ಮೈಸೂರು ಹೋಟೆಲ್ ಮಾಲೀಕನ ಆತಿಥ್ಯಕ್ಕೆ ಮೆಚ್ಚುಗೆ; ಉಚಿತ ಬಿರಿಯಾನಿ ತಿಂದು ಫಿದಾ ಆದ ನ್ಯೂಜಿಲೆಂಡ್ ಗಾಯಕ!
Viral Video: ಮೈಸೂರಿನ ರಸ್ತೆಯ ಬದಿಯಲ್ಲಿ ಬಿರಿಯಾನಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬರು ನ್ಯೂಜಿಲೆಂಡ್‌ನ ಪ್ರಖ್ಯಾತ ಸಂಗೀತಗಾರನಿಗೆ ಉಚಿತವಾಗಿ ಬಿರಿಯಾನಿ ನೀಡಿ ಮನ ಗೆದ್ದಿದ್ದಾರೆ. ಈ ಬಗ್ಗೆ ಗಾಯಕ ಈ ಅನುಭವವನ್ನು ಮರೆಯಲಾಗದು ಎಂದು ಬಣ್ಣಿಸಿದ್ದಾರೆ. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮೈಸೂರು ಹೋಟೆಲ್ ಮಾಲೀಕನ ಆತಿಥ್ಯ -
ಮೈಸೂರು,ಮಾ. 2: ಭಾರತೀಯ ಸಂಸ್ಕೃತಿ, ಇಲ್ಲಿನ ಜನರ ಔದರ್ಯಗೆ ವಿದೇಶಿಗರು ಕೂಡ ಮನಸೋಲುತ್ತಾರೆ. ಭಾರತದ ಆಹಾರ, ವೈವಿಧ್ಯತೆ ಮತ್ತು ಆತಿಥ್ಯವನ್ನು ಹಲವಾರು ವಿದೇಶಿ ಪ್ರವಾಸಿಗರು ಶ್ಲಾಘಿಸಿದ್ದಾರೆ. ಇದೀಗ ಮೈಸೂರಿನ ರಸ್ತೆಯ ಬದಿಯಲ್ಲಿ ಬಿರಿಯಾನಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬರು ನ್ಯೂಜಿಲೆಂಡ್‌ನ ಪ್ರಖ್ಯಾತ ಸಂಗೀತಗಾರನಿಗೆ ಉಚಿತವಾಗಿ ಬಿರಿಯಾನಿ ನೀಡಿ ಮನ ಗೆದ್ದಿದ್ದಾರೆ. ಈ ಬಗ್ಗೆ ಗಾಯಕ ಈ ಅನುಭವವನ್ನು ಮರೆಯಲಾಗದು ಎಂದು ಬಣ್ಣಿಸಿದ್ದಾರೆ. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ.
ನ್ಯೂಜಿಲೆಂಡ್ ಮೂಲದ ಫಿಜಿ ಗಾಯಕ ಲೆಪಾನಿ ಮೈಸೂರಿಗೆ ಭೇಟಿ ನೀಡಿದ್ದರು. ಅವರು ಮೈಸೂರಿನ ವೈವಿಧ್ಯಮಯವನ್ನು ವೀಕ್ಷಿಸುತ್ತ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದಾಗ ಅಲ್ಲಿನ ಬಿರಿಯಾನಿಯ ಘಮ ಅವರನ್ನು ಸೆಳೆದಿದೆ. ಕೂತುಹಲದಿಂದ ಒಂದು ತಟ್ಟೆಗೆ ಎಷ್ಟು ಎಂದು ಕೇಳಿದಾಗ ಆ ಮಾಲೀಕನು "ದುಡ್ಡಿನ ಚಿಂತೆ ಬೇಡ, ನೀವು ಮೊದಲು ಊಟ ಮಾಡಿ" ಎಂದು ಪ್ರೀತಿಯಿಂದ ಹೇಳಿದ್ದಾರೆ.
ವಿಡಿಯೋ ನೋಡಿ:
ಅಷ್ಟೇ ಅಲ್ಲದೆ ಅವರಿಗೆ ದೊಡ್ಡ ಪ್ಲೇಟ್ ತುಂಬ ಬಿರಿಯಾನಿ ನೀಡಿದ್ದಾರೆ. ಗಾಯಕ ಈ ಅನುಭವವನ್ನು ಅವಿಸ್ಮರಣೀಯ ಎಂದು ಬಣ್ಣಿಸಿದ್ದು ನಾನು ನನ್ನ ಜೀವನದಲ್ಲಿ ತಿಂದ ಅತ್ಯುತ್ತಮ ಬಿರಿಯಾನಿ ಎಂದು ಹೊಗಳಿದ್ದಾರೆ. ಅಲ್ಲಿನ ಮಾಲೀಕರು ಇವರನ್ನು ನೋಡಿ ನಗುಮುಖದಿಂದ ಕೈಬೀಸಿ ಕರೆದ್ದಾರೆ.ಆಹಾರ ಮಾರಾಟಗಾರ ತೋರಿಸಿದ ಔದಾರ್ಯವನ್ನು ಅವರು ಶ್ಲಾಘಿಸಿದ್ದು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಈ ವಿಡಿಯೋ ನೋಡಿದ ನೆಟ್ಟಿಗರು ಮೈಸೂರಿನ ಬಿರಿಯಾನಿ ಮಾರಾಟಗಾರನ ದೊಡ್ಡ ಗುಣವನ್ನು ಶ್ಲಾಘಿಸುತ್ತಿದ್ದಾರೆ. ಬಳಕೆದಾರೊಬ್ಬರು ನಮ್ಮ ಮೈಸೂರು ಅರಮನೆ ಅಷ್ಟೇ ಅಲ್ಲ..ಇಲ್ಲಿನ ಜನರ ಮನಸ್ಸು ಕೂಡ ಅರಮನೆಯಷ್ಟೇ ಚಂದ ಎಂದಿದ್ದಾರೆ.