ಗೊತ್ತಿರದ ಸಂದರ್ಭದಲ್ಲಿ ಶುರುವಾದ ‘ಕೆಪಿಟಿ’, ಆರಂಭಿಕ ಹಂತ ವಾಗಿ ಸಿವಿಲ್ -ಮೆಕ್ಯಾನಿಕಲ್-ಇಲೆಕ್ಟ್ರಿಕಲ್-ಆಟೋಮೊಬೈಲ್ ಎಂಜಿನಿಯರಿಂಗ್‌ ನಲ್ಲಿ 3 ವರ್ಷದ ಡಿಪ್ಲೊಮಾ ಶಿಕ್ಷಣಕ್ರಮಗಳನ್ನು ಪ್ರಾರಂಭಿಸಿತು.

ಕಾಲಾನಂತರದಲ್ಲಿ ಕೆಮಿಕಲ್ ಎಂಜಿನಿಯರಿಂಗ್, ಪಾಲಿಮರ್ ತಂತ್ರಜ್ಞಾನ, ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ಸ್ ಹಾಗೂ ಕಂಪ್ಯೂಟರ್ ಸೈನ್ಸ್ ಡಿಪ್ಲೊಮಾಗಳ ಜತೆಗೆ ಇನ್ನಿತರೆ ಪೂರಕ ತರಬೇತಿಗಳೂ ಶುರುವಾದವು. ಹೀಗೆ ಮುನ್ನಡೆದ ಸಂಸ್ಥೆಯು ತನ್ನ 75 ವರ್ಷಗಳ ಯಶಸ್ವಿ ಪಯಣದಲ್ಲಿ ಅನೇಕ ಮೈಲುಗಲ್ಲುಗಳನ್ನು ಸಾಧಿಸಿದೆ.

2022-23ನೇ ಸಾಲಿನಲ್ಲಿ ಕರ್ನಾಟಕ ಸರಕಾರದಿಂದ ‘ಅತ್ಯುತ್ತಮ ಪಾಲಿಟೆಕ್ನಿಕ್’ ಎಂಬ ಬಿರುದನ್ನು ಪಡೆದಿದೆ. ಸಾಲದೆಂಬಂತೆ, ನವದೆಹಲಿಯ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯಿಂದ (ಎಐಸಿಟಿಇ) ಶೈಕ್ಷಣಿಕ ಸ್ವಾಯತ್ತತೆಯನ್ನೂ ದಕ್ಕಿಸಿಕೊಂಡು ಇಂಥ ಸಾಧನೆ ಮೆರೆದ ದೇಶದ ಮೊದಲ ಪಾಲಿಟೆಕ್ನಿಕ್ ಎನಿಸಿಕೊಂಡಿದೆ.

ಶುರುವಿನಿಂದಲೂ ಕರಾವಳಿ ಕರ್ನಾಟಕ ಮತ್ತು ದೇಶದ ಇತರ ಪ್ರದೇಶಗಳ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ತಾಂತ್ರಿಕ ಶಿಕ್ಷಣದ ಅಗತ್ಯಗಳನ್ನು ಪೂರೈಸುತ್ತಿರುವ ‘ಕೆಪಿಟಿ’, ಔಪಚಾರಿಕ ವಲ್ಲದ ವಿವಿಧ ಅಗತ್ಯಾಧಾರಿತ ಕೋರ್ಸ್‌ಗಳನ್ನೂ ನೀಡುವ ಮೂಲಕ ತಾಂತ್ರಿಕ ಶಿಕ್ಷಣದ ಮುಂದುವರಿಕೆಗೆ ವಿಪುಲ ಅವಕಾಶಗಳನ್ನು ಒದಗಿಸುತ್ತಿದೆ.

ಇಲ್ಲಿರುವ ಗ್ರಂಥಾಲಯವು ವಿದ್ಯಾರ್ಥಿಗಳ ಮತ್ತು ಅಧ್ಯಾಪಕರ ಅಗತ್ಯಗಳನ್ನು ಪೂರೈಸ ಬಲ್ಲ 25000ಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹವನ್ನು ಹೊಂದಿದ್ದು, ಇವುಗಳಲ್ಲಿ ಪಠ್ಯಪುಸ್ತಕ, ಪರಾಮರ್ಶನ ಗ್ರಂಥ, ವಿಶ್ವಕೋಶ, ನಿಘಂಟು, ಕೈಪಿಡಿ, ಡೇಟಾ ಪುಸ್ತಕಗಳು ಸೇರಿವೆ. ಜತೆಗೆ, ರಾಜ್ಯದ ಪ್ರಮುಖ ದಿನಪತ್ರಿಕೆಗಳು ಮತ್ತು ನಿಯತಕಾಲಿಕೆಗಳ ಚಂದಾ ದಾರಿಕೆಯನ್ನು ಹೊಂದಿದೆ.

