ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Keshav Prasad B Column: ಸಾಲದ ರೈಟ್‌ ಆಫ್‌, ಮನ್ನಾ ಒಂದೇನಾ?, ಯಾವುದು ಉತ್ತಮ ?

ಕಳೆದ 10 ವರ್ಷಗಳಲ್ಲಿ ರೈಟ್ ಆಫ್ ಆಗಿರುವ ಸಾಲದ ಮೊತ್ತ 16 ಲಕ್ಷದ 35 ಸಾವಿರ ಕೋಟಿ ರುಪಾ ಯಿಗಳಾಗಿವೆ. ಈ ಪೈಕಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳು 2 ಲಕ್ಷದ 27 ಸಾವಿರದ 288 ಕೋಟಿ ರುಪಾ ಯಿಯಷ್ಟು ಸಾಲವನ್ನು ರಿಕವರಿ ಮಾಡಿವೆ. ಖಾಸಗಿ ಬ್ಯಾಂಕ್‌ಗಳು 55598‌ ಕೋಟಿ ರುಪಾಯಿ ಗಳನ್ನು ರಿಕವರಿ ಮಾಡಿವೆ. ಇದೊಂದು ಪ್ರಕ್ರಿಯೆ.

ಸಾಲದ ರೈಟ್‌ ಆಫ್‌, ಮನ್ನಾ ಒಂದೇನಾ?, ಯಾವುದು ಉತ್ತಮ ?

Keshava Prasad B Keshava Prasad B Mar 21, 2025 7:12 AM

ಮನಿ ಮೈಂಡೆಡ್‌

ದೇಶದಲ್ಲಿ ಸಾಲದ ರೈಟ್ ಆಫ್ ಬಗ್ಗೆ ಮತ್ತೆ ಚರ್ಚೆ ನಡೆಯುತ್ತಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರೈಟ್ ಆಫ್ ಮತ್ತು ಸಾಲ ಮನ್ನಾ ನಡುವಿನ ವ್ಯತ್ಯಾಸವನ್ನು ಸಂಸತ್ತಿನಲ್ಲಿ ಹಲವು ಬಾರಿ ವಿವರಿಸಿದ್ದಾರೆ. ಆದರೂ, ‘ಏನಿದು? ರೈಟ್ ಆಫ್ ಮತ್ತು ಸಾಲ ಮನ್ನಾ ಒಂದೇನಾ? ಯಾವುದು ಬೆಸ್ಟ್ ರೈಟ್ ಆಫ್ ಆಗಿರುವುದರಲ್ಲಿ ಎಷ್ಟು ಸಾಲ ರಿಕವರಿಯಾಗುತ್ತದೆ?’ ಇಂಥ ಹಲವು ಪ್ರಶ್ನೆಗಳು ಇವೆ.‌ “ರೈಟ್ ಅಫ್ ಅಂದ್ರೆ ಸಾಲ ಮನ್ನಾ ಅಲ್ಲ. ಸಾಲವನ್ನು ಯಾರು ಕಟ್ಟಿಲ್ಲವೋ ಅವರು ಅದರ ಪರಿಣಾಮಗಳನ್ನು ಎದುರಿಸಲೇಬೇಕಾಗುತ್ತದೆ. ಸಾರ್ವಜನಿಕ ಬ್ಯಾಂಕುಗಳು ಸುಸ್ತಿ ದಾರರಿಂದ ಬಾಕಿ ಸಾಲವನ್ನು ಮರುವಸೂಲು ಮಾಡಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳು ತ್ತಿವೆ. ಕೋರ್ಟುಗಳು ಮತ್ತು IBC ಮೂಲಕ ಇದು ನಡೆಯುತ್ತದೆ" ಎಂದು ನಿರ್ಮಲಾ ಸೀತಾರಾಮನ್ ವಿವರಿಸಿದ್ದಾರೆ (IBC ಅಂದ್ರೆ Insolvency and Bankruptcy Code.

