Lakshmi Hebbalkar Column: ಗಾಂಧೀಜಿ ತತ್ವ, ಸಿದ್ಧಾಂತಗಳೇ ಕಾಂಗ್ರೆಸ್ ಆಶಯ
ಗಾಂಧೀಜಿ ಕನಸುಗಳ ಅನುಷ್ಠಾನ: ಕಾಂಗ್ರೆಸ್ ಪಕ್ಷ ಹಿಂದೆ, ಇಂದು ಹಾಗೂ ಮುಂದೆ ಕೂಡ ಗಾಂಧೀ ಜಿಯವರ ತತ್ವ, ಸಿದ್ಧಾಂತ, ಆಶಯಗಳ ತಳಹದಿಯ ಮೇಲೆಯೇ ನಡೆಯುತ್ತಿರುವ, ನಡೆಯುವ ಪಕ್ಷ. ಸತ್ಯ, ಅಹಿಂಸೆ, ಸ್ವಾವಲಂಬನೆ, ಸರಳ ಬದುಕು ಮತ್ತು ಧಾರ್ಮಿಕ ಸಾಮರಸ್ಯ ಸೇರಿದಂತೆ ಗಾಂಧೀಜಿಯ ವರ ಆಶಯಗಳನ್ನು ಚಾಚೂತಪ್ಪದೆ ಅನುಸರಿಸುತ್ತಿರುವ ಪಕ್ಷ ಕಾಂಗ್ರೆಸ್.
Source : Vishwavani Daily News Paper
ಗಾಂಧಿ ಸ್ಮರಣೆ
ಲಕ್ಷ್ಮೀ ಹೆಬ್ಬಾಳಕರ್, ಮಹಿಳಾ- ಮಕ್ಕಳ ಅಭಿವೃದ್ದಿ ಸಚಿವರು
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 78 ವರ್ಷ, ಸ್ವಾತಂತ್ರ್ಯ ಹೋರಾಟದ ರೂವಾರಿ ಮಹಾತ್ಮಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಏಕೈಕ ಕಾಂಗ್ರೆಸ್ ಅಧಿವೇಶನಕ್ಕೆ 100 ವರ್ಷಗಳಾಗಿವೆ. ಪುಣ್ಯದ ನೆಲ ಬೆಳ ಗಾವಿಯಲ್ಲಿ ನಡೆದ ಈ ಐತಿಹಾಸಿಕ ಅಧಿವೇಶನದ ಶತಮಾನೋತ್ಸವವನ್ನು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಮತ್ತು ರಾಜ್ಯದ ಕಾಂಗ್ರೆಸ್ ಸರಕಾರ ಅತ್ಯಂತ ಶ್ರದ್ಧೆಯಿಂದ ಆಚರಿಸುತ್ತಿದೆ.
ಈಗಾಗಲೆ ಎಐಸಿಸಿ ಅಧಿವೇಶನ ನಡೆಸಲಾಗಿದೆ. ಕಾಂಗ್ರೆಸ್ ಬಾವಿ ಬಳಿ ಮಹಾತ್ಮ ಗಾಂಧೀಜಿಯವರ ಪುತ್ಥಳಿ ಸ್ಥಾಪಿಸಲಾಗಿದೆ. ಸುವರ್ಣ ವಿಧಾನಸೌಧದ ಎದುರು ಮಂಗಳವಾರ ಮಹಾತ್ಮಾ ಗಾಂಧೀಜಿ ಯವರ ಪುತ್ಥಳಿ ಅನಾವರಣಗೊಳ್ಳಲಿದೆ. ಜತೆಗೆ ಬೃಹತ್ ಸಮಾವೇಶವೂ ಆಯೋಜನೆಯಾಗಿದೆ. ಇದು ಮತ್ತೊಂದು ಐತಿಹಾಸಿಕ ಘಟನೆಯಾಗಬೇಕೆನ್ನುವ ಉದ್ದೇಶದಿಂದ ಅರ್ಥಪೂರ್ಣವಾಗಿ ಇಡೀ ಕಾರ್ಯಕ್ರಮ ನಡೆಸಲಾಗುತ್ತಿದೆ.