ವಿದ್ಯಾರ್ಥಿಗಳ ಪ್ರತಿಭೆಯನ್ನು ಉತ್ತೇಜಿಸಲು ಸಾಮಾನ್ಯ ವಿದ್ಯಾರ್ಥಿ ಸಂಘವನ್ನು ಹೊಂದಿ ರುವ ಕೆಪಿಟಿ, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಕ್ರೀಡಾಸಮಿತಿ, ಮ್ಯಾಗಜೀನ್

ಸಮಿತಿ, ಸಾಂಸ್ಕೃತಿಕ ಸಮಿತಿ, ವಿದ್ಯಾರ್ಥಿ ಸಲಹಾ ಕೇಂದ್ರ, ಶಿಸ್ತು ಸಮಿತಿ, ಪರಿಸರ ನಿಯಂ ತ್ರಣ/ ರಕ್ಷಣಾ ಸಮಿತಿ ಮುಂತಾದವನ್ನು ಅದರಡಿಯಲ್ಲಿ ನಿರ್ವಹಿಸುತ್ತದೆ. ಇವೆಲ್ಲವೂ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಮತ್ತು ಕಲಿಕಾ ಗುಣಮಟ್ಟವನ್ನು ವಧಿಸು ವಲ್ಲಿ ನೆರವಾಗಿವೆ. ಎಐಸಿಟಿಇ ಮಾಹಿತಿಯ ಪ್ರಕಾರ, ರಾಜ್ಯದಲ್ಲಿ ಸರಕಾರಿ ಟೂಲ್‌ರೂಮ್ ಮತ್ತು ತರಬೇತಿ ಕೇಂದ್ರಗಳು ಸೇರಿದಂತೆ ಒಟ್ಟು 300 ಪಾಲಿಟೆಕ್ನಿಕ್‌ಗಳು ಕಾರ್ಯ ನಿರ್ವಹಿಸುತ್ತಿವೆ.

2019-20ನೇ ಸಾಲಿನಲ್ಲಿ 86894ರಷ್ಟು ವಿದ್ಯಾರ್ಥಿಗಳ ಪ್ರವೇ ಶಾತಿಯಾಗಿದ್ದು, ನಂತರದಲ್ಲಿ ಏರಿಳಿತ ಕಂಡರೂ ಸದ್ಯಕ್ಕೆ ರಾಜ್ಯದ ಎಲ್ಲಾ ಪಾಲಿಟೆಕ್ನಿಕ್‌ ಗಳಲ್ಲಿ ಲಕ್ಷಕ್ಕೂ ಮೀರಿದ ವಿದ್ಯಾರ್ಥಿಗಳು ಉತ್ಸುಕತೆ ತೋರುತ್ತಿದ್ದಾರೆ.

ನರೇಂದ್ರ ಮೋದಿಯವರ ಸರಕಾರವು ಕೌಶಲಾಧಾರಿತ ಕೋರ್ಸ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಿರುವುದರಿಂದ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ತಾಂತ್ರಿಕ ಶಿಕ್ಷಣವು ಮಾನವ ಸಂಪನ್ಮೂಲ ಅಭಿವೃದ್ಧಿಯ ಮಹತ್ವದ ಅಂಶವೆಂದು ಗುರುತಿಸಲ್ಪಟ್ಟಿದೆ; ಇದು ಉತ್ಪನ್ನ

ಗಳು ಮತ್ತು ಸೇವೆಗಳ ಮೌಲ್ಯವರ್ಧಿಸಿ ರಾಷ್ಟ್ರೀಯ ಆರ್ಥಿಕತೆಗೆ ಕೊಡುಗೆ ನೀಡಲು ಮತ್ತು ಜನರ ಜೀವನಮಟ್ಟವನ್ನು ಸುಧಾರಿಸಲು ಹೆಚ್ಚಿನ ಸಾಮರ್ಥ್ಯ ಹೊಂದಿರುವ ವಿಭಾಗ ವಾಗಿದೆ.