2016ರಲ್ಲಿ ಈ ಕಾನೂನನ್ನು ಜಾರಿಗೊಳಿಸಲಾಯಿತು. ಕಂಪನಿಗಳು, ಪಾರ್ಟ್‌ನರ್‌ಶಿಪ್ ಕಂಪನಿಗಳು ಮತ್ತು ವೈಯಕ್ತಿಕ ಸುಸ್ತಿ ಸಾಲಗಾರರ ದಿವಾಳಿ ಪ್ರಕ್ರಿಯೆಯನ್ನು ಸುಗಮಗೊಳಿಸಲು ಜಾರಿಗೆ ಬಂದಿರುವ ಕಾನೂನು ಇದಾಗಿದೆ).

ಇದನ್ನೂ ಓದಿ: Keshava Prasad B Column: ಜಿದ್ದಿದೆ ಬಿದ್ದು ಕನ್ನಡ ಕಲಿತ ತಾತ !

ಕಳೆದ 10 ವರ್ಷಗಳಲ್ಲಿ ರೈಟ್ ಆಫ್ ಆಗಿರುವ ಸಾಲದ ಮೊತ್ತ 16 ಲಕ್ಷದ 35 ಸಾವಿರ ಕೋಟಿ ರುಪಾ ಯಿಗಳಾಗಿವೆ. ಈ ಪೈಕಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳು 2 ಲಕ್ಷದ 27 ಸಾವಿರದ 288 ಕೋಟಿ ರುಪಾಯಿಯಷ್ಟು ಸಾಲವನ್ನು ರಿಕವರಿ ಮಾಡಿವೆ. ಖಾಸಗಿ ಬ್ಯಾಂಕ್‌ಗಳು 55598‌ ಕೋಟಿ ರುಪಾಯಿ ಗಳನ್ನು ರಿಕವರಿ ಮಾಡಿವೆ. ಇದೊಂದು ಪ್ರಕ್ರಿಯೆ.

2023-24ರಲ್ಲಿ ಬ್ಯಾಂಕ್‌ಗಳು 170270 ಕೋಟಿ ರುಪಾಯಿಯಷ್ಟು ‘ಬ್ಯಾಡ್ ಲೋನ್’ ಅನ್ನು ರೈಟ್ ಆಫ್ ಮಾಡಿದ್ದವು. ಆದರೆ 2024-25ರಲ್ಲಿ 216324 ಕೋಟಿ ರುಪಾಯಿ ಸಾಲವನ್ನು ರೈಟ್ ಆಫ್ ಮಾಡಲಾಗಿದೆ. ನೀವು 2023-24ರ ಅವಧಿಗೆ ಸೀಮಿತವಾಗಿ ನೋಡಿದರೆ, ರೈಟ್ ಆಫ್ ಪ್ರಮಾಣದಲ್ಲಿ ಏರಿಕೆಯಾಗಿದೆ. ಆದರೆ, ಒಟ್ಟಾರೆಯಾಗಿ ಬ್ಯಾಡ್ ಲೋನ್ ಇಳಿಕೆಯಾಗಿದೆ. ದೇಶದ 29 ಪ್ರಮುಖ ಕಂಪನಿಗಳು 61,027 ಕೋಟಿ ರುಪಾಯಿಯಷ್ಟು NPA ಯನ್ನು ಹೊಂದಿವೆ. NPA ಅಂದ್ರೆ Non-Performing Assets ಅಥವಾ ಬ್ಯಾಡ್ ಲೋ ಅಂತಾನೂ ಕರೆಯುತ್ತಾರೆ. ‌