ಗಾಂಧೀಜಿ ಕನಸುಗಳ ಅನುಷ್ಠಾನ: ಕಾಂಗ್ರೆಸ್ ಪಕ್ಷ ಹಿಂದೆ, ಇಂದು ಹಾಗೂ ಮುಂದೆ ಕೂಡ ಗಾಂಧೀ ಜಿಯವರ ತತ್ವ, ಸಿದ್ಧಾಂತ, ಆಶಯಗಳ ತಳಹದಿಯ ಮೇಲೆಯೇ ನಡೆಯುತ್ತಿರುವ, ನಡೆಯುವ ಪಕ್ಷ. ಸತ್ಯ, ಅಹಿಂಸೆ, ಸ್ವಾವಲಂಬನೆ, ಸರಳ ಬದುಕು ಮತ್ತು ಧಾರ್ಮಿಕ ಸಾಮರಸ್ಯ ಸೇರಿದಂತೆ ಗಾಂಧೀ ಜಿಯವರ ಆಶಯಗಳನ್ನು ಚಾಚೂತಪ್ಪದೆ ಅನುಸರಿಸುತ್ತಿರುವ ಪಕ್ಷ ಕಾಂಗ್ರೆಸ್.
ಗಾಂಧೀಜಿ, ಡಾ.ಬಾಬಾಸಾಹೇಬ ಅಂಬೇಡ್ಕರ್ ಸೇರಿದಂತೆ ಮಹಾನ್ ನಾಯಕರು ಕಂಡ ಕನಸು ಗಳನ್ನು ಅನುಷ್ಠಾನಗೊಳಿಸುವ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ಕಾಂಗ್ರೆಸ್ ಸರಕಾರ ಮಾಡಿ ಕೊಂಡು ಬರುತ್ತಿದೆ. ತತ್ವರಹಿತ ರಾಜಕಾರಣ, ದುಡಿಮೆಯಿಲ್ಲದ ಸಂಪತ್ತು, ಆತ್ಮಸಾಕ್ಷಿ ಇಲ್ಲದ ಸಂತೋಷ, ಚಾರಿತ್ರ್ಯವಿಲ್ಲದ ಶಿಕ್ಷಣ, ನೀತಿ ಇಲ್ಲದ ವ್ಯಾಪಾರ, ಮಾನವೀಯತೆ ಇಲ್ಲದ eನ ಮತ್ತು ತ್ಯಾಗವಿಲ್ಲದ ಪೂಜೆ ಇವುಗಳಿಂದ ದೂರವಿರಬೇಕೆನ್ನುವುದು ಗಾಂಧೀಜಿಯವರ ಸಂದೇಶವಾಗಿದೆ. ಅಸ್ಪೃಶ್ಯತೆ, ಬಾಲ್ಯವಿವಾಹ ಮೊದಲಾದ ಅನಿಷ್ಠ ಪದ್ಧತಿಗಳನ್ನು ಹೋಗಲಾಡಿಸಬೇಕೆನ್ನುವುದು ಅವರ ಆಶಯವಾಗಿತ್ತು. ಈ ಎಲ್ಲ ಮಾರ್ಗದಲ್ಲಿ ಕಾಂಗ್ರೆಸ್ ನಿರಂತರವಾಗಿ ಕೆಲಸ ಮಾಡುತ್ತ ಬಂದಿದೆ.