ಭಾರತದಲ್ಲಿ ಕಳೆದ 6 ದಶಕಗಳಲ್ಲಿ ತಾಂತ್ರಿಕ ಶಿಕ್ಷಣದ ಗಮನಾರ್ಹ ಬೆಳವಣಿಗೆಯಾಗಿದ್ದು, ಇದು ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇವುಗಳಲ್ಲಿ ಪ್ರಮಾಣಪತ್ರ,

ಡಿಪ್ಲೊಮಾ, ಪದವಿಪೂರ್ವ, ಸ್ನಾತಕೋತ್ತರ ಪದವಿ ಮತ್ತು ವಿವಿಧ ಎಂಜಿನಿಯರಿಂಗ್ ವಿಭಾಗಗಳಲ್ಲಿನ ಸಂಶೋಧನೆಗಳು ಸೇರಿವೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ದೇಶದ ಕೈಗಾರಿಕಾ ಮತ್ತು ತಂತ್ರಜ್ಞಾನ ಸನ್ನಿವೇಶದಲ್ಲಿ ನಡೆಯುತ್ತಿರುವ ಅತ್ಯಾಧುನಿಕ ಬದಲಾ ವಣೆಗಳಿಗೆ ಅನುಗುಣವಾಗಿ ಪಾಲಿಟೆಕ್ನಿಕ್ ಶಿಕ್ಷಣ ವ್ಯವಸ್ಥೆಯ ಗುಣಾತ್ಮಕ ಸುಧಾರಣೆ-ವಿಸ್ತರಣೆಗೆ ಯತ್ನಿಸುತ್ತಿವೆ.

ಈ ವ್ಯವಸ್ಥೆಯು ದೇಶದ ಕೈಗಾರಿಕೆ ಮತ್ತು ಉತ್ಪಾದನೆ, ನಿರ್ಮಾಣ ಮತ್ತು ಸೇವಾವಲಯ ಗಳಿಗೆ ಗಮನಾರ್ಹ ಪ್ರಮಾಣದಲ್ಲಿ ‘ತಾಂತ್ರಿಕ ಮಾನವ ಸಂಪನ್ಮೂಲ’ ವನ್ನು ಒದಗಿಸುತ್ತದೆ. ಈ ದೃಷ್ಟಿಯಿಂದ ಡಿಪ್ಲೊಮಾ/ಪಾಲಿಟೆಕ್ನಿಕ್ ಕಾಲೇಜುಗಳು ಮಹತ್ವದ್ದಾಗಿವೆ. ಪಾಲಿಟೆಕ್ನಿಕ್ ಶಿಕ್ಷಣ ವ್ಯವಸ್ಥೆಯಲ್ಲಿ ಗುಣಮಟ್ಟವನ್ನು ಖಾತ್ರಿಪಡಿಸಿಕೊಳ್ಳಲೆಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯನ್ನು (ಎಐಸಿಟಿಇ) ಸ್ಥಾಪಿಸಲಾಗಿದ್ದು, ಇದು ನಿಯಮಗಳು ಮತ್ತು ಮಾನದಂಡಗಳ ಯೋಜನೆ, ಸೂತ್ರೀಕರಣ, ನಿರ್ವಹಣೆ, ಮಾನ್ಯತೆ ಮೂಲಕ ಗುಣ ಮಟ್ಟದ ಭರವಸೆ ಸೇರಿದಂತೆ ಸಂಘಟಿತ ಮತ್ತು ಸಮಗ್ರ ಅಭಿವೃದ್ಧಿಯನ್ನು ಸುಗಮ ಗೊಳಿಸುವ ಜವಾಬ್ದಾರಿಯನ್ನು ಹೊಂದಿದೆ.

ಇದರಂತೆ, ಕರ್ನಾಟಕ ಸರಕಾರದ ‘ತಾಂತ್ರಿಕ ಶಿಕ್ಷಣ ಇಲಾಖೆ’ಯು (ಡಿಟಿಇ) ರಾಜ್ಯದಲ್ಲಿ ಪಾಲಿಟೆಕ್ನಿಕ್ ಶಿಕ್ಷಣದ ನಿಯಂತ್ರಣ ಪ್ರಾಧಿಕಾರವಾಗಿದೆ. ಇದರ ಮೂಲಕ ಸರಕಾರಿ ಪಾಲಿ ಟೆಕ್ನಿಕ್‌ಗಳಿಗೆ ಆರ್ಥಿಕ ನೆರವು ಒದಗುತ್ತದೆ. ಸರಕಾರಿ ಅನುದಾನಿತ ಸಂಸ್ಥೆಗಳು ತಮ್ಮ ಹಣಕಾಸು ಅಗತ್ಯಗಳನ್ನು ಭಾಗಶಃ ಸರಕಾರದಿಂದ ಮತ್ತು ಭಾಗಶಃ ತಮ್ಮ ಸ್ವಂತ ಸಂಪ ನ್ಮೂಲಗಳಿಂದ ನೆರವೇರಿಸಿಕೊಳ್ಳುತ್ತವೆ.

“ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ, ‘ಪಾಲಿಟೆಕ್ನಿಕ್ ಮೂಲಕದ ಸಮುದಾಯ ಅಭಿವೃದ್ಧಿ’ (ಸಿಡಿಟಿಪಿ) ಯೋಜನೆಗೆ ಆಯ್ಕೆಯಾದ ಪಾಲಿಟೆಕ್ನಿಕ್‌ಗಳಲ್ಲಿ

‘ಕೆಪಿಟಿ’ ಕೂಡ ಒಂದಾಗಿದೆ. ಈ ಯೋಜನೆಯ ಮೂಲಕ ನಾವು ಸಮುದಾಯ-ಸಂಸ್ಥೆಯ ಇಂಟರ್-ಸ್ ಮಾಡಿಕೊಂಡು, ವಿಜ್ಞಾನ ಮತ್ತು ತಂತ್ರಜ್ಞಾನ ಆಧರಿತ ಕೌಶಲ ತರಬೇತಿ, ತಂತ್ರಜ್ಞಾನ ವರ್ಗಾವಣೆ ಮತ್ತು ಬೆಂಬಲ ಸೇವೆಗಳ ಸಂಘಟನೆಯ ಮೂಲಕ ಸಮು ದಾಯಕ್ಕೆ ವರ್ಗಾಯಿಸಬಹುದು" ಎಂದು ಹೆಮ್ಮೆಯಿಂದ ಹೇಳುತ್ತಾರೆ ಕಾಲೇಜು ಆಡಳಿತ ಮಂಡಳಿಯವರು. ‘ಸಿಡಿಟಿಪಿ’ ಯೋಜನೆಯನ್ನು 11ನೆಯ ಯೋಜನಾ ಅವಧಿಯಲ್ಲಿ ಪ್ರಾರಂಭಿಸಲಾಗಿದೆ ಮತ್ತು ಪ್ರಸ್ತುತ 12ನೇ ಯೋಜನಾ ಅವಧಿಯ ಅಂತ್ಯದವರೆಗೆ ಮುಂದುವರಿಯಲು ಕಡ್ಡಾಯಗೊಳಿಸಲಾಗಿದೆ.

ಉದ್ಯೋಗಾಧಾರಿತ ಕೌಶಲಾಭಿವೃದ್ಧಿ ಕಾರ್ಯಕ್ರಮಗಳನ್ನು ಒದಗಿಸಲು, ಸಮುದಾಯದ ವಿವಿಧ ವರ್ಗಗಳು, ವಿಶೇಷವಾಗಿ ಗ್ರಾಮೀಣ, ಅಸಂಘಟಿತ ಮತ್ತು ಸಮಾಜದ ಹಿಂದುಳಿದ ವರ್ಗಗಳು ಸಮೃದ್ಧ ವೇತನದ ಉದ್ಯೋಗ ಪಡೆಯುವಂತಾಗಲು ಈ ಯೋಜನೆ ಅನುವು ಮಾಡಿಕೊಡುತ್ತದೆ.

‘ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ’ಯ ಪ್ರಮುಖ ಘಟಕವಾಗಿರುವ ಪಾಲಿಟೆಕ್ನಿಕ್‌ನ ‘ಯೂತ್ ರೆಡ್‌ಕ್ರಾಸ್’ನಲ್ಲಿ 18ರಿಂದ 25 ವರ್ಷ ವಯಸ್ಸಿನ ವಿದ್ಯಾರ್ಥಿಗಳಿಗೆ ತರಬೇತಿ ಮತ್ತು ಪ್ರೋತ್ಸಾಹ ನೀಡಲಾಗುತ್ತದೆ. ಯುವಜನರಲ್ಲಿ ಸಾಮಾಜಿಕ ಜವಾಬ್ದಾರಿಗಳನ್ನು ಮೂಡಿ ಸುವ ಮತ್ತು ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ಚಟುವಟಿಕೆಗಳಲ್ಲಿ ಸ್ವಯಂ ಪ್ರೇರಿತ ವಾಗಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುವ ಉದ್ದೇಶದಿಂದ ‘ಯೂತ್ ರೆಡ್‌ಕ್ರಾಸ್’ ವಿಭಾಗ ವನ್ನು 2012-13ನೇ ಸಾಲಿನಲ್ಲಿ ಸ್ಥಾಪಿಸಲಾಯಿತು.