ಹಾಗಾದರೆ ರೈಟ್ ಆಫ್ ಸಾಲದಲ್ಲಿ ಯಾವ ಕ್ಷೇತ್ರದ್ದು ಹೆಚ್ಚು ಎಂಬ ಪ್ರಶ್ನೆ ಸಹಜವಾಗಿ ಮೂಡ‌ ಬಹುದು. ಇಲ್ಲಿ ನಾವು ಹೆಚ್ಚು ಹೈಲೈಟ್ ಆಗದಿರುವ, ಆದರೆ ಸಮಸ್ಯೆಗೆ ಕಾರಣವಾಗಿರುವ ಕೆಲವು ಪ್ರಮುಖ ಅಂಶಗಳನ್ನು ಗಮನಿಸಬೇಕಾಗಿದೆ. ರಾಜಕೀಯ ಆರೋಪ-ಪ್ರತ್ಯಾರೋಪಗಳ ಬಗ್ಗೆ ನೋಡೋದಾದರೆ, ಕಾಂಗ್ರೆಸ್ ಮತ್ತು ಬಿಜೆಪಿಯ ಭಿನ್ನ ವಾದವನ್ನು ಗಮನಿಸಬಹುದು.

ಕಾಂಗ್ರೆಸ್ ನಾಯಕರ ಪ್ರಕಾರ, ರೈಟ್ ಆಫ್ ಮತ್ತು ಸಾಲ ಮನ್ನಾ ನಡುವೆ ಅಂಥ ವ್ಯತ್ಯಾಸ ಇಲ್ಲ. ಇದುವರೆಗೆ ರೈಟ್ ಆಫ್ ಆಗಿರುವ 16 ಲಕ್ಷ ಕೋಟಿ ರುಪಾಯಿ ಸಾಲದಲ್ಲಿ 2 ಲಕ್ಷದ 27 ಸಾವಿರ ಕೋಟಿಯಷ್ಟೇ ರಿಕವರಿ ಆಗಿರುವುದು ಸಾಕೇ? ಉಳಿದ ಸಾಲ ರಿಕವರಿ ಆಗೋದು ಯಾವಾಗ? ಆದ್ದರಿಂದ ಇದು ಸಾಲ ಮನ್ನಾಗೆ ಸಮಾನ ಎಂದು ಕಾಂಗ್ರೆಸ್ ನಾಯಕರು ವಾದಿಸುತ್ತಾರೆ.

ಬಿಜೆಪಿ ನಾಯಕರು ರೈಟ್ ಆಫ್ ಮತ್ತು ಸಾಲ ಮನ್ನಾದ ತಾಂತ್ರಿಕ ವ್ಯತ್ಯಾಸಗಳನ್ನು ವಿವರಿಸುತ್ತಾರೆ. ಜತೆಗೆ ಬಹುತೇಕ ಸಾಲಗಳು 2014ಕ್ಕೂ ಮುನ್ನ ಯುಪಿಎ ಅವಧಿಯಲ್ಲಿ ಉದ್ಯಮಿಗಳಿಗೆ ಕೊಟ್ಟಿರುವ ಸಾಲಗಳಾಗಿವೆ. ಈಗ ವಸೂಲಾತಿ ನಡೆಯುತ್ತಿವೆ ಎಂದು ಆರೋಪಿಸುತ್ತಾರೆ. ಆದರೆ ರಾಜಕೀಯ ಚೌಕಟ್ಟಿನಿಂದಾಚೆಗೆ ನೋಡಿದರೆ, ಕೆಲವೊಂದು ಗಮನಾರ್ಹ ಅಂಶಗಳು ಇವೆ.