ಸ್ವಚ್ಛತೆಯ ಮೂಲಕ ಚುನಾವಣಾ ಪ್ರಚಾರ: ಬೆಳಗಾವಿಯಲ್ಲಿ 1924ರಲ್ಲಿ ಮಹಾತ್ಮಾ ಗಾಂಧೀಜಿ ಯವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಸ್ಥಳದಲ್ಲಿರುವ ಬಾವಿಯ ನೀರನ್ನು ತಂದು ಸಾಂಕೇತಿಕವಾಗಿ ಸ್ವಚ್ಛಗೊಳಿಸುವ ಮೂಲಕ ಕಾಂಗ್ರೆಸ್ ಪಕ್ಷ 2023ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯ ಪ್ರಚಾರ ಕಾರ್ಯವನ್ನು ಅಧಿಕೃತವಾಗಿ ಆರಂಭಿಸಿತು.
ಅಲ್ಲಿ ಆರಂಭಿಸಿದ ಪ್ರಜಾಧ್ವನಿ ಯಾತ್ರೆಯ ಮೂಲಕ ಇಡೀ ರಾಜ್ಯದಲ್ಲಿ ಸಂಚರಿಸಿ ಜನ ಬೆಂಬಲ ಕೇಳಿತು. ಜನರು ಅಭೂತಪೂರ್ವವಾಗಿ ಬೆಂಬಲಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದರು. ಅವರ ಆಶಯದಂತೆ ಪಕ್ಷ, ಸರಕಾರ ಮುನ್ನಡೆಯುತ್ತಿದೆ. ಗಾಂಧೀಜಿಯವರ ತತ್ವಗಳು ಸಾರ್ವಕಾಲಿ ಕವಾದವು. ಅವುಗಳನ್ನು ಆಳುವವರು ಮತ್ತು ಪ್ರಜೆಗಳು ಅಳವಡಿಸಿಕೊಂಡಾಗ, ಜಾರಿಗೊಳಿಸಿದಾಗ ಗಾಂಧೀಜಿ ಕಂಡ ರಾಮರಾಜ್ಯದ ಕನಸು ನನಸಾಗಲಿದೆ.
ಅಂತಹ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡಿಕೊಂಡು ಬರುತ್ತಿದೆ. ಗಾಂಧೀಜಿಯವರ ತತ್ವದ ಮೇಲೆಯೇ ಆಡಳಿತ ನಡೆಸುತ್ತಿದೆ. ಜಾತೀಯತೆಯನ್ನು ಹೋಗಲಾಡಿಸಲು, ಶ್ರೀಮಂತರು ಮತ್ತು ಬಡವರ ಮಧ್ಯೆ ಇರುವ ಅಂತರವನ್ನು ಕಡಿಮೆ ಮಾಡಲು, ಮಹಿಳೆಯರು ನಿರ್ಭಯದಿಂದ ಓಡಾಡುವಂತಹ ವಾತಾವರಣ ನಿರ್ಮಾಣ ಮಾಡಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ.
ಮಹಿಳಾ ಸಬಲೀಕರಣಕ್ಕೆ ಒತ್ತು: ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ, ರಾಷ್ಟ್ರೀಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಎಲ್ಲ ಮುಖಂಡರ ಮಾರ್ಗದರ್ಶನದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿನ ನಮ್ಮ ಸರಕಾರ ಗಾಂಧಿಮಾರ್ಗದಲ್ಲಿ ಅಪಾರ ನಂಬಿಕೆ ಇಟ್ಟುಕೊಂಡು ಬಂದಿದೆ. ನಮ್ಮ ವಿವಿಧ ಗ್ಯಾರಂಟಿ ಯೋಜನೆಗಳ ಮೂಲಕ ಬಡವರು ಮತ್ತು ಶ್ರೀಮಂತರ ಮಧ್ಯೆ ಇರುವ ಅಂತರವನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ. ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬುವ ಮೂಲಕ ಅವರ ಸಬಲೀಕರಣಕ್ಕೆ ಒತ್ತು ನೀಡಲಾಗುತ್ತಿದೆ. ಇದರಿಂದಾಗಿ ಇಡೀ ರಾಜ್ಯದಲ್ಲಿ ಸಾಕಷ್ಟು ಬದಲಾವಣೆಯನ್ನು ಕಾಣುತ್ತಿದ್ದೇವೆ. ರಾಷ್ಟ್ರದ ಬೇರೆ ಬೇರೆ ರಾಜ್ಯಗಳಿಗೆ ಕೂಡ ನಮ್ಮ ಗ್ಯಾರಂಟಿ ಯೋಜನೆಗಳು ಮಾದರಿಯಾಗಿವೆ.