ಇದರೊಂದಿಗೆ ವಿಚಾರ ಸಂಕಿರಣಗಳ ಆಯೋಜನೆ, ಉದ್ಯಮ, ಆರ್‌ಡಿ ಸಂಸ್ಥೆಗಳು, ರಕ್ಷಣಾ ಸೇವೆಗಳು, ಸರಕಾರಿ ಇಲಾಖೆಗಳು ಮತ್ತು ಇತರ ಸಂಸ್ಥೆಗಳ ತಜ್ಞರಿಂದ ಉಪನ್ಯಾಸಗಳನ್ನು

ಆಯೋಜಿಸುವಿಕೆ, ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ, ಸಂವಹನ ಕೌಶಲಾಭಿವೃದ್ಧಿ, ಸ್ವಯಂ ಉದ್ಯೋಗಕ್ಕಾಗಿ ತರಬೇತಿ ಮತ್ತು ಉದ್ಯಮಗಳಿಗೆ ಭೇಟಿ ಇತ್ಯಾದಿ ಉಪಕ್ರಮಗಳನ್ನು ಹಮ್ಮಿ

ಕೊಳ್ಳುತ್ತ, ಹಲವು ತಲೆಮಾರುಗಳಲ್ಲಿ ನೂರಾರು ಸಾಧಕರನ್ನು ನಾಡಿಗೆ ಪರಿಚಯಿಸಿದ ಹೆಗ್ಗಳಿಕೆ ‘ಕೆಪಿಟಿ’ಯದ್ದು.

ಇಲ್ಲಿ ಓದಿದ ಅನೇಕರು ವಿದೇಶಗಳಲ್ಲಿ ಬಹುದೊಡ್ಡ ಉದ್ಯಮಿಗಳಾಗಿದ್ದರೆ, ಮತ್ತೆ ಕೆಲವರು ಎಂಆರ್‌ಪಿಎಲ್, ಎಂಸಿಎಫ್ ಸೇರಿದಂತೆ ದೇಶದ ಬೃಹತ್ ಕಂಪನಿಗಳಲ್ಲಿ ಉನ್ನತ ಹುದ್ದೆ‌ ಯಲ್ಲಿದ್ದಾರೆ, ಇನ್ನು ಕೆಲವರು ಮೌಲ್ಯಯುತ ರಾಜಕಾರಣದ ಹಾದಿಯಲ್ಲಿ ಸಾಗುತ್ತ, ಸಾಮಾಜಿಕವಾಗಿ ಹಿಂದುಳಿದವರ ಶ್ರೇಯಸ್ಸಿಗಾಗಿ ದುಡಿಯುವ ಶಾಸಕರುಗಳಾಗಿದ್ದಾರೆ. ಅಂತೆಯೇ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಿರುವವರೂ ಇದ್ದಾರೆ.

ಇಂಥವರಿಗೆ ಮೌಲ್ಯಯುತ ಶಿಕ್ಷಣ ಕೊಟ್ಟು ಬದುಕಿನ ಹಾದಿ ತೋರಿದ ಮತ್ತು ‘ದುಡಿಮೆ ಯೇ ಘನತೆ’ ಎಂಬ ತನ್ನ ಧ್ಯೇಯವಾಕ್ಯದಂತೆ ಬ್ರಿಟಿಷರ ಕಾಲದಿಂದ ಇಂದಿನವರೆಗೂ ಅಚಲವಾಗಿ ನಿಂತಿರುವ ‘ಕೆಪಿಟಿ’ ನಮ್ಮ ನಾಡಿನ ಹೆಮ್ಮೆ ಎಂದರೆ ಅತಿಶಯೋಕ್ತಿಯಲ್ಲ.

ಕರ್ನಾಟಕ ಪಾಲಿಟೆಕ್ನಿಕ್ ಶಿಕ್ಷಣ ಸಂಸ್ಥೆಯು ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಅದು ನಾಡಿನ ಇನ್ನಷ್ಟು ಮಕ್ಕಳಿಗೆ ಶಿಕ್ಷಣ ಸೇವೆಯನ್ನು ಒದಗಿಸು ವಂತಾಗಲಿ ಎಂದು ಆಶಿಸೋಣ.

ಇದನ್ನೂ ಓದಿ: ಕಾಯಿದೆಗೆ ಬಲ ನೀಡಿ ಅನುಷ್ಠಾನ ಹುಸಿಗೊಳಿಸಿದರೆಂತಯ್ಯ?!

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