ಮೊದಲನೆಯದಾಗಿ ಈ ರೈಟ್ ಆಫ್‌ ಗಳನ್ನು ಬ್ಯಾಂಕ್ ಗಳು ಮಾಡುತ್ತವೆ, ಸರಕಾರಗಳಲ್ಲ. ಸರಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳೂ ರೈಟ್ ಆಫ್ ಮಾಡುತ್ತವೆ. ಆದರೆ ಸಾಲ ಮನ್ನಾವನ್ನು ಸರಕಾರಗಳು ಘೋಷಿಸುತ್ತವೆ. ಈ ವ್ಯತ್ಯಾಸವನ್ನು ಗಮನಿಸಬೇಕು. ಎರಡನೆಯ ಬಹುಮುಖ್ಯ ವಿಷಯವೇನೆಂದರೆ, ಕಳೆದ 10 ವರ್ಷಗಳಲ್ಲಿ ರೈಟ್ ಆಫ್ ಆಗಿರುವ 16 ಲಕ್ಷದ 35 ಸಾವಿರ ಕೋಟಿ ರುಪಾಯಿ ಸಾಲದಲ್ಲಿ ಎಲ್ಲವೂ ಉದ್ಯಮ ಕ್ಷೇತ್ರದ ಬೃಹತ್ ಕಂಪನಿಗಳಿಗೆ ನೀಡಿರುವ ಸಾಲಗಳಲ್ಲ. ಕೃಷಿ ಕ್ಷೇತ್ರಕ್ಕೆ ನೀಡಿ ರುವ ಸಾಲಗಳೂ ದೊಡ್ಡ ಪ್ರಮಾಣದಲ್ಲಿ ಇವೆ. ‌

ಭಾರತದಲ್ಲಿ ಐತಿಹಾಸಿಕವಾಗಿ ಕೃಷಿ ಕ್ಷೇತ್ರದಲ್ಲಿ ಅತಿ ಹೆಚ್ಚು ವಸೂಲಾಗದಿರುವ ಸಾಲದ ಪ್ರಮಾಣ ಇದೆ. 2024ರ ಸೆಪ್ಟೆಂಬರ್ ಅಂತ್ಯದ ವೇಳೆಗೆ ಕೃಷಿ ಕ್ಷೇತ್ರದಲ್ಲಿ Gross non-performing asset ratio ಅಥವಾ GNPA ratio ಶೇ.6.2ರಷ್ಟು ಆಗಿದೆ. ರಿಟೇಲ್ ಸಾಲದ ಎಘೆPಅ ಕಡಿಮೆ ಆಗಿದ್ದು ಶೇ.1.2 ರಷ್ಟಿದೆ. ಕೃಷಿಗೆ ಹೋಲಿಸಿದರೆ ಕಾರ್ಪೊರೇಟ್ ಮತ್ತು ಎಂಎಸ್‌ಎಂಇ ಅಥವಾ ಸಣ್ಣ ಉದ್ದಿಮೆ ಗಳಿಗೆ ನೀಡಿರುವ ಸಾಲದಲ್ಲಿನ ಎನ್‌ಪಿಎ ಅಥವಾ ವಸೂಲಾಗದಿರುವ ಸಾಲ ಕಡಿಮೆ.

ಕಳೆದ 10 ವರ್ಷಗಳಿಂದೀಚೆಗೆ 4.7 ಲಕ್ಷ ಕೋಟಿ ರುಯಿಯ ಕೃಷಿ ಸಾಲವನ್ನು ರೈಟ್ ಆಫ್‌ ಮಾಡಲಾ‌ ಗಿದೆ ಎಂದು ಎಸ್‌ಬಿಐ ರಿಸರ್ಚ್ ವರದಿ ತಿಳಿಸಿದೆ. ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2015-19ರ ಅವಧಿಯಲ್ಲಿ 14000 ಕೋಟಿ ರುಪಾಯಿ ಕೃಷಿ ಸಾಲವನ್ನು ರೈಟ್ ಆಫ್ ಮಾಡಿತ್ತು. ‌

ಬ್ಯಾಂಕ್‌ಗಳು ಹಿಂದಿನಿಂದಲೂ ಸಾಲದ ರೈಟ್ ಆಫ್ ಮಾಡುತ್ತಲೇ ಬಂದಿವೆ. 2012-13ರಲ್ಲಿ ಬ್ಯಾಂ ಕ್‌ ಗಳು 31,549 ಕೋಟಿ ರುಪಾಯಿಗಳ ರೈಟ್ ಆಫ್ ಮಾಡಿದ್ದವು. 2013-14ರಲ್ಲಿ 25,424 ಕೋಟಿ ರುಪಾಯಿಗಳನ್ನು ರೈಟ್ ಆಫ್ ಮಾಡಿದ್ದವು.‌‌ ಈ ರೈಟ್ ಆಫ್ ಮಾಡೋದ್ರಿಂದ ಬ್ಯಾಂಕ್‌ ಗಳಿಗೆ ತಮ್ಮ ಬ್ಯಾಲೆ ಶೀಟ್ ಅನ್ನು ಕ್ಲೀನ್ ಆಗಿ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಒಂದು ಸಲ ರೈಟ್ ಆಫ್ ಆದ ಸಾಲವು ಅಸೆಟ್ (ಸ್ವತ್ತು) ಅನ್ನಿಸುವುದಿಲ್ಲ. ‌