ವರ್ಷವಿಡೀ ಗಾಂಧಿ ಭಾರತ ಕಾರ್ಯಕ್ರಮ: ಗಾಂಧೀಜಿಯವರ ತತ್ವ, ಸಂದೇಶಗಳು ಮುಂದಿನ ಪೀಳಿಗೆಗೆ ಮುಂದುವರಿಯಬೇಕೆನ್ನುವ ಸದುದ್ದೇಶದಿಂದ ಸುವರ್ಣ ವಿಧಾನಸೌಧದ ಎದುರು ಗಾಂಧಿ ಪ್ರತಿಮೆ ಸ್ಥಾಪಿಸಲಾಗಿದೆ. ವೀರ ಸೌಧದ ಆವರಣದಲ್ಲೂ ಈಗಾಗಲೇ ಪುತ್ಥಳಿ ಸ್ಥಾಪನೆಯಾಗಿದೆ. ಇಡೀ ರಾಷ್ಟ್ರದಲ್ಲಿ ಗಾಂಧಿತತ್ವ ಪ್ರಸಾರದ ಉದ್ದೇಶ ಇಟ್ಟುಕೊಂಡು ಎಐಸಿಸಿ ಅಧಿವೇಶನದ ಸ್ಮರಣಾರ್ಥ ಇಡೀ ವರ್ಷ ಗಾಂಧಿಭಾರತ ಕಾರ್ಯಕ್ರಮ ನಡೆಸಲು ತೀರ್ಮಾನಿಸಿ ಕಾರ್ಯೋನ್ಮುಖರಾಗಿದ್ದೇವೆ. ಯುವಪೀಳಿಗೆಗೆ ಗಾಂಧಿ ಸಂದೇಶ ತಲುಪಿಸದಿದ್ದರೆ, ಹಸ್ತಾಂತರಿಸದಿದ್ದರೆ ಅದೊಂದು ದೊಡ್ಡ ಅಚಾತುರ್ಯವಾಗಲಿದೆ.
ಹಾಗಾಗಿ ಆ ದಿಸೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಸರಕಾರ ಮುಂದಡಿ ಇಟ್ಟಿದೆ. ಇದಕ್ಕೆ ಎಲ್ಲರ ಸಹಕಾರ, ಮಾರ್ಗದರ್ಶನವನ್ನು ಎದುರು ನೋಡುತ್ತಿದ್ದೇವೆ. ನಮ್ಮ ಬೆಳಗಾವಿಯಲ್ಲಿ ಇಂತಹ ದ್ದೊಂದು ಐತಿಹಾಸಿಕ ಕಾರ್ಯಕ್ರಮ ನಡೆಯುತ್ತಿರುವುದು, ನಾವು ಇದಕ್ಕೆಲ್ಲ ಸಾಕ್ಷಿಯಾಗುತ್ತಿರು ವುದು ಬಹಳ ಹೆಮ್ಮೆಯ ಸಂಗತಿಯಾಗಿದೆ. ನಮ್ಮ ಜೀವನದಲ್ಲಿ ಗಾಂಧೀಜಿಯವರ ತತ್ವ-ಸಂದೇಶ ಗಳನ್ನು ಅಳವಡಿಸಿಕೊಳ್ಳುವ ಪ್ರತಿಜ್ಞೆ ಮಾಡೋಣ.
ಇದನ್ನೂ ಓದಿ: Lakshmi Hebbalkar: ಅಪಮಾನವಾಗಿದ್ದು ಇಡೀ ಹೆಣ್ಣು ಕುಲಕ್ಕೆ