ಹೀಗಾಗಿ ಬ್ಯಾಂಕಿನ ಎನ್ ಪಿಎ ಕಡಿಮೆಯಾಗುತ್ತದೆ. ಇದರಿಂದ ಬ್ಯಾಂಕಿಗೆ ತೆರಿಗೆಯಲ್ಲಿ ಉಳಿತಾಯ ವಾಗುತ್ತದೆ. ರೈಟ್ ಆಫ್ ಅನ್ನು ಬ್ಯಾಂಕ್‌ಗಳು ಸುಮ್ಮನೆ ಘೋಷಿಸಲು ಆಗುವುದಿಲ್ಲ. ಅದಕ್ಕಾಗಿ ಪ್ರಾವಿಷನ್ ಆಗಿ ನಿಗದಿತ ಮೊತ್ತವನ್ನು ಪ್ರತ್ಯೇಕವಾಗಿ ಇಡಬೇಕಾಗುತ್ತದೆ. ಬ್ಯಾಂಕ್‌ಗಳು ತಮ್ಮ ಲಾಭದಲ್ಲಿ ಒಂದು ಭಾಗವನ್ನು ಈ ಪ್ರಾವಿಷನ್ ಸಲುವಾಗಿ ಮೀಸಲಿಡುತ್ತವೆ. ಸಾಲ ಮರುವಸೂಲು ಆದ ಬಳಿಕ ಪ್ರಾವಿಷನ್ ಹಣವು ಲಾಭದ ಬಾಬ್ತು ಜಮೆಯಾಗುತ್ತದೆ. ‌

ಸಾಲ ಮನ್ನಾದಲ್ಲಿ ಸಾಲಗಾರರು ಬಾಕಿ ಸಾಲವನ್ನು ತೀರಿಸಬೇಕಿಲ್ಲ. ಆದರೆ ರೈಟ್ ಅಪ್‌ ನಲ್ಲಿ ಬಾಕಿ ಸಾಲವನ್ನು ಬ್ಯಾಂಕ್‌ಗಳು ವಸೂಲು ಮಾಡಬಹುದು. ಕಾನೂನು ಪ್ರಕ್ರಿಯೆ ಮುಂದುವರಿಯುತ್ತದೆ. ಕಂಪನಿಯನ್ನು ದಿವಾಳಿ ಪ್ರಕ್ರಿಯೆಗೆ ಕೂಡ ಒಳಪಡಿಸಿ ಬಾಕಿ ಮೊತ್ತ ಪಡೆಯಬಹುದು. ಹೀಗಾಗಿ, ಬ್ಯಾಂಕ್‌ಗಳಿಗೆ ಸಾಲ ಮನ್ನಾಗೆ ಹೋಲಿಸಿದರೆ ರೈಟ್ ಆಫ್ ಒಳ್ಳೆಯದು. ಆದರೂ ರೈಟ್ ಆಪ್ ಮತ್ತು ರಿಕವರಿ ನಡುವಿನ ವ್ಯತ್ಯಾಸ ಹೆಚ್ಚಿದರೆ ಅದನ್ನು ಆರೋಗ್ಯಕರ ಲಕ್ಷಣ ಎನ್ನುವಂತಿಲ್ಲ. ‌

ಹಾಗಂತ ರೈತರು ಪ್ರಾಕೃತಿಕ ವಿಕೋಪಗಳಿಂದ ಬೆಳೆಹಾನಿಯ ಸಂಕಷ್ಟಕ್ಕೀಡಾದಾಗ, ಅವರ ಬೆಳೆ ಸಾಲ ಮನ್ನಾ ಮಾಡುವುದು ಯಾವುದೇ ಸರಕಾರಕ್ಕೆ ಮಾನವೀಯ ಕರ್ತವ್ಯವೂ ಆಗುತ್ತದೆ. ಆದ್ದ ರಿಂದ ರಾಜಕೀಯ ಪಕ್ಷಗಳು ಸಾಲದ ರಿಕವರಿ ಪ್ರಮಾಣವನ್ನು ಹೆಚ್ಚಿಸುವುದರ ಬಗ್ಗೆ ಫೋಕಸ್ ನೀಡಿ ಚರ್ಚಿಸಿದರೆ ರಚನಾತ್ಮಕವಾದೀತು.

ಈಗ ರೈಟ್ ಆಫ್ ಪದ್ಧತಿಯ ಕಾನೂನಾತ್ಮಕ ಪರಿಣಾಮಗಳನ್ನು ನೋಡೋಣ. ಸುಸ್ತಿ ಸಾಲಗಾರರು 90 ದಿನಗಳ ಕಾಲ ಯಾವುದೇ ಮರುಪಾವತಿ ಮಾಡದಿದ್ದರೆ ಆ ಸಾಲವು ಅನುತ್ಪಾದಕ ಸಾಲ (Non-performing Asset) ಎನಿಸುತ್ತದೆ. ಬ್ಯಾಡ್ ಲೋನ್ ಎಂದೂ ಕರೆಯುತ್ತಾರೆ. ಹಾಗಾದರೆ ಭಾರತದ ಸಾರ್ವಜನಿಕ ಬ್ಯಾಂಕ್‌ಗಳಲ್ಲಿ ಒಟ್ಟಾರೆ ಎಷ್ಟು ಇಂಥ ಬ್ಯಾಡ್ ಲೋನ್ ಅಥವಾ NPA ಇದೆ? 2023-24ರ ಪ್ರಕಾರ ಸಾರ್ವಜನಿಕ ಬ್ಯಾಂಕ್‌ಗಳಲ್ಲಿ 3.4 ಲಕ್ಷ ಕೋಟಿ ರುಪಾಯಿ ಅನುತ್ಪಾದಕ ಸಾಲ ಇದೆ.‌

ಇದೊಂದನ್ನೇ ಕೇಳಿದರೆ ನಿಮಗೆ ಹೌಹಾರುವಂತಾಗಬಹುದು. ಏಕೆಂದರೆ ಇದರಲ್ಲಿ ಕರ್ನಾಟಕದ ಒಂದು ವರ್ಷದ ಬಹುಪಾಲು ಬಜೆಟ್ ಅನ್ನೇ ಮಾಡಬಹುದು (ಈ ವರ್ಷದ ರಾಜ್ಯ ಬಜೆಟ್ ಗಾತ್ರ 4 ಲಕ್ಷ ಕೋಟಿ ರುಪಾಯಿ). ಆದರೆ 2019ರಲ್ಲಿ ಬ್ಯಾಡ್ ಲೋನ್ 7.2 ಲಕ್ಷ ಕೋಟಿ ರುಪಾಯಿಯಷ್ಟಿತ್ತು!

ಬ್ಯಾಂಕ್‌ಗಳಲ್ಲಿ ಬ್ಯಾಡ್ ಲೋನ್ ಕಡಿಮೆಯಾಗುತ್ತಿದ್ದರೂ, ರೈಟ್ ಆಫ್ ಹೆಚ್ಚುತ್ತಿದೆ. ಇದು ಏನನ್ನು ಬಿಂಬಿಸುತ್ತಿದೆ? ಬ್ಯಾಂಕ್‌ಗಳು ತಮ್ಮ ಬ್ಯಾಲೆನ್ಸ್ ಶೀಟ್ ಗಳಿಂದ ಬ್ಯಾಡ್ ಲೋನ್‌ಗಳನ್ನು ಬೇರ್ಪ ಡಿಸುತ್ತಿವೆ. ಇದರಿಂದ ಬ್ಯಾಂಕ್‌ಗಳ ಸ್ವತ್ತಿನ ಗುಣಮಟ್ಟ ವೃದ್ಧಿಸುತ್ತಿದೆ. ಸಾಲಗಾರರು ಬಾಕಿ‌ ಯನ್ನು ಪಾವತಿಸಬೇಕಾಗಿದೆ. ಅವರ ಲಯಬಿಲಿಟಿ ಉಳಿದಿದೆ. ಏಕೆಂದರೆ ಅವರ ಸಾಲ ಮನ್ನಾ ಆಗಿರುವು ದಲ್ಲ.

ಹಾಗಾದರೆ ರೈಟ್ ಆಫ್ ಆಗಿರುವ ಸಾಲಕ್ಕೂ, ರಿಕವರಿಗೂ ನಡುವೆ ಭಾರಿ ವ್ಯತ್ಯಾಸ ಇರುವುದೇಕೆ? ಏಕೆಂದರೆ ವಸೂಲಾಗುವ ಸಾಧ್ಯತೆಗಳು ಕ್ಷೀಣಿಸಿರುವ ಸಾಲವೇ ರೈಟ್ ಆಫ್ ಆಗಿರುತ್ತವೆ. ಹೀಗಾಗಿ ಮರು ವಸೂಲಾಗುವ ಮೊತ್ತ ಕಡಿಮೆ. ಚಾರಿತ್ರಿಕವಾಗಿಯೂ ರೈಟ್ ಆಫ್ ಆಗಿರುವ ಸಾಲಗಳ ಪೈಕಿ ಸುಮಾರು ಶೇ. 80ರಷ್ಟು ಪಾಲು ರಿಕವರಿ ಆಗುವುದೇ ಇಲ್ಲ. ಇದರಿಂದ ಸಾರ್ವಜನಿಕ ಸಂಪತ್ತಿಗೆ ಅಪಾರ ಹಾನಿಯಾಗುತ್ತದೆ. ಈ ಲೆಕ್ಕಾಚಾರದ ಪ್ರಕಾರ ಸುಮಾರು 12 ಲಕ್ಷ ಕೋಟಿ ರುಪಾಯಿಗೂ ಹೆಚ್ಚು ಸಾಲ ಮರಳಿ ಬ್ಯಾಂಕಿಗೆ ಬರುವ ಸಾಧ್ಯತೆ ಕ್ಷೀಣಿಸಿದೆ.‌

ಆದ್ದರಿಂದ ಸಾಲ ಮನ್ನಾ ಮತ್ತು ರೈಟ್ ಆಫ್ ನಡುವೆ ವ್ಯತ್ಯಾಸವಿದ್ದರೂ, ರೈಟ್ ಆಫ್ ಹೆಚ್ಚುವುದು ಕೂಡ ಆತಂಕಕಾರಿ ಸಂಗತಿಯೇ ಆಗಿದೆ. ಸ್ವತಃ ಆರ್‌ಬಿಐ ಕೂಡ ಈ ಹಿಂದೆ ಖಾಸಗಿ ವಲಯದ ಬ್ಯಾಂಕ್‌ಗಳು ತಮ್ಮ ಬುಕ್‌ ಗಳನ್ನು ಚೆನ್ನಾಗಿರುವಂತೆ ತೋರಿಸುವ ಸಲುವಾಗಿ ಸಾಲಗಳನ್ನು ರೈಟ್ ಆಫ್ ಮಾಡುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಇದಕ್ಕೆ ಪರಿಹಾರ ಏನೆಂದರೆ, ಸಾಲ ರಿಕವರಿ ಪ್ರಕ್ರಿಯೆಯ ಸುಧಾರಣೆ ಆಗಬೇಕು.